Tag: pandeshwara

  • ಬೀಡಾಡಿ ಬೆಕ್ಕಿಗೊಂದು ಸುಂದರ ಮನೆ – ಮಂಗಳೂರಿನ ಮಾಲ್‌ಗೆ ಬರೋರ ಕಣ್ಮಣಿಯಾದ ವೈಟ್ ಕ್ಯಾಟ್

    ಬೀಡಾಡಿ ಬೆಕ್ಕಿಗೊಂದು ಸುಂದರ ಮನೆ – ಮಂಗಳೂರಿನ ಮಾಲ್‌ಗೆ ಬರೋರ ಕಣ್ಮಣಿಯಾದ ವೈಟ್ ಕ್ಯಾಟ್

    ಮಂಗಳೂರು: ಊರೂರು ಸುತ್ತಾಡುತ್ತಿದ್ದ ಬೆಕ್ಕೊಂದು ಇದೀಗ ಮಂಗಳೂರಿನ ಮಾಲ್‌ವೊಂದರ ಸೆಲೆಬ್ರಿಟಿ ಕ್ಯಾಟ್ (White Cat) ಆಗಿ ಬದಲಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ ಆ ಬೆಕ್ಕು ಅದ್ಹೇಗೋ ಸಂದರ್ಶಕರ ಜೊತೆ ಮಾಲ್‌ಗೆ ಅಚಾನಕ್ ಆಗಿ ಎಂಟ್ರಿ ಕೊಟ್ಟಿತ್ತು. ಬಳಿಕ ಅಲ್ಲೇ ವಾಸ ಮಾಡತೊಡಗಿತು. ದಿನ ಹೋದಂತೆ ಸಿಬ್ಬಂದಿಯ ಸ್ನೇಹ ಸಂಪಾದಿಸಿದ ಆ ಬೆಕ್ಕು ಮಾಲ್‌ನಲ್ಲಿ ‘ಮಿಂಚು’ ಹರಿಸಿದ್ದಲ್ಲದೆ, ಸೆಲೆಬ್ರಿಟಿಯಾಗಿ ಮಾರ್ಪಾಡಾಗಿದೆ. ಪ್ರಸ್ತುತ ಇದರ ವಾಸಕ್ಕೊಂದು ಕ್ಯಾಟ್ ಹೌಸ್ ನಿರ್ಮಿಸಲಾಗಿದೆ.

    ಮಂಗಳೂರಿನ ಪಾಂಡೇಶ್ವರದಲ್ಲಿರುವ (Pandeshwara) ಫೋರಂ ಮಾಲ್‌ನ (Forum Mall) ಆಸುಪಾಸಿನಲ್ಲಿ ಕಳೆದ ಎರಡು ವರ್ಷಗಳಿಂದ ಅಡ್ಡಾಡುತ್ತಿರುವ ಈ ಬೆಕ್ಕು ಮುದ್ದು ಮುದ್ದಾಗಿದೆ. ಒಂದೇ ನೋಟಕ್ಕೆ ಸೆಳೆಯುವ ಅದರ ಕಣ್ಣುಗಳು, ತಳುಕು-ಬಳುಕಿನ ನಡಿಗೆಯಿಂದ ಮಾಲ್‌ಗೆ ಭೇಟಿ ನೀಡುವವರನ್ನು ಆಕರ್ಷಿಸುತ್ತಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಎನ್‌ಕೌಂಟರ್ – ಓರ್ವ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

    ಮಾಲ್‌ಗೆ ಭೇಟಿ ನೀಡುವ ಕೆಲವರು ಒಂದು ಕ್ಷಣ ಬೆಕ್ಕಿನತ್ತ ಆಗಮಿಸಿ ಫೋಟೋ, ಸೆಲ್ಫಿ ತೆಗೆದು ಸಂಭ್ರಮಿಸುತ್ತಾರೆ. ಇದರ ಚಲನವಲನ ಕಂಡ ಮಾಲ್ ಸಿಬ್ಬಂದಿ ‘ಮಿಂಚು’ ಅಂತ ಹೆಸರು ಇಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆ ಬೆಕ್ಕಿಗಾಗಿ ಸಿಬ್ಬಂದಿ ಕ್ಯಾಟ್ ಹೌಸ್ (ಬೆಕ್ಕಿನ ಮನೆ) ನಿರ್ಮಿಸಿದ್ದಾರೆ. ಇದನ್ನೂ ಓದಿ: Anti Drugs Day | ಡ್ರಗ್ಸ್‌ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸಿ – ನಿರ್ಮಾಪಕ ದಿಲ್‌ರಾಜ್

    ತಿಂಡಿ-ತಿನಿಸಲ್ಲೂ ಶಿಸ್ತು:
    ಮಾಲ್‌ಗೆ ಭೇಟಿ ನೀಡುವವರೆಲ್ಲರಲ್ಲೂ ಕೆಲ ಕ್ಷಣಗಳು ಖುಷಿಯನ್ನು ನೀಡುತ್ತವೆ. ಬೆಳಗ್ಗೆ ಹಾಗೂ ಸಂಜೆ ಕನಿಷ್ಠ ಐದು ನಿಮಿಷವಾದರೂ ಆಟವಾಡುತ್ತೇನೆ. ಅದರ ಜೊತೆ ಮಾತನಾಡದಿದ್ದರೆ ದಿನವೇ ಅಪೂರ್ಣವೆನಿಸುತ್ತದೆ. ತಿಂಡಿ-ತಿನಿಸಲ್ಲೂ ಶಿಸ್ತು ಕಾಪಾಡಿಕೊಂಡ ಮಿಂಚು ತನಗೆ ಮನಸ್ಸಾದರೆ ಮಾತ್ರ ಸಂದರ್ಶಕರು ಕೊಟ್ಟ ತಿಂಡಿ ಸ್ವೀಕರಿಸುತ್ತಾಳೆ, ಇಲ್ಲಾಂದ್ರೆ ನೋ ಚಾನ್ಸ್ ಅನ್ನುತ್ತಾರೆ ಮಾಲ್‌ನ ಸಿಬ್ಬಂದಿಯೋರ್ವರು. ಇದನ್ನೂ ಓದಿ: ಮ್ಯಾನೇಜರ್‌ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್

    ಈ ಮಿಂಚು ಬೆಕ್ಕಿಗೆ ಬೆಳಗ್ಗಿನ ನಿಯಮಿತ ಆಹಾರವನ್ನು ಮಾಲ್‌ನ ಸಿಬ್ಬಂದಿ ನೀಡಿದರೆ, ಸಂಜೆ ಸ್ಥಳೀಯರೊಬ್ಬರು ತಿಂಡಿಗಳನ್ನು ಹಾಕಿ ಪೋಷಿಸುತ್ತಾರೆ. ಎಲ್ಲೋ ಸುತ್ತಾಡಿಕೊಂಡು ಇರಬೇಕಾದ ಈ ಸುಂದರ ಬೆಕ್ಕು ಇದೀಗ ಮಾಲ್‌ನಲ್ಲಿ ತನ್ನ ಮನೆಯಲ್ಲೇ ವಾಸವಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

  • ಪಬ್‍ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನ – ನಾಲ್ವರು ಕಾಮುಕರು ಅರೆಸ್ಟ್

    ಪಬ್‍ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನ – ನಾಲ್ವರು ಕಾಮುಕರು ಅರೆಸ್ಟ್

    ಮಂಗಳೂರು: ಪಬ್‍ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ (Pandeshwara) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಪುತ್ತೂರಿನ ವಿನಯ್(33), ಮಹೇಶ್ (27), ಪ್ರಿತೇಶ್ (34) ಹಾಗೂ ನಿತೇಶ್ (33) ಎಂದು ಗುರುತಿಸಲಾಗಿದೆ. ಮಂಗಳೂರಿನ ಪಾಂಡೇಶ್ವರದ ಮಾಲ್ ಒಂದರಲ್ಲಿರುವ ಪಬ್‍ನಲ್ಲಿ ಯುವತಿಯ ಮಾನಭಂಗಕ್ಕೆ ಆರೋಪಿಗಳು ಯತ್ನಿಸಿ, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

    ಸ್ನೇಹಿತೆಯೊಂದಿಗೆ ಪಬ್‍ಗೆ ಬಂದಿದ್ದ ವೇಳೆ ಪುಂಡರು ಯುವತಿಗೆ ಕಿರುಕುಳ ನೀಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

    ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಬೆಂಗಳೂರು ಮಕ್ಕಳು ಮಂಗಳೂರಿನಲ್ಲಿ ಪತ್ತೆ ಪ್ರಕರಣ- ನಾಲ್ವರ ಟ್ರಾವೆಲ್ ಹಿಸ್ಟರಿ ಇಲ್ಲಿದೆ

    ಬೆಂಗಳೂರು ಮಕ್ಕಳು ಮಂಗಳೂರಿನಲ್ಲಿ ಪತ್ತೆ ಪ್ರಕರಣ- ನಾಲ್ವರ ಟ್ರಾವೆಲ್ ಹಿಸ್ಟರಿ ಇಲ್ಲಿದೆ

    – ಡಸ್ಟ್ ಬಿನ್‍ಗೆ ಚಿನ್ನ ಎಸೆದಿದ್ದ ಯುವತಿ

    ಮಂಗಳೂರು: ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದ 7 ಮಂದಿಯಲ್ಲಿ ಇದೀಗ ಉಳಿದ ನಾಲ್ವರು ಕೂಡ ಪತ್ತೆಯಾಗಿದ್ದಾರೆ. ಮಕ್ಕಳನ್ನು ಯುವತಿ ಎಲ್ಲೆಡೆ ಸುತ್ತಾಡಿಸಿದ್ದು, ಈ ಮಕ್ಕಳ ಟ್ರಾವೆಲ್ ಹಿಸ್ಟರಿ ಇಲ್ಲಿದೆ.

    ಹೌದು. ಮಕ್ಕಳು ಹಾಗೂ ಯುವತಿಯನ್ನು ಪಾಂಡೇಶ್ವರ ಠಾಣೆಯಲ್ಲಿ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ, ಮಕ್ಕಳನ್ನು ಕರೆದುಕೊಂಡು ಎಲ್ಲೆಡೆ ಸುತ್ತಾಡಿರುವುದು ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

    ಬೆಂಗಳೂರಿನಿಂದ ಬೆಳಗಾವಿಗೆ ನಂತರ ಬೆಳಗಾವಿಯಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ ಮತ್ತೆ ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರು ಮೆಜೆಸ್ಟಿಕ್ ಗೆ ತೆರಳಿದ್ದಾರೆ. ಪುನಃ ಮೆಜೆಸ್ಟಿಕ್ ನಿಂದ ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸಿರುವುದಾಗಿ ಯುವತಿ ಬಾಯ್ಬಿಟ್ಟಿದ್ದಾಳೆ.

    ಡಸ್ಟ್ ಬಿನ್‍ಗೆ ಚಿನ್ನ ಎಸೆದ ಯುವತಿ:
    ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಯುವತಿ ಚಿನ್ನಾಭರಣವನ್ನು ಡಸ್ಟ್‍ಬಿನ್‍ಗೆ ಎಸೆದಿರುವುದಾಗಿ ತಿಳಿಸಿದ್ದಾಳೆ. ಮಕ್ಕಳು ಮನೆಯಿಂದ ತಂದಿದ್ದ ಚಿನ್ನಾಭರಣದೊಂದಿಗೆ ಯುವತಿ ನಾಪತ್ತೆಯಾಗುವ ಪ್ಲಾನ್ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಸ್ಸಿನಿಂದ ಇಳಿದು ಕೈಯಲ್ಲಿದ್ದ ಚಿನ್ನಾಭರಣವನ್ನು ಡಸ್ಟ್ ಬಿನ್‍ಗೆ ಎಸೆದಿದ್ದು, ಸದ್ಯ ಚಿನ್ನಾಭರಣವನ್ನು ಡಸ್ಟ್ ಬಿನ್ ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.