Tag: Pandit Birju Maharaj

  • ಪಂಡಿತ್ ಬಿರ್ಜೂ ಮಹಾರಾಜ್ ನನ್ನ ಗುರುಗಳು ಮಾತ್ರವಲ್ಲ, ಸ್ನೇಹಿತರು ಹೌದು: ಮಾಧುರಿ ದೀಕ್ಷಿತ್

    ಪಂಡಿತ್ ಬಿರ್ಜೂ ಮಹಾರಾಜ್ ನನ್ನ ಗುರುಗಳು ಮಾತ್ರವಲ್ಲ, ಸ್ನೇಹಿತರು ಹೌದು: ಮಾಧುರಿ ದೀಕ್ಷಿತ್

    ಮುಂಬೈ: ಹೃದಯಾಘಾತದಿಂದ ಮೃತಪಟ್ಟ ಪಂಡಿತ್ ಬಿರ್ಜೂ ಮಹಾರಾಜ್(83)ಅವರನ್ನು ನೆನೆದು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಭಾವುಕರಾಗಿದ್ದಾರೆ.

    ಇನ್‍ಸ್ಟಾಗ್ರಾಮ್ ನಲ್ಲಿ ಮಾಧುರಿ, ಅವರು ಮುಗ್ಧ ಮಗುವಿನಂತೆ. ಅವರು ನನ್ನ ಗುರುವೂ ಹೌದು, ಆದರೆ ಅದಕ್ಕಿಂತ ಹೆಚ್ಚು ನನ್ನ ಸ್ನೇಹಿತರಾಗಿದ್ದರು ಎಂದು ನೆನೆದಿದ್ದಾರೆ. ಇದನ್ನೂ ಓದಿ: ಲೆಜೆಂಡರಿ ಕಥಕ್ ಡಾನ್ಸರ್ ಪಂಡಿತ್ ಬಿರ್ಜೂ ಮಹಾರಾಜ್ ನಿಧನ

    ಪಂಡಿತ್ ಅವರು ನನಗೆ ನೃತ್ಯ ಮತ್ತು ಅಭಿನಯವನ್ನು ಕಲಿಸಿದರು. ಅವರು ಯಾವಾಗಲೂ ನನ್ನನ್ನು ನಗಿಸುತ್ತಿದ್ದರು. ಅವರು ತಮಾಷೆಯ ವ್ಯಕ್ತಿಯಾಗಿದ್ದರು. ಪಂಡಿತ್ ಅವರು ಅಗಲಿದ್ದರೂ, ಅವರು ತಮ್ಮ ಅಭಿಮಾನಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕಲಿಸಿದ ಪಾಠವನ್ನು ನಾವು ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.

    ನಿಮ್ಮ ನಮ್ರತೆ, ಲಾಲಿತ್ಯ ನನಗೂ ಕಲಿಸಿದ್ದೀರಿ. ಎಲ್ಲದಕ್ಕೂ ಧನ್ಯವಾದಗಳು ಮಹಾರಾಜಜೀ. ಕೋಟಿ ಕೋಟಿ ಧನ್ಯವಾದಗಳು ಎಂದು ಬರೆದು ಪಂಡಿತ್ ಅವರ ಜೊತೆಗಿದ್ದ ಥ್ರೋಬ್ಯಾಕ್ ಫೋಟೋವನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Madhuri Dixit (@madhuridixitnene)

    ಪಂಡಿತ್ ಬಿರ್ಜೂ ಮಹಾರಾಜ್ ಅವರು ಮಾಧುರಿ ದೀಕ್ಷಿತ್ ಅವರ ಅನೇಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅವುಗಳಲ್ಲಿ ‘ದೇವದಾಸ್’ ಸಿನಿಮಾದ ‘ಕಾಹೆ ಛೇದ್ ಮೋಹೆ’ ಮತ್ತು ‘ದೇಧ್ ಇಷ್ಕಿಯಾದಿಂದ ಜಗವೇ ಸಾರಿ ರೈನಾ’ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.

    ಪಂಡಿತ್ ಬಿರ್ಜೂ ಮಹಾರಾಜ್ ಅವರನ್ನು ಪಂಡಿತ್‍ಜೀ, ಮಹಾರಾಜ್‍ಜೀ ಎಂದು ಅವರ ಶಿಷ್ಯರು ಮತ್ತು ಅನುಯಾಯಿಗಳು ಪ್ರೀತಿಯಿಂದ ಕರೆಯುತ್ತಿದ್ದರು. ಭಾರತದ ಪ್ರಸಿದ್ಧ ಕಲಾವಿದರಲ್ಲಿ ಇವರು ಒಬ್ಬರಾಗಿದ್ದರು. ಇದನ್ನೂ ಓದಿ:  ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    ಪಂಡಿತ್ ಬಿರ್ಜೂ ಮಹಾರಾಜ್ ಅವರು ಪ್ರಸಿದ್ಧ ಶಾಸ್ತ್ರೀಯ ಗಾಯಕರೂ ಆಗಿದ್ದರು. ಕಥಕ್ ನೃತ್ಯಗಾರರ ಮಹಾರಾಜ್ ಕುಟುಂಬದ ವಂಶಸ್ಥರಾದ ಪಂಡಿತ್ ಬಿರ್ಜೂ ಮಹಾರಾಜ್ ಅವರು ತಮ್ಮ ತಂದೆ ಮತ್ತು ಗುರು ಅಚ್ಚನ್ ಮಹಾರಾಜ್ ಮತ್ತು ಚಿಕ್ಕಪ್ಪರಾದ ಶಂಭು ಮಹಾರಾಜ್ ಮತ್ತು ಲಚ್ಚು ಮಹಾರಾಜ್ ಅವರಲ್ಲಿ ತರಬೇತಿ ಪಡೆದುಕೊಂಡಿದ್ದರು. ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ, ಭಾರತ ಸರ್ಕಾರವು ಅವರಿಗೆ 1986 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು.