Tag: Palace Road

  • ಬೆಂಗಳೂರಲ್ಲಿ ಧರೆಗೆ ಉರುಳಿದ ಬೃಹತ್ ಮರದ ಕೊಂಬೆ – ನಾಲ್ವರು ಜಸ್ಟ್ ಮಿಸ್!

    ಬೆಂಗಳೂರಲ್ಲಿ ಧರೆಗೆ ಉರುಳಿದ ಬೃಹತ್ ಮರದ ಕೊಂಬೆ – ನಾಲ್ವರು ಜಸ್ಟ್ ಮಿಸ್!

    ಬೆಂಗಳೂರು: ಬೃಹತ್ ಮರದ ಕೊಂಬೆಯೊಂದು ಧರೆಗುರುಳಿದ್ದು, ನಾಲ್ವರು ಕ್ಷಣಾರ್ಧದಲ್ಲಿ ಪಾರಾಗಿರುವ ಘಟನೆ ಬೆಂಗಳೂರಿನ (Bengaluru) ಮೈಸೂರು ಬ್ಯಾಂಕ್ (Mysuru Bank) ಸರ್ಕಲ್ ಬಳಿಯ ಪ್ಯಾಲೇಸ್ ರೋಡ್‌ನ (Palace Road) ಅಂಡರ್‌ಪಾಸ್ ಬಳಿ ನಡೆದಿದೆ.

    ನಿನ್ನೆ (ಡಿ.06) ರಾತ್ರಿ 11:20ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಚಾಲಕ ಕಾರ್ತಿಕ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.ಇದನ್ನೂ ಓದಿ: ಗೇಮಿಂಗ್ ಆಪ್‍ನಲ್ಲಿ 3 ಕೋಟಿ ಹಣ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ

    ಮಗು ಸೇರಿದಂತೆ ನಾಲ್ವರು ಕಾರಿನಲ್ಲಿ ಆರ್.ಟಿ ನಗರ (RT Nagar) ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪ್ಯಾಲೇಸ್ ರೋಡ್‌ನ ಅಂಡರ್‌ಪಾಸ್ ಬಳಿ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಂಡರ್‌ಪಾಸ್‌ನ ತಡೆಗೋಡೆಯಿಂದಾಗಿ ನಾಲ್ವರ ಜೀವ ಉಳಿದಿದೆ.

    ಕಾರು ರೋಡಿನ ಮಧ್ಯ ಭಾಗದಲ್ಲಿದ್ದ ಕಾರಣ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದು ಟ್ರಾಫಿಕ್ ಕ್ಲಿಯರ್ ಮಾಡಿದರು. ತಡರಾತ್ರಿ 1 ಗಂಟೆ ಸುಮಾರಿಗೆ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.ಇದನ್ನೂ ಓದಿ: ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

  • ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಖತರ್ನಾಕ್ ರಾಬರ್ ಕಾಲಿಗೆ ಪೊಲೀಸರ ಗುಂಡೇಟು

    ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಖತರ್ನಾಕ್ ರಾಬರ್ ಕಾಲಿಗೆ ಪೊಲೀಸರ ಗುಂಡೇಟು

    ಬೆಂಗಳೂರು: ನಗರದ ಸದಾಶಿವನಗರ (Sadashivanagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ಸುಲಿಗೆ ಮತ್ತು ರಾಬರಿಯಲ್ಲಿ (Robbery) ನಿಪುಣನಾಗಿದ್ದ ಖತರ್ನಾಕ್ ಆಸಾಮಿಯೊಬ್ಬನ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.

    ಖತರ್ನಾಕ್ ರಾಬರ್ ಯಾಸರ್ (26) ಎಂಬಾತನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದು, ಈತ ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಆರೋಪಿಯಾಗಿದ್ದ. ಯಾಸರ್ ಸುಲ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ. ಈತ ಅಪ್ರಾಪ್ತನಾಗಿದ್ದಾಗಿನಿಂದಲೇ ಸುಲಿಗೆ ರಾಬರಿಯಲ್ಲಿ ನಿಪುಣನಾಗಿದ್ದು, ಶೇಷಾದ್ರಿಪುರಂ (Sheshadripuram) ಪೋಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದನ್ನೂ ಓದಿ: ಕಳಪೆ ರಸ್ತೆ ಕಾಮಗಾರಿ ಆರೋಪ – ಎಂಜಿನಿಯರ್‌ಗೆ ಕಲ್ಲೇಟು

    ಇಂದು (ಮಂಗಳವಾರ) ಬೆಳಗ್ಗೆ ಆರೋಪಿ ಯಾಸರ್‌ನನ್ನು ಹಿಡಿಯಲು ಹೋದ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಪ್ಯಾಲೆಸ್ ರೋಡ್ (Palace Road) ಬಳಿ ಪರಾರಿಗೆ ಯತ್ನಿಸಿದ್ದು, ಹಿಡಿಯಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭ ತಮ್ಮ ಆತ್ಮರಕ್ಷಣೆಗಾಗಿ ಶೇಷಾದ್ರಿಪುರಂ ಇನ್ಸ್ಪೆಕ್ಟರ್‌ ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದಾರೆ. ಈ ಕುರಿತು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]