Tag: Panchayat Election

  • ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ಆರೋಪ – ಅಧಿಕಾರಿಯ ಮೋಸದಾಟಕ್ಕೆ ಸದಸ್ಯರ ಆಕ್ರೋಶ

    ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ಆರೋಪ – ಅಧಿಕಾರಿಯ ಮೋಸದಾಟಕ್ಕೆ ಸದಸ್ಯರ ಆಕ್ರೋಶ

    ಯಾದಗಿರಿ: ಜಿಲ್ಲೆಯ ನಗನೂರು (Naganoor) ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆಯ್ಕೆಯಲ್ಲಿ ಅಕ್ರಮವಾಗಿರುವ ಶಂಕೆ ಮೂಡಿದೆ. ಚುನಾವಣಾಧಿಕಾರಿಯೇ ಹಾಕಿಸಿದ್ದ ಮತ ಅಸಿಂಧು ಆಗಿದ್ದು, ಮತ್ತೊಂದು ಬಣಕ್ಕೆ ಅನುಕೂಲ ಮಾಡಿಕೊಟ್ಟ ಆರೋಪ ಕೇಳಿಬಂದಿದೆ.

    ಕಳೆದ 4 ದಿನಗಳ ಹಿಂದೆ ಯಾದಗಿರಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿಗೆ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಜಿಲ್ಲೆಯ ಕೆಲ ಪಂಚಾಯಿತಿಗಳಲ್ಲಿ ಚುನಾವಣೆ ಭಾರೀ ಜಿದ್ದಾಜಿದ್ದಿಗೆ ಕಾರಣ ಕೂಡಾ ಆಗಿತ್ತು. ಆದರೆ ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಚುನಾವಣಾ ಅಧಿಕಾರಿಯ ಮೋಸದಾಟಕ್ಕೆ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗಲಿಲ್ಲ ಎಂದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಕಳೆದ 4 ದಿನಗಳ ಹಿಂದೆ ಗ್ರಾಮ ಪಂಚಾಯಿತಿಗೆ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಜಿಲ್ಲೆಯ ಬಹುತೇಕ ಪಂಚಾಯಿತಿಗಳ ಚುನಾವಣೆ ಶಾಂತಿಯಿಂದ ನಡೆದಿದೆ. ಆದರೆ ನಗನೂರ ಪಂಚಾಯಿತಿ ಮಾತ್ರ ಗೊಂದಲದ ಗೂಡಾಗಿದೆ. ಇದರ ಮಧ್ಯೆ ಅಧ್ಯಕ್ಷ ಉಪಾಧ್ಯಕ್ಷರನ್ನು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಆದರೆ ಚುನಾವಣೆಯಲ್ಲಿ ಅಕ್ರಮ ಮತ್ತು ಮೋಸ ನಡೆದಿದೆ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಪಂಚಾಯಿತಿ ವ್ಯಾಪ್ತಿಯಲ್ಲಿ 19 ಜನ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಇದ್ದು ಸದಸ್ಯರಾದ ಶರಣರೆಡ್ಡಿ ಹಾಗೂ ಶಂಕರಗೌಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಶರಣರೆಡ್ಡಿ ಬೆಂಬಲಕ್ಕೆ 9 ಸದಸ್ಯರಿದ್ದರೆ ಶಂಕರಗೌಡ ಬೆಂಬಲಕ್ಕೆ 10 ಸದಸ್ಯರಿದ್ದರು ಎನ್ನಲಾಗಿದೆ. ಇದೆ ಆಗಸ್ಟ್ 4 ರಂದು ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳ ಪರ ತಲಾ 9 ಮತಗಳ ಚಲಾವಣೆ ಆಗಿದ್ದು 1 ಮತ ಮಾತ್ರ ಅಸಿಂಧು ಆಗಿದೆ.

    ಮತದಾನದ ಮೂಲಕ ಚುನಾವಣೆ ಪ್ರಕ್ರಿಯೆ ನಡೆಸಲಾಗಿದ್ದು ಶಂಕರಗೌಡ ಪರ ಇದ್ದ ಸದಸ್ಯರ ಮತವನ್ನು ಚುನಾವಣಾ ಅಧಿಕಾರಿ ಮೂಲಕವೇ ಮತ ಚಲಾವಣೆ ಮಾಡಿಸಲಾಗಿದೆ. ಆದರೆ ಚುನಾವಣೆ ಅಧಿಕಾರಿ ನಿಷ್ಪಕ್ಷಪಾತವಾಗಿ ಮತದಾನ ಮಾಡುವ ಬದಲಿಗೆ 9 ಜನ ಸದಸ್ಯರ ಮತವನ್ನು ಸರಿಯಾದ ಕ್ರಮಕ್ಕೆ ಹಾಕಿ, 1 ಮತ ಮಾತ್ರ ಚುನಾವಣೆ ಅಧಿಕಾರಿ ಅಸಿಂಧು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಕ್ರಮವಾಗಿ ಅಧ್ಯಕ್ಷ ಆಯ್ಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ವಿದೇಶ ಪ್ರವಾಸ- ಕಾಂಬೋಡಿಯಾಗೆ ತೆರಳಿದ ಮಾಜಿ ಸಿಎಂ ಹೆಚ್‍ಡಿಕೆ

    ಈ ಚುನಾವಣೆಯಲ್ಲಿ ಕೇವಲ ಚುನಾವಣಾ ಅಧಿಕಾರಿ ಮಾತ್ರ ಭಾಗವಹಿಸಬೇಕು. ಆದರೆ ಇಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹ ಕಾನೂನು ಬಾಹಿರವಾಗಿ ಭಾಗವಹಿಸಿ ಶರಣರೆಡ್ಡಿ ಪರ ಫಲಿತಾಂಶ ಬರುವ ಹಾಗೆ ಮಾಡಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಶಂಕರಗೌಡ ಆರೋಪಿಸಿದ್ದಾರೆ. 10 ಮತಗಳು ನನ್ನ ಪರವಾಗಿಯೇ ಇದ್ದರೂ ಚುನಾವಣಾ ಅಧಿಕಾರಿ ಮೋಸದ ಕೆಲಸ ಮಾಡಿ 1 ಮತ ಅಸಿಂಧು ಆಗುವ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

    ಫಲಿತಾಂಶ ಹೊರ ಬಂದಾಗ ಗ್ರಾಮ ಪಂಚಾಯಿತಿ ಕಚೇರಿ ಬಳಿ ಗಲಾಟೆ ಕೂಡ ನಡೆದಿದೆ. ಗೊಂದಲ ಸೃಷ್ಟಿಯಾಗಿದ್ದರಿಂದ ಪೊಲೀಸರು ಸ್ಥಳಕ್ಕೆ ಬಂದು ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಆದರೆ ಇದು ಚುನಾವಣೆ ದಿನ ಮಾತ್ರ ನಡೆದ ಘಟನೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗುವ ದಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿಯೇ ಶರಣಗೌಡ ಬಣ ಇಬ್ಬರು ಸದಸ್ಯರನ್ನು ಕಿಡ್ನಾಪ್ ಮಾಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾದ ಬಳಿಕ 4-5 ದಿನಗಳ ಬಳಿಕ ಕಿಡ್ನಾಪ್ ಆಗಿದ್ದ ಇಬ್ಬರನ್ನು ಪೊಲೀಸರು ವಾಪಸ್ ಕರೆದುಕೊಂಡು ಬಂದಿದ್ದರು.

    ಈಗ ಚುನಾವಣೆ ಸಂದರ್ಭದಲ್ಲಿ ಅಕ್ರಮ ಎಸೆಗುವ ಮೂಲಕ ಶಂಕರಗೌಡ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಕಳೆದ 3 ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಸಿಇಒಗೆ ಪಿಡಿಒ ವಿರುದ್ಧ ದೂರು ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಮರು ಚುನಾವಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮನವಿಗೆ ಸ್ಪಂದಿಸಿ ನ್ಯಾಯ ಕೊಡಿಸದಿದ್ದರೂ ಸಾಮೂಹಿಕವಾಗಿ 10 ಜನ ಸದಸ್ಯರು ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಂದು ಹೈಕಮಾಂಡ್ ನಾಯಕರ ಭೇಟಿಯಾಗಲಿರೋ ಬೊಮ್ಮಾಯಿ- ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಹುದ್ದೆ ಚರ್ಚೆ

    ಒಟ್ಟಿನಲ್ಲಿ ನಗನೂರ ಪಂಚಾಯಿತಿ ಲೋಕಲ್ ಕದನ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದು ನಾನಾ ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಇದಕ್ಕೆ ಚುನಾವಣೆ ಪ್ರಕ್ರಿಯೆಗೆ ನೇಮಕವಾಗಿದ್ದ ಅಧಿಕಾರಿಗಳೇ ಕಾರಣ ಎನ್ನುವ ಗಂಭೀರ ಆರೋಪ ಇದೆ. ಹೀಗಾಗಿ ಮೇಲಾಧಿಕಾರಿಗಳು ಕೂಡಲೇ ಎಚ್ಚೆತ್ತು, ಪರಿಶೀಲನೆ ನಡೆಸುವ ಮೂಲಕ ಸತ್ಯಾಸತ್ಯತೆಯನ್ನು ಜನರ ಮುಂದಿಟ್ಟು, ಗೊಂದಲ ನಿವಾರಿಸಿ, ತೀರ್ಪು ನೀಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂಗಾಳ ಪಂಚಾಯತ್ ಚುನಾವಣೆ ಮತ ಎಣಿಕೆ ವೇಳೆ ಮತ್ತೆ ಘರ್ಷಣೆ – ಕಚ್ಚಾಬಾಂಬ್ ಸ್ಫೋಟ

    ಬಂಗಾಳ ಪಂಚಾಯತ್ ಚುನಾವಣೆ ಮತ ಎಣಿಕೆ ವೇಳೆ ಮತ್ತೆ ಘರ್ಷಣೆ – ಕಚ್ಚಾಬಾಂಬ್ ಸ್ಫೋಟ

    – ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಾದ್ಯಂತ (West Bengal) ಪಂಚಾಯತ್ ಚುನಾವಣೆಯ (Panchayat Election) ಮತ ಎಣಿಕೆ (Vote Counting) ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ. ಆದರೂ ಮತ ಎಣಿಕೆ ಕೇಂದ್ರಗಳಲ್ಲಿ ಮತ್ತೆ ಘರ್ಷಣೆ ಏರ್ಪಟ್ಟಿದೆ.

    ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ನಲ್ಲಿರುವ ಎಣಿಕೆ ಕೇಂದ್ರದ ಹೊರಗೆ ಕಚ್ಚಾಬಾಂಬ್ ಸ್ಫೋಟಗೊಂಡಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ ಹೌರಾ ಮತ ಎಣಿಕೆ ಕೇಂದ್ರದಲ್ಲಿ ಕಾರ್ಯಕರ್ತರು ಜಮಾಯಿಸಿ, ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ.

    ಕಳೆದ ತಿಂಗಳ ಆರಂಭದಲ್ಲಿ ಪಂಚಾಯತ್ ಚುನಾವಣೆಯ ದಿನಾಂಕವನ್ನು ಘೋಷಿಸಿದಾಗಿನಿಂದ ಪಶ್ಚಿಮ ಬಂಗಾಳದಾದ್ಯಂತ ಭಾರೀ ಘರ್ಷಣೆ ಉಂಟಾಗಿ ಇಲ್ಲಿಯವರೆಗೆ 33 ಜನರು ಸಾವನ್ನಪ್ಪಿದ್ದಾರೆ. ಮತದಾನ ನಡೆದ ದಿನ ಜುಲೈ 8ರಂದು ಕೂಡಾ 19 ಜನರ ಸಾವಾಗಿದೆ. ಇದನ್ನೂ ಓದಿ: Jammu Kashmir Article 370 Abrogation – ಅಗಸ್ಟ್ 2 ರಿಂದ ಅಂತಿಮ ವಿಚಾರಣೆ

    3 ಹಂತದ ಪಂಚಾಯತ್ ಚುನಾವಣೆಗೆ 61 ಸಾವಿರಕ್ಕೂ ಅಧಿಕ ಬೂತ್‌ಗಳಲ್ಲಿ ಕಳೆದ ಶುಕ್ರವಾರ ಮತದಾನ ನಡೆದಿದೆ. 80.71% ರಷ್ಟು ಮತದಾನವಾಗಿದ್ದರೂ ಹಲವೆಡೆ ಮತಪೆಟ್ಟಿಗೆಯನ್ನು ಲೂಟಿ ಮಾಡಿ, ಬೆಂಕಿ ಹಚ್ಚಿ ಹಿಂಸಾಚಾರ ನಡೆಸಲಾಗಿದೆ. ಮತದಾನ ದಿನದಂದು ನಡೆದ ಘರ್ಷಣೆ ಎಷ್ಟು ತೀವ್ರವಾಗಿತ್ತೆಂದರೆ ಸುಮಾರು 696 ಬೂತ್‌ಗಳಲ್ಲಿ ಮರುಮತದಾನ ಮಾಡಬೇಕಾಗಿ ಬಂದಿತ್ತು. ಇದನ್ನೂ ಓದಿ: ಕರೆಂಟ್ ಶಾಕ್ ಕೊಟ್ಟರೂ ಸ್ವಾಮೀಜಿ ಪ್ರಾಣ ಪಕ್ಷಿ ಹಾರಿ ಹೋಗಿರಲಿಲ್ಲ – ಎಫ್‌ಐಆರ್‌ನಲ್ಲಿ ಸ್ಫೋಟಕ ರಹಸ್ಯ ಬಯಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಶ್ಚಿಮ ಬಂಗಾಳದಲ್ಲಿ ಸಾವಿನ ಹಬ್ಬ – ಪಂಚಾಯತ್‌ ಚುನಾವಣೆ ಹಿಂಸಾಚಾರಕ್ಕೆ 16 ಬಲಿ

    ಪಶ್ಚಿಮ ಬಂಗಾಳದಲ್ಲಿ ಸಾವಿನ ಹಬ್ಬ – ಪಂಚಾಯತ್‌ ಚುನಾವಣೆ ಹಿಂಸಾಚಾರಕ್ಕೆ 16 ಬಲಿ

    – ಮತಗಟ್ಟೆಗಳಿಗೆ ಬೆಂಕಿ, ಧ್ವಂಸ, ಕಚ್ಚಾಬಾಂಬ್ ಸ್ಫೋಟ
    – ಪಂಚಾಯತ್‌ ಚುನಾವಣೆಗೆ ಈ ವರ್ಷ 35 ಮಂದಿ ಬಲಿ
    – ಟಿಎಂಸಿ ವಿರುದ್ಧ ಬಿಜೆಪಿ, ಕಾಂಗ್ರೆಸ್‌ ಕಿಡಿ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‍ನ (TMC) ಮಮತಾ ಬ್ಯಾನರ್ಜಿ (Mamata Banerjee) ಮುಖ್ಯಮಂತ್ರಿಯಾಗಿರುವ ಪಶ್ಚಿಮ ಬಂಗಾಳದಲ್ಲಿ (West Bengal) ಪ್ರಜಾಪ್ರಭುತ್ವ ನಗೆಪಾಟಲಿಗೀಡಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್‌ ಚುನಾವಣೆಯಲ್ಲೇ (Panchayat Election) ನೆತ್ತರು ಹರಿದಿದೆ.

    ರಾಜ್ಯದ ಹಲವೆಡೆ ಟಿಎಂಸಿ-ಬಿಜೆಪಿ-ಕಾಂಗ್ರೆಸ್-ಸಿಪಿಎಂ ಕಾರ್ಯಕರ್ತರ ಮಧ್ಯೆ ಹಿಂಸಾಚಾರ ಸಂಭವಿಸಿದ್ದು, ಈವರೆಗೆ 16 ಮಂದಿ ಬಲಿಯಾಗಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪಂಚಾಯತ್‌ ಚುನಾವಣೆಗೆ ಸಂಬಂಧಿಸಿದಂತೆ ಈ ವರ್ಷ ಸಾವನ್ನಪ್ಪಿದ್ದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ಹಬ್ಬ ಸಾವಿನ ಹಬ್ಬವಾಗಿ ಬದಲಾಗಿದೆ ಎಂದು ಬಿಜೆಪಿ ಟೀಕಿಸಿದೆ.

    ಶನಿವಾರ ನಡೆದ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ನುಗ್ಗಿ ದಾಂಧಲೆ ನಡೆಸಿ, ಮತಪೆಟ್ಟಿಗಳಿಗೆ ಬೆಂಕಿ ಹಚ್ಚಿ ಉದ್ಧಟತನ ಪ್ರದರ್ಶಿಸಲಾಗಿದೆ. ಮತಗಟ್ಟೆ ಅಧಿಕಾರಿಗಳ ಕೊಲೆ ಮಾಡಿದ್ದರೆ ಏಜೆಂಟ್‍ಗಳನ್ನು ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಗೆ ಜಾಮೀನು

    ದುಷ್ಕರ್ಮಿಗಳು ಬ್ಯಾಲೆಟ್ ಬಾಕ್ಸನ್ನೇ ಕದ್ದೊಯ್ದಿದ್ದಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ಗನ್ ಹಿಡಿದು ಬೆದರಿಸಿ ಕಲ್ಲು ತೂರಿದ ಪ್ರಸಂಗ ನಡೆದಿದೆ. ಮತಗಟ್ಟೆ ಸುತ್ತಮುತ್ತ ನಾಡ ಬಾಂಬ್‍ಗಳ ಮಳೆಗೆರೆದಿದ್ದಾರೆ. ಇದಕ್ಕೆಲ್ಲಾ ಆಡಳಿತರೂಢ ಟಿಎಂಸಿಯೇ ಕಾರಣ ಅಂತ ಬಿಜೆಪಿ ಮತ್ತು ಕಾಂಗ್ರೆಸ್‌ ದೂರಿದೆ.

     

    ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿದೆ. ಮುರ್ಷಿದಾಬಾದ್, ಮಾಲ್ಡಾ, ಕೂಚ್‍ಬೆಹಾರ್, ಹೂಗ್ಲಿ, ನಾರ್ತ್ 24 ಪರಗಣ ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದೆ.

    ಎಲ್ಲೆಲ್ಲಿ ಏನಾಗಿದೆ?
    ನಾರ್ತ್ 24 ಪರಗಣ ಜಿಲ್ಲೆಯ ಬಾರಕ್‍ಪೋರ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಗನ್ ಹಿಡಿದು ಬೆದರಿಸಿ ಕಲ್ಲು ತೂರಿದ್ದಾರೆ. ಕೋಚ್ ಬೆಹಾರ್ ಜಿಲ್ಲೆಯ ದಿನ್ಹಾಟಾ ಏರಿಯಾದ ಬರನಚಿನಾ ಪಂಚಾಯತ್‌ ಪೋಲಿಂಗ್ ಬೂತ್‍ನಲ್ಲಿ ಮತ ಪೆಟ್ಟಿಗೆಗೆ ಬೆಂಕಿ ಇಡಲಾಗಿದೆ.

    ಕೋಚ್ ಬೆಹಾರ್‌ನ ಸರ್ಕಾರಿ ಶಾಲೆಗೆ ನುಗ್ಗಿರುವ ಕಿಡಿಗೇಡಿಗಳು ಮತಕೇಂದ್ರವನ್ನು ಧ್ವಂಸಗೊಳಿಸಿ, ಮತಪೆಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಯುವಕನೋರ್ವ ರಾಶಿರಾಶಿ ಬ್ಯಾಲೆಟ್ ಪೇಪರ್‌ಗಳನ್ನು ಕೈಯಲ್ಲಿ ಹಿಡಿದು ಕೊಂಡಿದ್ದ ದೃಶ್ಯ ಡೈಮಂಡ್ ಹಾರ್ಬರ್‌ನ ಮತಗಟ್ಟೆ ಕಾಣಿಸಿದೆ. ಮುರ್ಷಿದಾಬಾದ್‍ನ ಮತ ಕೇಂದ್ರದ ಸುತ್ತ ನಾಡ ಬಾಂಬ್‍ಗಳ ಸುರಿಮಳೆಯೇ ಸುರಿಸಲಾಗಿದೆ.

     

    ಹೂಗ್ಲಿ ಜಿಲ್ಲೆಯ ಮತಗಟ್ಟೆಯೊಂದಕ್ಕೆ ನುಗ್ಗಿದ ಕಿಡಿಗೇಡಿಗಳು 2 ಬ್ಯಾಲೆಟ್ ಬಾಕ್ಸ್ ಕದ್ದು ಕೆರೆಗೆ ಎಸೆದಿದ್ದಾರೆ. ಮತ್ತಷ್ಟು ಬಾಕ್ಸ್‌ಗಳನ್ನು ಚರಂಡಿ ನೀರಿನಲ್ಲಿ ಮುಳುಗಿಸಿಟ್ಟಿದ್ದಾರೆ.

    ನಾರ್ತ್ 24 ಪರಗಣ ಜಿಲ್ಲೆಯ ಪಿರ್‍ಗಚ್ಚಾ ಗ್ರಾಮದಲ್ಲಿ ಅಭ್ಯರ್ಥಿ ಓರ್ವನನ್ನು ಕೊಲೆ ಮಾಡಲಾಗಿದೆ. ಗ್ರಾಮದಲ್ಲಿ ಭಾರೀ ಘರ್ಷಣೆ ಸಂಭವಿಸಿದ್ದು, ರಸ್ತೆಯಲ್ಲಿ ಬೈಕ್‍ಗಳಿಗೆ ಬೆಂಕಿ ಹಚ್ಚಲಾಗಿದೆ. ಕೋಚ್‍ಬೆಹಾರಿನ ಫಲಿಮಾರಿ ಮತಗಟ್ಟೆಯೊಂದರಲ್ಲಿ ಬಿಜೆಪಿ ಏಜೆಂಟ್ ಒಬ್ಬರ ತಲೆಯೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಮಾಲ್ಡಾ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಗರೊಂದಿಗೆ ನಡೆದ ಘರ್ಷಣೆಯಲ್ಲಿ ಟಿಎಂಸಿ ನಾಯಕನ ಸಹೋದರ ಸಾವನ್ನಪ್ಪಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದ್ದ ವೇಳೆ ಮತಪೆಟ್ಟಿಗೆಯನ್ನೇ ಹೊತ್ತೊಯ್ದ ಯುವಕ

    ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದ್ದ ವೇಳೆ ಮತಪೆಟ್ಟಿಗೆಯನ್ನೇ ಹೊತ್ತೊಯ್ದ ಯುವಕ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) 3 ಹಂತದ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಪಂಚಾಯ್ತಿ ಚುನಾವಣೆಯಲ್ಲೇ (Panchayat Election) ನೆತ್ತರು ಹರಿದಿದೆ. ಮತಗಟ್ಟೆಗಳಿಗೆ ನುಗ್ಗಿ ದಾಂಧಲೆ ನಡೆಸಿ, ಮತಪೆಟ್ಟಿಗೆಗಳಿಗೆ ಬೆಂಕಿ ಹಚ್ಚಿ ಉದ್ಧಟತನ ಪ್ರದರ್ಶಿಸಲಾಗಿದೆ. ಈ ವೇಳೆ ಯುವಕನೊಬ್ಬ ಮತಪೆಟ್ಟಿಗೆಯನ್ನೇ ಹೊತ್ತೊಯ್ದ ಘಟನೆ ನಡೆದಿದೆ.

    ಕೂಚ್ ಬೆಹಾರ್ ಜಿಲ್ಲೆಯಲ್ಲಿ ಶನಿವಾರ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿತ್ತು. ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ವೇಳೆ ಯುವಕನೊಬ್ಬ ಮತಗಟ್ಟೆಯಲ್ಲಿದ್ದ ಮತಪೆಟ್ಟಿಗೆಯನ್ನೇ ಹೊತ್ತೊಯ್ದಿದ್ದಾನೆ. ಆತ ಮತಪೆಟ್ಟಿಗೆ ಹಿಡಿದು ಓಡುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಬಂಗಾಳದಲ್ಲಿ ನಿಲ್ಲದ ಸಂಘರ್ಷ – ಗುಂಡು ಹಾರಿಸಿ ಪಕ್ಷೇತರ ಅಭ್ಯರ್ಥಿ ಪುತ್ರಿಯ ಹತ್ಯೆ

    ರಾಜ್ಯದ ಹಲವೆಡೆ ಟಿಎಂಸಿ-ಬಿಜೆಪಿ-ಕಾಂಗ್ರೆಸ್-ಸಿಪಿಎಂ ಕಾರ್ಯಕರ್ತರ ಮಧ್ಯೆ ಹಿಂಸಾಚಾರ ಸಂಭವಿಸಿದೆ. ದುಷ್ಕರ್ಮಿಗಳು ಬ್ಯಾಲೆಟ್ ಬಾಕ್ಸನ್ನೇ ಕದ್ದೊಯ್ದಿದ್ದಾರೆ. ಅಷ್ಟೇ ಅಲ್ಲ, ಕೈಯಲ್ಲಿ ಗನ್ ಹಿಡಿದು ಬೆದರಿಸಿ ಕಲ್ಲು ತೂರಿದ್ದಾರೆ. ಮತಗಟ್ಟೆ ಸುತ್ತಮುತ್ತ ನಾಡ ಬಾಂಬ್‌ಗಳ ಮಳೆಗರಿದಿದ್ದಾರೆ. ಇದಕ್ಕೆಲ್ಲಾ ಆಡಳಿತರೂಢ ಟಿಎಂಸಿಯೇ ಕಾರಣ ಅಂತ ಬಿಜೆಪಿ ದೂರಿದೆ. ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿದೆ.

    ಇನ್ನು, ಮುರ್ಷಿದಾಬಾದ್, ಮಾಲ್ಡಾ, ಕೂಚ್‌ಬೆಹಾರ್, ಹೂಗ್ಲಿ, ನಾರ್ತ್ 24 ಪರಗಣ ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದೆ. ಒಂದೊಂದು ದೃಶ್ಯಗಳೂ ರಣಭೀಕರವಾಗಿವೆ. ಇದನ್ನೂ ಓದಿ: West Bengal Violence: ಭುಗಿಲೆದ್ದ ಹಿಂಸಾಚಾರಕ್ಕೆ 11 ಮಂದಿ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂಗಾಳದಲ್ಲಿ ನಿಲ್ಲದ ಸಂಘರ್ಷ – ಗುಂಡು ಹಾರಿಸಿ ಪಕ್ಷೇತರ ಅಭ್ಯರ್ಥಿ ಪುತ್ರಿಯ ಹತ್ಯೆ

    ಬಂಗಾಳದಲ್ಲಿ ನಿಲ್ಲದ ಸಂಘರ್ಷ – ಗುಂಡು ಹಾರಿಸಿ ಪಕ್ಷೇತರ ಅಭ್ಯರ್ಥಿ ಪುತ್ರಿಯ ಹತ್ಯೆ

    ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಪಂಚಾಯತ್ ಚುನಾವಣೆಯಲ್ಲಿ (Panchayat Election) ಸಂಘರ್ಷ ಮುಂದುವರಿದಿದ್ದು ಪಕ್ಷೇತರ ಅಭ್ಯರ್ಥಿಯೊಬ್ಬರ ಮಗಳ ಹಣೆಗೆ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಾರಕೇಶ್ವರ (Tarakeshwar) ಎಂಬಲ್ಲಿ ಘಟನೆ ನಡೆದಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    20 ವರ್ಷದ ಚಂದನಾ ಸಿಂಗ್ ಹತ್ಯೆಯಾದ ಯುವತಿಯಾಗಿದ್ದು, ಮೃತದೇಹವನ್ನು ಕೋಲ್ಕತ್ತಾ (Kolkata) ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಮಾಹಿತಿಗಳ ಪ್ರಕಾರ ಪಕ್ಷೇತರ ಅಭ್ಯರ್ಥಿ ಪಿಂಟು ಸಿಂಗ್ ಮನೆ ಮೇಲೆ ದಾಳಿ ಮಾಡಿದ ಗುಂಪೊಂದು ಅವರ ಕುಟುಂಬದ ಸದಸ್ಯರನ್ನು ಥಳಿಸಿದ್ದಾರೆ. ಬಳಿಕ ಯುವತಿಯನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕೆಜಿ ಟೊಮೆಟೊಗೆ 200 ರೂ., ಮೆಣಸಿನಕಾಯಿಗೆ 170 ರೂ. – ತರಕಾರಿಗಳ ಬೆಲೆ ಭಾರೀ ದುಬಾರಿ!

    ಘಟನಾ ಸ್ಥಳದಿಂದ ಗುಂಡುಗಳು ಮತ್ತು ಬಾಂಬ್‌ಗಳ ಶೆಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ, ಪೊಲೀಸರು ಸ್ಥಳದಿಂದ ಬುಲೆಟ್‌ಗಳು ಮತ್ತು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲು ಯಾವುದೇ ತ್ವರಿತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದನ್ನೂ ಓದಿ: ರೈಲ್ವೇ ಬ್ರಿಡ್ಜ್ ನಟ್ ಕಳಚಿದ ಕಿಡಿಗೇಡಿಗಳು – ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಆಡಳಿತಾರೂಢ ಟಿಎಂಸಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಿಂಟು ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ (Independent Candidate) ಸ್ಪರ್ಧೆ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆ ಅವರನ್ನು ಗುರಿಯಾಗಿಸಿ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಈ ಆರೋಪವನ್ನು ಟಿಎಂಸಿ ಕಾರ್ಯಕರ್ತರು ನಿರಾಕರಿಸಿದ್ದಾರೆ. ಹಲ್ಲೆಗೂ ನಮಗೂ ಸಂಬಂಧ ಇಲ್ಲ ಎಂದು ಸ್ಥಳೀಯ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: West Bengal Violence: ಭುಗಿಲೆದ್ದ ಹಿಂಸಾಚಾರಕ್ಕೆ 11 ಮಂದಿ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 1 ಮತ ಅಂತರದ ಗೆಲುವು – ಚುನಾವಣೆ ಮುಗಿದು 1 ವರ್ಷ, 10 ತಿಂಗಳ ಬಳಿಕ ಮರು ಮತ ಎಣಿಕೆ

    1 ಮತ ಅಂತರದ ಗೆಲುವು – ಚುನಾವಣೆ ಮುಗಿದು 1 ವರ್ಷ, 10 ತಿಂಗಳ ಬಳಿಕ ಮರು ಮತ ಎಣಿಕೆ

    ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಕಳೆದ 2020 ಡಿಸೆಂಬರ್ 23 ರಂದು ಚುನಾವಣೆ (Panchayat Election) ನಡೆದು, ಅದರ ಫಲಿತಾಂಶ ಕೂಡ ಅದೇ ಡಿಸೆಂಬರ್ 30 ರಂದು ಹುಕ್ಕೇರಿಯಲ್ಲಿ ಹೊರಬಿದ್ದಿತ್ತು. ಈ ಚುನಾವಣೆಯಲ್ಲಿ ಹೆಬ್ಬಾಳ ಗ್ರಾಮದ ವಾರ್ಡ್ ನಂ.2 ರ ಹಿಂದುಳಿದ ‘ಬ’ ಸ್ಥಾನಕ್ಕೆ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಕೊನೆಗೆ 1 ಮತದ ಅಂತರದಿಂದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ ಈ ಬಗ್ಗೆ ಅಸಮಾಧಾನಗೊಂಡಿದ್ದ ಪರಾಜಿತ ಅಭ್ಯರ್ಥಿ ಮರು ಮತ ಎಣಿಕೆ (votes Re-counting)ನಡೆಸುವಂತೆ ಕೋರ್ಟ್ ಮೇಟ್ಟಿಲೇರಿದ್ದರು.

    ಚುನಾವಣೆ ಮುಗಿದು ಬರೋಬ್ಬರಿ 1 ವರ್ಷ, 10 ತಿಂಗಳು ಕಳೆದ ಬಳಿಕ ಈಗ ಮತ್ತೆ ಮರು ಮತ ಎಣಿಕೆಗೆ ಕೋರ್ಟ್ ಆದೇಶ ನೀಡಿದೆ. ಇದೇ ಬರುವ ಅಕ್ಟೋಬರ್ 20 ರಂದು ಕೋರ್ಟ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮತ ಎಣಿಕೆ ನಡೆಯಲಿದ್ದು, ಎಲ್ಲರ ಚಿತ್ತ ಈಗ ಕೋರ್ಟ್‌ನತ್ತ ನೆಟ್ಟಿದೆ.

    1 ಮತದಿಂದ ಸೋತಿದ್ದ ರಾವಸಾಹೇಬ ಪಾಟೀಲ್, ತನ್ನ ದೃಢ ನಂಬಿಕೆಯಿಂದ ಕೋರ್ಟ್‌ನಲ್ಲಿ ತನ್ನ ವಕೀಲರ ಮೂಲಕ ವಾದ ಮಂಡಿಸಿದರು. ಮರು ಮತ ಎಣಿಕೆ ನಡೆಸುವಂತೆ ಕೋರ್ಟ್ ಆದೇಶ ನೀಡಿದ್ದು, ಈಗ ಮರು ಎಣಿಕೆ ವೇಳೆ ರಾವಸಾಹೇಬ ಪಾಟೀಲ್ ಗೆದ್ದರೆ ಮತ್ತಷ್ಟು ಗೊಂದಲ ಹಾಗೂ ಕೂತಹಲಕ್ಕೂ ಕಾರಣವಾಗಲಿದೆ. ಇದನ್ನೂ ಓದಿ: ಸೇ ಸಿಎಂ ಅಭಿಯಾನ ಉದ್ಯೋಗವಿಲ್ಲದವರು ಮಾಡುತ್ತಿದ್ದಾರೆ: ಬೊಮ್ಮಾಯಿ

    2020ರ ಡಿಸೆಂಬರ್ 30 ರಂದು ನಡೆದ ಮತ ಎಣಿಕೆ ವೇಳೆ ಗೆದ್ದ ಅಭ್ಯರ್ಥಿ 506 ಮತ ಪಡೆದಿದ್ದು, ಪರಾಜಿತ ಅಭ್ಯರ್ಥಿ ರಾವಸಾಹೇಬ ಪಾಟೀಲ್ 505 ಮತ ಪಡೆದಿದ್ದರು. ಅಂದು ಮರು ಮತ ಎಣಿಕೆ ನಡೆಸುವಂತೆ ಮನವಿ ಮಾಡಿದ್ದರೂ ಚುನಾವಣಾ ಅಧಿಕಾರಿಗಳು ಗೆದ್ದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿಯೇ ಬಿಟ್ಟಿದ್ದರು. ಇದರಿಂದ ಅಸಮಾಧಾನಗೊಂಡ ರಾವಸಾಹೇಬ ಪಾಟೀಲ್ ಕೋರ್ಟ್ ಮೂಲಕ ಮರು ಮತ ಎಣಿಕೆ ನಡೆಸಲು ಮುಂದಾಗಿದ್ದಾರೆ.

    ಒಟ್ಟಿನಲ್ಲಿ ಕೋರ್ಟ್ ಇದೀಗ 1 ವರ್ಷ 10 ತಿಂಗಳ ಬಳಿಕ ಮರು ಎಣಿಕೆಗೆ ಆದೇಶಿಸಿದ್ದು, ಹಲವು ಗೊಂದಲಕ್ಕೂ ಕಾರಣವಾಗಿದೆ. ಈಗ ಮರು ಮತ ಎಣಿಕೆ ವೇಳೆ ರಾವಸಾಹೇಬ ಪಾಟೀಲ್ ಗೆದ್ದರೆ, ಸೋತ ಅಭ್ಯರ್ಥಿ 2 ವರ್ಷ ಅಧಿಕಾರ ಅನುಭವಿಸಿದ ದಾಖಲೆ ಒಂದು ಕಡೆಯಾಗುತ್ತದೆ. ಜೊತೆಗೆ ರಾವಸಾಹೇಬ ಪಾಟೀಲ್ ಜಯ ಗಳಿಸಿದರೂ 2 ವರ್ಷ ಅಧಿಕಾರ ವಂಚಿತರಾಗುತ್ತಾರೆ. 2 ವರ್ಷದಿಂದ ಪಂಚಾಯಿತಿ ಸದಸ್ಯನಾಗಿರುವ ವ್ಯಕ್ತಿಗೆ ಅನರ್ಹತೆ ಭೀತಿ ಈಗ ಎದುರಾಗಿದೆ. ಇದನ್ನೂ ಓದಿ: ಕಾಶ್ಮೀರ ಪ್ರತ್ಯೇಕ ದೇಶ – ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಕ್ಕೆ ವಿವಾದ

    Live Tv
    [brid partner=56869869 player=32851 video=960834 autoplay=true]

  • ಚುನಾವಣೆಯಲ್ಲಿ ಗೆದ್ರೆ ಉಚಿತ ಮೇಕಪ್ ಕಿಟ್ ಕೊಡುತ್ತೇನೆ: ಅಭ್ಯರ್ಥಿಯ ಪೋಸ್ಟರ್ ವೈರಲ್

    ಚುನಾವಣೆಯಲ್ಲಿ ಗೆದ್ರೆ ಉಚಿತ ಮೇಕಪ್ ಕಿಟ್ ಕೊಡುತ್ತೇನೆ: ಅಭ್ಯರ್ಥಿಯ ಪೋಸ್ಟರ್ ವೈರಲ್

    ಚಂಡೀಗಢ: ಚುನಾವಣೆಯಲ್ಲಿ (Election) ಗೆಲ್ಲಲು ಅಭ್ಯರ್ಥಿಗಳು ಏನೆಲ್ಲಾ ಸರ್ಕಸ್ ಮಾಡಲ್ಲ? ಜನರ ಮತವನ್ನು ಸೆಳೆಯಲು ಭರವಸೆಗಳ ಸರಮಾಲೆಯನ್ನೇ ಹರಿಸುತ್ತಾರೆ. ಆದರೆ ಅವರ ಭರವಸೆಗಳು ನಿಜವಾಗುತ್ತೋ ಇಲ್ಲವೋ ಎಂಬುದು ಅವರು ಗೆದ್ದ ಬಳಿಕವೇ ಸಾಬೀತಾಗಬೇಕು.

    ಇಲ್ಲೊಬ್ಬ ಪಂಚಾಯತ್ ಚುನಾವಣಾ ಅಭ್ಯರ್ಥಿ (Candidate) ತಾನು ಗೆದ್ದರೆ, ಭವಿಷ್ಯದಲ್ಲಿ ಎಂತೆಂತಹ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂದು ಒಂದು ಪೋಸ್ಟರ್‌ನಲ್ಲಿ (Poster) ಬರೆದು ಹಾಕಿದ್ದಾರೆ. ಅಭ್ಯರ್ಥಿಯ ಭರವಸೆಗಳ ಲಿಸ್ಟ್ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

    ಹರಿಯಾಣದ (Haryana) ಸಿರ್ನಾದ್ ಗ್ರಾಮದಲ್ಲಿ ಸರಪಂಚ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಜೈಕರನ್ ಲಾಥ್ವಾಲ್ ಅವರು ಚುನಾವಣೆಯಲ್ಲಿ ಗೆದ್ದರೆ, ಭವಿಷ್ಯದಲ್ಲಿ ಅವರು ಕುಗ್ರಾಮದಲ್ಲಿ 3 ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಪ್ರಾರಂಭಿಸುತ್ತೇನೆ. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 20 ರೂ. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 100 ರೂ.ಗೆ ಇಳಿಸುತ್ತೇನೆ. ಸರಕು ಮತ್ತು ಸೇವಾ ತೆರಿಗೆಯನ್ನೂ (GST) ತೆಗೆದುಹಾಕುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕಾರು ನಿಲ್ಲಿಸಿ ಅಭಿಮಾನಿಯಿಂದ ತಾಯಿಯ ಫೋಟೋ ಸ್ವೀಕರಿಸಿದ ಮೋದಿ

    ಅವರ ಭರವಸೆಗಳ ಪಟ್ಟಿ ಇಷ್ಟಕ್ಕೇ ಮುಗಿಯದೇ ಇನ್ನೂ ಬೆಳೆಯುತ್ತಲೇ ಹೋಗಿದ್ದು, ಉಚಿತ ವೈ-ಫೈ, ಎಲ್ಲಾ ಮಹಿಳೆಯರಿಗೆ ಮೇಕಪ್ ಕಿಟ್‌ಗಳು, ಪ್ರತಿ ಕುಟುಂಬಕ್ಕೆ ಉಚಿತ ಬೈಕುಗಳು, ಮದ್ಯವ್ಯಸನಿಯಾಗಿದ್ದರೆ ದಿನಕ್ಕೆ ಒಂದು ಮದ್ಯದ ಬಾಟಲಿ, ಉಳಿದವರಿಗೆ ಇತರ ಉಚಿತ ವಸ್ತುಗಳು, ಸಿರ್ಸಾದ್‌ನಿಂದ ದೆಹಲಿಗೆ ಮೆಟ್ರೋ ಮಾರ್ಗ ಮತ್ತು ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ಹಳ್ಳಿಯಿಂದ ಗೊಹಾನಾಗೆ ಪ್ರತಿ 5 ನಿಮಿಷಕ್ಕೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

    ಲಾಥ್ವಾಲ್ ಅವರ ಭರವಸೆಗಳಿಂದ ಅವರು ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಪೋಸ್ಟರ್ ಇದೀಗ ಟ್ವಿಟ್ಟರ್‌ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ನಗೆಪಾಟಲಿಗೀಡಾಗುತ್ತಿದೆ. ಇದನ್ನೂ ಓದಿ: ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    Live Tv
    [brid partner=56869869 player=32851 video=960834 autoplay=true]

  • ಪಂಚಾಯಿತಿ ಚುನಾವಣೆಯಲ್ಲಿ ಮೃತ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಿದ್ರು ಜನ!

    ಪಂಚಾಯಿತಿ ಚುನಾವಣೆಯಲ್ಲಿ ಮೃತ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಿದ್ರು ಜನ!

    ಪಾಟ್ನಾ: ಕೋಟಿ ಕೋಟಿ ಹಣ ಖರ್ಚು ಮಾಡಿದರೂ, ನಾನಾ ರೀತಿಯಲ್ಲಿ ಜನರ ಮನವೊಲಿಸಲು ಪ್ರಯತ್ನಿಸಿದರೂ ಎಷ್ಟೋ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲು ಕಾಣುತ್ತಾರೆ. ಆದರೆ ಬಿಹಾರ್‌ನಲ್ಲಿ ವ್ಯಕ್ತಿಯೊಬ್ಬರು ತಾನು ಮೃತಪಟ್ಟ ನಂತರವೂ ಜನರಿಂದ ವೋಟು ಪಡೆದು ಗೆಲುವು ಸಾಧಿಸಿದ್ದಾರೆ.

    ಹೌದು, ಇದು ನಿಮಗೆ ಅಚ್ಚರಿ ಎನಿಸಿದರೂ ನಿಜ. ಬಿಹಾರ್‌ನ ಜಮೈ ಜಿಲ್ಲೆಯ ಪಂಚಾಯಿತಿ ಚುನಾವಣೆಯಲ್ಲಿ ಮೃತ ವ್ಯಕ್ತಿಗೆ ಗೌರವಾರ್ಥವಾಗಿ ಜನರು ಮತ ಹಾಕಿ ಗೆಲ್ಲಿಸಿದ್ದಾರೆ. ಮೃತ ವ್ಯಕ್ತಿ ಸೋಹನ್‌ ಮರ್ಮು ಎಂಬಾತ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾನೆ ಎಂದು ನ.24 ರಂದು ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಹಸು ಜೊತೆಗೆ ವಿವಾಹವಾದ ಮಹಿಳೆ

    ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಸಮಾರಂಭದಲ್ಲಿ ಸೋಹನ್‌ ಮರ್ಮು ಇರಲಿಲ್ಲ. ಅನುಮಾನಗೊಂಡು ಗ್ರಾಮಸ್ಥರಲ್ಲಿ ವಿಚಾರಿಸಿದಾಗ, ಆತ ನ.6ರಂದೇ ಅಂದರೆ ಮತದಾನದ ಮುನ್ನಾದಿನ ತೀರಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಬಿಡಿಒ ರಾಘವೇಂದ್ರ ತ್ರಿಪಾಠಿ ತಿಳಿಸಿದ್ದಾರೆ.

    ಸೋಹನ್‌ ಮರ್ಮು ಗೆಲುವು ಸಾಧಿಸಿದ ಗ್ರಾಮ ದೀಪಕರ್ಹರ್‌. ಜಾರ್ಖಂಡ್‌ ರಾಜ್ಯದ ಗಡಿಯುದ್ದಕ್ಕೂ ಇರುವ ಕುಗ್ರಾಮ ಇದಾಗಿದೆ. ಇಲ್ಲಿ ಬುಡಕಟ್ಟು ಸಮುದಾಯದ ಜನರೇ ಹೆಚ್ಚಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಕೆಲವು ವರ್ಷಗಳ ಹಿಂದೆ ಪ್ರಕಟಿಸಿದ ಪಟ್ಟಿಯ ಪ್ರಕಾರ, 1990ರ ದಶಕದಲ್ಲಿ ನಕ್ಸಲ್‌ ಚಟುವಟಿಕೆಯಿಂದ ಹಾನಿಗೊಳಗಾದ ಗ್ರಾಮ ಇದಾಗಿದೆ. ಇದನ್ನೂ ಓದಿ: ಕಾರಿನಲ್ಲಿ ತೆರಳುತ್ತಿದ್ದಾಗ ಮಹಿಳೆಗೆ ಡ್ರಗ್ಸ್‌ ನೀಡಿ ಅತ್ಯಾಚಾರ- ಸೇನಾ ಸಿಬ್ಬಂದಿ ಅರೆಸ್ಟ್‌

    ಸೋಹನ್‌ 28 ಮತಗಳಿಂದ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದಾನೆ. ಆತ ಮೃತಪಟ್ಟಿರುವ ವಿಷಯವನ್ನು ಕುಟುಂಬದವರು ಹಾಗೂ ಗ್ರಾಮಸ್ಥರು ಯಾರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದರು. ಮೃತರಿಗೆ ಗೌರವಾರ್ಥವಾಗಿ ಗ್ರಾಮಸ್ಥರೆಲ್ಲ ಮತ ಹಾಕಿದ್ದಾರೆ ಎಂದು ಬಿಡಿಒ ತ್ರಿಪಾಠಿ ವಿವರಿಸಿದ್ದಾರೆ.

    ಗೆಲುವಿನ ಪ್ರಮಾಣ ಪತ್ರವನ್ನು ನಾವು ಯಾರಿಗೂ ನೀಡಿಲ್ಲ. ಸಂಬಂಧಪಟ್ಟ ವಾರ್ಡ್‌ನ ಚುನಾವಣೆಯನ್ನು ಅನೂರ್ಜಿತಗೊಳಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಎಂಬ ಮನವಿಯೊಂದಿಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದ್ದೇವೆ ಎಂದು ತ್ರಿಪಾಠಿ ತಿಳಿಸಿದ್ದಾರೆ.

  • ಬಿಡಿಸಿ ಸೀಟ್ ಗೆದ್ದು, ಸರ್ಟಿಫಿಕೇಟ್ ಸ್ವೀಕರಿಸಿಲು ಮಂಟಪ ಬಿಟ್ಟು ಹೋದ ವಧು

    ಬಿಡಿಸಿ ಸೀಟ್ ಗೆದ್ದು, ಸರ್ಟಿಫಿಕೇಟ್ ಸ್ವೀಕರಿಸಿಲು ಮಂಟಪ ಬಿಟ್ಟು ಹೋದ ವಧು

    ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಬ್ಲಾಕ್ ಡೆವಲಪ್‍ಮೆಂಟ್ ಕೌನ್ಸಿಲ್ ಸ್ಥಾನವನ್ನು ಗೆದ್ದಿರುವ ವಿಚಾರ ತಿಳಿದ ವಧು, ಮದುವೆ ಸಮಾರಂಭವನ್ನು ಅರ್ಧದಲ್ಲಿಯೇ ಬಿಟ್ಟು, ಮತ ಎಣಿಕೆ ಕೇಂದ್ರಕ್ಕೆ ಧಾವಿಸಿ ತನ್ನ ವಿಜೇತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

    ಈ ಘಟನೆ ಭಾನುವಾರ ನಡೆದಿದ್ದು, ಪೂನಂ ಶರ್ಮಾ(28) ಎಂಬವರು ಹೂವಿನ ಹಾರವನ್ನು ವರನೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದ ವೇಳೆ ಈ ಸಿಹಿ ಸುದ್ದಿ ತಿಳಿದುಬಂದಿದೆ. ವಿಶೇಷವೆಂದರೆ ಪೂನಂ ಅವರ ವಿವಾಹವನ್ನು ಮೇ 2ರಂದು ನಿಗದಿ ಪಡಿಸಲಾಗಿತ್ತು ಮತ್ತು ಪಂಚಾಯತ್ ಚುನಾಣೆಯ ಎಣಿಕೆಯನ್ನೂ ಕೂಡ ಮೇ 2 ರಂದೇ ನಿಗದಿ ಪಡಿಸಲಾಗಿತ್ತು.

    ಪೂನಂ ಶರ್ಮಾ ಮದುವೆ ಮಂಟಪದಿಂದ 20 ಕಿ.ಮೀ ದೂರದಲ್ಲಿರುವ ಎಣಿಕೆ ಕೇಂದ್ರಕ್ಕೆ ಭಾನುವಾರ ರಾತ್ರಿ 9.30ಕ್ಕೆ ತಲುಪಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಈ ವೇಳೆ ಅವರು ವಧುವಿನ ಉಡುಪು ಗುಲಾಬಿ ಬಣ್ಣದ ಮಾಸ್ಕ್ ಧರಿಸಿರುವುದನ್ನು ಕಂಡು ಅಲ್ಲಿದ್ದವರು ಕಂಡು ಬೆರಗಾದರು. ಅಲ್ಲದೆ ಪ್ರಮಾಣ ಪತ್ರವನ್ನು ಅಧಿಕಾರಿಗಳಿಂದ ಸ್ವೀಕರಿಸುತ್ತಿರುವ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಾನು ಈಗ ಬಿಡಿಸಿ ಸದಸ್ಯೆಯಾಗಿರುವುದು ನನ್ನ ಮದುವೆಗೆ ಸಿಕ್ಕ ಅತ್ಯುತ್ತಮ ಉಡುಗೊರೆಯಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವರ್ಮಾಲಾ ಮೊದಲು ನಾನು 31 ಮತಗಳಿಂದ ಚುನಾವಣೆಯಲ್ಲಿ ಗೆದ್ದಿದ್ದೇನೆ. ನನ್ನ ಸೋದರ ಅಳಿಯಂದಿರು ನನಗೆ ಪ್ರಮಾಣಪತ್ರವನ್ನು ಸ್ವೀಕರಿಸಲು ಮದುವೆ ಮಂಟಪದಿಂದ ಹೊರಗಡೆ ಹೋಗಲು ಅವಕಾಶ ಮಾಡಿಕೊಟ್ಟರು. ನನ್ನ ಗೆಲುವಿನಿಂದ ಹಳ್ಳಿಯವರೆಲ್ಲ ಸಂತಸದಿಂದ ಇದ್ದಾರೆ ಎಂದು ಹೇಳಿದರು.

    ನಂತರ ಗೆದ್ದ ಬ್ಯಾಡ್ಜ್‌ನೊಂದಿಗೆ ಎಣಿಕೆ ಕೇಂದ್ರದಿಂದ ಪೂನಂ ಶರ್ಮಾ ಮಂಟಪಕ್ಕೆ ಹಿಂದಿರುಗಿದರು. ನಂತರ ಉಳಿದ ಮದುವೆಯ ಶಾಸ್ತ್ರಗಳನ್ನು ಮುಂದುವರೆಸಲಾಯಿತು.

  • ಮತದಾನದ ಸ್ಥಳದಲ್ಲಿ ವಾಮಾಚಾರ- ಘಟನೆ ಖಂಡಿಸಿ ಕೈಯಲ್ಲಿ ಚಪ್ಪಲಿ ಹಿಡಿದ ಮಹಿಳೆಯರು

    ಮತದಾನದ ಸ್ಥಳದಲ್ಲಿ ವಾಮಾಚಾರ- ಘಟನೆ ಖಂಡಿಸಿ ಕೈಯಲ್ಲಿ ಚಪ್ಪಲಿ ಹಿಡಿದ ಮಹಿಳೆಯರು

    – ಸ್ಪರ್ಧಿಗಳಲ್ಲಿಯೇ ಯಾರಾದ್ರು ಮಾಡಿದ್ದಾರೆ ಎನ್ನುವ ಶಂಕೆ
    – ಕುಡಿಕೆ ಹೂತಿಟ್ಟು ಪೊಜೆ

    ಹಾಸನ: ಮತದಾನ ಮಾಡುವ ಜಾಗದಲ್ಲಿ ವಾಮಾಚಾರ ಮಾಡಿದ್ದು, ಇದರಿಂದ ಕೋಪಗೊಂಡ ಮಹಿಳೆಯರು ಕೈಯಲ್ಲಿ ಚಪ್ಪಲಿ ಹಿಡಿದು ಆಕ್ರೋಶ ಹೊರಹಾಕುತ್ತಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ, ಹುಲ್ಲಂಗಾಲ ಗ್ರಾಮದಲ್ಲಿ ಕಂಡುಬಂದಿದೆ.

    ನಾಳೆ ಗ್ರಾಮಪಂಚಾಯಿತಿ ಚುನಾವಣೆ ನಡೆಯಲಿದ್ದು, ಹುಲ್ಲಂಗಾಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಯಾರೋ ಕಿಡಿಗೇಡಿಗಳು ಶಾಲೆಯ ಸುತ್ತ ಹಲವೆಡೆ ಕುಡಿಕೆ ಹೂತಿಟ್ಟು ಪೂಜೆ ಸಲ್ಲಿಸಿ ವಾಮಾಚಾರ ಮಾಡಿದ್ದಾರೆ.

    ಈ ವಿಚಾರ ತಿಳಿದು ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಆತಂಕ ಹೊರಹಾಕುತ್ತಿದ್ದಾರೆ. ಮತದಾನ ಮಾಡುವ ಸ್ಥಳದ ಬಳಿ ವಾಮಾಚಾರ ಮಾಡಿದ್ದಾರೆ. ಇದರಿಂದ ಮತ ಹಾಕಲು ಬರಲು ಭಯವಾಗುತ್ತಿದೆ. ಇಂತಹ ಕೆಲಸ ಮಾಡಿರುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಮಹಿಳೆಯರು ಕೈಯಲ್ಲಿ ಚಪ್ಪಲಿ ಹಿಡಿದು ಆಕ್ರೋಶ ಹೊರಹಾಕುತ್ತಿದ್ದಾರೆ.

    ಮತದಾನ ಮಾಡುವ ಜಾಗದಲ್ಲಿ ವಾಮಾಚಾರ ಮಾಡಿರುವವರು ಯಾರು ಎಂಬುದು ತಿಳಿದುಬಂದಿಲ್ಲ. ಆದರೆ ಚುನಾವಣೆಗೆ ಸ್ಪರ್ಧಿಸಿರುವವರೆಲ್ಲೇ ಯಾರೋ ಒಬ್ಬರು ಈ ರೀತಿ ಮಾಡಿರಬಹುದು ಎಂಬ ಬಗ್ಗೆ ಗ್ರಾಮಸ್ಥರಲ್ಲಿ ಗುಸುಗುಸು ಆರಂಭವಾಗಿದೆ.