Tag: palm tree

  • ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ

    ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ

    ಲಕ್ನೋ: ಪತ್ನಿಯೊಂದಿಗೆ ಜಗಳವಾಡಿ ಬೇಸತ್ತ ವ್ಯಕ್ತಿ ಕಳೆದ 1 ತಿಂಗಳಿನಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆ ವಾಸವಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮವ್ ಜಿಲ್ಲೆಯ ಕೋಪಗಂಜ್‌ನಲ್ಲಿ ನಡೆದಿದೆ.

    ನಗರದ ನಿವಾಸಿ ರಾಮ್ ಪ್ರವೇಶ್ ಕಳೆದ 6 ತಿಂಗಳುಗಳಿಂದ ಪತ್ನಿಯೊಂದಿಗೆ ಜಗಳವಾಡುತ್ತಿದ್ದು, ಆಕೆ ತನಗೆ ಥಳಿಸಿರುವುದಾಗಿ ಆರೋಪಿಸಿದ್ದಾನೆ. ಪತ್ನಿಯ ವರ್ತನೆಗೆ ಮನನೊಂದ ಆತ ಮರ ಹತ್ತಿ, 1 ತಿಂಗಳಿನಿಂದ ಅಲ್ಲಿಯೇ ವಾಸವಾಗಿದ್ದಾನೆ. ಆತನಿಗೆ ಆಹಾರವನ್ನು ಕುಟುಂಬದವರು ಹಗ್ಗದಲ್ಲಿ ಕಟ್ಟಿ, ಮೇಲಕ್ಕೆ ಕಳುಹಿಸುತ್ತಾರೆ. ಆತ ರಾತ್ರಿ ಹೊತ್ತು ಮರದಿಂದ ಕೆಳಗಿಳಿದು ಮಲ ವಿಸರ್ಜನೆ ಮಾಡಿ ಮತ್ತೆ ಮರಕ್ಕೆ ಏರುತ್ತಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

     

    POLICE JEEP

    ತಾಳೆ ಮರದ ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿವೆ. ಜನರು ತಮ್ಮ ಮನೆಯಲ್ಲಿ ಏನು ಮಾಡುತ್ತಾರೆ ಎಂಬುದನ್ನು ಆತ ಗಮನಿಸುತ್ತಿರುತ್ತಾನೆ. ಇದು ಅವರ ಗೌಪ್ಯತೆಗೆ ಧಕ್ಕೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರಾಮದ ಅನೇಕ ಮಹಿಳೆಯರೂ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಅವರು ಅಲ್ಲಿನ ವೀಡಿಯೋ ಮಾಡಿ ತೆರಳಿದ್ದಾರೆ ಎಂದು ಗ್ರಾಮದ ಮುಖಂಡ ದೀಪಕ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಪತ್ತೆ ಮಾಡಲು ಚಿರತೆಗೂ ಬಂತು ಆಧಾರ್ ಕಾರ್ಡ್

    ರಾಮ್ ಪ್ರವೇಶ್‌ಗೆ ನೆರೆಹೊರೆಯವರು ಎಷ್ಟು ಕೇಳಿಕೊಂಡರೂ ಮರದಿಂದ ಕೆಳಗೆ ಇಳಿಯಲು ನಿರಾಕರಿಸಿದ್ದಾನೆ. ಪೊಲೀಸರಿಗೂ ಕರೆ ಮಾಡಿ ಕೆರೆಸಿದಾಗ ಅದಕ್ಕೂ ಆತ ಕಿವಿಗೊಡದೇ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಸಂಚರಿಸೋ ಮಾರ್ಗದಲ್ಲಿ ಕೃತಕ ಹಸಿರೀಕರಣ- ರಸ್ತೆ ಮಧ್ಯೆ ಬೆಳೆದ ಪಾಮ್ ಗಿಡ ನೆಡೆಸಲು ಮುಂದಾದ ಅಜಯ್ ಸಿಂಗ್

    ರಾಹುಲ್ ಸಂಚರಿಸೋ ಮಾರ್ಗದಲ್ಲಿ ಕೃತಕ ಹಸಿರೀಕರಣ- ರಸ್ತೆ ಮಧ್ಯೆ ಬೆಳೆದ ಪಾಮ್ ಗಿಡ ನೆಡೆಸಲು ಮುಂದಾದ ಅಜಯ್ ಸಿಂಗ್

    ಕಲಬುರಗಿ: ಫೆಬ್ರವರಿ 12 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಲಬುರಗಿಯ ಜೇವರ್ಗಿ ಪಟ್ಟಣಕ್ಕೆ ಆಗಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಅವರು ಆಗಮಿಸುವ ರಸ್ತೆ ಮಾರ್ಗದಲ್ಲಿ ಅಲಂಕಾರಿಕ ಗಿಡಗಳನ್ನು ನೆಡಲಾಗುತ್ತಿದೆ.

    ಈ ಮೂಲಕ ಕೃತಕ ಹಸಿರೀಕರಣ ಮಾಡಲು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಮುಂದಾಗಿದ್ದಾರೆ. ರಾಹುಲ್ ಗಾಂಧಿ ಸಂಚರಿಸುವ ಮಾರ್ಗ ಮಧ್ಯದ ಉದ್ದಕ್ಕೂ ಸುಮಾರು 14 ಸಾವಿರ ರೂಪಾಯಿ ಬೆಲೆಯ, ಬೆಳೆದು ನಿಂತ ಪಾಮ್ ಗಿಡಗಳನ್ನು ನೆಡಲಾಗುತ್ತಿದೆ.

    ಯಾವ ಯೋಜನೆ ಅಥವಾ ಯಾರ ಅನುದಾನದಲ್ಲಿ ಈ ದುಂದುವೆಚ್ಚ ಮಾಡಲಾಗುತ್ತಿದೆ ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.