Tag: panaji

  • ಸೋನಿಯಾ ಗಾಂಧಿ ಜಾಲಿ ಸೈಕಲ್ ಸವಾರಿ – ಫೋಟೋ ವೈರಲ್

    ಸೋನಿಯಾ ಗಾಂಧಿ ಜಾಲಿ ಸೈಕಲ್ ಸವಾರಿ – ಫೋಟೋ ವೈರಲ್

    ಪಣಜಿ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಸೋನಿಯಾ ಗಾಂಧಿ ಅವರು ವಿಶಾಂತ್ರಿಗಾಗಿ ಗೋವಾಕ್ಕೆ ತೆರಳಿದ್ದು, ಈ ವೇಳೆ ಸೈಕಲ್ ಸವಾರಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೋನಿಯಾ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ವಿಶಾಂತ್ರಿಗೆ ಸೂಚಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದ ಅವರು ಗೋವಾಕ್ಕೆ ವಿಶ್ರಾಂತಿ ಪಡೆಯಲು ಆಗಮಿಸಿದ್ದಾರೆ. ಜನವರಿ ಮೊದಲ ವಾರ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    71 ವರ್ಷದ ಸೋನಿಯಾ ಗಾಂಧಿ ಅವರು ಸತತ 19 ವರ್ಷ ಎಐಸಿಸಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಡಿ.16ರಂದು ತಮ್ಮ ಮಗ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಉಸ್ತುವಾರಿ ವಹಿಸಿದ್ದರು.

  • ಸತತ ನಾಲ್ಕೂವರೆ ಗಂಟೆಗಳ ಬಳಿಕ ಗೋವಾ ಸಮುದ್ರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆ

    ಸತತ ನಾಲ್ಕೂವರೆ ಗಂಟೆಗಳ ಬಳಿಕ ಗೋವಾ ಸಮುದ್ರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆ

    ಬೆಂಗಳೂರು: ಸಮುದ್ರದ ಮಧ್ಯೆ ಬೋಟ್ ಕೆಟ್ಟುನಿಂತ ಪರಿಣಾಮವಾಗಿ ಸತತ ನಾಲ್ಕು ಗಂಟೆಗಳ ಕಾಲ ಸಹಾಯಕ್ಕಾಗಿ ಕಾದು ನಿಂತಿದ್ದ ಕನ್ನಡಿಗರನ್ನು ರಕ್ಷಣೆ ಮಾಡಿರುವ ಘಟನೆ ಗೋವಾದ ರಾಯಬಾಗ್ ಪ್ರದೇಶದಲ್ಲಿ ನಡೆದಿದೆ.

    ನಗರದ ಪೀಣ್ಯ ಪ್ರದೇಶದಿಂದ ಸುಮಾರು 47 ಕನ್ನಡಿಗರು ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಮುದ್ರವನ್ನು ನೋಡಲು ಗೋವಾದ ಪಣಜಿಯ ರಾಯಬಾಗ್ ನ ಸಮುದ್ರಕ್ಕೆ ಬೋಟ್ ನಲ್ಲಿ ಹೋಗುತ್ತಿದ್ದಾಗ  ಪ್ರಯಾಣದ  ಮಧ್ಯೆ ಕೆಟ್ಟು ನಿಂತಿದೆ.

    ಈ ಸಂದರ್ಭದಲ್ಲಿ ಎರಡು ಗಂಟೆಗಳಾದರೂ ಅಲ್ಲಿನ ಸಿಬ್ಬಂದಿ ನೆರವಿಗೆ ಬಾರದೇ ಇದ್ದ ಕಾರಣ ಪ್ರವಾಸಿಗರಲ್ಲಿ ಹೆದರಿಕೆ ಆರಂಭವಾಗಿದೆ. ಬೋಟ್ ನಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಅತಂಕ ಹೆಚ್ಚಳವಾಗಿದೆ. ಅಲ್ಲದೇ ಸಂಜೆಯಾಗುತ್ತಿದ್ದಂತೆ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿದ್ದು, ಅಲೆಗಳ ವೇಗಕ್ಕೆ ಬೇಟ್ ಅಲುಗಾಡತೊಡಗಿ ಚಲಿಸುತ್ತಿದ್ದ ಕಾರಣ ಮತ್ತಷ್ಟು ಅತಂಕ ಉಂಟಾಗಿತ್ತು.

    ಸುಮಾರು ನಾಲ್ಕೂವರೆ ಗಂಟೆಗಳ ಬಳಿಕ ಆ ಪ್ರದೇಶಕ್ಕೆ ತೆರಳಿದ ಮತ್ತೊಂದು ಬೋಟ್ ನಲ್ಲಿದ್ದ ಕನ್ನಡಿಗರು ಇವರ ಧ್ವನಿ ಕೇಳಿ ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ.

  • ವಿಡಿಯೋ: ದರೋಡೆಕೋರನನ್ನು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್ ಮೇಲೆ ಸುತ್ತಿಗೆಯಿಂದ ಹಲ್ಲೆ!

    ವಿಡಿಯೋ: ದರೋಡೆಕೋರನನ್ನು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್ ಮೇಲೆ ಸುತ್ತಿಗೆಯಿಂದ ಹಲ್ಲೆ!

    ಪಣಜಿ: ಎಟಿಎಂಗೆ ನುಗ್ಗಿ ದರೋಡೆ ನಡೆಸಲು ಮುಂದಾಗಿದ್ದ ಕಳ್ಳನನ್ನು ಹಿಡಿಯಲು ಹೋದ ಭದ್ರತಾ ಸಿಬ್ಬಂದಿ ತಲೆಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾದ ಘಟನೆ ಪಣಜಿಯಲ್ಲಿ ನಡೆದಿದೆ.

    ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಎಟಿಎಂ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ದರೋಡೆಕೋರ ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಆತನ ಮುಖ ಸಿಸಿಟಿಯಲ್ಲಿ ಸರಿಯಾಗಿ ಕಂಡಿಲ್ಲ.

    ಸಿಸಿಟಿವಿಯಲ್ಲಿ ಏನಿದೆ?: ಸುಮಾರು 40 ಸೆಕೆಂಡ್ ಇರೋ ಈ ವಿಡಿಯೋದಲ್ಲಿ ದರೋಡೆ ಮಾಡಲೆಂದು ವ್ಯಕ್ತಿಯೊಬ್ಬ ಮುಖ ಕಾಣಿಸದಂತೆ ಮಾಸ್ಕ್ ಹಾಕಿಕೊಂಡು ನುಗ್ಗಿದ್ದನು. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಎಟಿಎಂ ಕೊಠಡಿಯ ಒಳಗೆ ತೆರಳಿ ಯಾವುದೇ ಆಯುಧಗಳಿಲ್ಲದೇ ಆತನ ಮೇಲೆ ದಾಳಿ ಮಾಡಿದ್ದಾರೆ. ತನ್ನ ಕಳ್ಳತನದ ವಿಚಾರ ತಿಳಿದ ಸೆಕ್ಯೂರಿಟಿ ಗಾರ್ಡ್ ಮೇಲೆ ದರೋಡೆಕೋರ ಸುತ್ತಿಗೆಯಿಂದ ಹೊಡೆದಿದ್ದಾನೆ. ಈ ವೇಳೆ ಅವರಿಬ್ಬರ ಮಧ್ಯೆ ಗುದ್ದಾಟ ನಡೆದಿದೆ.

    ಸೆಕ್ಯೂರಿಟಿ ಗಾರ್ಡ್ ಘಟನೆಯಿಂದ ಗಾಯಗೊಂಡ್ರೂ ಕೂಡ ದರೋಡೆಕೋರನ ಮುಖದಲ್ಲಿರೋ ಮಾಸ್ಕ್ ತೆಗೆಯಲು ಪ್ರಯತ್ನಿಸಿದ್ದಾರೆ. ಅಲ್ಲದೇ ಆತನ ಕೈಯಲಿದ್ದ ಸುತ್ತಿಗೆಯನ್ನು ಎಳೆದುಕೊಳ್ಳಲು ಗಾರ್ಡ್ ಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರ ಹಲವು ಬಾರಿ ಸೆಕ್ಯೂರಿಟಿಯ ತೆಲೆಗೆ ಮನಬಂದಂತೆ ಹೊಡೆದಿದ್ದಾನೆ. ಪರಿಣಾಮ ಸೆಕ್ಯೂರಿಟಿ ಕೆಳಗೆ ಬಿದ್ದಿದ್ದಾರೆ. ಆದ್ರೂ ಬಿಡದೆ ಸೆಕ್ಯೂರಿಟಿ ದರೋಡೆಕೋರನ ಮುಖದ ಮೇಲಿದ್ದ ಮಾಸ್ಕ್ ತೆಗೆದಿದ್ದಾರೆ. ತನ್ನ ಮುಖದಲ್ಲಿರೋ ಮಾಸ್ಕ್ ಕಳಚುತ್ತಿದ್ದಂತೆಯೇ ಸೆಕ್ಯುರಿಟಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಸದ್ಯ ಪೊಲೀಸರು ಈ ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು, ದರೋಡಕೋರನಿಗಾಗಿ ಬಲೆಬೀಸಿದ್ದಾರೆ.

  • ಮೊಬೈಲ್ ಕೊಡಿಸಲು ತಂದೆ ನಿರಾಕರಿಸಿದ್ದಕ್ಕೆ ಮಗಳು ಆತ್ಮಹತ್ಯೆ

    ಮೊಬೈಲ್ ಕೊಡಿಸಲು ತಂದೆ ನಿರಾಕರಿಸಿದ್ದಕ್ಕೆ ಮಗಳು ಆತ್ಮಹತ್ಯೆ

    ಪಣಜಿ: ತಂದೆ ಮೊಬೈಲ್ ಫೋನ್ ಕೊಡಿಸಲು ನಿರಾಕರಿಸಿದ್ದಕ್ಕೆ 17 ವರ್ಷದ ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪಣಜಿಯ ಸಂಖಾಲಿಮ್ ಗ್ರಾಮದಲ್ಲಿ ನಡೆದಿದೆ.

    ಮಗಳು ಅಪ್ಪನ ಬಳಿ ಮಂಗಳವಾರ ರಾತ್ರಿ ಫೋನ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಳು. ಆದರೆ ತಂದೆ ಈಗಲೇ ಫೋನ್ ಬೇಡ ಎಂದು ಹೇಳಿ ನಿರಾಕರಿಸಿದ್ದರು. ಬುಧವಾರ ಬೆಳಗ್ಗೆ ಮನೆಯಲ್ಲಿ ತಾಯಿ ಸ್ನಾನ ಮಾಡಲು ಹೋಗಿದ್ದು ಹಾಗೂ ತಂದೆ ತನ್ನ ಹಿರಿಯ ಮಗಳನ್ನು ಕಾಲೇಜಿಗೆ ಬಿಟ್ಟು ಬರಲು ಹೋಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ತಾಯಿ ಸ್ನಾನ ಮುಗಿಸಿ ಬಂದಾಗ ಮಗಳು ಧಗಧಗ ಎಂದು ಬೆಂಕಿಯಲ್ಲಿ ಉರಿಯುತ್ತಿದ್ದುದ್ದನ್ನು ನೋಡಿ ಗಾಬರಿಗೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಕೊನೆಗೆ ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ಆದರೆ ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬಿಕೊಲಿಮ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

  • ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಬ್ಯಾನ್!

    ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಬ್ಯಾನ್!

    ಪಣಜಿ: ಗೋವಾಕ್ಕೆ ನೀವು ಮುಂದೆ ಹೋಗ್ತೀರಾ. ಹಾಗಾದ್ರೆ ಹುಷಾರಾಗಿರಿ. ಹೌದು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಲು ಗೋವಾ ಸರ್ಕಾರ ಮುಂದಾಗಿದೆ.

    ಕೆಲವರು ರಸ್ತೆ ಮಾರ್ಗದಲ್ಲಿ ಕುಡಿಯುತ್ತಾ ಕುಳಿತಿರುತ್ತಾರೆ ಜೊತೆಗೆ ಕುಡಿದ ನಂತರ ಬಾಟಲ್‍ಗಳನ್ನು ರಸ್ತೆಯಲ್ಲಿಯೇ ಬಿಸಾಡುತ್ತಾರೆ. ಇದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಈ ಸಮಸ್ಯೆ ನಿವಾರಣೆಗಾಗಿ ಸಭೆ ಕರೆದು ಅಧಿಕೃತ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    `ಯಾರು ಕುಡಿಯಲು ಬಯಸುತ್ತಾರೋ ಅವರು ಬಾರ್‍ನ ಒಳಗೆ ಕುಡಿಯಲಿ. ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ’. ಮುಂದಿನ 15 ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ನಿಷೇಧಿಸುವಂತೆ ನಾನು ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದು `ಸ್ವಚ್ಛ ಭಾರತ’ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

    ಮದ್ಯಪಾನ ಅಂಗಡಿಗಳು ಸಮೀಪದ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯಲು ಅವಕಾಶ ಮಾಡಿಕೊಟ್ಟರೆ ಅಂತಹ ಶಾಪ್‍ಗಳಿಗೆ ಸರ್ಕಾರ ದಂಡ ವಿಧಿಸಲಾಗುತ್ತದೆ ಅಥವಾ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

    ಕಳೆದ ವರ್ಷ ಗೋವಾ ಸರ್ಕಾರ 1964ರ ಅಬಕಾರಿ ಸುಂಕ ಕಾಯ್ದೆಗೆ ತಿದ್ದುಪಡಿ ಮಾಡಿ ಕೆಲವು ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕಡಲ ತೀರಗಳಲ್ಲಿ ಮದ್ಯಪಾನವನ್ನು ನಿಷೇಧಿಸಿತ್ತು. ಅಷ್ಟೇ ಅಲ್ಲದೇ ಈ ಸ್ಥಳಗಳಲ್ಲಿ ಮದ್ಯಪಾನ ಮಾಡಿದವರಿಗೆ ದಂಡ ವಿಧಿಸುವ ಅಂಶವನ್ನು ಸೇರಿಸಿತ್ತು.

    ಮೇ ತಿಂಗಳಿನಿಂದ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಕೆಲವರನ್ನು ಬಂಧಿಸುತ್ತಿದ್ದಾರೆ.

  • ಕರ್ನಾಟಕದ ಹೆಚ್ಚಿನ ಜನರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ: ಶಿವಸೇನೆ

    ಕರ್ನಾಟಕದ ಹೆಚ್ಚಿನ ಜನರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ: ಶಿವಸೇನೆ

    ಪಣಜಿ: ಕರ್ನಾಟಕದ ವಿರುದ್ಧ ಇಲ್ಲ ಸಲ್ಲದ ವಿಚಾರಗಳನ್ನು ಎತ್ತಿ ಕ್ಯಾತೆ ತೆಗೆಯುತ್ತಿರುವ ಶಿವಸೇನೆ ಈಗ ರಾಷ್ಟ್ರಗೀತೆ ವಿಚಾರದಲ್ಲಿ ಕ್ಯಾತೆ ತೆಗೆದಿದೆ. ಕರ್ನಾಟಕದ ಹಲವಾರು ಜನರಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ ಎಂದು ಶಿವಸೇನೆಯ ಮುಖ್ಯಸ್ಥ ಶಿವಪ್ರಸಾದ್ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಗೋವಾದ ಜನ ತುಂಬಾ ದೇಶಭಕ್ತರು. ಅಲ್ಲಿ ತುಂಬಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ರಾಷ್ಟ್ರಗೀತೆ ಹಾಡುತ್ತಾರೆ. ಆದ್ರೆ ಕರ್ನಾಟಕದ ಹಲವಾರು ಜನರಿಗೆ ರಾಷ್ಟ್ರಗೀತೆ ಹಾಡವುದು ಹೇಗೆ ಎನ್ನುವುದೇ ಗೊತ್ತಿಲ್ಲ. ನಮ್ಮ ರಾಷ್ಟ್ರಪಿತ ಯಾರು ಎಂಬುದು ಅವರಿಗೆ ಮೊದಲೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಮಹಾದಾಯಿ ನೀರು ಹಂಚಿಕೆಯ ಸಂಬಂಧಿಸಿದಂತೆ ಗೋವಾ-ಕರ್ನಾಟಕ ನಡುವಿನ ವಿವಾದದ ಹಿನ್ನೆಲೆಯ ಸಂದರ್ಭದಲ್ಲಿ ಶಿವಪ್ರಸಾದ್ ಜೋಶಿ ಈ ಮಾತನ್ನು ಹೇಳಿದ್ದಾರೆ.

    ಮುತಾಲಿಕ್ ಬಗ್ಗೆ ಮೆಚ್ಚುಗೆ:
    ಕರ್ನಾಟಕದಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಮುತಾಲಿಕ್ ಅವರನ್ನು ಮಹಿಳೆಯರ ರಕ್ಷಕ. ಮುತಾಲಿಕ್ ಅವರು ಕರ್ನಾಟಕದಲ್ಲಿ ಅಪಾರ ಕೆಲಸ ಮಾಡಿರುವ ಬಗ್ಗೆ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2009ರಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಪಬ್‍ಗೆ ಹೋಗಿ ಅಲ್ಲಿಯ ಸಹೋದರಿಯರಿಗೆ ಇದು ನಮ್ಮ ಸಂಸ್ಕೃತಿ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ಯುವತಿಯ ಪೋಷಕರ ತಂದೆ-ತಾಯಿ ಅವರೇ ಬಂದು ಶ್ರೀರಾಮ ಸೇನೆ ಕಾರ್ಯಕರ್ತರಿಗೆ ಅವರಿಗೆ ಧನ್ಯವಾದ ಹೇಳಿದ್ದರು. ಪಬ್‍ಗಳು ನಿಷೇಧಿಸಬೇಕು ಎಂದು ಶಿವಸೇನೆ ಹೇಳುತ್ತಿಲ್ಲ. ಆದ್ರೆ ತಡರಾತ್ರಿಗಳಲ್ಲೂ ಪಬ್‍ಗಳು ತರೆದಿರುವುದಕ್ಕೆ ವಿರೋಧವಿದೆ ಎಂದು ಶಿವಪ್ರಸಾದ್ ಜೋಶಿ ಹೇಳಿದರು.

     

  • ನೀರಿಗೆ ಹಾರಿದ ವ್ಯಕ್ತಿಯನ್ನು ನೋಡಲು ಜನ ಸೇರಿದ್ದ ವೇಳೆ ಸೇತುವೆ ಕುಸಿತ: ಇಬ್ಬರ ದುರ್ಮರಣ

    ನೀರಿಗೆ ಹಾರಿದ ವ್ಯಕ್ತಿಯನ್ನು ನೋಡಲು ಜನ ಸೇರಿದ್ದ ವೇಳೆ ಸೇತುವೆ ಕುಸಿತ: ಇಬ್ಬರ ದುರ್ಮರಣ

    ಪಣಜಿ: ದಕ್ಷಿಣ ಗೋವಾದ ಸಾನ್ವೋರ್‍ಡೆಮ್ ಹಾಗೂ ಕೊರ್ಕೊರೆಮ್ ಗ್ರಾಮದ ಮಧ್ಯೆ ನಿರ್ಮಿಸಲಾದ ಪೋರ್ಚುಗೀಸ್ ಕಾಲದ ಕಬ್ಬಿಣದ ಸೇತುವೆ ಕುಸಿದು ಮಹಾ ದುರಂತವೊಂದು ಗುರುವಾರ ಸಂಭವಿಸಿದೆ.

    ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ನೋಡಲು ಜನ ಸೇರಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಘಟನೆ ಸಂಭವಿಸಿದ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಲ್ಲಿ 50 ಮಂದಿ ನದಿಪಾಲಾದವರ 20 ಮಂದಿ ಈಜಿ ದಡ ಸೇರಿದ್ದರೆ, 14 ಮಂದಿಯನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    15ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮರೋಪಾದಿಯಲ್ಲಿ ರಾತ್ರಿಯಿಡಿ ಕಾರ್ಯಾಚರಣೆ ನಡೆಯಿತು. ಎರಡು ಮೃತದೇಹವನ್ನು ಪತ್ತೆಹಚ್ಚಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಇದೀಗ ಹೆಚ್ಚಿನ ಕಾರ್ಯಾಚರಣೆಗಾಗಿ ಭಾರತೀಯ ನೌಕಾದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಕಾರ್ಯಚರಣೆಯನ್ನು ಪರಿಶೀಲಿಸುತ್ತಿದ್ದಾರೆ.

    ಸೇತುವೆ ಕುಸಿತಕ್ಕೂ ಮುನ್ನ ಅದೇ ಸೇತುವೆಯಿಂದ ವ್ಯಕ್ತಿಯೋರ್ವ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ನೀರಿಗೆ ಬಿದ್ದ ಆ ವ್ಯಕ್ತಿಯನ್ನು ನೋಡಲು ಸುಮಾರು 50 ಜನ ಸೇತುವೆ ಒಂದು ತುದಿಗೆ ಬಂದು ನಿಂತಿದ್ದಾರೆ. ಮೊದಲೇ ಶಿಥಿಲಗೊಂಡಿದ್ದ ಸೇತುವೆ ಅಷ್ಟು ಜನರ ಭಾರ ತಾಳಲಾರದೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.