Tag: Panchamasali quota

  • ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್‌, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ

    ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್‌, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ

    ಬಾಗಲಕೋಟೆ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದಲ್ಲಿ (Panchamasali Lingayats’ Quota Demand) ಈಗ ಬಿರುಕು ಮೂಡಿದೆ. ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ವಿರುದ್ಧ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ (Vijayanand Kashappanavar) ಕಿಡಿಕಾರಿದ್ದಲ್ಲದೇ ಪ್ರತ್ಯೇಕ ಹೋರಾಟಕ್ಕೆ ತಯಾರಿ‌ ನಡೆಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಶ್ರೀ ಪಂಚಮಸಾಲಿ ಜಗದ್ಗುರು ಮಹಾಪೀಠದ ಸಭಾಭವನದಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ‌ ಸಭೆ ಬಳಿಕ ಮಾತನಾಡಿದ ಅವರು, ಇಲ್ಲಿಯವರೆಗೆ ಹಿಂದುಳಿದ ಆಯೋಗದ ಸಂಪೂರ್ಣ ವರದಿ ಬಂದಿಲ್ಲ. ಸಂಪೂರ್ಣ ವರದಿ ಬಂದ ಬಳಿಕ 2ಎ ಮೀಸಲಾತಿ ಕುರಿತು ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddarmaiah) ನೀಡಿದರೂ ಕೂಡ ಸ್ವಾಮೀಜಿ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಸಿಸೇರಿಯನ್‌ ದುರಂತ: ಮೃತ ಮಹಿಳೆಯರ ಸಂಖ್ಯೆ ನಾಲ್ಕಕ್ಕೆ ಏರಿಕೆ

    ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದ ವೇಳೆ ಡಿ.10 ರಂದು ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಸ್ವಾಮೀಜಿ ಹಾಗೂ ಯತ್ನಾಳ್‌ ಅವರು ತಯಾರಿ‌ ನಡೆಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಹಾಗೂ ಸಮಾಜದ ಹಿರಿಯರ ಗಮನಕ್ಕೆ ತಂದಿಲ್ಲ. ತಾವೇ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ಸಭೆ ಮಾಡುತ್ತಿದ್ದಾರೆ. ಹೀಗಾಗಿ ಸ್ವಾಮೀಜಿಯವರ ನಡೆಯನ್ನು ಖಂಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಹೋರಾಟ ವಕ್ಫ್ ವಿರುದ್ಧ, ಯಾವುದೇ ಕುಟುಂಬದ ವಿರುದ್ಧವಲ್ಲ: ಯತ್ನಾಳ್

    2ಎ ಮೀಸಲಾತಿ ಹೋರಾಟ ಪಕ್ಷಾತೀತವಾಗಿ ಇರಬೇಕು. ಆದರೆ ಇವರ ಹೋರಾಟ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್‌ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯದ‌ ಪಂಚಮಸಾಲಿ ಸಮಾಜ ನನ್ನ ಬೆನ್ನ ಹಿಂದಿದೆ ಎಂದು ಹೇಳುತ್ತಿದ್ದಾರೆ. ತಾಕತ್ತು ದಮ್ಮು ಇದ್ದರೆ ಸಮಾಜದ ಹೆಸರನ್ನು ಬಳಸದೇ ವೈಯಕ್ತಿಕ ವರ್ಚಸ್ಸಿನ ಮೇಲೆ ಹೋರಾಟ ಮಾಡಲಿ ಎಂದು ಸವಾಲ್ ಎಸೆದರು.

     

    ಈ ಹಿಂದೆ ಯತ್ನಾಳ್‌ ಅವರು ನಮ್ಮ ದಿಕ್ಕು ತಪ್ಪಿಸಿ ಬೆಂಗಳೂರಿನವರೆಗೆ ಪ್ರಜ್ಞಾರಹಿತವಾಗಿ ಪಾದಯಾತ್ರೆ ಮಾಡಿದರು. ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಪಕ್ಷಾತೀತವಾಗಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಕರೆದು 2ಎ ಮೀಸಲಾತಿ ಹೋರಾಟ ಮುಂದುವರೆಸುತ್ತೇವೆ. ಆದರೆ ಈ ಸಭೆಗೆ ಸ್ವಾಮೀಜಿ ಹಾಗೂ ಯತ್ನಾಳ್‌ ಅವರನ್ನು ಆಹ್ವಾನಿಸುವುದಿಲ್ಲ. ಮಾಜಿ‌ ಸಚಿವ ಮುರಗೇಶ್‌ ನಿರಾಣಿ ಅವರಿಗೆ ಆಹ್ವಾನವಿರುತ್ತದೆ ಎಂದು ಹೇಳಿದರು.

     

  • ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

    ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

    ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟ(Panchamasali Reservation) ವಿಚಾರದಲ್ಲಿ ಕಾಂಗ್ರೆಸ್(Congress) ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಣಿದು ಸರ್ಕಾರ ಒಪ್ಪಿಗೆ ಸೂಚಿಸಿದರೆ ಮುಂದೇನು ಮಾಡಬೇಕು ಎಂದು ಚಿಂತನೆ ನಡೆಸುತ್ತಿದೆ.

    ಎಸ್‍ಸಿ-ಎಸ್‍ಟಿ ಮೀಸಲು(SC- ST Reservation) ಅಸ್ತ್ರದ ಜೊತೆಗೆ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಬಳಕೆಗೆ ಕೈ ಪಾಳಯದ ಪ್ಲಾನ್ ಮಾಡಿಕೊಳ್ಳುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

     
    ಒಂದು ವೇಳೆ ಪಂಚಮಸಾಲಿ ಕೈ ತಪ್ಪಿದರೆ, ಒಳ ಮೀಸಲಾತಿ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಸದಾಶಿವ ಆಯೋಗದ ದಾಳ ಉರುಳಿಸಲು ಸದ್ದಿಲ್ಲದೆ ಸಿದ್ಧಮಾಡಿಕೊಳ್ಳುತ್ತಿದೆ. ಆ ಮೂಲಕ ದಲಿತಾಸ್ತ್ರದ ಮೂಲಕ ಬಿಜೆಪಿ ಸರ್ಕಾರವನ್ನು ಕಟ್ಟಿ ಹಾಕುವುದು ಕೈ ಪಾಳಯದ ಲೆಕ್ಕಾಚಾರ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

    ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

    ಬೆಳಗಾವಿ: ಎಸ್‍ಸಿ-ಎಸ್‍ಟಿ ಮೀಸಲಾತಿ ಹೆಚ್ಚಿಸಿದ ರಾಜ್ಯ ಸರ್ಕಾರಕ್ಕೆ ಈಗ ಪಂಚಮಸಾಲಿ(Panchamasali ) ಸಮುದಾಯದ 2ಎ ಮೀಸಲಾತಿ(Reservation) ಬೇಡಿಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇಷ್ಟು ದಿನ ಪದೇ ಪದೇ ಡೆಡ್‍ಲೈನ್ ನೀಡುತ್ತಿದ್ದ ಪಂಚಮಸಾಲಿ ಸಮುದಾಯ ಈಗ ಮೀಸಲಾತಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸಿದೆ.

    ಇಂದು ಬೆಳಗಾವಿಯಲ್ಲಿ(Belagavi) ಬೃಹತ್‌ ಪಂಚಮಸಾಲಿ ಸಮಾವೇಶ ನಡೆಯಲಿದೆ. ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಸರ್ಕಾರಕ್ಕೆ ಸನ್ಮಾನ. ಇಲ್ಲದಿದ್ದರೆ ಅಪಮಾನ ಮಾಡುವುದು ಖಚಿತ. ಶಕ್ತಿ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಸಮುದಾಯದ ನಾಯಕರು ಗುಡುಗಿದ್ದಾರೆ.

    ಕ್ಯಾಬಿನೆಟ್‌ ಸಭೆ
    ಪಂಚಮಸಾಲಿ ಮೀಸಲಾತಿ ಹೋರಾಟ ಸಂಬಂಧ ಎಲ್ಲರ ಚಿತ್ತ ಸರ್ಕಾರದ ತೀರ್ಮಾನದತ್ತ ಇದೆ. ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ(Cabinet) ನಡೆಯಲಿದೆ. ಮೀಸಲಾತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುತ್ತಾರಾ ಅಥವಾ ಮೀಸಲಾತಿ ಬಿಕ್ಕಟ್ಟಿಗೆ ಪರಿಹಾರ ಸೂತ್ರ ಸಿದ್ಧಪಡಿಸಲು ಸಂಪುಟ ಸಭೆ ವೇದಿಕೆಯಾಗುತ್ತಾ ನೋಡಬೇಕಿದೆ. ಇದನ್ನೂ ಓದಿ: ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ – ಸಿಎಂಗೆ ಅಶ್ವಥ್ ನಾರಾಯಣ ಪತ್ರ

    ಪ್ರತಿಭಟನೆ ಮಾಡುತ್ತಿರುವ ಪಂಚಮಸಾಲಿಗಳಿಗೆ ಯಾವ ಭರವಸೆ ನೀಡುತ್ತದೆ ಎನ್ನುವುದರ ಬಗ್ಗೆ ಹೆಚ್ಚಿದ ಕುತೂಹಲ ಮೂಡಿಸಿದೆ. ಸರಕಾರದ ಬಳಿ ಎರಡು ಪ್ರಮುಖ ಪರಿಹಾರ ಸೂತ್ರವಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಬರುವವರೆಗೆ ಕಾಯಬೇಕು. ಇಲ್ಲವೇ ಪ್ರಸ್ತುತ ಮೀಸಲಾತಿ ಪ್ರಮಾಣದ ಏರಿಕೆಗೆ ತಿರ್ಮಾನ ಮಾಡಿ 2ಎಗೆ ಶಿಫಾರಸ್ಸು ಮಾಡಬೇಕು. ಯಾಕಂದರೆ ಇನ್ನೂ 12 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಅಧ್ಯಯನ ಬಾಕಿಯಿದೆ. ಸರ್ಕಾರದ ನಿರ್ಧಾರ ಏನು ಎನ್ನುವುದೇ ಸದ್ಯದ ಕುತೂಹಲ.

    ಪಂಚಮಸಾಲಿಗಳ ಬೇಡಿಕೆ ಏನು?
    ಸದ್ಯ ಪ್ರವರ್ಗ 3ಬಿಯಲ್ಲಿರುವ ಪಂಚಮಸಾಲಿ ಸಮುದಾಯ ಶೇ.5 ಮೀಸಲಾತಿ ಇದೆ. ಪ್ರವರ್ಗ 2ಎಗೆ ಸೇರ್ಪಡೆ ಆದರೆ ಶೇ.15 ಮೀಸಲಾತಿ ಅನುಕೂಲ ಸಿಗಲಿದೆ. ಜನಸಂಖ್ಯೆ ಹೆಚ್ಚಳ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಆಧರಿಸಿ ಮೀಸಲಾತಿಗೆ ಒತ್ತಾಯ ಮಾಡುತ್ತಿದೆ.

    ವಸ್ತುಸ್ಥಿತಿ ಏನಿದೆ?
    ಪಂಚಮಸಾಲಿ ಸಮುದಾಯದ 2ಎ ಸೇರ್ಪಡೆ ಬೇಡಿಕೆ ಬಗ್ಗೆ ಪರಾಮರ್ಶೆ ಸಂಬಂಧ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸರ್ಕಾರ ವರದಿ ಕೇಳಿದೆ. ಆಯೋಗದ ವರದಿ ಪೂರ್ತಿ ಆಗಲು ಇನ್ನೂ ಕನಿಷ್ಠ 2 ತಿಂಗಳು ಬೇಕಿದೆ. ಸದ್ಯಕ್ಕೆ ಸರ್ಕಾರ ಆಯೋಗದಿಂದ ಮಧ್ಯಂತರ ವರದಿ ಕೇಳಿದೆ.

     

    ಪ್ರಭಾವ ಎಷ್ಟಿದೆ?
    ಒಂಥರಾ ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿ ಸರ್ಕಾರವಿದೆ. ಯಾಕೆಂದರೆ ಪಂಚಮಸಾಲಿ ಲಿಂಗಾಯತ ಅತ್ಯಂತ ಪ್ರಬಲ ಸಮುದಾಯ. ಈ ಸಮುದಾಯಕ್ಕೆ ಮೀಸಲಾತಿ ಕೊಡದೇ ಹೋದರೆ ಎದುರಾಗುವ ಸಂಕಷ್ಟದ ಬಗ್ಗೆಯೂ ಸರ್ಕಾರಕ್ಕೆ ಅರಿವಿದೆ. ಒಂದು ವೇಳೆ ಮತ್ತೆ ಕಣ್ಣೊರೆಸುವ ತಂತ್ರ ಮಾಡಿದರೆ ಚುನಾವಣಾ ನಷ್ಟದ ಭೀತಿ ಎದುರಾಗುವ ಆತಂಕವಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪಂಚಮಸಾಲಿ ಪ್ರಾಬಲ್ಯವೇ ಇದೆ.

    ಅಂದಾಜು 70 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಂಚಮಸಾಲಿ ಸಮುದಾಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಬಲ್ಯ ಹೊಂದಿದೆ. 50ಕ್ಕೂ ಹೆಚ್ಚು ಮತ ಕ್ಷೇತ್ರಗಳಲ್ಲಿ ವರ್ಚಸ್ಸು ಹೊಂದಿದ್ದು 11 ಜಿಲ್ಲೆಗಳ ಬಹಳಷ್ಟು ಕ್ಷೇತ್ರಗಳಲ್ಲಿ ಪಂಚಮಸಾಲಿ ಮತ ನಿರ್ಣಾಯಕವಾಗಿದೆ.

    ಎಲ್ಲಿ ಪ್ರಾಬಲ್ಯ?
    ಬಾಗಲಕೋಟೆ, ಧಾರವಾಡ, ಬೆಳಗಾವಿ, ಹಾವೇರಿ, ಗದಗ, ವಿಜಯಪುರ, ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಬೀದರ್, ಕಲಬುರಗಿ.