Tag: Panambur Beach

  • ಪಣಂಬೂರು ಬೀಚ್‍ಗೆ ತೆರಳಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‍ಗಿರಿ

    ಪಣಂಬೂರು ಬೀಚ್‍ಗೆ ತೆರಳಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‍ಗಿರಿ

    ಮಂಗಳೂರು: ವಿಹಾರಕ್ಕೆ ತೆರಳಿದ್ದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ (Students) ಮೇಲೆ ದುಷ್ಕರ್ಮಿಗಳು ನೈತಿಕ ಪೊಲೀಸ್‍ಗಿರಿ (Moral Policing) ಪ್ರದರ್ಶಿಸಿದ ಘಟನೆ ಪಣಂಬೂರಿನ ಬೀಚ್ (Panambur Beach) ಬಳಿ ನಡೆದಿದೆ.

    ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಬೀಚ್‍ಗೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳ ತಂಡ ಬೈಕ್‍ನಲ್ಲಿ ವಿದ್ಯಾರ್ಥಿಗಳನ್ನು ಹಿಂಬಾಲಿಸಿತ್ತು. ಬಳಿಕ ವಿದ್ಯಾರ್ಥಿಗಳನ್ನು ನಗರದ ಬಿಜೈ ಕಾಪಿಕಾಡ್ ಎಂಬಲ್ಲಿ ತಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿ ಮಹಮ್ಮದ್ ಹಫೀಸ್ (20) ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನ ಕೊಲೆಗೈದು ಎಸ್ಕೇಪ್ ಆಗಿದ್ದ ಮಗ ಅರೆಸ್ಟ್

    ಬೀಚ್‍ಗೆ 4 ಜನ ವಿದ್ಯಾರ್ಥಿನಿಯರು ಅನ್ಯಕೋಮಿನ ಇಬ್ಬರು ವಿದ್ಯಾರ್ಥಿಗಳೊಂದಿಗೆ ತೆರಳಿದ್ದರು. ಇದರಿಂದಾಗಿ ಕಿಡಿಗೇಡಿಗಳು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಜೂನ್‍ನಲ್ಲಿ ಸಹ ಸೋಮೇಶ್ವರ ಬೀಚ್‍ಗೆ ತೆರಳಿದ್ದ ವಿದ್ಯಾರ್ಥಿಗಳ ಮೇಲೆ ಕೆಲವರು ಹಲ್ಲೆ ನಡೆಸಿದ್ದ ವರದಿಯಾಗಿತ್ತು.

    ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು (Police) ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ತಂಗಿಯ ಶಿರಚ್ಛೇದ ಮಾಡಿ ರುಂಡ ಹಿಡಿದು ಹೋಗ್ತಿದ್ದ ಅಣ್ಣನ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊರೊನಾ ಎರಡನೇ ಅಲೆ ಎಫೆಕ್ಟ್- ಬೀಚ್ ಖಾಲಿ ಖಾಲಿ

    ಕೊರೊನಾ ಎರಡನೇ ಅಲೆ ಎಫೆಕ್ಟ್- ಬೀಚ್ ಖಾಲಿ ಖಾಲಿ

    ಮಂಗಳೂರು: ನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುತ್ತಿದ್ದ ಮಂಗಳೂರಿನ ಪಣಂಬೂರು ಬೀಚ್, ಕೊರೊನಾ ಎರಡನೇ ಅಲೆ ಹಿನ್ನೆಲೆ ವೀಕೆಂಡ್‍ನಲ್ಲಿಯೂ ಬಿಕೋ ಎನ್ನುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಸಹ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

    ಕೊರೊನಾದ ಎರಡನೇ ಅಲೆಯ ಎಫೆಕ್ಟ್ ಪ್ರವಾಸಿ ತಾಣಗಳಿಗೂ ತಟ್ಟಿದ್ದು, ರಾಜ್ಯದ ಕರಾವಳಿಯ ಮಂಗಳೂರಿನ ಬೀಚ್ ಬಿಕೋ ಅನ್ನುತ್ತಿದೆ. ಪ್ರತಿ ಭಾನುವಾರ ತುಂಬಿ ತುಳುಕುತ್ತಿದ್ದ ಕಡಲ ತೀರಗಳಲ್ಲಿ ಇಂದು ಕೇವಲ ಬೆರಳೆಣಿಕೆಯ ಪ್ರವಾಸಿಗರು ಮಾತ್ರ ಕಾಣಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನ ಬೀಚ್ ಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಇಂದು ವೀಕೆಂಡ್ ಆಗಿದ್ರೂ ಹೆಚ್ಚಿನ ಜನ ಆಗಮಿಸಿಲ್ಲ. ಜನರೇ ಸ್ವಯಂ ಲಾಕ್‍ಡೌನ್ ಮಾಡಿಕೊಂಡಂತಿದ್ದು, ಮಂಗಳೂರಿನ ಪಣಂಬೂರು ಬೀಚ್ ಬಿಕೋ ಎನ್ನುತ್ತಿದೆ.

    ಮೋಜು ಮಸ್ತಿ, ಬೋಟಿಂಗ್‍ಗಾಗಿ ವೀಕೆಂಡ್‍ನಲ್ಲಿ ಹೆಚ್ಚು ಜನ ಬೀಚ್‍ಗೆ ಆಗಮಿಸುತ್ತಿದ್ದರು. ಆದರೆ ಕೊರೊನಾ ತಾಂಡವಾಡುತ್ತಿರುವ ಹಿನ್ನೆಲೆ ಪ್ರವಾಸಿಗರು ಹಾಗೂ ಬೀಚ್‍ಗೆ ಭೇಟಿ ನೀಡುತ್ತಿರುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿತ್ಯ 200-300 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಹಿನ್ನೆಲೆ ಜನರ ಭಯಭೀತರಾಗಿ ಪ್ರವಾಸಿ ತಾಣಗಳು ಹಾಗೂ ಬೀಚ್‍ಗಳಿಗೆ ಭೇಟಿ ನೀಡುತ್ತಿಲ್ಲ. ಬೋಟಿಂಗ್, ಮೋಜು ಮಸ್ತಿ ಯಾವುದಕ್ಕೂ ಜನ ಆಗಮಿಸುತ್ತಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಿದ್ದ ಬೀಚ್‍ಗಳಲ್ಲಿ ಇದೀಗ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಕಾಣಸಿಗುತ್ತಿದ್ದಾರೆ.

  • ಕೊರೊನಾ ಎಫೆಕ್ಟ್- ಬಂಡೀಪುರ ಸಫಾರಿ, ಪಣಂಬೂರು ಬೀಚ್ ಬಂದ್

    ಕೊರೊನಾ ಎಫೆಕ್ಟ್- ಬಂಡೀಪುರ ಸಫಾರಿ, ಪಣಂಬೂರು ಬೀಚ್ ಬಂದ್

    ಚಾಮರಾಜನಗರ/ಮಂಗಳೂರು: ರಾಜ್ಯದ ಪ್ರಮುಖ ಹುಲಿ ಸಂರಕ್ಷಿತಾರಣ್ಯ ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ಇದೀಗ ಪ್ರವಾಸಿಗರಿಗೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ. ಇತ್ತ ಮಂಗಳೂರಿನ ಪಣಂಬೂರು ಬೀಚ್ ಸಹ ಜನರಿಲ್ಲದೆ ಬಿಕೋ ಎನ್ನುತ್ತಿದೆ.

    ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿಷೇಧ ಹೇರಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಜನರಿಲ್ಲದೇ ಖಾಲಿ ಹೊಡೆಯುತ್ತಿದೆ.

    ಬಂಡೀಪುರವಷ್ಟೇ ಅಲ್ಲದೆ ಕೆ.ಗುಡಿ ಸಫಾರಿ ಕೂಡ ಬಂದ್ ಮಾಡಲಾಗಿದೆ. ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೇಲುಕಾಮನಹಳ್ಳಿ ಬಳಿಯ ಸಫಾರಿ ಕೇಂದ್ರ ಬಂದ್ ಮಾಡಲಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ಬರುವ ರೆಸಾರ್ಟ್, ಹೋಟೆಲ್‍ಗಳು ಕೂಡ ಬಂದ್ ಆಗಿದ್ದು ದೇಶ, ವಿದೇಶದಿಂದ ಬರುವ ಪ್ರವಾಸಿಗರ ಮೇಲೆ ಹದ್ದಿನ ಕಣ್ಣೀಡಲಾಗಿದೆ.

    ಬೀಕೋ ಎನ್ನುತ್ತಿವೆ ಬೀಚ್‍ಗಳು

    ರಾಜ್ಯದ ಕರಾವಳಿಯ ಪ್ರಮುಖ ಪ್ರವಾಸಿ ಕೇಂದ್ರಗಳಿಗೂ ಕೊರೊನಾ ಭೀತಿ ಎದುರಾಗಿದ್ದು, ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಭಾನುವಾರ ಪ್ರವಾಸಿಗರಿಂದ ತುಂಬಿರುತ್ತಿದ್ದ ಬೀಚ್ ಇಂದು ಬಿಕೋ ಎನ್ನುತ್ತಿದೆ. ಬೀಚ್ ಪಕ್ಕದ ಹೋಟೆಲ್ ಗಳೂ ಪ್ರವಾಸಿಗರಿಲ್ಲದೆ ಖಾಲಿ ಹೊಡೆಯುತ್ತಿವೆ. ಪಣಂಬೂರು ಬೀಚ್ ಮಾತ್ರವಲ್ಲದೆ ಕಡಲ ತೀರದ ಸೋಮೇಶ್ವರ ಬೀಚ್, ಉಳ್ಳಾಲ ಬೀಚ್, ತಣ್ಣೀರು ಬಾವಿ ಬೀಚ್, ಸುರತ್ಕಲ್ ಬೀಚ್, ಸಸಿಹಿತ್ಲು ಬೀಚ್ ಸೇರಿದಂತೆ ಎಲ್ಲ ಬೀಚ್‍ಗಳು ಪ್ರವಾಸಿಗರಿಲ್ಲದೆ ಬೀಕೋ ಎನ್ನುತ್ತಿವೆ.