Tag: Paneer Bhurji Gravy

  • ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ

    ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ

    ವೆಜ್ ಪ್ರಿಯರು ರುಚಿಯಾಗಿ ಏನಾದರೂ ಮಾಡಬೇಕು ಎಂದಾಗ ನೆನಪಿಗೆ ಬರುವುದೇ ಪನೀರ್. ಪನೀರ್‌ನಿಂದ ವಿವಿಧ ರೀತಿಯ ಅಡುಗೆ ಮಾಡಿ ಸವಿಯುವುದೇ ಮಜಾ. ಅದರಲ್ಲೂ ಡಾಬಾ ಸ್ಟೈಲ್‌ನ ಅಡುಗೆ ಯಾರಿಗೆ ತಾನೇ ಇಷ್ಟ ಆಗಲ್ಲ? ಮನೆಯಲ್ಲೇ ನೀವೂ ಕೂಡಾ ಡಾಬಾ ಸ್ಟೈಲ್‌ನಲ್ಲಿ ಪನೀರ್ ಭುರ್ಜಿ ಗ್ರೇವಿ ಮಾಡಿ ನೋಡಿ. ಇದು ಚಪಾತಿ, ರೋಟಿಯೊಂದಿಗೆ ಸೂಪರ್ ಎನ್ನದೇ ಇರಲು ಸಾಧ್ಯವಿಲ್ಲ.

    ಬೇಕಾಗುವ ಪದಾರ್ಥಗಳು:
    * ಎಣ್ಣೆ – 2 ಟೀಸ್ಪೂನ್
    * ಬೆಣ್ಣೆ – 1 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಸಣ್ಣಗೆ ಹೆಚ್ಚಿದ ಈರುಳ್ಳಿ – 1
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಅರಿಶಿನ – ಕಾಲು ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    * ಕೊತ್ತಂಬರಿ ಪುಡಿ – 1 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಕಡಲೆ ಹಿಟ್ಟು – 1 ಟೀಸ್ಪೂನ್
    * ಸಣ್ಣಗೆ ಕತ್ತರಿಸಿದ ಟೊಮೆಟೊ – 3
    * ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ – ಅರ್ಧ
    * ನೀರು – 1 ಕಪ್
    * ಪನೀರ್ – 200 ಗ್ರಾಂ
    * ಗರಂ ಮಸಾಲಾ – ಅರ್ಧ ಟೀಸ್ಪೂನ್
    * ಪುಡಿ ಮಾಡಿದ ಕಸೂರಿ ಮೇಥಿ – 1 ಟೀಸ್ಪೂನ್
    * ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಬೆಣ್ಣೆ ಮತ್ತು ಜೀರಿಗೆ ಸೇರಿಸಿ. ಜೀರಿಗೆ ಪರಿಮಳ ಬರುವ ತನಕ ಹುರಿಯಿರಿ.
    * ಈಗ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಸಾಟ್ ಮಾಡಿ.
    * ಜ್ವಾಲೆ ಕಡಿಮೆ ಮಾಡಿ, ಅರಿಶಿನ, ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಕಡಲೆ ಹಿಟ್ಟು ಹಾಕಿ, ಪರಿಮಳ ಬರುವವರೆಗೆ ಹುರಿಯಿರಿ.
    * ಬಳಿಕ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಕೈಯಾಡಿಸಿ.
    * ಕ್ಯಾಪ್ಸಿಕಂ ಸೇರಿಸಿ, 1 ನಿಮಿಷ ಸಾಟ್ ಮಾಡಿ.
    * ಈಗ 1 ಕಪ್ ನೀರು, ಹಿಸುಕಿದ ಪನೀರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕಡಾಯಿಯನ್ನು ಮುಚ್ಚಿ, 2 ನಿಮಿಷ ಬೇಯಿಸಿ.
    * ಕೊನೆಯಲ್ಲಿ ಗರಂ ಮಸಾಲಾ, ಕಸೂರಿ ಮೇಥಿ, ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
    * ಪಾವ್, ಚಪಾತಿ, ಪರೋಟ ಯಾವುದರೊಂದಿಗೂ ಪರ್ಫೆಕ್ಟ್ ಎನಿಸುವ ಪನೀರ್ ಭುರ್ಜಿ ಗ್ರೇವಿ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]