Tag: Palike

  • ಪಾಲಿಕೆ ಟ್ಯಾಕ್ಸ್ ಕಲೆಕ್ಟರ್‌ನಿಂದ ಸ್ನೇಹಿತನ ಕೊಲೆಯತ್ನ- ದೊಣ್ಣೆಗಳಿಂದ ಥಳಿಸಿ, ಕಾರು ಹತ್ತಿಸಿದ ಪಾಪಿ

    ಪಾಲಿಕೆ ಟ್ಯಾಕ್ಸ್ ಕಲೆಕ್ಟರ್‌ನಿಂದ ಸ್ನೇಹಿತನ ಕೊಲೆಯತ್ನ- ದೊಣ್ಣೆಗಳಿಂದ ಥಳಿಸಿ, ಕಾರು ಹತ್ತಿಸಿದ ಪಾಪಿ

    ಬೆಂಗಳೂರು: ಅವರಿಬ್ಬರು ಒಂದು ಕಾಲದ ಕುಚಿಕುಗಳು. ಗೆಳೆಯರ ನಡುವೆ ಅದೊಂದು ಕಾರಣಕ್ಕೆ ಬಿರುಕು ಮೂಡಿತ್ತು. ಇಬ್ಬರ ನಡುವೆ ಉಂಟಾದ ಬಿರುಕು ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ (Tax Collector) ಸ್ನೇಹಿತ ರೌಡಿಶೀಟರ್ ಕೊಲೆ ಮಾಡಲು ಯತ್ನಿದ್ದಾನೆ.

    ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಒಂದು ಕಾಲದ ತನ್ನ ಸ್ನೇಹಿತ ಗಗನ್ ಕುಮಾರ್ ಗೆ ಸ್ಕೆಚ್ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಮಾರ್ಚ್ 21ರ ಮುಂಜಾನೆ 5.30 ರಿಂದ 6 ಗಂಟೆ ಸುಮಾರಿಗೆ ಜಯಮಾಹಲ್ ರಸ್ತೆ (JayaMahal Road) ಯ ಸಚಿವರ ಮನೆ ಮುಂಭಾಗ ಸ್ನೇಹಿತ ರೌಡಿಶೀಟರ್ ಗಗನ್ ಕುಮಾರ್‍ಗೆ ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಹಾಗೂ ಗ್ಯಾಂಗ್ ದೊಣ್ಣೆ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಗಗನ್ ಕುಮಾರ್ ಸಾಯಲಿಲ್ಲಿ ಅನ್ನೋ ಕಾರಣಕ್ಕೆ ರೌಡಿ ಶೀಟರ್ ಗಗನ್‍ನನ್ನ ಕೆಳಗೆ ಬೀಳಿಸಿ ಕೆಎ 03 ಎಂಫ್ 3347 ನಂಬರ್‍ನ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಬಳಿಕ ಎಸ್ಕೇಪ್ ಆಗಿದ್ದಾರೆ. ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಸುನೀಲ್ ಕುಮಾರ್ ಅಂಡ್ ಗ್ಯಾಂಗ್‍ನಿಂದ ದಾಳಿಗೆ ಒಳಗಾಗಿದ್ದ ಗಗನ್, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜೆ.ಸಿ ನಗರ ಪೊಲೀಸರು ಹಲ್ಲೆಗೊಳಗಾಗಿದ್ದ ಗಗನ್‍ನನ್ನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್‍ಮ್ಯಾನ್ ಸಾವು- ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    ಗಾಯಾಳು ರೌಡಿಶೀಟರ್ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಆರೋಪಿ ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಸುನೀಲ್ ಕುಮಾರ್ ನನ್ನ ಬಂಧನ ಮಾಡಿರೋ ಜೆ.ಸಿ ನಗರ ಪೊಲೀಸರು ವಿಚಾರಣೆ ಮಾಡಿದಾಗ ಘಟನೆ ಹಿಂದಿನ ಸತ್ಯ ಹೊರಬಿದ್ದಿದೆ. ಸುನೀಲ್ ಕುಮಾರ್ ಹಾಗೂ ಗಗನ ನಡುವೆ ಆಸ್ತಿಯ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಸಮಸ್ಯೆ ಬಗೆಹರಿಯದೇ ಇದ್ದಾಗ ಮಾರ್ಚ್ 20 ರಂದು ಗಗನ್ ಕರೆಸಿಕೊಂಡು ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನೀಲ್ ಕುಮಾರ್, ಅರುಣ, ಕೃಷ್ಣ ನಾಲ್ವರೂ ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ.

    ಘಟನೆ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರೋ ಜೆ.ಸಿ. ನಗರ ಪೊಲೀಸರು ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಸುನೀಲ್ ಕುಮಾರ್ ಬಂಧಿಸಿದ್ದು, ಗ್ಯಾಂಗ್ ಸದಸ್ಯರಾದ ಅರುಣ್ , ಕೃಷ್ಣನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ರಕ್ಷಣೆ ಕೋರಿ ಪತಿ ವಿರುದ್ಧವೇ ದೂರು ದಾಖಲಿಸಿದ ಮಹಾನಗರ ಪಾಲಿಕೆ ಸದಸ್ಯೆ

    ರಕ್ಷಣೆ ಕೋರಿ ಪತಿ ವಿರುದ್ಧವೇ ದೂರು ದಾಖಲಿಸಿದ ಮಹಾನಗರ ಪಾಲಿಕೆ ಸದಸ್ಯೆ

    ಹುಬ್ಬಳ್ಳಿ: ರಕ್ಷಣೆ ಕೋರಿ ಪತಿ ವಿರುದ್ಧವೇ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನನ್ನ ಮೇಲೆ ದೌರ್ಜನ್ಯ ಎಸಗಿದಲ್ಲದೇ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಗಂಡನ ವಿರುದ್ಧ ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯೆ ಶೃತಿ ಛಲವಾದಿ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

    ಶೃತಿ ಪತಿ ಸಂತೋಷ್‌ ಪರಸ್ತ್ರೀಯೊಂದಿಗೆ ಮೊಬೈಲ್‍ನಲ್ಲಿ ಮಾತನಾಡುವ ಮತ್ತು ಮೆಸೇಜ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ. ಈ ವಿಷಯಕ್ಕೆ ಸಾಕಷ್ಟು ಬಾರಿ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಈ ಜಗಳ ಅತೀರೇಖಕ್ಕೆ ತಲುಪಿ ಪತ್ನಿ ಶೃತಿ ಗರ್ಭಿಣಿಯೆಂದು ಲೆಕ್ಕಿಸದೆ ಸಂತೋಷ್‌ ಹಲ್ಲೆ ನಡೆಸಿದ್ದಾನೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕನ್ನಯ್ಯಲಾಲ್ ಹತ್ಯೆ ಘೋರ, ಖಂಡನೀಯ: ಬಿ.ಕೆ.ಹರಿಪ್ರಸಾದ್

    POLICE JEEP

    ನಾನು ಮತ್ತೊಬ್ಬಳನ್ನು ಮದುವೆಯಾಗುತ್ತೇನೆ. ನಿನಗೆ ವಿಚ್ಛೆದನ ನೀಡಿ ಮನೆ ಬಿಟ್ಟು ಹೋಗು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಸಂತೋಷ್, ಕೊಲೆ ಮಾಡಿಸುತ್ತೇನೆಂದು ಪತ್ನಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: 24 ಗಂಟೆ ಹೋಟೆಲ್ ತೆರೆಯೋಕೆ ಅನುಮತಿ ಕೊಡೋದು ಕಷ್ಟ: ಆರಗ ಜ್ಞಾನೇಂದ್ರ

    Live Tv

  • ಮಾಸ್ಕ್ ಹಾಕದೇ ಹೊರಗೆ ಬಂದ್ರೆ ಹುಷಾರ್ – ಪಾಲಿಕೆಯಿಂದ ದಂಡದ ಬಿಸಿ

    ಮಾಸ್ಕ್ ಹಾಕದೇ ಹೊರಗೆ ಬಂದ್ರೆ ಹುಷಾರ್ – ಪಾಲಿಕೆಯಿಂದ ದಂಡದ ಬಿಸಿ

    ಮಂಗಳೂರು: ಕೊರೊನಾ ಹರಡುವಿಕೆ ತಡೆಯಲು ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ 200 ರೂಪಾಯಿ ದಂಡ ವಿಧಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ.

    ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಈ ಕಾರ್ಯಾಚರಣೆ ಆರಂಭಿಸಿದ್ದಾರೆ. ಮಾಸ್ಕ್ ಹಾಕಿಕೊಳ್ಳದೆ ಬೈಕ್, ಕಾರುಗಳಲ್ಲಿ ಸಂಚರಿಸುವವರು ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುವವರ ಮೇಲೆ ಪಾಲಿಕೆಯ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದೆ.

    ನಗರದಲ್ಲಿ ಅಲ್ಲಲ್ಲಿ ಜನರು ಮುಖಕ್ಕೆ ಮಾಸ್ಕ್ ಧರಿಸದೇ ಓಡಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಪಾಲಿಕೆ ಆಯುಕ್ತರು ಹಾಗೂ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ನೇತೃತ್ವದ ಆರೋಗ್ಯ ಅಧಿಕಾರಿಗಳ ತಂಡ ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ.

    ಜನರಿಗೆ ದಂಡ ವಿಧಿಸುವುದು ನಮ್ಮ ಉದ್ದೇಶವಲ್ಲ. ಆದರೆ ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಜನರು ಜಾಗೃತರಾಗಬೇಕು. ಮಾಸ್ಕ್ ಇಲ್ಲದೇ ಹೊರಗೆ ಬರಬಾರದು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಪಾಲಿಕೆ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

  • ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊಂದು ಗೌರವದ ಗರಿ

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊಂದು ಗೌರವದ ಗರಿ

    – ಸ್ವಚ್ಛತಾ ಸಮೀಕ್ಷೆಯಲ್ಲಿ 3ನೇ ರ‍್ಯಾಂಕ್

    ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. ಸ್ವಚ್ಛ ಭಾರತ ಸಮೀಕ್ಷೆಯಲ್ಲಿ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

    ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಭಾರತ ಸರ್ವೇಕ್ಷಣೆಯಲ್ಲಿ (ಸಮೀಕ್ಷೆಯಲ್ಲಿ) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೂರನೇ ಸ್ಥಾನ ಬಂದಿದೆ. ಗಣೇಶ ಚತುರ್ಥಿಯ ಮೊದಲ ದಿನ ಕೇಂದ್ರ ಸರ್ಕಾರ ಪ್ರಕಟಿಸಿರುವ ಸ್ವಚ್ಛತಾ ವರದಿಯಲ್ಲಿ ಮೈಸೂರಿಗೆ ಮೊದಲ ಸ್ಥಾನ, ತುಮಕೂರಿಗೆ ಎರಡನೇ ಸ್ಥಾನ ಬಂದಿದೆ. ಇನ್ನೂ ರಾಜ್ಯದ ಐದು ಸ್ವಚ್ಛ ನಗರಗಳ ಸಾಲಿನಲ್ಲಿ ಹು-ಧಾ ಮಹಾನಗರ ಮೂರನೇ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.

    ದೇಶದ ರ‍್ಯಾಕಿಂಗ್‍ನಲ್ಲಿ 172ನೇ ಸ್ಥಾನದಲ್ಲಿದೆ. ಚುನಾಯಿತ ಪ್ರತಿನಿಧಿಗಳ ಕೌನ್ಸಿಲ್ ಇಲ್ಲದೇ ಒಂದೂವರೆ ವರ್ಷಗಳಾಗಿದ್ದು, ಆಡಳಿತ ಮಂಡಳಿಯ ದೃಷ್ಟಿ ಕೊರೊನಾ ನಿಯಂತ್ರಣದತ್ತ ನೆಟ್ಟಿದೆ. ಇದರ ಮಧ್ಯೆ ಹು-ಧಾ ಮಹಾನಗರ ಪಾಲಿಕೆ ರಾಜ್ಯದಲ್ಲಿ ಮೂರನೇ ರ‍್ಯಾಂಕ್ ಪಡೆದಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಹು-ಧಾ ಮಹಾನಗರದ ಸ್ವಚ್ಛತಗೆ ಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳು ಪಾಲಿಕೆಗೆ ಗೌರವದ ಗರಿ ಮುಡಿಗೇರಿಸಿಕೊಳ್ಳಲು ಸೂಕ್ತ ನಿದರ್ಶನವಾಗಿದೆ.

    ಸ್ಮಾರ್ಟ್ ಸಿಟಿ ಕಾಮಗಾರಿ ಜೊತೆ ಜೊತೆಗೆ ಸ್ವಚ್ಛ ಭಾರತದ ಯೋಜನೆಗಳಲ್ಲಿ ಸೂಕ್ತ ನಿರ್ಧಾರವನ್ನು ಪಾಲಿಕೆ ತೆಗೆದುಕೊಳ್ಳುವ ಮೂಲಕ ಒಳ್ಳೆಯ ಫಲಿತಾಂಶವನ್ನು ಪಾಲಿಕೆ ಪಡೆದುಕೊಂಡಿದೆ. ಅಲ್ಲದೇ ಮನೆ ಮನೆಗೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ, ಜನರಲ್ಲಿ ಮೂಡಿದ ಅರಿವು, ಸ್ವಚ್ಛತಾ ಸಾಮಗ್ರಿ ಹಾಗೂ ಯಂತ್ರೋಪಕರಣಗಳು ಸಮರ್ಪಕ ಬಳಕೆಯಿಂದ ಹು-ಧಾ ಮಹಾನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪೌರಕಾರ್ಮಿಕರ ಕಾರ್ಯವನ್ನು ಇಲ್ಲಿ ಸ್ಮರಿಸಬಹುದಾಗಿದೆ.

  • ತೆರಿಗೆ ಸಂಗ್ರಹಕ್ಕೆ ವರ್ಕೌಟ್ ಆದ ಪಾಲಿಕೆ ಪ್ಲಾನ್- 2 ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹ

    ತೆರಿಗೆ ಸಂಗ್ರಹಕ್ಕೆ ವರ್ಕೌಟ್ ಆದ ಪಾಲಿಕೆ ಪ್ಲಾನ್- 2 ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹ

    ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್ ಬಂದ ನಂತರ ವಿಶ್ವದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೋಗಿದೆ. ಭಾರತದಲ್ಲೂ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಇತ್ತ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗುತ್ತಾ ಬರುತ್ತಿದೆ. ಆದರೆ ಲಾಕ್‍ಡೌನ್ ನಡುವೆಯೂ ಅವಳಿ ನಗರದ ಮಹಾನಗರ ಪಾಲಿಕೆಯ ಖಜಾನೆಗೆ ಕೋಟಿ ಕೋಟಿ ಹಣ ಹರಿದು ಬಂದಿದೆ.

    ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೊರೊನಾ ಲಾಕ್‍ಡೌನ್ ಬರಸಿಡಿಲು ಬಡಿದಂತಾಗಿತ್ತು. ಹೀಗಾಗಿ ಆರ್ಥಿಕ ಪುನಶ್ಚೇತನಕ್ಕೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಮಾಡಿದ ಐಡಿಯಾ ವರ್ಕೌಟ್ ಆಗಿದೆ.

    ಜನ ಕಚೇರಿಗೆ ಬಾರದೇ ಆನ್‍‍ಲೈನ್‍‍ನಲ್ಲಿ ತೆರಿಗೆ ಪಾವತಿಸುವಂತೆ ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಪಾಲಿಕೆ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಜನತೆ ಆಸ್ತಿ ತೆರಿಗೆಯನ್ನ ಆನ್‍ಲೈನ್ ಮೂಲಕ ಪಾವತಿಸಿದ್ದಾರೆ. ಪರಿಣಾಮ ಮಹಾನಗರ ಪಾಲಿಕೆ ಲಾಕ್‍ಡೌನ್ ಸಂದರ್ಭದಲ್ಲೂ ಬರೋಬ್ಬರಿ 2 ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ತಿಳಿಸಿದ್ದಾರೆ.

    ಪಾಲಿಕೆ ಅಧಿಕಾರಿಗಳು ಸಾಮಾಜಿಕ ಜಾಲತಾಣ ಬಳಸಿಕೊಂಡು ಆಸ್ತಿ ತೆರಿಗೆ ಕಟ್ಟುವಂತೆ ಜನಜಾಗೃತಿ ಮೂಡಿಸಿದರು. ಮೇ ತಿಂಗಳೊಳಗೆ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಅಷ್ಟೇ ಅಲ್ಲದೇ ಆಸ್ತಿ ತೆರಿಗೆ ದರ ಹೆಚ್ಚಿಸದೇ ಹಳೆ ದರದಲ್ಲೇ ತೆರಿಗೆ ಕಟ್ಟಿಸಿಕೊಂಡಿದ್ದಾರೆ. ಪರಿಣಾಮ ಪಾಲಿಕೆಯ ಬೊಕ್ಕಸಕ್ಕೆ ಹಣ ಹರಿದುಬಂದಿದೆ ಎಂದು ಸ್ಥಳೀಯ ನಿವಾಸಿ ನಾಗರಾಜ್ ಹೇಳಿದರು.

    ಲಾಕ್‍ಡೌನ್ ನಡುವೆ ಆಸ್ತಿ ತೆರಿಗೆ ಸಂಗ್ರಹ ಮಾಡುವುದು ಸವಾಲಿನ ಕೆಲಸವಾಗಿದೆ. ಆದರೆ ಈ ಸವಾಲನ್ನ ಸಾಮಾಜಿಕ ಜಾಲತಾಣಗಳ ಸದ್ಬಳಕೆಯಿಂದ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಲ್ಲದೇ ಪಾಲಿಕೆ ಅಧಿಕಾರಿಗಳು ತೆರಿಗೆ ಸಂಗ್ರಹಣೆ ಮಾಡುವಲ್ಲಿ ಯಶ್ವಸಿಯಾಗಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.

  • ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನ ಡೆಮಾಲಿಷನ್

    ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನ ಡೆಮಾಲಿಷನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿದ್ದ ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನವನ್ನ ಪಾಲಿಕೆ ಅಧಿಕಾರಿಗಳು ತೆರವುಗೊಳಿದ್ದಾರೆ.

    ಬೆಂಗಳೂರಿನ ಶ್ರೀರಾಂಪುರಲ್ಲಿ ಗಂಗೈಯಮ್ಮ ದೇವಸ್ಥಾನವಿದ್ದು, ಪೊಲೀಸ್ ಸರ್ಪಗಾವಲಿನ ನಡುವೆ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಪಾಲಿಕೆ ಅಧಿಕಾರಿಗಳು ದೇವಸ್ಥಾನವನ್ನ ಹಾಗೂ ಅದರೊಳಗೆ ಇದ್ದ ಗಂಗೈಯಮ್ಮ ದೇವಿಯ ವಿಗ್ರಹವನ್ನ ತರೆವುಗೊಳಿಸಿ, ಅರಳಿ ಮರದ ಕೆಳಗಡೆ ಇಟ್ಟು ದೇವಸ್ಥಾನವನ್ನ ಒಡೆದು ಹಾಕಲಾಯ್ತು.

    ಗಂಗೈಯಮ್ಮ ದೇವಸ್ಥಾನ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ವಿಜಯಾ ಎಂಬ ಮಹಿಳೆ ಹೈಕೋರ್ಟ್ ಮೇಟ್ಟಿಲೇರಿದ್ದರು. ನ್ಯಾಯಾಲಯ ದೇವಸ್ಥಾನದ ಜಾಗವನ್ನ ಪರಿಶೀಲನೆ ಮಾಡಿ ತೆರವುಗೊಳಿಸಲು ಆದೇಶ ಮಾಡಿತ್ತು. ಅಧಿಕಾರಿಗಳು ದೇವಸ್ಥಾನವನ್ನ ಒಡೆದು ಹಾಕಲು ಎರಡು ಮೂರು ಬಾರಿ ಪ್ರಯತ್ನ ಮಾಡಿದ್ದರು. ಆದರೆ ಭಕ್ತಾದಿಗಳು ಯಾವುದೇ ಕಾರಣಕ್ಕೂ ದೇವಸ್ಥಾನವನ್ನ ಒಡೆದು ಹಾಕಲು ಬಿಡೋದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರಿಂದ ದೇವಸ್ಥಾನ ತೆರವುಗೊಳಿಸಲು ಆಗಿರಲಿಲ್ಲ.

    ಹೈಕೋರ್ಟ್ ಇದೇ ತಿಂಗಳ 20ರ ಒಳಗಾಗಿ ದೇವಸ್ಥಾನ ತೆರವು ಮಾಡಿ ವರದಿ ನೀಡಲು ಪಾಲಿಕೆಗೆ ಗಡವು ನೀಡಿತ್ತು. ಹೀಗಾಗಿ ಭಕ್ತಾದಿಗಳನ್ನ ಮಂಗಳವಾರ ಸಂಪರ್ಕ ಮಾಡಿ, ದೇವಸ್ಥಾನ ತೆರವುಗೊಳಿಸಲೇ ಬೇಕು ನ್ಯಾಯಾಲಯ 20ನೇ ತಾರೀಖಿನ ಒಳಗಾಗಿ ತೆರವುಗೊಳಿಸಿ ವರದಿಕೊಡುವಂತೆ ಸೂಚಿಸಿದೆ. ಭಕ್ತಾದಿಗಳೆಲ್ಲರು ಸಹಕರಿಸುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಆದರೂ ಭಕ್ತಾದಿಗಳು ಗಲಾಟೆ ಮಾಡುವ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಪೊಲೀಸ್ ಭದ್ರತೆಯ ನಡುವೆ ದೇವಸ್ಥಾನ ತೆರವು ಮಾಡಲಾಯ್ತು.

  • ಮೈಸೂರು ಪಾಲಿಕೆ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

    ಮೈಸೂರು ಪಾಲಿಕೆ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

    ಮೈಸೂರು: ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

    ಬಿಜೆಪಿಯ ಬಿ.ವಿ ರವೀಂದ್ರ 2,555 ಮತಗಳನ್ನು ಪಡೆದರೆ, ಕಾಂಗ್ರೆಸ್ಸಿನ ಆರ್.ರವೀಂದ್ರ ಕುಮಾರ್‍ಗೆ 2,452 ಮತಗಳು, ಜೆಡಿಎಸ್‍ನ ಸ್ವಾಮಿಗೆ 182 ಮತಗಳು ಬಂದಿವೆ. 103 ಮತಗಳಿಂದ ಬಿಜೆಪಿ ಅಭ್ಯರ್ಥಿ ಬಿ.ವಿ.ರವೀಂದ್ರ ಗೆದ್ದಿದ್ದಾರೆ.

    ಉಪಚುನಾವಣೆ ನಡೆದಿದ್ದು ಯಾಕೆ?:
    ಈ ವಾರ್ಡ್‍ನಲ್ಲಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿಯು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಸೋತ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಗೆದ್ದ ಅಭ್ಯರ್ಥಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದು ಸತ್ಯವಾಗಿದೆ ಎಂದು ಆಯ್ಕೆ ರದ್ದುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಈ ವಾರ್ಡ್‍ಗೆ ನವೆಂಬರ್ 18 ರಂದು ಉಪಚುನಾವಣೆ ನಡೆದಿತ್ತು.

  • ಎಲ್ಲೆಂದರಲ್ಲಿ ಕಸ ಎಸೆದ್ರೆ ಹುಷಾರ್- 22 ದಿನಗಳಲ್ಲಿ 13 ಲಕ್ಷ ರೂ. ಸಂಗ್ರಹ

    ಎಲ್ಲೆಂದರಲ್ಲಿ ಕಸ ಎಸೆದ್ರೆ ಹುಷಾರ್- 22 ದಿನಗಳಲ್ಲಿ 13 ಲಕ್ಷ ರೂ. ಸಂಗ್ರಹ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನ ತಡೆಯಲು ಮುಂದಾಗಿರುವ ಪಾಲಿಕೆ ಭಾರೀ ಪ್ರಮಾಣದ ವಸೂಲಿಗೆ ಮುಂದಾಗಿದೆ.

    ಬೆಂಗಳೂರಿನಲ್ಲಿ 22 ದಿನಗಳಲ್ಲಿ ಮಾರ್ಷಲ್‍ಗಳು 13 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದಾರೆ. 2019 ಸೆಪ್ಟೆಂಬರ್ ನಿಂದ ಮಾರ್ಷಲ್‍ಗಳು 198 ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ 50.90 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ. 2020 ಜನವರಿ 1 ರಿಂದ ಜನವರಿ 22ರವರೆಗೆ ಒಟ್ಟು 1,278 ಪ್ರಕರಣಗಳಿಂದ 13.01 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ.

    2019ರ ಸೆಪ್ಟೆಂಬರ್ ನಿಂದ ಇವರೆಗೆ ಪಾಲಿಕೆ ದಂಡದ ರೂಪದಲ್ಲಿ 63.91 ಲಕ್ಷ ರೂಪಾಯಿ ಆದಾಯ ಬಂದಿದೆ. ರಸ್ತೆಗಳಲ್ಲಿ ಕಸ ಎಸೆಯುವವರ ಬಗ್ಗೆ ಪಾಲಿಕೆಯ ಮಾರ್ಷಲ್‍ಗಳು ಪ್ರತಿನಿತ್ಯ ನಿಗಾ ವಹಿಸುತ್ತಿದ್ದಾರೆ. ಪಾಲಿಕೆ ಉದ್ಯಮ ಮಳಿಗೆಯಲ್ಲಿ ಪ್ಲಾಸ್ಟಿಕ್ ಬಳಕೆ, ಹೋಟೆಲ್-ರೆಸ್ಟೋರೆಂಟ್‍ಗಳಲ್ಲಿ ಅನಧಿಕೃತ ಮಧ್ಯಪಾನಕ್ಕೆ ಅವಕಾಶ ಮಾಡಿಕೊಡುವ ಹಾಗೂ ಕಸ ವಿಂಗಡನೆ ಮಾಡದ ಉದ್ಯಮ ಮತ್ತು ಸಂಸ್ಥೆಗಳ ಮೇಲೆ ದಂಡ ವಿಧಿಸಲಾಗಿತ್ತು.

    ಇತ್ತೀಚೆಗೆ ಮನೆಗಳಿಂದ ಕಸ ಸಂಗ್ರಹಣೆ ಮಾಡುವ ವಾಹನಗಳು, ವಿಂಗಡಿಸದ ಕಸವಿದ್ದರೆ ಕಸ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಬ್ಲ್ಯಾಕ್ ಸ್ಪಾಟ್‍ಗಳು ನಿರ್ಮಾಣವಾಗುತ್ತಿದ್ದವು. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಗರದಲ್ಲಿ ಕಸ ಹಾಕುವ ಬ್ಲ್ಯಾಕ್ ಸ್ಪಾಟ್‍ಗಳನ್ನ ನಿರ್ಮೂಲನೆ ಮಾಡಲು ದಂಡ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

  • ರಸ್ತೆ ಅಗಲೀಕರಣಕ್ಕೆ ಬಿಡುತ್ತಿಲ್ಲ ಹಿಡಿದಿರುವ ಗ್ರಹಣ – ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ

    ರಸ್ತೆ ಅಗಲೀಕರಣಕ್ಕೆ ಬಿಡುತ್ತಿಲ್ಲ ಹಿಡಿದಿರುವ ಗ್ರಹಣ – ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ

    ಶಿವಮೊಗ್ಗ: ರಸ್ತೆ ಅಗಲೀಕರಣಕ್ಕಾಗಿ ನಿಮ್ಮ ಮನೆಗಳನ್ನು ತೆರವುಗೊಳಿಸಿ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ ಹಿನ್ನೆಲೆಯಲ್ಲಿ ಮನೆಗಳು ಮತ್ತು ಕಟ್ಟಡಗಳನ್ನೇನೋ ಮಾಲೀಕರು ತೆರವುಗೊಳಿಸಿದ್ದಾರೆ. ಆದರೆ ಅದಕ್ಕೆ ಪರಿಹಾರದ ಹಣ ಸಿಗದೇ ಇದೀಗ ಪರಿತಪಿಸುತ್ತಿದ್ದಾರೆ. ಅತ್ತ ಮನೆಯೂ ಇಲ್ಲ, ಪರಿಹಾರವೂ ಇಲ್ಲ. ಇತ್ತ ರಸ್ತೆ ಅಗಲೀಕರಣ ಕೆಲಸ ಕೂಡ ಆಗಿಲ್ಲ.

    ಇದು ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಮಿಳ್ಳಘಟ್ಟ ಬಡಾವಣೆಯ ಮುಖ್ಯ ರಸ್ತೆಯ ಕಥೆ. ಶಿವಮೊಗ್ಗ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ಹಿಂಭಾಗದಲ್ಲಿ ಈ ಬಡಾವಣೆ ಇದ್ದು, ಬಹಳ ಕಿರಿದಾಗಿದ್ದ ಈ ರಸ್ತೆಯನ್ನು ಅಗಲೀಕರಣಗೊಳಿಸಿ ಸುಗಮ ರಸ್ತೆ ಸಂಚಾರಕ್ಕೆ ಈ ಹಿಂದೆಯೇ ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಗಿತ್ತು. 2014ರಲ್ಲಿ ಈ ರಸ್ತೆ ಅಗಲೀಕರಣ ಕಾಮಗಾರಿಗೆ ತೀರ್ಮಾನಿಸಲಾಗಿದ್ದು, 2016ರಲ್ಲಿ ಇದಕ್ಕೆ ಚಾಲನೆ ಕೂಡ ನೀಡಲಾಗಿತ್ತು.

    ಕ್ರಮೇಣ ರಸ್ತೆ ಅಗಲೀಕರಣಕ್ಕೆ ಪಾಲಿಕೆ ಸಭೆಯಲ್ಲಿ ಅನುಮತಿ ಸಿಕ್ಕ ನಂತರದಲ್ಲಿ ಪರಿಹಾರ ಧನವಾಗಿ ಪ್ರತಿ ಚದರಡಿಗೆ 2 ಸಾವಿರ ರೂ. ನಿಗದಿಪಡಿಸಲಾಗಿತ್ತು. ನಿಮ್ಮ ಕಟ್ಟಡಗಳನ್ನ ಮತ್ತು ನಿಮ್ಮ ಮನೆಗಳನ್ನ ತೆರವುಗೊಳಿಸಿ ಜಾಗ ಖಾಲಿ ಮಾಡಿ ಎಂದು ಪಾಲಿಕೆ ಅಲ್ಲಿನ ನಿವಾಸಿಗಳಿಗೆ ನೋಟಿಸ್ ಕೂಡ ನೀಡಿತ್ತು. ಇದನ್ನು ನಂಬಿಕೊಂಡ ಸುಮಾರು 50ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡ ಮಾಲೀಕರು ಮತ್ತು 50ಕ್ಕೂ ಹೆಚ್ಚು ಮನೆ ಮಾಲೀಕರು ತಮ್ಮ ಕಟ್ಟಡ ಮತ್ತು ಮನೆಗಳನ್ನ ತೆರವುಗೊಳಿಸಿಕೊಂಡು ಪಾಲಿಕೆಯ ಪರಿಹಾರದ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

    ಇನ್ನುಳಿದ ನೂರಕ್ಕೂ ಹೆಚ್ಚು ಕಟ್ಟಡ ಮತ್ತು ಮನೆ ಮಾಲೀಕರು ಕೂಡ ತಮ್ಮ ಜಾಗ ತೆರವುಗೊಳಿಸಲು ಸಿದ್ಧವಿದ್ದರೂ ಕೂಡ ಪಾಲಿಕೆ ನಿರ್ಲಕ್ಷತೆಯಿಂದಾಗಿ ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ. ಯಾಕೆಂದರೆ ಕಟ್ಟಡವಾಗಲಿ ಮನೆಯಾಗಲಿ ತೆರವುಗೊಳಿಸದೇ ಪರಿಹಾರದ ಧನ ಸಿಗೋದಿಲ್ಲ. ಅಕಸ್ಮಾತ್ ತೆರವುಗೊಳಿಸಿಕೊಂಡರೂ ಕೂಡ ಪರಿಹಾರ ಧನ ಸಿಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿ ಇದ್ದೇವೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.

    ಇಲ್ಲಿನ ಮಿಳ್ಳಘಟ್ಟ ಬಡಾವಣೆಯ ಮುಖ್ಯ ರಸ್ತೆ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವುದಾಗಿದ್ದು ಅಗಲೀಕರಣವಾದರೇ ಒಳ್ಳೆಯದು ಎಂಬ ಆಶಾಭಾವನೆ ಸ್ಥಳೀಯರದ್ದಾಗಿದೆ. ಆದರೆ ಪಾಲಿಕೆ ನಿರಾಸಕ್ತಿಯಿಂದಾಗಿ ಇಲ್ಲಿನ ನಾಗರಿಕರು ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೇ ಈ ರಸ್ತೆ ಕಿರಿದಾಗಿದ್ದು ಜನಸಂದಣಿ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಪ್ರತಿ 2 ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್‍ಗಳು ಸಂಚರಿಸುತ್ತವೆ. ಹೀಗಾಗಿ ಇಲ್ಲಿನ ನಿವಾಸಿಗಳು ಓಡಾಡಲು ತೊಂದರೆ ಪಡುವಂತಾಗಿದೆ. ಅಲ್ಲದೇ ಈ ರಸ್ತೆ ಪೂರ್ತಿ ಧೂಳಿನಿಂದ ಕೂಡಿದ್ದು ಜನರು ಪರಿತಪಿಸುವಂತಾಗಿದೆ.

    ಒಂದು ಸಾವಿರ ಮೀಟರ್ ರಸ್ತೆ ಅಗಲೀಕರಣದ ಪ್ರಸ್ತಾವನೆ ಇದ್ದು, ಇದರಲ್ಲಿ ಮೊದಲ ಹಂತದಲ್ಲಿ 500 ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಈ ಸಂಬಂಧ ಈಗಾಗಲೇ ಇಲ್ಲಿನ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ಎರಡೂವರೆ ವರ್ಷ ಕಳೆಯುತ್ತಾ ಬಂದಿದ್ದರೂ ಕೂಡ ರಸ್ತೆ ಅಗಲೀಕರಣದ ಕೆಲಸ ಮಾತ್ರ ಆಗುತ್ತಿಲ್ಲ. ಹೀಗಾಗಿ ಸ್ಥಳೀಯರು ಸೇರಿದಂತೆ ವಿವಿಧ ಸಂಘಟನೆ ಸದಸ್ಯರು, ಮಾಜಿ ಶಾಸಕ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಈ ಕೂಡಲೇ ಪಾಲಿಕೆ ಆಯುಕ್ತರು ಈ ಬಗ್ಗೆ ಗಮನ ಹರಿಸಿ ಎಂದು ಮನವಿ ಮಾಡಿದರು.

  • 43 ವರ್ಷಗಳಲ್ಲೇ ಅತೀ ಭೀಕರ ಚಂಡಮಾರುತ – ಸಂಜೆ ವೇಳೆ ಸುಂಟರಗಾಳಿ, ಸಿಡಿಲು, ಮಳೆ ಸಾಧ್ಯತೆ

    43 ವರ್ಷಗಳಲ್ಲೇ ಅತೀ ಭೀಕರ ಚಂಡಮಾರುತ – ಸಂಜೆ ವೇಳೆ ಸುಂಟರಗಾಳಿ, ಸಿಡಿಲು, ಮಳೆ ಸಾಧ್ಯತೆ

    – ಬೆಂಗಳೂರು ಕಾಂಪೌಂಡ್ ಕುಸಿದು ವರ ಸಾವು

    ಬೆಂಗಳೂರು: ಮಂಗಳವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದೆ. ಅಲ್ಲಲ್ಲಿ ಮರಗಳು ಧರೆಗುಳಿದಿವೆ. ಗರುಡಚಾರ್ಯ ಪಾಳ್ಯದಲ್ಲಿ ಕಾಂಪೌಂಡ್ ಕುಸಿದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸಬಾರದು ಎಂದು ಪಾಲಿಕೆ ಕೂಡ ಫುಲ್ ಅಲರ್ಟ್ ಆಗಿದೆ.

    ತಮಿಳುನಾಡಿನಲ್ಲಿ ಚಂಡಮಾರುತ ಮತ್ತು ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಮಂಗಳವಾರ ರಾತ್ರಿ ಸ್ವಲ್ಪ ಮಟ್ಟಿಗೆ ಧಾರಾಕಾರ ಮಳೆಯಾಗಿದೆ. ಮೆಜೆಸ್ಟಿಕ್, ಕೆ.ಆರ್ ಸರ್ಕಲ್, ಟೌನ್ ಹಾಲ್, ಸೇರಿದಂತೆ ಹಲವಡೆ ಭಾರಿ ಮಳೆಯಾಗಿ, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಡುವಂತಾಯ್ತು.

    ಬನಶಂಕರಿ, ಜೆಪಿ ನಗರದಲ್ಲಿ ಮಳೆಗೆ ಮರಗಳು ಧರೆಗುರುಳಿದವು. ಇನ್ನು ಮತ್ತಿಕೆರೆಯಲ್ಲಿ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್‍ ಆಗಿ, ಹಸಿ ಮರಕ್ಕೆ ಬೆಂಕಿ ಹತ್ತಿಕೊಂಡಿತ್ತು. ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಫನಿ ಚಂಡಮಾರುತ ರಾಜ್ಯಕ್ಕೂ ಅಪ್ಪಳಿಸುವ ಭೀತಿ ಶುರುವಾಗಿದೆ. ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ರಾಜ್ಯ ನೈಸರ್ಗಿಕ ಮತ್ತು ಪ್ರಾಕೃತಿಕ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಹೇಳಿದ್ದಾರೆ.

    ಮಂಗಳವಾರ ಬೆಂಗಳೂರಿನಲ್ಲಿ ಸುರಿದಿದ್ದು ಅಲ್ಪ ಮಳೆಯೇ. ಆದರೂ ನಗರದ ಕೆಲವಡೆ ಮರಗಳು ಧರೆಗುರುಳಿವೆ. ಮರಗಳನ್ನು ಹಾಗೂ ತಗ್ಗು ಪ್ರದೇಶಗಳಲ್ಲಿ ನಿಂತುಕೊಂಡ ನೀರನ್ನು ಪಾಲಿಕೆ ತ್ವರಿತಗತಿಯಲ್ಲಿ ತೆರವು ಮಾಡಿತು. ಈ ಮಧ್ಯೆ ವಾಡ್9 ನಂಬರ್ 82ರ ಗರುಡಚಾರ್ಯ ಪಾಳ್ಯದ, ಗೋಶಾಲಾ ಮುಖ್ಯ ರಸ್ತೆಯಲ್ಲಿ, ಗೋಶಾಲ ಟ್ರಸ್ಟ್‍ನ ಕಾಂಪೌಂಡ್ ಕುಸಿದಿದೆ. ಕಾಂಪೌಂಡ್ ಕುಸಿತಕ್ಕೆ, ಮದುವೆಗೆ 15 ದಿನಗಳು ಬಾಕಿ ಇರುªವಾಗಲೇ ಆಂಧ್ರ ಮೂಲದ ವರ ಶಿವಕೈಲಾಸರೆಡ್ಡಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ.

    ಪಾಲಿಕೆ ಕೂಡ ಮಳೆಯಿಂದಾಗುವ ಅನಾಹುತಗಳನ್ನು ತಡೆಯಲು ಫುಲ್ ಅಲರ್ಟ್ ಆಗಿದೆ. ಪಾಲಿಕೆಯ ಎಲ್ಲಾ ಅಧಿಕಾರಿಗಳು ಹಾಗೂ ಎಲ್ಲಾ ವಲಯಗಳಲ್ಲಿನ ವರದಿಯ ಮಾಹಿತಿಯನ್ನು ಮೇಯರ್ ಗೆ ತಿಳಿಸಿದ್ದಾರೆ.