Tag: pakisthan

  • ಬೀದರ್‍ನಲ್ಲಿ ಕೊಹ್ಲಿ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠವಾಲೆ ಕಿಡಿ

    ಬೀದರ್‍ನಲ್ಲಿ ಕೊಹ್ಲಿ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠವಾಲೆ ಕಿಡಿ

    ಬೀದರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು ಅವಮಾನವಾಗಿದೆ. ಈ ಬಗ್ಗೆ ತಖೆಯಾಗಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ರಾಮದಾಸ್ ಅಠವಾಲೆ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

    ಬೀದರ್‍ನ ವಸತಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ಹೀನಾಯವಾಗಿ ಪಾಕಿಸ್ತಾನದ ವಿರುದ್ಧ ಸೋತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಟೀಂ ಇಂಡಿಯಾವನ್ನು ಬದಲಾವಣೆ ಮಾಡಬೇಕು. ಈ ಪಂದ್ಯದ ಬಗ್ಗೆ ತನಿಖೆಯಾಗಬೇಕು. ಕ್ರಿಕೆಟ್ ಮತ್ತು ಕ್ರೀಡೆಯಲ್ಲಿ ದಲಿತರಿಗೆ ಶೇ.25 ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದ್ರು.

    ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು: ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟ ಪಾಕ್

    ಬಳಿಕ ಹೋ ರಕ್ಷಣೆ ಬಗ್ಗೆ ಮಾತನಾಡಿದ ಸಚಿವರು, ಇಂದು ಗೋ ರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ನಡೆಯುತ್ತಿದ್ದು, ಕಾನೂನು ಕ್ರಮ ಕೈಗೆತ್ತಿಕೊಳ್ಳಬೇಕು. ಗೋ ರಕ್ಷಣೆ ಹೆಸರಿನಲ್ಲಿ ದಲಿತ ಹಾಗೂ ಮುಸ್ಲಿಮರ ಕೊಲೆಯಾಗುತ್ತಿದ್ದು, ಮೋದಿ ಸರ್ಕಾರವನ್ನು ಕೆಡಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ರಾಮದಾಸ್ ಅಠವಾಲೆ ನಕಲಿ ಗೋ ರಕ್ಷಕರ ವಿರುದ್ಧ ಕಿಡಿಕಾರಿದರು.

  • ಕಿರುಕುಳ ನೀಡಿ, ಗನ್ ತೋರಿಸಿ ಮದುವೆ: ಪಾಕ್ ಪ್ರಜೆಯನ್ನು ವರಿಸಿದ್ದ ಭಾರತೀಯ ಮಹಿಳೆ ತವರಿಗೆ ವಾಪಾಸ್

    ಕಿರುಕುಳ ನೀಡಿ, ಗನ್ ತೋರಿಸಿ ಮದುವೆ: ಪಾಕ್ ಪ್ರಜೆಯನ್ನು ವರಿಸಿದ್ದ ಭಾರತೀಯ ಮಹಿಳೆ ತವರಿಗೆ ವಾಪಾಸ್

    ನವದೆಹಲಿ: ಬಲವಂತವಾಗಿ ಪಾಕ್ ಪ್ರಜೆಯನ್ನು ಮದುವೆಯಾಗಿದ್ದ ಭಾರತೀಯ ಯುವತಿಯೊಬ್ಬರು ಇದೀಗ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಉಜ್ಮಾ ಎಂಬವರೇ ಇಂದು ವಾಘಾ ಗಡಿಯ ಮೂಲಕ ಭದ್ರತೆಯೊಂದಿಗೆ ತವರಿಗೆ ಕಾಲಿಟ್ಟ ಯುವತಿಯಾಗಿದ್ದಾರೆ.

    ಏನಿದು ಪ್ರಕರಣ?: 20 ವರ್ಷದ ಉಜ್ಮಾ ಎಂಬವರು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಸಂದರ್ಭದಲ್ಲಿ ಪಾಕ್ ಪ್ರಜೆ ತಹೀರ್ ಆಲಿ ಎಂಬಾತ ಕಿರುಕುಳ ನೀಡಿ, ಗನ್ ತೋರಿಸಿ ಬಲವಂತವಾಗಿ ಮದುವೆಯಾಗಿದ್ದನು. ಈ ಸಂಬಂಧ ಪತಿಯ ವಿರುದ್ಧ ಉಜ್ಮಾ ಇಸ್ಲಾಮಾಬಾದ್ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಪತಿ ತಾಹೀರ್ ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾನೆ. ಅಲ್ಲದೇ ದಾಖಲೆಗಳನ್ನು ಆತ ಕಸಿದುಕೊಂಡಿದ್ದಾನೆ. ಹೀಗಾಗಿ ನನಗೆ ಭಾರತಕ್ಕೆ ತೆರಳಲು ರಕ್ಷಣೆ ಕೊಡಬೇಕು ಹಾಗೂ ತಾಯ್ನಡಿಗೆ ಹಿಂದಿರುಗಲು ನಕಲು ಪ್ರತಿಗಳನ್ನು ಒದಗಿಸಿಕೊಡಬೇಕೆಂದು ಮೇ 12ಕ್ಕೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿ ಸ್ವೀಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್ ನ್ಯಾಯಾಧೀಶ ಮೋಶಿನ್ ಅಕ್ತಾರ್ ಕಯಾನಿ ಅವರಿದ್ದ ಪೀಠ, ಪ್ರಕರಣವನ್ನು ಕೈಗೆತ್ತಿಕೊಂಡು ಬುಧವಾರ ಉಜ್ಮಾ ಅವರಿಗೆ ಭಾರತಕ್ಕೆ ಮರಳಲು ಅವಕಾಶ ನೀಡಿತ್ತು. ಅಲ್ಲದೇ ಪೊಲೀಸರು ಕೂಡ ವಾಘಾ ಗಡಿಯವರೆಗೆ ಆಕೆಯ ಜೊತೆಗಿದ್ದು ರಕ್ಷಣೆ ಕೊಡಬೇಕೆಂದು ಕೋರ್ಟ್ ಆದೇಶ ಮಾಡಿತ್ತು. ನ್ಯಾಯಾಲಯದ ಅನುಮತಿಯಂತೆ ಉಜ್ಮಾ ಇಂದು ಬಿಗಿ ಭದ್ರತೆಯೊಂದಿಗೆ ವಾಘಾ ಗಡಿ ದಾಟಿ ಭಾರತದ ಮಣ್ಣಿಗೆ ಕೈ ಮುಗಿದು ತಾಯ್ನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಉಜ್ಮಾ ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಅಲ್ಲದೆ, ಭಾರತದ ಮಗಳು ಎಂದು ಕರೆದಿದ್ದಾರೆ. ಪಾಕಿಸ್ತಾನದಲ್ಲಿ ಇಷ್ಟೆಲ್ಲಾ ಸಂಕಷ್ಟಗಳನ್ನು ಅನುಭವಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆಂದು ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

    ಈ ಕುರಿತು ಉಜ್ಮಾ ಸಹೋದರ ವಾಸಿಮ್ ಅಹಮದ್ ಮಾಧ್ಯಮಗಳೊಂದಿಗೆ ಮಾತನಾಡಿ, `ಸಹೋದರಿ ಸೇಫ್ ಆಗಿ ತಾಯ್ನಾಡಿಗೆ ಮರಳುತ್ತಿರುವುದು ಸಂತಸ ತಂದಿದೆ. ಆದ್ರೆ ವಿಮಾನ ವಿಳಂಬಗೊಂಡಿರುವುದರಿಂದ ಆಕೆ ದೆಹಲಿಗೆ ಯಾವಾಗ ಬರುತ್ತಾಳೆ ಅಂತಾ ಗೊತ್ತಿಲ್ಲ. ಇನ್ನು ಆಕೆಯ ಹಿಂದಿರುಗುವಿಕೆಗೆ ಸಹಕರಿಸಿದ ಭಾರತ ಸರ್ಕಾರ ಹಾಗೂ ಆಕೆ ಪಾಕಿಸ್ತಾನದಲ್ಲಿದ್ದ ಸಂದರ್ಭದಲ್ಲಿ ಆಕೆಯೊಂದಿಗೆ ಫೋನ್ ಮೂಲಕ ನಿರಂತರ ಸಂಪರ್ಕ ಹೊಂದಿದ್ದ ವಿದೇಶಾಂಗ ಸಚಿವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

     

     

  • ನಾವೂ ಭಾರತದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ: ಪಾಕ್‍ನಿಂದ ನಕಲಿ ವಿಡಿಯೋ ರಿಲೀಸ್

    ನಾವೂ ಭಾರತದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ: ಪಾಕ್‍ನಿಂದ ನಕಲಿ ವಿಡಿಯೋ ರಿಲೀಸ್

    ನವದೆಹಲಿ: ಭಾರತದ ದಾಳಿಗೆ ಜಮ್ಮು-ಕಾಶ್ಮೀರದ ನೌಶೇರಾ ಸೆಕ್ಟರ್ ನಲ್ಲಿ ಪ್ರತಿದಾಳಿ ನಡೆಸಿ ಅಲ್ಲಿನ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಅಂತಾ ಪಾಕಿಸ್ತಾನ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

    ಸುಮಾರು 87 ಸೆಕೆಂಡ್ ಇರೋ ಈ ವಿಡಿಯೋವನ್ನು ಮೇ 23ರಂದು ಪಾಕಿಸ್ತಾನಿ ವಕ್ತಾರರೊಬ್ಬರು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನದ ಮುಗ್ಧ ನಾಗರಿಕರ ಮೇಲೆ ದಾಳಿ ನಡೆಸಿದ ಪ್ರತೀಕಾರವಾಗಿ ನಾವು ಮೇ 13ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಪಾಕಿಸ್ತಾನದ ಸೇನಾ ಬಂಕರ್ ಗಳ ಮೇಲೆ ದಾಳಿ ನಡೆಸಿದ ವಿಡಿಯೋವನ್ನು ಭಾರತ ಬಹಿರಂಗಪಡಿಸಿದ ಮರುದಿನವೇ ಪಾಕಿಸ್ತಾನ ಈ ವಿಡಿಯೋವನ್ನು ಬಹಿರಂಗಪಡಿಸಿದೆ. ಆದ್ರೆ ಇದೊಂದು ನಕಲಿ ವಿಡಿಯೋ ಅಂತಾ ಭಾರತದ ಸೇನಾ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಭಾರತೀಯ ಸೇನೆಯಿಂದ ಪಾಕ್ ಸೇನಾ ಪೋಸ್ಟ್ ಗಳ ಧ್ವಂಸ: ವಿಡಿಯೋ ನೋಡಿ

    ಭಾರತದ ಸೇನಾ ನೆಲೆಗಳು ಅತ್ಯಂತ ಧೃಡವಾದ ಗೋಡೆಗಳನ್ನ ಹೊಂದಿದ್ದು, ಗನ್ ಗಳ ದಾಳಿಯನ್ನು ಕೂಡ ತಡೆದುಕೊಳ್ಳುವ ಸಾಮರ್ಥ್ಯ  ಹೊಂದಿದೆ. ಅಲ್ಲದೇ ಇಷ್ಟೊಂದು ಪ್ರಮಾಣದ ದಾಳಿಯಾದರೆ ಅದು ಮೇಲ್ಭಾಗದಲ್ಲೇ ಸ್ಫೋಟವಾಗುತ್ತದೆ. ಈ ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಅದರಲ್ಲಿ ಎಡಿಟ್ ಮಾಡಿರೋ ಮಾರ್ಕ್‍ಗಳು ಕಂಡುಬರುತ್ತದೆ. ಐಇಡಿ ದಾಳಿ ಆದರೆ ಮಾತ್ರ ರೀತಿಯ ಸ್ಫೋಟವಾಗುತ್ತದೆ. ಆರ್ಟಿಲರಿ ಗನ್ ಮೂಲಕ ದಾಳಿ ಎಸಗಿದರೆ ಆ ರೀತಿಯ ಸ್ಫೋಟ ಕಂಡು ಆಗುವುದಿಲ್ಲ ಎಂದು ಸೇನಾ ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

     

  • 54 ಮುಸ್ಲಿಂ ರಾಷ್ಟ್ರಗಳಿಂದ ಪಾಕ್ ಪ್ರಧಾನಿಗೆ ಅವಮಾನ!

    54 ಮುಸ್ಲಿಂ ರಾಷ್ಟ್ರಗಳಿಂದ ಪಾಕ್ ಪ್ರಧಾನಿಗೆ ಅವಮಾನ!

    ರಿಯಾದ್: ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಮರಣದಂಡನೆ ಪ್ರಕರಣದಲ್ಲಿ ಭಾರತದೆದುರು ಭಾರೀ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಇದೀಗ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ 54 ಮುಸ್ಲಿಂ ರಾಷ್ಟ್ರಗಳು ಅವಮಾನ ಮಾಡಿವೆ.

    ರಿಯಾದ್ ನಲ್ಲಿ ನಡೆದ ಅರಬ್ ಇಸ್ಲಾಮಿಕ್ ಅಮೆರಿಕನ್ ಶೃಂಗಸಭೆಯಲ್ಲಿ 54 ಮುಸ್ಲಿಂ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಭೆಯಲ್ಲಿ ಪಾಕ್ ಪ್ರಧಾನಿ ಶರೀಫ್ ದೀರ್ಘ ಭಾಷಣಕ್ಕೆ ರೆಡಿಯಾಗಿದ್ದರು. ವಿಶೇಷವಾಗಿ ರಿಯಾದ್‍ಗೆ ತೆರಳುತ್ತಿದ್ದಾಗಲೂ ಈ ಭಾಷಣ ಅಭ್ಯಾಸ ಮಾಡಿದ್ದರು. ಆದರೆ ಈ ಭಾಷಣ ಮಾಡಲು ಪ್ರಧಾನಿಯನ್ನು ವೇದಿಕೆಗೆ ಕರೆಯದೇ ಇರುವ ಮೂಲಕ ಉಳಿದ ರಾಷ್ಟ್ರಗಳು ಅವಮಾನಿಸಿದೆ ಎಂದು ಝಿ ನ್ಯೂಸ್ ವರದಿ ಮಾಡಿದೆ.

    ಸಭೆಗೆ ಭಾಗವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕ್ ಪ್ರಧಾನಿ ಕೈಕುಲುಕಿಸಿ ಅಫ್ಗಾನ್ ಅಧ್ಯಕ್ಷ ಅಶ್ರಫ್ ಘನಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮುಂತಾದವರ ಜೊತೆ ಮಾತುಕತೆ ನಡೆಸಿದ್ದಾರೆ.

    ಬಳಿಕ ಸಭೆಯಲ್ಲಿ ಟ್ರಂಪ್, ಭಾರತ, ರಷ್ಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಪಾಕಿಸ್ತಾನದ ಬಗ್ಗೆ ಚಕಾರವೇ ಎತ್ತಿಲ್ಲ. ಅಲ್ಲದೇ ಬೇರೆ ದೇಶಗಳ ಮೇಲೆ ದಾಳಿ ಮಾಡುವ ಮೊದಲು ಉಗ್ರರು ತಮ್ಮ ನೆಲದ ಬಗ್ಗೆ ಖಚಿತಪಡಿಸಿಕೊಳ್ಳಲಿ ಅಂತಾ ಹೇಳಿದ್ರು.

  • ಹೈದ್ರಾಬಾದ್‍ನಲ್ಲಿ ಮಾಟಗಾತಿ ಪ್ರತ್ಯಕ್ಷ: ಭಾರತ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ!

    ಹೈದ್ರಾಬಾದ್‍ನಲ್ಲಿ ಮಾಟಗಾತಿ ಪ್ರತ್ಯಕ್ಷ: ಭಾರತ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ!

    ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ಈಗ ಮಾಟಗಾತಿಯ ಫೋಟೋವೊಂದು ವೈರಲ್ ಆಗಿದೆ.

    ಕಟ್ಟಡದ ಗೋಡೆಯಲ್ಲಿ ಮಾಟಗಾತಿ ಕುಳಿತುಕೊಂಡಿದ್ದು, ಈಕೆಯ ಫೋಟೋವನ್ನು ಜನರು ಕ್ಲಿಕ್ಕಿಸುತ್ತಿದ್ದಾರೆ. ಹೈದರಾಬಾದ್‍ನಲ್ಲಿ ಈ ಫೋಟೋ ಕ್ಲಿಕ್ಕಿಸಲಾಗಿದೆ ಎಂದು ಬರೆದು ಜನರು ಶೇರ್ ಮಾಡುತ್ತಿದ್ದಾರೆ.

    ಈ ಫೋಟೋ ಜಾಸ್ತಿ ಈಗ ಶೇರ್ ಆಗಲು ಕಾರಣವಾಗಿದ್ದು ಪಾಕಿಸ್ತಾನದ ಗಾಯಕ ಫಕೀರ್ ಮೊಹಮ್ಮದ್ ಅವರ ಎಫ್‍ಬಿ ಪೋಸ್ಟ್. ಹೈದರಾಬಾದ್‍ನಲ್ಲಿ ಮಾಟಗಾತಿ ಪತ್ತೆಯಾಗಿದ್ದಾಳಂತೆ. ಈ ವಿಚಾರದ ಬಗ್ಗೆ ಯಾರಾದ್ರೂ ಪರಿಶೀಲನೆ ನಡೆಸಬಹುದಾ ಎಂದು ಪ್ರಶ್ನಿಸಿ ಸೋಮವಾರ ಪೋಸ್ಟ್ ಮಾಡಿದ್ದರು. ಈ ಪೋಸ್ಟನ್ನು 932 ಮಂದಿ ಶೇರ್ ಮಾಡಿದ್ದರೆ, 1900 ಮಂದಿ ಕಮೆಂಟ್ ಮಾಡಿದ್ದರು.

    ಈ ಫೋಟೋದ ಮೂಲ ಎಲ್ಲಿ?
    ಈ ಫೋಟೋದ ಮೂಲ ಮೊರಕ್ಕೋ ದೇಶವಾಗಿದ್ದು, ರಾತ್ರಿ ಕಳ್ಳರನ್ನು ಹೆದರಿಸಲು ಕಟ್ಟಡದ ಮೇಲೆ ಮಹಿಳೆಯೊಬ್ಬಳ ಗೊಂಬೆಯನ್ನು ಇರಲಿಸಲಾಗಿತ್ತು. ಈ ಬೊಂಬೆಯನ್ನು ನೋಡಿದ ಜನ ಫೋಟೋ ಕ್ಲಿಕ್ಕಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ.

    ಹೀಗಾಗಿ ವಾಟ್ಸಪ್ ಮತ್ತು ಫೇಸ್‍ಬುಕ್ ನಲ್ಲಿ ಬರುವ ಫೋಟೋಗಳನ್ನು ಶೇರ್ ಮಾಡುವ ಮುನ್ನ ಮೊದಲು ಸ್ವಲ್ಪ ಪರಿಶೀಲಿಸಿ ಬಳಿಕ ಶೇರ್ ಮಾಡಿ.

     

  • ಭಾರತೀಯ ಪೌರತ್ವಕ್ಕಾಗಿ ರಾಯಚೂರಿನ ಬಾಂಗ್ಲಾ ವಲಸಿಗರ ಹೋರಾಟ

    ಭಾರತೀಯ ಪೌರತ್ವಕ್ಕಾಗಿ ರಾಯಚೂರಿನ ಬಾಂಗ್ಲಾ ವಲಸಿಗರ ಹೋರಾಟ

    -ಭಾರತದಲ್ಲೇ 34 ವರ್ಷ ಕಳೆದರೂ ಸಿಗದ ಪೌರತ್ವ
    -ಪೌರತ್ವ ಮಸೂದೆ ಜಾರಿಯಾದ್ರೂ ಅನುಷ್ಠಾನ ವಿಳಂಬ

    ರಾಯಚೂರು: ಕಳೆದ 34 ವರ್ಷಗಳಿಂದ ಭಾರತದಲ್ಲೇ ವಾಸವಾಗಿದ್ದರೂ ಪೌರತ್ವ ಸಿಗದೇ ರಾಯಚೂರಿನ 5 ಪುಟ್ಟ ಗ್ರಾಮಗಳ ಜನ ನಿತ್ಯ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಎಷ್ಟೇ ಬುದ್ಧಿವಂತರಾಗಿದ್ರೂ ಉನ್ನತ ವ್ಯಾಸಂಗಕ್ಕೆ ಜಾತಿ ಸಮಸ್ಯೆಯಾಗಿದೆ. ಭೂಮಿ ಇದ್ದರೂ ಅದರ ಮೇಲೆ ಯಾವುದೇ ಅಧಿಕಾರವಿಲ್ಲದೆ ರೈತರು ಒದ್ದಾಡುತ್ತಿದ್ದಾರೆ. ಬಾಂಗ್ಲಾದೇಶದಿಂದ ವಲಸೆ ಬಂದ ಜನರು ಇನ್ನೂ ಭಾರತೀಯರಾಗಿಲ್ಲ.

    ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಭಜನೆಯಾದ ವೇಳೆ 1969-70ರಲ್ಲಿ ಸುಮಾರು ಜನ ಹಿಂದೂಗಳು ರಾಯಚೂರಿನ ಸಿಂಧನೂರು ತಾಲೂಕಿಗೆ ಬಂದು ನೆಲೆಸಿದ್ರು. ಸರ್ಕಾರ ಇವರಿಗೆಲ್ಲಾ ಪುನರ್ವಸತಿ ಕಲ್ಪಿಸಿತು. ಪುನಃ 1983 ರಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿ ಮತ್ತಷ್ಟು ಜನ ಮನೆ ಮಠ ತೊರೆದು ಬಾಂಗ್ಲಾದೇಶದಿಂದ ಭಾರತ ಸರ್ಕಾರ ಗುರುತಿಸಿದಂತೆ ಸಿಂಧನೂರು ತಾಲೂಕಿಗೆ ಬಂದು ನೆಲೆಸಿದರು. ಹೀಗೆ ಬಂದ ಸುಮಾರು ಐದು ಸಾವಿರ ಜನರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ.

    ಸಿಂಧನೂರು ತಾಲೂಕಿನ ಐದು ಪುನರ್ವಸತಿ ಕ್ಯಾಂಪ್‍ಗಳಲ್ಲಿ ವಾಸಿಸುತ್ತಿರುವ, ಈ ಮೊದಲು ಬಂದವರನ್ನೂ ಸೇರಿ ಒಟ್ಟು 25 ಸಾವಿರ ಜನರಿಗೆ ಜಾತಿ ಪ್ರಮಾಣ ಪತ್ರವಿಲ್ಲ. ಸರ್ಕಾರವೇ ನೀಡಿದ ಐದು ಎಕರೆ ಜಮೀನಿಗೆ ಇದುವರೆಗೆ ಪಟ್ಟಾ ನೀಡಿಲ್ಲ. 34 ವರ್ಷಗಳು ಕಳೆದರೂ ಭಾರತದ ಪೌರತ್ವವಿಲ್ಲದೆ ಇನ್ನೂ ವಲಸಿಗರಾಗಿ ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ ಅಂತ ಆರ್‍ಎಚ್ ಕ್ಯಾಂಪ್-2 ನಿವಾಸಿ ಪಂಕಜ್ ಸರ್ಕಾರ್ ಅಳಲನ್ನ ತೋಡಿಕೊಂಡಿದ್ದಾರೆ.

    ಜಾತಿ ಪ್ರಮಾಣ ಪತ್ರವಿಲ್ಲದೆ ಶೈಕ್ಷಣಿಕ, ಉದ್ಯೋಗ ಮಿಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಮತದಾನ ಗುರುತಿನ ಚೀಟಿ, ಆಧಾರ್, ರೇಷನ್ ಕಾರ್ಡ್ ಇದ್ದರೂ ಜಾತಿ ಪ್ರಮಾಣ ಪತ್ರವಿಲ್ಲ. ಜಮೀನಿಗೆ ಕೇವಲ ಸಾಗುವಳಿ ಚೀಟಿ ಇರುವುದರಿಂದ ಬ್ಯಾಂಕ್ ಸಾಲ, ಸೌಲಭ್ಯಗಳನ್ನ ಪಡೆಯಲು ಆಗುತ್ತಿಲ್ಲ. ಈಗಾಗಲೇ ಪೌರತ್ವ ನೀಡುವ ಕುರಿತು ಮಸೂದೆ ಮಂಡನೆಯಾಗಿದೆ. ಆದ್ರೆ ಕಾಯಿದೆ ಜಾರಿಗೆ ರೂಪುರೇಷೆಗಳನ್ನ ಸಿದ್ದಪಡಿಸುವುದು ಬಾಕಿಯಿದ್ದು ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಅಂತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

    ಒಟ್ಟನಲ್ಲಿ ದೇಶಬಿಟ್ಟು ದೇಶಕ್ಕೆ ಬಂದ ಜನ ಇಲ್ಲಿ ನೆಲೆ ಕಂಡುಕೊಂಡಿದ್ದಾರಾದ್ರೂ ಕೆಲ ಭಾರತೀಯ ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸೌಲಭ್ಯಗಳಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿದ್ದರೂ ಇನ್ನೂ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಈಗಲಾದ್ರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತ ಗಮನಹರಿಸಬೇಕಿದೆ.