Tag: pallavi joshi

  • ಶೂಟಿಂಗ್ ಸೆಟ್ ನಲ್ಲಿ ಅವಘಡ: ‘ದಿ ವ್ಯಾಕ್ಸಿನ್ ವಾರ್’ ನಟಿಗೆ ಗಾಯ

    ಶೂಟಿಂಗ್ ಸೆಟ್ ನಲ್ಲಿ ಅವಘಡ: ‘ದಿ ವ್ಯಾಕ್ಸಿನ್ ವಾರ್’ ನಟಿಗೆ ಗಾಯ

    ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಪತ್ನಿ ಹಾಗೂ ನಟಿ ಪಲ್ಲವಿ ಜೋಶಿ (Pallavi Joshi) ಗಾಯಗೊಂಡಿದ್ದಾರೆ. ದಿ ವ್ಯಾಕ್ಸಿನ್ ವಾರ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅವರು, ಶೂಟಿಂಗ್ ವೇಳೆಯಲ್ಲಿ ನಡೆದ ಅವಘಡದಿಂದ (Accident) ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಂತರ ದಿ ವ್ಯಾಕ್ಸಿನ್ ವಾರ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು ನಿರ್ದೇಶಕ ವಿವೇಕ್, ಒಂದು ಹಂತದ ಶೂಟಿಂಗ್ ಮುಗಿಸಿಕೊಂಡು, ಎರಡನೇ ಹಂತದ ಚಿತ್ರೀಕರಣಕ್ಕಾಗಿ ಅವರು ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಪಲ್ಲವಿ ಜೋಶಿ ಅವರು ಚಿತ್ರೀಕರಣಕ್ಕೆ ಬಂದಾಗ, ಕಾರು ಅಪಘಾತವಾಗಿ ಗಾಯಗೊಂಡಿದ್ದಾರೆ. ಆತಂಕ ಪಡುವಂತಹದ್ದು ಏನೂ ಆಗಿಲ್ಲವಾದರೂ, ಚಿತ್ರೀಕರಣವನ್ನು ನಿಲ್ಲಿಸಿದ್ದಾರಂತೆ ವಿವೇಕ್.

    ಅಂದುಕೊಂಡಂತೆ ಆಗಿದ್ದರೆ, ಈ ಹಂತದ ಚಿತ್ರೀಕರಣದಲ್ಲೇ ಕಾಂತರ ನಟಿ ಸಪ್ತಮಿ ಗೌಡ (Saptami Gowda) ಭಾಗಿಯಾಗಬೇಕಿತ್ತು. ಇಂದಿನಿಂದ ಅವರ ಭಾಗದ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ಶೂಟಿಂಗ್ ನಿಲ್ಲಿಸಿದ ಕಾರಣದಿಂದಾಗಿ ಸಪ್ತಮಿ ಗೌಡ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಪಲ್ಲವಿ ಜೋಶಿ ಅವರ ಜೊತೆ ಸಪ್ತಮಿ ಗೌಡ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ. ಇದೊಂದು ಹೊಸ ರೀತಿಯ ಪಾತ್ರವಂತೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಕೊರೋನಾ ವೇಳೆಯಲ್ಲಿ ವ್ಯಾಕ್ಸಿನ್ ಎಷ್ಟು ಮಹತ್ವವಾಗಿತ್ತು, ವ್ಯಾಕ್ಸಿನ್ ಗಾಗಿ ಎಷ್ಟೆಲ್ಲ ತಲ್ಲಣಗಳನ್ನು ಸೃಷ್ಟಿ ಮಾಡಲಾಯಿತು. ವ್ಯಾಕ್ಸಿನ್ ಹಿಂದಿನ ನಿಜವಾದ ಕಹಾನಿಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು. ವ್ಯಾಕ್ಸಿನ್ ವಿಷಯದಲ್ಲಿ ಭಾರತವೇ ಹೆಮ್ಮೆ ಪಡುವಂತಹ ವಿಷಯವನ್ನೂ ಅವರು ಈ ಸಿನಿಮಾದಲ್ಲಿ ಹೇಳಲಿದ್ದಾರಂತೆ. ಆರೇಳು ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಕೂಡ ಆಗಲಿದೆ ಎನ್ನುವ ಮಾಹಿತಿ ಇದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೇ 13ರಿಂದ ಕನ್ನಡದಲ್ಲೂ ನೋಡಿ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ

    ಮೇ 13ರಿಂದ ಕನ್ನಡದಲ್ಲೂ ನೋಡಿ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ

    ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿದ್ದ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ, ಇದೀಗ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿ ಜೀ 5 ಓಟಿಸಿಯಲ್ಲಿ ರಿಲೀಸ್ ಆಗುತ್ತಿದೆ. ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯ, ನಿರಾಶ್ರಿತರ ಹತ್ಯೆ ಕುರಿತು ತಯಾರಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನ್ನು ಕೊಳ್ಳೆ ಹೊಡೆದಿತ್ತು. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು, ಸೆಲೆಬ್ರಿಟಿಗಳು, ಜನಸಾಮಾನ್ಯರು ಸಿನಿಮಾ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾ ಮೇ 13ಕ್ಕೆ ಜೀ5 ಒಟಿಟಿಯಲ್ಲಿ ಪ್ರಿಮಿಯರ್ ಆಗಲಿದೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅತಿರಥ ಮಹಾರಥ ತಾರಬಳಗ ನಟಿಸಿದ್ದರು. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರು. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

    1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಸಿನಿಮಾವನ್ನು ಕಟ್ಟಿಕೊಡಲಾಗಿತ್ತು. ಹೀಗಾಗಿ ಈ ಸಿನಿಮಾ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ವಿರೋಧ ನಡುವೆಯೂ ಕಾಶ್ಮೀರ್ ಫೈಲ್ಸ್ ಗೆಲುವಿನ ನಗೆ ಬೀರಿತ್ತು. ಬಾಲಿವುಡ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿತ್ತು. ಆದ್ರೇ ಜೀ 5 ಒಟಿಟಿಯಲ್ಲಿ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ಒಟಿಟಿಯಲ್ಲಿ ಪ್ರದರ್ಶನ ಕಾಣಲಿದೆ.

  • ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿ – ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ ಆಹ್ವಾನ

    ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿ – ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ ಆಹ್ವಾನ

    ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಕೇವಲ ಜನ ಮೆಚ್ಚುಗೆ ಮತ್ತು ಬಾಕ್ಸ್ ಆಫೀಸ್ಸಿನ ಕಲೆಕ್ಷನ್ ಮಾತ್ರ ಕೈ ಹಿಡಿದಿಲ್ಲ. ದೇಶದಾಚೆಯೂ ಈ ಸಿನಿಮಾ ನಿರ್ದೇಶಕನಿಗೆ ಗೌರವ ಸಿಗುತ್ತಿದೆ. ಭಾರತೀಯರಿಂದ ಮೆಚ್ಚುಗೆ ಪಡೆದಿದ್ದ ಈ ಸಿನಿಮಾವನ್ನು ಬೇರೆ ದೇಶಗಳಲ್ಲಿಯೂ ತೋರಿಸುವುದಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ. ಇದಕ್ಕೆ ಕಾರಣ ಬ್ರಿಟನ್ ಸಂಸತ್ ಅವರಿಗೆ ನೀಡಿರುವ ಗೌರವ. ಪತ್ನಿ ಸಮೇತ ಬ್ರಿಟನ್ ಸಂಸತ್ ಗೆ ಬರಲು ಅದು ಆಹ್ವಾನ ನೀಡಿದೆ. ಈ ವಿಷಯವನ್ನು ಸ್ವತಃ ವಿವೇಕ್ ಅವರೇ ಹಂಚಿಕೊಂಡಿದ್ದಾರೆ.

    ‘ಪತ್ನಿ ಪಲ್ಲವಿ ಮತ್ತು ನನಗೆ ಬ್ರಿಟನ್ ಸಂಸತ್‌ನಿಂದ ಆಹ್ವಾನ ಬಂದಿದೆ. ಮುಂದಿನ ತಿಂಗಳು ನಾವು ಬ್ರಿಟನ್‌ಗೆ ಹೋಗುತ್ತೇವೆ. ಕಾಶ್ಮೀರ ಪಂಡಿತರ ನರಮೇಧದ ಸಂದೇಶವನ್ನು ಪ್ರಪಂಚದ ಮೂಲೆ, ಮೂಲೆಗೆ ತಲುಪಿಸಬೇಕಾಗಿದೆ. ಬ್ರಿಟನ್ ಸಂಸತ್ತಿಗೆ ಹೋಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ’ ಎಂದು ನಿರ್ದೇಶಕ ಅಗ್ನಿಹೋತ್ರಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ವಿಶ್ವದಾದ್ಯಂತ ಮೆಚ್ಚುಗೆ ಪಡೆದುಕೊಳ್ಳುತ್ತಿರುವುದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಂಪೂರ್ಣವಾಗಿ ಹಿಂದಿಯಲ್ಲೇ ಇದೆ. ದಕ್ಷಿಣ ಭಾರತದಲ್ಲಿ ಹಿಂದಿ ಮಾತನಾಡುವವರ ಹಾಗೂ ಹಿಂದಿ ಭಾಷೆಯನ್ನು ಅರ್ಥೈಸಿಕೊಳ್ಳುವವರ ಸಂಖ್ಯೆ ತುಂಬಾನೇ ಕಡಿಮೆ ಇದೆ ಹೀಗಾಗಿ, ಎಲ್ಲಾ ವಿಚಾರಗಳು ಇಲ್ಲಿಯವರಿಗೆ ತಲುಪದೇ ಇರಬಹುದು. ಈ ಕಾರಣಕ್ಕೆ ಸಿನಿಮಾವನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಮಾಡಲು ಚಿಂತನೆ ನಡೆದಿದೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ 1990ರ ಸಮಯದಲ್ಲಿ ಕಾಶ್ಮೀರದ ಪಂಡಿತರು ಅನುಭವಿಸಿದ ಕಷ್ಟಗಳೇನು ಎನ್ನುವುದನ್ನು ಸಿನಿಮಾದಲ್ಲಿ ನಿಖರವಾಗಿ ತೋರಿಸಲಾಗಿದೆ. ಸಿನಿಮಾ ಮೂಲಕ ಕಾಶ್ಮೀರದ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ವಿವೇಕ್ ಅಗ್ನಿಹೋತ್ರಿ ಯಶಸ್ಸು ಸಾಧಿಸಿದ್ದಾರೆ.