Tag: Panchavati Express

  • ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!

    ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!

    ಮುಂಬೈ: ದೇಶದಲ್ಲೇ ಮೊದಲ ಬಾರಿಗೆ ರೈಲಿನಲ್ಲಿ ಸ್ಥಾಪಿಸಲಾದ ಎಟಿಎಂನ (ATM) ಪ್ರಾಯೋಗಿಕ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ.

    ಬ್ಯಾಂಕ್ ಆಫ್ ಮಹಾರಾಷ್ಟ್ರದ (Bank Of Maharashtra) ಸಹಯೋಗದೊಂದಿಗೆ ಮನ್ಮಾಡ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ವರೆಗೆ (Chhatrapati Shivaji Maharaj Terminus) ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ (Panchavati Express) ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಪ್ರಾಯೋಗಿಕ ಪರೀಕ್ಷೆಯ ಬಳಿಕ ಈಶಾನ್ಯ ಗಡಿನಾಡು ರೈಲ್ವೆಗಳಲ್ಲಿ ಎಟಿಎಂಗಳನ್ನು ಪರಿಚಯಿಸಲು ನಿರ್ಧರಿಸಿದೆ. ನಾಸಿಕ್‌ನ ಮನ್ಮಾಡ್ ಮತ್ತು ಮುಂಬೈ ನಡುವೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ (AC Coach) ಎಟಿಎಂ ಸ್ಥಾಪಿಸಲಾಗಿದೆ.

    ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಾಯೋಗಿಕ ಪರೀಕ್ಷೆ ವೇಳೆ ಇಗತ್ಪುರಿ ಮತ್ತು ಕಸರಾ ಪ್ರದೇಶದಲ್ಲಿ ಸಿಗುವ ಕಡಿಮೆ ನೆಟ್‌ವರ್ಕ್ ಹೊರತುಪಡಿಸಿ, ಯಾವುದೇ ಅಡಚಣೆಯಿಲ್ಲದೇ ಎಟಿಎಂ ಕಾರ್ಯನಿರ್ವಹಿಸಲಿದೆ. ಸುಗಮವಾಗಿ ಸಂಚರಿಸಿದೆ. ನವೀನ ಮತ್ತು ಶುಲ್ಕ ರಹಿತ ಆದಾಯ ಕಲ್ಪನೆಗಳ ಯೋಜನೆ ಅಡಿಯಲ್ಲಿ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ಪಾಲುದಾರಿಕೆಯಲ್ಲಿ ಈ ಎಟಿಎಂ ಅನ್ನು ಪರಿಚಯಿಸಲಾಗಿದೆ.ಇದನ್ನೂ ಓದಿ: 5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಅಡ್ಮಿಷನ್: ಮಧು ಬಂಗಾರಪ್ಪ

    ಈ ಕುರಿತು ಭೂಸಾವಲ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಇತಿ ಪಾಂಡೆ ಮಾತನಾಡಿ, ಭೂಸಾವಲ್ ವಿಭಾಗವು ಆಯೋಜಿಸಿದ್ದ ನವೀನ ಮತ್ತು ಶುಲ್ಕ ರಹಿತ ಆದಾಯ ಕಲ್ಪನೆಗಳ ಯೋಜನಾ ಸಭೆಯಲ್ಲಿ ರೈಲುಗಳಲ್ಲಿ ಎಟಿಎಂ ಸ್ಥಾಪಿಸುವ ಕುರಿತು ಮಂಡಿಸಲಾಯಿತು. ಬಳಿಕ ಈ ಕುರಿತು ಚರ್ಚೆ ನಡೆಸಲಾಗಿದೆ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಉತ್ತಮವಾಗಿದ್ದು, ಜನರು ಚಲಿಸುವ ರೈಲಿನಲ್ಲಿ ಎಟಿಎಂ ಮೂಲಕ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಸದ್ಯ ಪಂಚವಟಿ ಎಕ್ಸ್ಪ್ರೆಸ್‌ನ ಎಸಿ ಕೋಚ್‌ನಲ್ಲಿ ಎಟಿಎಂ ಅಳವಡಿಸಲಾಗಿದ್ದು, ರೈಲಿನ ಎಲ್ಲಾ 22 ಬೋಗಿಗಳಲ್ಲಿರುವ ಪ್ರಯಾಣಿಕರು ಎಸಿ ಕೋಚ್‌ಗೆ ಬಂದು ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದು.

    ಮುಂಬೈ-ಹಿಂಗೋಲಿ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಪಂಚವಟಿ ಎಕ್ಸ್‌ಪ್ರೆಸ್‌ನೊಂದಿಗೆ ತನ್ನ ರೇಕ್ ಅನ್ನು ಹಂಚಿಕೊಳ್ಳುವುದರಿಂದ, ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣಿಕರಿಗೂ ಈ ಎಟಿಎಂ ಲಭ್ಯವಿರುತ್ತದೆ. ಹೀಗಾಗಿ ಮುಂಬೈ-ಹಿಂಗೋಲಿ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರೂ ಕೂಡ ಎಟಿಎಂನ ಲಾಭ ಪಡೆದುಕೊಳ್ಳಬಹುದು ಎಂದಿದ್ದಾರೆ.

    ಪ್ರಯಾಣಿಕ ಸಂಜಯ್ ಎಂಬುವವರು ಮಾತನಾಡಿ, ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವುದರ ಜೊತೆಗೆ ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್, ಚೆಕ್ ಬುಕ್ ಆರ್ಡರ್ ಮಾಡಬಹುದಾಗಿದೆ ಎಂದು ತಿಳಿಸಿದರು.

    ರೈಲ್ವೆ ಅಧಿಕಾರಿಯೊಬ್ಬರು ಮಾತನಾಡಿ, ಈ ಸೇವೆ ಜನಪ್ರಿಯವಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಸ್ಥಾಪಿಸಲಾಗುವುದು ಮತ್ತು ಭದ್ರತೆಗಾಗಿ ಎಟಿಎಂ ಶಟರ್ ವ್ಯವಸ್ಥೆಯನ್ನು ಹೊಂದಿದ್ದು, 24/7 ಸಿಸಿಟಿವಿ ಕಣ್ಗಾವಲು ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಲಕ್ನೋ ಸೂಪರ್‌ ಜೈಂಟ್ಸ್‌ಗೆ ಬಿಗ್‌ ಬೂಸ್ಟ್‌ – ರಾಕೆಟ್‌ ವೇಗಿ ಮಯಾಂಕ್‌ ಯಾದವ್‌ ಕಂಬ್ಯಾಕ್‌

  • ಎಸಿ ರೈಲಿನ ಒಳಗಡೆಯೇ ಛತ್ರಿ ಹಿಡಿದು ಕುಳಿತ ಪ್ರಯಾಣಿಕರು

    ಎಸಿ ರೈಲಿನ ಒಳಗಡೆಯೇ ಛತ್ರಿ ಹಿಡಿದು ಕುಳಿತ ಪ್ರಯಾಣಿಕರು

    ಮುಂಬೈ: ಪಂಚವಟಿ ಎಕ್ಸ್‌ಪ್ರೆಸ್‍ನ ಪ್ರಯಾಣಿಕರು ಎಸಿ ರೈಲಿನ ಒಳಗೆಯೇ ಛತ್ರಿ ಹಿಡಿದು ಕುಳಿತು ಪ್ರಯಾಣ ಮಾಡಿರುವ ಸುದ್ದಿ ಈಗ ಎಲ್ಲಕಡೆ ಚರ್ಚೆಗೆ ಗ್ರಾಸವಾಗುತ್ತಿದೆ.

    ಭಾನುವಾರ ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್‍ನ ಮಾಸಿಕ ಸೀಸನ್ ಟಿಕೆಟ್(ಎಂಎಸ್‍ಟಿ) ಹೊಂದಿರುವವರಿಗೆ ಕಾಯ್ದಿರಿಸಿದ ಎಸಿ ಕೋಚ್‍ನ ಮೇಲ್ಛಾವಣಿ ಸೋರಿಕೆಯಾಗುತ್ತಿತ್ತು. ಈ ಪರಿಣಾಮ ಪ್ರಯಾಣಿಕರು ತಮ್ಮನ್ನು ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಛತ್ರಿ ಹಿಡಿದುಕೊಂಡಿದ್ದಾರೆ. ನಾಸಿಕ್‍ನಿಂದ ಮುಂಬೈವರೆಗೂ ಪ್ರಯಾಣಿಕರು ಛತ್ರಿಗಳನ್ನು ಹಿಡಿದು ಕುಳಿತುಕೊಂಡಿದ್ದರು. ಇದನ್ನೂ ಓದಿ: ಇತ್ತೀಚೆಗೆ ನಡೆಯುತ್ತಿರುವ ಕ್ಷುಲ್ಲಕ ಚರ್ಚೆ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ: ಮಸ್ಕ್ 

    Local train coach derails near Thane; no injury reported - BusinessToday

    ಪ್ರಯಾಣಿಕ ಸಂತೋಷ್ ಶೆವಾಲೆ ಈ ಕುರಿತು ಮಾತನಾಡಿದ್ದು, ಸಿ-2 ಹವಾನಿಯಂತ್ರಿತ ಕೋಚ್‍ನ ಮೇಲ್ಛಾವಣಿಯಿಂದ ನೀರು ಜಿನುಗುತ್ತಲೇ ಇತ್ತು.  ಆದರೆ ಇದೇ ಮೊದಲ ಬಾರಿಗೆ ಎಸಿ ಕೋಚ್‍ನಲ್ಲಿ ನೋಡಿದ್ದೇನೆ. ಕೋಚ್ ಮೇಲ್ಛಾವಣಿಯಿಂದ ನಿರಂತರವಾಗಿ ನೀರು ಬರುತ್ತಿತ್ತು. ಪ್ರಯಾಣಿಕರು ತಮ್ಮ ಛತ್ರಿಗಳನ್ನು ಬಳಸಬೇಕಾಯಿತು ಎಂದು ವಿವರಿಸಿದರು.

    File:12109 Panchavati Express - AC Chair Car coach.jpg - Wikimedia Commons

    ರೈಲು ಸಂಪೂರ್ಣ ಭರ್ತಿಯಾಗಿದ್ದರಿಂದ ಪ್ರಯಾಣಿಕರು ಬೇರೆ ಕಡೆ ಹೋಗಲು ಸಾಧ್ಯವಾಗಿರಲ್ಲ. ನಂತರ ನೊಂದ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಮನ್ಮಾಡ್‍ನಲ್ಲಿರುವ ಅಧಿಕಾರಿಗಳು ಸಮಸ್ಯೆಯಾಗಿರುವುದನ್ನು ಒಪ್ಪಿಕೊಂಡರು. ಇದನ್ನೂ ಓದಿ: ವಿಭಜನೆ ನೋವಿನಿಂದ ಕೂಡಿದೆ – ಪಾಕ್, ಬಾಂಗ್ಲಾದೇಶ, ಭಾರತ ಒಂದಾಗಬಹುದು: ಮನೋಹರ್ ಲಾಲ್ ಖಟ್ಟರ್ 

    ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ವಿದ್ಯುತ್ ಪೈಪ್‌ನ ಸಮಸ್ಯೆಯಿಂದ ಈ ರೀತಿಯಾಗಿದೆ ಎಂದು ತಿಳಿಸಿದರು. ಪ್ರಯಾಣಿಕರು ಅಧಿಕಾರಿಗಳಿಗೆ ತಮಗಾದ ಸಮಸ್ಯೆ ಬಗ್ಗೆ ದೂರನ್ನು ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]