Tag: Palestinians

  • ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯನ್ನರು ಇಸ್ರೇಲ್‌ ದಾಳಿಗೆ ಬಲಿ; 94 ಮಂದಿ ಸಾವು

    ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯನ್ನರು ಇಸ್ರೇಲ್‌ ದಾಳಿಗೆ ಬಲಿ; 94 ಮಂದಿ ಸಾವು

    ಟೆಲ್‌ ಅವೀವ್: ಗಾಜಾದಲ್ಲಿ (Gaza) ಇಸ್ರೇಲಿ ವಾಯುದಾಳಿ (Israeli Strikes) ಮತ್ತು ಗುಂಡಿನ ದಾಳಿಗೆ ಆಹಾರಕ್ಕಾಗಿ ಕಾಯುತ್ತಿದ್ದ‌ 94 ಮಂದಿ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಅಲ್ಲದೇ, ದಕ್ಷಿಣ ಗಾಜಾದಲ್ಲಿ ಸ್ಥಳಾಂತರಗೊಂಡ ಜನರು ಮಲಗಿದ್ದಾಗ ರಾತ್ರಿಯ ಸಮಯದಲ್ಲಿ ಟೆಂಟ್ ಶಿಬಿರದ ಮೇಲೆ ನಡೆದ ದಾಳಿಗೆ ಮೃತರಾದವರ ಕುಟುಂಬಗಳು ಕಣ್ಣೀರಿಟ್ಟರು. 12 ವರ್ಷದೊಳಗಿನ ಕನಿಷ್ಠ ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 13 ಸದಸ್ಯರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    ನಗರದ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಿದ್ದ ಶಾಲೆಯ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ 15 ಜನರು ಸಾವನ್ನಪ್ಪಿದರು. ನೆರವು ಪಡೆಯುವ ವೇಳೆ ದಿನನಿತ್ಯದ ಗುಂಡಿನ ದಾಳಿಯಲ್ಲಿ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪುತ್ತಿದ್ದಾರೆಂದು ತಿಳಿಸಲಾಗಿದೆ.

    ಗಾಜಾ ಪಟ್ಟಿಯ ಜನರಿಗೆ ಆಹಾರ ಒದಗಿಸಲು ಇಸ್ರೇಲ್ ಬೆಂಬಲದೊಂದಿಗೆ ಹೊಸದಾಗಿ ರಚಿಸಲಾದ ಅಮೆರಿಕನ್ ಸಂಘಟನೆಯಾದ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ಕೆಲಸ ಮಾಡುತ್ತಿದೆ. ಫೌಂಡೇಶನ್‌ನಿಂದ ಆಹಾರ ವಿತರಣಾ ತಾಣಗಳಿಗೆ ಹೋಗುವ ರಸ್ತೆಗಳಲ್ಲಿ ಐದು ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    ಗಾಜಾದ ಸುತ್ತಮುತ್ತಲಿನ ಹಲವಾರು ಸ್ಥಳಗಳಲ್ಲಿ ವಿಶ್ವಸಂಸ್ಥೆಯ ನೆರವು ಸಾಗಿಸುವ ಟ್ರಕ್‌ಗಳಿಗಾಗಿ ಕಾಯುತ್ತಿದ್ದಾಗ ಇನ್ನೂ 40 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

    GHF ತಾಣಗಳನ್ನು ತಲುಪಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ತೀನಿಯನ್ನರ ಗುಂಪಿನ ಮೇಲೆ ಇಸ್ರೇಲಿ ಪಡೆಗಳು ನಿಯಮಿತವಾಗಿ ಗುಂಡಿನ ದಾಳಿ ನಡೆಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಜಾದ ಮಿಲಿಟರಿ-ಚಾಲಿತ ವಲಯಗಳ ಬಳಿ ಜನರು ಗುಂಪುಗೂಡಿದ್ದಾಗ, UN ಟ್ರಕ್‌ಗಳು ಪ್ರವೇಶಿಸಲು ಮುಂದಾದಾಗ ಪಡೆಗಳು ಗುಂಡು ಹಾರಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

  • ನೆರವು ಕೇಂದ್ರದ ಬಳಿ ಇಸ್ರೇಲಿ ಪಡೆಗಳಿಂದ ಗುಂಡಿನ ದಾಳಿ – 26 ಮಂದಿ ಪ್ಯಾಲೆಸ್ಟೀನಿಯನ್ನರು ಸಾವು

    ನೆರವು ಕೇಂದ್ರದ ಬಳಿ ಇಸ್ರೇಲಿ ಪಡೆಗಳಿಂದ ಗುಂಡಿನ ದಾಳಿ – 26 ಮಂದಿ ಪ್ಯಾಲೆಸ್ಟೀನಿಯನ್ನರು ಸಾವು

    ಟೆಲ್‌ ಅವೀವ್: ಗಾಜಾದ (Gaza) ನೆರವು ಕೇಂದ್ರದ ಬಳಿ ಇಸ್ರೇಲ್‌ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 26 ಮಂದಿ ಸಾವನ್ನಪ್ಪಿದ್ದು, 80 ಜನರು ಗಾಯಗೊಂಡಿದ್ದಾರೆ.

    ದಕ್ಷಿಣ ಗಾಜಾದ ರಫಾ ಪ್ರದೇಶದಲ್ಲಿ ಅಮೆರಿಕ ಬೆಂಬಲಿತ ನೆರವು ವಿತರಣಾ ಸ್ಥಳದ ಬಳಿ ಇಸ್ರೇಲ್ ಪಡೆಗಳು (Israeli Forces) ಗುಂಡಿನ ದಾಳಿ ನಡೆಸಿದವು. ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ನಡೆಸುತ್ತಿರುವ ನೆರವು ಕೇಂದ್ರದ ಹತ್ತಿರ ಅಲ್-ಆಲಮ್ ವೃತ್ತದ ಬಳಿ ಭಾನುವಾರ ಸಾವಿರಾರು ಪ್ಯಾಲೆಸ್ಟೀನಿಯನ್ನರು ಜಮಾಯಿಸಿದ್ದರು. ಆಗ ಇಸ್ರೇಲಿ ಟ್ಯಾಂಕ್‌ಗಳು ಸಮೀಪಿಸಿ ಜನಸಮೂಹದ ಮೇಲೆ ಗುಂಡು ಹಾರಿಸಿವೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!

    ಹಮಾಸ್ ಕದನ ವಿರಾಮ ಪ್ರಸ್ತಾಪ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ವಾಷಿಂಗ್ಟನ್ ತಿರಸ್ಕರಿಸಿದ ಸ್ವಲ್ಪ ಸಮಯದ ನಂತರ ಇದು ಸಂಭವಿಸಿದೆ. ಖಾನ್ ಯೂನಿಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಒಂದಾದ ನಾಸರ್ ಆಸ್ಪತ್ರೆಗೆ ಗಾಯಾಳುಗಳನ್ನು ಕತ್ತೆ ಬಂಡಿಗಳಲ್ಲಿ ಕರೆದೊಯ್ಯಲಾಯಿತು.

    ರಫಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲಿ ಪಡೆಗಳು ಮಾನವೀಯ ನೆರವು ವಿತರಣಾ ಸ್ಥಳಗಳಲ್ಲಿ ಜಮಾಯಿಸಿದ್ದ ಹಸಿದ ನಾಗರಿಕರ ಮೇಲೆ ಹೊಸ ಹತ್ಯಾಕಾಂಡವನ್ನು ಎಸಗಿವೆ ಎಂದು ಹಮಾಸ್ ಆರೋಪಿಸಿತು. ಇದನ್ನೂ ಓದಿ: ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

    ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಬೆಂಬಲಿತ ಖಾಸಗಿ ಸಂಸ್ಥೆಯಾದ ಜಿಹೆಚ್‌ಎಫ್, ಇಸ್ರೇಲ್ ಎರಡು ತಿಂಗಳಿಗೂ ಹೆಚ್ಚು ಕಾಲದ ಸಂಪೂರ್ಣ ದಿಗ್ಬಂಧನವನ್ನು ಭಾಗಶಃ ತೆಗೆದುಹಾಕಿದ ನಂತರ ಮೇ 26 ರಿಂದ ಗಾಜಾ ಪಟ್ಟಿಯಲ್ಲಿ ಆಹಾರವನ್ನು ವಿತರಿಸುತ್ತಿದೆ. ಆದಾಗ್ಯೂ, ವಿಶ್ವಸಂಸ್ಥೆಯ ನೆರವು ಸಂಸ್ಥೆಗಳು ಜಿಹೆಚ್‌ಎಫ್‌ನ ನೆರವು ಕಾರ್ಯವಿಧಾನವನ್ನು ಟೀಕಿಸಿವೆ. ಇದು ಮಾನವೀಯ ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಪ್ಯಾಲೆಸ್ಟೀನಿಯನ್ನರಿಗೆ ಅಪಾಯಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿವೆ.

    ಗಾಜಾಗೆ ಹೆಚ್ಚಿನ ಪ್ರಮಾಣದ ಆಹಾರ ಸಹಾಯವನ್ನು ತ್ವರಿತವಾಗಿ ತಲುಪಿಸಲು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಇಸ್ರೇಲ್‌ಗೆ ಕರೆ ನೀಡಿದೆ. ಹತಾಶೆಯು ಹೆಚ್ಚುತ್ತಿರುವ ಅಭದ್ರತೆಗೆ ಕಾರಣವಾಗಿದೆ ಎಂದು ಹೇಳಿದೆ.

  • ಕರಾಳ ಯುದ್ಧ ಭೂಮಿ ಗಾಜಾ ಮೇಲೆ ಕಣ್ಣು – ಟ್ರಂಪ್‌ ನಿರ್ಧಾರಕ್ಕೆ ವಿಶ್ವವೇ ನಿಬ್ಬೆರಗು!

    ಕರಾಳ ಯುದ್ಧ ಭೂಮಿ ಗಾಜಾ ಮೇಲೆ ಕಣ್ಣು – ಟ್ರಂಪ್‌ ನಿರ್ಧಾರಕ್ಕೆ ವಿಶ್ವವೇ ನಿಬ್ಬೆರಗು!

    ತೆರಿಗೆಯ ಅಸ್ತ್ರವನ್ನೇ ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಗತ್ತಿನಲ್ಲೊಂದು ವ್ಯಾಪಾರ ಯುದ್ಧವನ್ನೇ ಆರಂಭಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಗ್ರೀನ್‌ಲ್ಯಾಂಡ್‌ ಖರೀದಿ ಮಾಡುವುದಾಗಿ ಹೇಳಿದ್ದ ಟ್ರಂಪ್‌, ಪನಾಮ ಕಾಲುವೆಯನ್ನು ತನ್ನ ಸುಪರ್ದಿಗೆ ಪಡೆಯುವ ಮಾತುಗಳನ್ನೂ ಆಡಿದ್ದರು. ಇದೀಗ ಯುದ್ಧ ಭೂಮಿಯಾದ ಗಾಜಾ ಮೇಲೆ ಟ್ರಂಪ್‌ ಕಣ್ಣಿಟ್ಟಿರುವುದು ಇಡೀ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಟ್ರಂಪ್‌ ಈ ನಿರ್ಧಾರಕ್ಕೆ ಕಾರಣವೇನು? ಟ್ರಂಪ್‌ ಹೇಳಿದ್ದೇಕೆ? ಗಾಜಾ ಪಟ್ಟಿ ನಿಯಂತ್ರಣದಿಂದ ಅಮೆರಿಕಕ್ಕೆ ಏನು ಲಾಭ ಎಂಬುದನ್ನು ತಿಳಿಯೋಣ.. ಅದಕ್ಕೂ ಮುನ್ನ ಗಾಜಾಪಟ್ಟಿಯ ಕರಾಳ ಇತಿಹಾಸವನ್ನರಿಯೋಣ…

    ಗಾಜಾ ಪಟ್ಟಿಯ ಇತಿಹಾಸ ನಿಮಗೆ ಗೊತ್ತೇ?
    ಪ್ಯಾಲೆಸ್ತೀನ್‌ ನೈರುತ್ಯ ಭಾಗದಲ್ಲಿರುವ ಗಾಜಾ ಪಟ್ಟಿಯು ಸಂಘರ್ಷದ ಭೂಮಿ ಎಂದೇ ಹೆಸರುವಾಸಿ. ರೋಮನ್ನರು ಸೇರಿದಂತೆ ವಿಶ್ವದ ಇತರ ಪ್ರಮುಖ ಶಕ್ತಿಗಳು ಗಾಜಾ ಪಟ್ಟಿಯನ್ನ ಆಳಿದ್ದವು. ಅದರಲ್ಲೂ 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಯುದ್ಧ ಶುರುವಾದ ಬಳಿಕ ಇದು ಅಕ್ಷರಶಃ ಯುದ್ಧ ಭೂಮಿಯಾಗಿ ಮಾರ್ಪಟ್ಟಿತು. ಇದೀಗ ಇಸ್ರೇಲ್‌-ಹಮಾಸ್‌ ನಡುವೆ ಕದನ ವಿರಾಮ ಏರ್ಪಟ್ಟಿದೆ. ಈ ನಡುವೆ ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಟ್ರಂಪ್‌ ಈ ಯುದ್ಧ ಭೂಮಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ.

    ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗಾಜಾ ಪಟ್ಟಿಯನ್ನು ಮೊದಲು ಅಶ್ಯೂರ್‌ ಎಂಬ ಸಾಮ್ರಾಜ್ಯ ಆಳುತ್ತಿತ್ತು. ನಂತರ ಗಾಜಾದಲ್ಲಿ ರೋಮನ್ನರ ಪ್ರಾಬಲ್ಯ ಸ್ಥಾಪನೆಯಾಯ್ತು. ಕ್ರಿ.ಪೂ. 1ನೇ ಶತಮಾನದಲ್ಲಿ ರೋಮನ್ನರ ಸಾಮ್ರಾಜ್ಯವು ಗಾಜಾವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಬಳಿಕ ಈ ಪ್ರದೇಶದ ಮಹತ್ವ ಅರಿತು ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಲು ಶುರು ಮಾಡಿದರು. ಏಷ್ಯಾ, ಯುರೋಪ್‌, ಆಫ್ರಿಕಾ ನಡುವಿನ ವ್ಯಾಪಾರ ಮಾರ್ಗಗಳು ಇದರ ಮೂಲಕವೇ ಹಾದುಹೋಗುತ್ತಿದ್ದರಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿಯೇ ಮಾರ್ಪಟ್ಟಿತ್ತು. ರೋಮನ್ನರ ಆಳ್ವಿಕೆ ಗಾಜಾದಲ್ಲಿ ಮಹತ್ವದ ಬದಲಾವಣೆಯನ್ನೇ ತಂದಿತು. ಆದ್ರೆ ರೋಮನ್ನರ ಆಳ್ವಿಕೆಯ ಕೊನೆ ಕೊನೆಯಲ್ಲಿ ಗಾಜಾ ಪಟ್ಟಿಯಲ್ಲಿ ಹಲವಾರು ದಂಗೆಗಳು ಮತ್ತು ಸಂಘರ್ಷಗಳು ಏರ್ಪಟ್ಟವು. ರೋಮ್‌ ಸಾಮ್ರಾಜ್ಯದ ಪತನದ ನಂತರ ಗಾಜಾ ಮುಸ್ಲಿಂ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತು. ಕ್ರಿ.ಶ. 7ನೇ ಶತಮಾನದಲ್ಲಿ ಅರಬ್ಬರು ಗಾಜಾವನ್ನು ವಶಕ್ಕೆ ಪಡೆದುಕೊಂಡು ಸಂಪೂರ್ಣ ಇಸ್ಲಾಮಿಕ್‌ ಸಾಮ್ರಾಜ್ಯದ ಭಾಗವಾಗಿ ಪರಿವರ್ತಿಸಿದರು. ಇದನ್ನ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದ್ರು, ಇದರ ಹೊರತಾಗಿಯೂ ಯುದ್ಧ, ಸಂಘರ್ಷಗಳು ಮುಂದುವರಿಯಿತು.

    ಇನ್ನೂ 20ನೇ ಶತಮಾನದಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ಪ್ರಾಬಲ್ಯಕ್ಕೆ ಗಾಜಾಪಟ್ಟಿ ಒಳಪಟ್ಟಿತು. ಆದ್ರೆ ಬ್ರಿಟಿಷ್‌ ಆಳ್ವಿಕೆಯು ಪ್ಯಾಲೆಸ್ತೀನ್‌ನಲ್ಲಿ ಯಹೂದಿ ಮತ್ತು ಅರಬ್‌ ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಿಸಿತು. ಈ ಸಂದರ್ಭದಲ್ಲಿ ಲಕ್ಷಾಂತರ ಜನ ವಲಸೆ ಹೋದರು. ಹಲವು ಸಂಘರ್ಷ ಚಳವಳಿಗಳು ಹುಟ್ಟಿಕೊಂಡುವು ಪ್ರಮುಖವಾಗಿ ಪ್ಯಾಲೆಸ್ತೀನ್‌ ಸ್ವಾತಂತ್ರ್ಯ ಸಂಗ್ರಾಮ ಅಂದು ಹುಟ್ಟಿಕೊಟ್ಟ ಸಂಗ್ರಾಮ ಇಂದಿಗೂ ಮುಂದುವರಿಯುತ್ತಲೇ ಇದೆ.

    ಗಾಜಾ ಇಸ್ರೇಲ್‌ ಆಡಳಿತಕ್ಕೆ ಒಳಪಟ್ಟಿದ್ದು ಯಾವಾಗ?
    ಕಳೆದ ದಶಕಗಳಿಂದಲೂ ಗಾಜಾ ಪಟ್ಟಿ ಸಂಘರ್ಷ ಮತ್ತು ಹಿಂಸಾಚಾರದ ಕೇಂದ್ರವಾಗಿಯೇ ಉಳಿದಿದೆ. 1948ರಲ್ಲಿ ಇಸ್ರೇಲ್‌ ರಚನೆಯೊಂದಿಗೆ ಭೌಗೋಳಿಕ ಪ್ರಾಮುಖ್ಯತೆ ಹೆಚ್ಚಾಯಿತು. 1948ರಲ್ಲಿ ಇಸ್ರೇಲ್‌ ಪೂರ್ಣ ಪ್ರಮಾಣದಲ್ಲಿ ರಚನೆಯಾದಾಗ ಆ ಪ್ರದೇಶದಲ್ಲಿ ಅರಬ್ ಮತ್ತು ಯಹೂದಿ ಸಮುದಾಯಗಳನ್ನು ಪ್ರತ್ಯೇಕಿಸಲು ಕದನವಿರಾಮ ರೇಖೆ ಎಳೆಯಲಾಯಿತು. ಇದರ ಅಡಿಯಲ್ಲಿ, ಗಾಜಾ ಪಟ್ಟಿಯನ್ನು ಅರಬ್ ಬಹುಸಂಖ್ಯಾತ ಪ್ರದೇಶವಾಗಿ ಸ್ಥಾಪಿಸಲಾಯಿತು. ಆದರೆ ಯಹೂದಿ ಸಮುದಾಯವು ಇಸ್ರೇಲ್‌ನಲ್ಲಿ ಉಳಿಯಿತು. ೧೯೪೮ ರಿಂದ ೧೯೬೭ರ ವರೆಗೆ ಈಜಿಪ್ಟ್ ಈ ಪ್ರದೇಶವನ್ನು ನಿಯಂತ್ರಿಸಿತು. ಆದರೆ ೧೯೬೭ರಲ್ಲಿ ನಡೆದ 6 ದಿನಗಳ ಯುದ್ಧದಲ್ಲಿ ಇಸ್ರೇಲ್ ಈಜಿಪ್ಟ್ ಅನ್ನು ಸೋಲಿಸಿ ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡಿತು. ಅಂದಿನಿಂದ ಈ ಪ್ರದೇಶವು ಇಸ್ರೇಲ್‌ ಆಡಳಿತಕ್ಕೆ ಒಳಪಟ್ಟಿತು.

    2005 ರಲ್ಲಿ, ಪ್ಯಾಲೆಸ್ತೀನಿಯನ್ ಸ್ವಾತಂತ್ರ್ಯ ಸಂಸ್ಥೆ ಜೊತೆಗಿನ ಒಪ್ಪಂದದ ಭಾಗವಾಗಿ, ಇಸ್ರೇಲ್ ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿತು ಮತ್ತು ಯಹೂದಿ ವಸಾಹತುಗಳನ್ನು ಕೆಡವಿತು. ಆದರೆ 2007 ರಲ್ಲಿ ಹಮಾಸ್ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದು ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಯಿತು.

    ಟ್ರಂಪ್‌ ಗೇಮ್‌ ಪ್ಲ್ಯಾನ್‌ ಏನು?
    ಇತ್ತೀಚೆಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಭೇಟಿಯಾದ ನಂತರ ಟ್ರಂಪ್‌ ಗಾಜಾ ಪಟ್ಟಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಿಯಂತ್ರಣ ಮಾಡುವುದಾಗಿ ಹೇಳಿದರು. ಅಲ್ಲಿ ಇನ್ನೂ ಅಡಗಿಸಿಟ್ಟಿರುವ ಬಾಂಬ್‌ಗಳನ್ನು ಸ್ಫೋಟವಾಗದಂತೆ ನಾವು ತಡೆಯುತ್ತೇವೆ. ಆರ್ಥಿಕವಾಗಿ ಅಭಿವೃದ್ಧಿ ಮಾಡುತ್ತೇವೆ. ಉದ್ಯೋಗಾವಕಾಶ ಸೃಷ್ಟಿಸುತ್ತೇವೆ. ಗಾಜಾವನ್ನು ಮರು ನಿರ್ಮಾಣ ಮಾಡುತ್ತೇವೆ ಎಂದು ಹಲವು ಆಫರ್‌ಗಳನ್ನ ಘೋಷಣೆ ಮಾಡಿದರು. ಆದ್ರೆ ಗಾಜಾದಲ್ಲಿರುವ 18 ರಿಂದ 20 ಲಕ್ಷ ಪ್ಯಾಲೆಸ್ತೀನಿಯನ್ನರು ಗಾಜಾವನ್ನು ತೊರೆದು ನೆರೆಯ ದೇಶಗಳಲ್ಲಿ ಆಶ್ರಯ ಪಡೆಯಬೇಕು ಎಂದು ಹೇಳಿದ್ದಾರೆ.

    ಗಾಜಾ ವಾಸಕ್ಕೆ ಯೋಗ್ಯವಲ್ಲ. ಅಭಿವೃದ್ಧಿಪಡಿಸಿದ ನಂತರ ಇದು ವಿಶ್ವದಾದ್ಯಂತ ಜನರಿಗೆ ನೆಲೆಯಾಗಲಿದೆ. ರಿವೇರಿಯಾ ಆಗಿ ಗಾಜಾ ಬದಲಾಗಲಿದೆ. ರಿವೇರಿಯಾ ಎಂಬುದು ಇಟಾಲಿಯನ್‌ ಪದವಾಗಿದ್ದು, ಇದರ ಅರ್ಥ ಕರಾವಳಿ. ಇಟಾಲಿಯನ್‌ ಮತ್ತು ಫ್ರೆಂಚ್‌ ರಿವೇರಿಯಾದಂತೆ ಗಾಜಾವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಮುಖ್ಯವಾಗಿ ಗಾಜಾವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಉದ್ದೇಶವನ್ನು ಟ್ರಂಪ್‌ ಹೊಂದಿದ್ದಾರೆ. ಹಾಗಾಗಿ ಪ್ಯಾಲೆಸ್ತೀನಿಯರನ್ನು ಸ್ಥಳಾಂತರಿಸುವುದು ಅವಶ್ಯಕ ಎಂದು ಟ್ರಂಪ್‌ ಹೇಳಿದ್ದಾರೆ. ಟ್ರಂಪ್‌ ಅವರ ಈ ಆಫರ್‌ಗೆ ಇಸ್ರೇಲ್‌ ಪ್ರಧಾನಿ ಒಪ್ಪಿದರೂ. ಮಧ್ಯಪ್ರಾಚ್ಯ ಹಾಗೂ ಅನೇಕ ಯುರೋಪಿಯನ್‌ ದೇಶಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಟ್ರಂಪ್‌ ಇಡೀ ಗಾಜಾವನ್ನ ಸಂಪೂರ್ಣವಾಗಿ ಇಸ್ರೇಲ್‌ ನಿಯಂತ್ರಣಕ್ಕೆ ಕೊಡುವುದಕ್ಕಾಗಿ ಈ ಪ್ಲ್ಯಾನ್‌ ಮಾಡಿದ್ದಾರೆಂದು ಕೆಲ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಮುಂದೆ ಟ್ರಂಪ್‌ ಅವರ ನಿಲುವು ಏನೆಂಬುದನ್ನು ಕಾದುನೋಡಬೇಕಿದೆ.

  • ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್‌ ಕೊಟ್ಟ ಆಫರ್‌ ಏನು?

    ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್‌ ಕೊಟ್ಟ ಆಫರ್‌ ಏನು?

    – ಟ್ರಂಪ್‌ ಪ್ಲ್ಯಾನ್‌ ಇತಿಹಾಸವನ್ನೇ ಬದಲಾಯಿಸಬಹುದು; ಇಸ್ರೇಲ್‌ ಪ್ರಧಾನಿ

    ವಾಷಿಂಗ್ಟನ್: ಕೆಲ ದಿನಗಳ ಹಿಂದೆಯಷ್ಟೇ ಇಸ್ರೇಲ್‌-ಹಮಾಸ್‌ ನಡುವಿನ ಕದನ ವಿರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (onald Trump) ಇದೀಗ ಗಾಜಾ ಪಟ್ಟಿಯ (Gaza Strip) ಮೇಲೆ ಕಣ್ಣಿಟ್ಟಿದ್ದಾರೆ. ಟ್ರಂಪ್‌ ಅವರ ಈ ಹೊಸ ಪ್ರಸ್ತಾಪ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ.

    ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಶ್ವೇತಭವನದ ಭೇಟಿಯ ಸಮಯದಲ್ಲಿ ಗಾಜಾವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾವವನ್ನು ಟ್ರಂಪ್ ಮಂಡಿಸಿದ್ದಾರೆ. ಟ್ರಂಪ್ ಆವರ ಆಫರ್ ಅನ್ನು ಎರಡು ರಾಷ್ಟ್ರಗಳು ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ, ಯುದ್ದ ಪೀಡಿತ ಪ್ರದೇಶದಿಂದ ಹೊರಕ್ಕೆ ಹೋಗಬೇಕು ಮತ್ತು ಈಜಿಪ್ಟ್ ಅಥವಾ ಜೋರ್ಡಾನ್ ಮುಂತಾದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ಯಾಲೆಸ್ತೀನಿಯನ್ನರು ಸ್ಥಳಾಂತರಗೊಳ್ಳಬೇಕು ಎಂದು ಟ್ರಂಪ್‌ ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    ನೆತನ್ಯಾಹು ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ಗಾಜಾವನ್ನು ಅಮೆರಿಕ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಇದನ್ನೂ ಓದಿ: USA vs China Tax War | ಅಮೆರಿಕದ ಕಲ್ಲಿದ್ದಲು, ಗ್ಯಾಸ್‌ ಮೇಲೆ ತೆರಿಗೆ ವಿಧಿಸಿದ ಚೀನಾ

    ಇದೇ ವೇಳೆ ಸ್ಫೋಟಗೊಳ್ಳದ ಬಾಂಬ್ ಗಳನ್ನು ನಿಷ್ಕಿಯಗೊಳಿಸಲಾಗುವುದು. ಯುದ್ದದಿಂದ ನೆಲಸಮವಾಗಿರುವ ಕಟ್ಟಡದ ಅವಶೇಷಗಳ ಜಾಗವನ್ನು ಸಮತಟ್ಟು ಮಾಡಲಾಗುವುದು. ಆರ್ಥಿಕತೆಯನ್ನು ಸರಿದಾರಿಗೆ ತರಲಾಗುವುದು ಮತ್ತು ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂಬ ಆಫರ್‌ಗಳನ್ನೂ ಟ್ರಂಪ್‌ ನೀಡಿದ್ದಾರೆ. ಜೊತೆಗೆ ಗಾಜಾದಲ್ಲಿರುವ ಸುಮಾರು 20 ಲಕ್ಷ ನಾಗರಿಕರು ಬೇರೆ ದೇಶಕ್ಕೆ ಹೋಗಬೇಕು ಎನ್ನುವ ಷರತ್ತನ್ನೂ ವಿಧಿಸಿದ್ದಾರೆ.

    ಮುಂದುವರಿದು… ನಮ್ಮ ಆಫರ್ ಸ್ವೀಕರಿಸಲು ಇವರು ಯೋಗ್ಯರಲ್ಲ, ಇವರಿಗಾಗಿ ನಾವು ಅಷ್ಟೊಂದು ಹಣ ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ. ಅಷ್ಟೊಂದು ಅನಾಹುತ ನಡೆಯುತ್ತಿದ್ದರೂ, ತಮ್ಮ ಹಕ್ಕಿಗಾಗಿ, ತಮ್ಮ ಜೀವನಕ್ಕಾಗಿ ಇವರು ಪಣತೊಟ್ಟವರಲ್ಲ. ತಮ್ಮ ಇಂದಿನ ಶೋಚನೀಯ ಸ್ಥಿತಿಗೆ ಅವರೇ ಕಾರಣ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್‌

    ಆದ್ರೆ ಗಾಜಾಪಟ್ಟಿಯಿಂದ ಪ್ಲ್ಯಾಲೆಸ್ತೀನಿಯನ್ನರನ್ನು ಸ್ಥಳಾಂತರಿಸುವುದರಿಂದ ಅದು ಮಧ್ಯಪ್ರಾಚ್ಯದ ಇತರ ಪ್ರದೇಶಗಳನ್ನು ಅಸ್ತಿರಗೊಳಿಸಬಹುದು. ಸಂಘರ್ಷ ಹೆಚ್ಚಿಸಬಹುದು ಹಾಗೂ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ದೀರ್ಘಕಾಲಕ್ಕೆ ಧಕ್ಕೆಯಾಗಬಹುದು ಎಂದು ಟ್ರಂಪ್‌ಗೆ ಮಿತ್ರರಾಷ್ಟ್ರದ ನಾಯಕರು ಎಚ್ಚರಿಸಿದ್ದಾರೆ.

    ನೆತನ್ಯಾಹು ಅಮೆರಿಕ ಭೇಟಿ ನಡುವೆ ಇಸ್ರೇಲ್‌-ಹಮಾಸ್‌ ನಡುವಿನ ಕದನವಿರಾಮ ಮುಂದುವರಿದಿದೆ. 2023ರ ಅಕ್ಟೋಬರ್‌ 7ರಂದು ಸಂಭವಿಸಿದ ದಾಳಿಯ ನಂತರ ಈವರೆಗೆ 47,500 ಪ್ಯಾಲೆಸ್ತೀನಿಯನ್ನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

    ಇತಿಹಾಸ ಬದಲಾಯಿಸಬಹುದು:
    ಇನ್ನೂ ಶ್ವೇತಭವನಕ್ಕೆ ಭೇಟಿ ನೀಡಿರುವ ನೆತನ್ಯಾಹು, ಟ್ರಂಪ್‌ ಪ್ರಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಗಾಜಾ ಪಟ್ಟಿಯ ಪ್ಯಾಲೆಸ್ತೀನಿಯನ್‌ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಟ್ರಂಪ್‌ ಅವರ ಯೋಜನೆ ʻಇತಿಹಾಸವನ್ನೇ ಬದಲಾಯಿಸಬಹುದುʼ. ಹಾಗಾಗಿ ಟ್ರಂಪ್‌ ಅವರ ಯೋಜನೆ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

  • ಗಾಜಾ ಮೇಲೆ ಇಸ್ರೇಲ್ ಮಹಾಯುದ್ಧ – 30 ಪ್ಯಾಲೆಸ್ತೀನಿಯರು ಸಾವು

    ಗಾಜಾ ಮೇಲೆ ಇಸ್ರೇಲ್ ಮಹಾಯುದ್ಧ – 30 ಪ್ಯಾಲೆಸ್ತೀನಿಯರು ಸಾವು

    – ಕಳೆದ 24 ಗಂಟೆಯಲ್ಲಿ 266 ಮಂದಿ ದುರ್ಮರಣ

    ಟೆಲ್ ಅವಿವ್: ಇಸ್ರೇಲ್ (Israel) ಸೋಮವಾರ ಮುಂಜಾನೆ ಗಾಜಾದ (Gaza) ಮೇಲೆ ಬಾಂಬ್ ದಾಳಿಯನ್ನು ಮುಂದುವರಿಸಿದ್ದು, ದಕ್ಷಿಣ ಲೆಬನಾನ್ (Southern Lebanon) ಅನ್ನು ರಾತ್ರಿಯಿಡೀ ಹೊಡೆದಿದೆ. ದಾಳಿಗಳು ಕೇಂದ್ರ ಮತ್ತು ಉತ್ತರದ ಮೇಲೆ ಕೇಂದ್ರೀಕೃತವಾಗಿವೆ ಎಂದು ವರದಿಗಳು ತಿಳಿಸಿವೆ.

    ಸೋಮವಾರ ಮುಂಜಾನೆ ಗಾಜಾ ಪಟ್ಟಿಯಲ್ಲಿರುವ ಮೂರು ಆಸ್ಪತ್ರೆಗಳ (Hospital) ಸಮೀಪದಲ್ಲಿ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ ಎಂದು ಪ್ಯಾಲೇಸ್ತೀನಿಯನ್ ಮಾಧ್ಯಮ ವರದಿ ಮಾಡಿದೆ. ಆದರೆ ಬಾಂಬ್ ದಾಳಿಯಿಂದ ಆಸ್ಪತ್ರೆ ಹಾನಿಗೊಳಗಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇಸ್ರೇಲ್ ಗಾಜಾ ನಗರದ ಶಿಫಾ ಮತ್ತು ಅಲ್-ಕುದ್ಸ್ ಆಸ್ಪತ್ರೆಗಳ ಬಳಿ ಮತ್ತು ಎನ್‌ಕ್ಲೇವ್‌ನ ಉತ್ತರದಲ್ಲಿರುವ ಇಂಡೋನೇಷಿಯನ್ ಆಸ್ಪತ್ರೆಯ ಬಳಿ ದಾಳಿ ಮಾಡಿದೆ ಎಂದು ವರದಿ ಹೇಳಿದೆ. ಇದನ್ನೂ ಓದಿ: Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು

    ಇದಕ್ಕೂ ಮೊದಲು, ಅಲ್-ಕುಡ್ಸ್ ಆಸ್ಪತ್ರೆಯನ್ನು ಸ್ಥಳಾಂತರಿಸಲು ಇಸ್ರೇಲ್ ಆದೇಶಿಸಿದೆ ಎಂದು ಪ್ಯಾಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿದೆ. ಗಾಜಾದಲ್ಲಿನ ವಸತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 30 ಪ್ಯಾಲೆಸ್ತೀನಿಯಾದವರು (Palestinians) ಸಾವನ್ನಪ್ಪಿದ್ದಾರೆ. ಜಬಾಲಿಯಾ ನಿರಾಶ್ರಿತರ ಶಿಬಿರದ ಅಲ್-ಶುಹಾದಾ ಪ್ರದೇಶದಲ್ಲಿ ಈ ಕಟ್ಟಡವಿತ್ತು. ಇದನ್ನೂ ಓದಿ: ಸಂಬಂಧವನ್ನು ಮರುಸ್ಥಾಪಿಸುತ್ತೇವೆ – NRIಗಳಿಗೆ ಕೆನಡಾ ವಿರೋಧ ಪಕ್ಷ ಭರವಸೆ

    ಎನ್‌ಕ್ಲೇವ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ವೈಮಾನಿಕ ದಾಳಿಯಿಂದ 117 ಮಕ್ಕಳು ಸೇರಿದಂತೆ 266 ಪ್ಯಾಲೆಸ್ತೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಹಮಾಸ್‌ನ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಗಾಜಾದ ಮೇಲೆ ಇಸ್ರೇಲಿ ದಾಳಿಯನ್ನು ಹೇಗೆ ನಿಲ್ಲಿಸಬೇಕು ಎಂಬುದರ ಕುರಿತು ಚರ್ಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗಾಜಾಪಟ್ಟಿಗೆ ಜಾಗತಿಕ ನೆರವು – ಪ್ಯಾಲೆಸ್ತೇನಿಗಳಿಗೆ ಆಶ್ರಯ ನೀಡದ ನೆರೆ ದೇಶಗಳು

    ಅಕ್ಟೋಬರ್ 7 ರಂದು ಪ್ಯಾಲೇಸ್ತೀನಿಯನ್ ಗುಂಪು ಹಮಾಸ್ ಇಸ್ರೇಲ್ ಮೇಲೆ ಹಠಾತ್ ದಾಳಿಯನ್ನು ಪ್ರಾರಂಭಿಸಿ 1,400 ಜನರನ್ನು ಕೊಂದ ನಂತರ ಇಸ್ರೇಲ್ ತನ್ನ ದಾಳಿಯನ್ನು ಪ್ರಾರಂಭಿಸಿದೆ. ಎರಡು ವಾರಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 4,600 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗೆಲುವಿನ ತನಕ ವಿರಮಿಸುವುದಿಲ್ಲ: ಇಸ್ರೇಲ್ ಪ್ರಧಾನಿ ಪ್ರತಿಜ್ಞೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಜಾಪಟ್ಟಿಗೆ ಜಾಗತಿಕ ನೆರವು – ಪ್ಯಾಲೆಸ್ತೇನಿಗಳಿಗೆ ಆಶ್ರಯ ನೀಡದ ನೆರೆ ದೇಶಗಳು

    ಗಾಜಾಪಟ್ಟಿಗೆ ಜಾಗತಿಕ ನೆರವು – ಪ್ಯಾಲೆಸ್ತೇನಿಗಳಿಗೆ ಆಶ್ರಯ ನೀಡದ ನೆರೆ ದೇಶಗಳು

    ಟೆಲ್‌ ಅವಿವ್‌: ಹಮಾಸ್ (Hamas Attack) ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್ (Israel) ಸದ್ಯಕ್ಕೆ ಯುದ್ಧ ನಿಲ್ಲಿಸುವ ಮಾತೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಗೆಲ್ಲುವ ವರೆಗೂ ದಾಳಿ ನಡೆಯಲಿದ್ದು ಮೂರು ಹಂತದಲ್ಲಿ ಗಾಜಾ ಟಾರ್ಗೆಟ್‌ ಮಾಡಲಿದ್ದೇವೆ ಎಂದು ಸುಳಿವು ಕೊಟ್ಟಿದೆ. ಈ ನಡುವೆ ದಾಳಿ-ಪ್ರತಿ ದಾಳಿ ಮುಂದುವರಿದಿದ್ದು, ಗಾಜಾಕ್ಕೆ ಮಾನವೀಯತೆ ನೆರವು ಹರಿದು ಬರುತ್ತಿದೆ.

    ಹಮಾಸ್-ಇಸ್ರೇಲ್ (Israel Hamas War) ನಡುವೆ ಯುದ್ಧ ಶುರುವಾಗಿ 14 ದಿನಗಳು ಕಳೆದಿವೆ. ಯುದ್ಧ ನಿಲ್ಲುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ನಡುವೆ ಎಚ್ಚರಿಕೆ ಸಂದೇಶ ರವಾನಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು (Benjamin Netanyahu) ಗೆಲುವಿನ ತನಕ ವಿರಮಿಸುವುದಿಲ್ಲ. ಗೆಲುವಿನ ಕಡೆಯ ಕ್ಷಣದ ವರೆಗೂ ಹೋರಾಟ ಮಾಡುತ್ತಿದ್ದೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಗೆಲುವಿನ ತನಕ ವಿರಮಿಸುವುದಿಲ್ಲ: ಇಸ್ರೇಲ್ ಪ್ರಧಾನಿ ಪ್ರತಿಜ್ಞೆ

    ಬಾಂಬ್ ದಾಳಿಯಲ್ಲಿ ಯಾವುದೇ ವಿರಾಮವಿಲ್ಲ. ಗಾಜಾದ (Gaza Strip) ಮೇಲೆ ಬಾಂಬ್ ದಾಳಿ ಮುಂದುವರಿಯಲಿದೆ. ಒತ್ತೆಯಾಳುಗಳನ್ನು ವಾಪಸ್ ಕರೆ ತರುವ ತನಕ ಹೋರಾಟ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಹಮಾಸ್ ವಿರುದ್ಧದ ಇಸ್ರೇಲ್ ಮೂರು ಹಂತಗಳಲ್ಲಿ ಯುದ್ಧ ಮಾಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ತೀವ್ರ ದಾಳಿ ಇರಲಿದ್ದು, ಈಗಾಗಲೇ ಆರಂಭಗೊಂಡಿದೆ.‌ ಎರಡನೇ ಹಂತದಲ್ಲಿ ಕಡಿಮೆ ತೀವ್ರತೆಯಲ್ಲಿ ದಾಳಿ ಇರಲಿದ್ದು, ಕೊನೆಯಲ್ಲಿ ಅವರು ಗಾಜಾ ಸ್ಟ್ರಿಪ್‌ನಲ್ಲಿ ಹೊಸ ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಗಾಜಾಪಟ್ಟಿಗೆ ಮಾನವೀನ ನೆರವು ನೀಡಲು ಇಸ್ರೇಲ್ ಅವಕಾಶ ನೀಡಿದ ಬಳಿಕ ವಿಶ್ವಸಂಸ್ಥೆ ನೆರವಿಗೆ ಮುಂದಾಗಿದೆ. ಇಂದು ಈಜಿಪ್ಟ್‌ನ ರಾಫಾ ಗಡಿ ಮೂಲಕ ಎರಡು ಟ್ರಕ್ ಗಾಜಾ ತಲುಪಿದ್ದು, ಜನರಿಗೆ ಅಗತ್ಯ ನೆರವು ನೀಡಲಾಗುತ್ತಿದೆ.

    ಇದರ ನಡುವೆ ಪ್ಯಾಲೆಸ್ತೇನಿ ಜನರಿಗೆ ಆಶ್ರಯ ನೀಡಲು ನೆರೆಯ ದೇಶಗಳು ನಿರಾಕರಿಸುತ್ತಿವೆ. ಯುದ್ಧ ಹಮಾಸ್ ವಿರುದ್ಧ ಆಗಿರಬೇಕು. ಪ್ಯಾಲೆಸ್ತೇನಿಯರನ್ನು ಹೊರಗೆ ತಳ್ಳುವ ಪ್ರಯತ್ನ ಆಗಬಾರದು. ಅವರು ಅವರ ನೆಲದಲ್ಲಿದ್ದಾರೆ. ಈಗಾಗಲೇ ನಾವು ಬಹಳಷ್ಟು ಜನರಿಗೆ ಆಶ್ರಯ ನೀಡಿದ್ದೇವೆ. ಇನ್ನೂ ಆಶ್ರಯ ನೀಡಲು ಸಾಧ್ಯವಿಲ್ಲ. ಇಸ್ರೇಲ್ ಜನರನ್ನು ಹೊರದಬ್ಬುವ ಪ್ರಯತ್ನ ಮಾಡಬಾರದು ಎಂದು ಜೊರ್ಡಾನ್, ಈಜಿಪ್ಟ್‌, ಸಿರಿಯಾ ದೇಶಗಳ ಮುಖ್ಯಸ್ಥರು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ದಾಳಿಗಳು ಮುಂದುವರಿದಿದ್ದು ಈವರೆಗೂ 4,137 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. 13,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದಿಂದ ಮಾಹಿತಿ ನೀಡಿದೆ. ಈ ನಡುವೆ ಇಸ್ರೇಲ್‌ನಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆಕ್ರಮಣದ ಸಮಯದಲ್ಲಿ 203 ಜನರನ್ನು ಹಮಾಸ್ ಒತ್ತೆಯಾಳಗಿರಿಸಿಕೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುಂಡಿನ ದಾಳಿ ನಡೆಸಿ 10 ಪ್ಯಾಲೆಸ್ಟೀನಿಯನ್ನರ ಹತ್ಯೆಗೈದ ಇಸ್ರೇಲ್‌ ಪಡೆ

    ಗುಂಡಿನ ದಾಳಿ ನಡೆಸಿ 10 ಪ್ಯಾಲೆಸ್ಟೀನಿಯನ್ನರ ಹತ್ಯೆಗೈದ ಇಸ್ರೇಲ್‌ ಪಡೆ

    ಟೆಲ್‌ ಅವೀವ್: ಇಸ್ರೇಲ್‌ ಪಡೆಗಳು (Israel Forces) ಪಶ್ಚಿಮ ದಂಡೆಯಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿ ಪ್ಯಾಲೆಸ್ಟೀನಿಯನ್ನರನ್ನು (Palestinians) ಹತ್ಯೆ ಮಾಡಿದ್ದಾರೆ. ಇದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಎಂದು ಇಸ್ರೇಲ್‌ ಮಿಲಿಟರಿ ಪಡೆ ಹೇಳಿಕೊಂಡಿದೆ.

    ಉತ್ತರದ ನಗರವಾದ ಜೆನಿನ್‌ನಲ್ಲಿ ಜನನಿಬಿಡ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಲಾಯಿತು. ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 20 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!

    “ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ತಂಡವನ್ನು ಬಂಧಿಸಲು, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಮಯದಲ್ಲಿ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿತು. ಹಲವಾರು ಶತ್ರು ಹೋರಾಟಗಾರರನ್ನು ಹೊಡೆದುರುಳಿಸಿತು ಎಂದು ಮಿಲಿಟರಿ ತಿಳಿಸಿದೆ.

    ಮಿಲಿಟರಿ ದಾಳಿಯ ಸಮಯದಲ್ಲಿ ಮನೆಗಳಿಗೆ ಹಾನಿಯಾಗಿದೆ. ಕಿಟಕಿ, ಬಾಗಿಲು, ಗೋಡೆಗಳು ಹಾನಿಗೊಳಗಾಗಿವೆ ಎಂದು ಜೆನಿನ್ ನಿವಾಸಿ ಉಮ್ ಯೂಸೆಫ್ ಅಲ್-ಸಾವಾಲ್ಮಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ

    ಇಸ್ರೇಲ್‌ ಸೇನಾಪಡೆಯು ಪ್ಯಾಲೆಸ್ಟೀನ್‌ ನಾಗರಿಕರು ಮತ್ತು ಹೋರಾಟಗಾರರು ಗುರಿಯಾಗಿ ದಾಳಿಗಳನ್ನು ನಡೆಸುತ್ತಿದೆ. ಹಲವು ವರ್ಷಗಳಿಂದ ಈ ರೀತಿಯ ದಾಳಿಗಳು ನಡೆಯುತ್ತಿವೆ. ಪ್ಯಾಲೆಸ್ಟೀನ್‌ ನಾಗರಿಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಇಸ್ರೇಲ್‌ ಸೇನಾಪಡೆ ಮೇಲೆ ಗಂಭೀರ ಆರೋಪ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k