Tag: Pan India Cinema

  • ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಮತ್ತೊಂದು ಅದ್ದೂರಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿದೆ. ಬಹುಭಾಷಾ ನಟ, ಇಂಡಿಯನ್ ಮೈಕಲ್ ಜಾಕ್ಸನ್ ಅಂತಲೇ ಪ್ರಸಿದ್ದರಾಗಿರುವ ಪ್ರಭುದೇವ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಕೃಷ್ಣ ಸೇರಿದಂತೆ ಸಾಕಷ್ಟು ಖ್ಯಾತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇದನ್ನೂ ಓದಿ : ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

    ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಸಂದೇಶ್ ಎನ್ ನಿರ್ಮಿಸುತ್ತಿದ್ದಾರೆ. ಇದು ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯ 31 ನೇ ಚಿತ್ರ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಇದನ್ನೂ ಓದಿ : ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

    ವಿನಿ ವೆಂಕಟೇಶ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜುಲೈ 5 ರಿಂದ ಆರಂಭವಾಗಲಿದೆ. ಅಂಡಮಾನ್, ನಿಕೋಬಾರ್, ಬೆಂಗಳೂರು, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಅಂಬರೀಶನ್ ಈ ನೂತನ ಸಂಗೀತ ನೀಡಲಿದ್ದಾರೆ. ಶೀರ್ಷಿಕೆ ಅನಾವರಣ ಸದ್ಯದಲ್ಲೇ ನಡೆಯಲಿದೆ.

  • ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್  ಗುಡುಗು

    ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಬಾಲಿವುಡ್ ಸಿನಿಮಾಗಳು ಮಾತ್ರ ಹಿಂದಿ ಚಿತ್ರಗಳು, ಉಳಿದ ಸಿನಿಮಾಗಳು ಪ್ಯಾನ್ ಇಂಡಿಯಾ ಚಿತ್ರಗಳು ಯಾಕಾಗಬೇಕು? ಹಾಗಂತ ಕರೆಯುವುದನ್ನು ನಿಲ್ಲಿಸಿ, ಕನ್ನಡ ಚಿತ್ರಗಳು ಎಂದು ಕರೆದು ಸ್ವಾಭಿಮಾನ ತೋರಿಸಬೇಕು ಎಂದಿದ್ದಾರೆ ನಟ ಕಿಚ್ಚ ಸುದೀಪ್. ನಮ್ಮದೂ ಹಿಂದಿ ಚಿತ್ರಗಳಂತೆಯೇ ಒಂದು ಭಾಷೆಯ ಚಿತ್ರ. ಹಾಗಾಗಿ ಹಿಂದಿ ಚಿತ್ರಗಳು ಎಂದು ಕರೆಯುವಂತೆ ಕನ್ನಡ ಚಿತ್ರಗಳು ಎಂದೇ ಹೆಮ್ಮೆಯಿಂದ ಕರೆಯೋಣ ಅಂದಿದ್ದಾರೆ ಕಿಚ್ಚ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಬಹುತೇಕ ಚಿತ್ರಗಳನ್ನು ಪ್ಯಾನ್ ಇಂಡಿಯಾ ಚಿತ್ರ ಎಂದು ಕರೆಯಲಾಗುತ್ತದೆ. ಆದರೆ ಹಿಂದಿಯವರು ಪ್ಯಾನ್ ಇಂಡಿಯಾ ಅನ್ನುವ ಶಬ್ದವನ್ನೇ ಬಳಸುವುದಿಲ್ಲ. ಅದನ್ನು ಭಾರತೀಯ ಸಿನಿಮಾ ಎನ್ನುವಂತೆ ಬಿಂಬಿಸಲಾಗುತ್ತಿದೆ. ಹಾಗಾಗಿ ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಶಬ್ದವನ್ನೇ ಕಿತ್ತು ಹಾಕುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ಹಿಂದಿ ಸಿನಿಮಾಗಳು ದಕ್ಷಿಣದಲ್ಲಿ ಡಬ್ ಆಗಿ ಬಿಡುಗಡೆ ಆಗಲು ಕಷ್ಟ ಪಡುತ್ತಿವೆ. ದಕ್ಷಿಣದ ಸಿನಿಮಾಗಳು ಹಿಂದಿಗೆ ಡಬ್ ಆಗಿ ಗೆಲುವು ಸಾಧಿಸುತ್ತಿವೆ. ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಯಾವುದು? ಭಾರತೀಯ ಸಿನಿಮಾ ಯಾವುದು ಎನ್ನುವುದನ್ನು ಯೋಚಿಸಬೇಕಿದೆ ಎಂದಿದ್ದಾರೆ ಸುದೀಪ್. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಕನ್ನಡ ಸಿನಿಮಾಗಳನ್ನು ಎಲ್ಲ ಭಾಷಿಗರು ನೋಡುತ್ತಿದ್ದಾರೆ. ಇಲ್ಲಿಂದ ಅನೇಕ ಭಾಷೆಗಳಿಗೆ ಕನ್ನಡದ ಚಿತ್ರಗಳು ಡಬ್ ಆಗುತ್ತಿವೆ. ಕಿಚ್ಚ ಸುದೀಪ್ ನಟನೆಯ ವಿಕ್ರಾಂತ ರೋಣ ಸಿನಿಮಾ ಕೂಡ ಹತ್ತಕ್ಕೂ ಹೆಚ್ಚು ಭಾಷೆಗೆ ಡಬ್ ಆಗಿ ಬಿಡುಗಡೆ ಆಗಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹೊತ್ತಿನಲ್ಲಿ ಕಿಚ್ಚ ಆಡಿರುವ ಮಾತುಗಳು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿವೆ.

  • `ಹೆಡ್‌ ಬುಷ್’ ಚಿತ್ರದ ಕುರಿತು ಪಾಯಲ್ ರಜಪೂತ್ ಹೇಳಿದ್ದೇನು ಗೊತ್ತಾ? ವೈರಲ್‌ ಆಯ್ತು ನಟಿಯ ಪೋಸ್ಟ್‌

    `ಹೆಡ್‌ ಬುಷ್’ ಚಿತ್ರದ ಕುರಿತು ಪಾಯಲ್ ರಜಪೂತ್ ಹೇಳಿದ್ದೇನು ಗೊತ್ತಾ? ವೈರಲ್‌ ಆಯ್ತು ನಟಿಯ ಪೋಸ್ಟ್‌

    ಸೌತ್ ಬ್ಯೂಟಿ ಪಾಯಲ್ ರಜಪೂತ್ ಕನ್ನಡ ಚಿತ್ರರಂಗಕ್ಕೆ `ಹೆಡ್ ಬುಷ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. `ಬಡವ ರಾಸ್ಕಲ್’ ಸೂಪರ್ ಸಕ್ಸಸ್ ನಂತರ ಡಾಲಿ ಧನಂಜಯ್ `ಹೆಡ್ ಬುಷ್’ ಚಿತ್ರ ಕೈಗೆತ್ತಿಕೊಂಡಿದ್ದು, ನಟರಾಕ್ಷಸ ಡಾಲಿಗೆ ನಾಯಕಿಯಾಗಿ ಪಾಯಲ್ ರಜಪೂತ್ ನಟಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ `ಹೆಡ್‌ಬುಷ್’ ಕುರಿತು ನಟಿ ಪಾಯಲ್ ಹಾಕಿರೋ ಪೋಸ್ಟ್ ವೈರಲ್ ಆಗುತ್ತಿದೆ.

    ಪಾಯಲ್ ರಜಪೂತ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚ್ತಿರೋ ಕಲಾವಿದೆ. ಈಗ `ಹೆಡ್‌ ಬುಷ್’ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಪಾಯಲ್ ಹಾಕಿರೋ ಪೋಸ್ಟ್ ವೈರಲ್ ಆಗಿದೆ. ಅಭಿಮಾನಿಯೊಬ್ಬರು ನೀವು ಯಾವಾಗ ಕನ್ನಡ ಚಿತ್ರದಲ್ಲಿ ನಟಿಸುತ್ತೀರಾ ಅಂತಾ ಕೇಳಿದ್ದಾರೆ. ಅದಕ್ಕೆ ನಟಿ ಖುಷಿಯಿಂದಲೇ ಧನಂಜಯ್ ಜೊತೆಯಿರೋ ಫೋಟೋ ಶೇರ್ ಮಾಡಿ ಉತ್ತರ ನೀಡಿದ್ದಾರೆ.

    ನಾನು ಈಗಾಗಲೇ ಹೆಡ್‌ ಬುಷ್ ಕನ್ನಡ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿನ ನನ್ನ ಪಾತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ʻಹೆಡ್‌ ಬುಷ್ʼ ಚಿತ್ರ ತೆರೆಗೆ ಬರುವುದಾಗಿ ಅಭಿಮಾನಿಗಳಿಗೆ ಚಿತ್ರದ ಅಪ್‌ಡೇಟ್ ನೀಡಿದ್ದಾರೆ. ಇನ್ನು ನಟಿ ಪಾಯಲ್ ಟ್ಯಾಗ್ ಮಾಡಿರೋ ಪೋಸ್ಟ್‌ನ್ನು ಡಾಲಿ ಕೂಡ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

    ಸದ್ಯ ಹಲವಾರು ವಿಚಾರಗಳಿಂದ ಅಟ್ರ್ಯಾಕ್ಟ್‌ ಮಾಡ್ತಿರೋ ಚಿತ್ರ `ಹೆಡ್‌ ಬುಷ್’ನಲ್ಲಿ ನಟ ಧನಂಜಯ್ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್, ಶೃತಿ ಹರಿಹರನ್, ರಘು ಮುಖರ್ಜಿ, ಲೂಸ್ ಮಾದ, ವಸಿಷ್ಠ ಸಿಂಹ, ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ಹೀಗೆ ಸ್ಟಾರ್ ಕಲಾವಿದರ ದಂಡೆ ಚಿತ್ರದಲ್ಲಿದೆ. ಮಲ್ಟಿಸ್ಟಾರ್‌ಗಳಿರೋ `ಹೆಡ್‌ ಬುಷ್’ ಚಿತ್ರ ಈಗಿಂದಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಡಾಲಿಯ ನ್ಯೂ ವೆಂಚರ್ ನೋಡೋದಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ.

  • ಕುವೈತ್‌ನಲ್ಲಿ ದಳಪತಿ ವಿಜಯ್ ನಟನೆಯ `ಬೀಸ್ಟ್’ ಸಿನಿಮಾ ಬ್ಯಾನ್

    ಕುವೈತ್‌ನಲ್ಲಿ ದಳಪತಿ ವಿಜಯ್ ನಟನೆಯ `ಬೀಸ್ಟ್’ ಸಿನಿಮಾ ಬ್ಯಾನ್

    ಕಾಲಿವುಡ್‌ನ ಸೂಪರ್‌ಸ್ಟಾರ್ ದಳಪತಿ ವಿಜಯ್ ನಟನೆಯ `ಬೀಸ್ಟ್’ ಇದೇ ಏಪ್ರಿಲ್ 13ಕ್ಕೆ ತೆರೆಯಲ್ಲಿ ಅಬ್ಬರಿಸಲು ಸಿದ್ದವಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೆಟ್ ಮಾಡಿದೆ. ರಿಲೀಸ್‌ಗೂ ಮುಂಚೆನೇ ಒಂದಲ್ಲ ಒಂದು ವಿಚಾರವಾಗಿ ಸೌಂಡ್ ಮಾಡ್ತಿರೋ `ಬೀಸ್ಟ್’ ಇದೀ ಮತ್ತೊಂದು ಕಾರಣಕ್ಕಾಗಿ ಸುದ್ದಿ ಆಗಿದೆ. ಈಗ `ಬೀಸ್ಟ್’ ಚಿತ್ರಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದ್ದು, ಕುವೈತ್‌ನಲ್ಲಿ ವಿಜಯ್ ನಟನೆಯ `ಬೀಸ್ಟ್’ ಚಿತ್ರದ ರಿಲೀಸ್ ಅನ್ನು ಬ್ಯಾನ್ ಮಾಡಲಾಗಿದೆ.

    ಇತ್ತೀಚಿಗಷ್ಟೇ `ಬೀಸ್ಟ್’ ಚಿತ್ರದ ಟ್ರೇಲರ್‌ ರಿಲೀಸ್ ಆಗಿತ್ತು. ಕಥೆಯ ಕುರಿತು ಚಿತ್ರತಂಡ ಒಂದಿಷ್ಟು ಹಿಂಟ್ ಬಿಟ್ಟುಕೊಟ್ಟಿತ್ತು. ಭಯೋತ್ಪಾದಕರು ಮಾಲ್ ಒಂದನ್ನು ಹೈಜಾಕ್ ಮಾಡುತ್ತಾರೆ. ನಾಯಕ ಮಾಲ್ ಒಳಗಡೆಯಿರುತ್ತಾನೆ. ಹೇಗೆ ಅಲ್ಲಿನ ಜನರನ್ನು ರಕ್ಷಿಸುತ್ತಾನೆ ಅನ್ನುವುದು ಚಿತ್ರದ ತಿರುಳು. ಇದೇ ವಿಚಾರವಾಗಿ ಕುವೈತ್ `ಬೀಸ್ಟ್’ ಸಿನಿಮಾವನ್ನು ಬ್ಯಾನ್ ಮಾಡಿದೆ.

    ಚಿತ್ರದಲ್ಲಿ ಪಾಕಿಸ್ತಾನ ಕುರಿತ ವಿಚಾರಗಳು, ಭಯೋತ್ವಾದನೆಯ ಚಿತ್ರಣ `ಬೀಸ್ಟ್’ನಲ್ಲಿದೆ. ಹಾಗಾಗಿಯೇ ಕುವೈತ್ ಮಾಹಿತಿ ಸಚಿವಾಲಯ ಈ ಚಿತ್ರವನ್ನು ನಿಷೇಧ ಮಾಡಿದೆ. ಕುವೈತ್‌ನಲ್ಲಿ ಬ್ಯಾನ್ ಆಗಿರೋ ಚಿತ್ರಗಳಲ್ಲಿ `ಕುರುಪ್’ ಮತ್ತು `ಎಫ್‌ಐಆರ್’ ಚಿತ್ರಗಳು ಬ್ಯಾನ್ ಆಗಿವೆ. ಕುವೈತ್ ಸೆನ್ಸಾರ್ ಮಂಡಳಿ ಚಿತ್ರಗಳ ವಿಚಾರದಲ್ಲಿ ಕಠಿಣ ಹೆಜ್ಜೆ ಇಟ್ಟಿದೆ. ಭಯೋತ್ಪಾದನೆ ಚಿತ್ರಕಥೆಯಿರೋ ಚಿತ್ರಗಳನ್ನು ಕುವೈತ್ ಪ್ರೋತ್ಸಾಹಿಸೋದಿಲ್ಲ. ಇದನ್ನು ಓದಿ: ತೆರೆ ಮೇಲೆ ಮತ್ತೆ ಒಂದಾಗಲಿದ್ದಾರಂತೆ ಸಮಂತಾ-ನಾಗಚೈತನ್ಯ ಜೋಡಿ!

    ದಳಪತಿ ವಿಜಯ್‌ಗೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಹಾಗೆಯೇ ಕುವೈತ್‌ಯಲ್ಲೂ ಕೂಡ. `ಬೀಸ್ಟ್’ ಸಿನಿಮಾವನ್ನ ನೋಡಬೇಕು ಅಂತಾ ಕಾತರದಿಂದ ಕಾಯುತ್ತಿದ ಕುವೈತ್ ಸಿನಿರಸಿಕರಿಗೆ ನಿರಾಸೆಯಾಗಿದೆ.

  • ಪ್ರಭಾಸ್ ‘ಸಲಾರ್’ ಮುಹೂರ್ತ- ಯಶ್, ಅಶ್ವಥ್ ನಾರಾಯಣ್ ಭಾಗಿ

    ಪ್ರಭಾಸ್ ‘ಸಲಾರ್’ ಮುಹೂರ್ತ- ಯಶ್, ಅಶ್ವಥ್ ನಾರಾಯಣ್ ಭಾಗಿ

    ಹೈದರಾಬಾದ್: ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಅಭಿನಯದ ಟಾಲಿವುಡ್ ಬಹು ನಿರೀಕ್ಷಿತ ಸಲಾರ್ ಸಿನಿಮಾದ ಮುಹೂರ್ತ ಇಂದು ಹೈದರಾಬಾದ್‍ನಲ್ಲಿ ನೆರವೇರಿತು.

    ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ಡಿಸಿಎಂ ಅಶ್ವಥ್ ನಾರಾಯಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಶ್ ಇಂದು ಬೆಳಗ್ಗೆ ಹೈದರಾಬಾದ್‍ಗೆ ಆಗಮಿಸಿದ್ದರು.

    ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

    ಮುಹೂರ್ತ ಪೂಜೆಯ ಸಮಯದಲ್ಲಿ ಯಶ್ ಮತ್ತು ಪ್ರಭಾಸ್ ಒಟ್ಟಿಗೆ ನಿಂತು ಪೋಸ್ ನೀಡಿದ್ದಾರೆ.