Tag: panaji

  • ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ

    ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ

    ಪಣಜಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ (Suchana Seth) ಯಾವುದೇ ಮಾನಸಿಕ ಕಾಯಿಲೆ (Mental Illness) ಇಲ್ಲ ಎಂದು ಗೋವಾ (Goa) ಪೊಲೀಸರು ತಿಳಿಸಿದ್ದಾರೆ.

    4 ವರ್ಷದ ಮಗನನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವ ತುಂಬಿದ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯ ಉದ್ಯಮಿ ಕೇಸ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಇನ್‌ಸ್ಟಿಟ್ಯೂಟ್ ಅಫ್ ಸೈಕಾಲಜಿ ಮತ್ತು ಹ್ಯೂಮನ್ ಬಿಹೇವಿಯರ್ ಸಂಸ್ಥೆಯಲ್ಲಿ ಫೆ.2 ರಂದು ಸೂಚನಾಳ ಮಾನಸಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಾ ವರದಿಯನ್ನು ಪೊಲೀಸರು ಕೋರ್ಟ್ ಎದುರು ಹಾಜರು ಪಡಿಸಿದ್ದು, ವರದಿಯ ಪ್ರಕಾರ ಸುಚನಾಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲವೆಂದು ಸಾಬೀತಾಗಿದೆ. ಗಂಡನ ಮೇಲಿನ ಅತಿಯಾದ ಕೋಪ ಹೀಗೆ ಮಾಡಿಸಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೆ

    ಮಾನಸಿಕ ಖಿನ್ನತೆಯಿಂದ ಆಕೆ ಈ ರೀತಿ ನಡೆದು ಕೊಂಡಿರಬಹುದು. ಮಗುವಿನ ಮೇಲೆ ಯಾವುದೇ ಕೋಪ ಇರಲಿಲ್ಲ ಅಂತ ಸುಚನಾ ತಂದೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು

    ಸುಚನಾ ಸೇಠ್ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದಾಳೆ. ನನಗೆ ಯಾವುದೇ ತೊಂದರೆ ಇಲ್ಲ. ಇದುವರೆಗೂ ಮಾನಸಿಕ ಖಿನ್ನತೆಗೆ ಯಾವುದೇ ಚಿಕಿತ್ಸೆ ಪಡೆದಿಲ್ಲ ಎಂದು ಪೊಲೀಸರ ಮುಂದೆ ಉತ್ತರಿಸಿದ್ದಾಳೆ. ನನಗೆ ಮಾನಸಿಕ ಖಿನ್ನತೆಯ ಯಾವುದೇ ಲಕ್ಷಣಗಳು ಇಲ್ಲ. ಕೆಲಸದ ಒತ್ತಡವಾಗಲಿ, ಕೌಟುಂಬಿಕ ಹಿನ್ನೆಲೆಯಾಗಲಿ ಇಲ್ಲ ಎಂದು ಉತ್ತರಿಸಿದ್ದಾಳೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 5 ವರ್ಷ: 2019ರ ಫೆ.14 ರಂದು ನಡೆದಿದ್ದು ಏನು?

    ಗೋವಾದಲ್ಲಿ ತನ್ನ 4 ವರ್ಷ ಮಗುವನ್ನು ಕೊಲೆ ಮಾಡಿ ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಸೂಚನಾಳನ್ನು ಚಿತ್ರದುರ್ಗದ ಬಳಿ ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಸುಚನಾ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಇದನ್ನೂ ಓದಿ:  6 ತಿಂಗಳ ಆಹಾರ ಸಾಮಾಗ್ರಿ ಹಿಡಿದು ದೆಹಲಿಚಲೋಗೆ ಬಂದ ರೈತರು

  • ಗೋವಾದಲ್ಲಿ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಅರೆಸ್ಟ್

    ಗೋವಾದಲ್ಲಿ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಅರೆಸ್ಟ್

    ಪಣಜಿ: ಕಳೆದ ವಾರ ಉತ್ತರ ಗೋವಾದ ಅರಂಬೋಲ್ ಸ್ವೀಟ್ ವಾಟರ್ ಬೀಚ್‍ನಲ್ಲಿ ಬ್ರಿಟಿಷ್ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಸ್ಥಳೀಯ ನಿವಾಸಿಯಾಗಿದ್ದು, ಜೂನ್ 2 ರಂದು ಬ್ರಿಟಿಷ್ ಮಹಿಳೆಯೊಬ್ಬರು ಸಮುದ್ರತೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿದ್ದ ಅವನು ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನೂ ಓದಿ: ಮುಳಬಾಗಿಲು ಗಂಗಮ್ಮ ದೇವಾಲಯ ಮುಂಭಾಗವೇ ಕೈ ನಗರಸಭೆ ಸದಸ್ಯನ ಬರ್ಬರ ಕೊಲೆ

    ಪತಿಯೊಂದಿಗೆ ರಜೆಯ ಮೇಲೆ ಗೋವಾದಲ್ಲಿರುವ ಸಂತ್ರಸ್ತೆ ಸೋಮವಾರ (ಜೂನ್ 6) ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ, ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು

  • ತಂದೆಯನ್ನು ಕೊಂದ ಮಾನಸಿಕ ಅಸ್ವಸ್ಥೆ ಅರೆಸ್ಟ್

    ತಂದೆಯನ್ನು ಕೊಂದ ಮಾನಸಿಕ ಅಸ್ವಸ್ಥೆ ಅರೆಸ್ಟ್

    ಪಣಜಿ: ಮಾನಸಿಕ ಅಸ್ವಸ್ಥೆಯೊಬ್ಬಳು ತನ್ನ ತಂದೆಯನ್ನು ಕೊಂದು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಗೋವಾದಲ್ಲಿ ನಡೆದಿದೆ.

    ದಕ್ಷಿಣ ಗೋವಾದ ಅಂಬೌಲಿಮ್ ಗ್ರಾಮದಲ್ಲಿ ಮಾನಸಿಕ ರೋಗದಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬಳು 76 ವರ್ಷದ ತಂದೆಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    POLICE JEEP

    ಕಾರಣವೇನು?
    ಆರೋಪಿ ಮರಿಯಾನ್ನೆ ಕಾರ್ಡೋಸೊ ಭಾನುವಾರ ಚರ್ಚ್‍ನಲ್ಲಿ ಈಸ್ಟರ್‌ಗಾಗಿ ಪ್ರಾರ್ಥನೆ ಸಲ್ಲಿಸಿ ನಂತರ ಮನೆಗೆ ಹೋಗಿದ್ದಾಳೆ. ತಂದೆ ಫಿಡೆಲಿಸ್ ಮರಿಯಾನೋ ಪೆಡ್ಡಾ ಮನೆಯಲ್ಲಿ ಮಲಗಿಕೊಂಡಿದ್ದರು. ಈ ವೇಳೆ ಮನೆಗೆ ಹೋದ ಕಾರ್ಡೋಸೊ ಮರದ ದೊಣ್ಣೆಯಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾಳೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಮಯದಲ್ಲಿ ಆಕೆಯ ತಾಯಿ ಸಹ ಮನೆಯಲ್ಲಿ ಇರಲಿಲ್ಲ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿಯನ್ನು ಬಂಧಿಸಿ ಆಕೆ ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಮನೋವೈದ್ಯ ಸಂಸ್ಥೆಗೆ ಕಳುಹಿಸಲಾಗಿದೆ. 2000ರಲ್ಲಿ ಕಾರ್ಡೋಸೊ ವಿಚ್ಛೇದನ ಪಡೆದಿದ್ದು, ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಆದರೆ ಈ ಕೊಲೆಗೆ ಏನು ಕಾರಣ ಎಂಬುದಕ್ಕೆ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌ 

    ಪ್ರಸ್ತುತ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

  • ಉಚಿತ ಎಲ್‍ಪಿಜಿ ಸಿಲಿಂಡರ್ ನೀಡಲು ಹಣ ಮಂಜೂರು: ಪ್ರಮೋದ್ ಸಾವಂತ್

    ಉಚಿತ ಎಲ್‍ಪಿಜಿ ಸಿಲಿಂಡರ್ ನೀಡಲು ಹಣ ಮಂಜೂರು: ಪ್ರಮೋದ್ ಸಾವಂತ್

    ಪಣಜಿ: ರಾಜ್ಯದ ಜನರಿಗೆ ಮೂರು ಎಲ್‍ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು 40ಕೋಟಿ ರೂ. ಮೊತ್ತವನ್ನು ನೀಡುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಘೋಷಿಸಿದರು.

    ವಿಧಾನಸಭೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್‍ನ್ನು ಮಂಡಿಸಿದ ಅವರು ರಾಜ್ಯದ ಮತ್ತು ಜನರ ಅಭಿವೃದ್ಧಿ ಹಾಗೂ ಸಮೃದ್ಧಿಗಾಗಿ ಈ ಬಜೆಟ್ ಆಗಿದೆ ಎಂದು ಹೇಳಿದರು.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ಗೋವಾ ವಿಧಾನಸಭೆಯಲ್ಲಿ 2022-23ನೇ ಸಾಲಿನ ರಾಜ್ಯ ಬಜೆಟ್‍ನ್ನು ಮಂಡಿಸಿದ್ದಾರೆ. ಗೋವಾ ಜನತೆಗೆ, ರಾಜ್ಯದ ಅಭಿವೃದ್ಧಿಗೆ ಹಾಗೂ ರಾಜ್ಯದ ಏಳಿಗೆಗಾಗಿ ಇರುವ ಬಜೆಟ್ ಇದಾಗಿದೆ ಎಂದು ತಿಳಿಸಿದರು.

    ಪಣಜಿ ಬಳಿಯ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಎರಡನೇ ಬಾರಿಗೆ ಗೋವಾದಲ್ಲಿ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ ಅವರು ಪ್ರಮೋದ್ ಸಾವಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮೋದ್ ಸಾವಂತ್ ಕೊಂಕಣಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಎರಡನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣವಚನ

    ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡನಾವಿಸ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಈ ಬಾರಿ ಮಾವಿನ ಹಣ್ಣು ಸವಿಯೋಕೆ ತುಸು ಕಾಯ್ಬೇಕು- ಅಕಾಲಿಕ ಮಳೆಗೆ ಬಾರದ ಫಸಲು, ಬೆಲೆ ಗಗನಕ್ಕೆ

  • ಎರಡನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ  ಪ್ರಮೋದ್ ಸಾವಂತ್ ಪ್ರಮಾಣವಚನ

    ಎರಡನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣವಚನ

    ಪಣಜಿ: ಎರಡನೇ ಬಾರಿಗೆ ಗೋವಾದಲ್ಲಿ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

    ಪಣಜಿ ಬಳಿಯ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ ಅವರು ಪ್ರಮೋದ್ ಸಾವಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮೋದ್ ಸಾವಂತ್ ಕೊಂಕಣಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

    ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡನಾವಿಸ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಬೇಕು: ರಮಾನಾಥ್ ರೈ ಮನವಿ

    ಈ ತಿಂಗಳ ಪ್ರಾರಂಭದಲ್ಲಿ ನಡೆದ 40 ಕ್ಷೇತ್ರಗಳ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಸ್ಕಾಂಪಷ್ಗ್ರೆಟ ಬಹುಮತದಿಂದ ಬಿಜೆಪಿ ಗೋವಾದಲ್ಲಿ ಸಕಾರ ರಚಿಸಿದೆ. ಇದನ್ನೂ ಓದಿ: ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ರಾಜ್ಯಗಳಿಗೆ ಅಧಿಕಾರ: ಕೇಂದ್ರ ಸರ್ಕಾರ

  • ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಗೋವಾ ಮಾಜಿ ಸಿಎಂ ಪುತ್ರ ಸೋಲು

    ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಗೋವಾ ಮಾಜಿ ಸಿಎಂ ಪುತ್ರ ಸೋಲು

    ಪಣಜಿ: ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಪಣಜಿ ಕ್ಷೇತ್ರದಲ್ಲಿ ಪಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಲ್‌ ಪರಿಕ್ಕರ್‌, ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಅಟಾನಾಸಿಯೊ ಮಾನ್ಸೆರೇಟ್‌ ಅವರು ಗೆಲುವಿನ ನಗೆ ಬೀರಿದ್ದಾರೆ. ಆದರೆ ಗೆಲುವಿನ ಅಂತರದ ಬಗ್ಗೆ ಅವರು ಬೇಸರಗೊಂಡಿದ್ದಾರೆ. ಬಿಜೆಪಿ ಬೆಂಬಲಿತರೇ ತಮಗೆ ಮತ ಹಾಕಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಸೋಲು: ಇವಿಎಂ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ

    ಬಿಜೆಪಿ ಬೆಂಬಲಿತರೇ ನನಗೆ ಮತ ಹಾಕಿಲ್ಲ. ಇದನ್ನು ಬಿಜೆಪಿ ನಾಯಕರಿಗೆ ಹೇಳಿದ್ದೇನೆ. ಭವಿಷ್ಯದಲ್ಲಿ ಅವರು ಈ ಬಗ್ಗೆ ಗಮನಹರಿಸಬೇಕು. ರಾಜ್ಯ ಬಿಜೆಪಿ ಘಟಕ ಜನರಿಗೆ ಸರಿಯಾದ ಸಂದೇಶ ನೀಡಿಲ್ಲ. ನಾನು ಎಲ್ಲಾ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಬಿಜೆಪಿಯೊಂದಿಗಿದ್ದೇನೆ ಎಂದು ತಿಳಿಸಿದ್ದಾರೆ.

    ಪಣಜಿ ಕ್ಷೇತ್ರದಲ್ಲಿ ತನಗೆ ಟಿಕೆಟ್‌ ನೀಡದೇ ಮಾನ್ಸೆರೇಟ್‌ ಅವರನ್ನು ಕಣಕ್ಕಿಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಉತ್ಪಲ್‌ ಪರಿಕ್ಕರ್‌ ಅವರು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದನ್ನೂ ಓದಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಮೂರು ಬಾರಿ ಗೋವಾದ ಸಿಎಂ ಆಗಿದ್ದ ಮನೋಹರ್‌ ಪರಿಕ್ಕರ್‌ ಅವರು 25 ವರ್ಷಗಳ ಕಾಲ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2019ರಲ್ಲಿ ಅವರ ಮರಣ ನಂತರ ನಡೆದ ಉಪಚುನಾವಣೆಯಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ ಪ್ರತಿಸ್ಪರ್ಧಿ ಮಾನ್ಸೆರೇಟ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದರು. ನಂತರ ಅವರು ಬಿಜೆಪಿ ಸೇರಿದ್ದರು.

  • ಪ್ರಧಾನಿ ಮೋದಿಯಿಂದ ಇತಿಹಾಸ ತಿರುಚಲು ಪ್ರಯತ್ನ: ಚಿದಂಬರಂ ಆರೋಪ

    ಪ್ರಧಾನಿ ಮೋದಿಯಿಂದ ಇತಿಹಾಸ ತಿರುಚಲು ಪ್ರಯತ್ನ: ಚಿದಂಬರಂ ಆರೋಪ

    ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಕಿಡಿಕಾರಿದರು.

    ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಗೋವಾವನ್ನು ವಿಮೋಚನೆ ಮಾಡಲು ನೆಹರೂ ಅವರು ಸರಿಯಾದ ಸಮಯದಲ್ಲಿ ಮಧ್ಯ ಪ್ರವೇಶಿಸಿದ್ದರು. ಈ ಬಗ್ಗೆ ನೆಹರೂ ಅವರು ಗೋವಾ ಜನರ ಅಭಿಪ್ರಾಯ ಸಂಗ್ರಹಿಸಿದ್ದರು. ಆದರೆ ಪ್ರಧಾನಿ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕಾರಣದಿಂದಾಗಿ ಗೋವಾ ವಿಮೋಚನೆ ವಿಳಂಬವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

    ಮೋದಿ ಹಾಗೂ ಶಾಗೆ ಎರಡನೇ ಮಹಾಯುದ್ಧದ ನಂತರದ ಪ್ರಪಂಚದ ಇತಿಹಾಸ ತಿಳಿದಿಲ್ಲ. ಅವರಿಗೆ ಸ್ವಾತಂತ್ರ್ಯ ನಂತರದ ಭಾರತದ ಇತಿಹಾಸವೂ ತಿಳಿದಿಲ್ಲ. ಗೋವಾವನ್ನು ಮುಕ್ತಗೊಳಿಸಲು ನೆಹರೂ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದರು. ಇದರಿಂದಾಗಿಯೇ ಮಿಲಿಟರಿ ಕ್ರಮದ ವಿರುದ್ಧ ಯಾರೂ ಒಂದೇ ಒಂದು ಧ್ವನಿ ಎತ್ತಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜರ ವಂಶವನ್ನು ನಾಶ ಮಾಡಲು ಹೋದ ಟಿಪ್ಪು ಸುಲ್ತಾನ್ ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ

    ಈ ಬಾರಿ ನಡೆಯುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರ ಮಾಡಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪಕ್ಷಕ್ಕೆ ಈಗ ಉತ್ತಮ ಕಾವಲು ಇದೆ. ಕಳ್ಳರು ಹೊರಹೋಗಿದ್ದಾರೆ. ಅವರಿಗೆಲ್ಲಾ ಜನರು ತಕ್ಕ ಬುದ್ಧಿ ಕಲಿಸುತ್ತಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: 30 ಗುಂಟೆ ಜಮೀನು ಮಾರಾಟ – 2 ಗುಂಪುಗಳ ನಡುವೆ ಮಾರಾಮಾರಿ

  • ರಾಜ್ಯ ನಾಯಕರ ಮಧ್ಯೆ ರಮೇಶ್ ಜಾರಕಿಹೊಳಿ ಗುರುತಿಸಿದ ಅಮಿತ್ ಶಾ!

    ರಾಜ್ಯ ನಾಯಕರ ಮಧ್ಯೆ ರಮೇಶ್ ಜಾರಕಿಹೊಳಿ ಗುರುತಿಸಿದ ಅಮಿತ್ ಶಾ!

    ಪಣಜಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಗೃಹ ಸಚಿವ ಅಮಿತ್ ಶಾ ಅವರನ್ನು ಗೋವಾದಲ್ಲಿ ಭೇಟಿಯಾಗಿದ್ದಾರೆ.

    ಗೋವಾದ ಬಿಚೋಲಿಮ್, ಸಾಕ್ಲಿ, ಮಾಯೇಮ್ ಕ್ಷೇತ್ರದಲ್ಲಿ ಅಮಿತ್ ಶಾ ಕ್ಯಾಂಪೇನ್ ನಡೆಸುತ್ತಿದ್ದು, ಮನೆಗೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಬಿಚೋಲಿಂ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ, ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಕಂಡು ಅಮಿತ್ ಶಾ ಅವರು ‘ಜಾರಕಿಹೊಳಿ ಇದರ್ ಆವೋ'(ಇಲ್ಲಿ ಬನ್ನಿ) ಅಂದ್ರಂತೆ. ರಾಜ್ಯದ ಹಲವು ನಾಯಕರು ಪ್ರಚಾರ ವೇಳೆ ಉಪಸ್ಥಿತರಿದ್ದರೂ ರಮೇಶ್ ಜಾರಕಿಹೊಳಿರನ್ನು ಅಮಿತ್ ಶಾ ಅವರು ಗುರುತಿಸಿ ಕರೆದಿದ್ದಾರೆ. ಇದನ್ನೂ ಓದಿ: ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರ: ಯುಪಿ ಮತದಾರರಿಗೆ ಅಮಿತ್ ಶಾ ಕರೆ

    ಅಮಿತ್ ಶಾ ಜೊತೆ ಕೆಲ ಕಾಲ ಪ್ರಚಾರದಲ್ಲಿ ಜಾರಕಿಹೊಳಿ ಅವರು ಭಾಗಿಯಾಗಿದ್ದರು. ಈ ಸಮಯ ಅಮಿತ್ ಶಾ ಅವರನ್ನು ಜಾರಕಿಹೊಳಿ ಗೋಕಾಕ್ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ಗಟ್ಟಿ ಬಸವಣ್ಣ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲು ಆಹ್ವಾನ ನೀಡಿದ್ದಾರೆ. ಅದಕ್ಕೆ ಅವರು ‘ಆಯೇಂಗೆ ಆಯೇಂಗೆ'(ಬರುತ್ತೇನೆ) ಎಂದು ತಿಳಿಸಿದ್ದಾರೆ.

    ರಾತ್ರಿ ಭೋಜನಕೂಟ ವೇಳೆ ಸಿಗೋಣ ಎಂದು ಜಾರಕಿಹೊಳಿ ಅವರಿಗೆ ಅಮಿತ್ ಶಾ ಅವರು ತಿಳಿಸಿದ್ದು, ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಗೋವಾ ಸಿಎಂ ಪ್ರಮೋದ್ ಸಾವಂತ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

    ಜಾರಕಿಹೊಳಿ ಅವರು ಜಲಸಂಪನ್ಮೂಲ ಖಾತೆಯನ್ನು ಮತ್ತೆ ಧಕ್ಕಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಗಾಗಿ ವರಿಷ್ಠರನ್ನು ಭೇಟಿಯಾಗಿದ್ದರು. ಇದರ ಮಧ್ಯೆಯೇ ತಮಗೆ ಖಾತೆ ನೀಡುವ ಸಂಬಂಧ ವರಿಷ್ಠರ ಗಮನ ಸೆಳೆಯಲು ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ.

  • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋವಾದಲ್ಲಿ ಗಣಿಗಾರಿಕೆ ಪುನಾರಂಭ: ಚಿದಂಬರಂ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋವಾದಲ್ಲಿ ಗಣಿಗಾರಿಕೆ ಪುನಾರಂಭ: ಚಿದಂಬರಂ

    ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಣಿಗಾರಿಕೆಯನ್ನು ಮುಂದಿನ ಮೂರರಿಂದ ಆರು ತಿಂಗಳೊಳಗೆ ಪ್ರಾರಂಭಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆ ರಾಜ್ಯದ ಪ್ರಮುಖ ಆದಾಯದ ಮೂಲವಾಗಿತ್ತು. ಆದರೆ 2018ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಸ್ಥಗಿತಗೊಂಡಿತ್ತು. ಗಣಿಗಾರಿಕೆ ಉದ್ಯಮದಲ್ಲಿ ನಡೆದ ಭ್ರಷ್ಟಾಚಾರಗಳನ್ನು ತನಿಖೆ ನಡೆಸಿ ಪುನಾರಂಭಿಸಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳುತ್ತೇವೆ. ಜೊತೆಗೆ ಮಾದರಿ ನಕ್ಷೆಯನ್ನು ರೂಪಿಸಲಾಗುವುದು. ಇದಕ್ಕೆ ಉನ್ನತ ಕಾನೂನು ತಜ್ಞರ ತಂಡವನ್ನು ರಚಿಸಿ ಸಮಾಲೋಚಿಸಲಾಗುವುದು ಎಂದು ಹೇಳಿದರು.

    ಸುಮಾರು ಒಂದು ಅಥವಾ ಎರಡು ತಿಂಗಳುಗಳಲ್ಲಿ ಕಾನೂನಾತ್ಮಕವಾಗಿ ಸುಸ್ಥಿರ ಗಣಿಗಾರಿಕೆಯ ಮಾದರಿಯನ್ನು ಸಿದ್ಧಪಡಿಸಲು ಕಾಲವಕಾಶ ಬೇಕಾಗುತ್ತದೆ. ಅದಾದ ಬಳಿಕ ತಕ್ಷಣವೇ ಕಾರ್ಯಗತಗೊಳಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಈ ಎಲ್ಲಾ ಪ್ರಕ್ರಿಯೆಗೆ ಸರ್ಕಾರ ರಚನೆಯಾದ ಮೂರರಿಂದ ಆರು ತಿಂಗಳೊಳಗೆ ಗಣಿಗಾರಿಕೆ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್‍ನ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿ ತಿಳಿಸಿದರು. ಇದನ್ನೂ ಓದಿ:  ದೆಹಲಿ ನಾಯಕರು ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಂಜಿತ್ ಚನ್ನಿ

    ಇದೇ ತಿಂಗಳ ಫೆಬ್ರವರಿ 14 ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಿವೆ. ಮೊದಲ ಬಾರಿಗೆ ಆಪ್ ಹಾಗು ಸಮಾಜವಾದಿ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.

  • ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಪಣಜಿ: ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಮಾತ್ರ ಪ್ರಬಲ ಪೈಪೋಟಿಯಿದೆ. ಬೇರೆ ಯಾವುದೇ ಪಕ್ಷಗಳಿಗಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದರು.

    ವರ್ಚುವಲ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಸ್ಪರ್ಧೆಯಿದೆ. ಹೀಗಾಗಿ ಉಳಿದ ಪಕ್ಷಗಳಿಗೆ ನಿಮ್ಮ ಮತಗಳನ್ನು ನೀಡಿ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಹೇಳಿದರು.

    bjp - congress

    ಕೊರೊನಾ ಸಮಯದಲ್ಲಿ ಕೋವಿಡ್ 19 ನಿರ್ವಹಣೆ, ಜೀವನೋಪಾಯ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ದನಿ ಎತ್ತಿದ ಸುಮಲತಾ

    ಈ ಬಾರಿ ಪಕ್ಷಾಂತರಿಗೆ ಟೆಕೆಟ್ ನೀಡಿಲ್ಲ, ಬದಲಿಗೆ ಹೊಸಬರಿಗೆ ಅವಕಾಶ ನೀಡಲಾಗಿದೆ. ಇದರಿಂದ ಬಹುಮತದೊಂದಿಗೆ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ. ಗೋವಾದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಮತದಾರರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷವು ಗೋವಾದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ, ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ನಿಮ್ಮ ಮಾತನ್ನು ಕೇಳುವ ಸರ್ಕಾರಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಆಸ್ತಿಗಾಗಿ ಬದುಕಿದ್ದ ಅಜ್ಜಿಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು – ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿ!