Tag: pakisthan

  • ದೇಹ ಇಲ್ಲದೇ ನರರಾಕ್ಷಸನಿಗೆ ಅಂತಿಮ ವಿಧಿವಿಧಾನಗೈದು ಸೇನೆಗೆ ಅವಮಾನ!

    ದೇಹ ಇಲ್ಲದೇ ನರರಾಕ್ಷಸನಿಗೆ ಅಂತಿಮ ವಿಧಿವಿಧಾನಗೈದು ಸೇನೆಗೆ ಅವಮಾನ!

    ಶ್ರೀನಗರ: ಜೈಶ್ ಉಗ್ರ ಅದಿಲ್ ಅಹ್ಮದ್ ದಾರ್ ಗೆ ಸ್ವಗ್ರಾಮ ಕಾಕಾಪೋರದಲ್ಲಿ ದೇಹ ಇಲ್ಲದೆ ಅಂತಿಮ ವಿಧಾನ ಮಾಡಿ ಯೋಧರಿಗೆ ಅವಮಾನ ಮಾಡಲಾಗಿದೆ.

    ನರ ರಾಕ್ಷಸನನ್ನು ಹುತಾತ್ಮನಂತೆ ಬಿಂಬಿಸಿದ್ದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೈಶ್ ಉಗ್ರ ಅದಿಲ್ ಅಹ್ಮದ್‍ದಾರ್, ಘಟನೆ ನಡೆದ 10 ಕಿ.ಮೀ. ದೂರದಲ್ಲೇ ಮನೆ ಮಾಡಿದ್ದ. ಪ್ರಥಮ ಪಿಯುಸಿ ಡ್ರಾಪ್‍ಔಟ್ ಆಗಿದ್ದವ ಕಳೆದ ಮಾರ್ಚ್‍ನಲ್ಲಿ ಜೈಶ್ ಉಗ್ರ ಸಂಘಟನೆ ಸೇರಿದ್ದ.

    ಈತನಿಗೆ ಮೊದಲಿಗೆ ಯಾವುದೇ ಪೈಶಾಚಿಕ ಕೃತ್ಯ ಒಪ್ಪಿಸಿರಲಿಲ್ಲ. ಈತನನು ಉಗ್ರ ಸಂಘಟನೆಯ `ಸಿ’ ಗ್ರೇಡ್‍ನಲ್ಲಿಡಲಾಗಿತ್ತು ಅಂತ ತಿಳಿದು ಬಂದಿದೆ. ಗುರುವಾರ ಈತ 350 ಕೇಜಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಸೇನಾ ವಾಹನಕ್ಕೆ ಗುದ್ದಿಸಿ ಫಿದಾಯಿನ್ ದಾಳಿ ನಡೆಸಿ ನಾನೀಗ ಸ್ವರ್ಗಕ್ಕೆ ಹೋಗ್ತೇನೆ ಎಂದು ಡೈಲಾಗ್ ಹೊಡೆದಿದ್ದ.

    ಸ್ಫೋಟದ ತೀವ್ರಗೆ ಸುಮಾರು 10 ಕಿ.ಮೀ. ಶಬ್ದ ಕೇಳಿತ್ತು. ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು ಅಂತ ಸ್ಥಳೀಯರು ಹೇಳಿದ್ದಾರೆ. ಸ್ಫೋಟಕ್ಕೆ ಆರ್ ಡಿಎಕ್ಸ್ ಅಲ್ಲ, ಉತ್ಕೃಷ್ಟ ಯೂರಿಯಾ ಬಳಸಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

    ಈ ಪಾಪ ಕೃತ್ಯದ ಮಾಸ್ಟರ್ ಮೈಂಡ್ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ರಶೀದ್ ಘಾಝಿ. ಈತನೇ ಈ ದಾಳಿಯನ್ನು ಕಾರ್ಯರೂಪಕ್ಕೆ ತಂದಿದ್ದು ಅಂತಾ ಗುಪ್ತಚರ ಇಲಾಖೆ ಹೇಳಿದೆ. ಅಫ್ಘಾನಿಸ್ತಾನದಲ್ಲಿ ತರಬೇತುಗೊಂಡಿದ್ದ ಈತ ಸುಧಾರಿತ ಸ್ಫೋಟಕ ತಯಾರಿಕೆಯಲ್ಲಿ ಹೆಚ್ಚು ಪರಿಣಿತನಾಗಿದ್ದರಿಂದ ಪುಲ್ವಾಮಾ ಸ್ಫೋಟದ ಜವಾಬ್ದಾರಿ ಈತನಿಗೆ ನೀಡಲಾಗಿತ್ತು. ಅಲ್ಲದೇ ಅಫ್ಜಲ್ ಗುರುವಿಗೆ ಮರಣ ದಂಡನೆ ವಿಧಿಸಿದ ಫೆಬ್ರವರಿ 9ರಂದೇ ಈ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ಗುಪ್ತಚರ ದಳ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಸೈನಿಕರಿಂದ ಮತ್ತೆ ಗುಂಡಿನ ದಾಳಿ..!

    ಪಾಕ್ ಸೈನಿಕರಿಂದ ಮತ್ತೆ ಗುಂಡಿನ ದಾಳಿ..!

    ಜಮ್ಮು-ಕಾಶ್ಮೀರ: ಆತ್ಮಾಹುತಿ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಪಾಕ್ ನಿಂದ ಮತ್ತೆ ಗುಂಡಿನ ದಾಳಿ ನಡೆದಿದೆ. ಜಮ್ಮು-ಕಾಶ್ಮೀರದ ಗಡಿಯ ಪೋಂಚ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.

    ಒಂದು ಕಡೆ ಪಾಕಿಸ್ತಾನ ನಮಗೂ ನಿನ್ನೆ ನಡೆದ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಇನ್ನೊಂದೆಡೆ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿರುವುದು ಇದೀಗ ಭಾರತೀಯರನ್ನು ಮತ್ತಷ್ಟು ಕೆರಳಿಸಿದೆ.

    ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಹೊಣೆಯನ್ನು ನಿಷೇಧಿತ ಜೈಶ್-ಇ-ಮೊಹಮದ್ ಸಂಘಟನೆ ಹೊತ್ತುಕೊಂಡಿದ್ದು, ಈ ಸಂಬಂಧ ವಿಡಿಯೋವನ್ನು ಹರಿಬಿಟ್ಟಿದೆ. ಆತ್ಮಾಹುತಿ ದಾಳಿಯನ್ನು ಆದಿಲ್ ಅಹ್ಮದ್ ದಾರ್ ನಡೆಸಿದ್ದು, ತನ್ನ ಕೃತ್ಯದ ಬಗ್ಗೆ ನರಹಂತಕ ಉಗ್ರ ವಿಡಿಯೋದಲ್ಲಿ ಕೊಚ್ಚಿಕೊಂಡಿದ್ದಾನೆ. ಕಾಶ್ಮೀರದ ಪುಲ್ವಾಮ ದಾಳಿ ಬಳಿಕ ಜೈಶ್-ಇ-ಮೊಹಮದ್ ಸಂಘಟನೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ. ದಾಳಿ ನಡೆಸುವ ಮುನ್ನವೇ ಆದಿಲ್ ದಾರ್, ಸಂಘಟನೆಯ ಧ್ವಜದ ಮುಂದೆ ಶಸ್ತ್ರಸಜ್ಜಿತನಾಗಿ ನಿಂತು ತಾನು ಮಾಡಲು ಹೊರಟ ಕೃತ್ಯದ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋದಲ್ಲಿ ತನ್ನ ಬೆಂಬಲಿಸುವಂತೆ ಕಾಶ್ಮೀರಿ ಮುಸ್ಲಿಮರಲ್ಲಿಯೂ ಆತ ಮನವಿ ಮಾಡಿಕೊಂಡಿದ್ದು, ಈ ವಿಡಿಯೋ ಬಿಡುಗಡೆ ಆಗುವ ವೇಳೆ ನಾನು ಸ್ವರ್ಗದಲ್ಲಿರುತ್ತೇನೆ ಎಂದು ಆದೀಲ್ ದಾರ್ ಹೇಳಿಕೊಂಡಿದ್ದಾನೆ.

    ಜಮ್ಮು-ಶ್ರೀನಗರದ ಹೆದ್ದಾರಿಯಲ್ಲಿಯ ಸಿಆರ್‍ಪಿಎಫ್ ಯೋಧರ 72ಕ್ಕೂ ಅಧಿಕ ವಾಹನಗಳನ್ನು ಸ್ಫೋಟಿಸುವ ಗುರಿಯನ್ನು ಸಂಘಟನೆ ಆದಿಲ್ ನಿಗೆ ನೀಡಿತ್ತು. ಪ್ರತಿಯೊಂದು ವಾಹನದಲ್ಲಿ ಸುಮಾರು 40ರಿಂದ 45 ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ಉಗ್ರರು ಪಡೆದುಕೊಂಡಿದ್ದರು. ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

    2016 ಸೆಪ್ಟೆಂಬರ್ ನಲ್ಲಿ ನಡೆದ ಉರಿ ದಾಳಿಯಲ್ಲಿ 19 ಯೋಧರು ಹುತಾತ್ಮರಾಗಿದ್ದರು. ಉರಿ ದಾಳಿಗೆ ಪ್ರತೀಕರವಾಗಿ ಭಾರತೀಯ ಸೇನಾ ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು.

    https://www.youtube.com/watch?v=iKU4BcVVdnE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರದಿ ಮಾಡಲು ಹೋಗಿ ಕತ್ತೆ ಮೇಲಿನಿಂದ ಬಿದ್ದ ಪತ್ರಕರ್ತ!

    ವರದಿ ಮಾಡಲು ಹೋಗಿ ಕತ್ತೆ ಮೇಲಿನಿಂದ ಬಿದ್ದ ಪತ್ರಕರ್ತ!

    ಇಸ್ಲಾಮಾಬಾದ್: ಪಾಕಿಸ್ತಾನದ ಪತ್ರಕರ್ತರೊಬ್ಬರು ಕತ್ತೆ ಮೇಲೆ ಕುಳಿತು ವರದಿ ಮಾಡಲು ಹೋಗಿ ಕೆಳಗೆ ಬಿದ್ದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕತ್ತೆಗಳ ಸಾಕಾಣಿಕೆ ಮತ್ತು ಮಾರಾಟದ ಕುರಿತು ಕತ್ತೆ ಮೇಲೆಯೇ ಕುಳಿತು ವರದಿ ಮಾಡಲು ಹೋಗಿ ಉರ್ದು ಭಾಷೆಯ ಜಿಯೋ ಟಿವಿ ವರದಿಗಾರ ಅಮಿನ್ ಹಫೀಜ್ ಕೆಳಗೆ ಬಿದ್ದಿದ್ದಾರೆ.

    ಅಮೀನ್ ಹಫೀಜ್ ಹೀಗೆ ನಗೆಪಾಟಲಿಗೆ ಈಡಾಗುವುದು ಮೊದಲ ಬಾರಿ ಅಲ್ಲ. ಹಿಂದೆ ಕೂಡ ಎಮ್ಮೆ, ಕುರಿಗಳಿಗೆ ಅವರು ಸಂದರ್ಶನ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು.

    ಯಾಕೆ ನೀವು ಹೀಗೆ ಮಾಡ್ತೀರ ಅಂತ ಅಮೀನ್ ಅವರನ್ನು ಕೇಳಿದ್ರೆ, ಐ ಲವ್ ಮೈ ಜಾಬ್. ನನಗೆ ಈ ರೀತಿ ವರದಿ ಮಾಡಲು ಇಷ್ಟವಾಗುತ್ತೆ. ನಾನು ಸೀರಿಯಸ್ ವಿಷಯದ ಕುರಿತು ವರದಿ ಮಾಡಲ್ಲ ಎಂದು ನಗುಮುಖದಿಂದ ಉತ್ತರಿಸುತ್ತಾರೆ. ಅಮೀನ್ ಅವರ ಡಿಫರೆಂಟ್ ವರದಿಗಾರಿಕೆ ಶೈಲಿಯಿಂದಲೇ ಪಾಕಿಸ್ತಾನದಲ್ಲಿ ಅವರು ಹೆಸರುವಾಸಿಯಾಗಿದ್ದಾರೆ.

    https://www.youtube.com/watch?time_continue=15&v=NeAYCPK_-To

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್‍ನಲ್ಲಿ ನಾಳೆ ಸ್ವಾತಂತ್ರ್ಯ ದಿನಾಚರಣೆ- ಇಂದು 30 ಮಂದಿ ಭಾರತೀಯರ ಬಿಡುಗಡೆ

    ಪಾಕ್‍ನಲ್ಲಿ ನಾಳೆ ಸ್ವಾತಂತ್ರ್ಯ ದಿನಾಚರಣೆ- ಇಂದು 30 ಮಂದಿ ಭಾರತೀಯರ ಬಿಡುಗಡೆ

    ಇಸ್ಲಾಮಾಬಾದ್: ಪಾಕಿಸ್ತಾನ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ 30 ಮಂದಿ ಭಾರತೀಯರನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡಿದೆ.

    ತನ್ನ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ 470 ಮಂದಿ ಭಾರತೀಯರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಈಗ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ 27 ಮಂದಿ ಮೀನುಗಾರರು ಸೇರಿ 30 ಮಂದಿಯನ್ನು ಬಿಡುಗಡೆ ಮಾಡಿದೆ.

    ಕೆಲವೊಂದು ವಿಚಾರಗಳನ್ನು ರಾಜಕೀಯವಾಗಿ ಪರಿಗಣಿಸದಿರುವ ಪಾಕಿಸ್ತಾನದ ಸ್ಥಿರ ನೀತಿ ಹಾಗೂ ಮಾನವೀಯತೆಯ ದೃಷ್ಟಿಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಅಂತ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ.

    ಆಗಸ್ಟ್ 14ರಂದು ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾನವೀಯತೆಯ ದೃಷ್ಟಿಯಿಂದ 27 ಮಂದಿ ಮೀನುಗಾರರು ಸೇರಿ 30 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಭಾರತವು ನಮ್ಮೊಂದಿಗೆ ಕೈ ಜೋಡಿಸುತ್ತದೆ ಎಂಬ ಭರವಸೆ ಇದೆ ಅಂತ ಅವರು ತಿಳಿಸಿದ್ದಾರೆ.

    418 ಮೀನುಗಾರರು ಸೇರಿ ಸುಮಾರು 470ಕ್ಕಿಂತಲೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಶವಾಗಿದ್ದಾರೆ ಅಂತ ಜುಲೈನಲ್ಲಿ ಅಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‍ಗೆ ವರದಿ ನೀಡಿತ್ತು. ಸದ್ಯ ಜೈಲಿನಿಂದ ಬಿಡುಗಡೆಗೊಂಡ ಭಾರತೀಯರನ್ನು ಕರಾಚಿಯ ಮಲಿರ್ ಜೈಲಿನಿಂದ ಲಾಹೋರ್ ಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಂದ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ ಎಂಬುದಾಗಿ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಅಕ್ರಮವಾಗಿ ಗಡಿ ಪ್ರವೇಶಿಸುತ್ತಿದ್ದ ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

    ಅಕ್ರಮವಾಗಿ ಗಡಿ ಪ್ರವೇಶಿಸುತ್ತಿದ್ದ ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

    ಕಾಶ್ಮೀರ: ಶನಿವಾರ ಬೆಳಗ್ಗೆ ಉತ್ತರ ಕಾಶ್ಮೀರದ ತಂಗ್ದಾರ್ ವಲಯದಲ್ಲಿ ಅಕ್ರಮವಾಗಿ ಗಡಿ ಪ್ರವೇಶ ಮಾಡುತ್ತಿದ್ದ 4 ಮಂದಿ ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.

    ಶನಿವಾರ ಬೆಳಗ್ಗೆ ಉತ್ತರ ಕಾಶ್ಮೀರದ ತಂಗ್ದಾರ್ ವಲಯದಲ್ಲಿ ಅಕ್ರಮವಾಗಿ ಗಡಿ ಪ್ರವೇಶ ಮಾಡುತ್ತಿದ್ದ 4 ಮಂದಿ ಉಗ್ರರನ್ನು ಸದೆಬಡೆಯಲಾಗಿದೆ. ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದು ಹೆಚ್ಚಿನ ಉಗ್ರರು ಇರಬಹುದೆಂದು ಶಂಕಿಸಲಾಗಿದೆ ಎಂದು ಭಾರತೀಯ ಸೇನಾ ವಕ್ತಾರ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

    ರಂಜಾನ್ ಹಬ್ಬದ ಪ್ರಯುಕ್ತ ಭಾರತದ ಗಡಿ ಪ್ರದೇಶಗಳಲ್ಲಿ ಭಾರತ ಸೇನೆಯು ಕದನ ವಿರಾಮವನ್ನು ಘೋಷಿಸಿತ್ತು. ಇಂದು ಭಾರತದ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಅಕ್ರಮವಾಗಿ ಪ್ರವೇಶವನ್ನು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಹೊಡೆದುರುಳಿಸಲಾಗಿದೆ. ಕಳೆದೆರಡು ದಿನಗಳಿಂದ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ.

    ವಿಶೇಷವಾಗಿ ಉತ್ತರ ಕಾಶ್ಮೀರದ ಪ್ರದೇಶಗಳಲ್ಲಿ ಹಿಮ ಕರಗುತ್ತಿರುವುದುರಿಂದ ಮುಂದಿನ ದಿನಗಳಲ್ಲಿ ಉಗ್ರರು ಈ ಗಡಿ ಪ್ರದೇಶದ ಮೂಲಕ ಒಳನುಸುಳುವ ಸಾಧ್ಯತೆ ಹೆಚ್ಚಿದೆ ಎಂದು ಸೇನಾ ವಲಯ ತಿಳಿಸಿದೆ.

  • ಬಾಹುಬಲಿಯ ಜೊತೆ ಪಾಕಿಸ್ತಾನಕ್ಕೆ ಹೊರಟ ನಿರ್ದೇಶಕ ರಾಜಮೌಳಿ

    ಬಾಹುಬಲಿಯ ಜೊತೆ ಪಾಕಿಸ್ತಾನಕ್ಕೆ ಹೊರಟ ನಿರ್ದೇಶಕ ರಾಜಮೌಳಿ

    ನವದೆಹಲಿ: ಬಾಹುಬಲಿ ಸಿನಿಮಾ ಪಾಕಿಸ್ತಾನದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಈ ಖುಷಿಯನ್ನ ನಿರ್ದೇಶಕ ಎಸ್.ಎಸ್ ರಾಜಮೌಳಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಟ್ಟರ್ ನಲ್ಲಿ ಟ್ವೀಟ್ ಮಾಡಿರುವ ರಾಜಮೌಳಿಯವರು,”ಬಾಹುಬಲಿ ಸಿನಿಮಾ ನನಗೆ ಸಾಕಷ್ಟು ಅವಕಾಶಗಳನ್ನ ತಂದುಕೊಟ್ಟಿದೆ. ಇದರಿಂದ ನಾನು ಹಲವಾರು ದೇಶಗಳನ್ನ ಸುತ್ತಿದ್ದೇನೆ. ಇದರಲ್ಲಿ ಪಾಕಿಸ್ತಾನಕ್ಕೆ ಬಂದಿರುವುದಕ್ಕೆ ಬಹಳ ಉತ್ಸಾಹದಿಂದ್ದಿದೇನೆ. ನನ್ನನ್ನು ಆಹ್ವಾನಿಸಿರುವ ಪಾಕಿಸ್ತಾನದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೃದಯಪೂರ್ವಕ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    2017ರ ಮೇ ತಿಂಗಳಿನಲ್ಲಿ ಬಾಹುಬಲಿ ಸಿನಿಮಾ ಪಾಕಿಸ್ತಾನದಲ್ಲಿ ಭರ್ಜರಿ ಪ್ರರ್ದಶನಗೊಂಡಿತ್ತು. ಈ ವರ್ಷದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪಾಕಿಸ್ತಾನದ ಕರಾಚಿಯಿಂದ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರಿಗೆ ಆಮಂತ್ರಣ ಸಿಕ್ಕಿದೆ.

    250 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಬಾಹುಬಲಿ ಭಾಗ 2 ಬಾಕ್ಸ್ ಆಫೀಸ್‍ನಲ್ಲಿ 18 ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಿತ್ತು. 2017ರ ಏಪ್ರಿಲ್ 28 ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ಪ್ರಭಾಸ್, ರಾಣಾ ದಗ್ಗು ಭಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಕೃಷ್ಣ, ಸತ್ಯರಾಜ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು.

  • ಯುಗಾದಿಯಂದೇ ಪಾಕ್ ನಿಂದ ಗುಂಡಿನ ದಾಳಿ- ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ದುರ್ಮರಣ

    ಯುಗಾದಿಯಂದೇ ಪಾಕ್ ನಿಂದ ಗುಂಡಿನ ದಾಳಿ- ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ದುರ್ಮರಣ

    ಜಮ್ಮು-ಕಾಶ್ಮೀರ: ಯುಗಾದಿಯಂದೇ ಪಾಕಿಸ್ತಾನ ಭಾರತದ ಮೇಲೆ ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

    ಪೂಂಛ್ ಜಿಲ್ಲೆಯ ದೇವ್ಟಾ ಧರ್ ಗ್ರಾಮದಲ್ಲಿರುವ ಮನೆಗೆ ಪಾಕ್ ಸೇನೆ ಹಾರಿಸಿದ ಶೆಲ್‍ಗಳು ಅಪ್ಪಳಿಸಿವೆ. ದಾಳಿಯಲ್ಲಿ ಮನೆಯಲ್ಲಿದ್ದ ಚೌಧರಿ ಮೊಹ್ಮದ್ ರಂಜನ್, ಪತ್ನಿ ಮತ್ತು ಮೂವರು ಗಂಡು ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಘಟನೆಯಿಂದಾಗಿ ರಂಜನ್ ಅವರ ಇಬ್ಬರು ಹೆಣ್ಣು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇಂದು ಬೆಳಗ್ಗೆ 7.45ರ ಸುಮಾರಿಗೆ ಪಾಕ್ ಗುಂಡಿನ ದಾಳಿ ನಡೆಸಿದೆ. ಸೇನೆಯ ಬದಲು ನಾಗರಿಕ ಪ್ರದೇಶಗಳನ್ನೇ ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಸೇನೆ ದಾಳಿ ನಡೆಸ್ತಿದೆ ಅಂತ ಸೇನಾ ವಕ್ತಾರ ದೇವೇಂದರ್ ಆನಂದ್ ತಿಳಿಸಿದ್ದಾರೆ.

    ಕಳೆದ ವಾರ ರಾಜ್ಯಸಭೆಯಲ್ಲಿ ಪ್ರಶ್ನೆಯ ವೇಳೆ ಪಾಕಿಸ್ತಾನ ಜನವರಿಯಿಂದ ಈವರೆಗೆ ಸುಮಾರು 209 ಬಾರಿ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿದೆ. ಅದರಲ್ಲಿ ಫೆಬ್ರವರಿಯ 12 ದಿನದೊಳಗೆ ಸುಮಾರು 142 ಬಾರಿ ದಾಳಿ ನಡೆಸಿದೆ. ಒಟ್ಟಾರೆ ಕಳೆದ ವರ್ಷದಿಂದ ಈವರೆಗೆ ಸುಮಾರು 860 ಬಾರಿ ಪಾಕ್ ಭಾರತದ ಮೇಲೆ ದಾಳಿ ನಡೆಸಿದೆ ಅಂತ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದರು.

    ಕಳೆದ ತಿಂಗಳಷ್ಟೇ ಪೂಂಛ್ ಹಾಗೂ ರಾಜೌರಿ ಜಿಲ್ಲೆಯಲ್ಲಿ ಪಾಕ್ ನ ದಾಳಿಗೆ 22 ವರ್ಷದ ಯೋಧ ಸೇರಿ 4 ಮಂದಿ ಹುತಾತ್ಮರಾಗಿದ್ದರು. ಪಾಕ್‍ನ ಪ್ರತಿ ದಾಳಿಗೂ ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದಾರೆ ಎಂದು ಸೇನಾ ಮುಖ್ಯಸ್ಥ ಶರತ್ ಚಂದ್ ತಿಳಿಸಿದ್ದಾರೆ.

  • ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆದ್ರೆ ಜೈಲು ಶಿಕ್ಷೆ ವಿಧಿಸಿ: ಓವೈಸಿ

    ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆದ್ರೆ ಜೈಲು ಶಿಕ್ಷೆ ವಿಧಿಸಿ: ಓವೈಸಿ

    ಹೈದರಾಬಾದ್: ಭಾರತೀಯ ಮುಸ್ಲಿಮರನ್ನು ಯಾರಾದ್ರು ಪಾಕಿಸ್ತಾನಿ ಅಂತ ಕರೆದ್ರೆ ಅವರನ್ನು ಜೈಲು ಶಿಕ್ಷೆಗೆ ಒಳಪಡಿಸಿ ಅಂತ ಅಖಿಲ ಭಾರತ ಮಜ್ಲಿಸ್ ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವ ವೇಳೆ ಮಾತನಾಡಿದ ಓವೈಸಿ, ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆಯುವವರನ್ನು ಶಿಕ್ಷೆಗೆ ಒಳಪಡಿಸಬೇಕು. ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಬೇಕು ಅಂತ ಹೇಳಿದ್ರು.

    ಅಂತಹ ಹೇಳಿಕೆ ನೀಡುವವರನ್ನು ಕೂಡಲೇ ಜೈಲಿಗಟ್ಟುವ ಕಾನೂನು ತರಬೇಕು. ಆದ್ರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂತಹ ಕಾನೂನು ತರುವುದಿಲ್ಲ. ಭಾರತದಲ್ಲಿರುವ ಮುಸ್ಲಿಮರು ಮೊಹಮ್ಮದ್ ಅಲಿ ಜಿನ್ನಾರವರ ಎರಡು ರಾಷ್ಟ್ರಗಳ ನೀತಿಯನ್ನು ತಿರಸ್ಕರಿಸಿದ್ದರು ಎಂದು ಹೇಳಿದ್ರು.

    ಇದೇ ವೇಳೆ ತ್ರಿವಳಿ ತಲಾಖ್ ಕುರಿತಂತೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರ ಮಹಿಳಾ ವಿರೋಧಿಯಾಗಿದೆ ಎಂದರು. ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿರುವ ಮಸೂದೆಯಿಂದ ತ್ವರಿತ ತ್ರಿವಳಿ ತಲಾಖ್ ಕಾನೂನು ಬಾಹಿರವಾಗುತ್ತದೆ. ಪತಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತಾದರೂ, ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

    ಫೆ 9 ಮತ್ತು 10ರಂದು ಹೈದರಾಬಾದ್ ನಲ್ಲಿರೋ ಓವೈಸಿ ಆಸ್ಪತ್ರೆಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್(ಎಐಎಂಪಿಎಲ್‍ಬಿ) ವತಿಯಿಂದ ಸಮಗ್ರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗಣ್ಯರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಮುಸ್ಲಿಂ ವೈಯಕ್ತಿಕ ಕಾನೂನು ಕಾಪಾಡಲು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ವರದಿಯಾಗಿದೆ.

  • ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

    ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

    ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಇಂದು ವರದಿಯಾಗಿದೆ. ಬಂಧಿತನನ್ನು ಅನ್ಸಾರ್ ಹುಸೇನ್ ಎಂದು ಗುರುತಿಸಲಾಗಿದೆ.

    ಲಾಹೋರ್‍ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಹಫೀಜಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲಪೂರ್ ಭಾತಿಯಾನ್ ಗ್ರಾಮದ ನಿವಾಸಿಯಾಗಿರುವ ಮನ್‍ಸಾಬ್ ಅಲಿ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಅನ್ಸಾರ್ ಹುಸೇನ್ ಕಳೆದ ನ.11ರಂದು ತಾನು ಸಾಕಿದ್ದ ಹೆಣ್ಣು ಕೋಳಿಯೊಂದನ್ನು ಅಪಹರಿಸಿ ಅದರ ಮೇಲೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

    ಅಲ್ಲದೇ ಆರೋಪಿ ಅನ್ಸಾರ್ ಹುಸೇನ್ ರೇಪ್ ಕೃತ್ಯದಿಂದಾಗಿ ಕೋಳಿ ಸತ್ತು ಹೋಗಿತ್ತು. ರೇಪ್ ಕೃತ್ಯವನ್ನು ನಸ್ರುಲ್ಲಾ ಮತ್ತು ತುಫೇಲ್ ಎಂಬವರು ನೋಡಿದ್ದರು. ಅಂತೆಯೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಅನ್ಸಾರ್ ಹುಸೇನ್ ನನ್ನು ಬಂಧಿಸಿದ್ದರು.

    ಇದನ್ನೂ ಓದಿ: ಡ್ರಾಪ್ ನೆಪದಲ್ಲಿ ಯುವತಿಯ ಅಪಹರಣಗೈದು ಗ್ಯಾಂಗ್ ರೇಪ್ ಮಾಡಿದ್ರು

    ಬಳಿಕ ಪೊಲಿಸರು ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ತಾನು ಕೋಳಿಯ ಮೇಲೆಸೆಗಿದ ಕೃತ್ಯ ನಿಜವೆಂದು ಒಪ್ಪಿಕೊಂಡಿದ್ದಾನೆ.

  • ಪಾಕ್ ಅಪ್ರಚೋದಿತ ದಾಳಿಗೆ 8ರ ಬಾಲಕಿ, ಯೋಧ ಬಲಿ

    ಪಾಕ್ ಅಪ್ರಚೋದಿತ ದಾಳಿಗೆ 8ರ ಬಾಲಕಿ, ಯೋಧ ಬಲಿ

    ಶ್ರೀನಗರ: ಪಾಕಿಸ್ತಾನದ ಪದೇ ಪದೇ ಭಾರತದ ಮೇಲೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಇಂದು ಬೆಳಗ್ಗೆ ನಡೆಸಿದ ದಾಳಿಯಲ್ಲಿ ಯೋಧ ಹಾಗೂ 8 ವರ್ಷದ ಬಾಲಕಿ ಬಲಿಯಾಗಿದ್ದಾರೆ.

    ಪಾಕಿಸ್ತಾನದ ಈ ಅಪ್ರಚೋದಿತ ಗುಂಡಿನ ದಾಳಿಗೆ ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಗೆ ಸೇರಿದ ಸೈನಿಕ ನಾಯಕ್ ಮುದ್ದಾಸರ್ ಅಹ್ಮದ್ ರಜೌರಿಯಲ್ಲಿ ಹುತಾತ್ಮರಾಗಿದ್ದಾರೆ. ಇನ್ನು ಪೂಂಚ್ ಜಿಲ್ಲೆಯಲ್ಲಿ ಬಾಲಕಿ ಸೈದಾ ಪಾಕಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾಳೆ. ಕದನ ವಿರಾಮ ಉಲ್ಲಂಘನೆಯಲ್ಲಿ ಇಬ್ಬರು ನಾಗರೀಕರು ಗಂಭೀರ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಇಬ್ಬರು ಮಕ್ಕಳ ತಂದೆಯಾಗಿರೋ 37 ವರ್ಷದ ರಜೌರಿ, ಒಬ್ಬ ಪ್ರಾಮಾಣಿಕ ಸೈನಿಕರಾಗಿದ್ದು, ತಮ್ಮ ಕೆಲಸವನ್ನು ತುಂಬಾನೇ ಪ್ರೀತಿಸುತ್ತಿದ್ದರು ಅಂತ ಸೇನೆ ತಿಳಿಸಿದೆ.

    ಇದೇ ಸಂದರ್ಭದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾರತೀಯ ಸೇನೆಯ ಡಿಜಿಎಂಒ ಎಕೆ ಭಟ್ `ಎಲ್ಲಾ ಅಪ್ರಚೋದಿತ ಗುಂಡಿನ ದಾಳಿಗಳನ್ನು ಪಾಕಿಸ್ತಾನವೇ ನಡೆಸುತ್ತದೆ. ಈ ದಾಳಿಯನ್ನು ಮಟ್ಟ ಹಾಕಲು ಭಾರತಕ್ಕೆ ಹಕ್ಕಿದೆ. ಆ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಭಾರತ ಉತ್ತರ ನೀಡುತ್ತದೆ’ ಎಂದು ಪಾಕಿಸ್ತಾನದ ಅಧಿಕಾರಿಗಳಿಗೆ ಹೇಳಿದ್ದಾರೆ.