Tag: Panchamasali Lingayat

  • ʻಸಿಎಂ ಲಫಂಗʼ ಹೇಳಿಕೆ ಹಿಂಪಡೆಯುತ್ತೇವೆ – ಅಭಿನವ ಸಂಗನಬಸವ ಶ್ರೀ

    ʻಸಿಎಂ ಲಫಂಗʼ ಹೇಳಿಕೆ ಹಿಂಪಡೆಯುತ್ತೇವೆ – ಅಭಿನವ ಸಂಗನಬಸವ ಶ್ರೀ

    ವಿಜಯಪುರ: ಸಿಎಂ ಸಿದ್ದರಾಮಯ್ಯ (Siddaramaiah) ಲಫಂಗ ಇದ್ದಾನೆ, ಮೀಸಲಾತಿ ನೀಡಲ್ಲ ಎಂದು ಸಿಎಂ ವಿರುದ್ಧ ವಿಜಯಪುರ (Vijayapura) ಜಿಲ್ಲೆಯ ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ  ಬುಧವಾರ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲೆ ವಾಗ್ದಾಳಿ ನಡೆಸಿದ್ದರು. ಅವರ ಸ್ಥಾನಕ್ಕೆ ನಾನು ಬಳಸಿದ ಶಬ್ದ ಒಳ್ಳೆಯದಲ್ಲ. ಆಶಿರ್ವಚನದ ವೇಳೆ ಬಳಸಿದ ಎರಡು ಪದಗಳನ್ನು ಹಿಂದೆ ಪಡೆಯುತ್ತೇನೆ ಎಂದು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

    ಸಿಎಂ ವಿರುದ್ಧದ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ (Abhinava Sanganabasava Shivacharya Swamiji), ನಾವು ನೋವು ಆಗುವಂತಹ ಮಾತುಗಳನ್ನ ಆಡಿದ್ದೇವೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಅದಕ್ಕಾಗಿ ನಾನು ಆಶಿರ್ವಚನದ ವೇಳೆ ಬಳಸಿದ ಎರಡು ಪದಗಳನ್ನು ಹಿಂದೆ ಪಡೆಯುತ್ತೇನೆ. ಅವರ ಸ್ಥಾನಕ್ಕೆ ನಾನು ಬಳಸಿದ ಶಬ್ದ ಒಳ್ಳೆಯದಲ್ಲ. ಕಾರಣ ನಾನು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಬಕಾರಿ ಸಚಿವರ ಖಾತೆ ಬದಲಿಸುವಂತೆ ಆಗ್ರಹಿಸಿ ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್

    ಬುಧವಾರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಜಿಲ್ಲೆಯ ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯಸ್ವಾಮೀಜಿ ಪಂಚಮಸಾಲಿ 2ಎ ಮೀಸಲಾತಿ ವಿಚಾರದಲ್ಲಿ ಸಿಎಂ ವಿರುದ್ಧ ಆಶಿರ್ವಚನದ ವೇಳೆ ಸಿದ್ದರಾಮಯ್ಯ ಲಫಂಗ ಇದ್ದಾನೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೂಡಲಸಂಗಮ ಜಯಮೃತ್ಯುಂಜಯ ಶ್ರೀಗಳ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕ್ತಾನೆ. ನಾನೇ ಆಗಿದ್ರೇ ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ಸಿಎಂ ಆದಾಗ ಗದ್ದಲ ಮಾಡುತ್ತಾರೆ. ಪಂಚಮಸಾಲಿ 2ಎ ಮೀಸಲಾತಿಯಲ್ಲಿ ನಾಟಕ ಮಾಡಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಮೀಸಲಾತಿ ನೀಡಲ್ಲ ಎಂದು ಕಿಡಿಕಾರಿದ್ದರು. ಇದೀಗ ಸ್ವಾಮೀಜಿ ಸಿಎಂ ವಿರುದ್ಧ ಬಳಸಿದ ಎರಡು ಪದ ಹಿಂಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ| ರಾಶಿ ರಾಶಿ ಗೋವಾ ಮದ್ಯ ಬಾಟಲಿಗಳು ವಶ

  • ನಾನಾಗಿದ್ರೆ ಸಿದ್ದರಾಮಯ್ಯನ ಕಪಾಳಕ್ಕೆ ಹೊಡಿತಿದ್ದೆ : ಸಿಎಂ‌ ವಿರುದ್ಧ ಅಭಿನವ ಸಂಗನಬಸವ ಶ್ರೀ ಕಿಡಿ

    ನಾನಾಗಿದ್ರೆ ಸಿದ್ದರಾಮಯ್ಯನ ಕಪಾಳಕ್ಕೆ ಹೊಡಿತಿದ್ದೆ : ಸಿಎಂ‌ ವಿರುದ್ಧ ಅಭಿನವ ಸಂಗನಬಸವ ಶ್ರೀ ಕಿಡಿ

    ವಿಜಯಪುರ: ಸಿಎಂ ಸಿದ್ದರಾಮಯ್ಯ (Siddaramaiah) ಲಫಂಗ ಇದ್ದಾನೆ, ಮೀಸಲಾತಿ ನೀಡಲ್ಲ ಎಂದು ಕೂಲಡಸಂಗಮ ಶ್ರೀಗಳಿಗೆ ನಾನು ಹೇಳಿದ್ದೆ ಎಂದು ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ (Abhinava Sanganabasava Shivacharya Swamiji) ಸಿಎಂ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಕೊಲ್ಹಾರದ ರೋಣಿಹಾಳ ಗ್ರಾಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ 246ನೇ ಜಯಂತಿ ಕಾರ್ಯಕ್ರಮದಲ್ಲಿ ಹಾಗೂ 200ನೇ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ ಪಂಚಮಸಾಲಿ (Panchamasali Lingayat) 2ಎ ಮೀಸಲಾತಿ (2A Category Reservation) ವಿಚಾರವಾಗಿ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೂಡಲಸಂಗಮ ಜಯಮೃತ್ಯುಂಜಯ ಶ್ರೀಗಳ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕ್ತಾನೆ. ನಾನೇ ಆಗಿದ್ರೇ ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ಸಿಎಂ ಆದಾಗ ಗದ್ದಲ ಮಾಡ್ತಾರೆ. ಪಂಚಮಸಾಲಿ 2ಎ ಮೀಸಲಾತಿಯಲ್ಲಿ ನಾಟಕ ಮಾಡಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಮೀಸಲಾತಿ ನೀಡಲ್ಲ ಎಂದು ಕಿಡಿಕಾರಿದ್ದಾರೆ.

    ಬೇರೆ ಯಾರಾದ್ರೂ ಸಿಎಂ ಆದಾಗ ಪಂಚಮಸಾಲಿ 2ಎ ಮೀಸಲಾತಿ ಸಿಗಬಹುದು. ಆದರೆ ಈಗ ಮಾತ್ರ ಸಿಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 2A ಮೀಸಲಾತಿಗೆ ಬೇಡಿಕೆ | ಸಿಎಂ ಜೊತೆಗಿನ ಸಭೆ ಸಮಾಧಾನ ತಂದಿಲ್ಲ – ಜಯ ಮೃತ್ಯುಂಜಯ ಸ್ವಾಮೀಜಿ

    2A ಮೀಸಲಾತಿಗೆ ಬೇಡಿಕೆ | ಸಿಎಂ ಜೊತೆಗಿನ ಸಭೆ ಸಮಾಧಾನ ತಂದಿಲ್ಲ – ಜಯ ಮೃತ್ಯುಂಜಯ ಸ್ವಾಮೀಜಿ

    ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ (2A Reservation) ಕೊಡುವ ಸಂಬಂಧ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ‌ಈ ಹಿನ್ನೆಲೆ ಮತ್ತೆ ಹೋರಾಟ ರೂಪಿಸುವ ಸಂಬಂಧ ಜಯ ಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಸುಳಿವು ನೀಡಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿಂದು ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯ (Siddaramaiah) ಜೊತೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿತು. ಸಭೆಯಲ್ಲಿ 2A ಮೀಸಲಾತಿ ನೀಡುವ ಸಂಬಂಧ ಯಾವುದೇ ಭರವಸೆ ಜಯ ಮೃತ್ಯುಂಜಯ ಸ್ವಾಮೀಜಿ ನಿಯೋಗಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಹಣಕಾಸು ವಹಿವಾಟು ನಡೆದಿಲ್ಲ, ಹಣಕಾಸಿನ ವಿಚಾರ ಎಲ್ಲೂ ತನಿಖೆಯಾಗಿಲ್ಲ: ಡಿ.ಕೆ.ಸುರೇಶ್

    ಸಭೆ ಬಳಿಕ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಸಿಎಂ ಅವರು ನಮ್ಮ ಬಳಿ ಒಂದೂವರೆ ಗಂಟೆ ಸಭೆ ಮಾಡಿದ್ರು. ನಾವು 2A ಮೀಸಲಾತಿ ಕೊಡಿ ಇಲ್ಲದೇ ಹೋದ್ರೆ ಬಿಜೆಪಿ ತಂದಿದ್ದ 2D ಮೀಸಲಾತಿಯಾದ್ರೂ ಕೊಡಿ ಅಂತ ಮನವಿ ಮಾಡಿದ್ವಿ. ಇದಲ್ಲದೇ ಲಿಂಗಾಯತರನ್ನ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಆದ್ರು ಮಾಡಿ ಅಂತ ಮನವಿ ಮಾಡಿದ್ವಿ. ಆದರೆ ಸಿಎಂ ಅವರು ಚುನಾವಣೆ ನೀತಿ ಸಂಹಿತೆ ಇದೆ. ಈಗ ಏನು ಹೇಳೊಲ್ಲ ಅಂತ ಹೇಳಿದ್ದಾರೆ. ಒಬಿಸಿ ಬಗ್ಗೆಯೂ ಭರವಸೆ ಕೊಟ್ಟಿಲ್ಲ. 2A ಮೀಸಲಾತಿ ಬಗ್ಗೆಯೂ ಯಾವುದೇ ಸ್ಪಷ್ಟವಾದ ನಿರ್ಧಾರ ಹೇಳಿಲ್ಲ. ಈ ಸಭೆ ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ಮುಂದಿನ ಹೋರಾಟ ರೂಪಿಸೋದಾಗಿ ತಿಳಿಸಿದರು.

    ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಒಂದೂವರೆ ಗಂಟೆ ಸಿಎಂ ಎಲ್ಲಾ ಸಮಸ್ಯೆ ಆಲಿಸಿದ್ದಾರೆ. ಏನೇನು ಆಗಬೇಕು ಸಹಾಯ ಮಾಡೋದಾಗಿ ಹೇಳಿದ್ದಾರೆ. ನೀತಿ ಸಂಹಿತೆ ಇರೋದ್ರೀಂದ ಏನು ಮಾಡೋಕೆ ಬರೊಲ್ಲ ಅಂತ ಹೇಳಿದ್ದಾರೆ ಅಂತ ತಿಳಿಸಿದರು. ನೀತಿ ಸಂಹಿತೆ ಬರೋ ಮುನ್ನ ಸಭೆ ನಿಗದಿಯಾಗಿತ್ತು. ಹೀಗಾಗಿ ಸಭೆ ಮಾಡಿದ್ದೇವೆ. ಸಮಾಜ ರೊಚ್ಚಿಗೆದ್ದು ಬೀದಿಗೆ ಇಳಿದಿದೆ. ಸಮಾಜ ಅನ್ಯತಾ ಭಾವಿಸಬಾರದು ಅಂತ ಸಭೆ ಮಾಡಿದ್ದೇವೆ. ನನಗೆ ವಿಶ್ವಾಸ ಇದೆ. ನಮ್ಮ ಸರ್ಕಾರದಲ್ಲಿ 2A ಮೀಸಲಾತಿ ಬೇಡಿಕೆ ಈಡೇರಿಕೆ ಆಗೋ ಭರವಸೆ ಇದೆ ಎಂದರು. ಇದನ್ನೂ ಓದಿ: ಧರ್ಮಸ್ಥಳಕ್ಕೆ ಬೇಕಾದ್ರೆ ಬನ್ನಿ, ನಾನು ಮುಡಾ ದಾಖಲಾತಿ ತಂದಿಲ್ಲ: ಬೈರತಿ ಸುರೇಶ್‌

    2A ಮೀಸಲಾತಿ ಕೊಟ್ರೆ 1 ಕೆಜಿ ಚಿನ್ನ ಕೊಡುವ ಆಫರ್ ಕೊಟ್ಟಿರೋ ನಿರಾಣಿ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಸಚಿವರು, ನಿರಾಣಿ ಅವರು ಒಂದು ಕೆಜಿ ಚಿನ್ನ ಕೊಟ್ರೆ ತೆಗೆದುಕೊಳ್ಳೋಣ. ಒಂದು ಕೆಜಿ ಅಲ್ಲ. ಇನ್ನು ಜಾಸ್ತಿ ತೆಗೆದುಕೊಳ್ಳೋಣ. ಅಣ್ಣ-ತಂಗಿಗೆ ಕೊಡೋದ್ರಲ್ಲಿ ಏನು ತಪ್ಪಿಲ್ಲ. ಅವರ ಕೊಡಲಿ ನಾವು ತೆಗೆದುಕೊಳ್ಳೋಣ. ನಾವು ನಿರಾಣಿ ತರಹ 2D, 3D ಸಿಡಿ ಅಂತ ನಾನು ಮಾತಾಡೊಲ್ಲ. ಹಿಂದೆಯೂ ಹೋರಾಟದಲ್ಲಿ ಇದ್ದೇನೆ. ಈಗಲೂ ಹೋರಾಟದಲ್ಲಿ ಇದ್ದೇನೆ. ಸಿಎಂ, ಡಿಸಿಎಂ ಅವರು ಕೂಡಾ ಸಂಪೂರ್ಣ ವರದಿ ಬಂದ ಮೇಲೆ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ ಅಂತ ತಿಳಿಸಿದರು. ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ, ಶಾಸಕ ಯತ್ನಾಳ್, ಸಂಸದ ಈರಣ್ಣ ಕಡಾಡಿ ಸೇರಿ ಸಮಾಜದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಪ್ರಮುಖ ಟಾರ್ಗೆಟ್ – ಹೆಚ್‌ಡಿ ಕುಮಾರಸ್ವಾಮಿ