Tag: Pakistani

  • ಪಾಕ್ ತರಬೇತಿ ವಿಮಾನ ಪತನ – ಐವರು ಸಿಬ್ಬಂದಿ ಸೇರಿ 17 ಮಂದಿ ಸಾವು

    ಪಾಕ್ ತರಬೇತಿ ವಿಮಾನ ಪತನ – ಐವರು ಸಿಬ್ಬಂದಿ ಸೇರಿ 17 ಮಂದಿ ಸಾವು

    ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ತರಬೇತಿ ವಿಮಾನ ಪತನಗೊಂಡು, ಐವರು ಸಿಬ್ಬಂದಿ ಸೇರಿದಂತೆ 17 ಮಂದಿ ಮೃತಪಟ್ಟ ಘಟನೆ ಇಂದು ರಾವಲ್ಪಿಂಡಿ ಬಳಿ ನಡೆದಿದೆ.

    ಲೆಫ್ಟಿನೆಂಟ್ ಕರ್ನಲ್ ಸಕೀಬ್, ಲೆಫ್ಟಿನೆಂಟ್ ಕರ್ನಲ್ ವಾಸಿಮ್, ನಾಯಬ್ ಸುಬೇದಾರ್ ಅಫ್ಜಲ್, ಹವಾಲ್ದಾರ್ ಅಮಿನ್ ಹಾಗೂ ಹವಾಲ್ದಾರ್ ರಹಮತ್ ಮೃತ ಸಿಬ್ಬಂದಿ. ಪ್ರತಿ ದಿನದಂತೆ ಇಂದು ಕೂಡ ತರಬೇತಿ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್ ವಿಮಾನ ಪತನಗೊಂಡು ಭಾರೀ ಪ್ರಮಾಣದ ಹಾನಿ ಉಂಟು ಮಾಡಿದೆ.

    ಸೇನಾ ವಲಯದ ಕೇಂದ್ರ ಕಚೇರಿಯಲ್ಲಿ ಇಂದು ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ಸಣ್ಣ ವಿಮಾನವೊಂದು ಪತನಗೊಂಡು ವಸತಿ ಪ್ರದೇಶದ ಮೇಲೆ ಬಿದ್ದಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಜೊತೆಗೆ ಸುತ್ತಮುತ್ತಲಿನ ಮನೆಗಳಿಗೂ ಬೆಂಕಿ ತಗುಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ.

    ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ 17 ಜನರ ಮೃತದೇಹಗಳು ಪತ್ತೆಯಾಗಿದ್ದು, ಅವುಗಳಲ್ಲಿ 5 ಮಿಲಿಟರಿ ಸಿಬ್ಬಂದಿ ಮತ್ತು 12 ನಾಗರಿಕರದ್ದಾಗಿದೆ. ಜೊತೆಗೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸುರಕ್ಷಣಾ ವಕ್ತಾರ ಫರೂಕ್ ಭಟ್ ಮಾಹಿತಿ ನೀಡಿದ್ದಾರೆ.

    ಇತ್ತೀಚೆಗಷ್ಟೇ ಪಾಕಿಸ್ತಾನದ ಸೇನಾ ವಕ್ತಾರ ಆಸಿಫ್ ಗಫೂರ್ ಅವರು ಭಾರತೀಯ ವಾಯುಪಡೆಯನ್ನು ದುರ್ಬಲ ಎಂದು ಬಿಂಬಿಸು ಉದ್ದೇಶದಿಂದ ನಕಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ, ಫೆಬ್ರವರಿ 26ರ ಬಾಲಾಕೋಟ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ವಾಯುಪಡೆಗಳ ನಡುವೆ ನಡೆದಿದ್ದ ‘ವಾಯು ಸಮರ’ದಲ್ಲಿ ಭಾರತ ವೈಫಲ್ಯ ಅನುಭವಿಸಿತ್ತು ಎಂದು ಬಿಂಬಿಸುವಂತೆ ಇತ್ತು.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಭಾರತದ ನೆಟ್ಟಿಗರು ಅದು ನಕಲಿ ಎಂದು ಪತ್ತೆ ಹಚ್ಚಿದ್ದರು. ಜೊತೆಗೆ ಆಸಿಫ್ ಗಫೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಕೆಲವರು ಗಫೂರ್ ಕಾಲೆಳೆದು ವ್ಯಂಗ್ಯವಾಡಿದ್ದರು. ನೆಟ್ಟಿಗರಿಂದ ನಗೆಪಾಟಲಿಗೆ ಗುರಿಯಾಗುತ್ತಿದ್ದಂತೆ ಆಸಿಫ್ ಗಫೂರ್ ಟ್ವೀಟ್ ಡಿಲಿಟ್ ಮಾಡಿದ್ದರು.

  • ಜಮ್ಮು-ಕಾಶ್ಮೀರದಲ್ಲಿ ಜೀವಂತ ಸೆರೆ ಸಿಕ್ಕ ಪಾಕಿಸ್ತಾನಿ ಉಗ್ರ

    ಜಮ್ಮು-ಕಾಶ್ಮೀರದಲ್ಲಿ ಜೀವಂತ ಸೆರೆ ಸಿಕ್ಕ ಪಾಕಿಸ್ತಾನಿ ಉಗ್ರ

    – 2017ರಲ್ಲಿ ಭಾರತದ ಪ್ರವೇಶಿಸಿದ್ದ

    ಶ್ರೀನಗರ: ಜಮ್ಮು-ಕಾಶ್ಮೀರದ ಭದ್ರತಾ ಪಡೆ ಪಾಕಿಸ್ತಾನದ ಉಗ್ರನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

    ಈ ಕುರಿತು ಮಾತನಾಡಿದ ಬಾರಾಮುಲ್ಲಾ ಎಸ್‍ಎಸ್‍ಪಿ ಅಬ್ದುಲ್ ಕಾಯೂಮ್, ಬಂಧಿತ ಪಾಕಿಸ್ತಾನದ ಉಗ್ರನ ಹೆಸರು ಮೊಹಮ್ಮದ್ ವಕಾರ್. ಬಂಧಿತ ಉಗ್ರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾವಾಲಿಯ ನಿವಾಸಿಯಾಗಿದ್ದು, 2017ರಲ್ಲಿ ಭಾರತದ ಗಡಿಯನ್ನು ಪ್ರವೇಶಿಸಿದ್ದ. ಕಳೆದ ಒಂದು ವರ್ಷದಿಂದ ಮೊಹಮ್ಮದ್ ವಕಾರ್ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು ಎಂದು ತಿಳಿಸಿದರು.

    ಒಂದು ವರ್ಷದಿಂದ ಶ್ರೀನಗರದಲ್ಲಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವಕಾರ್, ಬಾರಾಮುಲ್ಲಾ ಪ್ರದೇಶದ ಯುವಕರನ್ನು ಸಂಘಟನೆಯತ್ತ ಸೆಳೆಯುವ ಮೂಲಕ ಉಗ್ರವಾದ ಜೀವಂತವಾಗಿರುವಂತೆ ಪ್ರಯತ್ನಿಸುತ್ತಿದ್ದನು. ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವಕರು ಉಗ್ರ ಸಂಘಟನೆಗೆ ಸೇರಲು ಹಿಂದೇಟು ಹಾಕುತ್ತಿದ್ದರಿಂದ ವಕಾರ್ ಭಾರತ ಪ್ರವೇಶಿಸಿದ್ದ ಎಂದು ವರದಿಯಾಗಿದೆ.

    ಉಗ್ರ ಸಂಘಟನೆಯಲ್ಲಿ ಸೇರಲು ಸ್ಥಳೀಯ ಯುವಕರು ಹಿಂದೇಟು ಹಾಕುತ್ತಿದ್ದು, ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ದೇಶದ ರಕ್ಷಣೆಯ ವಿಷಯದಲ್ಲಿ ಸಂತೋಷದ ಸುದ್ದಿಯಾಗಿದೆ. 2018ರಲ್ಲಿ ಪೊಲೀಸರು 272 ಉಗ್ರರನ್ನು ಹೊಡೆದುರುಳಿಸಿದ್ದರು. ಹಾಗೆಯೇ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಸೆರೆ ಹಿಡಿಯಲಾಗಿತ್ತು ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್‍ಬಾಗ್ ಸಿಂಗ್ ತಿಳಿಸಿದ್ದಾರೆ.

  • ತ್ರಿವರ್ಣ ಧ್ವಜ ಹಿಡಿದು ಭಾರತದ ಗೆಲುವನ್ನು ಸಂಭ್ರಮಿಸಿದ ಪಾಕ್ ಬೆಡಗಿ: ವಿಡಿಯೋ ವೈರಲ್

    ತ್ರಿವರ್ಣ ಧ್ವಜ ಹಿಡಿದು ಭಾರತದ ಗೆಲುವನ್ನು ಸಂಭ್ರಮಿಸಿದ ಪಾಕ್ ಬೆಡಗಿ: ವಿಡಿಯೋ ವೈರಲ್

    ದುಬೈ: ಭಾನುವಾರದ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತದ ಗೆಲುವನ್ನು ಕಂಡು ಪಾಕ್‍ನ ಯುವತಿಯೊಬ್ಬಳು ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.

    ಕಪ್ಪು ಬುರ್ಖಾ ತೊಟ್ಟಿದ್ದ ಪಾಕ್ ಯುವತಿಯೊಬ್ಬಳು ರೋಹಿತ್ ಶರ್ಮ ತಂಡದ ಗೆಲುವನ್ನು ಕಂಡು ಭಾರತದ ಬಾವುಟವನ್ನು ಹಿಡಿದು ಹಾರಿಸಿದ್ದಾಳೆ. ಅಕ್ಕಪಕ್ಕದಲ್ಲಿ ಕುಳಿತ್ತಿದ್ದವರು ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದರೂ ಕ್ಯಾರೇ ಅನ್ನದೇ ಯುವತಿ ಭಾರತದ ಬಾವುಟವನ್ನು ಹರ್ಷದಿಂದ ಹಾರಿಸಿದ್ದಾಳೆ.

    ಪಾಕ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕರಾದ ಧವನ್ ಹಾಗೂ ರೋಹಿತ್ ಶರ್ಮಾ ಅತ್ಯುತ್ತಮ ಆರಂಭ ನೀಡಿದರು. ಪಂದ್ಯದ 5ನೇ ಓವರ್ ಶಹೇನ್ ಬೌಲಿಂಗ್ ನಲ್ಲಿ ಇಮಾಮ್ ರಿಂದ ಜೀವದಾನ ಪಡೆದ ರೋಹಿತ್ ಶರ್ಮಾ ವೃತ್ತಿ ಜೀವನದ 19ನೇ ಶತಕ ಪೂರೈಸಿದರು. ಪಾಕ್ ಬೌಲರ್ ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ ಟೀಂ ಇಂಡಿಯಾ ಪರ 210 ದಾಖಲೆ ರನ್ ಜೊತೆಯಾಟ ನೀಡಿತು. ಅಲ್ಲದೇ ಕೇವಲ 39.3 ಓವರ್ ಗಳಲ್ಲಿ 238 ರನ್ ಸಿಡಿಸಿ 9 ವಿಕೆಟ್ ಗಳ ಗೆಲುವಿನ ಸಿಹಿ ಪಡೆಯಿತು. ಇದನ್ನು ಓದಿ: ಇಂಡೋ ಪಾಕ್ ಕದನದಲ್ಲಿ ಭಾರತೀಯರ ಮನಗೆದ್ದ ಪಾಕ್ ಬೆಡಗಿ

    https://twitter.com/Pathan_007_/status/1043946817069756422

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಜವಾದ ಪಾಕಿಸ್ತಾನಿಗಳು ಬಿಜೆಪಿಗರೇ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

    ನಿಜವಾದ ಪಾಕಿಸ್ತಾನಿಗಳು ಬಿಜೆಪಿಗರೇ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

    ಕೊಪ್ಪಳ: ನಿಜವಾದ ಪಾಕಿಸ್ತಾನಿಗಳು ಬಿಜೆಪಿಯವರು. ನಾವುಗಳ ನಿಜವಾದ ಭಾರತೀಯರು ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ವೇಳೆ ಬಿಜೆಪಿಯನ್ನು ಹರಿಹಾಯ್ದಿರುವ ಅನ್ಸಾರಿ, ಭಾರತದಲ್ಲಿ ನಿಜವಾದ ದೇಶದ್ರೋಹಿಗಳು ಹಿಂದೂಗಳೂ ಅಲ್ಲ, ಮುಸ್ಲಿಮರೂ ಅಲ್ಲ. ಬಿಜೆಪಿಯವರ ದೇಶದ್ರೋಹಿಗಳು. ಅವರು ಪಾಕಿಸ್ತಾನಿಗಳು. ನಾವು ನಿಜವಾದ ಭಾರತೀಯರು. ಭಾರತಕ್ಕಾಗಿ ನಾವು ತಲೆ ತಗ್ಗಿಸುವುದಕ್ಕೂ ಸಿದ್ಧ. ರುಂಡ ಕತ್ತರಿಸಲು ಸಿದ್ಧರಿದ್ದೇವೆ. ಆದರೆ ಕೆಲವು ಬಿಜೆಪಿ ನಾಯಕರು, ನನ್ನನ್ನು ಗೆಲ್ಲಿಸಿದರೆ ಗಂಗಾವತಿಯನ್ನು ಪಾಕಿಸ್ತಾನ ಮಾಡುತ್ತಾನೆಂದು ಟೀಕಿಸುತ್ತಾರೆ. ನನಗೇನು ಬೇರೆ ಕೆಲಸವಿಲ್ಲವೇನು? ಅವರಿಗೆ ಮಾನ ಮರ್ಯಾದೆ ಇದ್ದರೆ ಅವರೇ ಪಾಕಿಸ್ತಾನಕ್ಕೆ ಹೋಗಲಿ ಎನ್ನುವ ಮೂಲಕ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಇದನ್ನೂ ಓದಿ: ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಗೂಂಡಾಗಿರಿ – ಆ ನನ್ಮಗನಿಗೆ ಒದಿರಲೇ ಎಂದ ಕೈ ಮಾಜಿ ಶಾಸಕ

    ಇದೇ ವೇಳೆ ಶಾಸಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಗ್ಗೆ ಏಕವಚನದಲ್ಲೇ ಮಾತನಾಡಿದ ಅವರು, ಪರಣ್ಣ ಈಶ್ವರಪ್ಪ ಮುನವಳ್ಳಿ ಬೆಳಗ್ಗೆ 5 ಗಂಟೆಯಿಂದಲೇ ಲಂಚ ತೆಗೆದುಕೊಳ್ಳುತ್ತಾನೆ. ಇಂತಹವರನ್ನು ನಮ್ಮ ಗಂಗಾವತಿ ಜನ ಗೆಲ್ಲಿಸುತ್ತಿದ್ದಾರೆ. ಪರಿಹಾರ ಹಣದಲ್ಲೂ ಪರ್ಸೆಂಟೇಜ್ ತೆಗೆದುಕೊಳ್ತಾನೆ. ಜನರಿಗೆ ಖೋಟಾ ನೋಟು ಕೊಟ್ಟು ವೋಟ್ ಹಾಕಿಸಿಕೊಂಡಿದ್ದಾನೆ. ಖೋಟಾ ನೋಟು ದಂಧೆಯಲ್ಲಿ ಸ್ವತಃ ಶಾಸಕನೇ ಭಾಗಿಯಾಗಿದ್ದಾನೆ. ಅವನನ್ನು ಎಸ್ಪಿ ಮಹಾಶಯ ಡಾ.ಅನೂಪ್ ಶೆಟ್ಟಿ ಬಚಾವ್ ಮಾಡುತ್ತಿದ್ದಾನೆ. ಎಸ್ಪಿ ಆರ್‍ಎಸ್‍ಎಸ್ ನವನು ಆಗಿದ್ದಾನೆ. ಅವನು ಸಂಬಂಧಪಡದವರನ್ನು ಒಳಗೆ ಹಾಕಿದ್ದಾನೆ ಅಷ್ಟೇ. ಇಂಥ ಪೊಲೀಸ್ ಗಿರಿ ಮಾಡುವ ಪೊಲೀಸರಿಗೆ ನಾನು ಹೆದರುವುದಿಲ್ಲ. ಮೊದಲು ಶಾಸಕ ಪರಣ್ಣನನ್ನು ಮತ್ತು ಆ ಎಸ್ಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೇ ಆತನ ಹಿಂಬಾಲಕರನ್ನು ವಿಚಾರಣೆಗೆ ಒಳಪಡಿಸಬೇಕು. ಆವಾಗ ಸತ್ಯ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಎಲ್ ರಾಹುಲ್‍ಗೆ ಪಾಕ್ ಮಹಿಳಾ ಆ್ಯಂಕರ್ ಕ್ಲೀನ್ ಬೌಲ್ಡ್!

    ಕೆಎಲ್ ರಾಹುಲ್‍ಗೆ ಪಾಕ್ ಮಹಿಳಾ ಆ್ಯಂಕರ್ ಕ್ಲೀನ್ ಬೌಲ್ಡ್!

    ಜೈಪುರ: ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ ಕನ್ನಡಿಗ ಕೆಎಲ್ ರಾಹುಲ್ ಆಟಕ್ಕೆ ಪಾಕ್ ಮೂಲದ ನಿರೂಪಕಿ ಕ್ಲೀನ್ ಬೌಲ್ಡ್ ಆಗಿದ್ದು, ಟ್ವಿಟ್ಟರ್ ನಲ್ಲಿ ವಿಶೇಷ ಸಂದೇಶ ಕಳುಹಿಸಿದ್ದಾರೆ.

    ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 95 ರನ್ ಗಳಿಸಿದ್ದ ಬಳಿಕ ಆರೆಂಜ್ ಕ್ಯಾಪ್ ಪಡೆದಿದ್ದು, ಈ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವೇಳೆಯೇ ರಾಹುಲ್ ಬ್ಯಾಟಿಂಗ್ ಗೆ ಪ್ರಶಂಸೆ ವ್ಯಕ್ತಪಡಿಸಿರುವ ಪಾಕ್ ನಿರೂಪಕಿ ಝೈನಭ್ ಅಬ್ಬಾಸ್, ಕೆಎಲ್ ರಾಹುಲ್ ಪ್ರಭಾವಶಾಲಿ, ಅತ್ಯುತ್ತಮ ಟೈಮಿಂಗ್ ಹೊಂದಿದ್ದು ಬ್ಯಾಟಿಂಗ್ ಶೈಲಿ ನನಗಿಷ್ಟ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಟೂರ್ನಿಯಲ್ಲಿ ಇದುವರೆಗೂ ಒಟ್ಟಾರೆ 10 ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್ 58.88 ರ ಸರಾಸರಿಯಲ್ಲಿ 471 ರನ್ ಗಳಿಸಿದ್ದಾರೆ. ಅತೀ ಹೆಚ್ಚು ರನ್  ಗಳಿಸಿದ ಪಟ್ಟಿಯ ನಂತರದ ಸ್ಥಾನದಲ್ಲಿ 423 ರನ್ ಗಳೊಂದಿಗೆ ಅಂಬಟಿ ರಾಯುಡು 2ನೇ ಸ್ಥಾನಕ್ಕೆ ಪಡೆದಿದ್ದಾರೆ.

    ಮೇ 6 ರಂದು ನಡೆದ ರಾಜಸ್ಥಾನದ ವಿರುದ್ಧ ಪಂದ್ಯದಲ್ಲೂ ರಾಹುಲ್ ಕೇವಲ 54 ಎಸೆತಗಳಲ್ಲಿ 84 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು. ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ರಾಹುಲ್ ಪಂಜಾಬ್ ತಂಡದ ಕೀ ಬ್ಯಾಟ್ಸ್ ಮನ್ ಆಗಿದ್ದು, ಪ್ರತಿ ಪಂದ್ಯದಲ್ಲೂ ತಂಡದ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ. ಟೂರ್ನಿಯ ಆರಂಭದ ಡೆಲ್ಲಿ ವಿರುದ್ಧ ಏಪ್ರಿಲ್ 8 ರಂದು ನಡೆದ ಪಂದ್ಯದಲ್ಲಿ ಕೇವಲ 14 ಎಸೆಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದರು.

    https://www.instagram.com/p/BiAZygxlFyz/?taken-by=zabbasofficial

    https://www.instagram.com/p/BhHSya2lHnV/?taken-by=zabbasofficial