Tag: pangolin

  • ಚಿಪ್ಪು ಹಂದಿ ಅಕ್ರಮ ಸಾಗಾಟ- ಮಾಲು ಸಮೇತ ಅರೋಪಿಗಳು ಪೊಲೀಸರ ವಶಕ್ಕೆ

    ಚಿಪ್ಪು ಹಂದಿ ಅಕ್ರಮ ಸಾಗಾಟ- ಮಾಲು ಸಮೇತ ಅರೋಪಿಗಳು ಪೊಲೀಸರ ವಶಕ್ಕೆ

    ಮಡಿಕೇರಿ: ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಯನ್ನು ಅಕ್ರಮವಾಗಿ ಓಮ್ನಿ ವ್ಯಾನ್‍ನಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಕಳ್ಳರನ್ನು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹಾಗೂ ಸಿದ್ದಾಪುರ ಮಾರ್ಗಮದ್ಯೆ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಮೂವರು ಆರೋಪಿಗಳಾದ ರಾಮಪ್ಪ, ವಸಂತ್ ಕುಮಾರ್, ಸುರೇಶ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಒಂದು ಪಂಗೋಲಿನ್ (ಚಿಪ್ಪು ಹಂದಿ)ನ್ನು ರಕ್ಷಿಸಿದ್ದಾರೆ. ಅರೋಪಿಗಳು ಬಳಸುತ್ತಿದ್ದ ಮಾರುತಿ ಓಮ್ನಿ ವ್ಯಾನ್ ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಟೆಕ್ಕಿ ಸಾವು

    ಸೆಪ್ಟೆಂಬರ್ 24ರಂದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಿಂದ ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ನಗರದ ಕಡೆಗೆ ಬೆಳಗಿನ ಜಾವ 10 ಗಂಟೆಗೆ ಬಿಳಿ ಬಣ್ಣದ ಮಾರುತಿ ಓಮ್ನಿಯಲ್ಲಿ ಮೂವರು ಪಂಗೋಲಿನ್(ಚಿಪ್ಪು ಹಂದಿ) ಸಾಗಿಸುತ್ತಿದ್ದರು. ಗೋಣಿ ಚೀಲದ ಒಳಗೆ ಅಳಿವಿನಂಚಿನಲ್ಲಿರುವ ಒಂದು ಚಿಪ್ಪು ಹಂದಿಯನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುತ್ತಿರುವ ಕುರಿತು ಪೊಲಿಸರಿಗೆ ಮಾಹಿತಿ ಸಿಕ್ಕಿದೆ.


    ಈ ಹಿನ್ನೆಲೆಯಲ್ಲಿ ತಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

  • ವಿದೇಶಕ್ಕೆ ಚಿಪ್ಪು ಹಂದಿ ಸಾಗಾಟ ಯತ್ನ-ಇಬ್ಬರ ಬಂಧನ

    ವಿದೇಶಕ್ಕೆ ಚಿಪ್ಪು ಹಂದಿ ಸಾಗಾಟ ಯತ್ನ-ಇಬ್ಬರ ಬಂಧನ

    ಮೈಸೂರು: ವಿದೇಶಕ್ಕೆ ಚಿಪ್ಪು ಹಂದಿ ಸಾಗಿಸಲು ಪ್ಲಾನ್ ಮಾಡಿದ್ದ ಇಬ್ಬರನ್ನು ಸಿನಿಮೀಯ ಶೈಲಿಯಲ್ಲಿ ಮೈಸೂರಿನ ಅರಣ್ಯ ಸಂಚಾರದಳ ತಂಡ ಬಂಧಿಸಿದೆ.

    ಕನಕಪುರದ ಅನಿಲ್ ಕುಮಾರ್ (40) ಹಾಗೂ ಬೆಂಗಳೂರಿನ ಇನಾಯತ್ (36) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಅರಣ್ಯ ಸಂಚಾರದಳದ ಡಿಸಿಎಫ್ ಪೂವಯ್ಯ ನೇತೃತ್ವದ ತಂಡ ಮಾರುವೇಷದಲ್ಲಿ ತೆರಳಿ ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಹಲಗೂರು ಬಳಿ ಬಂಧಿಸಿದ್ದಾರೆ.

    ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರ್ ಹಾಗೂ ಜೀವಂತ ಚಿಪ್ಪುಹಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗದ ಬಳಿ ಚಿಪ್ಪುಹಂದಿ ಸೆರೆಹಿಡಿದಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಚಿಪ್ಪು ಹಂದಿ ಮನೆಯಲ್ಲಿದ್ದರೆ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಹಾಗೂ ಚಿಪ್ಪು ಹಂದಿ ಮಾಂಸ, ವಿದೇಶಗಳಲ್ಲಿ ಬಹಳ ಬೇಡಿಕೆ ಹಿನ್ನಲೆ ವಿದೇಶಕ್ಕೆ ರವಾನಿಸಲು ಆರೋಪಿಗಳು ಪ್ಲಾನ್ ಮಾಡಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಗ್ನಿಶಾಮಕ ದಳ ಕಚೇರಿಗೆ ಬಂದ ಅಪರೂಪದ ಚಿಪ್ಪು ಹಂದಿ

    ಆಗ್ನಿಶಾಮಕ ದಳ ಕಚೇರಿಗೆ ಬಂದ ಅಪರೂಪದ ಚಿಪ್ಪು ಹಂದಿ

    ಕೋಲಾರ: ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿರುವ ಅಗ್ನಿಶಾಮಕ ದಳದ ಕಚೇರಿಗೆ ಕಳೆದ ರಾತ್ರಿ ಚಿಪ್ಪು ಹಂದಿಯೊಂದು ಅತಿಥಿಯಾಗಿ ಬಂದು ಅಚ್ಚರಿ ಮೂಡಿಸಿತ್ತು.

    ಆರಂಭದಲ್ಲಿ ಸ್ಥಳೀಯರು ಈ ಪ್ರಾಣಿಯನ್ನು ನೋಡಿ ಅದರ ಮೇಲೆ ದಾಳಿಗೆ ಮುಂದಾಗಿದ್ದಾರೆ. ನಂತರ ಅದು ಅಪರೂಪದ ಪ್ರಾಣಿ ಪ್ರಬೇಧಕ್ಕೆ ಸೇರಿದ ಚಿಪ್ಪು ಹಂದಿ ಎಂದು ತಿಳಿದು ಬಂದಿದೆ.

    ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಅಪರೂಪದ ಪ್ರಾಣಿ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದು, ಇಡೀ ರಾತ್ರಿ ಅಗ್ನಿಶಾಮಕ ದಳದ ಕಚೇರಿಯಲ್ಲೇ ಅದನ್ನು ಇರಿಸಿಕೊಂಡ ನಂತರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

    ಚಿಪ್ಪು ಹಂದಿ ದೊರೆತಿರುವ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರಾಣಿ ರಕ್ಷಣಾ ಸಂಘಟನೆ ಸದಸ್ಯ ಮುರಳಿ ಅಪರೂಪದ ಪ್ರಾಣಿಯನ್ನು ಸುರಕ್ಷಿತವಾಗಿ ಬಂಗಾರಪೇಟೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಅಪರೂಪದ ಪ್ರಾಣಿಯನ್ನ ಇರುವೆ ಭಕ್ಷಕ, ಚಿಪ್ಪು ಹಂದಿ, ಪ್ಯಾಂಗೋಲಿನ್ ಎಂಬ ಹೆಸರುಗಳಿಂದ ಕರೆಯುತ್ತಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

    ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಚಿಪ್ಪು ಹಂದಿ ಕಾಣಿಸಿಕೊಳ್ಳುವುದು ಅಪರೂಪದ ಸಂಗತಿಯಾಗಿದೆ. ಹಲವು ಔಷಧೀಯ ಗುಣಗಳು ಚಿಪ್ಪು ಹಂದಿಯಲ್ಲಿ ಇದೆ ಎಂದು ಹೇಳಲಾಗುತಿದ್ದು, ವಿದೇಶಗಳಲ್ಲಿ ಲಕ್ಷಾಂತರ ರೂಪಾಯಿ ಬೇಡಿಕೆ ಹೊಂದಿದೆ.