Tag: Panchamasali 2A Reservation

  • ಸಿಎಂ ವಿರುದ್ಧದ ಆ ಹೇಳಿಕೆಯೇ ನನಗೆ ಮುಳುವಾಯಿತು: ಪಂಚಮಸಾಲಿ ಶ್ರೀ

    ಸಿಎಂ ವಿರುದ್ಧದ ಆ ಹೇಳಿಕೆಯೇ ನನಗೆ ಮುಳುವಾಯಿತು: ಪಂಚಮಸಾಲಿ ಶ್ರೀ

    ಬಾಗಲಕೋಟೆ: ಮುಖ್ಯಮಂತ್ರಿಗಳ ವಿರುದ್ಧದ ಆ ಹೇಳಿಕೆಯೇ ನನಗೆ ಮುಳುವಾಯಿತು ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಪ್ರತಿಕ್ರಿಯೆ ನೀಡಿದರು.

    ಹುನಗುಂದ ಪಟ್ಟಣದಲ್ಲಿ ಅವರು ಮಾತನಾಡಿದರು. ಮೀಸಲಾತಿ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿಲ್ಲ ಎಂಬ ಹೇಳಿಕೆ ಮುಳುವಾಯ್ತಾ ಎಂಬ ಪ್ರಶ್ನೆಗೆ ಹೌದು ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿಗಳು ನನಗೆ ಆತ್ಮೀಯರು. ನಾನು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಮನೆಯ ಎದುರು ಪ್ರತಿಭಟನೆ ಮಾಡಿದ್ದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿಲ್ಲ ಅಂತಾ ಹೇಳಿದ್ದೆ, ಅದ್ರಲ್ಲಿ ತಪ್ಪೇನಿದೆ? ಸಿಎಂ ವಿರುದ್ಧ ಆ ಹೇಳಿಕೆಯೇ ನನಗೆ ಬಹುದೊಡ್ಡ ಮುಳುವಾಯಿತು. ಹೋರಾಟವೇ ನನಗೆ ಇಷ್ಟೆಲ್ಲ ಆಗಲು ಕಾರಣವಾಯ್ತು ಎಂದರು. ಇದನ್ನೂ ಓದಿ: ನೀವೆಲ್ಲ ಮಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ, ಇಲ್ದಿದ್ರೆ ಭಕ್ತರ ಮನೆಯಲ್ಲೇ ಇರುತ್ತೇನೆ: ಭಾವುಕರಾದ ಜಯ ಮೃತ್ಯುಂಜಯ ಶ್ರೀ‌

    ಕಾಶಪ್ಪನವರ ಜೊತೆಗಿನ ಭಿನ್ನಾಭಿಪ್ರಾಯ ಕುರಿತು ಮಾತನಾಡಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಕಾನೂನಿನ ತೊಡಕುಗಳಾದವು. ಈಗ ಹಿರಿಯರು ಇಬ್ಬರನ್ನ ಕರೆದು ಸರಿ ಮಾಡುತ್ತಾರೆ. ಕಾಶಪ್ಪನವರ ಹಾಗೂ ನಾನು ಗುರು ಶಿಷ್ಯರು. ಅವರು ತಪ್ಪು ತಿಳಿದಿದ್ದಾರೆ ಅಷ್ಟೆ. ಆ ಎಲ್ಲ ಗೊಂದಲಗಳನ್ನ ಪರಿಹರಿಸ್ತೇವೆ. ಕೂಡಲಸಂಗಮದ ಭಕ್ತರೊಂದಿಗೆ ಕಾಶಪ್ಪನವರ ಮಾತನಾಡಿದ್ದಾರೆ. ಅವರ ಮಾತಿನಂತೆ ಕೂಡಲಸಂಗಮ ಭಕ್ತರು ಕರೆಯಲು ಬಂದಿದ್ದಾರೆ. ಈ ಘಟನೆ ನನ್ನ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ ಎಂದು ತಿಳಿಸಿದರು.

    ಹೊಸ ಟ್ರಸ್ಟ್ ಮಾಡುವ ವಿಚಾರ ಸಭೆಯಲ್ಲಿ ಪ್ರಸ್ತಾಪಿಸಿದ್ದರ ಕುರಿತು ಮಾತನಾಡಿ, ಹೊಸದು ಅಲ್ಲ, ಇದೇ ಟ್ರಸ್ಟ್‌ನಲ್ಲಿ ಎಲ್ಲ ತಾಲೂಕಿನ ಸದಸ್ಯರನ್ನ ಹಾಕಿಕೊಳ್ಳಿ ಎಂದು ಮುಖಂಡರು ಹೇಳಿದ್ದಾರೆ. ಅದನ್ನು ಹಿರಿಯರು ನಾವು ಸೇರಿ ಸರಿ ಪಡಿಸ್ತೇವೆ. ಕರ್ನಾಟಕದ ಎಲ್ಲ ಮಠ ಮಾನ್ಯಗಳ ಟ್ರಸ್ಟ್‌ಗೆ ಗುರುಗಳು (ಸ್ವಾಮೀಜಿ) ಅಧ್ಯಕ್ಷರಾಗಿರ್ತಾರೆ. ಆದರೆ, ನನ್ನ ವಿಷಾಲವಾದ ಭಾವನೆಯಿಂದ ಭಕ್ತರು ಅಧ್ಯಕ್ಷರಾಗಿರಲಿ ಅಂತಾ ಬಿಟ್ಟಿದ್ದೇ ತಪ್ಪಾಗಿದೆ ಎಂದು ಬೇಸರಿದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ, ಶೀಘ್ರವೇ ಚುನಾವಣೆ: ಡಿ.ಕೆ.ಶಿವಕುಮಾರ್

    ನನಗೇನೂ ಆಸೆಯೇ ಇಲ್ಲ. ಆಸ್ತಿ, ಟ್ರಸ್ಟ್ ಹಾಗೂ ಇದನ್ನ ಹಿಡಕೊಂಡು ಅವರು ಸಂಪೂರ್ಣವಾಗಿ ಬೆಳೆಯಲಿ. ಅವರ ಬೆಳವಣಿಗೆಯನ್ನ ನೋಡಿ ನಾನು ಖುಷಿ ಪಡ್ತೇನೆ. ಮಠದಲ್ಲೇ ಇರ್ತೇನೆ, ಮಠ ಕಾರ್ಯಕ್ಷೇತ್ರ, ಪ್ರವಾಸ ನಿರಂತರ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

  • ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ – ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ಸಂಸದರು ಕೆಂಡ

    ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ – ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ಸಂಸದರು ಕೆಂಡ

    ನವದೆಹಲಿ: ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಯನ್ನು ರಾಜ್ಯ ಬಿಜೆಪಿ (BJP) ಸಂಸದರು ಖಂಡಿಸಿದ್ದಾರೆ. ಮೀಸಲಾತಿ ಹೋರಾಟಗಾರರ ವಿರುದ್ಧ ಲಾಠಿಚಾರ್ಜ್ ಖಂಡನೀಯ. ಪಂಚಮಸಾಲಿ ಸಮುದಾಯದಲ್ಲಿ ಬಡವರಿದ್ದಾರೆ. ಅವರಿಗೂ ಮೀಸಲಾತಿ ಸಿಗಬೇಕು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ (Govinda Karajola) ಆಗ್ರಹಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಸರ್ಕಾರ ಬಡವರ ವಿರೋಧಿ ಸರ್ಕಾರ. ನಾವು 2ಡಿ ಮೀಸಲಾತಿ ಮಾಡಿದ್ದೇವೆ. ಅದನ್ನು ಮೊದಲು ಜಾರಿ ಮಾಡಲಿ. ನ್ಯಾಯಕೇಳಲು ಬಂದವರ ಮೇಲೆ ಲಾಠಿ ಚಾರ್ಚ್ ಮಾಡುವುದು ಸರಿಯಲ್ಲ. ಭಯದ ವಾತಾವರಣ ನಿರ್ಮಿಸಲು ಲಾಠಿ ಚಾರ್ಜ್ ಮಾಡಿದೆ. ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಮುಂದಾಗಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: 2ಎ ಮೀಸಲಾತಿಗಾಗಿ ಪಂಚಮಸಾಲಿಗಳ ಒತ್ತಾಯ ಸಂವಿಧಾನ ವಿರೋಧಿ: ಸಿಎಂ

    ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಅಕ್ಷಮ್ಯ ಅಪರಾಧ. ಒಂದು ಪ್ರತಿಭಟನೆಗೆ ಅಗತ್ಯ ವ್ಯವಸ್ಥೆ ಮಾಡಲು ಇವರಿಗೆ ಸಾಧ್ಯವಾಗಿಲ್ಲ. ಈಗ ಪ್ರತಿಭಟನಾಕಾರರು ಕಲ್ಲು ತೂರಿದರು ಎಂದು ಸಿದ್ಧ ಉತ್ತರ ಕೊಡುತ್ತಾರೆ. ಸರ್ಕಾರದ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಹೋರಾಟಗಾರರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿದೆ. ಅಧಿವೇಶನ ಅಂತ್ಯವಾಗುತ್ತಿದ್ದಂತೆ ಅವರನ್ನು ಬಂಧಿಸುವ ಕೆಲಸ ಮಾಡಲಾಗುತ್ತದೆ. ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಹೋರಾಟಗಾರರು ಕೇಳುತ್ತಿದ್ದಾರೆ. ಅದನ್ನು ಸರ್ಕಾರ ಮಾಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಹಿಂದೂ ಪದ ವಿವಾದ – ಸಚಿವ ಸತೀಶ್ ಜಾರಕಿಹೊಳಿಗೆ ಬಿಗ್ ರಿಲೀಫ್

    ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸರ್ಕಾರಕ್ಕೆ ಈ ರೀತಿಯ ಸಮಸ್ಯೆ ಸಹಜ. ಜನರ ಆಶೋತ್ತರಗಳು ಬದಲಾದಗ ಈ ರೀತಿಯ ಬೇಡಿಕೆ ಬರುತ್ತವೆ. ಮೀಸಲಾತಿ ಮೂಲಕ ಬದಲಾವಣೆ ಕೇಳುತ್ತಾರೆ. ಈಗ ಸಾಮಾಜಿಕವಾಗಿ, ಆರ್ಥಿಕವಾಗಿ ಬದಲಾವಣೆಯಾಗಿವೆ. ಇಂತಹ ಬೇಡಿಕೆ ಬಂದಾಗ ಸೂಕ್ಷ್ಮವಾಗಿ ನಿಭಾಯಿಸಬೇಕು ಎಂದರು. ಇದನ್ನೂ ಓದಿ: 2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ, ಬೇರೆ ರಾಜ್ಯಗಳಿಗಿಂತ ನಮ್ಮದು ಕಡಿಮೆ: ಸಿದ್ದರಾಮಯ್ಯ

    ಪಂಚಮಸಾಲಿ ಹೋರಾಟಗಾರರಿಗೆ ಸಿಎಂ ಭೇಟಿಗೆ ಅವಕಾಶ ನೀಡಿಲ್ಲ. ನೀಡಿದಾಗಲೂ ಸರಿಯಾಗಿ ಮಾತನಾಡಿಲ್ಲ. ಧಾರ್ಮಿಕ ಮೀಸಲಾತಿ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಅದನ್ನು ತೆಗೆದು ಅಗತ್ಯ ಇರುವವರಿಗೆ ಮೀಸಲಾತಿ ನೀಡಬೇಕು. ನಾವು ಅದನ್ನೇ ಮಾಡಿದ್ದೆವು. ಆದರೆ ಕಾಂಗ್ರೆಸ್ ಬೆಂಬಲಿಗರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಮುಂದಿನ ವಿಚಾರಣೆವರೆಗೂ ನಾವು ಅದಕ್ಕೆ ಒಪ್ಪಿಗೆ ನೀಡಿದ್ದೆವು. ಹೊಸ ಸರ್ಕಾರ ಬಂದಮೇಲೆ ಕ್ರಮ ತೆಗೆದುಕೊಂಡಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಮನವೊಲಿಸಲು ವಯನಾಡಿಗೆ ನೂರು ಮನೆ: ಈಶ್ವರಪ್ಪ ವ್ಯಂಗ್ಯ

    ಕೋರ್ಟ್‌ನಲ್ಲೂ ಈ ಬಗ್ಗೆ ಯಾವ ಬೆಳವಣಿಗೆ ನಡೆದಿಲ್ಲ. ಈಗಲಾದರೂ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಇದು ರಾಷ್ಟ್ರದ ವಿಚಾರವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಬೇಡಿಕೆ ಇದೆ. ಮುಂದೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ಬದಲಾವಣೆಯಾಗಲಿದೆ. ರಾಜ್ಯ ಸರ್ಕಾರಕ್ಕೆ ಇದನ್ನು ಮಾಡಲು ಮನಸ್ಸಿಲ್ಲ. ಸಂವಿಧಾನ ಕೈಯಲ್ಲಿ ಹಿಡಿದು ಅದರ ವಿರುದ್ಧ ನಿರ್ಣಯ ಮಾಡುತ್ತಾರೆ. ಲಾಠಿ ಚಾರ್ಜ್ ನಿರಕುಂಶವಾದ ನಡೆ. ಕೂಡಲೇ ಹೋರಾಟಗಾರರನ್ನು ಕರೆದು ಮಾತನಾಡಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಉಕ್ಕು ಕ್ಷೇತ್ರದಲ್ಲಿ ಹಸಿರು ಕ್ರಾಂತಿ – ಪ್ರಧಾನಿ ಮೋದಿ ಕನಸು ಅನಾವರಣಗೊಳಿಸಿದ ಹೆಚ್‌ಡಿಕೆ

  • ಜಾರಕಿಹೊಳಿ ಯಾವಾಗ ಸರ್ಕಾರ ಕೆಡವುತ್ತಾರೋ? ಯಾವಾಗ ಸರ್ಕಾರ ತರುತ್ತಾರೋ?: ಜಯಮೃತ್ಯುಂಜಯ ಸ್ವಾಮೀಜಿ

    ಜಾರಕಿಹೊಳಿ ಯಾವಾಗ ಸರ್ಕಾರ ಕೆಡವುತ್ತಾರೋ? ಯಾವಾಗ ಸರ್ಕಾರ ತರುತ್ತಾರೋ?: ಜಯಮೃತ್ಯುಂಜಯ ಸ್ವಾಮೀಜಿ

    ಬೆಳಗಾವಿ: ನಾವು ಸರ್ಕಾರ ಕೆಡವೋದು ಇಲ್ಲ. ಹೊಸ ಸರ್ಕಾರ ರಚಿಸುವುದೂ ಇಲ್ಲ. ಇರುವ ಸರ್ಕಾರದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ (Panchamasali 2A Reservation) ಪಡೆಯುತ್ತೇವೆ ಎಂದು ಪರೋಕ್ಷವಾಗಿ ಗೋಕಾಕ್ ಬಿಜೆಪಿ (BJP) ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಕುರಿತು ಕೂಡಲಸಂಗಮ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ವ್ಯಂಗ್ಯವಾಡಿದರು.

    ಗೋಕಾಕ್ ತಾಲೂಕಿನ ಖನಗಾಂವ-ನಬಾಪುರ ಗ್ರಾಮದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗೋಕಾಕ್ ರಾಜಕಾರಣಿ ಏನು ಮಾಡೋತ್ತಾರೋ? ಏನೋ? ಯಾವಾಗ ಸರ್ಕಾರ ಕೆಡವುತ್ತಾರೋ? ಯಾವಾಗ ಸರ್ಕಾರ ತರುತ್ತಾರೋ? ಎಂಬ ಬಗ್ಗೆ ಯಾವಾಗಲೂ ಬ್ರೇಕಿಂಗ್ ನ್ಯೂಸ್ ಬರುತ್ತದೆ. ನಾವು ಸರ್ಕಾರ ಕೆಡವೋದು ಇಲ್ಲ. ಹೊಸ ಸರ್ಕಾರ ರಚಿಸುವುದೂ ಇಲ್ಲ. ಇರುವ ಸರ್ಕಾರದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುತ್ತೇವೆ ಎಂದರು. ಇದನ್ನೂ ಓದಿ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ

    ಗೋಕಾಕ್‍ನಲ್ಲಿ ಪಂಚಮಸಾಲಿ ಸಮಾಜ ಸದ್ದು ಮಾಡಬೇಕಿದೆ. ಅದಕ್ಕಾಗಿ ಗೋಕಾಕ್ ಕ್ಷೇತ್ರದ 65 ಗ್ರಾಮಗಳಲ್ಲಿ ಪಂಚಮಸಾಲಿ ಸಮಾಜಕ್ಕೆ ಜಾಗೃತಿ ಮೂಡಿಸುತ್ತಿದ್ದೇನೆ. ನಿಮ್ಮೆಲ್ಲರನ್ನೂ ಹೋರಾಟದಲ್ಲಿ ಧುಮುಕುವಂತೆ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಪೂರ್ವಭಾವಿ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇದನ್ನೂ ಓದಿ: ನಮ್ಮ ಮೀಸಲಾತಿಗೆ ಕೈ ಹಾಕಬೇಡಿ, ನಾವೂ ಬೀದಿಗಿಳಿಯಬೇಕಾಗುತ್ತೆ: ಇಸ್ಮಾಯಿಲ್ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]