Tag: Paneer Pakoda

  • ಸುಲಭವಾಗಿ ಮಾಡಿ ಟೇಸ್ಟಿ ಪನೀರ್ ಪಕೋಡ

    ಸುಲಭವಾಗಿ ಮಾಡಿ ಟೇಸ್ಟಿ ಪನೀರ್ ಪಕೋಡ

    ನೀರ್‌ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ ದೇಹದ ಸ್ನಾಯುಗಳು ಬಲವಾಗುತ್ತವೆ. ಜೊತೆಗೆ ಪನೀರ್ ದೇಹಕ್ಕೆ ಶಕ್ತಿ ನೀಡುವ ಆಹಾರವಾಗಿದ್ದು, ಮಕ್ಕಳ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪನೀರ್ ಪಕೋಡ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಸಂಜೆ ಟೀ ಜೊತೆ ಪನೀರ್ ಪಕೋಡ ಪರ್ಫೆಕ್ಟ್ ಕಾಂಬಿನೇಷನ್. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಪನೀರ್ – 250 ಗ್ರಾಂ
    ಕಡಲೆಹಿಟ್ಟು – 1 ಕಪ್
    ಅಕ್ಕಿಹಿಟ್ಟು – ಕಾಲು ಕಪ್
    ಕೆಂಪು ಮೆಣಸಿನ ಪುಡಿ – 1 ಚಮಚ
    ಅರಿಶಿನ ಪುಡಿ – ಅರ್ಧ ಚಮಚ
    ಜೀರಿಗೆ ಪುಡಿ – ಅರ್ಧ ಚಮಚ
    ಗರಂ ಮಸಾಲ – ಕಾಲು ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಸ್ವಲ್ಪ
    ಎಣ್ಣೆ – ಕರಿಯಲು ಅಗತ್ಯವಿರುವಷ್ಟು
    ನೀರು – ಮಿಶ್ರಣಕ್ಕೆ ಬೇಕಾದಷ್ಟು

    ಮಾಡುವ ವಿಧಾನ:
    *ಮೊದಲು ಪನೀರ್ ಅನ್ನು ಸಣ್ಣ ಚೌಕಾಕಾರದ ತುಂಡುಗಳಾಗಿ ಕತ್ತರಿಸಬೇಕು.
    *ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಮೆಣಸಿನ ಪುಡಿ, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ನೀರನ್ನು ನಿಧಾನವಾಗಿ ಸೇರಿಸುತ್ತಾ ದಪ್ಪವಾಗಿರುವ ಪೇಸ್ಟ್ ತಯಾರಿಸಬೇಕು.
    *ಈಗ ಪನೀರ್ ತುಂಡುಗಳನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಬಾಣಲೆಯಲ್ಲಿ ಬಿಸಿ ಮಾಡಿದ ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಎರಡೂ ಬದಿ ಗೋಲ್ಡನ್ ಕಲರ್ ಬರುವವರೆಗೆ ಕರಿಯಬೇಕು.
    *ನಂತರ ಪನೀರ್ ಪಕೋಡವನ್ನು ಎಣ್ಣೆಯಿಂದ ತೆಗೆದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಳ್ಳಿ.
    *ಹಸಿಮೆಣಸಿನ ಚಟ್ನಿ ಅಥವಾ ಟೊಮ್ಯಾಟೊ ಸಾಸ್ ಜೊತೆ ಸವಿಯುವುದರಿಂದ ಪನೀರ್ ಪಕೋಡ ರುಚಿ ಇನ್ನಷ್ಟು ಹೆಚ್ಚುತ್ತದೆ.

  • ಕೇವಲ 10 ನಿಮಿಷದಲ್ಲಿ ಮಾಡಿ ಪನೀರ್ ಪಕೋಡ

    ಕೇವಲ 10 ನಿಮಿಷದಲ್ಲಿ ಮಾಡಿ ಪನೀರ್ ಪಕೋಡ

    ಚುಮುಚುಮು ಚಳಿಗೆ ಚಹಾದೊಂದಿಗೆ ಬಿಸಿಬಿಸಿಯಾಗಿ ತಿನ್ನಲು ಏನಾದರೂ ಸಿಕ್ಕರೆ ಅದರಲ್ಲಿ ಸಿಗುವ ಆನಂದವೇ ಬೇರೆ. ಅದರಲ್ಲೂ ಬಜ್ಜಿ, ಪಕೋಡ ಮುಂತಾದ ತಿನಿಸುಗಳು ಮನಸ್ಸಿಗೆ ಇನ್ನೂ ಮುದನೀಡುವುದಲ್ಲದೇ ಬಾಯಿಗೂ ರುಚಿಕೊಡುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಪನೀರ್ ಪಕೋಡ ರೆಸಿಪಿ ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ದಿನಗಳಲ್ಲಿ ಮಾಡಿ ಟೇಸ್ಟಿ ಸ್ಟಾರ್ಟರ್ – ಹನಿ ಚಿಲ್ಲಿ ಆಲೂಗಡ್ಡೆ

    ಬೇಕಾಗುವ ಸಾಮಗ್ರಿಗಳು:
    ಪನೀರ್ ಕ್ಯೂಬ್ಸ್ – 500 ಗ್ರಾಂ
    ಕಡ್ಲೆ ಹಿಟ್ಟು – 1 ಕಪ್
    ಅಚ್ಚಖಾರದ ಪುಡಿ – 1 ಚಮಚ
    ಅರಶಿಣ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಜೀರಿಗೆ ಪುಡಿ – ಅರ್ಧ ಚಮಚ
    ಅಡುಗೆ ಸೋಡಾ – 1 ಚಮಚ
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
    ಚಾಟ್ ಮಸಾಲ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟನ್ನು ಹಾಕಿಕೊಂಡು ಅದಕ್ಕೆ ನೀರು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಅರಶಿಣ ಮತ್ತು ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪ ಮಿಶ್ರಣವನ್ನು ಮಾಡಿಕೊಳ್ಳಿ.
    * ಈಗ ಪನೀರ್ ಕ್ಯೂಬ್ಸ್ ಅನ್ನು ಈ ಮಿಶ್ರಣದಲ್ಲಿ ಚನ್ನಾಗಿ ಅದ್ದಿ ಮಿಶ್ರಣದೊಂದಿಗೆ ಪನೀರ್ ಚನ್ನಾಗಿ ಹೊಂದಿಕೊಳ್ಳುವಂತೆ ಕೋಟಿಂಗ್ ಮಾಡಿ.
    * ಬಳಿಕ ಒಂದು ಬಾಣಾಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಗಿಟ್ಟು, ಕಾದ ಬಳಿಕ ಅದಕ್ಕೆ ಕಡ್ಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಪನೀರ್ ಕ್ಯೂಬ್ಸ್ ಅನ್ನು ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ. ಅದೇ ರೀತಿ ಎಲ್ಲಾ ಪನೀರ್ ಕ್ಯೂಬ್ಸ್‌ಗಳನ್ನು ಕಾಯಿಸಿಕೊಳ್ಳಿ.
    * ನಂತರ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಪುಡಿಯನ್ನು ಹಾಕಿಕೊಂಡು ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬಿಸಿಬಿಸಿ ತಿನ್ನಲು ಕೊಡಿ. ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್