Tag: Paneer Egg Gravy

  • ಸಖತ್ ಟೇಸ್ಟಿ ಪನೀರ್ ಎಗ್ ಗ್ರೇವಿ ರೆಸಿಪಿ

    ಸಖತ್ ಟೇಸ್ಟಿ ಪನೀರ್ ಎಗ್ ಗ್ರೇವಿ ರೆಸಿಪಿ

    ಮೊಟ್ಟೆ ಸಾರು ನೀವು ಸಾಮಾನ್ಯವಾಗಿ ಯಾವಾಗಲೂ ಸವಿದಿರುತ್ತೀರಿ. ಆದರೆ ಎಂದಾದರೂ ಮೊಟ್ಟೆ ಹಾಗೂ ಪನೀರ್ ಕಾಂಬಿನೇಶನ್‌ನಲ್ಲಿ ಗ್ರೇವಿ ಮಾಡಿ ಸವಿದಿದ್ದೀರಾ? ಇಲ್ಲ ಎಂದರೆ ಈ ರೆಸಿಪಿಯನ್ನು ನೀವೊಮ್ಮೆ ಮಾಡಿ ನೋಡಲೇ ಬೇಕು. ಮೊಟ್ಟೆ ಸಾರಿಗಿಂತಲೂ ಭಿನ್ನವಾದ ಸ್ವಾದ, ಸಖತ್ ಟೇಸ್ಟಿಯೂ ಆದ ಪನೀರ್ ಎಗ್ ಗ್ರೇವಿ (Paneer Egg Gravy) ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಬೇಯಿಸಿ ಸಿಪ್ಪೆ ಸುಲಿದ ಮೊಟ್ಟೆ – 6
    ಹೆಚ್ಚಿದ ಈರುಳ್ಳಿ – 1
    ಟೊಮೆಟೊ – 3 (ನುಣ್ಣಗೆ ರುಬ್ಬಿಕೊಳ್ಳಿ)
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಹಸಿ ಮೆಣಸಿನ ಕಾಯಿ – 2
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

    ಉಪ್ಪು – ರುಚಿಗೆ ತಕ್ಕಷ್ಟು
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಅರಿಶಿನ – ಅರ್ಧ ಟೀಸ್ಪೂನ್
    ಗರಂ ಮಸಾಲ ಪುಡಿ – 1 ಟೀಸ್ಪೂನ್
    ಎಣ್ಣೆ – 2 ಟೀಸ್ಪೂನ್
    ಬೇಯಿಸಿದ ಬಟಾಣಿ – 1 ಕಪ್
    ಪನೀರ್ – 250 ಗ್ರಾಂ ಇದನ್ನೂ ಓದಿ: ಗರಿಗರಿಯಾದ ಪನೀರ್ ನಗ್ಗೆಟ್ಸ್ ಮಾಡಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ ಪನೀರ್ ಅನ್ನು ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿದುಕೊಳ್ಳಿ. ಬಳಿಕ ಒಂದು ಪಾತ್ರೆಗೆ ಹಾಕಿ ಪಕ್ಕಕ್ಕಿಡಿ.
    * ಈಗ ಬಾಣಲೆಗೆ ಈರುಳ್ಳಿ ಹಾಕಿ ತಿಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಬಳಿಕ ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಪೇಸ್ಟ್ ಹಾಗೂ ಉಪ್ಪು ಹಾಕಿ ನಿಧಾನವಾಗಿ ಮಗುಚಿ.
    * ಕೆಂಪು ಮೆಣಸಿನ ಪುಡಿ, ಅರಿಶಿನ, ಗರಂ ಮಸಾಲ ಪುಡಿ ಹಾಕಿ ಮಿಶ್ರಣ ಮಾಡಿ.
    * ಈಗ 1 ಕಪ್ ನೀರು ಸೇರಿಸಿ ಗ್ರೇವಿ ಹದಕ್ಕೆ ತನ್ನಿ.
    * ಬಳಿಕ ಬಟಾಣಿ, ಮೊಟ್ಟೆ ಹಾಗೂ ಪನೀರ್ ಸೇರಿಸಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ.
    * ಈಗ ಕೊತ್ತಂಬರಿ ಸೊಪ್ಪು ಸೇರಿಸಿ ಉರಿಯನ್ನು ಆಫ್ ಮಾಡಿ.
    * ಇದೀಗ ರುಚಿಕರವಾದ ಪನೀರ್ ಎಗ್ ಗ್ರೇವಿ ತಯಾರಾಗಿದ್ದು, ಅನ್ನ, ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಸಂಡೇ ಸ್ಪೆಷಲ್ – ಫಟಾಫಟ್ ಅಂತಾ ಮಾಡಿ ಹೊಸ‌ ರುಚಿಯ ಫಿಶ್ ಫ್ರೈಡ್‌ರೈಸ್

    Live Tv
    [brid partner=56869869 player=32851 video=960834 autoplay=true]