Tag: Palace TDR Controversy

  • ಮೈಸೂರು ರಾಜಮನೆತನಕ್ಕೆ ಟಿಡಿಆರ್ ನೀಡಲು ಸುಪ್ರೀಂ ಆದೇಶ – ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರದಿಂದ ಅರ್ಜಿ

    ಮೈಸೂರು ರಾಜಮನೆತನಕ್ಕೆ ಟಿಡಿಆರ್ ನೀಡಲು ಸುಪ್ರೀಂ ಆದೇಶ – ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರದಿಂದ ಅರ್ಜಿ

    ನವದೆಹಲಿ: ಬೆಂಗಳೂರು ಅರಮನೆ ಮೈದಾನದ (Palace Ground) 15 ಎಕ್ರೆ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮೈಸೂರು ರಾಜಮನೆತನದ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (TDR) ಪ್ರಮಾಣಪತ್ರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ (Supreme Court) ನೀಡಿದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

    ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠಕ್ಕೆ ಮನವಿ ಮಾಡಲಾಯಿತು. ಈ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿದ ಪೀಠ, ಮತ್ತೊಂದು ಪೀಠವು ನೀಡಿದ ಆದೇಶವನ್ನು ನಾವು ಹೇಗೆ ಪರಿಶೀಲಿಸಬಹುದು ಎಂದು ಕೇಳಿದೆ. ಇದನ್ನೂ ಓದಿ: ಮಂಡ್ಯ | ಟ್ರಾಫಿಕ್‌ ಪೊಲೀಸರ ಯಡವಟ್ಟಿನಿಂದ ಪ್ರಾಣಬಿಟ್ಟ ಮಗು – ಮೂವರು ASI ಸಸ್ಪೆಂಡ್‌

    ಇದಕ್ಕೆ ಉತ್ತರಿಸಿದ ಹಿರಿಯ ವಕೀಲ ಸಿಬಲ್, ಕರ್ನಾಟಕ ಪಟ್ಟಣ ಮತ್ತು ದೇಶ ಯೋಜನಾ ಕಾಯ್ದೆಗೆ 2004ರ ತಿದ್ದುಪಡಿಯ ಮೂಲಕ ಪರಿಚಯಿಸಲಾದ ಟಿಡಿಆರ್ ನಿಬಂಧನೆಯನ್ನು 1996ರಲ್ಲಿ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಯಡಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪೂರ್ವಾನ್ವಯವಾಗಿ ಅನ್ವಯಿಸಲಾಗುವುದಿಲ್ಲ ಎಂದು ಹೇಳಿದರು.

    ಟಿಡಿಆರ್ ನಿಬಂಧನೆ ಇರುವ ಮೊದಲೇ 15 ಎಕ್ರೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಪರಿಹಾರವನ್ನು ಈಗಾಗಲೇ ಮೂಲ ಕಾಯ್ದೆಯಡಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಮಹಾ ಮಳೆಗೆ ಮುಂಬೈ ಮೆಟ್ರೋ ಸ್ಟೇಷನ್ ಸಂಪೂರ್ಣ ಜಲಾವೃತ

    ಈ ಸ್ವಾಧೀನವು 1996ರ ಕಾನೂನಿನ ಅಡಿಯಲ್ಲಿ ನಡೆದಿದ್ದು, 11 ಕೋಟಿ ರೂ.ಗಳ ಪರಿಹಾರವನ್ನು ನಿಗದಿಪಡಿಸಲಾಗಿದೆ. ಆ ಸಮಯದಲ್ಲಿ ಟಿಡಿಆರ್ ಪರಿಕಲ್ಪನೆ ಅಸ್ತಿತ್ವದಲ್ಲಿರಲಿಲ್ಲ. ಟಿಡಿಆರ್‌ಗೆ ಅವಕಾಶ ನೀಡುವ ಸೆಕ್ಷನ್ 14 ಬಿ ಅನ್ನು 2004ರಲ್ಲಿ ಮಾತ್ರ ಪರಿಚಯಿಸಲಾಯಿತು. ಭೂಮಾಲೀಕರು ಸ್ವಯಂಪ್ರೇರಣೆಯಿಂದ ತಮ್ಮ ಭೂಮಿಯನ್ನು ಬಿಟ್ಟುಕೊಡುವಲ್ಲಿ ಮಾತ್ರ ಅನ್ವಯಿಸುತ್ತದೆ. ರಾಜ್ಯವು ಅದನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಅಲ್ಲ ಎಂದು ಅವರು ಹೇಳಿದರು.

    ಈ ವಿವಾದವು 1997ರ ಹಿಂದಿನದು. ರಾಜಮನೆತನವು 1996ರ ಕಾಯ್ದೆಯ ಸಿಂಧುತ್ವವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ಅರ್ಜಿ ಇನ್ನೂ ಬಾಕಿ ಇದೆ ಎಂದ ಸಿಬಲ್, ನ್ಯಾಯಾಂಗ ನಿಂದನೆಯ ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸೆಕ್ಷನ್ 14 ಬಿ ಅಡಿಯಲ್ಲಿ ಅವರ ಕಾನೂನು ಆಕ್ಷೇಪಣೆಗಳನ್ನು ಪರಿಹರಿಸಲು ಪೀಠ ವಿಫಲವಾಗಿದೆ ಎಂದು ವಾದಿಸಿದರು. ಇದನ್ನೂ ಓದಿ: ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು

    ಪ್ರಸ್ತುತ ಪೀಠವು ಸಮನ್ವಯ ಪೀಠವು ನೀಡಿದ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಬಹುದೇ ಎಂದು ಪ್ರಶ್ನಿಸಿತು. ರಾಜ್ಯ ಸರ್ಕಾರವು ಹಿಂದಿನ ಆದೇಶವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿಲ್ಲ. ಆದರೆ ಅದನ್ನು ಖಚಿತಪಡಿಸಿಕೊಳ್ಳಲು ಮಾತ್ರ ಪ್ರಯತ್ನಿಸುತ್ತಿದೆ ಎಂದು ಸಿಬಲ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್

    ಮೇ 22ರಂದು, ನ್ಯಾಯಮೂರ್ತಿಗಳಾದ ಎಂ.ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಮತ್ತೊಂದು ಪೀಠವು ನ್ಯಾಯಾಂಗ ನಿಂದನೆ ವಿಚಾರಣೆಯಲ್ಲಿ ರಾಜಮನೆತನದ ಉತ್ತರಾಧಿಕಾರಿಗಳಿಗೆ 3,011 ಕೋಟಿ ರೂ. ಮೌಲ್ಯದ ಟಿಡಿಆರ್ ಪ್ರಮಾಣಪತ್ರಗಳನ್ನು ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

  • ರಾಜ್ಯ ಸರ್ಕಾರಕ್ಕೆ ಹಿನ್ನಡೆ – ರಾಜಮನೆತನಕ್ಕೆ 3,400 ಕೋಟಿಯ ಟಿಡಿಆರ್ ನೀಡಲು ಸುಪ್ರೀಂ ಆದೇಶ

    ರಾಜ್ಯ ಸರ್ಕಾರಕ್ಕೆ ಹಿನ್ನಡೆ – ರಾಜಮನೆತನಕ್ಕೆ 3,400 ಕೋಟಿಯ ಟಿಡಿಆರ್ ನೀಡಲು ಸುಪ್ರೀಂ ಆದೇಶ

    ನವದೆಹಲಿ: ಅರಮನೆ ಮೈದಾನ (Palace Ground) ಭೂಮಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ 3,400 ಕೋಟಿಯ ಟಿಡಿಆರ್ (TDR) ಅನ್ನು ಮೈಸೂರು ರಾಜಮನೆತನಕ್ಕೆ ನೀಡಲು ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ.

    ನ್ಯಾ. ಅರವಿಂದ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ 3,400 ಕೋಟಿಯ ಟಿಡಿಆರ್ (ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು) ಅನ್ನು ಈ ಕೂಡಲೇ ನೀಡಬೇಕು ಎಂದು ಸುಪ್ರೀಂ ಸೂಚಿಸಿದೆ. ಇದನ್ನೂ ಓದಿ: ಜ್ಯೋತಿಗೆ ಒಡಿಶಾ ಲಿಂಕ್ – ‘ಪಾಕ್‌ನಲ್ಲಿ ಒಡಿಶಾ ಹುಡುಗಿ’ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿಚಾರಣೆ

    ಒಂದು ವಾರದೊಳಗೆ ಟಿಡಿಆರ್ ಠೇವಣಿ ಇಡಬೇಕು ಎಂದು ಈ ಹಿಂದೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ನಲ್ಲಿ 3,400 ಕೋಟಿಯ ಟಿಡಿಆರ್ ಅನ್ನು ರಾಜ್ಯ ಸರ್ಕಾರ ಠೇವಣಿ ಇಟ್ಟಿತ್ತು. ಅದನ್ನು ರಾಜವಂಶಸ್ಥರಿಗೆ ಹಸ್ತಾಂತರಿಸಬಾರದು ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು.

    ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್‌ನಲ್ಲಿ ಟಿಡಿಆರ್ ಇಡಲಾಗಿತ್ತು. ಇದನ್ನು ರಾಜಮನೆತನ ಪರ ವಕೀಲರು ವಿರೋಧಿಸಿದ್ದರು. ರಿಜಿಸ್ಟ್ರಾರ್‌ನಲ್ಲಿ ಇರಬೇಕು ಎಂದು ಸರ್ಕಾರ ವಾದಿಸಿತ್ತು. ಈಗ ಅಂತಿಮವಾಗಿ ರಾಜ್ಯ ಮನೆತನಕ್ಕೆ ಟಿಡಿಆರ್ ನೀಡಲು ಸೂಚಿಸಲಾಗಿದೆ. ಇದನ್ನೂ ಓದಿ: ಮೇ 22ಕ್ಕೆ ಬಿಕನೇರ್ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ

    ಈ ಭೂಮಿಯ ಮೇಲೆ ರಾಜಮನೆತನದ ಹಕ್ಕಿಲ್ಲ ಎನ್ನುವ ರಾಜ್ಯ ಸರ್ಕಾರದ ಅರ್ಜಿ ಇನ್ನೂ ಬಾಕಿ ಇದೆ. ಅಂತಿಮ ಆದೇಶಕ್ಕೆ ಒಳಪಟ್ಟು ಟಿಡಿಆರ್ ಸ್ವೀಕರಿಸಲು ಸೂಚನೆ ನೀಡಲಾಗಿದೆ.

  • ಬೆಂಗ್ಳೂರು ಅರಮನೆ ಟಿಡಿಆರ್ ವಿವಾದ | ರಸ್ತೆ ಅಗಲೀಕರಣ ಯೋಜನೆ ಕೈಬಿಟ್ಟ ಸರ್ಕಾರ: ನಿಜವಾಯ್ತು `ಪಬ್ಲಿಕ್ ಟಿವಿ’ ವರದಿ

    ಬೆಂಗ್ಳೂರು ಅರಮನೆ ಟಿಡಿಆರ್ ವಿವಾದ | ರಸ್ತೆ ಅಗಲೀಕರಣ ಯೋಜನೆ ಕೈಬಿಟ್ಟ ಸರ್ಕಾರ: ನಿಜವಾಯ್ತು `ಪಬ್ಲಿಕ್ ಟಿವಿ’ ವರದಿ

    ಬೆಂಗಳೂರು: ಒಂದು ಕಡೆ ನಗರದ (Bengaluru) ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ. ಇನ್ನೊಂದೆಡೆ ಅರಮನೆ ಮೈದಾನದ ಜಾಗದ (Palace TDR Controversy) ಟಿಡಿಆರ್ ಸಮಸ್ಯೆ. ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದ ಸರ್ಕಾರ ಈಗ ಪ್ರಾಜೆಕ್ಟ್ ಕೈ ಬಿಡುವುದಾಗಿ ಹೇಳಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ನಿಜವಾಗಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಸಹ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಸರ್ಕಾರ ಪರ್ಯಾಯ ಯೋಜನೆ ಏನು? ಡಿಟೇಲ್ಸ್ ಇಲ್ಲಿದೆ.

    ಬೆಂಗಳೂರಿನ ಬಳ್ಳಾರಿ ರಸ್ತೆ ಅಗಲೀಕರಣ ಪ್ರಾಜೆಕ್ಟ್ ಕೈ ಬಿಡುವುದರ ಸರ್ಕಾರ ನಿರ್ಧಾರ ಮಾಡಿರುವುದನ್ನ ಸಿಎಂ ಒಪ್ಪಿಕೊಂಡಿದ್ದಾರೆ. ಟಿಡಿಆರ್ ಕಾರಣಕ್ಕಾಗಿ ಬೆಂಗಳೂರಿನ ಬಳ್ಳಾರಿ ರಸ್ತೆ ಅಗಲೀಕರಣ ಕೈಬಿಟ್ಟ ಸರ್ಕಾರದ ತೀರ್ಮಾನದ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು.

    ಇದೀಗ ಬೆಂಗಳೂರಿನಲ್ಲಿ ಬಳ್ಳಾರಿ ರಸ್ತೆ ಚಾಲುಕ್ಯ ಸರ್ಕಲ್‌ನಿಂದ ಜಯಮಹಲ್ ರಸ್ತೆ (ಮೇಕ್ರಿ ಸರ್ಕಲ್) ಆಗಲೀಕರಣ ಕೈ ಬಿಟ್ಟ ಸರ್ಕಾರ, ರಸ್ತೆ ಆಗಲೀಕರಣ ಬದಲು ಸುರಂಗ ಮಾರ್ಗ ನಿರ್ಮಾಣಕ್ಕೂ ಸರ್ಕಾರ ಪ್ಲ್ಯಾನ್ ಮಾಡಿದೆ. ಅರಮನೆ ಮೈದಾನದ ಜಾಗ ಬಳಸಿಕೊಳ್ಳುವ ಬದಲು ಪರ್ಯಾಯ ಜಾಗ ಬಳಕೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಟಿಡಿಆರ್ ಕೊಡಲು ನಿರಾಕರಿಸಿ ಪರ್ಯಾಯ ಮಾರ್ಗದಲ್ಲಿ ಸುರಂಗಮಾರ್ಗಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ ಎಂಬ ವರದಿ ಪ್ರಸಾರ ಮಾಡಿತ್ತು.

    ರಸ್ತೆ ಅಗಲೀಕರಣ ಪ್ರಾಜೆಕ್ಟ್ ಕೈ ಬಿಟ್ಟ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪರ್ಯಾಯ ಯೋಜನೆ ಬಗ್ಗೆ ಮುಂದೆ ಮಾತಾಡ್ತೀವಿ, ಟಿಡಿಆರ್ ಕೊಡಲು ಆಗಲ್ಲ, ಹಾಗಾಗಿ ಪ್ರಾಜೆಕ್ಟ್ ಕೈ ಬಿಡ್ತೀವಿ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುಗ್ರೀವಾಜ್ಞೆಯಲ್ಲಿ ಟಿಡಿಆರ್ ಕೊಡಲು ಆಗಲ್ಲ ಅಂತ ಹೇಳಿದ್ದೇವೆ. ಇಲ್ಲ ಅಂದರೆ ಪ್ರಾಜೆಕ್ಟ್ ರದ್ದು ಮಾಡೋ ಬಗ್ಗೆಯೂ ಹೇಳಿದ್ದೇವೆ. ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗದಂತೆ ಈ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕಳೆದ 16 ವರ್ಷಗಳಿಂದಲೂ ರಸ್ತೆ ಅಗಲೀಕರಣ ಪ್ರಾಜೆಕ್ಟ್ ಜಾರಿಗೆ ತರಲು ರಾಜ್ಯ ಸರ್ಕಾರ ಸರ್ಕಸ್ ನಡೆಸುತ್ತಿದೆ. ಆದ್ರೆ ಅರಮನೆ ಮೈದಾನದ 15 ಎಕರೆ 36 ಗುಂಟೆ ಜಾಗ ಬಳಸಿಕೊಳ್ಳುವ ವಿಚಾರದಲ್ಲಿ ಜಟಾಪಟಿ ನಡೆಯುತ್ತಿತ್ತು. ಆದ್ರೀಗ ಅರಮನೆ ಜಾಗ ಬಳಸಿಕೊಳ್ಳಲು ಬರೋಬ್ಬರಿ 3 ಸಾವಿರ ಕೋಟಿ ಟಿಡಿಆರ್ ಕೊಡಬೇಕಾಗಿರುವ ಕಾರಣಕ್ಕಾಗಿ ಸರ್ಕಾರ ಈಗ ಯೋಜನೆಯನ್ನೇ ಕೈಬಿಡುವ ಹಂತಕ್ಕೆ ಹೋಗಿದೆ. ಒಟ್ಟಿನಲ್ಲಿ ರಸ್ತೆ ಅಗಲೀಕರಣದ ಬದಲು ಟನಲ್ ರೋಡ್ ಮಾಡಲು ಸರ್ಕಾರ ಪ್ಲ್ಯಾನ್ ಮಾಡಿದ್ದು, ಮುಂದಿನ ಬಜೆಟ್ ವೇಳೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದ್ದು, ಯೋಜನೆ ಮುಗಿಯುವ ತನಕ ಟ್ರಾಫಿಕ್ ಬಿಸಿ ಅನುಭವಿಸಲೇಬೇಕು.