Tag: panaji

  • ತನ್ನಂತೆ ಎಲ್ಲರೂ ಭ್ರಷ್ಟರು ಅಂದುಕೊಂಡಿದ್ದಾರೆ – ಡಿಕೆಶಿಗೆ ಸಿಟಿ ರವಿ ಟಾಂಗ್

    ತನ್ನಂತೆ ಎಲ್ಲರೂ ಭ್ರಷ್ಟರು ಅಂದುಕೊಂಡಿದ್ದಾರೆ – ಡಿಕೆಶಿಗೆ ಸಿಟಿ ರವಿ ಟಾಂಗ್

    ಪಣಜಿ: ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಾಯಲ್ಲಿ ಬರುವ ಭ್ರಷ್ಟಾಚಾರ ಮಾತಿಗೂ ಏನೂ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.

    ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇತ್ತು ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್‍ರವರೇ ಸ್ವತಃ ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬೇಲ್‍ನಲ್ಲಿರುವವರು. ಇಂತವರ ಬಾಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತು. ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ ಡಿಕೆಶಿ ಬಾಯಲ್ಲಿ ಬರುವ ಭ್ರಷ್ಟಾಚಾರ ಮಾತಿಗೂ ಏನೂ ವ್ಯತ್ಯಾಸವಿಲ್ಲ. ಎರಡೂ ಒಂದೇ ರೀತಿ ಇದೆ. ತನ್ನಂತೆಯೇ ಎಲ್ಲರೂ ಭ್ರಷ್ಟರಿದ್ದಾರೆ ಅಂತಾ ಅವರು ಭಾವಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದನ್ನೂ ಓದಿ: ಹೊಸ ವೈರಸ್‌ NeoCoV ಬಗ್ಗೆ ಚೀನಾ ಎಚ್ಚರ – ಮೂವರು ಸೋಂಕಿತರಲ್ಲಿ ಒಬ್ಬರು ಸಾವು!

    ಗೋವಾದಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್, ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಒಳ್ಳೆಯ ಸರ್ಕಾರ ಕೊಟ್ಟಿದೆ. ಇದು ಹಳೆ ಗೋವಾ ಅಲ್ಲಾ ಹೊಸ ಗೋವಾ, ಅಭಿವೃದ್ಧಿ ಆಗುತ್ತಿರುವ ರಾಜ್ಯವಾಗಿದೆ. ಗೋವಾದಲ್ಲಿ ಫ್ಲೈಓವರ್ ನೋಡಲು ಸಿಕ್ಕಿದ್ದು, ಅದು ಬಿಜೆಪಿ ಸರ್ಕಾರ ಕೊಟ್ಟಂತ ಸಾಧನೆಯಾಗಿದೆ. ಆ.15ರಂದು ಲೋಕಾರ್ಪಣೆಯಾಗುವ ಹೊಸ ಏರ್‍ಪೋರ್ಟ್ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಐಐಟಿ, ವೈದ್ಯಕೀಯ ಕಾಲೇಜು ಇವೆಲ್ಲ ಬಿಜೆಪಿ ಸರ್ಕಾರದ ಕೊಡುಗೆಗಳೇ ಎಂದರು. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    ಕಾಂಗ್ರೆಸ್ ಅಂದರೆ ಭ್ರಷ್ಟಾಚಾರದ ಕೂಪವಿದ್ದಂತೆ. ಅವರ ವಂಶವಾದ ಬೆಳೆಸುವಂತಹ ಜನಸಾಮಾನ್ಯರಿಗೆ ಅವಕಾಶ ನೀಡದಂತ ಪಕ್ಷವಾಗಿದೆ. ಆದರೆ ನಮ್ಮ ಪಕ್ಷ ಸಾಮಾನ್ಯ ಜನರಲ್ಲಿ ರಾಜಕೀಯ ನಾಯಕತ್ವ ಬೆಳೆಸುತ್ತೆ. ಹೀಗಾಗಿ ಕಾಂಗ್ರೆಸ್‍ನಿಂದ ಗೋವಾ ಜನತೆ ಪಾಠ ಹೇಳಿಸಿಕೊಳ್ಳುವಂತ ಸ್ಥಿತಿಯಲ್ಲಿ ಇಲ್ಲ. ಶಿವಕುಮಾರ್ ಅವರು ಬರಲಿ, ಇನ್ನೂ ನೂರು ಜನ ಬರಲಿ ಗೋವಾದಲ್ಲಿ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಬಂದ ದಾರಿಗೆ ಸುಂಕ ಇಲ್ಲ ಅಂತಾ ಅವರು ವಾಪಸ್ ಹೋಗಬೇಕು ಎಂದು ಗರಂ ಆದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

    ಪಣಜಿ: ಬಾಲಿವುಡ್ ಕಿರುತೆರೆ ನಾಗಿನ್ ಮೌನಿರಾಯ್ ಇಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮೌನಿ ರಾಯ್ ಇಂದು ಗೋವಾದಲ್ಲಿ ಸೂರಜ್ ನಂಬಿಯಾರ್ ಅವರೊಂದಿಗೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ವಧು ಮೌನಿ ಫೋಟೋವನ್ನ ಗಾಯಕ ಮನ್ಮೀತ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮೌನಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಫೋಟೋದಲ್ಲಿ ಮೌನಿರಾಯ್ ಅವರು ಕೆಂಪು ಮತ್ತು ಚಿನ್ನದ ಕಸೂತಿ ಹೊಂದಿರುವ ಬಿಳಿ ಸೀರೆ ಮತ್ತು ಕಾಂಟ್ರಾಸ್ಟ್ ಕೆಂಪು ಕುಪ್ಪಸವನ್ನು ಧರಿಸಿದ್ದು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್

     

    View this post on Instagram

     

    A post shared by Arjun Bijlani (@arjunbijlani)

    ಮೌನಿ ಮದುವೆ ಫೋಟೋ ಮತ್ತು ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ, ಸೂರಜ್ ಕುರ್ತಾ ಮತ್ತು ಬಿಳಿ ಧೋತಿಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ನಾಗಿನ್ ಧಾರವಾಹಿಯ ಸಹನಟ ಅರ್ಜುನ್ ಬಿಜ್ಲಾನಿ, ಮೌನಿ ಮತ್ತು ಸೂರಜ್ ವರ್ಮಲಾ ಬದಲಾಯಿಸಿಕೊಳ್ಳುವ, ಮಂಗಳಸೂತ್ರ ಕಟ್ಟುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Mouni_Roy ???????? (@imouniroy76)

    ಮೌನಿರಾಯ್ ಅವರು ಮದುವೆಯಾಗುವ ಕೆಲವು ಗಂಟೆಗಳ ಹಿಂದೆ ಸೂರಜ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಸೂರಜ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದರೆ, ಮೌನಿರಾಯ್ ಕೆಂಪು ಬಣ್ಣದ ಸೂಟ್ ಜೊತೆಗೆ ದುಪ್ಪಟ್ಟಾ ತೊಟ್ಟು ಮಿಂಚಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

    ನಿನ್ನೆ ಮೌನಿ ಅದ್ದೂರಿಯಾಗಿ ಹಲ್ದಿ ಮತ್ತು ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಈ ಸಮಾರಂಭದ ಅಮೂಲ್ಯ ಕ್ಷಣಗಳನ್ನು ಅರ್ಜುನ್ ಬಿಜ್ಲಾನಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

  • ಕಾಂಗ್ರೆಸ್‍ನಿಂದ ಪಕ್ಷಾಂತರವಾದ್ರೆ ಮತ್ತೆ ವಾಪಸ್ ಪಕ್ಷಕ್ಕೆ ಸೇರಿಸಲ್ಲ: ಚಿದಂಬರಂ

    ಕಾಂಗ್ರೆಸ್‍ನಿಂದ ಪಕ್ಷಾಂತರವಾದ್ರೆ ಮತ್ತೆ ವಾಪಸ್ ಪಕ್ಷಕ್ಕೆ ಸೇರಿಸಲ್ಲ: ಚಿದಂಬರಂ

    ಪಣಜಿ: ಕಾಂಗ್ರೆಸ್‍ನಿಂದ ಪಕ್ಷಾಂತರಗೊಂಡರೆ ಅವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಗೋವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಖಡಕ್ ಆಗಿ ಸೂಚಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಚುನಾವಣೆಗೆ ಸ್ಪರ್ಧಿಸುವ 37 ಅಭ್ಯರ್ಥಿಗಳ ಪೈಕಿ 36 ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದ್ದೇವೆ. ಇನ್ನೊಂದು ಸ್ಥಾನಕ್ಕೆ ಅಭ್ಯರ್ಥಿಯ ಹೆಸರನ್ನು ಸೂಚಿಸಬೇಕು. ಅದನ್ನು ಶೀಘ್ರದಲ್ಲೇ ಘೋಷಿಸುತ್ತೇವೆ ಎಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ನಾನು ಉನ್ನತ ಸ್ಥಾನವನ್ನು ಹೊಂದಿದ್ದೇನೆ. ಕಾಂಗ್ರೆಸ್‍ನಿಂದ ಪಕ್ಷಾಂತರಗೊಂಡವರನ್ನು ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದರು.

    2007ರ ಚುನಾವಣೆಯಲ್ಲಿ ಗೋವಾ ಅತಂತ್ರವಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನದಲ್ಲಿದ್ದರೂ ಸರ್ಕಾರ ರಚಿಸುವಷ್ಟು ಸ್ಥಾನವನ್ನು ಹೊಂದಿರಲಿಲ್ಲ. ಆದರೆ ಕಾಂಗ್ರೆಸ್‍ನ 17 ಶಾಸಕರಲ್ಲಿ 15 ಶಾಸಕರು ಬಿಜೆಪಿಯನ್ನು ಸೇರಿ ಸರ್ಕಾರ ರಚಿಸಿದ್ದರು. ಇದರಿಂದ ಕಾಂಗ್ರೆಸ್ ಭಾರೀ ಮುಖಭಂಗವನ್ನು ಅನುಭವಿಸಿತ್ತು. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    ಈ ಬಾರಿಯ ಗೋವಾ ಚುನಾವಣೆ ಫೆ.14 ರಂದು ನಡೆಯಲಿದ್ದು, ಮಾ. 10ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದೆ. ಈಗಾಗಲೇ ಬಿಜೆಪಿಯೂ ತಮ್ಮ ಸ್ಪರ್ಧಿಯನ್ನು ಘೋಷಿಸಿದ್ದು, ಪ್ರಚಾರವನ್ನು ಆರಂಭಿಸಿದೆ. ಇದನ್ನೂ ಓದಿ: NDRF ಟ್ವಿಟ್ಟರ್ ಖಾತೆ ಹ್ಯಾಕ್

  • ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

    ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

    ಪಣಜಿ: ಭಾರತವು ಲಸಿಕೆಯಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸುತ್ತಿರುವುದನ್ನು ನೋಡಿ ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

    ಲಸಿಕೆ ಪಡೆದ ನಂತರ ಜ್ವರ ಬಂದರೆ ಅದನ್ನು ಅಡ್ಡ ಪರಿಣಾಮವೆಂದು ಜನರು ಕರೆಯುತ್ತಾರೆ. ನನ್ನ ಜನ್ಮದಿನದಂದು 2.5 ಕೋಟಿ ಭಾರತೀಯರಿಗೆ ಲಸಿಕೆ ನೀಡಲಾಗಿದೆ. ಇದನ್ನು ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ ಎನ್ನುವ ಮೂಲಕ ವಿಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ಮೋದಿ ಬಗ್ಗೆ ಸ್ವಾಮಿ ವ್ಯಂಗ್ಯ – ಕುದುರೆಗೆ ನೀರು ಕುಡಿಯುವಂತೆ ಮಾಡೋದು ಹೇಗೆ?

    ನನ್ನ 71ನೇ ಜನ್ಮದಿನದಂದು 2.5 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಲಾಗಿದೆ. ಇದು ನನಗೆ ಮರೆಯಲಾಗದ ಹಾಗೂ ಭಾವನಾತ್ಮಕ ದಿನವೆಂದು ನರೇಂದ್ರ ಮೋದಿ ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರನ್ನು ಸ್ಮರಿಸಿರುವ ಮೋದಿ, ನಿಮ್ಮ ಪ್ರಯತ್ನಗಳಿಂದ ಭಾರತ ಒಂದೇ ದಿನದಲ್ಲಿ 2.5 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಿ ವಿಶ್ವ ದಾಖಲೆ ಮಾಡಿದೆ. ಈ ಸಾಧನೆಯನ್ನು ಬಲಿಷ್ಠ ರಾಷ್ಟ್ರಗಳು ಸಹ ಮಾಡಲಾಗಲಿಲ್ಲ ಎಂದು ಹೇಳಿದ್ದಾರೆ.  ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?

    ದೇಶವು ನಿನ್ನೆ ಕೋವಿನ್ ಡ್ಯಾಶ್‍ಬೋರ್ಡ್ ಅನ್ನು ಹೇಗೆ ನೋಡಿತು ಎಂಬುದು ನನಗೆ ಗೊತ್ತು. ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಲಸಿಕೆ, ಪ್ರತಿ ನಿಮಿಷಕ್ಕೆ 26 ಸಾವಿರ ವ್ಯಾಕ್ಸಿನೇಷನ್‍ಗಳು ನಿನ್ನೆ ನಡೆದಿದೆ. ಈ ಪ್ರಯತ್ನಕ್ಕಾಗಿ ದೇಶದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಡಳಿತದಲ್ಲಿರುವ ಜನರನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಈ ಕೆಲಸ ದೇಶದ ಮಾನವಶಕ್ತಿಯನ್ನು ದೇಶದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಜನ್ಮದಿನಗಳು ಬಂದು ಹೋಗುತ್ತವೆ. ನಾನು ಇಂತಹ ವಿಷಯಗಳಿಂದ ದೂರ ಉಳಿದಿದ್ದೇನೆ. ಈ ಬಾರಿಯ ಜನ್ಮದಿನವನ್ನು ಮಾತ್ರ ಎಂದಿಗೂ ಮರೆಯಲಾರೆ ಎಂದು ಭಾವನಾತ್ಮಕವಾಗಿ ಮೋದಿ ತಿಳಿಸಿದ್ದಾರೆ.

     

  • ನಾಳೆಯಿಂದ ಗೋವಾಕ್ಕೆ ಬಸ್ ಸಂಚಾರ ಆರಂಭ

    ನಾಳೆಯಿಂದ ಗೋವಾಕ್ಕೆ ಬಸ್ ಸಂಚಾರ ಆರಂಭ

    ಹುಬ್ಬಳ್ಳಿ: ಅವಳಿ ನಗರದ ಸಾರ್ವಜನಿಕರು ಬಹುದಿನಗಳಿಂದ ಕಾಯುತ್ತಿದ್ದ ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಸುಗಳ ಸಂಚಾರವನ್ನು ಶನಿವಾರದಿಂದ ಮತ್ತೆ ಆರಂಭಿಸಲಾಗುತ್ತದೆ.

    ಗೋವಾಕ್ಕೆ ತೆರಳುವ ಬಸ್ಸುಗಳು ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಲಾಕ್‍ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿದಿನ ಪಣಜಿಗೆ ಒಂದು ರಾಜಹಂಸ ಮತ್ತು 8 ವೇಗಧೂತ, ವಾಸ್ಕೋಗೆ ಮತ್ತು ಮಡಗಾಂವಗೆ ತಲಾ 1 ಬಸ್ಸು ಸೇರಿ ಒಟ್ಟು 11 ಬಸ್ಸುಗಳು ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದವು.

    ಮೊದಲ ಹಂತದಲ್ಲಿ ಪಣಜಿಗೆ ನಾಲ್ಕು (1 ರಾಜಹಂಸ, 3 ವೇಗಧೂತ) ಹಾಗೂ ವಾಸ್ಕೋ ಮತ್ತು ಮಡಗಾಂವಗೆ ತಲಾ ಒಂದು ಬಸ್ ಸಂಚಾರವನ್ನು ಆರಂಭಿಸಲಾಗಿದೆ.

    ಪಣಜಿಗೆ ಹೋಗುವ ರಾಜಹಂಸ ಬಸ್ಸು ಬೆಳಗ್ಗೆ 8 ಗಂಟೆಗೆ ಮತ್ತು ವೇಗಧೂತ ಬಸ್ಸುಗಳು ಬೆಳಿಗ್ಗೆ 8:30 ಮತ್ತು 10:30 ಹಾಗೂ ರಾತ್ರಿ 11:45ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತವೆ. ಪಣಜಿಯಿಂದ ಹುಬ್ಬಳ್ಳಿಗೆ ಬರುವ ರಾಜಹಂಸ ಬಸ್ಸು ಮಧ್ಯಾಹ್ನ 2:30ಕ್ಕೆ ವೇಗಧೂತ ಬಸ್ಸುಗಳು ಬೆಳಿಗ್ಗೆ 10:30, ಮಧ್ಯಾಹ್ನ 3 ಗಂಟೆಗೆ ಮತ್ತು ಸಂಜೆ 5:15ಕ್ಕೆ ಪಣಜಿಯಿಂದ ಹೊರಡುತ್ತವೆ. ಈ ಬಸ್ಸುಗಳು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಸಂಚರಿಸುತ್ತವೆ.

    ಮಡಗಾಂವಗೆ ಹೋಗುವ ಬಸ್ಸು ಬೆಳಿಗ್ಗೆ 8:30ಕ್ಕೆ ಹುಬ್ಬಳ್ಳಿಯಿಂದ ಹೊರಟು ಕಲಘಟಗಿ, ಯಲ್ಲಾಪುರ, ಅಂಕೋಲಾ, ಕಾರವಾರ, ಸದಾಶಿವಗಡ, ಕಾಣಕೋಣ ಮಾರ್ಗವಾಗಿ ಮಧ್ಯಾಹ್ನ 2:30ಕ್ಕೆ ಮಡಗಾಂವ ತಲುಪುತ್ತದೆ. ಮಧ್ಯಾಹ್ನ 3:00ಕ್ಕೆ ಮಡಗಾಂವನಿಂದ ಹೊರಟು ರಾತ್ರಿ 9 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತದೆ. ವಾಸ್ಕೊಗೆ ಹೋಗುವ ಬಸ್ಸು ರಾತ್ರಿ 12:30ಕ್ಕೆ ಹುಬ್ಬಳ್ಳಿಯಿಂದ ಹೊರಟು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಬೆಳಿಗ್ಗೆ 06 ಗಂಟೆಗೆ ವಾಸ್ಕೊ ತಲುಪುತ್ತದೆ. ವಾಸ್ಕೊದಿಂದ ಮಧ್ಯಾಹ್ನ 1:30ಕ್ಕೆ ಹೊರಟು ಹುಬ್ಬಳ್ಳಿಗೆ ಸಂಜೆ 7:30ಕ್ಕೆ ಆಗಮಿಸುತ್ತದೆ.

    ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

  • ಅಪ್ರಾಪ್ತೆ ಪ್ರೇಯಸಿಯ ನಿರ್ಧಾರದಿಂದ ಸಿಟ್ಟಾಗಿ ಕೊಂದೇ ಬಿಟ್ಟ

    ಅಪ್ರಾಪ್ತೆ ಪ್ರೇಯಸಿಯ ನಿರ್ಧಾರದಿಂದ ಸಿಟ್ಟಾಗಿ ಕೊಂದೇ ಬಿಟ್ಟ

    – ವಾಟರ್ ಟ್ಯಾಂಕ್ ನಿಯಂತ್ರಣ ಕೊಠಡಿಯಲ್ಲಿ ಕೊಲೆ
    – ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ ಹುಡುಗಿ ಮಿಸ್ಸಿಂಗ್
    – ಗದಗ್ ಮೂಲದ ಆರೋಪಿ

    ಪಣಜಿ: ಮಾಜಿ ಪ್ರಿಯಕರನೊಬ್ಬ ಅಪ್ರಾಪ್ತೆ ಗೆಳತಿಯ ನಿರ್ಧಾರದಿಂದ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವ ಘಟನೆ ಗೋವಾದಲ್ಲಿ ನಡೆದಿದೆ.

    ಈ ಘಟನೆ ಪೋಂಡಾ ಪಟ್ಟಣದ ಸಮೀಪದ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಮನ್ಸೂರ್ ಹುಸೇನ್ ಶೇಖ್ (22) ಎಂದು ಗುರುತಿಸಲಾಗಿದೆ. ಈತ ತನ್ನ 17 ವರ್ಷದ ಪ್ರಿಯತಮೆಯನ್ನು ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ಮೃತ ಹುಡುಗಿ ಗೋವಾದ ಉಸ್ಗಾವೊ ನಿವಾಸಿಯಾಗಿದ್ದು. ಏಪ್ರಿಲ್ 13 ರಂದು ಹುಡುಗಿ ಪೋಂಡಾದ ಉಪ ಜಿಲ್ಲಾಸ್ಪತ್ರೆಗೆ ಹೋಗಲು ಮನೆಯಿಂದ ಹೊರಟಿದ್ದಾಳೆ. ಆದರೆ ಆಕೆ ಮತ್ತೆ ಹಿಂದಿರುಗಿ ಮನೆಗೆ ವಾಪಸ್ ಬಂದಿಲ್ಲ. ಆಕೆಯ ಕುಟುಂಬದವರು ಆತಂಕಗೊಂಡು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಹುಡುಗಿ ಪತ್ತೆಯಾಗಿಲ್ಲ. ಕೊನೆಗೆ ಪೋಷಕರು ಪೋಂಡಾ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದ್ದಾರೆ.

    ಇತ್ತ ಗೋವಾದ ಬೋರಿಮ್ ಪ್ರದೇಶದಲ್ಲಿ ಗೋಡಂಬಿ ಕೃಷಿಕರು ತೋಟದಲ್ಲಿ ಬಿದ್ದ ಗೋಡಂಬಿಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದರು. ಆಗ ಕೃಷಿಕರಿಗೆ ಏನೋ ದುರ್ವಾಸನೆ ಬಂದಿದೆ. ನಂತರ ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿ ದುರ್ವಾಸನೆ ಬರುತ್ತಿರುವುದು ತಿಳಿದುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿಯಲ್ಲಿದ್ದ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹ ಅಪ್ರಾಪ್ತೆಯದ್ದಾಗಿದ್ದು, ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹುಡುಗಿಯಾಗಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ಆಕೆಯ ಮಾಜಿ ಗೆಳೆಯ ಕೊಲೆ ಮಾಡಿದ್ದಾನೆ ಎಂದು ತನಿಖಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಲ್ಲದೇ ನಾಪತ್ತೆಯಾಗಿದ್ದ 17 ವರ್ಷದ ಹುಡುಗಿ ಎಂದು ತಿಳಿದುಬಂದಿದೆ. ಆರೋಪಿಯನ್ನು ಕರ್ನಾಟಕದ ಗದಗ ಜಿಲ್ಲೆಯ ಮನ್ಸೂರ್ ಹುಸೇನ್ ಶೇಖ್ ಎಂದು ಗುರುತಿಸಲಾಗಿದೆ.

    ಏಪ್ರಿಲ್ 13 ರಂದು ಮೃತ ಹುಡುಗಿ ಮತ್ತು ಆರೋಪಿ ಶೇಖ್ ಬೋರಿಮ್‍ಗೆ ಹೋಗಿದ್ದರು. ಆರೋಪಿ ಮತ್ತು ಮೃತ ಹುಡುಗಿ ಇಬ್ಬರು ಈ ಹಿಂದೆ ಪ್ರೀತಿಸುತ್ತಿದ್ದರು. ಮಾತನಾಡಬೇಕು ಎಂದು ಕರೆದುಕೊಂಡು ಹೋಗಿದ್ದ. ಆದರೆ ಮೃತ ಹುಡುಗಿ ಅವನಿಂದ ದೂರವಾಗಿದ್ದಳು. ಈ ನಿರ್ಧಾರದಿಂದ ಆರೋಪಿ ಕೋಪಗೊಂಡಿದ್ದನು. ಅಲ್ಲದೇ ಪ್ರೇಯಸಿಯ ನಿರ್ಧಾರವನ್ನು ನಿರಾಕರಿಸಿ, ಆಕೆಯ ಮನವೊಲಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಮೃತ ಹುಡುಗಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಕೋಪಗೊಂಡು ಆರೋಪಿ ಶೇಖ್ ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಆರೋಪಿ ಗೋವಾದ ಹವೇಲಿ-ಕರ್ಟಿಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

  • ರಸ್ತೆಯ ಬದಿಯಲ್ಲಿರೋ ತೆಂಗಿನ ಮರಗಳ ಜೊತೆ ಸೆಲ್ಫಿ ತೆಗೆದ್ರೆ 500 ರೂ. ಚಾರ್ಜ್

    ರಸ್ತೆಯ ಬದಿಯಲ್ಲಿರೋ ತೆಂಗಿನ ಮರಗಳ ಜೊತೆ ಸೆಲ್ಫಿ ತೆಗೆದ್ರೆ 500 ರೂ. ಚಾರ್ಜ್

    ಪಣಜಿ: ರಸ್ತೆಯ ಬದಿಯಲ್ಲಿರುವ ಮರಗಳ ಫೋಟೋವನ್ನು ನೀವು ತೆಗೆದಿರಬಹುದು. ಆದರೆ ಗೋವಾದ ಗ್ರಾಮವೊಂದರಲ್ಲಿ ರಸ್ತೆ ಬದಿಯಲ್ಲಿರುವ ತೆಂಗಿನ ಮರಗಳ ಫೋಟೋ ಕ್ಲಿಕ್ಕಿಸಬೇಕಾದರೆ 500 ರೂ. ಶುಲ್ಕ ನೀಡಬೇಕು.

    ಪ್ರವಾಸಕ್ಕೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಇದು ಏನು ಎಂದು ಕೇಳಬಹುದು. ಆದರೆ ಇದು ನಿಜ. ಉತ್ತರ ಗೋವಾದಲ್ಲಿ ಒಂದು ಗ್ರಾಮವಿದೆ. ಇದು ಸ್ವಚ್ಛತೆ ಹಾಗೂ ರಸ್ತೆ ಬದಿಯಲ್ಲಿ ಸಾಲಗಿ ನೆಟ್ಟಿರುವ ತೆಂಗಿನ ಮರಗಳ ಸೌಂದರ್ಯಕ್ಕೆ ಭಾರತದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿ ಬರುವ ಪ್ರವಾಸಿಗರು ಈ ತೆಂಗಿನ ಮರಗಳ 1 ಫೋಟೋ ತೆಗೆದುಕೊಂಡರೆ 100 ರಿಂದ 500 ರೂ.ವರೆಗೆ ಶುಲ್ಕ ಕಟ್ಟಬೇಕು.

    ಹೌದು. ಮಾಜಿ ರಕ್ಷಣಾ ಮಂತ್ರಿ, ದಿವಂಗತ ಮನೋಹರ್ ಪರಿಕ್ಕರ್ ಅವರ ಪೂರ್ವಜರ ಹಳ್ಳಿಯಾದ ಪರ್ರಾ ಗ್ರಾಮದಲ್ಲಿ ಫೋಟೋ ತೆಗೆದರೂ ಶುಲ್ಕ ಕಟ್ಟಬೇಕು. ಪರ್ರಾ ಗ್ರಾಮದ ರಸ್ತೆ ಅಕ್ಕಪಕ್ಕದಲ್ಲಿ ಸಾಲಾಗಿ ತೆಂಗಿನ ಮರಗಳು ಇವೆ. ಜೊತೆಗೆ ಈ ಗ್ರಾಮ ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಗೋವಾದ ಪ್ರಮುಖ ಪ್ರವಾಸಿತಾಣಗಳಲ್ಲಿ ಈ ಗ್ರಾಮವು ಒಂದಾಗಿದೆ.

    ಪರ್ರಾ ಗ್ರಾಮದ ಸುಂದರ ನೋಟಕ್ಕೆ ಮನಸೋಲದವರೇ ಇಲ್ಲ. ಹಲವು ಬಾಲಿವುಡ್, ಹಾಲಿವುಡ್ ಚಿತ್ರಗಳು ಕೂಡ ಪರ್ರಾ ಗ್ರಾಮದಲ್ಲಿ ಚಿತ್ರೀಕರಣಗೊಂಡಿದೆ. ಹೀಗಾಗಿ ಪರ್ರಾ ಗ್ರಾಮ ಪಂಚಾಯ್ತಿ ಇಲ್ಲಿಗೆ ಬರುವ ಪ್ರವಾಸಿಗರಿಂದ ಸ್ವಚ್ಛತಾ ತೆರಿಗೆಯನ್ನು ಸಂಗ್ರಹಿಸುತ್ತದೆ. ಈ ಗ್ರಾಮದಲ್ಲಿ ಪ್ರವಾಸಿಗರು 1 ಫೋಟೋ ತೆಗೆದುಕೊಂಡರೆ 500 ರೂ.ವರೆಗೂ ಗ್ರಾಮ ಪಂಚಾಯ್ತಿ ಶುಲ್ಕ ನಿಗದಿಗೊಳಿಸಿದೆ.

    ಜೊತೆಗೆ ಶುಲ್ಕ ಕಟ್ಟಿದ ಪ್ರವಾಸಿಗರಿಗೆ ರಶೀದಿಯನ್ನು ಕೊಡಲಾಗುತ್ತದೆ. ಅಲ್ಲದೆ ಪ್ರವಾಸಿಗರಿಗೆ ಬೇರೆ ಶುಲ್ಕ, ವಾಣಿಜ್ಯ ಚಿತ್ರೀಕರಣಕ್ಕೆ ಬೇರೆ ಶುಲ್ಕವನ್ನು ಪಂಚಾಯ್ತಿ ನಿಗದಿಗೊಳಿಸಿದೆ. ಆದರೆ ಪರ್ರಾದ ಗ್ರಾಮ ಪಂಚಾಯ್ತಿಯ ಈ ಕ್ರಮಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸೌಂದರ್ಯ ಕಣ್ತುಂಬಿಕೊಂಡು, ಆ ಕ್ಷಣವನ್ನು ಸೆರೆಹಿಡಿದುಕೊಳ್ಳಲು ಪ್ರವಾಸಿಗರು ಬಯಸುತ್ತಾರೆ. ಆದರೆ 1 ಫೋಟೋ ತೆಗೆದುಕೊಳ್ಳಲು ಇಷ್ಟೆಲ್ಲಾ ಶುಲ್ಕ ನಿಗದಿಗೊಳಿಸಿರುವುದು ಸರಿಯಲ್ಲ. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ ಎಂದು ವಿರೋಧಿಸಿದ್ದಾರೆ.

    ಹಾಗೆಯೇ ಈ ಬಗ್ಗೆ ಪ್ರವಾಸಿಗರೊಬ್ಬರು ತಮ್ಮ ಸ್ನೇಹಿರೊಬ್ಬರಿಗೆ ಪರ್ರಾದಲ್ಲಿ ಫೋಟೋ ತೆಗೆದುಕೊಂಡಿದ್ದಕ್ಕೆ ಶುಲ್ಕ ವಿಧಿಸಿ, ರಶೀದಿ ಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರು ಪರ್ರಾದ ಸುಂದರ ರಸ್ತೆಯಲ್ಲಿ ಒಂದೇ ಒಂದು ಫೋಟೋ ತೆಗೆದುಕೊಂಡಿದಕ್ಕೆ ಅವರಿಂದ ಅಲ್ಲಿನ ಪಂಚಾಯ್ತಿ 500 ರೂ. ಶುಲ್ಕ ಪಡೆದಿದೆ. ಇದು ನಿಜಕ್ಕೂ ಗಂಭೀರವಾದ ವಿಚಾರ. ಈ ಕ್ರಮದಿಂದ ಪ್ರವಾಸಿಗರು ಗೋವಾಕ್ಕೆ ಬರಲು ಹಿಂದೇಟು ಹಾಕುವಂತ ಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದಾರೆ.

    ಈ ಬಗ್ಗೆ ಗೋವಾದ ಪ್ರವಾಸ ಮತ್ತು ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸ್ಯಾವಿಯೋ ಅವರು ಪ್ರತಿಕ್ರಿಯಿಸಿ, ಇದು ಪರ್ರಾ ಪಂಚಾಯ್ತಿ ಪ್ರವಾಸಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಹೀಗೆ 1 ಫೋಟೋಗೆ 500 ರೂ. ಶುಲ್ಕ ನಿಗಧಿಗೊಳಿಸಿರುವುದು ತಪ್ಪು. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ. ಈ ರೀತಿ ಶುಲ್ಕವನ್ನು ಪರ್ರಾದಲ್ಲಿ ಚಿತ್ರೀಕರಣ ಅಥವಾ ಖಾಸಗಿ ಫೋಟೋಶೂಟ್ ಮಾಡಿಸುವವರ ಬಳಿ ಪಡೆಯಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪ್ರವಾಸಿಗರ ಬಳಿ ಈ ರೀತಿ ಹಣ ಪಡೆಯುವುದು ಸುಲಿಗೆ ಮಾಡಿದ ಸಮಾನವಾಗುತ್ತೆ ಎಂದು ಕಿಡಿಕಾರಿದ್ದಾರೆ.

    ಪ್ರವಾಸಿಗರ ವಿರೋಧಗಳಿಗೆ ಪರ್ರಾ ಸರ್ಪಂಚ್ ಲೋಬೋ ಅವರು ಪ್ರತಿಕ್ರಿಯಿಸಿ, ನಾವು ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದೇವೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ರಸ್ತೆಗಳಲ್ಲಿ ಕಸಗಳನ್ನು ಎಸೆಯುತ್ತಾರೆ. ಸೀನರಿ ಸುಂದರವಾಗಿದೆ ಎಂದು ರಸ್ತೆ ಮಧ್ಯೆ ವಾಹನ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಇದರಿಂದ ಟ್ರಾಫಿಕ್ ಜ್ಯಾಮ್ ಆಗುತ್ತದೆ. ಈ ಬಗ್ಗೆ ಯಾರೂ ಯೋಚನೆ ಮಾಡಲ್ಲ. ನಾವು ಶುಲ್ಕ ನಿಗಧಿಗೊಳಿಸಿರುವುದನ್ನ ವಿರೋಧಿಸುತ್ತಾರೆ. ಆದರೆ ಪ್ರವಾಸಿಗರು ಗ್ರಾಮಕ್ಕೆ ಭೇಟಿನೀಡಿ ಮಾಡುವ ತೊಂದರೆ ಬಗ್ಗೆ ಯಾರು ಮಾತನಾಡಲ್ಲ. ಅವರ ಹಾವಳಿ ನಿಯಂತ್ರಿಸಲು ನಾವು ಶುಲ್ಕ ನಿಗದಿಗೊಳಿಸಿದ್ದೇವೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

  • ದ್ವಿಶತಕ ಸಿಡಿಸಿ ಸಚಿನ್, ಸೆಹ್ವಾಗ್ ಸಾಲಿಗೆ ಸೇರಿದ ಸಂಜು ಸ್ಯಾಮ್ಸನ್

    ದ್ವಿಶತಕ ಸಿಡಿಸಿ ಸಚಿನ್, ಸೆಹ್ವಾಗ್ ಸಾಲಿಗೆ ಸೇರಿದ ಸಂಜು ಸ್ಯಾಮ್ಸನ್

    ಪಣಜಿ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ತಂಡದ ಯುವ ಆಟಗಾರ ಸಂಜು ಸ್ಯಾಮ್ಸನ್ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದು, ಟೂರ್ನಿಯಲ್ಲಿ ದಾಖಲಾದ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಟೂರ್ನಿಯ ಗ್ರೂಪ್ ‘ಎ’ ನಲ್ಲಿ ಗೋವಾ ತಂಡದ ಎದುರು ಸಂಜು ಸ್ಯಾಮ್ಸನ್ 129 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಗಳ ನೆರವಿನಿಂದ ಅಜೇಯ 212 ರನ್ ಗಳಿಸಿದ್ದಾರೆ. ಆ ಮೂಲಕ ಕಳೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತರಖಂಡ ಆಟಗಾರ ಕರಣ್‍ವೀರ್ ಕೌಶಾಲ್ 202 ರನ್ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲಿ 1 ಶತಕವೂ ದಾಖಲಿಸಿದ ಸಂಜು ಇದಕ್ಕೂ ಮುನ್ನ ನಡೆದ ಟೂರ್ನಿಯಲ್ಲಿ ಏಕೈಕ ಅರ್ಧ ಶತಕ ಗಳಿಸಿದ್ದರು.

    ಇಂದಿನ ಪಂದ್ಯದಲ್ಲಿ ಕೇರಳ ತಂಡ ಮತ್ತೊಬ್ಬ ಆಟಗಾರ ಸಚಿನ್ ಬೇಬಿರೊಂದಿಗೆ ಸ್ಯಾಮ್ಸನ್ 338 ರನ್ ಗಳ ಜೊತೆಯಾಟ ನೀಡಿದ್ದು, ಪರಿಣಾಮ ಕೇರಳ ಪಂದ್ಯದಲ್ಲಿ ನಿಗದಿತ 50 ಓವರ್ ಗಳಲ್ಲಿ 377 ರನ್ ಪೇರಿಸಿತು. ಸಂಜುಗೆ ಸಾಥ್ ನೀಡಿದ ಸಚಿನ್ ಬೇಬಿ ಕೂಡ 135 ಎಸೆತಗಳಲ್ಲಿ 127 ರನ್ ಗಳಿಸಿದ್ದರು.

    ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲಿ ಸಂಜು ಸಿಡಿಸಿದ ಮೊದಲ ದ್ವಿಶಕ ಇದಾಗಿದ್ದು, ಈ ಹಿಂದೆ ಸಚಿನ್, ಸೆಹ್ವಾಗ್, ರೋಹಿತ್ ಶರ್ಮಾ, ಶಿಖರ್ ಧವನ್, ಕರಣ್ ಕೌಶಾಲ್ ಬಳಿಕ ಸ್ಥಾನವನ್ನು ಸಂಜು ಸ್ಯಾಮ್ಸನ್ ಪಡೆದಿದ್ದಾರೆ.

  • ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಪಣಜಿ: 65 ವರ್ಷದ ಕಲಾವಿದರೊಬ್ಬರನ್ನು ತೋಟದ ಕೆಲಸಗಾರ ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೆ ಹೆಣವಾದ ಘಟನೆ ಗೋವಾದಲ್ಲಿ ನಡೆದಿದೆ.

    ಮುಂಬೈ ಮೂಲದ ಚಿತ್ರಕಲಾವಿದರಾದ ಶಿರಿನ್ ಮೋಡಿ(65) ಕೊಲೆಯಾದ ದುರ್ದೈವಿ. ಮನೆಯೊಳಗೆ ಮಾರಕಾಸ್ತ್ರಗಳಿಂದ ಅವರ ತೋಟದ ಮಾಲಿ ಪ್ರಫುಲ್ಲಾ ಶಿರಿನ್‍ರನ್ನು ಕೊಲೆ ಮಾಡಿದ್ದಾನೆ. ಉತ್ತರ ಗೋವಾ ಜಿಲ್ಲೆಯ ಅರಪೊರಾ ಗ್ರಾಮದಲ್ಲಿ ಶಿರಿನ್ ಆರ್ಟ್ ಸ್ಟುಡಿಯೋ ಹೊಂದಿದ್ದರು. ಹೀಗಾಗಿ ಅವರು ಮುಂಬೈ ಬಿಟ್ಟು ಅರಪೊರಾ ಗ್ರಾಮದಲ್ಲೇ ವಾಸಿಸುತ್ತಿದ್ದರು.

    ಅವರ ತೋಟದಲ್ಲಿ ಅಸ್ಸಾಂ ಮೂಲದ ಪ್ರಫುಲ್ಲಾ ತೋಟದ ಮಾಲಿಯಾಗಿ ಕೆಲಸ ಮಾಡುತ್ತಿದ್ದನು. ಆದರೆ ಭಾನುವಾರ ಪ್ರಫುಲ್ಲಾ ಮನೆಯೊಳಗೆ ಮಾರಕಾಸ್ತ್ರಗಳಿಂದ ಶಿರಿನ್ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಗಾರ್ಡ್‌ನ್ ನಲ್ಲಿ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.

    ಈ ವೇಳೆ ಗಾರ್ಡ್‌ನ್ ನಲ್ಲಿ ಬಿದ್ದಿದ್ದ ಮಾಲಿಯನ್ನು ಕಂಡ ಅಕ್ಕಪಕ್ಕದ ಮನೆಯವರು ಆತನನ್ನು ಆಸ್ಪತ್ರಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆರೋಪಿ ಮೃತಪಟ್ಟಿದ್ದನು. ಬಳಿಕ ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು.

    ಆಗ ಅಕ್ಕಪಕ್ಕದ ಮನೆಯವರು, ಮಾಲಿ ಹಾಗೂ ಶಿರಿನ್ ಅವರ ನಡುವೆ ಜಗಳ ನಡೆದಿತ್ತು. ಬಳಿಕ ಮಾಲಿ ಮನೆಯಿಂದ ಹೊರಗೆ ಓಡಿಬರುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ. ಬಹುಶಃ ಆತನೇ ಶಿರಿನ್‍ರನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಓಡಿ ಬರುತ್ತಿದ್ದನು ಎನಿಸುತ್ತದೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.

    ಇತ್ತ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಘಟನೆ ನಡೆದ ಬಳಿಕ ಮಾಲಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದು ಕಂಡು ಬಂದಿದೆ. ಆತ ಮನೆಯಿಂದ ಹೊರಗೆ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗೋವಾ ಸಿಎಂ ಕೆಲಸ ನೋಡಿ ‘ಕೈ’ ಬಿಟ್ಟು ಬಿಜೆಪಿಗೆ ಸೇರ್ಪಡೆ: ಕಾಂಗ್ರೆಸ್ ನಾಯಕ

    ಗೋವಾ ಸಿಎಂ ಕೆಲಸ ನೋಡಿ ‘ಕೈ’ ಬಿಟ್ಟು ಬಿಜೆಪಿಗೆ ಸೇರ್ಪಡೆ: ಕಾಂಗ್ರೆಸ್ ನಾಯಕ

    ಪಣಜಿ: ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಇದೇ ಬೆನ್ನಲ್ಲೇ ನೆರೆಯ ಗೋವಾದಲ್ಲೂ ರಾಜಕೀಯದಲ್ಲಿ ಏರುಪೇರಾಗಿದ್ದು, ಕಾಂಗ್ರೆಸ್ ಶಾಸಕರು ಕಮಲದ ಕೈ ಹಿಡಿದಿದ್ದಾರೆ.

    ಒಂದೆಡೆ ರಾಜ್ಯದ ಅತೃಪ್ತ ಕಾಂಗ್ರೆಸ್, ಜೆಡಿಎಸ್ ಶಾಸಕರು ಮುಂಬೈ ಖಾಸಗಿ ಹೋಟೆಲ್ ಸೇರಿದ್ದಾರೆ. ಇನ್ನೊಂದೆಡೆ ಒಬ್ಬರ ಮೇಲೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿಯಿಂದ ದೂರ ಸರಿಯುತ್ತಿದ್ದಾರೆ. ಅವರನ್ನು ಮನವೊಲಿಸಿ ತರಲು ಕಾಂಗ್ರೆಸ್ ಹಿರಿಯ ನಾಯಕರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಪಕ್ಕದ ರಾಜ್ಯ ಗೋವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗೋವಾದಲ್ಲಿ ಬಿಜೆಪಿ ಆಡಳಿತವಿದ್ದು, ಸಿಎಂ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಬಿಜೆಪಿಯತ್ತ ಒಲವು ತೋರುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.

    ಗೋವಾದ 15 ಕಾಂಗ್ರೆಸ್ ಶಾಸಕರ ಪೈಕಿ 10 ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 15 ಶಾಸಕರನ್ನು ಹೊಂದಿತ್ತು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಗೋವಾ ವಿಧಾನಸಭೆ ಪ್ರತಿಪಕ್ಷದ ನಾಯಕ ಚಂದ್ರಕಾಂತ್ ಬಾಬು ಕವಳೇಕರ್ ನೇತೃತ್ವದಲ್ಲಿ 10 ಬಂಡಾಯ `ಕೈ’ ಶಾಸಕರು ಪಕ್ಷದಿಂದ ಹೊರಬಂದು ತಮ್ಮ ಬಣವನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಮನವಿ ಪತ್ರವನ್ನು ಸ್ಪೀಕರ್ ರಾಜೇಶ್ ಪಟ್ನೇಕರ್ ಅವರಿಗೆ ಸಲ್ಲಿಸಿದ್ದರು.

    ಸ್ಪೀಕರ್ ಮನವಿ ಪತ್ರ ಅಂಗೀಕರಿಸಿದ್ದು, ವಿಲೀನ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಬಿಜೆಪಿಗೆ ಸೇರ್ಪಡೆಯನ್ನು ಸಮರ್ಥಿಸಿಕೊಂಡಿರುವ ಚಂದ್ರಕಾಂತ್ ಕವ್ಲೇಕರ್, ಸಿಎಂ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ನಾವು ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ. ನಾನು ವಿಪಕ್ಷ ನಾಯಕನಾಗಿದ್ದರೂ ಸಹ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದಿದ್ದಾರೆ.

    ಇಂದು ಗೋವಾ ಶಾಸಕರೆಲ್ಲಾ ದೆಹಲಿಗೆ ತೆರಳಲಿದ್ದು ಅಮಿತ್ ಶಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.