Tag: Palanivel Thiaga Rajan

  • ಆಡಿಯೋ ವೈರಲ್‌ – ಹಣಕಾಸು ಹೋಯ್ತು ಪಿಟಿಆರ್‌ ಈಗ ಐಟಿ ಸಚಿವ

    ಆಡಿಯೋ ವೈರಲ್‌ – ಹಣಕಾಸು ಹೋಯ್ತು ಪಿಟಿಆರ್‌ ಈಗ ಐಟಿ ಸಚಿವ

    ಚೆನ್ನೈ: ತಮಿಳುನಾಡು (Tamil Nadu) ಸರ್ಕಾರದ ಕ್ಯಾಬಿನೆಟ್‌ ಪುನರ್‌ರಚನೆಯಾಗಿದ್ದು ಹಣಕಾಸು ಸಚಿವ ಪಿಟಿಆರ್‌ ಎಂದೇ ಖ್ಯಾತರಾಗಿದ್ದ ಮಾಜಿ ಬ್ಯಾಂಕರ್‌ ಪಳನಿವೇಲ್ ತ್ಯಾಗರಾಜನ್ (Palanivel Thiaga Rajan) ಅವರಿಗೆ ಮಾಹಿತಿ ತಂತ್ರಜ್ಞಾನ ಖಾತೆಯನ್ನು ನೀಡಲಾಗಿದೆ.

    ತಂಗಂ ತೆನ್ನರಸು ಅವರಿಗೆ ಹಣಕಾಸು ಖಾತೆಯನ್ನು (Ministry of Finance) ನೀಡಲಾಗಿದ್ದ ಟಿಆರ್‌ಬಿ ರಾಜಾ ಅವರಿಗೆ ಕೈಗಾರಿಕಾ ಖಾತೆಯನ್ನು ಹಂಚಲಾಗಿದೆ. ಸ್ಟಾಲಿನ್‌ ಸರ್ಕಾರ ರಚನೆಯಾದ ಬಳಿಕ ಖಾತೆಯನ್ನು ಬದಲಾವಣೆ ಮಾಡಿರುವುದು ಇದೇ ಮೊದಲು. ಇದನ್ನೂ ಓದಿ: ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯಿರಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ

     

    ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಅವರು ʼಡಿಎಂಕೆ ಫೈಲ್ಸ್‌ʼ ಹೆಸರಿನಲ್ಲಿ ಆಡಿಯೋ ರಿಲೀಸ್‌ ಮಾಡಿದ್ದರು. ಈ ಆಡಿಯೋದಲ್ಲಿ ಪಿಟಿಆರ್‌ ಸ್ಟಾಲಿನ್‌ ಕುಟುಂಬದ ವಿರುದ್ಧವೇ ಮಾತನಾಡಿದ್ದರು. ಪಿಟಿಆರ್‌ ಬಿಜೆಪಿಯ ಒಂದು ವ್ಯಕ್ತಿ, ಒಂದು ಹುದ್ದೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಆಡಿಯೋ ತಮಿಳುನಾಡು ಸರ್ಕಾರಕ್ಕೆ ಮುಜುಗರ ತಂದಿತ್ತು.   ಸ್ಟಾಲಿನ್‌ ಮತ್ತು ಪಿಟಿಆರ್‌  ಆಡಿಯೋವನ್ನು ಬಿಜೆಪಿ ತಿರುಚಿದೆ ಇದು ಸುಳ್ಳು ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಡಿಎಂಕೆ ಫೈಲ್ಸ್ ರಿಲೀಸ್ – ಅಣ್ಣಾಮಲೈ ವಿರುದ್ಧ ಮಾನನಷ್ಟ ಕೇಸ್

  • ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ಚೆನ್ನೈ: ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರ ಕಾರಿಗೆ ಚಪ್ಪಲಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಿಜೆಪಿ ಕಾರ್ಯಕರ್ತರನ್ನು ಶನಿವಾರ ಬಂಧಿಸಲಾಗಿದೆ.

    ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ರೈಫಲ್‌ಮನ್ ಡಿ ಲಕ್ಷ್ಮಣನ್ ಅವರಿಗೆ ಗೌರವ ಸಲ್ಲಿಸಲು ಸಚಿವರು ಮಧುರೈಗೆ ಬಂದಿದ್ದರು. ಈ ವೇಳೆ ಸಚಿವರ ಕಾರಿಗೆ ಕೆಲವರು ಚಪ್ಪಲಿಗಳನ್ನು ಎಸೆದು ಅಗೌರವ ತೋರಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಐವರೂ ಬಿಜೆಪಿ ಕಾರ್ಯಕರ್ತರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

    ಹುತಾತ್ಮರಿಗೆ ಗೌರವ ಸೂಚಿಸಲು ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಮಲೈ ಕೂಡಾ ಬರುವವರಿದ್ದರು. ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಸ್ಥಳದಲ್ಲಿ ನೆರೆದಿದ್ದರು. ಆದರೆ ಆ ವೇಳೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸಚಿವ ಆಗಮಿಸಿರುವುದನ್ನು ಕಂಡ ಕಾರ್ಯಕರ್ತರು ಅವರ ಕಾರಿನ ಮೇಲೆ ಚಪ್ಪಲಿಗಳನ್ನು ಎಸೆದು, ಅವರ ವಿರುದ್ಧ ಘೋಷಣೆಗಳನ್ನು ಕೂಗಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ತಿರಂಗಮಯವಾದ ಸುಪ್ರಸಿದ್ಧ ಮುಗಳಖೋಡ ಶ್ರೀಮಠ

    ವೈರಲ್ ಆಗಿರುವ ವೀಡಿಯೋ ಒಂದರಲ್ಲಿ ಮಹಿಳೆಯೊಬ್ಬರು ಸಚಿವರ ಕಾರಿಗೆ ಚಪ್ಪಲಿಯನ್ನು ಎಸೆದಿರುವುದು ಕಂಡುಬಂದಿದೆ. ಕಾರಿನ ಮುಂಭಾಗ ಅಳವಡಿಸಲಾಗಿದ್ದ ರಾಷ್ಟ್ರಧ್ವಜದ ಸಮೀಪ ಕಾರಿನ ಗಾಜಿನ ಮೇಲೆ ಚಪ್ಪಲಿ ಬಿದ್ದಿರುವುದು ಕಂಡುಬಂದಿತ್ತು.

    Live Tv
    [brid partner=56869869 player=32851 video=960834 autoplay=true]