Tag: Panchayat elections

  • ಭೀಕರ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

    ಭೀಕರ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನ (Congress) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

    ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ (Panchayat Elections) ಘೋಷಣೆಯಾದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ. ನಾಮಪತ್ರ ಸಲ್ಲಿಸಿದ ಮೊದಲ ದಿನವೇ ಕಾಂಗ್ರೆಸ್ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಖಾರ್‌ಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ರತನ್‌ಪುರ ನಲ್ದೀಪ್‌ನಲ್ಲಿ ಈ ಘಟನೆ ನಡೆದಿದೆ. ಮೃತ ಕಾಂಗ್ರೆಸ್ ಕಾರ್ಯಕರ್ತನನ್ನ ಫೂಲ್‌ಚಂದ್ ಎಂದು ಗುರುತಿಸಲಾಗಿದೆ.

    ಪೊಲೀಸರ ಪ್ರಕಾರ, ಫೂಲ್‌ಚಂದ್ ಶೇಖ್ ಶುಕ್ರವಾರ (ಜೂ.9) ಸಂಜೆ ರತನ್‌ಪುರದ ನಲ್ದೀಪ್ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಇಸ್ಪೀಟು ಆತ್ತಿದ್ದಾಗ ಕೆಲ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಫೂಲ್‌ಚಂದ್‌ನನ್ನು ಕಂದಿ ಉಪ ವಿಭಾಗದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಕುರ್ಚಿ ನನ್ನ ಗಂಡ ಕೊಟ್ಟ ಗಿಫ್ಟ್‌ – ನವಜೋತ್ ಸಿಂಗ್‌ ಸಿಧು ಪರ ಪತ್ನಿ ಬ್ಯಾಟಿಂಗ್‌

    ಫೂಲ್ ಚಂದ್ ಕೇರಳದಲ್ಲಿ ವಲಸೆ ಕಾರ್ಮಿಕನಾಗಿದ್ದು, 10 ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿದ್ದು, ದಾಳಿಕೋರರ ಸುಳಿವು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

  • ಪಂಚಾಯತ್ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಗ್ರಾಮಸ್ಥರೇ 2 ಕೋಟಿ ನಗದು, ಕಾರು ಉಡುಗೊರೆ ಕೊಟ್ರು

    ಪಂಚಾಯತ್ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಗ್ರಾಮಸ್ಥರೇ 2 ಕೋಟಿ ನಗದು, ಕಾರು ಉಡುಗೊರೆ ಕೊಟ್ರು

    ಚಂಡೀಗಢ: ಪಂಚಾಯತ್ ಚುನಾವಣೆಯಲ್ಲಿ (Panchayat Elections) ಸ್ಪರ್ಧಿಸಿ ಸೋತ ವ್ಯಕ್ತಿಗೆ ಗ್ರಾಮಸ್ಥರೇ ಸನ್ಮಾನ ಮಾಡಿ, 2.11 ಕೋಟಿ ರೂ. ನಗದು ಹಾಗೂ ಸ್ಕಾರ್ಪಿಯೋ ಕಾರನ್ನು ಉಡುಗೊರೆ (Gift) ನೀಡಿರುವ ಆಶ್ಚರ್ಯಕರ ಘಟನೆ ಹರಿಯಾಣದ (Haryana) ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ.

    ಚಿರಿ ಗ್ರಾಮದ ನಿವಾಸಿಗಳು ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಸರಪಂಚ್ ಹುದ್ದೆಗೆ ಸ್ಪರ್ಧಿಸಿ ಸೋತ ಗ್ರಾಮಸ್ಥನಿಗೆ ಭಾರೀ ಬಹುಮಾನ ನೀಡಿದ್ದಾರೆ. ಚುನಾವಣೆಯಲ್ಲಿ ಧರಂಪಾಲ್ ಅವರು ಕೇವಲ 66 ಮತಗಳಿಂದ ಸೋತಿದ್ದರು.

    ಶುಕ್ರವಾರ ಧರಂಪಾಲ್ ಅವರನ್ನು ಸನ್ಮಾನಿಸಲು ಗ್ರಾಮಸ್ಥರು ಅದ್ದೂರಿ ಸಮಾರಂಭವನ್ನೇ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಧರಂಪಾಲ್ ಅವರಿಗೆ ಪೇಟ ತೊಡಿಸಿ, ಹಾರ ಹಾಕಿ ಸನ್ಮಾನವನ್ನೂ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಮಂಗಳೂರಿನಲ್ಲಿ ಇರುವಾಗಲೇ ಸ್ಕೆಚ್ – ಟೈಮರ್ ಕೈಕೊಟ್ಟು ದಾರಿ ಮಧ್ಯೆ ಬಾಂಬ್ ಸ್ಫೋಟ

    MONEY

    ಅಷ್ಟಕ್ಕೂ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಗ್ರಾಮಸ್ಥರು ಭಾರೀ ಬಹುಮಾನ ನೀಡಿದ್ದು ಆಶ್ಚರ್ಯಕರವೇ ಸರಿ. ಗ್ರಾಮದಲ್ಲಿ ಭಾವೈಕ್ಯತೆ ಕಾಪಾಡಲು ಈ ರೀತಿ ಮಾಡಿದ್ದೇವೆ. ಅಭ್ಯರ್ಥಿಯ ನೈತಿಕ ಸ್ಥೈರ್ಯ ಒಡೆಯಬಾರದು. ಅವರನ್ನು ಗೌರವಿಸಲು ಖಾಪ್ ಪಂಚಾಯತ್‌ನಲ್ಲಿ ಪ್ರಮುಖ ಹುದ್ದೆಯನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಮಸ್ಕ್ ಸಮೀಕ್ಷೆಯಲ್ಲಿ ಟ್ರಂಪ್ ಪಾಸ್ – ಮತ್ತೆ ಸ್ಥಾಪನೆಯಾಗಲಿದೆ ಟ್ವಿಟ್ಟರ್ ಖಾತೆ

    ಧರಂಪಾಲ್ ಅವರು ಲಖನ್ ಮಜ್ರಾ ಬ್ಲಾಕ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ತಾಯಿ ಮತ್ತು ಅಜ್ಜ ಚಿರಿ ಗ್ರಾಮದ ಸರಪಂಚರಾಗಿ ಸೇವೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 1 ಮತದಿಂದ ಸೋತು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿಗೆ ಮುಖಭಂಗ

    1 ಮತದಿಂದ ಸೋತು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿಗೆ ಮುಖಭಂಗ

    ಚಿಕ್ಕೋಡಿ: 1 ವರ್ಷ, 10 ತಿಂಗಳ ಹಿಂದೆ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ (Gram Panchayat Election) ಪರಾಭವಗೊಂಡು ಮರು ಮತ ಎಣಿಕೆಗೆ (Recounting) ಕೋರ್ಟ್ (Court) ಮೆಟ್ಟಿಲೇರಿದ್ದ ಅಭ್ಯರ್ಥಿಗೆ ಮತ್ತೆ ಮುಖಭಂಗವಾಗಿದೆ.

    ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಸರಿಯಾಗಿ ಆಗಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದ ಪರಾಜಿತ ಅಭ್ಯರ್ಥಿ ರಾವಸಾಹೇಬ್ ಪಾಟೀಲ್ ಅವರು ನ್ಯಾಯಾಲಯದಲ್ಲಿ ನಡೆದ ಮರು ಮತ ಎಣಿಕೆಯಲ್ಲೂ ಸೋಲು ಅನುಭವಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಕುಂಟಿಕೊಂಡು ಏನ್ ಮಾಡ್ತಾರೆ, ಬಿಎಸ್‍ವೈಗೆ ನೆನಪಿನ ಶಕ್ತಿಯೇ ಇಲ್ಲ: ಮೊಯ್ಲಿ ಲೇವಡಿ

    2020 ರ ಡಿಸೆಂಬರ್ 30 ರಂದು ನಡೆದಿದ್ದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮತ ಎಣಿಕೆ ಸರಿಯಾಗಿಲ್ಲ ಎಂದು ಆರೋಪಿಸಿ ಅಭ್ಯರ್ಥಿ ರಾವಸಾಹೇಬ್ ಸಂಕೇಶ್ವರದ ಜೆಎಂಎಫ್‌ಸಿ ಕೋರ್ಟ್ ಮೊರೆ ಹೋಗಿದ್ದರು. 505 ಮತ ಪಡೆದು ಪರಾಭವಗೊಂಡಿದ್ದ ರಾವಸಾಹೇಬ್ ಪಾಟೀಲ್ ವಿರುದ್ಧ 506 ಮತ ಪಡೆದು ತವನಪ್ಪ ಹೊಸೂರ ಎಂಬ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಅರ್ಕಾವತಿ ನದಿಯಲ್ಲಿ ಅಪರಿಚಿತ ಕಾರ್ ಪತ್ತೆ – ಮಾಲೀಕರಿಗಾಗಿ ತಲಾಶ್

    ಇಂದು ಸಂಕೇಶ್ವರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಡ್ಜ್ ಹಾಗೂ ಹುಕ್ಕೇರಿ ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಸಮ್ಮುಖದಲ್ಲಿ ಮತ್ತೊಮ್ಮೆ ಮರು ಮತ ಎಣಿಕೆ ನಡೆಯಿತು. ಮರು ಮತ ಎಣಿಕೆಯಲ್ಲೂ ಸಹ ತವನಪ್ಪ ಹೊಸುರ ಜಯಶಾಲಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ

    21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ

    ಪಾಟ್ನ: ಎಲ್ಲರಿಗೂ ಸಾಧಿಸಬೇಕು ಎನ್ನುವ ಆಸೆ ಜೊತೆಗೆ, ಹೋಗುವ ದಾರಿಗಳ ಬಗ್ಗೆ ಕೆಲವು ಗೊಂದಲಗಳು ಸಹ ಇರುತ್ತೆ. ಆ ಎಲ್ಲ ಗೊಂದಲಗಳನ್ನು ಬಗೆ ಹರಿಸಿಕೊಂಡು ಮುಂದೆ ನುಗ್ಗಿದರೆ ಅವರಿಗೆ ಯಶಸ್ಸು ನಿಶ್ಚಿತ ಎಂಬುದಕ್ಕೆ ಬಿಹಾರದ ಈ ಯುವತಿ ಉತ್ತಮ ಉದಾಹರಣೆಯಾಗಿದ್ದಾರೆ.

    ಬಿಹಾರದ ಶಿಯೋಹರ್ ಬ್ಲಾಕ್‍ನ ಕುಶಾಹರ್ ಪಂಚಾಯತ್ ನಲ್ಲಿ 21 ವರ್ಷದ ಅನುಷ್ಕಾ ಕುಮಾರಿ ಸರಪಂಚ್(ಮುಖ್ಯಸ್ಥ) ಆಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಗಮನಾರ್ಹವೆಂದರೆ ಅನುಷ್ಕಾ ಮೊದಲ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಿಕೊಂಡಿದ್ದು, ಯಶಸ್ಸನ್ನು ಸಾಧಿಸಿದರು. ಹೊಸದಾಗಿ ಆಯ್ಕೆಯಾದ ಇವರು 2,625 ಮತಗಳನ್ನು ಪಡೆದು ಗೆದ್ದರೆ, ಅವರ ಪ್ರತಿಸ್ಪರ್ಧಿ ರೀಟಾ ದೇವಿ 2,338 ಮತಗಳನ್ನು ಪಡೆದ್ದಿದ್ದರು.

    ಫಲಿತಾಂಶ ಪ್ರಕಟವಾದ ಬಳಿಕ ಅನುಷ್ಕಾ ತಮ್ಮ ಗೆಲುವನ್ನು ಜನರಿಗೆ ಅರ್ಪಿಸಿದರು. ಅನುಷ್ಕಾ ಬೆಂಗಳೂರಿನಲ್ಲಿ ಇತಿಹಾಸದಲ್ಲಿ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿದ್ದು, ಇನ್ನೂ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಬಯಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ: ಬಿಎಸ್‍ವೈ

    ಈ ಕುರಿತು ಮಾತನಾಡಿದ ಅವರು, ನಮ್ಮ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಸಮಸ್ಯೆಗಳು ಮತ್ತು ಭ್ರಷ್ಟಾಚಾರಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ನಾನು ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದೆ. ನಾನು ಪಂಚಾಯತ್ ಜನರ ನಂಬಿಕೆಯನ್ನು ಎಂದಿಗೂ ಮುರಿಯುವುದಿಲ್ಲ ಎಂದು ಭರವಸೆಯನ್ನು ನೀಡಿದರು.

    ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

    ಅದು ಅಲ್ಲದೇ ಅನುಷ್ಕಾ ತನ್ನ ಅಜ್ಜನನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಅನುಷ್ಕಾ ತಂದೆ ಸುನೀಲ್ ಸಿಂಗ್ ಕೂಡ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಈ ಗೆಲುವು ಸಾಧಿಸಿದ ಅನುಷ್ಕಾ ಇತರ ಯುವ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು: ಮೋದಿ ಕರೆ 

  • ಸಹೋದರನ ಪತ್ನಿ ಜೊತೆ ಕಣಕ್ಕೆ ಇಳಿದ ಬಾವ

    ಸಹೋದರನ ಪತ್ನಿ ಜೊತೆ ಕಣಕ್ಕೆ ಇಳಿದ ಬಾವ

    ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಅತ್ತೆ, ಮಾವ, ಸೊಸೆ, ಅಣ್ಣ, ತಮ್ಮ ಸ್ಪರ್ಧೆಗೆ ಇಳಿಯುವದು ಈ ಚುನಾವಣೆಯಲ್ಲಿ ಸರ್ವೆಸಾಮಾನ್ಯವಾಗಿದೆ. ಇಂತಹದ್ದೇ ಒಂದು ಘಟನೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 2ರಲ್ಲಿ ಒಂದೇ ಕುಟುಂಬದ ವ್ಯಕ್ತಿ ತಮ್ಮ ಸಹೋದರನ ಪತ್ನಿಯೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಇಬ್ಬರು ಬೇರೆ ಬೇರೆ ಅಭ್ಯರ್ಥಿಗಳ ಎದುರು ಸ್ಪರ್ಧೆ ಮಾಡುತ್ತಿದ್ದಾರೆ.

    ಬಸವರಾಜ್ ಯೋಗಪ್ಪನವರ್ ಸಾಮನ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಬಸವರಾಜ್ ಅವರ ಸಹೋದರನ ಪತ್ನಿ (ಸೊಸೆ ) ವಿಶಾಲ ಯೋಗಪ್ಪನವರ್ “ಬಿ” ವರ್ಗದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಆದರೆ ಇವರಿಬ್ಬರು ಪರಸ್ಪರ ವಿರುದ್ಧವಾಗಿ ಸ್ಪರ್ಧೆ ಮಾಡುತ್ತಿಲ್ಲ. ಬೇರೆ ಬೇರೆ ಅಭ್ಯರ್ಥಿಗಳ ಎದುರು ಒಂದೇ ಮನೆಯ ಇಬ್ಬರು ಕಣಕ್ಕೆ ಇಳಿಯುವ ಮೂಲಕ ಗಮನ ಸೆಳೆದಿದ್ದಾರೆ.