Tag: Panchamasali Protest

  • ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ – ನ್ಯಾಯಾಂಗ ತನಿಖೆಗೆ ಹೈಕೋರ್ಟ್‌ ಆದೇಶ

    ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ – ನ್ಯಾಯಾಂಗ ತನಿಖೆಗೆ ಹೈಕೋರ್ಟ್‌ ಆದೇಶ

    ಧಾರವಾಡ: ಬೆಳಗಾವಿ ಅಧಿವೇಶನದ (Belagavi Session) ವೇಳೆ ಪಂಚಮಸಾಲಿ ಹೋರಾಟಗಾರರ (Panchamasali Protest) ಮೇಲೆ ನಡೆದಿದ್ದ ಲಾಠಿ ಚಾರ್ಜ್ ಪ್ರಕರಣವನ್ನು ಹೈಕೋರ್ಟ್‌ನ (High Court) ಧಾರವಾಡ ಪೀಠ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

    ಅಧಿವೇಶನದ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದಿದ್ದ ಲಾಠಿ ಪ್ರಹಾರ ಪ್ರಕರಣ ಕುರಿತು ತನಿಖೆಗೆ ಆದೇಶಿಸಲು ಕೋರಿ ಪಂಚಮಸಾಲಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಕಾಲ ಮಿತಿಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್‌

    ದುರುದ್ದೇಶಪೂರಿತವಾಗಿ ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ಹೋರಾಟಗಾರರ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದಿಸಿದ್ದರು. ಇನ್ನೂ ಪ್ರತಿಭಟನಾಕಾರ ಮೇಲೆ ಲಾಠಿ ಚಾರ್ಜ್‌ ಮಾಡಿದ್ದನ್ನು ಖಂಡಿಸಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಲಾಠಿ ಬೀಸಿದ್ದ ಪೊಲೀಸರ ಅಮಾನತಿಗೆ ಪಂಚಮಸಾಲಿ ಸಮುದಾಯ ಆಗ್ರಹಿಸಿತ್ತು.

    ಕಳೆದ ಡಿಸೆಂಬರ್‌ 10 ರಂದು ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿಗೆ (2A Reservation) ಆಗ್ರಹಿಸಿ ಸುವರ್ಣ ಸೌಧ ಮುತ್ತಿಗೆ ಹಾಕಲು ಬಂದ ಪಂಚಮಸಾಲಿ ಹೋರಾಟಗಾರರನ್ನು ಪೊಲೀಸರು ದಾರಿಯಲ್ಲೇ ತಡೆದಿದ್ದರು. ಮುತ್ತಿಗೆ ಹಾಕಲು ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದರೂ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಈ ವೇಳೆ ತಳ್ಳಾಟ ನೂಕಾಟ ನಡೆದಿತ್ತು. ಈ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ಬಿದ್ದಿದೆ. ಮ್ಮ ಮೇಲೆಯೇ ಕಲ್ಲುತೂರಿದ್ದಕ್ಕೆ ಸಿಟ್ಟಾದ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಬೀಸಿದ್ದರು. ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ – ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ಸಂಸದರು ಕೆಂಡ

  • ಬಲಿಷ್ಠ ಸಮುದಾಯ 2ಎ ಮೀಸಲಾತಿ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ: ಲೇಖಕ ಕುಂ.ವೀರಭದ್ರಪ್ಪ ಕಿಡಿ

    ಬಲಿಷ್ಠ ಸಮುದಾಯ 2ಎ ಮೀಸಲಾತಿ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ: ಲೇಖಕ ಕುಂ.ವೀರಭದ್ರಪ್ಪ ಕಿಡಿ

    ರಾಯಚೂರು: ಯಾವುದೇ ಮೀಸಲಾತಿ ಸಂವಿಧಾನ ಪ್ರಕಾರ 50% ಮೀರುವ ಹಾಗಿಲ್ಲ. ಶೇ.97 ಜನ ಹಿಂದುಳಿದ ಮತ್ತು ಉತ್ಪಾದಕ ಸಮುದಾಯದವರು. ಇವರ ಮೀಸಲಾತಿಯನ್ನು ಬಲಿಷ್ಠ ಸಮುದಾಯ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ ಎಂದು ಲೇಖಕ ಕುಂ.ವೀರಭದ್ರಪ್ಪ (Kum. Veerabhadrappa) ಖಂಡಿಸಿದ್ದಾರೆ.

    ರಾಯಚೂರಿನಲ್ಲಿ (Raichuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ವಿಚಾರವಾಗಿ, ಆ ಸಮುದಾಯದಲ್ಲಿ ಲ್ಯಾಂಡ್ ಲಾರ್ಡ್ಸ್ ಇದ್ದಾರೆ, ಸಿಎಂ ಆಗಿದ್ದಾರೆ, ದೊಡ್ಡ ಪದವಿ ಅನುಭವಿಸಿದ್ದಾರೆ. ಅದು ಬಹಳ ಮುಂದುವರೆದ ಸಮುದಾಯ. ಸ್ವಾಮೀಜಿ ಬಸವಣ್ಣಕಲ್ಯಾಣ, ಕೂಡಲಸಂಗಮ ಶ್ರೀ ಎಂದು ತಮ್ಮ ನಾಮವಾಚಕದಲ್ಲಿ ಬಳಸಬಾರದು. ಬಸವಣ್ಣ ಹಿಂದುಳಿದ ಸಮುದಾಯಗಳಿಗಾಗಿ ಶ್ರಮಿಸಿದ್ದಾರೆ, ಅವರನ್ನು ದುರುಪಯೋಗ ಮಾಡಿಕೊಳ್ಳಬಾರದು. ಮೀಸಲಾತಿ ಕೇಳಲು ಹಿಂಸೆಯನ್ನು ಪ್ರಚೋದಿಸಬಾರದು ಎಂದು ಜಯಮೃತ್ಯುಂಜಯ ಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ 3 ಸಾವಿರ ಹೊಸ ಅಂಗನವಾಡಿ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ- ಲಕ್ಷ್ಮಿ ಹೆಬ್ಬಾಳ್ಕರ್

    ಸ್ವಾಮೀಜಿಯೂ ಸಹ ರಾಜಕಾರಣಿಯ ಒಂದು ಮುಖ. ಅವರು ಪೂರ್ಣ ಪ್ರಮಾಣದ ಸ್ವಾಮೀಜಿ ಅಲ್ಲ. ಆ ಸಮುದಾಯದ ಚುಕ್ಕಾಣಿ ಹಿಡಿಯಲು, ಪ್ರಸಿದ್ಧಿಯಾಗಲಿಕ್ಕೆ ದುರುಪಯೋಗ ಮಾಡಿಕೊಳ್ಳಬಾರದು. ಪಂಚಮಸಾಲಿ ಸಮುದಾಯ ಅತ್ಯಂತ ನಿರುಪದ್ರವಿ ಸಮುದಾಯ. ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಜಯಮೃತ್ಯಂಜಯ ಸ್ವಾಮಿಗೆ ಕೂಡಲಸಂಗಮ ಹೆಸರು ಬಳಸಲು, ಬಸವಣ್ಣನ ಹೆಸರು ಹೇಳಲು ಹಕ್ಕಿಲ್ಲ. ತಮ್ಮ ಖುರ್ಚಿಗಾಗಿ ಅವಾಂತರಗಳನ್ನು ಸೃಷ್ಟಿಸಬಾರದು. ವಚನಾನಂದ ಸ್ವಾಮಿ ಸೇರಿ ಸಮುದಾಯದ ಎರಡು ಸ್ವಾಮಿಗಳ ತಿಕ್ಕಾಟ ನಡೆಯುತ್ತಿದೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿದೆ, ಇದು ಸರಿಯಲ್ಲ ಎಂದರು.

    ಇನ್ನೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಮಾತನಾಡಿ, ಬಸವಣ್ಣನವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ರಾಜಕಾರಣಿಯನ್ನು ಒಳಗೆ ಹಾಕಬೇಕು, ಚಳುವಳಿಯಿಂದ ದೂರ ಇಡಬೇಕು, ಲಿಂಗಾಯತ ಸಮುದಾಯದಿಂದ ಬಹಿಷ್ಕಾರ ಮಾಡಬೇಕು. ಯಾರೇ ಆಗಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಾರದು. ಅವರನ್ನು ಕ್ಷಮಿಸುವುದು ಸಮಾಜದ ದೊಡ್ಡ ದೌರ್ಬಲ್ಯ, ಲಿಂಗಾಯತ ಸಮುದಾಯ ಒಂದು ಜಾತಿಗೆ ಸೀಮಿತವಾದದ್ದಲ್ಲ. ಹಿಂದುಳಿದ ಸಮುದಾಯಗಳ ಒಕ್ಕೂಟ ಲಿಂಗಾಯತ. ಹಿಂದುಳಿದ ಸಮುದಾಯಗಳ ಒಕ್ಕೂಟದ ಸ್ವಾಯತ್ತತೆಯನ್ನ ಕಾಪಾಡುವ ಕೆಲಸವನ್ನ ಸ್ವಾಮಿಗಳು ರಾಜಕಾರಣಿಗಳು ಮಾಡಬೇಕು ಎಂದು ಕುಂ.ವೀರಭದ್ರಪ್ಪ ಹೇಳಿದರು.ಇದನ್ನೂ ಓದಿ: ಕೇರಳ ಮಾದರಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

  • ಬಿಜೆಪಿ ಸರ್ಕಾರ ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ – ಸಿದ್ದರಾಮಯ್ಯ

    ಬಿಜೆಪಿ ಸರ್ಕಾರ ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ – ಸಿದ್ದರಾಮಯ್ಯ

    – ಕಾನೂನು ಕೈಗೆ ತಗೊಂಡ್ರೆ ನಮ್ಮ ಸರ್ಕಾರ ಸುಮ್ಮನಿರಲ್ಲ ಎಂದ ಸಿಎಂ

    ವಿಜಯಪುರ: ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ, ಆದರೆ ಬಿಜೆಪಿಯವರು ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರತಿಭಟನೆಗೆ ಲಿಂಗಾಯ ಪಂಚಮಸಾಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ವಿಚಾರವಾಗಿ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ. ಬಿಜೆಪಿಯವರು (BJP) ಪಂಚಮಸಾಲಿಗರಿಗೆ ಟೋಪಿ ಹಾಕಿ ಹೋಗಿದೆ. ಇವರು 2ಎ ಕೇಳಿದ್ದರೆ, ಅವರು 2ಡಿ ಮಾಡಿದ್ದಾರೆ ಎಂದರು.ಇದನ್ನೂ ಓದಿ: ಬೆಂಗಳೂರು| ಗಂಡನನ್ನು ಬಿಟ್ಟು ತನ್ನ ಜೊತೆ ಇರುವಂತೆ ಒತ್ತಾಯ – ಒಪ್ಪದಿದ್ದಕ್ಕೆ ವಿವಾಹಿತ ಮಹಿಳೆ ಕೊಂದು ಪ್ರಿಯಕರ ಆತ್ಮಹತ್ಯೆ

    ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ತಕರಾರು ಇಲ್ಲ. ಸಂವಿಧಾನ ಪರವಾಗಿ ಹೋರಾಟ ಇರಬೇಕು. ಹೈಕೋರ್ಟ್‌ಗೆ ಅಪಡೇಟ್ ಹಾಕಿದವರು ಯಾರು? ಇದೆಲ್ಲ ಮಾಡಿದ್ದು ಬಿಜೆಪಿ ಸರ್ಕಾರದವರು. ಇದೇ ಸ್ವಾಮೀಜಿಗಳು ಇದ್ದರಲ್ಲ, ರಸೂಲ್ ಎಂಬಾತ ಸುಪ್ರೀಂ ಕೋರ್ಟ್‌ಗೆ  ಹೋದರು. ಆಗಿನ ಅಡ್ವಕೇಟ್ ಜನರಲ್ ಇದರಲ್ಲಿ ಬದಲಾವಣೆ ಮಾಡಲ್ಲ ಎಂದಿದ್ದರು.

    ಟ್ರ್ಯಾಕ್ಟರ್‌ ತೆಗೆದುಕೊಂಡು ಹೋರಾಟ ಮಾಡುತ್ತೀವಿ ಎಂದರು. ಆಗ ಕೋರ್ಟ್ ಶಾಂತಿಯುತವಾಗಿ ಮಾಡುವುದಕ್ಕೆ ಹೇಳಿತ್ತು. ಆದರೂ ಕಾನೂನು ಕೈಗೆ ತೆಗೆದುಕೊಂಡರು. ನಾನು ಮೂರು ಜನ ಮಂತ್ರಿಗಳನ್ನು ಕಳಿಸಿದ್ದೆ. ಮಂತ್ರಿಗಳು ಕರೆದಾಗ ಅವರು ಸಿಎಂಗೆ ಮಾತಾಡಿಸುತ್ತೇವೆ ಎಂದರು. ಆದರೆ ನಾನು ಎಲ್ಲ ಕಡೆಗೂ ಹೋಗುವುದಕ್ಕೆ ಆಗುವುದಿಲ್ಲ. ಆದರೂ ನಾನು ಅವರನ್ನು ಮಾತನಾಡಿಸಲು ಕರೆದರೂ ಅವರು ಬರಲಿಲ್ಲ. ಆಗ ಸುವರ್ಣಸೌಧಕ್ಕೆ ನುಗ್ಗಲು ಯತ್ನ ಮಾಡಿದರು. ಕಲ್ಲು ತೂರಾಟ ಮಾಡಿದರು, ಪೊಲೀಸರಿಗೆ ಗಾಯಗೊಂಡಿದ್ದಾರೆ. ನಮ್ಮ ಬಳಿ ಪ್ರೂಫ್ ಇವೆ, ಫೋಟೋ ಬೇಕಾದರೂ ತೋರಿಸುತ್ತೇನೆ. ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಸುಮ್ಮನಿರಲ್ಲ. ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

    ಸಿಎಂ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ಸ್ವಾಮೀಜಿ ಆರೋಪ ವಿಚಾರವಾಗಿ ಮಾತನಾಡಿ, ಸ್ವಾಮೀಜಿ ಬಗ್ಗೆ ಮಾತನಾಡಲ್ಲ, ಸ್ವಾಮೀಜಿ ಮಾತನಾಡಿರುವುದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದರು.ಇದನ್ನೂ ಓದಿ: `ಒಂದು ದೇಶ ಒಂದು ಚುನಾವಣೆ’ – ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಬಿಜೆಪಿ ಪ್ಲ್ಯಾನ್‌ – ಡಿಕೆಶಿ

  • ಪ್ರತಿಭಟನೆಯಲ್ಲಿ ಭಾಗಿಯಾಗಿ ಸಮಾಜದ ಋಣ ತೀರಿಸಿ – ವಚನಾನಂದ ಶ್ರೀಗಳ ವಿರುದ್ಧ ಮಾಜಿ ಶಾಸಕ ಗರಂ

    ಪ್ರತಿಭಟನೆಯಲ್ಲಿ ಭಾಗಿಯಾಗಿ ಸಮಾಜದ ಋಣ ತೀರಿಸಿ – ವಚನಾನಂದ ಶ್ರೀಗಳ ವಿರುದ್ಧ ಮಾಜಿ ಶಾಸಕ ಗರಂ

    ದಾವಣಗೆರೆ: ವಚನಾನಂದ ಶ್ರೀಗಳು (Vachanananda Sri) ಪಂಚಮಸಾಲಿ ಸಮಾಜದಿಂದ ನಡೆಯುತ್ತಿರುವ ಮೀಸಲಾತಿ ಹೋರಾಟದಲ್ಲಿ (Panchamasali Protest) ಭಾಗಿಯಾಗಿ ಸಮಾಜದ ಋಣ ತೀರಿಸಬೇಕು ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಆಗ್ರಹಿಸಿದ್ದಾರೆ.

    ಬೆಳಗಾವಿಯಲ್ಲಿ (Belagavi) ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆದ ಹಿನ್ನಲೆ, ರಾಜ್ಯಾದ್ಯಂತ ಕೂಡಲಸಂಗಮ ಶ್ರೀಗಳು ಪ್ರತಿಭಟನೆಗೆ ಕರೆ ನೀಡಿದ್ದರು. ದಾವಣಗೆರೆಯಲ್ಲಿ ಈ ಪ್ರತಿಭಟನೆಯ ಮುಖಂಡತ್ವವನ್ನು ಶಿವಶಂಕರ್ ವಹಿಸಿದ್ದು, 500ಕ್ಕೂ ಹೆಚ್ಚು ಪ್ರತಿಭಟನಾಕಾರರು ರ್ಯಾಲಿಯಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕೂಡಲಸಂಗಮ ಶ್ರೀಗಳು ಮಠವನ್ನು ಬಿಟ್ಟು ಹೋರಾಟ ಮಾಡುತ್ತಿದ್ದಾರೆ. ಮೀಸಲಾತಿ ಸಿಗುವವರೆಗೂ ಮಠ ಸೇರುವುದಿಲ್ಲ ಎಂದು ಹೋರಾಟಕ್ಕೆ ಇಳಿದಿದ್ದಾರೆ. ಎಸಿ ರೂಮ್‍ನಲ್ಲಿ ಕುಳಿತು ಪ್ರತಿಭಟನೆ ಬಗ್ಗೆ ಮಾತನಾಡುವುದಲ್ಲ. ಸಮಾಜದ ಹೋರಾಟದಲ್ಲಿ ಭಾಗಿಯಾಗಿ ಸಮಾಜದ ಋಣ ತೀರಿಸಿ. ಬರಿ ಎಸಿ ರೂಮ್‍ನಲ್ಲಿ ಇರೋದಲ್ಲ ಎಂದು ವಚನಾನಂದ ಸ್ವಾಮೀಜಿಗಳ ವಿರುದ್ಧ ಅಕ್ರೋಶ ಹೊರ ಹಾಕಿದ್ದಾರೆ.

  • ರಾಜ್ಯಾದ್ಯಂತ ಪಂಚಮಸಾಲಿ ಹೋರಾಟದ ಕಿಚ್ಚು – ಅಥಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

    ರಾಜ್ಯಾದ್ಯಂತ ಪಂಚಮಸಾಲಿ ಹೋರಾಟದ ಕಿಚ್ಚು – ಅಥಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

    ಬೆಳಗಾವಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಲಾಠಿ ಚಾರ್ಜ್ ಖಂಡಿಸಿ ಅಥಣಿಯಲ್ಲಿ (Athani) ರಾಷ್ಟ್ರೀಯ ಹೆದ್ದಾರಿ (National Highway) ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಬೆಳಗಾವಿ ಅಧಿವೇಶನದಲ್ಲಿ (Belagavi Session) ಪಂಚಮಸಾಲಿ ಹೋರಾಟದ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ ಹಿನ್ನೆಲೆ ಇಂದು (ಡಿ.12) ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಯುತ್ತಿದೆ. ಪಂಚಮಸಾಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ ಬೆನ್ನಲ್ಲೇ ಪ್ರತಿಭಟನೆ ನಡೆಯುತ್ತಿದೆ.ಇದನ್ನೂ ಓದಿ: ಅಂತರ್ಜಾತಿ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ – ಜಾತಿನಿಂದನೆ ಕೇಸ್!

    2ಎ ಮೀಸಲಾತಿಗಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಾ ಸರ್ಕಾರದ ಗೂಂಡಾ ವರ್ತನೆಯನ್ನು ಖಂಡಿಸಿ ಹೋರಾಟಗಾರರು ಬೀದಿಗಿಳಿದಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಯಲ್ಲಿ ವಕೀಲರು ಸೇರಿದಂತೆ ಬಿಜೆಪಿ ಸಹ ಕಾರ್ಯಕರ್ತರು ಭಾಗಿಯಾಗಿದ್ದಾರೆ.

    ಇನ್ನೂ ಅಥಣಿ ತಾಲೂಕಿನ ಗುಂಡೆವಾಡಿ ಗ್ರಾಮದಲ್ಲಿ ಜತ್ತ -ಜಾಂಬೋಟಿ ರಾಜ್ಯ ಹೆದ್ದಾರಿ ತಡೆದು ಪಂಚಮಸಾಲಿ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ. ಲಾಠಿ ಚಾರ್ಜ್ ನಡೆಸಿದ್ದಕ್ಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಡೆಯನ್ನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

    ಚಿಕ್ಕೋಡಿಯಲ್ಲಿ ಮಾತ್ರವಲ್ಲ, ಧಾರವಾಡ, ಹಾವೇರಿ, ಬೆಳಗಾವಿ, ಕೊಪ್ಪಳ, ದಾವಣಗೆರೆ, ಬಾಗಲಕೋಟೆ, ಹುಬ್ಬಳ್ಳಿ, ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಪಂಚಮಸಾಲಿ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಇದಕ್ಕೆ ಕೈಜೋಡಿಸಿದ್ದಾರೆ.

    ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದೇಕೆ?
    ಇದೇ ಮಂಗಳವಾರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಂದ ಹೋರಾಟಗಾರರನ್ನು ಪೊಲೀಸರು ದಾರಿಯಲ್ಲೇ ತಡೆದಿದ್ದರು. ಮುತ್ತಿಗೆ ಹಾಕಲು ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದರೂ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಈ ವೇಳೆ ತಳ್ಳಾಟ ನೂಕಾಟ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ಬಿದ್ದಿದೆ. ಇದರಿಂದ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಬೀಸಿದ್ದರು. ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾ ನಿರತರು ದಿಕ್ಕಾಪಾಲಾಗಿ ಓಡಿದ್ದರು.ಇದನ್ನೂ ಓದಿ: ವಯನಾಡಿಗೆ 100 ಮನೆ – ರಾಜಕೀಯ ಗುಲಾಮಗಿರಿಯ ಸಂಕೇತ: ಸಿಎಂ ವಿರುದ್ಧ ಸಿ.ಟಿ.ರವಿ ಕಿಡಿ

  • 2ಎ ಮೀಸಲಾತಿ ಕಿಚ್ಚು – ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

    2ಎ ಮೀಸಲಾತಿ ಕಿಚ್ಚು – ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

    – ಲಾಠಿಚಾರ್ಜ್ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

    ಬೆಳಗಾವಿ: 2ಎ ಮೀಸಲಾತಿಗೆ ಆಗ್ರಹಿಸಿ ಉಗ್ರ ಹೋರಾಟದ ಮಾಡುವುದಾಗಿ ಕೂಡಲಸಂಗಮದ ಪಂಚಮಸಾಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mrutunjaya Swamiji) ಎಚ್ಚರಿಕೆ ನೀಡಿದ್ದಾರೆ.

    ಇಂದು (ಡಿ.12) ಬೆಳಗಾವಿ (Belagavi) ಅಧಿವೇಶನದ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣದ ಹಿನ್ನೆಲೆ ಉಗ್ರ ಹೋರಾಟ ಮಾಡುವುದಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮಾಜಕ್ಕೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ರಾಜ್ಯಾದ್ಯಂತ ಪಂಚಮಸಾಲಿ ಸಮಾಜದಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ. ಸದನದ ಒಳಗೂ ಹೊರಗೂ ಪಂಚಮಸಾಲಿ ಮೀಸಲಾತಿ ಹೋರಾಟ ಸದ್ದು ಮಾಡಲಿದ್ದು, ಜೊತೆಗೆ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಲಾಗಿದೆ.ಇದನ್ನೂ ಓದಿ: ಡ್ರೋನ್‌ ಪ್ರತಾಪ್‌ ಎಡವಟ್ಟು – ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್, ಸಾರ್ವಜನಿಕರು ನಿಗಿನಿಗಿ ಕೆಂಡ!

    ಬೆಳಗಾವಿ ಹಿರೇಬಾಗೇವಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆ 10:30ಕ್ಕೆ ಪ್ರತಿಭಟನೆ ನಡೆಯಲಿದ್ದು, ಪಂಚಮಸಾಲಿ ಸಮಾಜದವರು ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ಮನವಿ ಮೂಲಕ ಸಿಎಂ ಸಿದ್ದರಾಮಯ್ಯ, ಎಡಿಜಿಪಿ ಆರ.ಹಿತೇಂದ್ರ ಅವರನ್ನು ವಜಾ ಮಾಡಬೇಕು. ಮೀಸಲಾತಿ ಹೋರಾಟವನ್ನ ಸರ್ಕಾರ ಹತ್ತಿಕ್ಕಲು ಯತ್ನಿಸಿದೆ. ತಕ್ಷಣವೇ ಪಂಚಮಸಾಲಿ ಸಮಾಜಕ್ಕೆ ಕ್ಷಮೆ ಕೇಳಬೇಕು. ಇದು ಲಿಂಗಾಯತ ವಿರೋಧಿ ಸರ್ಕಾರ ಎಂದು ಪ್ರತಿಭಟನೆ ಮೂಲಕ ಆಗ್ರಹಿಸಲಿದ್ದಾರೆ.

    ಒಟ್ಟು 9 ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದ್ದು, 4 ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ. ಬೆಳಗಾವಿ ವಿಧಾನ ಸೌಧದ ಹೊರಗಿನ ಕೊಂಡಸಕೋಪ್ಪ, ಸುವರ್ಣ ಗಾರ್ಡನ್ ಬಳಿಯ ಟೆಂಟ್‌ನಲ್ಲಿ ಹೋರಾಟ ನಡೆಯಲಿದೆ. ಕಾರ್ಮಿಕರ ವಿವಿಧ ಬೇಡಿಕೆಗೆ ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಸ್ವಾತಂತ್ರ‍್ಯ ಯೋಧರ ಉತ್ತರಾಧಿಕಾರಿ ಸದಸ್ಯರಿಗೆ ಸರ್ಕಾರಿ ನೌಕರಿ ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಸ್ವಾತಂತ್ರ‍್ಯ ಯೋಧರ ಉತ್ತರಾಧಿಕಾರಿಗಳ ಸಂಘ, ಒಳ ಮೀಸಲಾತಿ, ಜಾತಿ ಗಣತಿ ಕೂಡಲೆ ಜಾರಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹೋರಾಟ ನಡೆಯಲಿದೆ.

    ಪಂಚಮಸಾಲಿ ಮೀಸಲು ಹೋರಾಟದಲ್ಲಿ ನಡೆದ ಲಾಠಿಚಾರ್ಜ್‌ನಿಂದಾಗಿ ಹಲವರು ಗಾಯಗೊಂಡಿದ್ದರು. ಸದ್ಯ ಗಾಯಳುಗಳು ಬೆಳಗಾವಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಿಜೆಪಿ ನಾಯಕರು ಇಂದು ಗಾಯಾಳುಗಳ ಆರೋಗ್ಯ ವಿಚಾರಿಣೆ ನಡೆಸಲಿದ್ದಾರೆ. ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಅರವಿಂದ ಬೆಲ್ಲದ್, ಸಿ.ಸಿ ಪಾಟೀಲ್ ಸೇರಿದಂತೆ ಇನ್ನಿತರರು ಭೇಟಿ ನೀಡಲಿದ್ದಾರೆ.

    ಬಿಜೆಪಿಯಿಂದ ಲಾಠಿಚಾರ್ಜ್ ಖಂಡಿಸಿ ಪ್ರತಿಭಟನೆ:
    ಪಂಚಮಸಾಲಿ ಹೋರಾಟದಲ್ಲಿ ನಡೆದ ಲಾಠಿಚಾರ್ಜ್ ಖಂಡಿಸಿ ಇಂದು ಬಿಜೆಪಿ ಸುವರ್ಣಸೌಧದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಿದೆ. ಬಿವೈ ವಿಜಯೇಂದ್ರ, ಅಶೋಕ್, ಛಲವಾದಿ ನಾರಾಯಣಸ್ವಾಮಿ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಬಿಜೆಪಿಯ ಶಾಸಕರು, ಪರಿಷತ್ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.ಇದನ್ನೂ ಓದಿ: ಮರುಡೇಶ್ವರದಲ್ಲಿ ವಿದ್ಯಾರ್ಥಿನಿಯರ ಸಾವು ಕೇಸ್: ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ

  • ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ

    ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ

    ಬೆಳಗಾವಿ/ಬೆಂಗಳೂರು: ಬಿಜೆಪಿಯವ್ರು (BJP) ಈ ಹಿಂದೆ ಅಧಿಕಾರದಲ್ಲಿದ್ದಾಗ ಮುಸ್ಲಿಂ ಸಮುದಾಯದ (Muslim Community) ಶೇ.4ರಷ್ಟು ಮೀಸಲಾತಿ ವಾಪಸ್ ಪಡೆದು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳಿಗೆ ಹಂಚಿಕೆ ಮಾಡಿದ್ರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಬೆಳಗಾವಿ ಚಳಿಗಾಲ ಅಧಿವೇಶನದ (Belagavi Winter Session)ಮೊದಲ ದಿನ ಸದನದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಕುರಿತು ಸಿಎಂ ಮಾತನಾಡಿದರು. ಪಂಚಮಸಾಲಿ (Panchamasali) ಸಮುದಾಯದ 2ಎ ಮೀಸಲಾತಿ ವಿಚಾರವಾಗಿ ಹಿಂದಿನ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್ ಹಾಗೂ ನ್ಯಾಯಾಲಯದ ಆದೇಶವನ್ನು ಸದನದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ| ವಿಧಾನಸಭೆ ಸಭಾಧ್ಯಕ್ಷರಿಗೆ ನೂತನ ಪೀಠ – ವಿಶೇಷತೆ ವಿವರಿಸಿದ ಯು.ಟಿ.ಖಾದರ್

    ಪಂಚಮಸಾಲಿಗಳನ್ನು 2ಎ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿಗಳು ಮೀಸಲಾತಿ ಕೇಳಲು ನಾನು ಅಡ್ಡಿಯಾಗಿಲ್ಲ ಎಂದರು. ಈ ವೇಳೆ ಸ್ಪಷ್ಟನೆ ನೀಡಿದ ಗೃಹ ಸಚಿವರು 5,000 ಟ್ರ‍್ಯಾಕ್ಟರ್‌ಗಳನ್ನು ತರಲು ಮುಂದಾಗಿದ್ದಾರೆ. ಹಾಗಾಗಿ ಲಾ ಅಂಡ್ ಆರ್ಡರ್ ಸಮಸ್ಯೆ ಆಗುತ್ತೆ ಅಂತ ಅನುಮತಿ ಕೊಡಲಿಲ್ಲ. ನಂತರ ಜನ ಬರ್ತಾರೆ ವಾಹನಗಳಲ್ಲಿ ಅಂದ್ರು, ಜನ ಬರೋ ವಾಹನಗಳಿಗೂ ನಾವು ಮಿತಿ ಹಾಕಿದ್ದೇವೆ. ಪ್ರತಿಭಟನೆ ಮಾಡಲು ಅಡ್ಡಿ ಇಲ್ಲ, ಆದ್ರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಷ್ಟೇ ಎಂದು ಗೃಹಸಚಿವರು ತಿಳಿಸಿದ್ರು. ಇದನ್ನೂ ಓದಿ: ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ

    ಬಳಿಕ ಮಾತು ಮುಂದುವರಿಸಿದ ಸಿಎ, ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಸಲಾಗಿದೆ. ವೀರಶೈವ ಲಿಂಗಾಯಿತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಪಂಚಮಸಾಲಿಗಳನ್ನು 2ಎ ಸೇರಿಸಲು ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವಂತೆ ಪಂಚಮಸಾಲಿ ಹೋರಟಗಾರರಿಗೆ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: 9 ಕಂಪನಿಗಳಿಗೆ ನೀಡಿರೋ 5,150 ಎಕ್ರೆ ಗುತ್ತಿಗೆ ಅರಣ್ಯ ಭೂಮಿ ವಶಕ್ಕೆ ‌ಕ್ರಮ: ಈಶ್ವರ್ ಖಂಡ್ರೆ

    ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪಂಚಮಸಾಲಿಗಳನ್ನು 2ಎ ಸೇರಿಸಿಲ್ಲ ಬದಲಾಗಿ, ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿ ಗೆ ತಲಾ ಶೇ.2 ರಂತೆ ಮೀಸಲಾತಿ ಹಂಚಿಕೆ ಮಾಡಿತ್ತು. ಇದನ್ನು ಆಕ್ಷೇಪಿಸಿ ಮುಸ್ಲಿಮರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಪಡಿಸುವುದಿಲ್ಲ. ಯತಾಸ್ಥಿತಿ ಮುಂದುವರಿಸಿಕೊಂಡು ಹೋಗುವುದಾಗಿ ಅಫಿಡವಿಡ್ ಸಲ್ಲಿಸಿದೆ. ಇದರ ಆಧಾರದ ಮೇಲೆ ಕೋರ್ಟ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಇದರ ಪ್ರತಿಯನ್ನು ನಾಳೆಯೇ ಸದನದ ಮುಂದೆ ಮಂಡಿಸುತ್ತೇನೆ ಎಂದು ಹೇಳಿದರು.