Tag: Palestine

  • ಟ್ರಂಪ್‌ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್‌ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ

    ಟ್ರಂಪ್‌ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್‌ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ

    ಜೆರುಸಲೆಮ್: ಡೊನಾಲ್ಡ್‌ ಟ್ರಂಪ್‌ (Donald Trump) ಭಾಷಣಕ್ಕೆ ಅಡ್ಡಿ ಪಡಿಸಿದ್ದಕ್ಕೆ ಇಸ್ರೇಲ್‌ ಸಂಸದರನ್ನು ಸಂಸತ್‌ ಭವನದಿಂದಲೇ ಬಲವಂತವಾಗಿ ಹೊರಹಾಕಿದ ಪ್ರಸಂಗ ಇಂದು ನಡೆಯಿತು.

    ಇಸ್ರೇಲ್ ಮತ್ತು ಗಾಜಾದ ಹಮಾಸ್ ಬಂಡುಕೋರರ ನಡುವಿನ ಸುದೀರ್ಘ 2 ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್‌ ಸಂಸತ್ತನ್ನು ಉದ್ದೇಶಿಸಿ ಟ್ರಂಪ್‌ ಭಾಷಣ ಮಾಡಿದರು.

     

    ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ:  ಯುದ್ಧದ ಅಂತ್ಯ ಮಾತ್ರವಲ್ಲ, ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ: ಟ್ರಂಪ್‌

    ಭಾಷಣ ಮಾಡುತ್ತಿದ್ದಾಗ ಟ್ರಂಪ್ ವಿರುದ್ಧ ಹೀಬ್ರೂ ಭಾಷೆಯಲ್ಲಿ ಸಂಸದರಾದ ಐಮನ್ ಒಡೆಹ್ ಮತ್ತು ಓಫರ್ ಕ್ಯಾಸಿಫ್ ಘೋಷಣೆ ಕೂಗಿದರು. ಇವರಿಬ್ಬರು ಪ್ಯಾಲೆಸ್ಟೈನ್ ರಾಷ್ಟ್ರದ ಮಾನ್ಯತೆಗಾಗಿ ಕರೆ ನೀಡುವ ಫಲಕಗಳನ್ನು ಹಿಡಿದಿದ್ದರು. ಘೊಷಣೆ ಕೂಗಿದ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಬಲವಂತವಾಗಿ ಎಡಪಂಥಿಯ ಸಂಸದರನ್ನು ಹೊರಗೆ ಎಳೆದುಕೊಂಡು ಹೋದರು.

  • ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

    ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

    – ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ಆಕ್ರೋಶ

    ರೋಮ್‌: ಪ್ಯಾಲೆಸ್ಟೈನ್ (Palestine) ಪ್ರತ್ಯೇಕ ದೇಶವಾಗಬೇಕು ಎಂಬ ಬೇಡಿಕೆಗೆ ಇಟಲಿಯ (Italy) ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಬೆಂಬಲ ನೀಡಲು ನಿರಾಕರಿಸಿದ್ದಾರೆ. ಇದನ್ನು ವಿರೋಧಿಸಿ ಪ್ಯಾಲೆಸ್ಟೈನ್ ಪರ ಇಟಲಿಯ ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

    ಗಾಜಾದಲ್ಲಿ (Gaza) ಇಸ್ರೇಲ್ ದಾಳಿಯನ್ನು ಖಂಡಿಸದ ಮತ್ತು ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕೆ ಬೆಂಬಲಿಸದ ಜಾರ್ಜಿಯಾ ಮೆಲೋನಿ ನೇತೃತ್ವದ ಬಲಪಂಥೀಯ ಸರ್ಕಾರದ ವಿರುದ್ಧ ಕಾರ್ಮಿಕ ಒಕ್ಕೂಟಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಇದರ ಭಾಗವಾಗಿ ಜನ ಇಟಲಿಯ ಹಲವು ಬೀದಿಗಳಲ್ಲಿ ಕಪ್ಪು ಬಟ್ಟೆ ಧರಿಸಿ ಪ್ಯಾಲೆಸ್ಟೀನಿಯನ್ ಧ್ವಜ ಹಿಡಿದು ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿದ್ದಾರೆ. ಸಾವಿರಾರು ಪ್ರತಿಭಟನಾಕಾರರು ರಸ್ತೆಗಳನ್ನು ತಡೆದು, ಜಿನೋವಾ ಬಂದರಿನ ಮೇಲೆ ದಾಳಿ ಮಾಡಿ ಬೆಂಕಿಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೇ ವೆನ್ನಿಸ್‌ ಬಂದರನ್ನೂ ಸಹ ಪ್ರತಿಭಟನಾಕಾರರು ಸುತ್ತುವರೆದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಪ್ರತಿಭಟನಾಕಾರರ ಉಗ್ರ ಸ್ವರೂಪಕ್ಕೆ ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾಗಿವೆ. ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಸುಮಾರು 60 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

    ಪ್ರತಿಭಟನಾಕಾರರ ಗುಂಪು ಮಿಲನ್‌ನ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಕಿಟಕಿಯನ್ನು ಒಡೆದು, ಪೊಲೀಸರ ಮೇಲೆ ಕುರ್ಚಿಯನ್ನು ಎಸೆದಿದೆ. ಈ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಬಳಿಕ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸಿದ್ದಾರೆ. ಅಲ್ಲದೇ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    ಇಟಲಿಯ ಬಂದರುಗಳ ಮೂಲಕ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಜಲ ಫಿರಂಗಿ ಬಳಸಿದ್ದಾರೆ. ಇನ್ನೂ ಪ್ರತಿಭಟನಾಕಾರರು ವೆನಿಸ್ ಬಂದರಿನ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರಧಾನಿ ಜಾರ್ಜಿಯಾ ಮೆಲೋನಿ ಅಸಮಾಧಾನ ಹೊರಹಾಕಿದ್ದಾರೆ. ಹಿಂಸಾಚಾರ ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ.

    ಬೊಲೊಗ್ನಾದಲ್ಲಿ, ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆದು, ವಾಹನಗಳನ್ನು ನಿಲ್ಲಿಸಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ರೋಮ್‌ನಲ್ಲಿ, ಪ್ರಮುಖ ರಸ್ತೆಗಳನ್ನು ತಡೆದಿದು ಫ್ರೀ ಪ್ಯಾಲೆಸ್ಟೈನ್ ಘೋಷಣೆ ಕೂಗಿದ್ದಾರೆ. ಪ್ರತಿಭಟನೆಯ ತೀವ್ರತೆಯಿಂದ ರಸ್ತೆ ಸಾರಿಗೆಗೆ ಸಮಸ್ಯೆಯಾಗಿದೆ. ಅಲ್ಲದೇ ಮೆಟ್ರೋ ಸಂಚಾರ ಸಹ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

  • ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಲಂಡನ್: ಅಮೆರಿಕದ (USA) ತೀವ್ರ ವಿರೋಧದ ನಡುವೆಯೂ ಬ್ರಿಟನ್ ಸರ್ಕಾರವು ಪ್ಯಾಲೆಸ್ಟೀನ್‌ಗೆ (Palestine) ದೇಶದ ಮಾನ್ಯತೆ ನೀಡಲು ಮುಂದಾಗಿದೆ.

    ಗಾಜಾದಲ್ಲಿ ನಡೆಸುತ್ತಿರುವ ಯುದ್ಧ ಸಂಬಂಧ ಬ್ರಿಟನ್ ಸರ್ಕಾರ ಇಸ್ರೇಲ್‌ಗೆ (Israel) ಕೆಲ ನಿಬಂಧನೆ ವಿಧಿಸಿತ್ತು. ಆದ್ರೆ ಇಸ್ರೇಲ್‌ ನಿಬಂಧನೆ ಪಾಲಿಸದ ಹಿನ್ನೆಲೆ ಬ್ರಿಟನ್‌ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

    ಸೋಮವಾರದಿಂದ (ಸೆ.22) ವಿಶ್ವಸಂಸ್ಥೆಯ (United Nations) 80ನೇ ಸಾಮಾನ್ಯ ಸಭೆ ಆರಂಭವಾಗಲಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧ, ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಅದಕ್ಕೂ ಮುನ್ನ ಬ್ರಿಟನ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ಪೋರ್ಚುಗಲ್ ಸೇರಿದಂತೆ ಸುಮಾರು 140 ದೇಶಗಳು ಪ್ಯಾಲೆಸ್ಟೀನ್ ಅನ್ನು ಪ್ರತ್ಯೇಕ ದೇಶವನ್ನಾಗಿ ಪರಿಗಣಿಸಲು ಮುಂದಾಗಿವೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

    ಇದೊಂದು ಸಾಂಕೇತಿಕ ನಡೆಯಾಗಲಿದೆಯಾದರೂ ಯುದ್ಧ ನಿಲ್ಲಿಸಲು ಇಸ್ರೇಲ್ ಮೇಲೆ ಈ ನಿರ್ಧಾರವು ರಾಜತಾಂತ್ರಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು. ಇದರಿಂದ ಗಾಜಾದಲ್ಲಿ ಶಾಂತಿ ನೆಲಸಬಹುದು ಎಂದು ಬ್ರಿಟನ್ ಆಶಿಸಿದೆ. ಫ್ರಾನ್ಸ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಇಸ್ರೇಲ್‌ನಲ್ಲಿರುವ ಶಾಂತಿಪರ ಹೋರಾಟಗಾರರು ಸ್ವಾಗತಿಸಿದ್ದಾರೆ. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

    ಈ ಬೆಳವಣಿಗೆ ನಡುವೆಯೇ ಗಾಜಾ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಒಂದೇ ದಿನ 91 ಸಾವು ಸಾವನ್ನಪ್ಪಿದ್ದಾರೆ. ಇದರಿಂದ ಟೆಲ್ ಅವೀವ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಗಾಜಾದ ಅತಿದೊಡ್ಡ ನಗರ ಕೇಂದ್ರವನ್ನು ವಶಪಡಿಸಿಕೊಳ್ಳಲು ವಾಯು ಮತ್ತು ಭೂಸೇನಾ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಇಸ್ರೇಲಿ ಪಡೆಗಳು ಒಂದೇ ದಿನದಲ್ಲಿ ಗಾಜಾದಲ್ಲಿ 91 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿವೆ. ಪ್ರಮುಖ ವೈದ್ಯರ ಕುಟುಂಬ ಸದಸ್ಯರು ಮತ್ತು ಉತ್ತರ ಗಾಜಾ ನಗರದ ಹಲವಾರು ಜನರು ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

  • ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯನ್ನರು ಇಸ್ರೇಲ್‌ ದಾಳಿಗೆ ಬಲಿ; 94 ಮಂದಿ ಸಾವು

    ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯನ್ನರು ಇಸ್ರೇಲ್‌ ದಾಳಿಗೆ ಬಲಿ; 94 ಮಂದಿ ಸಾವು

    ಟೆಲ್‌ ಅವೀವ್: ಗಾಜಾದಲ್ಲಿ (Gaza) ಇಸ್ರೇಲಿ ವಾಯುದಾಳಿ (Israeli Strikes) ಮತ್ತು ಗುಂಡಿನ ದಾಳಿಗೆ ಆಹಾರಕ್ಕಾಗಿ ಕಾಯುತ್ತಿದ್ದ‌ 94 ಮಂದಿ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಅಲ್ಲದೇ, ದಕ್ಷಿಣ ಗಾಜಾದಲ್ಲಿ ಸ್ಥಳಾಂತರಗೊಂಡ ಜನರು ಮಲಗಿದ್ದಾಗ ರಾತ್ರಿಯ ಸಮಯದಲ್ಲಿ ಟೆಂಟ್ ಶಿಬಿರದ ಮೇಲೆ ನಡೆದ ದಾಳಿಗೆ ಮೃತರಾದವರ ಕುಟುಂಬಗಳು ಕಣ್ಣೀರಿಟ್ಟರು. 12 ವರ್ಷದೊಳಗಿನ ಕನಿಷ್ಠ ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 13 ಸದಸ್ಯರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    ನಗರದ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಿದ್ದ ಶಾಲೆಯ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ 15 ಜನರು ಸಾವನ್ನಪ್ಪಿದರು. ನೆರವು ಪಡೆಯುವ ವೇಳೆ ದಿನನಿತ್ಯದ ಗುಂಡಿನ ದಾಳಿಯಲ್ಲಿ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪುತ್ತಿದ್ದಾರೆಂದು ತಿಳಿಸಲಾಗಿದೆ.

    ಗಾಜಾ ಪಟ್ಟಿಯ ಜನರಿಗೆ ಆಹಾರ ಒದಗಿಸಲು ಇಸ್ರೇಲ್ ಬೆಂಬಲದೊಂದಿಗೆ ಹೊಸದಾಗಿ ರಚಿಸಲಾದ ಅಮೆರಿಕನ್ ಸಂಘಟನೆಯಾದ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ಕೆಲಸ ಮಾಡುತ್ತಿದೆ. ಫೌಂಡೇಶನ್‌ನಿಂದ ಆಹಾರ ವಿತರಣಾ ತಾಣಗಳಿಗೆ ಹೋಗುವ ರಸ್ತೆಗಳಲ್ಲಿ ಐದು ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    ಗಾಜಾದ ಸುತ್ತಮುತ್ತಲಿನ ಹಲವಾರು ಸ್ಥಳಗಳಲ್ಲಿ ವಿಶ್ವಸಂಸ್ಥೆಯ ನೆರವು ಸಾಗಿಸುವ ಟ್ರಕ್‌ಗಳಿಗಾಗಿ ಕಾಯುತ್ತಿದ್ದಾಗ ಇನ್ನೂ 40 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

    GHF ತಾಣಗಳನ್ನು ತಲುಪಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ತೀನಿಯನ್ನರ ಗುಂಪಿನ ಮೇಲೆ ಇಸ್ರೇಲಿ ಪಡೆಗಳು ನಿಯಮಿತವಾಗಿ ಗುಂಡಿನ ದಾಳಿ ನಡೆಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಜಾದ ಮಿಲಿಟರಿ-ಚಾಲಿತ ವಲಯಗಳ ಬಳಿ ಜನರು ಗುಂಪುಗೂಡಿದ್ದಾಗ, UN ಟ್ರಕ್‌ಗಳು ಪ್ರವೇಶಿಸಲು ಮುಂದಾದಾಗ ಪಡೆಗಳು ಗುಂಡು ಹಾರಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

  • America | ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ  ಜನರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ – 6 ಮಂದಿಗೆ ಗಾಯ

    America | ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಜನರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ – 6 ಮಂದಿಗೆ ಗಾಯ

    ವಾಷಿಂಗ್ಟನ್: ದುಷ್ಕರ್ಮಿಯೋರ್ವ ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಇಸ್ರೇಲ್ (Israel) ನಾಗರಿಕರತ್ತ ಪೆಟ್ರೋಲ್ ಬಾಂಬ್ ಎಸೆದ ಘಟನೆ ಅಮೆರಿಕದ (America) ಕೊಲೊರಾಡೋದ (Colorado) ಬೌಲ್ಡರ್‌ನಲ್ಲಿ ನಡೆದಿದೆ.

    ಘಟನೆಯಲ್ಲಿ 6 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೊರಾಡೋದ ಬೌಲ್ಡರ್‌ನಲ್ಲಿ (Boulder) ಗಾಜಾದಲ್ಲಿನ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಚರ್ಚಿಸುವ ಸಲುವಾಗಿ ಇಸ್ರೇಲ್ ನಾಗರಿಕರು ಸಭೆ ಸೇರಿದ್ದರು. ಈ ವೇಳೆ ದುಷ್ಕರ್ಮಿ ಬಾಟಲ್‌ನಲ್ಲಿ ತುಂಬಿಸಿದ್ದ ಪೆಟ್ರೋಲ್ ಬಾಂಬ್‌ಗಳನ್ನು ನಾಗರಿಕರತ್ತ ಎಸೆದು ‘ಫ್ರೀ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗಿದ್ದಾನೆ. ಇದನ್ನೂ ಓದಿ: ಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಸಿಂಧನೂರು ಬಂದ್ – ರೈತರ ಹೋರಾಟಕ್ಕೆ ಸಾರ್ವಜನಿಕರ ಬೆಂಬಲ

    ಜನರ ಮೇಲೆ ಫೈರ್ ಬಾಂಬ್ ಎಸೆದ ವ್ಯಕ್ತಿಯನ್ನು ಮೊಹಮ್ಮದ್ ಸಬ್ರಿ ಸೊಲಿಮಾ (45) ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸೊಲಿಮಾ ಅಮೆರಿಕದಲ್ಲಿ ಪ್ಯಾಲೆಸ್ತೀನ್ ಪರ ನಡೆಯುತ್ತಿದ್ದ ಹಲವು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ತಾಂತ್ರಿಕ ಸಮಿತಿ ವರದಿ ಆಧರಿಸಿಯೇ ಹೇಮಾವತಿ ಕೆನಾಲ್ ನಿರ್ಮಾಣ: ಪರಮೇಶ್ವರ್

    ಈ ಘಟನೆಯನ್ನು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ‘ಉದ್ದೇಶಿತ ಭಯೋತ್ಪಾದಕ ಕೃತ್ಯ’ ಎಂದು ಕರೆದಿದ್ದಾರೆ. ಅಲ್ಲದೇ ದೇಶದಲ್ಲಿ ಹೆಚ್ಚುತ್ತಿರುವ ಯಹೂದಿ ವಿರೋಧಿ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್| ಐವರನ್ನು ಬಂಧಿಸಿದ್ದೇವೆ: ಪರಮೇಶ್ವರ್‌

  • ಗಾಜಾದಲ್ಲಿ ಕದನವಿರಾಮ ಘೋಷಿಸಲು ಅಮೆರಿಕ ಪ್ರಸ್ತಾವನೆಗೆ ಹಮಾಸ್ ಒಪ್ಪಿಗೆ

    ಗಾಜಾದಲ್ಲಿ ಕದನವಿರಾಮ ಘೋಷಿಸಲು ಅಮೆರಿಕ ಪ್ರಸ್ತಾವನೆಗೆ ಹಮಾಸ್ ಒಪ್ಪಿಗೆ

    ವಾಷಿಂಗ್ಟನ್: ಗಾಜಾದಲ್ಲಿ (Gaza) ಕದನ ವಿರಾಮ ಘೋಷಿಸುವಂತೆ ಕೋರಿ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ (Steve Witkoff) ಮಂಡಿಸಿದ ಪ್ರಸ್ತಾವನೆಗೆ ಹಮಾಸ್ (Hamas) ಒಪ್ಪಿಕೊಂಡಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ, ಈ ಪ್ರಸ್ತಾವನೆಯನ್ನು ಮಧ್ಯವರ್ತಿಗಳ ಮೂಲಕ ಹಮಾಸ್‌ಗೆ ರವಾನಿಸಲಾಗಿದೆ. ಪ್ರಸ್ತಾವನೆಯಲ್ಲಿ 70 ದಿನಗಳ ಕದನ ವಿರಾಮಕ್ಕೆ ಪ್ರತಿಯಾಗಿ ಹತ್ತು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದು ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಸರಣಿ ಮನೆಗಳ್ಳತನ ಮಾಡ್ತಿದ್ದ ಖದೀಮ ಅಂದರ್ – 6 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಮಾತ್ರವಲ್ಲದೇ ಇಸ್ರೇಲ್‌ನಿಂದ ಬಂಧನದಲ್ಲಿರುವ ಹಲವಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನ ಬಿಡುಗಡೆ ಮಾಡುವುದನ್ನು ಸಹ ಈ ಪ್ರಸ್ತಾವನೆ ಒಳಗೊಂಡಿದೆ. ಇದರಲ್ಲಿ ನೂರಾರು ಜನರು ದೀರ್ಘ ಶಿಕ್ಷೆ ಅನುಭವಿಸುತ್ತಿದ್ದಾರೆ. ಸದ್ಯ ಈ ಪ್ರಸ್ತಾವನೆಗೆ ಇಸ್ರೇಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ

  • ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – ಪತ್ರಕರ್ತ, ರಕ್ಷಣಾ ಅಧಿಕಾರಿ ಸೇರಿದಂತೆ 20 ಮಂದಿ ಸಾವು

    ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – ಪತ್ರಕರ್ತ, ರಕ್ಷಣಾ ಅಧಿಕಾರಿ ಸೇರಿದಂತೆ 20 ಮಂದಿ ಸಾವು

    ಟೆಲ್‌ಅವೀವ್‌: ಇಸ್ರೇಲ್ ಸೇನೆ (Israel) ಗಾಜಾ (Gaza) ಮೇಲೆ ನಡೆಸಿದ ದಾಳಿಯಲ್ಲಿ ಪತ್ರಕರ್ತ ಮತ್ತು ಹಿರಿಯ ರಕ್ಷಣಾ ಅಧಿಕಾರಿ ಸೇರಿದಂತೆ 20 ಜನ ಸಾವನ್ನಪ್ಪಿದ್ದಾರೆ.

    ಇಸ್ರೇಲ್ ಕಾರ್ಯಾಚರಣೆಯಲ್ಲಿ ಇತ್ತೀಚಿನ ಸಾವುಗಳು ದಕ್ಷಿಣದಲ್ಲಿ ಖಾನ್ ಯೂನಿಸ್, ಉತ್ತರದಲ್ಲಿ ಜಬಾಲಿಯಾ ಮತ್ತು ಮಧ್ಯ ಗಾಜಾ ಪಟ್ಟಿಯ ನುಸೈರತ್‌ನಲ್ಲಿ ಪ್ರತ್ಯೇಕ ಇಸ್ರೇಲಿ ದಾಳಿಗಳಿಂದ ಉಂಟಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಶೂಟೌಟ್‌ – ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

    ಜಬಾಲಿಯಾದಲ್ಲಿ ವೈಮಾನಿಕ ದಾಳಿಯಿಂದ ಸ್ಥಳೀಯ ಪತ್ರಕರ್ತ ಹಸನ್ ಮಜ್ದಿ ಅಬು ವಾರ್ದಾ ಹಾಗೂ ಅವರ ಕುಟುಂಬಸ್ಥರು ಸಾವಿಗೀಡಾಗಿದ್ದಾರೆ. ನುಸೈರತ್‌ನಲ್ಲಿ ನಡೆದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಪ್ರದೇಶದ ನಾಗರಿಕ ತುರ್ತು ಸೇವೆಯ ಹಿರಿಯ ಅಧಿಕಾರಿ ಅಶ್ರಫ್ ಅಬು ನಾರ್ ಮತ್ತು ಅವರ ಪತ್ನಿ ಸಾವಪ್ಪಿದ್ದಾರೆ. ಒಟ್ಟು 20 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಅಬು ವಾರ್ದಾ ಅವರ ಸಾವಿನಿಂದ 2023ರ ಅಕ್ಟೋಬರ್ 7ರಿಂದ ಗಾಜಾದಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ತೇನಿಯನ್ (Palestine) ಪತ್ರಕರ್ತರ ಸಂಖ್ಯೆ‌ 220ಕ್ಕೆ ಏರಿಕೆಯಾಗಿದೆ ಎಂದು ಹಮಾಸ್ ನಡೆಸುತ್ತಿರುವ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.

    ಶುಕ್ರವಾರ ಇಸ್ರೇಲ್ ಮಿಲಿಟರಿ ಗಾಜಾದಲ್ಲಿ ರಾತ್ರಿಯಿಡೀ ಹೆಚ್ಚಿನ ದಾಳಿಗಳನ್ನು ನಡೆಸಿದೆ. ಶಸ್ತ್ರಾಸ್ತ್ರ ಸಂಗ್ರಹಣಾಲಯ ಮತ್ತು ರಾಕೆಟ್ ಲಾಂಚರ್‌ಗಳು ಸೇರಿದಂತೆ 75 ಸ್ಥಳಗಳ ಮೇಲೆ ಈ ದಾಳಿ ನಡೆದಿದೆ. 2023 ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಯ ಬಳಿಕ, ಇಸ್ರೇಲ್‌ ಪ್ರತಿ ದಾಳಿ ಆರಂಭಿಸಿತ್ತು. ಇಲ್ಲಿವರೆಗಿನ ಸಂಘರ್ಷದಲ್ಲಿ 53,900 ಜನ ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ

  • ಪ್ಯಾಲೆಸ್ತೀನ್ ಬಳಿಕ ಬಾಂಗ್ಲಾ ಅಲ್ಪಸಂಖ್ಯಾತರ ಪರ ಪ್ರಿಯಾಂಕಾ ಧ್ವನಿ

    ಪ್ಯಾಲೆಸ್ತೀನ್ ಬಳಿಕ ಬಾಂಗ್ಲಾ ಅಲ್ಪಸಂಖ್ಯಾತರ ಪರ ಪ್ರಿಯಾಂಕಾ ಧ್ವನಿ

    ನವದೆಹಲಿ: ವಯನಾಡು (Wayanadu) ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ತಮ್ಮ ಬ್ಯಾಗ್‌ಗಳ ಮೂಲಕ ಚರ್ಚೆಯಲ್ಲಿದ್ದಾರೆ. ನಿನ್ನೆ (ಡಿ.16) ಪ್ಯಾಲೆಸ್ತೀನ್ ಬೆಂಬಲಿಸುವ ಬ್ಯಾಗ್ ಧರಿಸಿ ಸಂಸತ್‌ಗೆ ಆಗಮಿಸಿದ್ದ ಅವರು ಇಂದು (ಡಿ.17) ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರ ಜೊತೆಗಿದ್ದೇವೆ ಎನ್ನುವ ಟ್ಯಾಗ್ ಇರುವ ಧಿರಿಸನ್ನು ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ.

    ಬಾಂಗ್ಲಾದೇಶದ (Bangladesh) ಬ್ಯಾಗ್‌ನೊಂದಿಗೆ ಸಂಸತ್ ಆವರಣಕ್ಕೆ ಆಗಮಿಸಿದ ಅವರು ಬಾಂಗ್ಲಾದೇಶದಲ್ಲಿನ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ನಡೆದ ದೌರ್ಜನ್ಯವನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ನಡೆಸಿದ ಪ್ರತಿಭಟನೆಯನ್ನು ಮುನ್ನಡೆಸಿದರು.ಇದನ್ನೂ ಓದಿ: ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!

    ವಯನಾಡು ಚುನಾವಣಾ ಗೆಲುವಿನ ನಂತರ ತಮ್ಮ ಚೊಚ್ಚಲ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಲೋಕಸಭೆಯ ಅಧಿವೇಶನದಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರು.

    ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಈ ದಾಳಿಯಿಂದ ಬಳಲುತ್ತಿರುವವರಿಗೆ ಸರ್ಕಾರ ಬೆಂಬಲ ನೀಡಬೇಕೆಂದು ಕರೆ ನೀಡಿದರು. ಸರ್ಕಾರವು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ವಿಷಯವನ್ನು ಎತ್ತಬೇಕು. ಈ ಬಗ್ಗೆ ಬಾಂಗ್ಲಾದೇಶ ಸರ್ಕಾರದೊಂದಿಗೆ ಚರ್ಚಿಸಬೇಕು ಮತ್ತು ನೋವಿನಲ್ಲಿರುವವರಿಗೆ ಬೆಂಬಲ ನೀಡಬೇಕು ಎಂದು ಉಲ್ಲೇಖಿಸಿದರು.ಇದನ್ನೂ ಓದಿ: ಕಾಲಾಯ ತಸ್ಮೈ ನಮಃ – ದರ್ಶನ್ ಬೇಲ್ ಬಗ್ಗೆ ಶ್ರೀಮುರಳಿ ರಿಯಾಕ್ಷನ್

  • ಸಂಸತ್‌ಗೆ ಪ್ಯಾಲೆಸ್ತೀನ್ ಬ್ಯಾಗ್‌ ಹಾಕಿಕೊಂಡು ಬಂದ ಪ್ರಿಯಾಂಕಾ – ಎಲ್ಲಾ ಸುದ್ದಿಗಾಗಿ ಎಂದ ಬಿಜೆಪಿ ಸಂಸದ

    ಸಂಸತ್‌ಗೆ ಪ್ಯಾಲೆಸ್ತೀನ್ ಬ್ಯಾಗ್‌ ಹಾಕಿಕೊಂಡು ಬಂದ ಪ್ರಿಯಾಂಕಾ – ಎಲ್ಲಾ ಸುದ್ದಿಗಾಗಿ ಎಂದ ಬಿಜೆಪಿ ಸಂಸದ

    ನವದೆಹಲಿ: ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಸೋಮವಾರ ಸಂಸತ್ತಿಗೆ (Parliament) ಪ್ಯಾಲೆಸ್ತೀನ್ (Palestine) ಎಂದು ಬರೆದಿರುವ ಬ್ಯಾಗ್‌ನ್ನು ತೆಗೆದುಕೊಂಡು ಹೋಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ.

    ಪ್ಯಾಲೇಸ್ತೀನಿನ ಜನ ಒಗ್ಗಟ್ಟಿನ ಸಂಕೇತವಾಗಿ ಕಾಣುವ ಕಲ್ಲಂಗಡಿ ಹಣ್ಣಿನ ಚಿತ್ರ ಅವರ ಚೀಲದಲ್ಲಿ ಕಾಣಿಸಿಕೊಂಡಿದೆ. ಇನ್ನೂ ಕಳೆದ ವಾರ ದೆಹಲಿಯಲ್ಲಿರುವ ಪ್ಯಾಲೆಸ್ತೀನ್ ರಾಯಭಾರ ಕಚೇರಿಯ ಚಾರ್ಜ್ ಡಿ ಅಫೇರ್ಸ್ ಅಬೇದ್ ಎಲ್ರಾಜೆಗ್ ಅಬು ಜಾಜರ್ ಅವರನ್ನು ಭೇಟಿಯಾಗಿದ್ದರು.

    ಪ್ರಿಯಾಂಕ ಗಾಂಧಿ ನಡೆಗೆ ಬಿಜೆಪಿ ಸಂಸದ ಗುಲಾಂ ಅಲಿ ಖತಾನಾ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಸುದ್ದಿಗಾಗಿ ಇಂತಹ ಕೆಲಸಗಳನ್ನು ಮಾಡುತ್ತಾರೆ. ಜನರಿಂದ ತಿರಸ್ಕರಿಸಲ್ಪಟ್ಟಾಗ, ಅವರು ಅಂತಹ ಕ್ರಮಗಳನ್ನು ಆಶ್ರಯಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ದಾಳಿಯ ವಿರುದ್ಧ ಪ್ರಿಯಾಂಕಾ ಗಾಂಧಿ ಧ್ವನಿ ಎತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲ್ ಸರ್ಕಾರ ನರಹಂತಕ ಕ್ರಮಗಳನ್ನು ಕೈಗೊಂಡಿದೆ ಎಂದು ಈ ಹಿಂದೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟೀಕಿಸಿದ್ದರು.

    ಇಸ್ರೇಲ್ ಸರ್ಕಾರದ‌ ಕ್ರಮವನ್ನು ಖಂಡಿಸುವುದು ವಿಶ್ವದ ಪ್ರತಿಯೊಂದು ದೇಶದ ಸರ್ಕಾರವೂ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ನೈತಿಕ ಜವಾಬ್ದಾರಿ ಎಂದು ಅವರು ಹೇಳಿದ್ದರು.

    ಕೇರಳದ ವಯನಾಡ್‌ನಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಗೆಲುವು ಸಾಧಿಸಿದ್ದು, ತಮ್ಮ ಚೊಚ್ಚಲ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ.

  • ಪ್ಯಾಲೆಸ್ತೀನ್‌ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ಮೋದಿ – ಗಾಜಾ ಪರಿಸ್ಥಿತಿ ಬಗ್ಗೆ ಭಾರತ ಕಳವಳ

    ಪ್ಯಾಲೆಸ್ತೀನ್‌ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ಮೋದಿ – ಗಾಜಾ ಪರಿಸ್ಥಿತಿ ಬಗ್ಗೆ ಭಾರತ ಕಳವಳ

    ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್‌ನಲ್ಲಿ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಭೆ ನಡೆಸಿದರು.

    ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿಯವರು ಕಳವಳ ವ್ಯಕ್ತಪಡಿಸಿದರು. ಪ್ಯಾಲೆಸ್ತೀನಿಯನ್ ಜನರಿಗೆ ಭಾರತದ ಬೆಂಬಲ ಇರಲಿದೆ ಎಂದು ತಿಳಿಸಿದರು.

    ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಪರಿಹಾರಕ್ಕಾಗಿ ಭಾರತವು ದೀರ್ಘಕಾಲ ಪ್ರಯತ್ನಿಸಲಿದೆ. ಅ.7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಮೊದಲ ಜಾಗತಿಕ ನಾಯಕರಲ್ಲಿ ಪಿಎಂ ಮೋದಿ ಒಬ್ಬರು. ಆದರೆ, ಗಾಜಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಪದೇ ಪದೇ ಕಳವಳ ವ್ಯಕ್ತಪಡಿಸಿದೆ.

    ಭಾರತವು ತನ್ನ ಬದ್ಧತೆಯ ಭಾಗವಾಗಿ ಗಾಜಾದ ಜನರಿಗೆ ಮಾನವೀಯ ನೆರವನ್ನು ಕಳುಹಿಸಿತು. ಜುಲೈನಲ್ಲಿ, ಭಾರತವು 2024-25 ನೇ ವರ್ಷಕ್ಕೆ ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ, UNRWA ಗೆ 2.5 ಮಿಲಿಯನ್ ಡಾಲರ್‌ಗಳ ಮೊದಲ ಕಂತನ್ನು ಬಿಡುಗಡೆ ಮಾಡಿತು.

    ಇದಕ್ಕೂ ಮುನ್ನ, ಪ್ರಧಾನಿ ಮೋದಿ ನೇಪಾಳಿ ಪ್ರಧಾನಿ ಕೆಪಿ ಶರ್ಮಾ ಒಲಿ ಮತ್ತು ಕುವೈತ್ ಕ್ರೌನ್ ಪ್ರಿನ್ಸ್ ಶೇಖ್ ಸಬಾಹ್ ಖಲೀದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದರು.