Tag: Panchamasali Reservation

  • ಮೀಸಲಾತಿ ಹೆಸರಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ – ರಾಜಕೀಯಕ್ಕೆ ಧುಮುಕ್ತಾರಾ ಕೂಡಲಸಂಗಮ ಸ್ವಾಮೀಜಿ?

    ಮೀಸಲಾತಿ ಹೆಸರಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ – ರಾಜಕೀಯಕ್ಕೆ ಧುಮುಕ್ತಾರಾ ಕೂಡಲಸಂಗಮ ಸ್ವಾಮೀಜಿ?

    ಗದಗ: ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟ ವಿಚಾರಕ್ಕೆ ಬೇಸತ್ತ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ರಾಜಕೀಯಕ್ಕೆ ಧುಮುಕುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೀಸಲಾತಿ ಹೋರಾಟ 4 ವರ್ಷದಿಂದ ಶಾಂತಿಯುತವಾಗಿ ನಡೆಯಿತು. ಬೆಳಗಾವಿಯಲ್ಲಿ (Belagavi) ಗಾಯಗೊಂಡ ಸಮಾಜದ ಜನರ ಮನೆಗೆ ಭೇಟಿನೀಡಿ ಸಾಂತ್ವನ ಹೇಳಲಿದ್ದೇವೆ. ಪ್ರತಿಜ್ಞಾ ಕ್ರಾಂತಿ ಅಭಿಯಾನ ಮೂಲಕ ಸಮಾಜದ ಜನರ ಪರಿವರ್ತನೆ ಮಾಡುತ್ತೇವೆ ಎಂದು ಹೇಳಿದರು.  ಇದನ್ನೂ ಓದಿ: ದರ್ಶನ್‌ ಜಾಮೀನು ರದ್ದುಗೊಳಿಸಿ – ಸುಪ್ರೀಂಗೆ 1492 ಪುಟಗಳ ದಾಖಲೆ ಸಲ್ಲಿಸಿದ ಪೊಲೀಸರು

     

    8ನೇ ಹಂತದ ಹೋರಾಟ ಕೂಡಲಸಂಗಮದಿಂದ ಆರಂಭವಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ಪಂಚಮಸಾಲಿ ಸಮಾಜದವರ ಮನೆಗೆ ಭೇಟಿ ನೀಡುತ್ತೇವೆ. ಸರ್ಕಾರಗಳಿಂದಾದ ದೌರ್ಜನ್ಯ, ಮಾರಣಾಂತಿಕ ಹಲ್ಲೆ ವಿಷಯ ಜನರಿಗೆ ತಿಳಿಸುತ್ತೇವೆ. ಜನರ ಅಭಿಪ್ರಾಯ ಕ್ರೋಢಿಕರಣ ಮಾಡುತ್ತೇವೆ. ನಮಗೆ ಮೀಸಲಾತಿ ನೀಡದವರಿಗೆ ಯಾವ ರೀತಿ ಅಸಹಕಾರ ಕೊಡಬೇಕು. ಗೆದ್ದು ನಮಗೆ ಮೀಸಲಾತಿ ಕೊಡುವವರಿಗೆ ಯಾವ ರೀತಿ ಸಹಕಾರ ಕೊಡಬೇಕು. ಪ್ರತಿ ಹಳ್ಳಿಯಲ್ಲೂ ಪ್ರತಿಜ್ಞಾ ಕ್ರಾಂತಿ ಅಭಿಯಾನ ಹೆಸರಲ್ಲಿ ಹೋರಾಟ ಮಾಡುತ್ತೇವೆ. ರಾಜ್ಯದ 200 ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಲಿದ್ದೇವೆ. ಸಂಕ್ರಾಂತಿ ದಿನದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಮದುವೆಯಾಗಿ 2 ವರ್ಷಕ್ಕೆ ಡಿವೋರ್ಸ್ ಘೋಷಿಸಿದ ನಟಿ ಅಪರ್ಣಾ ವಿನೋದ್

    ಎಲ್ಲಾ ಹಳ್ಳಿಗಳಿಗೂ ಹೊಗುವಾಗ ರಾಜಕೀಯ ಧ್ರುವೀಕರಣ ಆಗುತ್ತದೆ. ಆಗ ಯಾರು‌ ಪ್ರಾಮಾಣಿಕವಾಗಿ ಮುಂದೆ ಬರುತ್ತಾರೆ ಅವರಿಗೆ ಜನ ಆಶಿರ್ವಾದ ಮಾಡುತ್ತಾರೆ. ನಿಮ್ಮ ಮತ ಹೊಡೆದವರಿಗಾ? ಪ್ರೀತಿ ಮಾಡಿದವರಿಗಾ ಎಂದು ಪ್ರಶ್ನಿಸುತ್ತೇವೆ. ರಾಜ್ಯದ 200 ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ನನ್ನ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.

    ಸದ್ಯ ಪರ್ಯಾಯ ರಾಜಕಾರಣ ಬಗ್ಗೆ ಮಾಹಿತಿ ನೀಡುವುದಿಲ್ಲ. ಚುನಾವಣೆ ಹತ್ತಿರ ಬಂದಾಗ ಜನರೇ ಮಾನಸಿಕವಾಗಿ ಯೋಚನೆ ಮಾಡುತ್ತಾರೆ. ಹೊಡೆದಿರುವ ಗಾಯಗಳು ಮಾಯಬಹುದು, ಮನಸ್ಸಿಗೆ ಆದ ಗಾಯ ಮಾಯವಾಗುವುದಿಲ್ಲ. ಅದಕ್ಕೆ ಜನರು ಹೇಗೆ ಪ್ರತೀಕಾರ ತೀರಿಸಬೇಕು, ಹಾಗೆ ತೀರಿಸುತ್ತಾರೆ. ಆ ಬಗ್ಗೆ ಜನರಿಗೆ ಹೇಳುತ್ತಾ ಹೋಗುತ್ತೇನೆ. ಅಷ್ಟರಲ್ಲಿ ಯಾವ ಪುಣ್ಯಾತ್ಮ ಬಂದು ಮೀಸಲಾತಿ ಕೊಟ್ಟರೆ ಅದಕ್ಕೆ ಒಪ್ಪಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರೌಡಿಶೀಟರ್‌ ಹತ್ಯೆ; ಬೆಂಗಳೂರಲ್ಲಿ ಕೊಲೆ ಮಾಡಿ ತಮಿಳುನಾಡಿನಲ್ಲಿ ಸುಟ್ಟುಹಾಕಿದ್ದ ಹಂತಕ

     

  • ಪ್ರತಿಪಕ್ಷ ನಾಯಕ ಅಶೋಕ್‌ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಅಪಸ್ವರ!

    ಪ್ರತಿಪಕ್ಷ ನಾಯಕ ಅಶೋಕ್‌ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಅಪಸ್ವರ!

    ಬೆಳಗಾವಿ: ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಕಾರ್ಯವೈಖರಿಗೆ ಬಿಜೆಪಿಯಲ್ಲೇ (BJP) ಅಪಸ್ವರ ಕೇಳಿಬಂದಿದೆ. ಬಿಜೆಪಿಯ ಕೆಲ ಶಾಸಕರು ಅಶೋಕ್ ಕಳೆದ ವಾರ ನಡೆದ ಕಲಾಪಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಮುಖ್ಯವಾಗಿ ಆರ್‌ಎಸ್‌ಎಸ್ (RSS) ಮತ್ತು ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ (Panchamasali Reservation) ಅಶೋಕ್ ನಡೆಗೆ ಕಮಲ ಶಾಸಕರು ಅತೃಪ್ತಿ ಹೊಂದಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದುಬಂದಿದೆ.

     

    ಅಸಮಾಧಾನ ಯಾಕೆ?
    ಪಂಚಮಸಾಲಿ ಮೀಸಲಾತಿ ಪ್ರತಿಭಟನೆಯ ವೇಳೆ ಆರ್‌ಎಸ್‌ಎಸ್‌ನವರು ಬಂದು ಕಲ್ಲು ಹೊಡೆದರು ಎಂಬ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಹೇಳಿಕೆಗೆ ಸಂಘದ ಹಿನ್ನೆಲೆಯ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಶಪ್ಪನವರ್ ಹಾಗೂ ಕಾಂಗ್ರೆಸ್ ವಿರುದ್ಧ ಅಶೋಕ್ ಅವರು ಸರಿಯಾಗಿ ಖಂಡಿಸಿ ತಿರುಗೇಟು ನೀಡಬೇಕಿತ್ತು. ಆದರೆ ಅಶೋಕ್‌ ಸರಿಯಾಗಿ ಹೇಳಿಕೆಯನ್ನು ಖಂಡಿಸಲಿಲ್ಲ.

    ಸ್ಪೀಕರ್ ಅವರು ಪಕ್ಷಪಾತಿ ಧೋರಣೆ ತಳೆದಿರುವ ಆರೋಪ ವಿಚಾರದಲ್ಲೂ ಶಾಸಕರಿಗೆ ಅಶೋಕ್ ಸಾಥ್‌ ಕೊಡಲಿಲ್ಲ. ಸ್ಪೀಕರ್ ಕಚೇರಿಗೆ ಘೇರಾವ್ ಹಾಕಲು ಕೆಲ ಶಾಸಕರು ಮುಂದಾದಾಗ ಅಶೋಕ್ ದ್ವಂದ್ವ ಮನಸ್ಸಿನಿಂದ ಸಹಕಾರ ನೀಡಿದ್ದರು. ಇದನ್ನೂ ಓದಿ: ಮಂತ್ರಿ ಮಾಡದ್ದಕ್ಕೆ ಸಿಟ್ಟು – ಪಕ್ಷಕ್ಕೆ ರಾಜೀನಾಮೆ ನೀಡಿದ ಶಿವಸೇನಾ ಶಾಸಕ

    ಬೆಳಿಗ್ಗೆ ಚರ್ಚೆ ಮಾಡಿ ಬಂದಿರುತ್ತೇವೆ. ಆದರೆ ಸದನ ನಡೆಯುವಾಗ ಬೇರೆಯೇ ಆಗಿರುತ್ತದೆ. ಆಡಳಿತ ಪಕ್ಷದ ಕೆಲವು ಸದಸ್ಯರು ಚರ್ಚೆ ಹಳಿ ತಪ್ಪಿಸಲು ಪದೇ ಪದೇ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುವುದಿಲ್ಲ. ವಿರೋಧ ಪಕ್ಷದ ನಾಯಕರೆಂಬ ಬೆಲೆ ಕೊಡದೇ ವರ್ತಿಸುತ್ತಾರೆ.

    ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಮತ್ತು ಅಶೋಕ್ ಮಧ್ಯೆಯೂ ಸರಿಯಾದ ಸಮನ್ವಯತೆ ಸೃಷ್ಟಿಯಾಗುತ್ತಿಲ್ಲ. ಸದನದಲ್ಲಿ ಹಾಗೂ ಸದನದ ಹೊರಗೆ ಅಶೋಕ್ ಒಂದು ದಿಕ್ಕು, ವಿಜಯೇಂದ್ರ ಇನ್ನೊಂದು ದಿಕ್ಕು ಎಂಬಂತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

     

  • ಜಯಮೃತ್ಯುಂಜಯ ಸ್ವಾಮೀಜಿ ಮುಗಿಸಲು ಪೊಲೀಸರ ಸಂಚು: ರೇಣುಕಾಚಾರ್ಯ ಬಾಂಬ್

    ಜಯಮೃತ್ಯುಂಜಯ ಸ್ವಾಮೀಜಿ ಮುಗಿಸಲು ಪೊಲೀಸರ ಸಂಚು: ರೇಣುಕಾಚಾರ್ಯ ಬಾಂಬ್

    ದಾವಣಗೆರೆ: ಬೆಳಗಾವಿಯಲ್ಲಿ (Belagavi) ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟಗಾರರ ಮೇಲೆ ಗೋಲಿ ಬಾರ್ ಮಾಡಲು ಸಂಚು ಮಾಡಲಾಗಿತ್ತು. ಈ ಮೂಲಕ ಹೋರಾಟ ನಿಲ್ಲಿಸಲು ಜಯಮೃತ್ಯುಂಜಯ ಸ್ವಾಮೀಜಿಗಳನ್ನು (JayaMrityunjaya Swamiji ) ಮುಗಿಸಲು ಪ್ಲ್ಯಾನ್ ನಡೆದಿತ್ತು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P.Renukacharya) ಆರೋಪಿಸಿದ್ದಾರೆ.

    ದಾವಣಗೆರೆಯಲ್ಲಿ (Davanagere) ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು. ಸ್ವಾಮೀಜಿ ಮುಗಿಸಿದ್ರೆ ಹೋರಾಟ ನಿಲ್ಲುತ್ತೆ ಎಂದು ಗೋಲಿ ಬಾರ್ ಮಾಡಲು ಪ್ಲ್ಯಾನ್ ನಡೆದಿತ್ತು ಎಂದು ಬಾಂಬ್ ಸಿಡಿಸಿದ್ದಾರೆ.

    ಚನ್ನಮ್ಮ ವಂಶಸ್ಥರ ಮೇಲೆ ನಡೆದ ಲಾಠಿ ಚಾರ್ಜ್‍ನ್ನು ಖಂಡಿಸಬೇಕು. ಇಲ್ಲವಾದರೆ ನಮಗೂ ಕೂಡ ಉಳಿಗಾಲವಿಲ್ಲದಂತಾಗುತ್ತದೆ. ನಾವು ಪಂಚಮಸಾಲಿ ಸಮುದಾಯದ ಜೊತೆ ಗಟ್ಟಿಯಾಗಿದ್ದೇವೆ. ಸಮುದಾಯದವರ ಮೇಲಿನ ದಾಳಿಯನ್ನು ಎಲ್ಲಾ ಮಠಾಧೀಶರು ಖಂಡಿಸಬೇಕು. ಮೀಸಲಾತಿ ಅವರ ಹಕ್ಕು, ಅದನ್ನು ಅವರು ಕೇಳುತಿದ್ದಾರೆ ಎಂದಿದ್ದಾರೆ.

    ಲಾಠಿ ಚಾರ್ಜ್ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹಗುರವಾಗಿ ಮಾತನಾಡಿದ್ದಾರೆ. ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಲಾಠಿ ಚಾರ್ಜ್ ಮಾಡುವ ಬದಲು ಮುತ್ತು ಕೊಡಬೇಕಾ ಅಂತ ಕೇಳ್ತಾರೆ. ಮುತ್ತು ಕೊಡು ಎಂದು ಕೇಳಿದ್ದಾರಾ? ಹೋರಾಟಗಾರರು ಇರುವಲ್ಲಿಗೆ ಹೋಗಿ ಅವರ ಮನವಿಯನ್ನ ಕೇಳಬೇಕಿತ್ತು ಎಂದು ಕಿಡಿಕಾರಿದ್ದಾರೆ.

    ಆರ್‍ಎಸ್‍ಎಸ್‍ನವರು ಹೋರಾಟದಲ್ಲಿ ಕಲ್ಲು ತೂರಿದ್ದಾರೆ ಎಂಬ ಖಾಶಪ್ಪನವರ ಹೇಳಿಕೆ ವಿಚಾರವಾಗಿ, ಹೋರಾಟ ಹತ್ತಿಕ್ಕಲು ಅವರೇ ಕಲ್ಲು ತೂರಿರಬಹುದು. ಅಧಿಕಾರದ ಪಿತ್ತ ನೆತ್ತಿಗೇರಿ ಈ ರೀತಿ ಮಾತನಾಡುತಿದ್ದಾರೆ. ನಮ್ಮ ಸರ್ಕಾರ ಇರುವ ಸಮಯದಲ್ಲಿ ಒಂದು ಕೂಡ ಅಹಿತಕರ ಘಟನೆ ನಡೆಯಲಿಲ್ಲ. ನೀವು ಈ ರೀತಿ ಮಾತನಾಡೋದು ಸರಿಯಲ್ಲ. ಈ ಬಗ್ಗೆ ಕ್ಷೀಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಸಮುದಾಯ ಮೇಲೆ ವ್ಯಾಮೋಹ ಜಾಸ್ತಿ. ಕಾವಿ ಬಟ್ಟೆ ಹಾಕಿಕೊಂಡವರ ಮೇಲೆ ಅವರಿಗೆ ಅಷ್ಟ್ಯಾಕೆ ಸಿಟ್ಟು? ಎಂದು ಲಾಠಿ ಚಾರ್ಜ್ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • 2ಎ ಮೀಸಲಾತಿಗಾಗಿ ಪಂಚಮಸಾಲಿಗಳ ಒತ್ತಾಯ ಸಂವಿಧಾನ ವಿರೋಧಿ: ಸಿಎಂ

    2ಎ ಮೀಸಲಾತಿಗಾಗಿ ಪಂಚಮಸಾಲಿಗಳ ಒತ್ತಾಯ ಸಂವಿಧಾನ ವಿರೋಧಿ: ಸಿಎಂ

    ಬೆಳಗಾವಿ: 2ಎ ಮೀಸಲಾತಿಗಾಗಿ ಪಂಚಮಸಾಲಿ (Panchamasali Reservation) ಸಮುದಾಯದವರು ಒತ್ತಾಯ ಮಾಡುತ್ತಿರುವುದು ಸಂವಿಧಾನ ವಿರೋಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ. ಈ ಮೂಲಕ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ್ದಾರೆ.

    ವಿಧಾನ ಪರಿಷತ್ ಕಲಾಪದಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪವಾದ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಪ್ರಕರಣದ ಬಗ್ಗೆ ಉತ್ತರ ನೀಡುವ ವೇಳೆ ಸಿಎಂ ಸಿದ್ದರಾಮಯ್ಯ ಮೀಸಲಾತಿ ಸಂಬಂಧ ಉತ್ತರ ನೀಡಿದರು. ಈ ವೇಳೆ ಮಾತಾನಾಡಿದ ಸಿಎಂ, ಪಂಚಮಸಾಲಿ ಮೀಸಲಾತಿ ಸಾಧ್ಯವಿಲ್ಲ ಎಂದು ಸಂದೇಶ ಕೊಟ್ಟರು. ಇದನ್ನೂ ಓದಿ: 2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ, ಬೇರೆ ರಾಜ್ಯಗಳಿಂದ ನಮ್ಮದು ಕಡಿಮೆ: ಸಿದ್ದರಾಮಯ್ಯ

    ನಮ್ಮ ರಾಜ್ಯದಲ್ಲಿ 2002ರಲ್ಲಿ ಮೀಸಲಾತಿ ವಿಭಾಗ ಆಯಿತು. ಆಗ ಯಾಕೆ ಪಂಚಮಸಾಲಿ ಮೀಸಲಾತಿ ಬೇಕು ಎಂದು ಒತ್ತಾಯ ಹಾಕಲಿಲ್ಲ? 2021-22ರಲ್ಲಿ ಪಂಚಮಸಾಲಿಗಳಿಗೆ ಮೀಸಲಾತಿ ಬೇಕು ಎಂದು ಚಳುವಳಿ ಪ್ರಾರಂಭವಾಯಿತು. ಅಂದಿನ ಸರ್ಕಾರದಲ್ಲಿ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಈ ಹೋರಾಟ ಪ್ರಾರಂಭ ಮಾಡಿದ್ದು ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಮನವೊಲಿಸಲು ವಯನಾಡಿಗೆ ನೂರು ಮನೆ: ಈಶ್ವರಪ್ಪ ವ್ಯಂಗ್ಯ

    ಬೊಮ್ಮಾಯಿ ಸರ್ಕಾರ 2ಸಿ ಮತ್ತು 2ಡಿ ಎಂದು ಹೊಸ ಮೀಸಲಾತಿ ವ್ಯವಸ್ಥೆ ಜಾರಿ ಮಾಡಿ ಒಕ್ಕಲಿಗರಿಗೂ ಮತ್ತು ಲಿಂಗಾಯತರಿಗೂ ಮುಸ್ಲಿಮರ 4% ಮೀಸಲಾತಿ ಕಡಿತ ಮಾಡಿ ತಲಾ 2% ಮೀಸಲಾತಿ ಕೊಟ್ಟಿದ್ದರು. ಇದನ್ನ ವಿರೋಧಿಸಿ ರಾಘವೇಂದ್ರ ಎಂಬವರು ಕೋರ್ಟ್‌ನಲ್ಲಿ ಕೇಸ್ ಹಾಕಿದರು. ಆಗ ಬೊಮ್ಮಾಯಿ ಸರ್ಕಾರದಲ್ಲಿ ಅಧಿಕಾರಿಯಾಗಿದ್ದ ತುಳಿಸಿ ಮದ್ದನೇನಿ ನಾವು 2002ರಲ್ಲಿ ಆಗಿರುವ ಜಾತಿ ವಿಭಾಗಗಳ ಮೀಸಲಾತಿ ವಿಂಗಡನೆಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡೋದಿಲ್ಲ ಎಂದು ಅಫಿಡವಿಟ್ ಕೊಟ್ಟರು ಎಂದು ಸಿಎಂ ಅಫಿಡವಿಟ್ ಓದಿ ಹೇಳಿದರು. ಇದನ್ನೂ ಓದಿ: Ramanagara| ರೈಲಿಗೆ ತಲೆಕೊಟ್ಟು ಬಿ.ಇ ಪದವೀಧರ ಆತ್ಮಹತ್ಯೆ

    ಬೊಮ್ಮಾಯಿ ಸರ್ಕಾರ ಮಾಡಿದ 2ಸಿ ಮತ್ತು 2ಡಿ ಯಾವ ಸಂವಿಧಾನ ಎಂದು ಗೊತ್ತಿಲ್ಲ. ಮುಸ್ಲಿಮರ 4% ಮೀಸಲಾತಿ ತೆಗೆದು ಒಕ್ಕಲಿಗ ಮತ್ತು ಲಿಂಗಾಯತರಿಗೆ ನೀಡಿದರು. ಮುಸ್ಲಿಮರ 4% ಬೊಮ್ಮಾಯಿ ಸರ್ಕಾರ ರದ್ದು ಯಾಕೆ ಮಾಡಿದರು? ಬೊಮ್ಮಾಯಿ ಸರ್ಕಾರದ 2ಸಿ ಮತ್ತು 2ಡಿ ವರ್ಗ ಮೀಸಲಾತಿ ವಿರೋಧಿಸಿ ಗುಲಾಂ ರಸೂಲ್ ಸುಪ್ರೀಂಕೋರ್ಟ್‌ಗೆ ಹೋದರು. ಅಲ್ಲಿ ಬೊಮ್ಮಾಯಿ ಸರ್ಕಾರ ಮುಂದಿನ ಆದೇಶದವರೆಗೂ 2ಸಿ ಮತ್ತು 2ಡಿ ಮೀಸಲಾತಿ ಜಾರಿ ಮಾಡಲ್ಲ ಎಂದು ಅಫಿಡವಿಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಉಕ್ಕು ಕ್ಷೇತ್ರದಲ್ಲಿ ಹಸಿರು ಕ್ರಾಂತಿ – ಪ್ರಧಾನಿ ಮೋದಿ ಕನಸು ಅನಾವರಣಗೊಳಿಸಿದ ಹೆಚ್‌ಡಿಕೆ

    ಸಿಎಂ ಮಾತಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟಿದ್ದು ಸರಿಯಲ್ಲ. ಪಂಚಮಸಾಲಿಗಳಿಗೆ ಮೀಸಲಾತಿ ಕೊಡಿ ಎಂದು ಪಟ್ಟು ಹಿಡಿದರು. ಈ ವೇಳೆ ಸದನದಲ್ಲಿ ಗದ್ದಲ ಗಲಾಟೆ ಆಯಿತು. ಆಡಳಿತ-ವಿಪಕ್ಷಗಳ ನಡುವೆ ಪರಸ್ಪರ ಘೋಷಣೆಗಳು ಕೂಗಿದರು. ವಿಪಕ್ಷಗಳ ನಾಯಕರು ಸದನದ ಬಾವಿಗಳಿದು ಪ್ರತಿಭಟನೆ ಮಾಡಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಮೋದಿ ಸಂಪುಟ ಅನುಮೋದನೆ

  • ಪಂಚಮಸಾಲಿ ಹೋರಾಟಗಾರರ ಮೇಲೆ ಬ್ರಿಟಿಷರ ರೀತಿ ಲಾಠಿ ಚಾರ್ಜ್: ಜನಾರ್ದನ ರೆಡ್ಡಿ

    ಪಂಚಮಸಾಲಿ ಹೋರಾಟಗಾರರ ಮೇಲೆ ಬ್ರಿಟಿಷರ ರೀತಿ ಲಾಠಿ ಚಾರ್ಜ್: ಜನಾರ್ದನ ರೆಡ್ಡಿ

    – ಕೂಡಲೇ ಸಿಎಂ ಸಮಾಜದ ಕ್ಷಮೆ ಕೇಳಲಿ

    ಬಳ್ಳಾರಿ: ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟಗಾರರ ಮೇಲೆ ಸರ್ಕಾರ ಸೇಡಿನಿಂದ ಲಾಠಿ ಚಾರ್ಜ್ ಮಾಡಿಸಿ, ಹೋರಾಟಗಾರಿಗೆ ಹಿಂಸೆ ನೀಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಜನಾರ್ದನ ರೆಡ್ಡಿ (Janardhana Reddy) ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಬಳ್ಳಾರಿಯ ಜಿಲ್ಲಾ ಬಿಜೆಪಿ (BJP) ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬ್ರಿಟಿಷರ ಮಾದರಿಯಲ್ಲಿ ಭಯಾನಕವಾಗಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ. ವಯಸ್ಸು, ಹಿರಿಯರು, ಕಿರಿಯರು ಎನ್ನುವುದನ್ನು ನೋಡದೇ ಹೊಡೆದಿದ್ದಾರೆ ಎಂದು ದೂರಿದರು.

    ಬಸವ ಜಯ ಮೃತ್ಯಂಜಯ ಸ್ವಾಮೀಜಿ ಅವರನ್ನ ಬಂಧನದಲ್ಲಿಟ್ಟಿದ್ದಾರೆ. ಹೋರಾಟಕ್ಕೆ ಬೆಂಬಲ ನೀಡಿದ್ದ ಪ್ರತಿಪಕ್ಷದ ನಾಯಕರನ್ನೂ ಬಂಧನ ಮಾಡಿದ್ದಾರೆ. ಅಮಾಯಕ ಜನರನ್ನ ಅಟ್ಟಾಡಿಸಿ ಮನಬಂದಂತೆ ಹೊಡೆದಿದ್ದಾರೆ. ಎಡಿಜಿಪಿ ಅವರು ಓಡೋಡಿ ಬಂದು ಸದನದಲ್ಲಿ ಮುಖ್ಯಮಂತ್ರಿ ಭೇಟಿಯಾದ್ರು. ಐದು ನಿಮಿಷಗಳಲ್ಲಿ ಸಿಎಂ ಹೊರಗೆ ಹೋಗಿ ಎಡಿಜಿಪಿ ಜೊತೆ ಸಭೆ ಮಾಡಿದ್ರು. ಆಮೇಲೆ ಏನೆಲ್ಲಾ ಅನಾಹುತ ಆಗಬೇಕಿತ್ತೋ ಅದೆಲ್ಲಾ ಆಯ್ತು. ಬ್ರಿಟಿಷರಂತೆ ಕೆಟ್ಟ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ ಎಂದು ಸಿಟ್ಟು ಹೊರಹಾಕಿದರು.  ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್‌

     

    ಹೋರಾಟದ ಸ್ಥಳಕ್ಕೆ ಬಂದು ಸಿಎಂ ಭರವಸೆ ಕೊಡುವ ಕೆಲಸ ಮಾಡಬೇಕಿತ್ತು. 50 ಸಾವಿರಕ್ಕೂ ಹೆಚ್ಚು ಸಮುದಾಯದ ಜನ ಹೋರಾಟಕ್ಕೆ ಬಂದಿದ್ರು. ಹೋರಾಟದ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ಮಾಡಿರುವ ಸಿಎಂ ಸಿದ್ದರಾಮಯ್ಯ ಆಮೇಲೆ ಮಾಧ್ಯಮಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಕರೆದ್ರೂ ಬರಲಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಜಯ ಮೃತ್ಯಂಜಯ ಸ್ವಾಮೀಜಿ ಇಲ್ಲಿಯವರೆಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ರು. ಸಿಎಂ ಐದು ನಿಮಿಷ ಅಲ್ಲಿಗೆ ಹೋಗಿ ಮನವರಿಕೆ ಮಾಡಿಕೊಡಬೇಕಿತ್ತು. ಆದ್ರೆ ಅದೆಲ್ಲವನ್ನೂ ಬಿಟ್ಟು, ಯಾವುದೇ ನೆಪ ಹೇಳಿ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ: ಜಯ ಮೃತ್ಯುಂಜಯ ಸ್ವಾಮೀಜಿ

    ಇನ್ಮುಂದೆ ಹೋರಾಟಕ್ಕೆ ಮುಂದೆ ಬರಬಾರದು, ಹೋರಾಟ ಮಾಡಬಾರದು ಅನ್ನೋ ರೀತಿಯ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಕೈ, ಕಾಲು ಮುರಿದು, ರಕ್ತ ಬರುವ ರೀತಿ ಹೊಡೆದಿದ್ದಾರೆ. ಇಡೀ ಪಂಚಮಸಾಲಿ ಸಮಾಜಕ್ಕೆ ಮಾತ್ರ ಅಲ್ಲ, ಇಡೀ ಸಮಾಜಕ್ಕೆ ಕ್ಷಮೆ ಕೇಳುವ ಕೆಲಸ ಮಾಡಬೇಕಿದೆ. ಇದಕ್ಕೆ ಸಿಎಂ ಫುಲ್ ಸ್ಟಾಪ್ ಇಡಬೇಕಿದೆ. ಕೂಡಲೇ ಕ್ಷಮೆ ಕೇಳಿ, ಸ್ವಾಮೀಜಿಯವರನ್ನ ಭೇಟಿ ಮಾಡಿ, ಸಾಂತ್ವನ ಹೇಳಬೇಕಿದೆ. ಈ ರೀತಿ ಆಗೋದಿಲ್ಲ ಎಂದು ಭರವಸೆ ಕೊಡಬೇಕಿದೆ ಎಂದರು.

     

  • ನಾನು ಸಚಿವ ಸ್ಥಾನದ ಆಕಾಂಕ್ಷಿ : ಶಾಸಕ ರಾಜು ಕಾಗೆ

    ನಾನು ಸಚಿವ ಸ್ಥಾನದ ಆಕಾಂಕ್ಷಿ : ಶಾಸಕ ರಾಜು ಕಾಗೆ

     ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯಾದರೆ ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಕಾಗವಾಡ (Kagawad) ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜು ಕಾಗೆ(Raju Kage) ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಶಿರೂರ ಗ್ರಾಮದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಯಾವುದೇ ಖಾತೆ ಕೊಟ್ಟರೂ ಸೂಕ್ತವಾಗಿ ನಿಭಾಯಿಸುವೆ ಎಂದರು.

     

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ (Panchamasali Reservation) ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಎಲ್ಲ ಪಂಚಮಸಾಲಿ ಸಮುದಾಯದ ಶಾಸಕರು, ಸಚಿವರು ಮುಖ್ಯಮಂತ್ರಿಗಳನ್ನು ಭೇಟಿ ಆಗಲಿದ್ದೇವೆ. ಅಧಿವೇಶನದ ಸಮಯದಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಆಗುತ್ತೇವೆ. ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾಯಕರುಗಳು ಚರ್ಚಿಸಿ ಒಂದು ಹಂತಕ್ಕೆ ಬರುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಧು ಬಂಗಾರಪ್ಪ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದವನ ವಿರುದ್ಧ ಸುಮೊಟೋ ಕೇಸ್

    ಲಕ್ಷ್ಮಣ ಸವದಿ (Laxman Savadi) ಸಹ ಹಿರಿಯರಿದ್ದಾರೆ. ಈ ಹಿಂದೆ ಡಿಸಿಎಂ ಸ್ಥಾನವನ್ನು ನಿಭಾಯಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ನನಗೂ ಸಂತೋಷವಿದೆ. ಹಾಸನದಲ್ಲಿ ಸಿದ್ರಾಮೋತ್ಸವ ಮಾದರಿಯಲ್ಲಿ ಕಾರ್ಯಕ್ರಮಕ್ಕೆ ಆಯೋಜನೆ ವಿಚಾರ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

     

  • ಮತ್ತೆ ಮುಂದುವರೆಯಲಿದೆ ಪಂಚಮಸಾಲಿ ಮೀಸಲಾತಿ ಹೋರಾಟ: ಜಯ ಮೃತ್ಯುಂಜಯ ಸ್ವಾಮೀಜಿ

    ಮತ್ತೆ ಮುಂದುವರೆಯಲಿದೆ ಪಂಚಮಸಾಲಿ ಮೀಸಲಾತಿ ಹೋರಾಟ: ಜಯ ಮೃತ್ಯುಂಜಯ ಸ್ವಾಮೀಜಿ

    ಬಾಗಲಕೋಟೆ: ಮತ್ತೆ ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟ ಮಾಡಲು ಮುಂದಾಗುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಹೇಳಿದ್ದಾರೆ.

    ನಾಗರ ಪಂಚಮಿ (Nagara Panchami) ಸಂಬಂಧ ಬಾಗಲಕೋಟೆಯ ಬಾಲಮಂದಿರದ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದ ಅವರು, ಈ ಬಾರಿ ಲಿಂಗಪೂಜೆ ಮೂಲಕ ಮೀಸಲಾತಿ ಚಳುವಳಿ ಮಾಡುತ್ತೇವೆ. ಶ್ರಾವಣ ಮಾಸದ ವೇಳೆ ನಾವು ಇಷ್ಟಲಿಂಗ ಪೂಜೆ ಮಾಡುತ್ತೇವೆ. ಈಗ ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ, ಜೊತೆಗೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಟೆಂಟ್ ನಡೆಸ್ತಿದ್ದವರು ಇಂದು 1,450 ಕೋಟಿ ಒಡೆಯರು, ಅನಧಿಕೃತ ಎಷ್ಟಿದೆಯೋ? – ಡಿಕೆ ಬ್ರದರ್ಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಕಳೆದ ಬಾರಿ ಮೀಸಲಾತಿ ಹೋರಾಟ ಒಂದು ಹಂತಕ್ಕೆ ತಲುಪಿತ್ತು. ಆದ್ರೆ ಸರ್ಕಾರ ಬಹಳ ತಡ ಮಾಡಿ ನಮಗೆ 2ಡಿ ಕೊಟ್ಟಿತು, ಆದ್ರೆ ನಾವು 2ಎ ಕೇಳಿದ್ದೆವು. 2ಡಿ ಸಹ ಇನ್ನೂ ಜಾರಿಗೆ ಬಂದಿಲ್ಲ. ಆ ಕಾರಣಕ್ಕಾಗಿ ಸಚಿವೆ ಹೆಬ್ಬಾಳ್ಕರ್‌, ಶಾಸಕರಾದ ಕಾಶಪ್ಪನವರ್‌, ವಿನಯ್ ಕುಲಕರ್ಣಿ ಜೊತೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ. ತಮ್ಮ ಅವಧಿಯಲ್ಲಿ ಸಮಾಜಕ್ಕೆ ನ್ಯಾಯ ಸಿಗಲಿ ಎಂದು ಮನವಿ ಮಾಡಿಕೊಂಡಿದ್ದೇವೆ ಎಂದರು.

    ಸಿಎಂ ಸಿದ್ದರಾಮಯ್ಯ (CM Siddaramaiah) ಬಜೆಟ್ ಅಧಿವೇಶನ ಬಳಿಕ ಚರ್ಚೆ ಮಾಡಿ, ಮೀಸಲಾತಿಯ ಗೊಂದಲ ಪರಿಹರಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಅಧಿವೇಶನ ಮುಗಿದು ಒಂದು ತಿಂಗಳಾಯಿತು. ಅದಕ್ಕಾಗಿ ಸರ್ಕಾರಕ್ಕೆ ಈ ಬಾರಿ ಒತ್ತಡ ಹಾಕುತ್ತೇವೆ. ಆದಷ್ಟು ಬೇಗ ಕಾನೂನು ತಜ್ಞರನ್ನ ಕರೆದು, ಗೊಂದಲ ನಿವಾರಿಸಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

    ಈಗಾಗಲೇ ಹೋರಾಟದ ಬಗ್ಗೆ ವಿಜಯಪುರ, ಕೂಡಲಸಂಗಮ, ಬೆಳಗಾವಿಯಲ್ಲಿ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಮುಂದೆ ರಾಜ್ಯ ಕಾರ್ಯಕಾರಿಣಿ ಸಭೆ ಕರೆದು ಹೋರಾಟದ ರೂಪುರೇಷೆ ಚರ್ಚಿಸಲಿದ್ದೇವೆ. ಜನರು ಮತ್ತೆ ಮೀಸಲಾತಿ ಹೋರಾಟ ಶುರು‌ ಮಾಡಿ ಎಂದು ಹೇಳುತ್ತಿದ್ದಾರೆ. ಜನರ ಭಾವನೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

    ಈ ಕಾರಣಕ್ಕೆ ರಾಜ್ಯ ಕಾರ್ಯಕಾರಿಣಿ ಸಭೆ ಕರೆದು, ಎಲ್ಲಿಂದ ಹೋರಾಟ ಶುರು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ. 2ಎಗೆ ಪಂಚಮಸಾಲಿ ಸಮಾಜ ಸೇರಬೇಕು ಎನ್ನುವುದು ನಮ್ಮ ಮುಖ್ಯ ಹೋರಾಟ. ಆದರೆ ಈ ವಿಷಯಕ್ಕೆ ಹೈಕೋರ್ಟ್‌ನಲ್ಲಿ ಸ್ಟೇ ಇದೆ. ನಮ್ಮ ಹೋರಾಟಕ್ಕೆ ಮಣಿದು 2ಡಿ ಕೊಟ್ಟಿದ್ದಾರೆ. ಈಗ ಅದು ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಕೋರ್ಟ್‌ ಅಡೆತಡೆ ನಿವಾರಿಸಿ ರಾಜ್ಯ ಸರ್ಕಾರ ಯಾವ ರೀತಿ ನ್ಯಾಯ ಕೊಡುತ್ತದೆ ಎನ್ನುವುದು ಅವರಿಗೆ ಬಿಟ್ಟ ವಿಚಾರ. ಇನ್ನೆರಡು ದಿನಗಳಲ್ಲಿ ಸಮಾಜ ಮುಖಂಡರ ಸಭೆ ಕರೆದು ಹೋರಾಟದ ಬಗ್ಗೆ ಚರ್ಚಿಸಿ, ನಿರ್ಧರಿಸುತ್ತೇವೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ವಾಮೀಜಿ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಆಚರಿಸುತ್ತೇವೆ – ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಆಚರಿಸುತ್ತೇವೆ – ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ (Panchamasali) ಮೀಸಲಾತಿ (Reservation) ಸಂಬಂಧ ಜ.12ರ ಒಳಗೆ ಗೆಜೆಟ್‌ ಅಥವಾ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟ ನಡೆಸುತ್ತೇವೆ. ಸಿಎಂ ಮನೆ ಮುಂದೆಯೇ ಸಂಕ್ರಾಂತಿ ಆಚರಿಸಿ ಪ್ರತಿಭಟಿಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ (BasavajayaMrutyunjayaSwamiji) ಎಚ್ಚರಿಕೆ ನೀಡಿದ್ದಾರೆ.

    ಹಾವೇರಿಯಲ್ಲಿ (Haveri) ಮಾತನಾಡಿದ ಅವರು, 2D ಮತ್ತು 2Cಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದೇವೆ ಎಂದು ಸರ್ಕಾರ ಹೇಳಿತು. ಆಗ ಜನರಿಗೆ ನಾವೇನು ಉತ್ತರ ಕೊಡಬೇಕು ಎಂದು ಸುಮ್ಮನೆ ಕುಳಿತೆವು. ನಾವು ಕಾನೂನು ತಜ್ಞರನ್ನು ಕರೆದು ಚರ್ಚಿಸಿದೆವು. 110ಕ್ಕೂ ಹೆಚ್ಚು ವಕೀಲರನ್ನು ಸೇರಿಸಿ ಚರ್ಚಿಸಿದೆವು. ನಮ್ಮ ಕಾನೂನು ತಜ್ಞರು ಇದನ್ನು ತಿರಸ್ಕರಿಸಲು ಹೇಳಿದ್ದಾರೆ. ಜ.12ರ ಒಳಗಾಗಿ ಗೆಜೆಟ್ ಅಥವಾ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟ ಶುರುವಾಗುತ್ತದೆ. 13 ರಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಳ ಮೀಸಲಾತಿ ಚರ್ಚೆ ಬಳಿಕ ಸರ್ಕಾರದ ನಿರ್ಧಾರ ಪ್ರಕಟ: ಮಾಧುಸ್ವಾಮಿ

    ಡಿ.22 ರಂದು ಸಿಎಂ ನಮ್ಮ ಸಮಾಜದ ವಿರಾಟ ರೂಪದ ಪ್ರತಿಭಟನೆ ನೋಡಿ ಹೋರಾಟ ಶಾಂತಗೊಳಿಸಿದರು. ಆವತ್ತು ಬೆಳಗ್ಗೆ ಆಯೋಗದ ವರದಿ ಪಡೆದುಕೊಂಡರು. ಮಧ್ಯಾಹ್ನ ಕ್ಯಾಬಿನೆಟ್ ಸಭೆಯಲ್ಲಿ ಘೋಷಣೆ ಮಾಡುತ್ತಾರೆ ಎಂದು ಕಾದಿದ್ದೆವು. ಕೊಟ್ಟರೆ ಅಭಿನಂದನೆ, ಕೊಡದಿದ್ದರೆ ಮಹಾಮುತ್ತಿಗೆಗೆ ಸಿದ್ಧತೆ ಮಾಡಿಕೊಂಡು ಬಂದಿದ್ದೆವು. ನಮ್ಮ ಎಲ್ಲ ನಾಯಕರನ್ನು ಕರೆದು ಒಂದೆರಡು ಗಂಟೆಗಳ ಕಾಲ ಚರ್ಚಿಸಿದರು. ನಮ್ಮ ಸಮಾಜಕ್ಕೆ ಸಿಹಿ ಸುದ್ದಿ ಕೊಡುತ್ತಾರೆ ಎಂದು ಕಾದಿದ್ದೆವು. ಸಿಎಂ ಸನ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು ಎಂದು ಮಾತನಾಡಿದ್ದಾರೆ.

    ಸಿಎಂ ಕೊನೆಯ ಅಸ್ತ್ರವಾಗಿ ತಾಯಿಯ ಮೇಲೆ ಆಣೆ ಮಾಡಿ ಮಾತು ಕೊಟ್ಟರು. ತಾಯಿ ಅಂದರೆ ನಮಗೆ ದೇವರ ಸಮಾನ. ತಾಯಿಯ ಮೇಲೆ ಆಣೆ ಮಾಡಿದ್ದಕ್ಕೆ ಅವರ ಮೇಲೆ ಭರವಸೆ ಇಟ್ಟು ಕಾಯ್ತೀವಿ ಎಂದು ಹೊರಬಂದೆವು‌. ಒಂದು ವಾರ ಕಾಯೋಣ ಎಂದು ಕಾದೆವು. ಹೋರಾಟಕ್ಕೆ ಬಂದ ಜನರ ಮನಸ್ಸಿಗೆ ಭಾರವಾದರೂ ನಮ್ಮ ಮನವಿಗೆ ವಾಪಸ್ ಮನೆಗಳಿಗೆ ತೆರಳಿದರು. ಸಚಿವ ಸಂಪುಟದ ಅಸ್ಪಷ್ಟ ನಿಲುವು ಬಂದು ಗೊಂದಲವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾಲದಲ್ಲೇ ಸ್ಯಾಂಟ್ರೋ ರವಿ ಜೈಲಿನಿಂದ ಹೊರಬಂದಿದ್ದಾನೆ: ಬೊಮ್ಮಾಯಿ

    ಚೆನ್ನಮ್ಮ ಮೂರ್ತಿಯಿಂದ ಸಿಎಂ ಮನೆಯವರೆಗೆ ಹೋರಾಟ ಮಾಡುತ್ತೇವೆ. ಸಿಎಂ ಅವರ ಜೊತೆಗಿನ ಚರ್ಚೆ, ಮಾತು ಕೊಟ್ಟು ತಪ್ಪಿರುವ ಬಗ್ಗೆಯೂ ಚರ್ಚೆ ಆಗಲಿದೆ. ಹೋರಾಟಕ್ಕೆ ನ್ಯಾಯ ಪಡೆದುಕೊಂಡು ಸಂಕ್ರಾಂತಿಯ (Sankranti) ಎಳ್ಳು-ಬೆಲ್ಲ ತಿನ್ನೋಣ. ಮೀಸಲಾತಿಯ ಆದೇಶ ಪ್ರತಿ ನಮ್ಮ ಕೈಗೆ ಸಿಗೋವರೆಗೂ ನಾವು ಹೋರಾಡುತ್ತೇವೆ. ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳಗಾವಿ ಅಧಿವೇಶನಕ್ಕೆ ತಟ್ಟಲಿದೆಯಾ ಪಂಚಮಸಾಲಿ ಹೋರಾಟದ ಬಿಸಿ?

    ಬೆಳಗಾವಿ ಅಧಿವೇಶನಕ್ಕೆ ತಟ್ಟಲಿದೆಯಾ ಪಂಚಮಸಾಲಿ ಹೋರಾಟದ ಬಿಸಿ?

    ಬೆಳಗಾವಿ: ತಾಲೂಕಿನ ಸುವರ್ಣಸೌಧ (Suvarna Soudha) ಹೊರವಲಯದಲ್ಲಿ ಡಿಸೆಂಬರ್ 22 ರಂದು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ (Panchamasali Reservation) ಆಗ್ರಹಿಸಿ ಅಂತಿಮ ಹಂತದ ಹೋರಾಟ ಹಿನ್ನೆಲೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಸ್ಥಳ ಪರಿಶೀಲನೆ ನಡೆಸಿದರು.

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ 19 ರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡುವಂತೆ ಮತ್ತೊಮ್ಮೆ ಆಗ್ರಹಿಸಿದ್ದಾರೆ. ಡಿಸೆಂಬರ್ 19 ರೊಳಗೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು ಮೀಸಲಾತಿ ಘೋಷಣೆ ಮಾಡಬೇಕು. ಒಂದು ವೇಳೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸದಿದ್ರೆ ಡಿಸೆಂಬರ್ 22 ರಂದು ವಿರಾಟ್ ಪಂಚಶಕ್ತಿ ಸಮಾವೇಶ ಮಾಡಲಾಗುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ. ಮೀಸಲಾತಿ ಘೋಷಿಸಿದ್ರೂ, ಘೋಷಿಸದಿದ್ದರೂ 25 ಲಕ್ಷ ಪಂಚಮಸಾಲಿ ಸಮುದಾಯದ ಜನರ ಸೇರಿಸಲು ಸಿದ್ಧತೆ ನಡೆಸಲಾಗಿದ್ದು, ಸುವರ್ಣಸೌಧ ಬಳಿ ನೂರು ಎಕರೆ ಸ್ಥಳದಲ್ಲಿ ಪಂಚಮಸಾಲಿ ಸಮಾವೇಶಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗಡಿ ವಿವಾದದ ನಡುವೆಯೂ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಭೇಟಿ

    ಮೀಸಲಾತಿ ನೀಡಿದರೆ ಡಿಸೆಂಬರ್ 22 ರಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಸನ್ಮಾನ ಮಾಡಲಾಗುವುದು. ಇಲ್ಲವಾದಲ್ಲಿ ಡಿಸೆಂಬರ್ 22 ರಂದು ಅಂತಿಮ ಹಂತದ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಡಿಸೆಂಬರ್ 19ರ ಸಂಜೆ ಸವದತ್ತಿಯಲ್ಲಿ ಪಂಚಮಸಾಲಿ ಸಮಾವೇಶ ನಡೆಯಲಿದ್ದು, ಅಂದೇ ಸವದತ್ತಿಯಿಂದ ಪಾದಯಾತ್ರೆ ಮೂಲಕ ಬೆಳಗಾವಿಯ ಸುವರ್ಣಸೌಧಕ್ಕೆ ಬರಲು ನಿರ್ಧರಿಸಿರುವುದಾಗಿ ಬಸವ ಜಯಮೃತ್ಯುಂಜಯ ಸ್ಚಾಮೀಜಿ ಹೇಳಿದರು. ಇದನ್ನೂ ಓದಿ: 5 ಮತ್ತು 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆ – ಶಿಕ್ಷಣ ಇಲಾಖೆ ಆದೇಶ

    ಡಿಸೆಂಬರ್ 19ರ ರಾತ್ರಿಯಿಂದ ಡಿಸೆಂಬರ್ 22ರ ಬೆಳಗ್ಗೆವರೆಗೆ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ಈ ಮೂಲಕ ಸುವರ್ಣಸೌಧಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಡಿಸೆಂಬರ್ 22ರಂದು 25 ಲಕ್ಷ ಜನರ ಸೇರಿಸಲು ತಯಾರಿ ನಡೆಸುತ್ತಿರುವುದಾಗಿ ಹೇಳಿದ ಅವರು, ಕಮಕಾರಟ್ಟಿ ಗ್ರಾಮದ ಬಳಿ 60 ಎಕರೆ ವಿಸ್ತೀರ್ಣದಲ್ಲಿರುವ ನಿರ್ಮಾಣ ಹಂತದ ರಾಘವೇಂದ್ರ ಬಡಾವಣೆಯಲ್ಲಿ ಸಮಾವೇಶಕ್ಕೆ ತಯಾರಿ ನಡೆಸಿದ್ದಾಗಿ ಮಾಹಿತಿ ನೀಡಿದ್ದಾರೆ. ವಿರಾಟ್ ಪಂಚಶಕ್ತಿ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕೋಶಾಧ್ಯಕ್ಷರಾಗಿ ಈರಣ್ಣ ಕಡಾಡಿ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರಿಗೆ ವಿವಿಧ ಜವಾಬ್ದಾರಿ ಹಂಚಿಕೆಗಳನ್ನು ಈಗಾಗಲೇ ನೀಡಲಾಗಿದೆ ಎಂದರು.

    Live Tv
    [brid partner=56869869 player=32851 video=960834 autoplay=true]