Tag: Pakistani Spy

  • ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

    ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

    ಜೈಪುರ: ಪಾಕಿಸ್ತಾನದ ಐಎಸ್‌ಐ (Pakistan ISI) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನದ ಸರ್ಕಾರಿ ನೌಕರನನ್ನ (Rajasthan Government Employee) ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ.

    ಬಂಧಿತ ಸರ್ಕಾರಿ ನೌಕರನನ್ನ ಶಕುರ್ ಖಾನ್ ಮಂಗನಿಯಾರ್ ಎಂದು ಗುರುತಿಸಲಾಗಿದೆ. ಜೈಸಲ್ಮೈರ್‌ನಲ್ಲಿರುವ ಕಚೇರಿಯಲ್ಲೇ ಸಿಐಡಿ ಮತ್ತು ಗುಪ್ತಚರ ಸಂಸ್ಥೆಗಳ (Intelligence Department)ತಂಡವು ಜಂಟಿಯಾಗಿ ಬಂಧಿಸಿವೆ. ಇದನ್ನೂ ಓದಿ: ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

    ರಾಜಸ್ಥಾನದಲ್ಲಿ (Rajasthan) ಸರ್ಕಾರಿ ನೌಕರನಾಗಿದ್ದ ಶಕುರ್ ಖಾನ್ ಗಡಿ ಪ್ರದೇಶದ ಬರೋಡಾ ಗ್ರಾಮದವನು. ಈತನ ಮೇಲೆ ಬಹಳ ದಿನಗಳಿಂದ ನಿಗಾ ಇಡಲಾಗಿತ್ತು ಎನ್ನಲಾಗಿದೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎರಡೂ ತನಿಖಾ ತಂಡಗಳು ಜಂಟಿಯಾಗಿಯೇ ವಿಚಾರಣೆ ನಡೆಸಲಿವೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನೊಂದಿಗೆ (Pakistani High Commission) ಸಂಪರ್ಕದಲ್ಲಿದ್ದ ಅನ್ನೋದು ಪತ್ತೆಯಾಗಿದೆ. ಇದನ್ನೂ ಓದಿ: ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

    ಅಲ್ಲದೇ ಪಾಕಿಸ್ತಾನಕ್ಕೆ ಸಂಬಂಧಿಸಿದ ಹಲವಾರು ಫೋನ್ ಸಂಖ್ಯೆಗಳು (+92 ರಿಂದ ಪ್ರಾರಂಭವಾಗುವ ಮೊಬೈಲ್ ಸಂಖ್ಯೆಗಳು) ಇತನ ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಜೊತೆಗೆ ಕಳೆದ ಕೆಲ ವರ್ಷಗಳಲ್ಲಿ 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಶಕುರ್‌ ಖಾನ್‌ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ರೇಪಿಸ್ಟ್, ಕೊಲೆಗಾರರ ವಿರುದ್ಧ ‘ಆಪರೇಷನ್ ಲಂಗ್ಡಾ’ – 11 ಕ್ರಿಮಿನಲ್ಸ್ ಕಾಲಿಗೆ ಗುಂಡೇಟು

    ಪ್ರಮುಖ ಫೈಲ್‌ಗಳೇ ಡಿಲೀಟ್‌
    ಇನ್ನೂ ಶಕುರ್‌ ಖಾನ್‌ ಗುಪ್ತಚರ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಂತೆ ಮೊಬೈಲ್‌ ಮತ್ತು ಡಿಲಿಟಲ್‌ ಡಿವೈಸ್‌ಗಳಲ್ಲಿದ್ದ ಹಲವಾರು ಪ್ರಮುಖ ಫೈಲ್‌ಗಳನ್ನ ಡಿಲೀಟ್‌ ಮಾಡಲಾಗಿದೆ. ಹೀಗಾಗಿ ಸಧ್ಯಕ್ಕೆ ಆತನ ಮೊಬೈಲ್‌ನಿಂದ ಯಾವುದೇ ಸೂಕ್ಷ್ಮ ಮಾಹಿತಿಗಳು ರವಾನೆಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಹೊರತುಪಡಿಸಿ ಆತನ ಬ್ಯಾಂಕ್‌ ಖಾತೆ ಮೇಲೂ ನಿಗಾ ವಹಿಸಲಾಗಿದೆ.

    ಸದ್ಯ ಯೂಟ್ಯೂಬರ್‌ ಜ್ಯೋತಿಒ ಮಲ್ಹೋತ್ರಾ ಸೇರಿದಂತೆ ಕಳೆದ ಎರಡು ವಾರಗಳಲ್ಲಿ ಒಟ್ಟು ಬಂಧಿತ ಪಾಕಿಸ್ತಾನಿ ಸ್ಪೈಗಳ ಸಂಖ್ಯೆ 16 ದಾಟಿದೆ. ಇದನ್ನೂ ಓದಿ: ರೈತರಿಗೆ ಗುಡ್‌ನ್ಯೂಸ್ – ಕಿಸಾನ್ ಕ್ರೆಡಿಟ್‌ಕಾರ್ಡ್ ಸಾಲದ ಬಡ್ಡಿ ರಿಯಾಯಿತಿ ಮುಂದುವರಿಕೆ

  • ಸೂಕ್ಷ್ಮ ಮಾಹಿತಿ ಸೋರಿಕೆ – 600 ಪಾಕಿಸ್ತಾನಿಯರ ಸಂಪರ್ಕದಲ್ಲಿದ್ದ ಬೇಹುಗಾರ ವಾರಣಾಸಿಯಲ್ಲಿ ಅರೆಸ್ಟ್‌

    ಸೂಕ್ಷ್ಮ ಮಾಹಿತಿ ಸೋರಿಕೆ – 600 ಪಾಕಿಸ್ತಾನಿಯರ ಸಂಪರ್ಕದಲ್ಲಿದ್ದ ಬೇಹುಗಾರ ವಾರಣಾಸಿಯಲ್ಲಿ ಅರೆಸ್ಟ್‌

    – ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ವಾಟ್ಸಪ್‌ ಗ್ರೂಪಲ್ಲಿ ಪ್ರಚೋದನೆ
    – ಜ್ಞಾನವಾಪಿ ಮಸೀದಿ, ಕೆಂಪು ಕೋಟೆ ಫೋಟೋ ಪಾಕ್‌ಗೆ ರವಾನೆ

    ಲಕ್ನೋ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವಾರಣಾಸಿಯ (Varanasi) ವ್ಯಕ್ತಿಯೊಬ್ಬನನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (UP ATS) ಬಂಧಿಸಿದೆ. ಇದರೊಂದಿಗೆ ದೇಶದ ವಿವಿಧೆಡೆ ಬಂಧಿತ ಪಾಕ್‌ ಬೇಹುಗಾರರ (Spy) ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

    ತುಫೈಲ್ ಬಂಧಿತ ಆರೋಪಿ. ಪಾಕ್‌ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ತುಫೈಲ್‌ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ರಾಜ್‌ಘಾಟ್, ನಮೋ ಘಾಟ್, ಜ್ಞಾನವಾಪಿ ಮಸೀದಿ, ರೈಲ್ವೆ ನಿಲ್ದಾಣ ಮತ್ತು ಕೆಂಪು ಕೋಟೆ (Red Fort) ಸೇರಿದಂತೆ ಆಯಕಟ್ಟಿನ ಸ್ಥಳಗಳ ಫೋಟೋ ಮತ್ತು ಮಾಹಿತಿಯನ್ನ ಹಂಚಿಕೊಂಡಿದ್ದಾನೆ ಅನ್ನೋದು ತನಿಖೆ ಸಮಯದಲ್ಲಿ ಗೊತ್ತಾಗಿದೆ.

    ಅಲ್ಲದೇ ಕೆಲವು ಸ್ಥಳೀಯರನ್ನು ಪಾಕಿಸ್ತಾನಿಯರೊಟ್ಟಿಗೆ ಸಂಪರ್ಕಿಸುವ ವಾಟ್ಸಪ್‌ ಗ್ರೂಪ್‌ಗಳಲ್ಲಿ ತುಫೈಲ್‌ ಸಕ್ರೀಯವಾಗಿದ್ದ. ಅಲ್ಲಿ ತೆಹ್ರೀಕ್-ಇ-ಲಬ್ಬೈಕ್ ಉಗ್ರ ಸಂಘಟನೆಯ ನಾಯಕ ಮೌಲಾನಾ ಸಾದ್ ರಿಜ್ವಿಯ ಉಪನ್ಯಾಸ ವಿಡಿಯೋಗಳನ್ನ ಹಂಚಿಕೊಳ್ಳುತ್ತಿದ್ದ. ಬಾಬರಿ ಮಸೀದಿ (Babri Masjid) ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ಮತ್ತು ಶರಿಯಾ ಕಾನೂನು ಹೇರಿಕೆಯನ್ನು ಉತ್ತೇಜಿಸುವ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದ ಅನ್ನೋದು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ನಫೀಸಾ ಎಂಬ ಪಾಕಿಸ್ತಾನಿ ಮಹಿಳೆಯ ಸಂಪರ್ಕದಲ್ಲೂ ತುಫೈಲ್‌ ಇದ್ದ. ಆಕೆಯ ಪತಿ ಪಾಕಿಸ್ತಾನಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ತುಫೈಲ್‌ 600 ಪಾಕಿಸ್ತಾನಿಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾ ದಳದ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

  • 3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

    3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

    – ಪಹಲ್ಗಾಮ್‌ ದಾಳಿಯಲ್ಲಿ ಭದ್ರತಾ ಪಡೆಗಳದ್ದೇ ವೈಫಲ್ಯ ಅಂದಿದ್ದ ಜ್ಯೋತಿ ಮಲ್ಹೋತ್ರಾಳ ವಿಡಿಯೋ ಲಭ್ಯ

    ನವದೆಹಲಿ: ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಕಿವಿಯಲ್ಲಿ ದೇಶದ ಗುಟ್ಟು ಪಿಸುಗುಡುತ್ತಿರುವ ಬೇಹುಗಾರರ (Pakistani Spy) ಬಂಧನ ಸಂಖ್ಯೆ 11ಕ್ಕೆ ಏರಿದೆ.

    ಎನ್‌ಐಎ, ಹರಿಯಾಣ, ಪಂಜಾಬ್ ಪೊಲೀಸರು (Punjab Police) ಒಟ್ಟು 8 ಜನರನ್ನು ಬಂಧಿಸಿದ್ರು.. ಈ ಬೆನ್ನಲ್ಲೇ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಶೆಹಜಾದ್ ಎಂಬಾತನನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.

    ಈತ ಭಾರತದಲ್ಲಿರುವ ಪಾಕ್ ಏಜೆಂಟ್‌ಗಳಿಗೆ ಹಣ ರವಾನಿಸುತ್ತಿದ್ದ.. ಭಾರತದ ಸಿಮ್ ಕೊಡಿಸಲು ಸಹಕಾರ ನೀಡ್ತಿದ್ದ ಎನ್ನಲಾಗಿದೆ. ಇತ್ತ ಪಾಕಿಸ್ತಾನ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ ತಾರೀಫ್ ಎಂಬಾತನನ್ನು ಹರಿಯಾಣದ ನುಹ್‌ನಲ್ಲಿ ಬಂಧಿಸಲಾಗಿದೆ. ಈತ ವಾಟ್ಸಪ್‌ ಮೂಲಕ ಭಾರತೀಯ ಮಿಲಿಟರಿ ಚಟುವಟಿಕೆಯ ಗೌಪ್ಯ ಮಾಹಿತಿಯನ್ನು ಪಾಕ್ ಹೈಕಮಿಷನ್ ಏಜೆಂಟ್‌ಗಳಿಗೆ ರವಾನಿಸುತ್ತಿದ್ದಿದ್ದು ಬಯಲಾಗಿದೆ.

    ಇನ್ನೂ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಇನ್‌ಸ್ಟಾಗ್ರಾಮ್‌ ಖಾತೆಯನ್ನ ನಿರ್ಬಂಧಿಸಲಾಗಿದೆ. ಈ ಬೆನ್ನಲ್ಲೇ ಆಕೆಯ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪಹಲ್ಗಾಮ್ ದಾಳಿಯಲ್ಲಿ ನಮ್ಮ ಭದ್ರತಾ ವೈಫಲ್ಯ ಇದೆ… ನಮ್ಮ ಸರ್ಕಾರದ್ದೇ ತಪ್ಪು ಎಂದಿದ್ದ ಜ್ಯೋತಿ ವಿಡಿಯೋ ಸಹ ಸಿಕ್ಕಿದೆ. ಪಹಲ್ಗಾಮ್ ಉಗ್ರದಾಳಿಯಲ್ಲಿ ಪಾಕ್‌ನ ಇಬ್ಬರು ಸೇನಾ ಕಮಾಂಡರ್‌ಗಳು ಶಾಮೀಲಾಗಿದ್ದರು ಅಂತ ತಿಳಿದು ಬಂದಿದೆ.

    ಈ ಮಧ್ಯೆ, ಹೈದ್ರಾಬಾದ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದ ಇಬ್ಬರು ಭಯೋತ್ಪಾದಕರನ್ನು ತೆಲಂಗಾಣ, ಆಂಧ್ರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಎಂಬವರನ್ನ ಬಂಧಿಸಿದ್ದಾರೆ.