Tag: Pancharatna

  • 12ನೇ ತರಗತಿವರೆಗೆ ಉಚಿತ ಶಿಕ್ಷಣ, ಪ್ರತಿ ಯುವಕರಿಗೆ ಉದ್ಯೋಗ – ಎಚ್‌ಡಿಕೆ ಘೋಷಣೆ

    12ನೇ ತರಗತಿವರೆಗೆ ಉಚಿತ ಶಿಕ್ಷಣ, ಪ್ರತಿ ಯುವಕರಿಗೆ ಉದ್ಯೋಗ – ಎಚ್‌ಡಿಕೆ ಘೋಷಣೆ

    ಬೆಂಗಳೂರು:2023 ರಲ್ಲಿ ಜೆಡಿಎಸ್‌ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ಪಂಚರತ್ನ ಯೋಜನೆ ಜಾರಿಗೆ ತರುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

    ಜೆಪಿ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಪ್ರತಿ ಕುಟುಂಬಕ್ಕೆ ಒಂದು ಸೂರು, ಎಲ್.ಕೆ.ಜಿಯಿಂದ 12 ನೇ ತರಗತಿವರೆಗೆ ಉಚಿತ ಗುಣಮಟ್ಟದ ಶಿಕ್ಷಣ, ರಾಜ್ಯದ ಎಲ್ಲಾ ಜನರಿಗೆ ವಿಶೇಷ ಆರೋಗ್ಯ ಕಾರ್ಯಕ್ರಮ, ರಾಜ್ಯದ ರೈತರ ಅಭಿವೃದ್ಧಿಗೆ ವಿಶೇಷ ಯೋಜನೆ, ಪ್ರತಿ ಯುವಕರಿಗೂ ಉದ್ಯೋಗ ನೀಡುವ ಮಹತ್ವದ ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು.

     

    ಒಂದು ವೇಳೆ ನನ್ನ ಅಧಿಕಾರದಲ್ಲಿ ಈ ಯೋಜನೆಗೆಗಳನ್ನ ಜಾರಿಗೆ ತರದೇ ಹೋದರೆ ನನ್ನ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಸವಾಲು ಎಸೆದ ಎಚ್‌ಡಿಕೆ ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮೊದಲ ಪ್ರವಾಸ ಜನವರಿ 29, 30 ರಂದು ಹುಬ್ಬಳ್ಳಿ ಭಾಗದಿಂದ ಪ್ರಾರಂಭ ಮಾಡುವುದಾಗಿ ತಿಳಿಸಿದರು.

    ಪಕ್ಷ ಸಂಘನೆಗಾಗಿ ಜೆಡಿಎಸ್ ಸಂಘಟನೆ ಮಾಡಲಾಗುತ್ತಿದೆ. ಹೀಗಾಗಿ ಹೊಸ ತಂಡ ರಚನೆ ಮಾಡುವ ನಿಟ್ಟಿನಲ್ಲಿ ಈಗ ಇರುವ ಎಲ್ಲಾ ಘಟಕಗಳನ್ನ ವಿಸರ್ಜನೆ ಮಾಡಲಾಗಿದೆ. ಮಧ್ಯ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ, ಮೈಸೂರು ಭಾಗ, ಬೆಂಗಳೂರು ನಗರ, ಕರಾವಳಿ ಭಾಗ, ಕೋಲಾರ, ಚಿಕ್ಕಬಳ್ಳಾಪುರ ಭಾಗ ಸೇರಿ 7 ವಿಭಾಗ ಮಟ್ಟದಲ್ಲಿ ವಿಶೇಷ ಸಮಿತಿ ರಚಿಸಲಾಗುತ್ತದೆ. ಅ ಸಮಿತಿಯು ಪ್ರತಿ ಜಿಲ್ಲೆಗೆ ಪ್ರವಾಸ ಮಾಡಿ ಅಲ್ಲಿನ ನಾಯಕರು, ಕಾರ್ಯಕರ್ತರು ಜೊತೆ ಸಂವಾದ, ಅಭಿಪ್ರಾಯ ನಡೆಸಿ ಸಮಿತಿ ರಚನೆ ಮಾಡಿ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಕೋರ್ ಕಮಿಟಿ ನಿರ್ಧಾರ ಮಾಡಿದೆ. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೂ ಪಕ್ಷ ಸಿದ್ದವಾಗಲಿದೆ ಎಂದು ವಿವರಿಸಿದರು.