Tag: Paneer

  • ಸಂಡೇ ಸ್ಪೆಷಲ್‌ ಪನೀರ್‌ ಪಾವ್‌ಬಾಜಿ ಮಾಡಿ, ಸವಿಯಿರಿ

    ಸಂಡೇ ಸ್ಪೆಷಲ್‌ ಪನೀರ್‌ ಪಾವ್‌ಬಾಜಿ ಮಾಡಿ, ಸವಿಯಿರಿ

    ಜಾ ದಿನ ಭಾನುವಾರ ಏನಾದ್ರೂ ಸ್ಪೆಷಲ್‌ ಮಾಡಬೇಕು ಅಂತ ತುಂಬಾ ಜನ ಅಂದುಕೊಳ್ತಾರೆ. ಆದರೆ ಕೆಲವೊಮ್ಮೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ, ಯೋಚನೆ ಮಾಡುವಷ್ಟರಲ್ಲಿಯೇ ಅರ್ಧ ದಿನ ಕಳೆದುಹೋಗಿರುತ್ತದೆ. ಇನ್ನೂ ಗೊತ್ತಾದಾಗ ಮಾಡುವ ವಿಧಾನವೂ ತುಂಬಾ ಕಷ್ಟಕರವಾಗಿರಬಹುದು. ಅಲ್ಲದೇ ಅದು ಎಲ್ಲರಿಗೂ ಇಷ್ಟವಾಗಬೇಕು ಅಂತೇನಿಲ್ಲ ಹೀಗಾಗಿ ಸುಲಭವಾಗಿ ಸರಳ ರೀತಿಯಲ್ಲಿ ಮಾಡಿ ಪನೀರ್ ಪಾವ್‌ಬಾಜಿ

    ಬೇಕಾಗುವ ಪದಾರ್ಥಗಳು
    ಬೇಯಿಸಿದ ಬಟಾಣಿ
    ಬೇಯಿಸಿದ ಆಲೂಗಡ್ಡೆ
    ಟೊಮೇಟೋ
    ಈರುಳ್ಳಿ
    ಕ್ಯಾರೆಟ್
    ಕ್ಯಾಪ್ಸಿಕಂ
    ಹಸಿಮೆಣಸು
    ಶುಂಠಿ-ಬೆಳ್ಳುಳ್ಳಿ ಪೇಸ್ಟ್
    ಪಾವ್ ಭಾಜಿ ಮಸಾಲಾ
    ಮೆಣಸಿನ ಪುಡಿ
    ಅರಿಶಿಣ
    ಉಪ್ಪು
    ಬೆಣ್ಣೆ
    ಎಣ್ಣೆ
    ಪನೀರ್
    ಕೊತ್ತಂಬರಿ ಸೊಪ್ಪು
    ನಿಂಬೆ
    ಬನ್

    ಮಾಡುವ ವಿಧಾನ
    ಮೊದಲಿಗೆ ಎಲ್ಲಾ ತರಕಾರಿಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ 2-3 ವಿಸಿಲ್ ಬರುವವರೆಗೆ ಬೇಯಿಸಿ. ಬೇಯಿಸಿದ ನಂತರ ತರಕಾರಿಗಳನ್ನು ಚೆನ್ನಾಗಿ ಸ್ಮ್ಯಾಶ್‌ ಮಾಡಿ. ಇನ್ನೊಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಕೈಯಾಡಿಸಿಕೊಳ್ಳಿ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಹಾಕಿ 1 ನಿಮಿಷ ಫ್ರೈ ಮಾಡಿ. ಟೊಮೆಟೋ ಹಾಕಿ ಮೃದುವಾಗುವವರೆಗೆ ಬೇಯಿಸಿ. ಅದಕ್ಕೆ ಪಾವ್ ಭಾಜಿ ಮಸಾಲಾ, ಮೆಣಸಿನ ಪುಡಿ, ಅರಿಶಿಣ, ಉಪ್ಪು ಸೇರಿಸಿ. ಸ್ವಲ್ಪ ಸಮಯದ ಬಳಿಕ ಬೇಯಿಸಿದ ತರಕಾರಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ನೀರು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ. ಕೊನೆಯಲ್ಲಿ ಪನೀರ್ ಚೂರುಗಳನ್ನು ಹಾಕಿ. ನಂತರ ಸ್ವಲ್ಪ ಬೆಣ್ಣೆ ಹಾಕಿ ಚೆನ್ನಾಗಿ ಕಲಸಿ.

    ಇನ್ನೊಂದು ತವಾ ಮೇಲೆ ಬೆಣ್ಣೆ ಹಾಕಿ ಪಾವ್‌ನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಿ. ಬಳಿಕ ತಯಾರಾದ ಭಾಜಿಗೆ ಬೆಣ್ಣೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ

  • ಸಂಡೇ ಸ್ಪೆಷಲ್‌ ಮನೆಯಲ್ಲೇ ಮಾಡಿ ಸವಿಯಿರಿ ಪನ್ನೀರ್‌ ಪರೋಟಾ

    ಸಂಡೇ ಸ್ಪೆಷಲ್‌ ಮನೆಯಲ್ಲೇ ಮಾಡಿ ಸವಿಯಿರಿ ಪನ್ನೀರ್‌ ಪರೋಟಾ

    ತ್ತರ ಭಾರತದ ಜನಪ್ರಿಯ ಖಾದ್ಯಗಳಲ್ಲಿ ಪನ್ನೀರ್ ಪರೋಟಾವು ಒಂದು. ಸಾಮಾನ್ಯವಾಗಿ ಪನ್ನೀರ್‌ ಕರ್ರಿ, ಪನ್ನೀರ್‌ ಮಸಾಲಾ, ಪಾಲ್ಲಕ್‌ ಪನ್ನೀರ್‌ ಸೇರಿದಂತೆ ಮನೆಯಲ್ಲಿ ಸುಲಭವಾಗಿ ಮಾಡುತ್ತಾರೆ. ಆದರೆ ಪನ್ನೀರ್‌ ಪರೋಟಾ ಮಾಡುವುದು ಕಡಿಮೆ. ಇದೀಗ ಸರಳ ಹಾಗೂ ಸುಲಭವಾಗಿ ಪನ್ನೀರ್‌ ಪರೋಟಾ ಮಾಡಬಹುದು. ಹೆಚ್ಚಿನ ಸಮಯವೂ ತೆಗೆದುಕೊಳ್ಳದೇ ಬೇಗನೇ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    ಗೋಧಿ ಹಿಟ್ಟು
    ಪನ್ನೀರ್‌
    ಈರುಳ್ಳಿ
    ಹಸಿಮೆಣಸಿನಕಾಯಿ
    ಶುಂಠಿ ಬೆಳ್ಳುಳ್ಳಿ ಪೇಸ್ಟ್
    ಕೊತ್ತಂಬರಿ ಸೊಪ್ಪು
    ಚಿಲ್ಲಿ ಪೌಡರ್
    ದನಿಯಾ ಪುಡಿ
    ಗರಂ ಮಸಾಲ
    ಅರಿಶಿನ ಪುಡಿ
    ಉಪ್ಪು
    ಎಣ್ಣೆ
    ತುಪ್ಪ

    ಮಾಡುವ ವಿಧಾನ
    ಸ್ಟಫಿಂಗ್ ತಯಾರಿಸಿ:
    ಒಂದು ಬಾಣಲೆಗೆ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಸಾಸಿವೆ ಕಾಳು, ಹೆಚ್ಚಿದ ಕರಿಬೇವು, ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಅರಿಶಿನ, ಚಿಲ್ಲಿ ಪೌಡರ್, ದನಿಯಾ ಪುಡಿ, ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತುರಿದ ಪನ್ನೀರ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿ. ಸ್ಟಫಿಂಗ್ ಅನ್ನು ತಣ್ಣಗಾಗಲು ಇಡಿ.

    ಪರೋಟಾ ತಯಾರಿಸಿ:
    ಕಲಸಿದ ಗೋಧಿ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ. ಮೊದಲು ಸ್ವಲ್ಪ ಅಗಲಕ್ಕೆ ಲಟ್ಟಿಸಿ. ಲಟ್ಟಿಸಿದ ಹಿಟ್ಟಿನ ಮಧ್ಯೆ ಪನ್ನೀರ್ ಸ್ಟಫಿಂಗ್ ತುಂಬಿಸಿ, ಚಪಾತಿ ಆಕಾರದಲ್ಲಿ ಲಟ್ಟಿಸಿ ಬೇಯಿಸಿಕೊಳ್ಳಿ. ಪರೋಟಾವನ್ನು ಹೆಂಚಿನ ಮೇಲೆ ಹಾಕಿ, ಎರಡೂ ಕಡೆ ತುಪ್ಪ ಹಾಕಿ ಬೇಯಿಸಿ.

    ಬಿಸಿಬಿಸಿ ಪನ್ನೀರ್ ಪರೋಟಾವನ್ನು ಮೊಸರು, ಉಪ್ಪಿನಕಾಯಿ ಅಥವಾ ಬೆಣ್ಣೆಯೊಂದಿಗೆ ಸವಿಯಿರಿ.

  • ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಮೆದುವಾಗಿಸಲು ಬಳಸುವ ಕೆಮಿಕಲ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಮೆದುವಾಗಿಸಲು ಬಳಸುವ ಕೆಮಿಕಲ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    – ಕ್ಯಾಲ್ಸಿಯಂ, ಪ್ರೋಟಿನ್ ಪ್ರಮಾಣ ಕಡಿಮೆ

    ಬೆಂಗಳೂರು: ಕಲ್ಲಂಗಡಿ, ಸಿಹಿ ತಿಂಡಿ, ಇಡ್ಲಿ ಬಳಿಕ ಇದೀಗ ಆಹಾರ ಸುರಕ್ಷತಾ ಇಲಾಖೆ ಮತ್ತೆ ಶಾಕ್ ನೀಡುತ್ತಿದ್ದು, ಪನ್ನೀರ್‌ನಲ್ಲಿ (Paneer)  ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂಬುದು ಆಹಾರ ಸುರಕ್ಷತಾ ಇಲಾಖೆ (Department of Food Safety) ವರದಿಯಲ್ಲಿ ಗೊತ್ತಾಗಿದೆ.

    ಹೌದು, ಈ ಮೊದಲು ಆಹಾರ ಸುರಕ್ಷತಾ ಇಲಾಖೆ ಕಲ್ಲಂಗಡಿಯಲ್ಲಿ ಕೆಮಿಕಲ್, ಸಿಹಿ ತಿಂಡಿ ಹಾಗೂ ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ಮಾಡಿತ್ತು. ಇದೀಗ ಪನ್ನೀರ್‌ನ್ನು ಮೆದುವಾಗಿಸಲು ಬಳಸುವ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಇಲಾಖೆಯ ವರದಿ ತಿಳಿಸಿದೆ.ಇದನ್ನೂ ಓದಿ:ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಕಡೆಯ ಪನ್ನೀರ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಲ್ಯಾಬ್ ಟೆಸ್ಟ್ ವರದಿ ಬಂದಿದ್ದು, ಆತಂಕಕಾರಿ ಅಂಶ ಬಯಲಾಗಿದೆ. ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೋಟಿನ್ ಪ್ರಮಾಣ ಕಡಿಮೆಯಿರುವುದು ಕಂಡುಬಂದಿದೆ. ಪನ್ನೀರ್ ತಯಾರಿಸುವಾಗ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟಿನ್‌ಅನ್ನು ಬಳಸುತ್ತಾರೆ ಮತ್ತು ಪನ್ನೀರ್‌ನ್ನು ಮೆದುವಾಗಿಸಲು ಕೆಮಿಕಲ್ ಬಳಸುತ್ತಾರೆ. ಈ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಆಹಾರ ಸುರಕ್ಷತಾ ಇಲಾಖೆ ವರದಿ ತಿಳಿಸಿದೆ.

    ಆರೋಗ್ಯ ಸಮಸ್ಯೆಗಳೇನು?
    1. ಹೃದಯ ಸಂಬಂಧಿ ಖಾಯಿಲೆಗೆ ಕಾರಣ
    2. ಕೆಮಿಕಲ್ ಬಳಕೆ ಕ್ಯಾನ್ಸರ್‌ಗೆ ಕಾರಣ
    3. ಕೊಬ್ಬಿನ ಪ್ರಮಾಣ ಹೆಚ್ವಾಗುತ್ತದೆ.
    4. ಕಿಡ್ನಿ ಸಮಸ್ಯೆ ಉಂಟಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಹಾಗೂ ತಿನಿಸುಗಳಲ್ಲಿ ಹೆಚ್ಚಾಗಿ ಕಲಬೆರಿಕೆ ಅಂಶ ಪತ್ತೆಯಾಗಿತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾರತಹಳ್ಳಿ, ವೈಟ್‌ಫೀಲ್ಡ್, ದೊಡ್ಡನಕ್ಕುಂದಿ, ಔಟರ್ ರಿಂಗ್ ರೋಡ್, ಮಹಾದೇವಪುರ ಸುತ್ತಮುತ್ತ ಇಲಾಖೆಯ ಅಧಿಕಾರಿಗಳು ಆಹಾರ ಪದಾರ್ಥಗಳ ಕಲರಿಂಗ್ ಮತ್ತು ಕಲಬೆರಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕಲಬೆರಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ:ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್‌

  • ಬಾಯಲ್ಲಿ ನೀರೂರಿಸುವ ಪನೀರ್ ಗೀ ರೋಸ್ಟ್ ರೆಸಿಪಿ

    ಬಾಯಲ್ಲಿ ನೀರೂರಿಸುವ ಪನೀರ್ ಗೀ ರೋಸ್ಟ್ ರೆಸಿಪಿ

    ತುಪ್ಪದೊಂದಿಗೆ ಹಲವು ಮಸಾಲೆ ಪದಾರ್ಥನ್ನು ಹುರಿದು ಮಾಡುವ ಪನೀರ್ ಗೀ ರೋಸ್ಟ್ (Paneer Ghee Roast) ಅದ್ಭುತ ಸ್ಟಾರ್ಟರ್ ಎಂದರೆ ತಪ್ಪಾಗಲಾರದು. ಇದನ್ನು ಚಪಾತಿ, ರೋಟಿಯೊಂದಿಗೂ ಸೈಡ್ ಡಿಶ್ ಆಗಿ ಆನಂದಿಸಬಹುದು. ಸಾಮಾನ್ಯವಾಗಿ ಚಿಕನ್, ಮಟನ್‌ಗಳ ಗೀ ರೋಸ್ಟ್ ಹೆಚ್ಚು ಫೇಮಸ್. ಆದರೂ ಸಸ್ಯಾಹಾರದ ಆಯ್ಕೆ ಮಾಡಬೇಕೆಂದರೆ ಪನೀರ್ ಇದಕ್ಕೆ ಪರ್ಫೆಕ್ಟ್. ನಾವಿಂದು ರುಚಿಕರವಾದ ಪನೀರ್ ಗೀ ರೋಸ್ಟ್ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವೂ ಇದನ್ನು ಮಾಡಿ ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಮಸಾಲಾ ಪೇಸ್ಟ್ ತಯಾರಿಸಲು:
    ತುಪ್ಪ – 1 ಟೀಸ್ಪೂನ್
    ಒಣಗಿದ ಕೆಂಪು ಮೆಣಸಿನಕಾಯಿ – 5
    ಕೊತ್ತಂಬರಿ ಬೀಜ – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಮೆಂತ್ಯ – ಕಾಲು ಟೀಸ್ಪೂನ್
    ಸೋಂಪು – ಅರ್ಧ ಟೀಸ್ಪೂನ್
    ಕರಿ ಮೆಣಸು – ಅರ್ಧ ಟೀಸ್ಪೂನ್
    ಬೆಳ್ಳುಳ್ಳಿ – 4 ಎಸಳು
    ಹುಣಸೆಹಣ್ಣಿನ ಸಾರ – 2 ಟೀಸ್ಪೂನ್
    ನೀರು – ಕಾಲು ಕಪ್

    ಪನೀರ್ ಹುರಿಯಲು:
    ತುಪ್ಪ – 1 ಟೀಸ್ಪೂನ್
    ಪನೀರ್ – 1 ಕಪ್
    ಗೀ ರೋಸ್ಟ್ ಮಾಡಲು:
    ತುಪ್ಪ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    ಕರಿಬೇವಿನ ಎಲೆ – ಕೆಲವು
    ಅರಿಶಿನ – ಕಾಲು ಟೀಸ್ಪೂನ್
    ಮೊಸರು – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಬೆಲ್ಲ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಕೆಎಫ್‌ಸಿ ಸ್ಟೈಲ್‌ನ ಟೇಸ್ಟಿ ಪಾಪ್‌ಕಾರ್ನ್ ಚಿಕನ್

    ಮಾಡುವ ವಿಧಾನ:
    * ಮೊದಲಿಗೆ ಮಸಾಲಾ ಪೇಸ್ಟ್ ತಯಾರಿಸಲು ಬಾಣಲೆಯಲ್ಲಿ ತುಪ್ಪ, ಒಣಗಿದ ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ, ಸೋಂಪು ಮತ್ತು ಕರಿಮೆಣಸು ಹಾಕಿ ಹುರಿಯಿರಿ.
    * ಈಗ ಬೆಳ್ಳುಳ್ಳಿ ಸೇರಿಸಿ, ಸ್ವಲ್ಪ ಫ್ರೈ ಮಾಡಿ, ಬಳಿಕ ತಣ್ಣಗಾಗಲು ಬಿಡಿ.
    * ಈಗ ಹುರಿದ ಪದಾರ್ಥಗಳನ್ನು ಬ್ಲೆಂಡರ್‌ಗೆ ವರ್ಗಾಯಿಸಿ, ಅದಕ್ಕೆ ಹುಣಸೆಹಣ್ಣಿನ ಸಾರ ಹಾಗೂ ಕಾಲು ಕಪ್ ನೀರು ಹಾಕಿ ನಯವಾದ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
    * ಈಗ ಮತ್ತೊಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಪನೀರ್ ತುಂಡುಗಳನ್ನು ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮಧ್ಯಮ ಜ್ವಾಲೆಯಲ್ಲಿ ಹುರಿದು ಪಕ್ಕಕ್ಕಿಡಿ.
    * ಈಗ ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಅದಕ್ಕೆ ಅರಿಶಿನ ಹಾಕಿ, ಹುರಿಯಿರಿ.
    * ಈಗ ತಯಾರಿಸಿಟ್ಟ ಮಸಾಲೆ ಪೇಸ್ಟ್ ಅನ್ನು ಹಾಕಿ, 10-15 ನಿಮಿಷಗಳ ಕಾಲ ಕೈ ಆಡಿಸುತ್ತಾ ಚೆನ್ನಾಗಿ ಬೇಯಿಸಿ.
    * ತುಪ್ಪ ಮಸಾಲೆಯಿಂದ ಬೇರ್ಪಡುತ್ತಾ ಬರುವಾಗ ಮೊಸರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಮಸಾಲೆಗೆ ಉಪ್ಪು ಮತ್ತು ಬೆಲ್ಲ ಹಾಕಿ ಚೆನ್ನಾಗಿ ಬೆರೆಸಿ.
    * ಹುರಿದಿಟ್ಟಿದ್ದ ಪನೀರ್ ಅನ್ನು ಸೇರಿಸಿ, 1 ನಿಮಿಷ ಬೇಯಿಸಿ.
    * ಇದೀಗ ಪನೀರ್ ಗೀ ರೋಸ್ಟ್ ತಯಾರಾಗಿದ್ದು, ಇದನ್ನು ಸ್ಟಾರ್ಟರ್ ಅಥವಾ ರೋಟಿ, ಚಪಾತಿಯೊಂದಿಗೂ ಸವಿಯಬಹುದು. ಇದನ್ನೂ ಓದಿ: ತುಂಬಾ ಸಿಂಪಲ್ ಆಗಿ ಮಾಡಿ ಗೀರೈಸ್

    Live Tv
    [brid partner=56869869 player=32851 video=960834 autoplay=true]

  • ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

    ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

    ಟೀ ಟೈಮ್‌ನಲ್ಲಿ ಹೊಸ ಹೊಸದಾಗಿ ಸವಿಯಬೇಕೆಂದು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಪ್ರತಿ ಬಾರಿ ಅದೇ ಪಕೋಡಾವನ್ನೇ ತಿಂದು ಬೋರ್ ಹೊಡೆದಿದ್ದರೆ, ಒಮ್ಮೆ ಕುರುಕಲಾದ ಪನೀರ್ ಫ್ರೈ ಅನ್ನು ಟ್ರೈ ಮಾಡಿ. ರುಚಿಕರವಾಗಿ ಹಿಟ್ಟಿನ ಸಂಯೋಜನೆಯೊಂದಿಗೆ ಕ್ರಿಸ್ಪಿ ಅನುಭವ ನಿಮ್ಮ ಟೀ ಟೈಮ್‌ಗೆ ಇನ್ನಷ್ಟು ಮಜ ನೀಡುತ್ತದೆ. ಕ್ರಿಸ್ಪಿ ಪನೀರ್ ಫ್ರೈ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಸಂಸ್ಕರಿಸಿದ ಹಿಟ್ಟು – 3 ಟೀಸ್ಪೂನ್
    ಪನೀರ್ – 100 ಗ್ರಾಂ
    ಕಾರ್ನ್ ಫ್ಲೋರ್ – 3 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಮುಕ್ಕಾಲು ಟೀಸ್ಪೂನ್
    ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ – ಕಾಲು ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಕಸೂರಿ ಮೇಥಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಅಗತ್ಯಕ್ಕೆ ತಕ್ಕಷ್ಟು
    ಎಣ್ಣೆ – ಹುರಿಯಲು
    ಕಾರ್ನ್ ಫ್ಲೇಕ್ಸ್ – ಒಂದು ಕಪ್ ಇದನ್ನೂ ಓದಿ: ಬ್ರೆಡ್‌ನಿಂದಲೂ ಮಾಡ್ಬೋದು ಟೇಸ್ಟಿ ಸ್ಪ್ರಿಂಗ್ ರೋಲ್

    ಮಾಡುವ ವಿಧಾನ:
    * ಮೊದಲಿಗೆ ಬೌಲ್ ಒಂದರಲ್ಲಿ ಸಂಸ್ಕರಿಸಿದ ಹಿಟ್ಟು, ಕಾರ್ನ್ ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಕಸೂರಿ ಮೇಥಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
    * ಬಳಿಕ ಅಗತ್ಯಕ್ಕೆ ತಕ್ಕಂತೆ ನೀರನ್ನು ಹಾಕಿ ದಪ್ಪನೆಯ ಹಿಟ್ಟಾನ್ನಾಗಿ ಕಲಸಿ.
    * ಈಗ ಮತ್ತೊಂದು ಬೌಲ್‌ನಲ್ಲಿ ಕಾರ್ನ್ ಫ್ಲೇಕ್ಸ್ ತೆಗೆದುಕೊಂಡು ಸ್ವಲ್ಪ ಕೈಯಿಂದಲೇ ಪುಡಿ ಮಾಡಿ ಪಕ್ಕಕ್ಕಿಡಿ.
    * ಈಗ ಪನೀರ್‌ನ ತುಂಡುಗಳನ್ನು ತೆಗೆದುಕೊಂಡು ಮೊದಲಿಗೆ ಹಿಟ್ಟಿನ ಮಿಶ್ರಣಕ್ಕೆ ಅದ್ದಿ.
    * ಬಳಿಕ ಕಾರ್ನ್ ಫ್ಲೇಕ್ಸ್‌ನ ಪುಡಿಗೆ ಹಾಕಿ, ಪನೀರ್‌ಗೆ ಸಂಪೂರ್ಣವಾಗಿ ಅಂಟಿಕೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ.
    * ಈಗ ಬಿಸಿ ಎಣ್ಣೆಯಲ್ಲಿ ಪನೀರ್ ಅನ್ನು ಒಂದೊಂದಾಗಿಯೇ ಬಿಡಿ.
    * ಪನೀರ್ ಕುರುಕಲಾಗಿ ಸ್ವಲ್ಪ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿದು, ಟಿಶ್ಯೂ ಪೇಪರ್‌ನಲ್ಲಿ ಹರಡಿ.
    * ಚಹಾ ಸಮಯದಲ್ಲಿ ಸವಿಯಬಹುದಾಗ ಕ್ರಿಸ್ಪಿ ಪನೀರ್ ಫ್ರೈ ಈಗ ತಯಾರಾಗಿದೆ. ಇದನ್ನೂ ಓದಿ: ಎಷ್ಟೊಂದು ರುಚಿಕರ ಆಲೂ ಟಿಕ್ಕಿ ಕಬಾಬ್

    Live Tv
    [brid partner=56869869 player=32851 video=960834 autoplay=true]

  • 2 ಫ್ಯಾಕ್ಟರಿಗಳ ಮೇಲೆ ದಾಳಿ – 2,000 ಕೆಜಿ ಕಲಬೆರಕೆ ಪನೀರ್ ವಶ

    2 ಫ್ಯಾಕ್ಟರಿಗಳ ಮೇಲೆ ದಾಳಿ – 2,000 ಕೆಜಿ ಕಲಬೆರಕೆ ಪನೀರ್ ವಶ

    ಮುಂಬೈ: ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(FDA) ಅಧಿಕಾರಿಗಳು ಪುಣೆ(Pune) ನಗರದಲ್ಲಿ ಡೈರಿ ಉತ್ಪನ್ನಗಳ 2 ಕಾರ್ಖಾನೆಗಳ(Factory) ಮೇಲೆ ದಾಳಿ ನಡೆಸಿ 2,000 ಕೆಜಿ ಕಲಬೆರಕೆ ಪನೀರ್(Adulterated Paneer) ಮತ್ತು ಕೆನೆರಹಿತ ಹಾಲಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ.

    ಕೊಂಡ್ವಾ ಮತ್ತು ವಾನ್ವಾಡಿ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ತೈಲ ಮತ್ತು ಹಾಲಿನ ಪುಡಿಯನ್ನು ಬಳಸಿ ಕಲಬೆರಕೆ ಪನೀರ್ ಅನ್ನು ತಯಾರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ದ್ರೌಪದಿ ಮುರ್ಮು

    ಇದು ಸೆಪ್ಟೆಂಬರ್ 5ರ ಬಳಿಕ ನಡೆಸಲಾದ 3ನೇ ದಾಳಿಯಾಗಿದೆ. ದಾಳಿಯಲ್ಲಿ ಕಲಬೆರಕೆ ಪನೀರ್ ಮತ್ತು ಇತರ ಡೈರಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ನಡೆಸಲಾಗಿರುವ ದಾಳಿಯಲ್ಲಿ 2 ಫ್ಯಾಕ್ಟರಿಗಳಿಂದ 2,000 ಕೆಜಿ ಕಲಬೆರೆಕೆ ಪನೀರ್ ವಶಪಡಿಸಿಕೊಳ್ಳಲಾಗಿದೆ. ಇದು ಸುಮಾರು 25 ಲಕ್ಷ ಮೌಲ್ಯದ್ದಾಗಿದೆ ಎಂದು ಎಫ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೇಕ್ ಆಫ್ ಆಗುವ ಮೊದಲೇ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ

    ಅವುಗಳ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಡಿಎ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮುಂದಿನ ಆದೇಶದವರೆಗೆ ವ್ಯಾಪಾರವನ್ನು ನಿಲ್ಲಿಸುವಂತೆ ನಾವು ಎರಡೂ ಡೈರಿಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ

    ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ

    ವೆಜ್ ಪ್ರಿಯರು ರುಚಿಯಾಗಿ ಏನಾದರೂ ಮಾಡಬೇಕು ಎಂದಾಗ ನೆನಪಿಗೆ ಬರುವುದೇ ಪನೀರ್. ಪನೀರ್‌ನಿಂದ ವಿವಿಧ ರೀತಿಯ ಅಡುಗೆ ಮಾಡಿ ಸವಿಯುವುದೇ ಮಜಾ. ಅದರಲ್ಲೂ ಡಾಬಾ ಸ್ಟೈಲ್‌ನ ಅಡುಗೆ ಯಾರಿಗೆ ತಾನೇ ಇಷ್ಟ ಆಗಲ್ಲ? ಮನೆಯಲ್ಲೇ ನೀವೂ ಕೂಡಾ ಡಾಬಾ ಸ್ಟೈಲ್‌ನಲ್ಲಿ ಪನೀರ್ ಭುರ್ಜಿ ಗ್ರೇವಿ ಮಾಡಿ ನೋಡಿ. ಇದು ಚಪಾತಿ, ರೋಟಿಯೊಂದಿಗೆ ಸೂಪರ್ ಎನ್ನದೇ ಇರಲು ಸಾಧ್ಯವಿಲ್ಲ.

    ಬೇಕಾಗುವ ಪದಾರ್ಥಗಳು:
    * ಎಣ್ಣೆ – 2 ಟೀಸ್ಪೂನ್
    * ಬೆಣ್ಣೆ – 1 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಸಣ್ಣಗೆ ಹೆಚ್ಚಿದ ಈರುಳ್ಳಿ – 1
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಅರಿಶಿನ – ಕಾಲು ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    * ಕೊತ್ತಂಬರಿ ಪುಡಿ – 1 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಕಡಲೆ ಹಿಟ್ಟು – 1 ಟೀಸ್ಪೂನ್
    * ಸಣ್ಣಗೆ ಕತ್ತರಿಸಿದ ಟೊಮೆಟೊ – 3
    * ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ – ಅರ್ಧ
    * ನೀರು – 1 ಕಪ್
    * ಪನೀರ್ – 200 ಗ್ರಾಂ
    * ಗರಂ ಮಸಾಲಾ – ಅರ್ಧ ಟೀಸ್ಪೂನ್
    * ಪುಡಿ ಮಾಡಿದ ಕಸೂರಿ ಮೇಥಿ – 1 ಟೀಸ್ಪೂನ್
    * ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಬೆಣ್ಣೆ ಮತ್ತು ಜೀರಿಗೆ ಸೇರಿಸಿ. ಜೀರಿಗೆ ಪರಿಮಳ ಬರುವ ತನಕ ಹುರಿಯಿರಿ.
    * ಈಗ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಸಾಟ್ ಮಾಡಿ.
    * ಜ್ವಾಲೆ ಕಡಿಮೆ ಮಾಡಿ, ಅರಿಶಿನ, ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಕಡಲೆ ಹಿಟ್ಟು ಹಾಕಿ, ಪರಿಮಳ ಬರುವವರೆಗೆ ಹುರಿಯಿರಿ.
    * ಬಳಿಕ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಕೈಯಾಡಿಸಿ.
    * ಕ್ಯಾಪ್ಸಿಕಂ ಸೇರಿಸಿ, 1 ನಿಮಿಷ ಸಾಟ್ ಮಾಡಿ.
    * ಈಗ 1 ಕಪ್ ನೀರು, ಹಿಸುಕಿದ ಪನೀರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕಡಾಯಿಯನ್ನು ಮುಚ್ಚಿ, 2 ನಿಮಿಷ ಬೇಯಿಸಿ.
    * ಕೊನೆಯಲ್ಲಿ ಗರಂ ಮಸಾಲಾ, ಕಸೂರಿ ಮೇಥಿ, ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
    * ಪಾವ್, ಚಪಾತಿ, ಪರೋಟ ಯಾವುದರೊಂದಿಗೂ ಪರ್ಫೆಕ್ಟ್ ಎನಿಸುವ ಪನೀರ್ ಭುರ್ಜಿ ಗ್ರೇವಿ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • 30 ನಿಮಿಷದಲ್ಲಿ ಮಾಡಿ ಬಿಸಿ ಬಿಸಿಯಾದ ಪನೀರ್ ಬಿರಿಯಾನಿ

    30 ನಿಮಿಷದಲ್ಲಿ ಮಾಡಿ ಬಿಸಿ ಬಿಸಿಯಾದ ಪನೀರ್ ಬಿರಿಯಾನಿ

    ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಪನೀರ್ ಬಿರಿಯಾನಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಪನೀರ್ ಬಿರಿಯಾನಿ ಮಾಡುವುದು ಎಷ್ಟು ಸುಲಭ ಅಷ್ಟೇ ರುಚಿಯಾಗಿದೆ.  ಕೇವಲ 30 ನಿಮಿಷ ಸಮಯ ಇದ್ದರೆ ಸಾಕು ಈ ರುಚಿಯಾದ ಅಡುಗೆಯನ್ನು ಮಾಡಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಪನೀರ್- ಅರ್ಧ ಕೆಜಿ
    * ಅಕ್ಕಿ- 2 ಕಪ್
    * ತುಪ್ಪ – ಅರ್ಧ ಕಪ್
    * ಜೀರಿಗೆ- 1 ಚಮಚ
    * ಅಡುಗೆ ಎಣ್ಣೆ- 2 ಚಮಚ
    * ಈರುಳ್ಳಿ- 3
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಚಮಚ
    * ಚಕ್ಕೆ, ಏಲಕ್ಕಿ, ಲವಂಗ- ಸ್ವಲ್ಪ
    * ಪಲಾವ್ ಎಲೆ0- ಸ್ವಲ್ಪ
    * ಹಸಿಮೆಣಸು- 4
    * ಕ್ಯಾರೆಟ್- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಪುದಿನ ಸೊಪ್ಪು- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಅಕ್ಕಿಯನ್ನು ತೊಳೆದು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಡಿ.
    * ನಂತರ ಒಂದು ಬಾಣಲೆಗೆ ತುಪ್ಪ, ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಪನೀರ್ ತುಂಡು ಮಾಡಿ ಹಾಕಿ ಕೆಂಪಗಾಗುವಂತೆ ಹುರಿಯಿರಿದು ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ


    * ಕುಕ್ಕರ್‌ಗೆ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಈರುಳ್ಳಿ ಹಾಕಿ ಹುರಿದುಕೊಳ್ಳಿ.
    * ಹಸಿಮೆಣಸು, ಕ್ಯಾರೆಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಅಗತ್ಯವಿರುವಷ್ಟು ನೀರು, ಉಪ್ಪು ಸೇರಿಸಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ


    * ಈಗ ಬಳಿಕ ಅಕ್ಕಿ ಹುರಿದ ಪನೀರ್, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು, ಪುದಿನ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿದರೆ ರುಚಿಯಾದ ಪನೀರ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

  • ಪನೀರ್ ಆರ್ಡರ್ ಮಾಡಿದ್ರೆ ಚಿಕನ್ ಡೆಲಿವರಿ: ಝೊಮ್ಯಾಟೊಗೆ 55 ಸಾವಿರ ರೂ. ದಂಡ

    ಪನೀರ್ ಆರ್ಡರ್ ಮಾಡಿದ್ರೆ ಚಿಕನ್ ಡೆಲಿವರಿ: ಝೊಮ್ಯಾಟೊಗೆ 55 ಸಾವಿರ ರೂ. ದಂಡ

    ಪುಣೆ: ಪನೀರ್ ಡೆಲಿವರಿ ಮಾಡುವ ಬದಲು ಚಿಕನ್ ಡೆಲಿವರಿ ಮಾಡಿದ್ದಕ್ಕೆ ಗ್ರಾಹಕರ ನ್ಯಾಯಾಲಯ ಆನ್‍ಲೈನ್ ಆಹಾರ ಮಾರಾಟ ಸಂಸ್ಥೆ ಝೊಮ್ಯಾಟೊ ಹಾಗೂ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದೆ.

    ವಕೀಲರೊಬ್ಬರು ಆನ್‍ಲೈನ್ ಆಹಾರ ಮಾರಾಟ ಜಾಲತಾಣ ಝೊಮ್ಯಾಟೊದಲ್ಲಿ ಪನೀರ್ ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಬಾಯ್ ಮಾತ್ರ ಚಿಕನ್ ತಂದು ಕೊಟ್ಟಿದ್ದಾನೆ. ಈ ಕುರಿತು ವಕೀಲ ಷಣ್ಮುಖ ದೇಶಮುಖ್ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರು.

    ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ, ಪುಣೆಯ ಕೇಂದ್ರ ಕಚೇರಿ, ಗುರ್ಗಾಂವ್ ಕೇಂದ್ರ ಕಚೇರಿ ಹಾಗೂ ಪುಣೆಯ ಹೋಟೆಲ್ ಪ್ರೀತ್ ಪಂಜಾಬಿ ಸ್ವಾದ್ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದ್ದು, 45 ದಿನಗಳಲ್ಲಿ ದಂಡವನ್ನು ಗ್ರಾಹಕರಿಗೆ ಪಾವತಿಸವಂತೆ ಸೂಚಿಸಿದೆ. ತಡವಾದರೆ ಅದಕ್ಕೆ ಅನ್ವಯವಾಗುವ ಬಡ್ಡಿಯನ್ನು ಸೇರಿಸಿ ಹಣ ನಿಡುವಂತೆ ಸೂಚಿಸಿದೆ.

    ಸಂಸ್ಥೆಯು ಕೇವಲ ಒಂದು ಬಾರಿಯಲ್ಲ ಎರಡು ಬಾರಿ ಇದೇ ರೀತಿ ಮಾಡಿದ್ದು, ವಕೀಲ ದೇಶಮುಖ್ ಅವರು ಪನೀರ್ ಬಟರ್ ಮಸಾಲಾ ಆರ್ಡರ್ ಮಾಡಿದ್ದಾರೆ. ಆದರೆ, ಸಂಸ್ಥೆ ಬಟರ್ ಚಿಕನ್ ಡೆಲಿವರಿ ಮಾಡಿದೆ. ಎರಡೂ ಒಂದೇ ರೀತಿ ಕಾಣುವುದರಿಂದ ಅರಿವಾಗದೆ ಗ್ರಾಹಕ ಅದನ್ನು ತಿಂದಿದ್ದಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಝೊಮ್ಯಾಟೊ ಸ್ಪಷ್ಟಪಡಿಸಿದ್ದು, ವಕೀಲರು ಆಪ್‍ನಲ್ಲಿಯೇ ದೂರು ನೀಡಿದ್ದರು. ಈಗಾಗಲೇ ಅವರ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಬೇರೆ ಪದಾರ್ಥ ಡೆಲಿವರಿ ಮಾಡಿರುವುದು ಹೋಟೆಲ್ ತಪ್ಪು ಎಂದು ಝೊಮ್ಯಾಟೊ ವಾದಿಸಿದೆ. ಹೋಟೆಲ್‍ನಷ್ಟೇ ತಪ್ಪು ಸಂಸ್ಥೆಯದ್ದೂ ಇದೆ ಎಂದು ಗ್ರಾಹಕರ ನ್ಯಾಯಾಲಯ ತಿಳಿಸಿದೆ. ಹೋಟೆಲ್ ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

    ಝೊಮ್ಯಾಟೊ ಹಾಗೂ ಹೋಟೆಲ್ ಎರಡೂ ಸೇರಿ ಕೆಲಸದಲ್ಲಿನ ಎಡವಟ್ಟು ಹಾಗೂ ಮಾನಸಿಕ ಕಿರುಕುಳ ನೀಡಿದ್ದಕ್ಕೆ 50 ಸಾವಿರ ರೂ. ದಂಡ ನೀಡುವಂತೆ ಸೂಚಿಸಿದೆ.