Tag: Pallavi Patel

  • ಮೊದಲ ದಿನದಿಂದ ಗೆಲುವು ಸ್ಪಷ್ಟವಾಗಿದೆ: ಯುಪಿ ಡಿಸಿಎಂ ಸೋಲಿಸಿದ ಪಲ್ಲವಿ ಪಟೇಲ್

    ಮೊದಲ ದಿನದಿಂದ ಗೆಲುವು ಸ್ಪಷ್ಟವಾಗಿದೆ: ಯುಪಿ ಡಿಸಿಎಂ ಸೋಲಿಸಿದ ಪಲ್ಲವಿ ಪಟೇಲ್

    ಲಕ್ನೋ: ಸಮಾಜವಾದಿ ಪಕ್ಷದ ಮೈತ್ರಿಕೂಟದ ಸವಾಲನ್ನು ಬದಿಗೊತ್ತಿ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ದಿನವೇ ನಮ್ಮ ಗೆಲುವು ಸ್ಪಷ್ಟವಾಗಿತ್ತು ಎಂದು ಕೇಶವ್ ಮೌರ್ಯ ಅವರನ್ನು ಸೋಲಿಸಿದ ಪಲ್ಲವಿ ಪಟೇಲ್ ತಿಳಿಸಿದರು.

    ಯುಪಿಯಲ್ಲಿ ಗೆದ್ದ ಬಳಿಕ ಮೊದಲಬಾರಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಲ್ಲವಿ ಅವರು, ಸಿರತುದಲ್ಲಿನ ನನ್ನ ಗೆಲುವು ಮೊದಲ ದಿನದಿಂದ ಸ್ಪಷ್ಟವಾಗಿತ್ತು. ಏಕೆಂದರೆ ಮೌರ್ಯ ಮತ್ತು ಅವರ ಕುಟುಂಬವು ಸೃಷ್ಟಿಸಿದ ಅವ್ಯವಸ್ಥೆಯಿಂದ ಸಿರತುವಿನ ಜನರು ನೋವಿನಲ್ಲಿ ಮುಳುಗಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಸಭಾಪತಿ ಮೇಲೆ FIR ಹಾಕಿದ ಅಧಿಕಾರಿಯನ್ನ ಅಮಾನತು ಮಾಡಿ – ಪಕ್ಷಾತೀತವಾಗಿ ಒತ್ತಾಯ

    ಪಲ್ಲವಿ ಹಿನ್ನೆಲೆ:
    ಪಲ್ಲವಿ ಪಟೇಲ್ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದ ಸೈಂಟಿಸ್ಟ್ ಆಗಿದ್ದರು. 2009ರಲ್ಲಿ ಪಲ್ಲವಿ ತಂದೆ ಮತ್ತು ಅಪ್ನಾ ದಳದ ಸಂಸ್ಥಾಪಕ ಸೋನೆಲಾಲ್ ಪಟೇಲ್ ಅವರ ಮರಣದ ನಂತರ 2009 ರಲ್ಲಿ ತಮ್ಮ ವೃತ್ತಿಯನ್ನು ತೊರೆದು ರಾಜಕೀಯಕ್ಕೆ ಸೇರಿದ್ದರು.

    ಪಟೇಲ್ ಅವರ ಮರಣದ ನಂತರ, ಪಲ್ಲವಿ ಪಟೇಲ್ ಅವರ ತಾಯಿ ಕೃಷ್ಣಾ ಪಟೇಲ್ ಪಕ್ಷದ ಮುಖ್ಯಸ್ಥರಾದರು. 2014 ರ ಲೋಕಸಭಾ ಚುನಾವಣೆಯಲ್ಲಿ, ಅವರ ಸಹೋದರಿ ಮತ್ತು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಪೂರ್ವ ಯುಪಿಯ ಮಿರ್ಜಾಪುರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.

    ಗೆದ್ದ ಸ್ವಲ್ಪದಿನಗಳ ಬಳಿಕ ಅನುಪ್ರಿಯಾ ಪಟೇಲ್ ಪ್ರತ್ಯೇಕ ಬಣವನ್ನು ರಚಿಸುವುದರೊಂದಿಗೆ ಪಕ್ಷವು ಬೇರ್ಪಟ್ಟಿತು. ನಂತರ ಅಪ್ನಾ ದಳ, ಬಿಜೆಪಿ ಜೊತೆ ಸೇರಿಕೊಂಡಿತು. 2019 ರಲ್ಲಿ ಲೋಕಸಭೆಗೆ ಮರು ಚುನಾಯಿತರಾದ ಕೇಂದ್ರ ಸಚಿವರಿಗೆ ನನ್ನ ಸಹೋದರಿಯೇ ಪ್ರಚಾರ ಮಾಡಿದರು. ಈ ವೇಳೆ ಸಿರತುದಲ್ಲಿ ನನ್ನ ವಿರುದ್ಧವೇ ಪ್ರಚಾರ ಮಾಡಲು ಮುಂದಾಗಿದ್ದರು ಎಂದು ವಿವರಿಸಿದರು.

    ನನ್ನ ಸಹೋದರಿ ನನ್ನ ವಿರುದ್ಧವೇ ಪ್ರಚಾರ ಮಾಡಿರುವುದಕ್ಕೆ ನನಗೆ ಯಾವುದೇ ಬೇಸರಗಳಿಲ್ಲ. ಅವರು ಯಾವುದೂ ಒತ್ತಡದಲ್ಲಿರಬೇಕು. ಈ ಪ್ರಚಾರದಿಂದ ನನಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಆಕೆ ಪ್ರಚಾರವು ನನಗೆ ಕೆಲವು ರೀತಿಯಲ್ಲಿ ಒಳ್ಳೆಯದೆ ಆಗಿದೆ. ಅದಕ್ಕಾಗಿ ನಾನು ಅವಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತನ್ನ ಸಹೋದರಿಯೊಂದಿಗಿನ ಸಂಬಂಧದ ಬಗ್ಗೆ ಹೇಳಿದರು. ಇದನ್ನೂ ಓದಿ: ಯಾರೇ ಲಂಚ ಕೇಳಿದರೂ ಆಡಿಯೋ – ವೀಡಿಯೋ ನನಗೇ ಕಳುಹಿಸಿ: ಪಂಜಾಬ್ ಸಿಎಂ

    ಕೇಶವ್ ಮೌರ್ಯ ವಿರುದ್ಧ 7,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸಿರತುದಿಂದ ಮೊದಲ ಬಾರಿಗೆ ಪಲ್ಲವಿ ಗೆದ್ದಿದ್ದಾರೆ. ಈ ವೇಳೆ ಸಿರತ್ತುನಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಗದ್ದಲ ಸೃಷ್ಟಿಸುತ್ತಿದ್ದ ಎರಡೂ ಕಡೆಯ ಬೆಂಬಲಿಗರನ್ನು ಚದುರಿಸಲು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ಹಲವು ಬಾರಿ ಬಲಪ್ರಯೋಗ ಮಾಡಬೇಕಾಯಿತು.