Tag: Pandit Jawaharlal Nehru

  • ಜವಾಹರಲಾಲ್ ನೆಹರೂ ಪುಣ್ಯ ತಿಥಿ – ಸೋನಿಯಾ ಗಾಂಧಿಯಿಂದ ಪುಷ್ಪ ನಮನ

    ಜವಾಹರಲಾಲ್ ನೆಹರೂ ಪುಣ್ಯ ತಿಥಿ – ಸೋನಿಯಾ ಗಾಂಧಿಯಿಂದ ಪುಷ್ಪ ನಮನ

    ನವದೆಹಲಿ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 58ನೇ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ಮೋದಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಇತರ ಪಕ್ಷದ ನಾಯಕರು ಸೇರಿದಂತೆ ಅನೇಕರು ಇಂದು ನಮನ ಸಲ್ಲಿಸಿದರು.

    ನಗರದ ಅವರ ಶಾಂತಿ ವನ ಸ್ಮಾರಕಕ್ಕೆ ಭೇಟಿ ನೀಡಿದ ಸೋನಿಯಾ ಗಾಂಧಿ ಅವರು ಸೇರಿದಂತೆ ಅನೇಕ ಗಣ್ಯರು ಪುಷ್ಪ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ

    ಜವಾಹರಲಾಲ್ ನೆಹರು ಅವರು 1964ರ ಮೇ 27 ರಂದು ಕೊನೆಯುಸಿರೆಳೆದರು. ದೇಶಾದ್ಯಂತ ಸುಮಾರು 1.5 ಮಿಲಿಯನ್ ಜನರು ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ನೆಹರೂ ಅವರನ್ನು ಸ್ಮರಿಸಿ, ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಮಂಕಿಪಾಕ್ಸ್ ಆತಂಕ – ಬೆಂಗಳೂರಿನಲ್ಲಿ ಹೈ ಅಲರ್ಟ್

    ‘ಚಾಚಾ ನೆಹರು’ ಎಂದು ಪ್ರೀತಿಯಿಂದ ಕರೆಯಲ್ಪಡುವ ಜವಾಹರಲಾಲ್ ನೆಹರು ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನವೆಂಬರ್ 14, 1889 ರಂದು ಜನಿಸಿದ್ದರು. ನೆಹರು ಅವರು ಆಗಸ್ಟ್ 15, 1947 ರಂದು ಭಾರತದ ಪ್ರಧಾನ ಮಂತ್ರಿಯಾಗಿ 18 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

    ಜವಾಹರಲಾಲ್ ನೆಹರೂ ಅವರು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬರಹಗಾರರಾಗಿದ್ದ ಅವರು,  ‘ದಿ ಡಿಸ್ಕವರಿ ಆಫ್ ಇಂಡಿಯಾ’, ‘ಗ್ಲಿಂಪ್ಸಸ್ ಆಫ್ ವಲ್ರ್ಡ್ ಹಿಸ್ಟರಿ’ ಮತ್ತು ಅವರ ಆತ್ಮಚರಿತ್ರೆ ‘ಟುವರ್ಡ್ ಫ್ರೀಡಮ್’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

    1950 ರಿಂದ 1955 ರವರೆಗೆ ಭಾರತದಲ್ಲಿ ಶಾಂತಿಯನ್ನು ಎತ್ತಿ ಹಿಡಿದಿದ್ದಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ 11 ನಾಮನಿರ್ದೇಶನಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ 1955 ರಲ್ಲಿ ಭಾರತ ರತ್ನವನ್ನು ಸಹ ನೀಡಲಾಗಿದೆ.

  • ಚಾಯ್‍ವಾಲಾ ಪ್ರಧಾನಿಯಾಗಲು ಜವಾಹರಲಾಲ್ ನೆಹರು ಕಾರಣ: ಶಶಿ ತರೂರ್

    ಚಾಯ್‍ವಾಲಾ ಪ್ರಧಾನಿಯಾಗಲು ಜವಾಹರಲಾಲ್ ನೆಹರು ಕಾರಣ: ಶಶಿ ತರೂರ್

    ನವದೆಹಲಿ: ಚಾಯ್‍ವಾಲಾ ಆಗಿದ್ದ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಿದ್ದಾರೆಂದರೇ, ಅದಕ್ಕೆ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರೇ ಕಾರಣ ಎಂದು ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್ ಹೇಳಿದ್ದಾರೆ.

    ನವೆಂಬರ್ 14ರ ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವನ್ನು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಇದೇ ವೇಳೆ ದೆಹಲಿಯಲ್ಲಿ ಚಾಚಾರ `ನೆಹರೂ, ದಿ ಇನ್ವೆಂಷನ್ ಆಫ್ ಇಂಡಿಯಾ’ ಪುಸ್ತಕ ಮರುಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಭಾರತೀಯನು ಸಹ, ದೇಶದ ಅತ್ಯುನ್ನತ ಮಟ್ಟಕ್ಕೆ ಏರಲು ಅವಕಾಶ ಮಾಡಿಕೊಟ್ಟಿದ್ದವರೇ ಪಂಡಿತ್ ಜವಹರಲಾಲ್ ನೆಹರು. ಇವರು ಸ್ಥಾಪಿಸಿದ ಸಂಸ್ಥೆಗಳು ಹಾಗೂ ವ್ಯವಸ್ಥೆಗಳಿಂದ ಇಂದು ಚಾಯ್‍ವಾಲಾರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.

    ಇಂದು ಕೇಂದ್ರ ಸರ್ಕಾರ ಮಂಗಳಯಾನದ ಕುರಿತು ಹೆಮ್ಮೆಪಟ್ಟುಕೊಳ್ಳುತ್ತಿದೆ. ಆದರೆ ಅದಕ್ಕೆ ಕಾರಣವಾದ ಇಸ್ರೋ ಸಂಸ್ಥೆಯನ್ನು ಹುಟ್ಟು ಹಾಕಿದ್ದವರು ಯಾರು? ದೇಶದ ಬಡವರೂ ಸಹ ಆಕಾಶದೆತ್ತರಿಗಿನ ಗುರಿಗಳನ್ನು ಏರುವ ಕನಸನ್ನು ಕಲಿಸಿಕೊಟ್ಟವರು ಯಾರು? ಅಸಂಖ್ಯಾ ಯುವಕರನ್ನು ಸಿಲಿಕಾನ್ ವ್ಯಾಲಿಗೆ ಕಳುಹಿಸಲು, ಐಐಟಿಗಳನ್ನು ಸ್ಥಾಪನೆ ಮಾಡಿದವರು ಯಾರು? ಅಲ್ಲಿರುವ ಶೇ.40ರಷ್ಟು ಸ್ಟಾರ್ಟ್ಅಪ್ ಕಂಪನಿಗಳು ಇಂದು ಭಾರತೀಯರ ಕೈಯಲ್ಲಿವೆ ಎಂದರೇ ಅದಕ್ಕೆ ಕಾರಣ ಯಾರು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ನಮಗೆಲ್ಲ ವೇದಿಕೆ ನಿರ್ಮಾಣ ಮಾಡಿಕೊಟ್ಟ ಭಾರತದ ಶ್ರೇಷ್ಟ ವ್ಯಕ್ತಿ ಪಂಡಿತ್ ಜವಾಹರಲಾಲ್ ನೆಹರೂರವರ ಬಗ್ಗೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕಡೆಗಣಿಸುವ ಯತ್ನ ನಡೆಯುತ್ತಿದೆ. ತಾವು ಪ್ರಧಾನಿಯಾಗಲು ಕಾರಣರಾಗಿದ್ದ ಚಾಚಾರನ್ನು ನರೇಂದ್ರ ಮೋದಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews