Tag: Panchanga

  • ದಿನ ಭವಿಷ್ಯ: 25-07-2025

    ದಿನ ಭವಿಷ್ಯ: 25-07-2025

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ,
    ಪ್ರಥಮಿ, ಶುಕ್ರವಾರ,
    ಪುಷ್ಯ ನಕ್ಷತ್ರ/ಆಶ್ಲೇಷ ನಕ್ಷತ್ರ

    ರಾಹುಕಾಲ: 10:54 ರಿಂದ 12:29
    ಗುಳಿಕಕಾಲ: 07:44 ರಿಂದ 09:19
    ಯಮಗಂಡಕಾಲ: 03:40 ರಿಂದ 05:15

    ಮೇಷ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ, ಕೆಲಸಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ, ಆಸ್ತಿ ವಿಷಯದಲ್ಲಿ ತಂತ್ರದ ಆತಂಕ.

    ವೃಷಭ: ಬಂಧು ಬಾಂಧವರಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಎಚ್ಚರಿಕೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ಮಿಥುನ: ಆರ್ಥಿಕ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಕಲಹ, ಸ್ತ್ರೀಯರಿಂದ ಅನುಕೂಲ.

    ಕಟಕ: ಪಾಲುದಾರಿಕೆಯಲ್ಲಿ ಅನುಕೂಲ, ಅವಕಾಶ ಕೈತಪ್ಪುವ ಸಂಭವ, ದೃಷ್ಟಿದೋಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಅಧಿಕ ಖರ್ಚು ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಆತಂಕ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ.

    ಕನ್ಯಾ: ಮಕ್ಕಳಿಂದ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮಿತ್ರರಿಂದ ಹಿನ್ನಡೆ, ಅಧಿಕಾರಿಗಳಿಂದ ನಷ್ಟ

    ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ ಎಚ್ಚರಿಕೆ, ಅಧಿಕಾರಿಗಳಿಂದ ನೋವು.

    ವೃಶ್ಚಿಕ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೈಕಾಲುಗಳಿಗೆ ಪೆಟ್ಟು.

    ಧನಸ್ಸು: ಧನಾಗಮನ, ಉತ್ತಮ ಅವಕಾಶಗಳ ಸೂಚನೆ, ಕುಟುಂಬದಲ್ಲಿ ಆತಂಕ ಸೃಷ್ಟಿ, ಆಹಾರ ವ್ಯತ್ಯಾಸದಿಂದ ಸಮಸ್ಯೆ.

    ಮಕರ: ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ಪ್ರೇಮದ ವಿಷಯಗಳು ಬಯಲು, ವ್ಯಾಪಾರದಲ್ಲಿ ನಷ್ಟ.

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ ಮೋಸ, ಅಪವಾದಗಳು.

    ಮೀನ: ಮಕ್ಕಳ ಜೀವನದಲ್ಲಿ ಏರುಪೇರು, ಸಂತಾನ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಸ್ತ್ರೀಯರಿಂದ ಗೌರವಕ್ಕೆ ದಕ್ಕೆ.

  • ದಿನ ಭವಿಷ್ಯ: 08-07-2025

    ದಿನ ಭವಿಷ್ಯ: 08-07-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಶುಕ್ಲ ಪಕ್ಷ
    ವಾರ: ಮಂಗಳವಾರ, ತಿಥಿ: ತ್ರಯೋದಶಿ
    ನಕ್ಷತ್ರ: ಜೇಷ್ಠ

    ರಾಹುಕಾಲ: 3.40 ರಿಂದ 5.16
    ಗುಳಿಕಕಾಲ: 12.28 ರಿಂದ 2.04
    ಯಮಗಂಡಕಾಲ: 9.16 ರಿಂದ 10.52

    ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಕರಿಗೆ ಲಾಭ, ಉತ್ತಮ ಆದಾಯ, ವಿದ್ಯಾರ್ಥಿಗಳಲ್ಲಿ ಗೊಂದಲ.

    ವೃಷಭ: ನಿಷ್ಠುರದ ಮಾತುಗಳು ಬೇಡ, ಸ್ವಂತ ಉದ್ಯಮಿಗಳಿಗೆ ಅಲ್ಪ ಆದಾಯ, ಆರೋಗ್ಯದ ಬಗ್ಗೆ ಎಚ್ಚರ.

    ಮಿಥುನ: ದಾಂಪತ್ಯದಲ್ಲಿ ಪ್ರೀತಿ, ಸಮಾಜದಲ್ಲಿ ಗೌರವ, ಅಧಿಕ ಖರ್ಚು, ಪಿತ್ರಾರ್ಜಿತ ಆಸ್ತಿ ಗಳಿಕೆ, ದುಷ್ಟ ಜನರಿಂದ ತೊಂದರೆ.

    ಕಟಕ: ಆಪ್ತರಿಂದ ಸಹಾಯ, ಅನಿರೀಕ್ಷಿತ ದೂರ ಪ್ರಯಾಣ, ಶತ್ರು ಭಾದೆ, ಧನ ಪ್ರಾಪ್ತಿ.

    ಸಿಂಹ: ಈ ದಿನ ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಮಾತಿನ ಮೇಲೆ ಹಿಡಿತವಿರಲಿ, ರಾಜ ಭಯ, ಮನಕ್ಲೇಶ.

    ಕನ್ಯಾ: ಈ ದಿನ ಹಣದ ತೊಂದರೆ, ವ್ಯಾಸಂಗಕ್ಕೆ ತೊಂದರೆ, ಚಂಚಲ ಮನಸ್ಸು, ಮಾತಾಪಿತರಲ್ಲಿ ವಾತ್ಸಲ್ಯ.

    ತುಲಾ: ಈ ದಿನ ಪಾಪ ಬುದ್ಧಿ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಗುರು ಹಿರಿಯರ ಭೇಟಿ, ಮನಶಾಂತಿ.

    ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ, ಋಣ ಭಾದೆ, ಅಧಿಕ ಖರ್ಚು.

    ಧನಸ್ಸು: ಶುಭ ವಾರ್ತೆ ಕೇಳುವಿರಿ, ಮನೆಗೆ ಹಿರಿಯರ ಆಗಮನ, ಉದ್ಯೋಗದಲ್ಲಿ ಅಭಿವೃದ್ಧಿ.

    ಮಕರ: ಪರಸ್ಥಳ ವಾಸ, ದುಷ್ಟಬುದ್ಧಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಸೇವಕರಿಂದ ತೊಂದರೆ, ವಾಹನ ರಿಪೇರಿ.

    ಕುಂಭ: ಮನಸ್ಸಿನಲ್ಲಿ ಗೊಂದಲ, ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ, ಅಲ್ಪ ಆದಾಯ ಅಧಿಕ ಖರ್ಚು.

    ಮೀನ: ರಿಯಲ್ ಎಸ್ಟೇಟ್‌ನವರಿಗೆ ಲಾಭ, ವಿನಾಕಾರಣ ಯೋಚನೆ, ಉದ್ಯಮಿಗಳಿಗೆ ಸುದಿನ, ಸುಗಂಧ ದ್ರವ್ಯಗಳಿಂದ ಲಾಭ.

  • ದಿನ ಭವಿಷ್ಯ: 23-06-2025

    ದಿನ ಭವಿಷ್ಯ: 23-06-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಕೃಷ್ಣ ಪಕ್ಷ
    ವಾರ: ಸೋಮವಾರ, ತಿಥಿ: ತ್ರಯೋದಶಿ
    ನಕ್ಷತ್ರ: ಕೃತಿಕ

    ರಾಹುಕಾಲ: 7.35 ರಿಂದ 9.13
    ಗುಳಿಕಕಾಲ: 2.01 ರಿಂದ 3.37
    ಯಮಗಂಡಕಾಲ: 10.49 ರಿಂದ 12.25

    ಮೇಷ: ಆರೋಗ್ಯದಲ್ಲಿ ಸುಧಾರಣೆ, ಅಲ್ಪ ಲಾಭ, ಅಧಿಕ ಖರ್ಚು, ಮಾನಸಿಕ ಚಿಂತೆ, ಉದ್ಯೋಗದಲ್ಲಿ ಬಡ್ತಿ, ಕುಟುಂಬದಲ್ಲಿ ನೆಮ್ಮದಿ.

    ವೃಷಭ: ಯತ್ನ ಕಾರ್ಯದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಧನವ್ಯಯ, ಮಿತ್ರರಿಂದ ವಂಚನೆ, ಸ್ಥಿರಾಸ್ತಿ ಸಂಪಾದನೆ, ಧರ್ಮ ಕಾರ್ಯದಲ್ಲಿ ಆಸಕ್ತಿ, ಕೃಷಿಯಲ್ಲಿ ಅಭಿವೃದ್ಧಿ.

    ಮಿಥುನ: ಮನೆಯಲ್ಲಿ ಸಂತಸ, ಕುಟುಂಬ ಸೌಖ್ಯ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಪುಣ್ಯಕ್ಷೇತ್ರ ದರ್ಶನ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಆರೋಗ್ಯದಲ್ಲಿ ಚೇತರಿಕೆ.

    ಕಟಕ: ವ್ಯರ್ಥ ಧನ ಹಾನಿ, ವಿರೋಧಿಗಳಿಂದ ತೊಂದರೆ, ಅಭಿವೃದ್ಧಿ ಕುಂಠಿತ, ಕಾರ್ಯ ಸಾಧನೆಗಾಗಿ ತಿರುಗಾಟ, ಸರ್ಕಾರಿ ಕೆಲಸದವರಿಗೆ ತೊಂದರೆ, ವಿಪರೀತ ದುಶ್ಚಟಗಳು.

    ಸಿಂಹ: ದಾಯಾದಿಗಳ ಕಲಹ, ಕಳ್ಳರಿಂದ ಭಯಭೀತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಋಣ ವಿಮೋಚನೆ, ನಾನಾ ರೀತಿಯ ಚಿಂತೆ, ಹೆತ್ತವರಲ್ಲಿ ದ್ವೇಷ.

    ಕನ್ಯಾ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಪತಿ ಪತ್ನಿಯರಲ್ಲಿ ಕಲಹ, ಆಲಸ್ಯ ಮನೋಭಾವ, ಚಂಚಲ ಸ್ವಭಾವ, ಇಲ್ಲಸಲ್ಲದ ಅಪವಾದ, ಅನ್ಯರಲ್ಲಿ ನಿಂದನೆ.

    ತುಲಾ: ಮಾನಸಿಕ ಕಿರಿಕಿರಿ, ಕಾರ್ಯದಲ್ಲಿ ವಿಘಾತ, ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಕುತಂತ್ರದಿಂದ ಹಣ ಸಂಪಾದನೆ,

    ವೃಶ್ಚಿಕ: ಅನ್ಯರಿಗೆ ಉಪಕಾರ ಮಾಡುವಿರಿ, ಹಿರಿಯರಿಂದ ಹಿತನುಡಿ, ಸ್ತ್ರೀಯರಿಗೆ ತೊಂದರೆ, ಹಣಕಾಸು ಮುಗ್ಗಟ್ಟು, ಸ್ವಯಂ ಕೃತ್ಯಗಳಿಂದ ನಷ್ಟ.

    ಧನಸ್ಸು: ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಶೀತ ಸಂಬಂಧಿತ ರೋಗ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಅಧಿಕ ಖರ್ಚು.

    ಮಕರ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಅವಕಾಶ ಕೈ ತಪ್ಪುವುದು, ಪ್ರೇಮಿಗಳಿಗೆ ದುಃಖ, ನಾನಾ ರೀತಿಯ ಸಂಕಷ್ಟ.

    ಕುಂಭ: ಮಕ್ಕಳ ಭಾವನೆಗಾಗಿ ಸ್ಪಂದಿಸಿ, ಸ್ಥಿರಾಸ್ತಿ ಖರೀದಿ ಆಲೋಚನೆ, ಧೈರ್ಯದಿಂದ ಕೆಲಸದಲ್ಲಿ ಮುನ್ನಡೆ, ಮಾತಿನ ಚಕಮಕಿ.

    ಮೀನ: ಹಿರಿಯರ ಮಾತಿಗೆ ಗೌರವ ನೀಡಿ, ಆಕಸ್ಮಿಕ ದೂರ ಪ್ರಯಾಣ, ಮಹಿಳೆಯರಿಗೆ ಮನ ಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ.

  • ದಿನ ಭವಿಷ್ಯ: 21-06-2025

    ದಿನ ಭವಿಷ್ಯ: 21-06-2025

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ದಶಮಿ / ಉಪರಿ ಏಕಾದಶಿ,
    ಶನಿವಾರ, ಅಶ್ವಿನಿ ನಕ್ಷತ್ರ

    ರಾಹುಕಾಲ: 09:12 ರಿಂದ 10:48
    ಗುಳಿಕಕಾಲ: 05:59 ರಿಂದ 07:36
    ಯಮಗಂಡ ಕಾಲ: 02:01 ರಿಂದ 03:37

    ಮೇಷ: ಅನಾರೋಗ್ಯ ಸಮಸ್ಯೆಗಳು, ಮಕ್ಕಳಿಂದ ತೊಂದರೆ, ಹಿರಿಯ ವ್ಯಕ್ತಿಗಳ ಶಾಪಕ್ಕೆ ಗುರಿಯಾಗುವಿರಿ.

    ವೃಷಭ: ಋಣ ರೋಗ ಬಾಧೆಗಳಿಂದ ಮುಕ್ತಿ, ಕುಟುಂಬದಲ್ಲಿ ವಾಗ್ವಾದಗಳು, ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು.

    ಮಿಥುನ: ಸಂಕಷ್ಟಕ್ಕೆ ಸಿಲುಕುವಿರಿ, ಶುಭಕಾರ್ಯಗಳು ಮುಂದೂಡಿಕೆ, ಅನಾರೋಗ್ಯ ಸಮಸ್ಯೆಗಳು.

    ಕಟಕ: ಮಾನಸಿಕ ಕಿರಿಕಿರಿ ಮತ್ತು ತೊಂದರೆ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

    ಸಿಂಹ: ಮಕ್ಕಳಿಂದ ಕಿರಿಕಿರಿ, ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

    ಕನ್ಯಾ: ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ, ಶತ್ರು ದಮನ, ತಂತ್ರ ಬಾಧೆ.

    ತುಲಾ: ನಿದ್ರಾಭಂಗ, ಉದ್ಯೋಗ ಒತ್ತಡಗಳು, ಕಾಲು ನೋವು ಮಂದತ್ವ, ಬುದ್ಧಿ ಚಂಚಲತೆ, ವೈರಾಗ್ಯದ ಭಾವ ಅಧಿಕ.

    ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಖರ್ಚು, ಸ್ಥಿರಾಸ್ತಿ ಭೂಮಿ ವಾಹನ ಖರೀದಿಯಲ್ಲಿ ಮೋಸ, ಕೆಲಸಕಾರ್ಯಗಳಲ್ಲಿ ಸೋಮಾರಿತನ,
    ಆಲಸ್ಯ ನಿರಾಸೆ.

    ಧನಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಪ್ರಯಾಣಕ್ಕೆ ಅಡೆತಡೆ, ಅವಮಾನಗಳಿಗೆ ಗುರಿಯಾಗುವ ಸಂದರ್ಭ.

    ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಹಾಯ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

    ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಂಪತ್ಯದಲ್ಲಿ ವಿರಸ.

    ಮೀನ: ಆಕಸ್ಮಿಕ ಅವಘಡಗಳಿಂದ ಕಿರಿಕಿರಿ, ಕಬ್ಬಿಣದ ವಸ್ತುಗಳಿಂದ ಪೆಟ್ಟು, ಕೆಲಸ ಕಾರ್ಯಗಳಿಗೆ ಅಡೆತಡೆ, ಮಾನಸಿಕ ನೆಮ್ಮದಿ ಭಂಗ.

  • ದಿನ ಭವಿಷ್ಯ: 20-06-2025

    ದಿನ ಭವಿಷ್ಯ: 20-06-2025

    ವಿಶ್ವಾವಸು ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ದ್ವಿತೀಯ, ಶುಕ್ರವಾರ,
    ಪೂರ್ವಾಷಾಡ ನಕ್ಷತ್ರ

    ರಾಹುಕಾಲ: 10:47 ರಿಂದ 12:23
    ಗುಳಿಕ ಕಾಲ: 07:35 ರಿಂದ 09:11
    ಯಮಗಂಡಕಾಲ: 03:35 ರಿಂದ 05:11

    ಮೇಷ: ತಂದೆಯಿಂದ ಅನುಕೂಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರ್ಥಿಕ ಪರಿಸ್ಥಿತಿ ಉತ್ತಮ.

    ವೃಷಭ: ಸಾಲದ ನೆರವು, ಶುಭ ಯೋಗ ಪ್ರಾಪ್ತಿ, ಮಾನಸಿಕ ತೊಂದರೆ.

    ಮಿಥುನ: ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಅಧಿಕ ಧನವ್ಯಯ.

    ಕಟಕ: ಶತ್ರುಗಳಿಂದ ಸಮಸ್ಯೆ, ಸಾಲದ ನೆರವು ಸಿಗುವುದು, ಸಹೋದರಿಯಿಂದ ಅನುಕೂಲ.

    ಸಿಂಹ: ಅಧಿಕ ಖರ್ಚು, ಶುಭಕಾರ್ಯಗಳಿಗೆ ಧನವ್ಯಯ, ಉದ್ಯೋಗ ನಿಮಿತ್ತ ಪ್ರಯಾಣ.

    ಕನ್ಯಾ: ಅಧಿಕ ಲಾಭ, ಸಂಗಾತಿಯಿಂದ ಅನುಕೂಲ, ಶಕ್ತಿದೇವತೆಗಳ ದರ್ಶನ ಭಾಗ್ಯ, ಮಾನಸಿಕ ನೆಮ್ಮದಿ ಪ್ರಾಪ್ತಿ.

    ತುಲಾ: ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗ ಲಾಭ, ಸ್ತ್ರೀಯರಿಂದ ಸಂಕಷ್ಟ.

    ವೃಶ್ಚಿಕ: ಅಧಿಕ ಧನವ್ಯಯ, ಪ್ರಯಾಣದ ಮನಸ್ಸು, ಮಕ್ಕಳ ಜೀವನ ಬದಲಾವಣೆ ಯೋಚನೆ.

    ಧನಸ್ಸು: ಅನುಕೂಲಕರ ದಿವಸ, ಆರೋಗ್ಯದಲ್ಲಿ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಸನ್ನಿವೇಶ.

    ಮಕರ: ಐಷಾರಾಮಿ ಜೀವನದ ಕನಸು, ಉದ್ಯೋಗ ದೊರಕುವ ಭರವಸೆ, ಪಾಲುದಾರಿಕೆಯಲ್ಲಿ ಅನುಕೂಲ.

    ಕುಂಭ: ಆಸ್ತಿಯಿಂದ ತೊಂದರೆ, ವಸ್ತ್ರ ಆಭರಣ ಕಳವು, ಮಿತ್ರರು ದೂರ, ಆರ್ಥಿಕ ಮುಗ್ಗಟ್ಟು.

    ಮೀನ: ಆಕಸ್ಮಿಕವಾಗಿ ಉದ್ಯೋಗದಲ್ಲಿ ಅನುಕೂಲ, ಮಹಿಳೆಯರಿಂದ ಸಮಸ್ಯೆ, ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರುವ ಸಂದರ್ಭ.

  • 400 ವರ್ಷಗಳಲ್ಲಿ ಇದೇ ಮೊದಲು – ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನ!

    400 ವರ್ಷಗಳಲ್ಲಿ ಇದೇ ಮೊದಲು – ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನ!

    – ಪಂಚಾಂಗ, ತಿಥಿ, ಗ್ರಹಗತಿ ಏನು ಹೇಳುತ್ತೆ?

    ಮೈಸೂರು: ಪ್ರತಿ ವರ್ಷ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಈ ಬಾರಿ 11 ದಿನಗಳ ಕಾಲ ನಡೆಯಲಿದೆ. ದಸರಾ ಇತಿಹಾಸದಲ್ಲೇ (Dasara History) ಬಹುತೇಕ ಇದೇ ಮೊದಲ ಬಾರಿಗೆ 11 ದಿನದ ದಸರಾ ಬಂದಿದೆ.

    ಹೌದು. ಪಂಚಾಂಗದ (Panchanga) ತಿಥಿಗಳ ಪ್ರಕಾರ ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್ 2ರ ವರೆಗೆ ಅಂದ್ರೆ 11 ದಿನ ದಸರಾ ಉತ್ಸವ ನಡೆಯಲಿದೆ. ಸೆ.24 ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರಿಯುವ ಕಾರಣ ದಸರಾ 11 ದಿನ ಆಗಲಿದೆ. ಇದನ್ನೂ ಓದಿ: ವಯನಾಡಲ್ಲಿ ಮಳೆಯಬ್ಬರ – ಕಬಿನಿ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್ ಒಳಹರಿವು

    ಸಾಮಾನ್ಯವಾಗಿ ಪ್ರತಿ ವರ್ಷ 10 ದಿನಗಳ ಕಾಲ ದಸರಾ ನಡೆಯುತ್ತದೆ. ದಸರಾ ಪರಂಪರೆ ಶುರುವಾಗಿ 410 ವರ್ಷ ಕಳೆದಿದೆ. 410 ವರ್ಷಗಳಿಂದಲೂ 10 ದಿನ ದಸರಾ ನಡೆದಿದೆ. ಆದರೆ ಈ ಬಾರಿ 11 ದಿನ ದಸರಾ ನಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳ ಬಗ್ಗೆ ಧಾರ್ಮಿಕವಾಗಿ ಚರ್ಚೆಗಳು ಶುರುವಾಗಿವೆ. 1410 ರಿಂದ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ದಸರಾ ಆಚರಣೆ ನಡೆದಿದ್ದು 11 ದಿನ ದಸರಾ ನಡೆದ ಉದಾಹರಣೆಗಳಿಲ್ಲ. ಮಹಾಲಯ ಅಮಾವಾಸ್ಯೆಯ ಮರು ದಿನದಿಂದ ನವರಾತ್ರಿ ಶುರುವಾಗಿ 9 ದಿನಗಳ ಮರುದಿನ ವಿಜಯದಶಮಿ‌ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.

    ಈ ಕುರಿತು ಧಾರ್ಮಿಕ ಚಿಂತಕ ಡಾ. ಶೆಲ್ವಪಿಳೈ ಅಯ್ಯಂಗಾರ್ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ನೂರು ವರ್ಷಗಳ ಹಿಂದೆ ದಸರಾ 11 ದಿನ ನಡೆದಿರಬಹುದು. ಆದ್ರೆ ನನ್ನ ಅನುಭವದಲ್ಲಿ ಇದೇ ಮೊದಲು 11 ದಿನ ನಡೆಯುತ್ತಿದೆ. ಪಂಚಾಂಗದಲ್ಲಿ ಸೆ.21ರಂದು ಮಹಾಲೆಯ ಅಮಾವಾಸ್ಯೆ ಬರುತ್ತೆ. ಅದರ ಮಾರನೇ ದಿನದಿಂದ ಅಂದ್ರೆ ಸೆ.22ರಿಂದ ಅ.2ರ ವರೆಗೆ ಶರನ್ನವರಾತ್ರಿ ಮತ್ತು ವಿಜಯದಶಮಿ ನಡೆಯುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನಿಮ್ಮಪ್ಪನಿಗೆ ಸಿಎಂ ಕುರ್ಚಿ ಬಿಟ್ಟುಕೊಡಲು ಹೇಳಿ: ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

    ಏಕೆಂದ್ರೆ ಪಂಚಾಂಗದಲ್ಲಿ ಪ್ರಥಮೆ, ದ್ವಿತೀಯ, ತೃತೀಯ, ಚತುರ್ಥಿ ಸರಿಯಿದೆ. ಆದ್ರೆ ಪಂಚಮಿ ಸೆ.26, 27ರಂದು ಎರಡೂ ದಿನ ಬಂದಿದೆ. ಆ 2 ದಿನ ಗಣನೆಗೆ ತೆಗೆದುಕೊಂಡ್ರೆ 10ನೇ ದಿನ ಮಹಾನವಮಿ (ನವಮಿ) ಬರುತ್ತದೆ. 11ನೇ ದಿನ ದಶಮಿ ಬರುತ್ತದೆ. ಇದು ಸಾಮಾನ್ಯ ದಿನಗಳಲ್ಲಿ ಬಂದಿರುವುದು ಉಂಟು, ಆದ್ರೆ ನೂರಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈ ತಿಥಿ ಬಂದಿರುವುದು ವಿಶೇಷ ಎನ್ನುತ್ತಾರೆ ಶೆಲ್ವಪಿಳೈ ಅಯ್ಯಂಗಾರ್. ಇದನ್ನೂ ಓದಿ: ಮುಡಾ ಹಗರಣ : ಇಡಿಯಿಂದ 100 ಕೋಟಿ ಮೌಲ್ಯದ 92 ಆಸ್ತಿ ಮುಟ್ಟುಗೋಲು

    ದಿನಗಳ ಲೆಕ್ಕದಲ್ಲಿ ನವರಾತ್ರಿ 9 ದಿನ ದಶಮಿ 10ನೇ ದಿನಕ್ಕೆ ಬರುತ್ತದೆ. ಆದ್ರೆ ಪಂಚಾಂಗದಲ್ಲಿ 11 ದಿನ ಬರುತ್ತದೆ. ಈ ಸಂದರ್ಭದಲ್ಲಿ 5-6ನೇ ದಿನ ಪೂಜೆಯಲ್ಲಿ ಯಾವುದೇ ವ್ಯತ್ಯಾಸ ಇರಲ್ಲ. ಅದೇ ಅಲಂಕಾರವನ್ನು ಎರಡೂ ದಿನ ಮಾಡಿಕೊಳ್ಳಬೇಕಾಗುತ್ತೆ. ಆದ್ರೆ ಶೈವ, ವೈಷ್ಣವ ದೈವಗಳ ಪೂಜೆಯಲ್ಲಿ ಬದಲಾವಣೆ ಇರುತ್ತೆ. ಶೈವ ದೇವಸ್ಥಾನಗಳಲ್ಲಿ ರಾತ್ರಿಯಲ್ಲೂ ಶಮಿ ಪೂಜೆಗಳನ್ನ ಮಾಡಿ ಆರಂಭಿಸಬಹುದು. ಮೈಸೂರು ಪರಂಪರೆಗೆ ನೋಡುವುದಾದ್ರೆ 11 ದಿನದ ಆಚರಣೆ ಮಾಡಬೇಕಾಗುತ್ತದೆ. ಈ ವೇಳೆ ಮಹಾರಾಜರ ಪೂಜೆಗಳಲ್ಲೂ ಬದಲಾವಣೆ ಆಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಸಮುದಾಯದ ದಯಾನಂದ್‌ ಮೇಲೆ ಏಕೆ ಸಿಎಂಗೆ ಕೋಪ – ಪ್ರತಾಪ್‌ ಸಿಂಹ ಪ್ರಶ್ನೆ

    ಗ್ರಹಗತಿ ಹೇಳುವುದೇನು? 
    ಸಾಮಾನ್ಯವಾಗಿ ಗ್ರಹಗಳು ಗ್ರಹಗಳು 6,3,8,12ರಲ್ಲಿ ಇದ್ದಾಗ ದುಸ್ಥಾನ ಎನ್ನುತ್ತೇವೆ. ಆದ್ರೆ 11ರಲ್ಲಿ ಇದ್ದಾಗ ಶುಭಸ್ಥಾನ ಅಂದ್ರೆ ಏಕಾದಶ ಸ್ಥಾನ ಫಲ ಎನ್ನುತ್ತೇವೆ. ಹೀಗಾಗಿ ಈ ಬಾರಿ ಮೈಸೂರು ದಸರಾ 11 ದಿನ ಆಚರಣೆ ಮಾಡಬೇಕಾಗುತ್ತೆ ಎಂದು ಶೆಲ್ವಪಿಳೈ ಅಯ್ಯಂಗಾರ್ ವಿವರಿಸಿದ್ದಾರೆ.

  • ದಿನ ಭವಿಷ್ಯ: 09-06-2025

    ದಿನ ಭವಿಷ್ಯ: 09-06-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಶುಕ್ಲ ಪಕ್ಷ
    ವಾರ: ಸೋಮವಾರ, ತಿಥಿ : ತ್ರಯೋದಶಿ
    ನಕ್ಷತ್ರ: ವಿಶಾಖ

    ರಾಹುಕಾಲ: 7.35 ರಿಂದ 9.011
    ಗುಳಿಕಕಾಲ: 1.59 ರಿಂದ 3.35
    ಯಮಗಂಡಕಾಲ: 10.47 ರಿಂದ 12.23

    ಮೇಷ: ದೂರ ಪ್ರಯಾಣದಿಂದ ತೊಂದರೆ, ಅನಿರೀಕ್ಷಿತ ಖರ್ಚು, ಗುರುಗಳ ದರ್ಶನ, ತೀರ್ಥಕ್ಷೇತ್ರ ದರ್ಶನ.

    ವೃಷಭ: ಇಷ್ಟ ಕಾರ್ಯಸಿದ್ಧಿ, ಮನೆಯಲ್ಲಿ ಶಾಂತಿ, ಪರರಿಂದ ಮೋಸ ಎಚ್ಚರ, ಆಲಸ್ಯ ಮನೋಭಾವ.

    ಮಿಥುನ: ಅಮೂಲ್ಯ ವಸ್ತುಗಳನ್ನ ಖರೀದಿಸುವಿರಿ, ದುರಾಲೋಚನೆ, ಧನ ನಷ್ಟ, ಉದರಭಾದೆ, ಶತ್ರುಗಳಿಂದ ತೊಂದರೆ.

    ಕಟಕ: ಮಾತಾಪಿತರ ಪ್ರೀತಿ, ಭೂ ವಿಚಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ನಂಬಿಕೆ ದ್ರೋಹ, ಅಪಘಾತವಾಗುವ ಸಂಭವ.

    ಸಿಂಹ: ವ್ಯಾಪಾರದಲ್ಲಿ ಲಾಭ, ಧನ ಲಾಭ, ಮನೋವ್ಯಥೆ, ಮನಸ್ತಾಪ, ಶತ್ರು ಭಾದೆ, ಅನಾವಶ್ಯಕ ಮಾತಿನಿಂದ ಕಲಹ.

    ಕನ್ಯಾ: ಮಿತ್ರರಿಂದ ವಿರೋಧ, ಒತ್ತಡ ಹೆಚ್ಚಾಗುವುದು, ಉದ್ವೇಗಕ್ಕೆ ಒಳಗಾಗುವಿರಿ.

    ತುಲಾ: ಕೆಲಸ ಕಾರ್ಯಗಳು ತಕ್ಕಮಟ್ಟಿಗೆ ನಡೆಯುತ್ತವೆ, ಮನಸ್ಸಿನಲ್ಲಿ ಗೊಂದಲ, ಸಹಚರರ ಜೊತೆ ವೈಮನಸ್ಸು.

    ವೃಶ್ಚಿಕ: ವರಮಾನ ಕಡಿಮೆ, ವಾಹನದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಹಿತಕರ ಸುದ್ದಿ ಕೇಳುವಿರಿ.

    ಧನಸ್ಸು: ಹಿತೈಷಿಗಳು ನಿಮ್ಮ ನೆರವಿಗೆ ಬರುತ್ತಾರೆ, ವ್ಯಾಪಾರಿಗಳಿಗೆ ಅಲ್ಪ ಲಾಭ, ಆರೋಗ್ಯದ ಸಮಸ್ಯೆ, ಅಕಾಲ ಭೋಜನ.

    ಮಕರ: ನೌಕರಿಯಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶತ್ರು ನಾಶ, ಒಪ್ಪಂದ ವ್ಯವಹಾರಗಳಿಂದ ಲಾಭ.

    ಕುಂಭ: ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಚಿಂತೆ, ಸ್ಥಳ ಬದಲಾವಣೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ.

    ಮೀನ: ಮಧ್ಯಸ್ಥಿಕೆ ವ್ಯವಹಾರದಿಂದ ಉತ್ತಮ ಲಾಭ, ಸ್ತ್ರೀ ಲಾಭ, ಭಾಗ್ಯ ವೃದ್ಧಿ, ನಿಮ್ಮ ಸಾಮರ್ಥ್ಯದಿಂದ ಪ್ರಗತಿ ಸಾಧನ.

  • ದಿನ ಭವಿಷ್ಯ: 02-06-2025

    ದಿನ ಭವಿಷ್ಯ: 02-06-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಶುಕ್ಲ ಪಕ್ಷ
    ವಾರ: ಸೋಮವಾರ, ತಿಥಿ: ಸಪ್ತಮಿ
    ನಕ್ಷತ್ರ: ಮಖ

    ರಾಹುಕಾಲ: 7.33 ರಿಂದ 9.09
    ಗುಳಿಕಕಾಲ: 1.57 ರಿಂದ 3.33
    ಯಮಗಂಡಕಾಲ: 10.45 ರಿಂದ 12.21

    ಮೇಷ: ಸ್ನೇಹಿತರಿಂದ ನಿಂದನೆ, ಪರರ ಧನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಶತ್ರುನಾಶ, ಭಾಗ್ಯ ವೃದ್ಧಿ, ಮನಶಾಂತಿ.

    ವೃಷಭ: ಋಣ ಭಾದೆ, ದುಷ್ಟಬುದ್ಧಿ, ಮನಸ್ತಾಪ, ವ್ಯರ್ಥ ಧನಹಾನಿ, ವ್ಯವಹಾರದಲ್ಲಿ ಏರುಪೇರು, ಮೃತ್ಯು ಭಯ.

    ಮಿಥುನ: ದಯಾದಿ ಕಲಹ, ಅಧಿಕ ಖರ್ಚು, ದೂರ ಪ್ರಯಾಣ, ಮನಶಾಂತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ಕಟಕ: ಉತ್ತಮ ವ್ಯಾಪಾರ ವಹಿವಾಟು, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರ ಖರೀದಿ, ವಾಹನ ಯೋಗ, ಆರೋಗ್ಯ ವೃದ್ಧಿ.

    ಸಿಂಹ: ವಾಹನ ಖರೀದಿ, ಸಮಾಜದಲ್ಲಿ ಗೌರವ ಕೀರ್ತಿ, ವ್ಯಾಪಾರದಲ್ಲಿ ದನ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕನ್ಯಾ: ಮಾಡುವ ಕೆಲಸದಲ್ಲಿ ಜಯ, ಮಿತ್ರರ ಸಹಾಯ, ಮಾತಿನ ಚಕಮಕಿ, ವಿವಾಹಕ್ಕೆ ತೊಂದರೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

    ತುಲಾ: ಗುರು ಹಿರಿಯರ ಭೇಟಿ, ಧನ ಲಾಭ, ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು.

    ವೃಶ್ಚಿಕ: ನಾನಾ ರೀತಿಯ ತೊಂದರೆಗಳು, ಕಾರ್ಯ ವಿಕಲ್ಪ, ಚಂಚಲ ಮನಸ್ಸು, ಆಸ್ತಿ ವಿಚಾರದಲ್ಲಿ ಕಲಹ, ಶತ್ರುನಾಶ.

    ಧನಸ್ಸು: ಯತ್ನ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಪ್ರಗತಿ, ಹಿತ ಶತ್ರು ಬಾಧೆ.

    ಮಕರ: ಮಹಿಳೆಯರಿಗೆ ತೊಂದರೆ, ಅಧಿಕಾರಿಗಳಲ್ಲಿ ಕಲಹ, ದಾಂಪತ್ಯದಲ್ಲಿ ಸಮಸ್ಯೆ, ನಂಬಿದ ಜನರಿಂದ ಅಶಾಂತಿ, ಅಕಾಲ ಭೋಜನ.

    ಕುಂಭ: ವಿರೋಧಿಗಳಿಂದ ಕುತಂತ್ರ, ಆದಾಯಕ್ಕಿಂತ ಖರ್ಚು ಜಾಸ್ತಿ, ವಾಹನ ರಿಪೇರಿ, ಆಲಸ್ಯ ಮನೋಭಾವ.

    ಮೀನ: ಶೀತ ಸಂಬಂಧ ರೋಗ, ಭೂ ಲಾಭ, ಮಾತೃವಿನ ಆಶೀರ್ವಾದ, ಸುಖ ಜೀವನ, ಭೋಗ ವಸ್ತು ಪ್ರಾಪ್ತಿ, ಮನಶಾಂತಿ.

  • ದಿನ ಭವಿಷ್ಯ: 31-05-2025

    ದಿನ ಭವಿಷ್ಯ: 31-05-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ಪಂಚಮಿ, ಶನಿವಾರ,
    ಪುಷ್ಯ ನಕ್ಷತ್ರ

    ರಾಹುಕಾಲ: 09:08 ರಿಂದ 10:44
    ಗುಳಿಕಕಾಲ: 05:57 ರಿಂದ 07:32
    ಯಮಗಂಡಕಾಲ: 01:56 ರಿಂದ 03:32

    ಮೇಷ: ಉದ್ಯೋಗ ಲಾಭ, ದೂರ ಪ್ರಯಾಣ, ಲಾಭದಲ್ಲಿ ಚೇತರಿಕೆ, ಸೋಮಾರಿತನ ಆಲಸ್ಯ ಆತುರ.

    ವೃಷಭ: ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಸಹಕಾರ.

    ಮಿಥುನ: ಅನಿರೀಕ್ಷಿತ ಧನಾಗಮನ, ಉದ್ಯೋಗ ಯಶಸ್ಸು, ಸಾಲಬಾಧೆ, ಶತ್ರು ಕಾಟ, ಪ್ರಯಾಣದಲ್ಲಿ ಅಡತಡೆ.

    ಕಟಕ: ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ, ಶುಭಕಾರ್ಯಕ್ಕೆ ವಿಘ್ನ, ಅನಿರೀಕ್ಷಿತ ಪ್ರಯಾಣ.

    ಸಿಂಹ: ಅನಾರೋಗ್ಯದಿಂದ ನೋವು, ದಾಂಪತ್ಯದಲ್ಲಿ ಕಿರಿಕಿರಿ, ಸ್ಥಿರಾಸ್ತಿ ವಾಹನದಿಂದ ತೊಂದರೆ, ಪಾಲುದಾರಿಕೆ ಸಮಸ್ಯೆಗಳು.

    ಕನ್ಯಾ: ಆಪತ್ತಿನಿಂದ ಪಾರು, ದಾಂಪತ್ಯ ಕಲಹಗಳು, ಆತುರದಿಂದ ಕಾರ್ಯವಿಘ್ನ, ಸಾಲ ದೊರೆಯುವುದು.

    ತುಲಾ: ಋಣಭಾದೆ ಮುಕ್ತಿ ಪ್ರಯತ್ನ, ಅವಕಾಶ ಕಳೆದುಕೊಳ್ಳುವಿರಿ, ದಾಂಪತ್ಯದಿಂದ ದೂರ, ದುಶ್ಚಟಗಳಿಂದ ತೊಂದರೆ.

    ವೃಶ್ಚಿಕ: ಸ್ವಂತ ವ್ಯವಹಾರ ವೃದ್ಧಿ, ಸಾಲ ತೀರಿಸುವಿರಿ, ಭಾವನೆಗಳಿಗೆ ಪೆಟ್ಟು, ಅನಾರೋಗ್ಯ.

    ಧನಸ್ಸು: ಆರ್ಥಿಕ ಚೇತರಿಕೆ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಪ್ರೀತಿ ಪ್ರೇಮದಲ್ಲಿ ಸೋಲು, ಹಿರಿಯರ ಮಾರ್ಗದರ್ಶನ.

    ಮಕರ: ಆರ್ಥಿಕ ಅನುಕೂಲ, ಪ್ರಯಾಣದಿಂದ ಪ್ರಯೋಜನವಿಲ್ಲ, ಲಾಭದಲ್ಲಿ ಚೇತರಿಕೆ, ಮಾತಿನಿಂದ ತೊಂದರೆ.

    ಕುಂಭ: ಆತುರ ಕೋಪ ದುಡುಕು, ದೀರ್ಘಕಾಲದ ಅನಾರೋಗ್ಯ, ಗೌರವಕ್ಕೆ ಧಕ್ಕೆ, ಆರ್ಥಿಕ ನಷ್ಟ ಅವಮಾನಗಳು.

    ಮೀನ: ಆರ್ಥಿಕ ಮುಗ್ಗಟ್ಟುಗಳು, ಅನಗತ್ಯ ತಿರುಗಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರತಿಷ್ಠೆಗೆ ಪೆಟ್ಟು.

  • ದಿನ ಭವಿಷ್ಯ: 10-05-2025

    ದಿನ ಭವಿಷ್ಯ: 10-05-2025

    ಶ್ರೀ ವಿಶ್ವಾವಸನಾಮ ಸಂವತ್ಸರ
    ಉತ್ತರಾಯಣ, ವಸಂತ ಋತು
    ವೈಶಾಖ ಮಾಸ, ಶುಕ್ಲ ಪಕ್ಷ
    ತ್ರಯೋದಶಿ (ಸಾಯಂಕಾಲ 05:31)
    ನಂತರ ಚತುರ್ದಶಿ,
    ಶನಿವಾರ, ʻಚಿತ್ತಾ ನಕ್ಷತ್ರʼ

    ರಾಹುಕಾಲ: 09:09 ರಿಂದ 10:44
    ಗುಳಿಕಕಾಲ: 06:00 ರಿಂದ 07:34
    ಯಮಗಂಡಕಾಲ: 01:54 ರಿಂದ 03:29

    ಮೇಷ: ಸ್ವಂತ ಉದ್ಯಮ. ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ. ಅಧಿಕ ಧನ ಸಂಪಾದನೆ. ರಿಯಲ್ ಎಸ್ಟೇಟ್ ಉದ್ಯೋಗಸ್ಥರಿಗೆ ಅನುಕೂಲ. ಮನೋವ್ಯಾಧಿ. ಅತಿಯಾದ ಕೋಪ ಸಂಕಟ.

    ವೃಷಭ: ಧನ ನಷ್ಟ ಮಾನ ಅಪಮಾನಗಳಿಗೆ ಗುರಿಯಾಗುವಿರಿ. ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವಿರಿ.

    ಮಿಥುನ: ಸಾಲದ ಚಿಂತೆ. ನೆರೆಹೊರೆಯವರಿಂದ ಬಂಧುಗಳಿಂದ ಸಹೋದ್ಯೋಗಿಗಳಿಂದ ಸಾಲ ಬೇಡುವ ಸನ್ನಿವೇಶ. ಅನಾರೋಗ್ಯ ಸಮಸ್ಯೆ ಹೆಚ್ಚು

    ಕಟಕ: ಮಕ್ಕಳಿಂದ ನಷ್ಟ. ನೆರೆಹೊರೆಯವರಿಂದ, ಬಾಡಿಗೆದಾರರಿಂದ ಸೇವಕರಿಂದ ಕಿರಿಕಿರಿ ಮತ್ತು ನಿದ್ರಾಭಂಗ. ಮಕ್ಕಳಿಗಾಗಿ ಅಥವಾ ಉದ್ಯೋಗನಿಮಿತ್ತ ದೂರ ಪ್ರಯಾಣ.

    ಸಿಂಹ: ಧನಾಗಮನ ಮತ್ತು ಲಾಭ. ಕೆಲಸ ಕಾರ್ಯ ಕರ್ತವ್ಯಗಳಲ್ಲಿ ಜಯ. ಆರ್ಥಿಕ ನಷ್ಟ ಮತ್ತು ಮೋಸ

    ಕನ್ಯಾ: ಆಕಸ್ಮಿಕ ಅವಘಡಗಳಿಂದ, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಸಂದರ್ಭ. ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ. ಸ್ನೇಹಿತರಿಂದ ಅಥವಾ ಸಹೋದರಿಯರಿಂದ ತೊಂದರೆ. ಕಾರ್ಯಕರ್ತವ್ಯಗಳ ಅಡೆತಡೆಯಿಂದ ದಾಂಪತ್ಯದಲ್ಲಿ ಸಮಸ್ಯೆ.

    ತುಲಾ: ಸಂಗಾತಿಯಿಂದ ಧನಾಗಮನ ಮತ್ತು ಲಾಭ. ತಂದೆಯೊಡನೆ ಕಿರಿಕಿರಿ. ಅನಿರೀಕ್ಷಿತ ಘಟನೆಯಿಂದ ನಷ್ಟ ಮತ್ತು ಸಂಕಷ್ಟ.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ ಮತ್ತು ಲಾಭ. ಆಕಸ್ಮಿಕ ಧನಾಗಮನ. ಆರೋಗ್ಯದಲ್ಲಿ ವ್ಯತ್ಯಾಸ .

    ಧನಸ್ಸು: ಬಡ್ಡಿ ವ್ಯವಹಾರಸ್ಥರಿಗೆ, ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ, ಚಿನ್ನ ವ್ಯವಹಾರಸ್ಥರಿಗೆ ಅನುಕೂಲ. ಅಧಿಕ ನಷ್ಟ ಹಾಗೂ ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ. ಅನಿರೀಕ್ಷಿತ ತಪ್ಪು

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ. ಮಿತ್ರರಿಂದ ಆರ್ಥಿಕ ಸಹಾಯ. ಆರೋಗ್ಯದಲ್ಲಿ ವ್ಯತ್ಯಾಸ ಮತ್ತು ದಾಂಪತ್ಯದಲ್ಲಿ ಕಲಹ.

    ಕುಂಭ: ಆರೋಗ್ಯದಲ್ಲಿ ಏರುಪೇರು. ಗಂಡು ಮಕ್ಕಳಿಂದ ಆಕಸ್ಮಿಕ ಧನಾಗಮನ. ಸಾಲಗಾರರಿಂದ ಶತ್ರುಗಳಿಂದ ತೊಂದರೆ ಮತ್ತು ಆಯುಷ್ಯಕ್ಕೆ ಕುತ್ತು.

    ಮೀನ: ಸ್ಥಿರಾಸ್ಥಿಯಿಂದ ಧನಾಗಮನ. ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು. ಸೇವಾವೃತ್ತಿ ಉದ್ಯೋಗಗಳು ದೊರಕುವುದು. ಆರೋಗ್ಯ ಸಮಸ್ಯೆಗಳು ಬಾಧಿಸುವುದು.