Tag: Pakistani soldiers

  • ಆತ್ಮಾಹುತಿ ದಾಳಿಯಲ್ಲಿ ಪಾಕಿಸ್ತಾನದ 7 ಸೈನಿಕರ ಸಾವು – ಆಫ್ಘನ್ ಗಡಿಯ ಉತ್ತರ ವಜೀರಿಸ್ತಾನದಲ್ಲಿ ದಾಳಿ

    ಆತ್ಮಾಹುತಿ ದಾಳಿಯಲ್ಲಿ ಪಾಕಿಸ್ತಾನದ 7 ಸೈನಿಕರ ಸಾವು – ಆಫ್ಘನ್ ಗಡಿಯ ಉತ್ತರ ವಜೀರಿಸ್ತಾನದಲ್ಲಿ ದಾಳಿ

    ಇಸ್ಲಾಮಾಬಾದ್: ಅಫ್ಘಾನ್‌ ಗಡಿ ಬಳಿಯ ಉತ್ತರ ವಜೀರಿಸ್ತಾನದ ಮಿರ್‌ ಅಲಿಯಲ್ಲಿರುವ ಭದ್ರತಾ ಪಡೆಗಳ ಶಿಬಿರದ ಮೇಲೆ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 7 ಮಂದಿ ಪಾಕಿಸ್ತಾನಿ ಸೈನಿಕರು (Pakistani Soldiers) ಸಾವನ್ನಪ್ಪಿದ್ದಾರೆ.

    ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ಗೆ ಸಂಬಂಧಿಸಿದ ಆತ್ಮಹತ್ಯಾ ಕಾರ್ ಬಾಂಬರ್, ಮಿರ್ ಅಲಿಯಲ್ಲಿರುವ ಭದ್ರತಾ ಪಡೆಗಳ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೃಹತ್ ಸ್ಫೋಟವು ಹತ್ತಿರದ ಮನೆಗಳಿಗೆ ಹಾನಿಯನ್ನುಂಟು ಮಾಡಿದೆ. ಇದನ್ನೂ ಓದಿ: ಕೆನಡಾದಲ್ಲಿ ನಟ ಕಪಿಲ್ ಶರ್ಮಾ ಕೆಫೆ ಮೇಲೆ 3ನೇ ಬಾರಿ ಗುಂಡಿನ ದಾಳಿ

    ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವು ದೋಹಾದಲ್ಲಿ ಶಾಂತಿ ಮಾತುಕತೆ ನಡೆಸಲು ಕೆಲವೇ ಗಂಟೆಗಳ ಮೊದಲು ಈ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೊತ್ತುಕೊಂಡಿದೆ. ಅದರ ಖಾಲಿದ್ ಬಿನ್ ವಲೀದ್ ಆತ್ಮಹತ್ಯಾ ಘಟಕ ಮತ್ತು ತೆಹ್ರೀಕ್ ತಾಲಿಬಾನ್ ಗುಲ್ಬಹಾದಾರ್ ಈ ದಾಳಿಗಳನ್ನು ನಡೆಸಿವೆ ಎಂದು ಹೇಳಿದೆ.

    ಒಂದು ವಾರದ ತೀವ್ರ ಗಡಿ ಹೋರಾಟದ ನಂತರ ಡುರಾಂಡ್ ರೇಖೆಯಲ್ಲಿ ನಡೆದ ಕದನ ವಿರಾಮದ ಸಮಯದಲ್ಲಿ ಈ ದಾಳಿ ನಡೆದಿದೆ. ಇದರಲ್ಲಿ ಎರಡೂ ಕಡೆಗಳಲ್ಲಿ ಹತ್ತಾರು ಜನರು ಸಾವನ್ನಪ್ಪಿದರು. ಅಫ್ಘಾನ್ ತಾಲಿಬಾನ್ ಕೋರಿಕೆಯ ಮೇರೆಗೆ ಕದನ ವಿರಾಮವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ – 2 ಗಂಟೆಗೂ ಅಧಿಕ ಕಾಲ ಪುಟಿನ್ ಜೊತೆ ಟ್ರಂಪ್ ಮಾತು

    ಮಿರ್ ಅಲಿಯಲ್ಲಿ ಭದ್ರತಾ ಪಡೆಗಳ ಮೇಲೆ ಖವಾರಿಜ್ ಒಬ್ಬ ಆತ್ಮಹತ್ಯಾ ದಾಳಿ ನಡೆಸಲು ಪ್ರಯತ್ನಿಸಿದ. ಒಬ್ಬ ಖರ್ಜಿ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಭದ್ರತಾ ಶಿಬಿರದ ಗೋಡೆಗೆ ಡಿಕ್ಕಿ ಹೊಡೆದ. ನಂತರ ಇನ್ನೂ ಮೂವರು ಖವಾರಿಜ್‌ಗಳು ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು. ಉತ್ತರ ವಜೀರಿಸ್ತಾನದಲ್ಲಿ ಇತ್ತೀಚಿಗೆ ನಡೆದ ಅತ್ಯಂತ ಗಂಭೀರವಾದ ಉಗ್ರಗಾಮಿ ದಾಳಿಗಳಲ್ಲಿ ಇದು ಕೂಡ ಒಂದು ಎನ್ನಲಾಗಿದೆ.

  • ಪಾಕ್‌ನ 14 ಸೈನಿಕರ ಹತ್ಯೆ – ಪೂರ್ತಿ ವೀಡಿಯೋ ರಿಲೀಸ್‌ ಮಾಡಿದ ಬಲೂಚಿಸ್ತಾನ

    ಪಾಕ್‌ನ 14 ಸೈನಿಕರ ಹತ್ಯೆ – ಪೂರ್ತಿ ವೀಡಿಯೋ ರಿಲೀಸ್‌ ಮಾಡಿದ ಬಲೂಚಿಸ್ತಾನ

    ಇಸ್ಲಾಮಾಬಾದ್: ಪಂಜ್‌ಗುರ್‌ನಲ್ಲಿ 14 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೊಂಡಿದ್ದು, ಮೇ 9 ರ ದಾಳಿಯ ಪೂರ್ತಿ ವೀಡಿಯೊ ಬಿಡುಗಡೆ ಮಾಡಿದೆ.

    ‘ಆಪರೇಷನ್ ಹೆರೋಫ್’ ಕಾರ್ಯಾಚರಣೆ ನಡೆಸಿದ ಬಲೂಚಿಸ್ತಾನ, ಪಾಕಿಸ್ತಾನ ಸೇನೆಯ 14 ಸೈನಿಕರನ್ನು ಹತ್ಯೆ ಮಾಡಿತ್ತು. ಮೇ 9 ರಂದು ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಗುಂಡು ನಿರೋಧಕ ವಾಹನ ನಾಶವಾಯಿತು. ಒಳಗಿದ್ದ ಎಲ್ಲಾ 14 ಸೈನಿಕರು ಸಾವನ್ನಪ್ಪಿದರು. ಪಂಜ್‌ಗುರ್ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ಈ ದಾಳಿ ನಡೆದಿದೆ. ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲಿನ ದಾಳಿಯ ವೀಡಿಯೊವನ್ನು ಬಿಎಲ್‌ಎ ಬುಧವಾರ ಬಿಡುಗಡೆ ಮಾಡಿದೆ. ಇದನ್ನು ನಾವೇ ಮಾಡಿರುವುದಾಗಿ ದೃಢಪಡಿಸಿದೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಏಟಿಗೆ ಪಾಕಿಸ್ತಾನ ಬಾಲ ಮುದುರಿದ ನಾಯಿಯಂತೆ ಓಡಿದೆ: ಪೆಂಟಗನ್‌ ಮಾಜಿ ಅಧಿಕಾರಿ ವ್ಯಂಗ್ಯ

    ಬಲೂಚ್ ಲಿಬರೇಶನ್ ಆರ್ಮಿಯ ವಕ್ತಾರ ಜೀಯಂಡ್ ಬಲೂಚ್ ಪತ್ರಿಕಾ ಪ್ರಕಟಣೆಯಲ್ಲಿ, ಬಿಎಲ್‌ಎ ಸ್ವಾತಂತ್ರ್ಯ ಹೋರಾಟಗಾರರು ಕ್ವೆಟ್ಟಾ ಮತ್ತು ಮಸ್ತುಂಗ್‌ನಲ್ಲಿ ಪಾಕಿಸ್ತಾನಿ ಸೈನ್ಯ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಪಾಕ್‌ ಸರ್ಕಾರ ಮತ್ತು ಆಕ್ರಮಿತ ರಾಜ್ಯದ ಆಶ್ರಯದಲ್ಲಿ ಅದರ ಆಚರಣೆಯನ್ನು ಬಿಎಲ್ಎ ಗುರಿಯಾಗಿಸಿಕೊಂಡಿದೆ. ಬಲೂಚ್ ವಿಮೋಚನಾ ಚಳುವಳಿಯು ಸಾರ್ವಜನಿಕ ಬೆಂಬಲದೊಂದಿಗೆ ಬಲವಾದ ರೂಪವನ್ನು ಪಡೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – ಮೂವರು ಜೈಶ್‌ ಉಗ್ರರು ಮಟಾಶ್‌

  • ‘ಆಪರೇಷನ್‌ ಸಿಂಧೂರ’ಗೆ ಪಾಕ್‌ ವಾಯುಪಡೆ ಮುಖ್ಯ ತಂತ್ರಜ್ಞ ಸೇರಿ 11 ಸೈನಿಕರು ಸಾವು

    ‘ಆಪರೇಷನ್‌ ಸಿಂಧೂರ’ಗೆ ಪಾಕ್‌ ವಾಯುಪಡೆ ಮುಖ್ಯ ತಂತ್ರಜ್ಞ ಸೇರಿ 11 ಸೈನಿಕರು ಸಾವು

    ಇಸ್ಲಾಮಾಬಾದ್: ಭಾರತದ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಗೆ ಪಾಕ್‌ ತತ್ತರಿಸಿ ಹೋಗಿದೆ. ಪಾಕಿಸ್ತಾನದ (Pakistan Soldiers) 11 ಸೈನಿಕರು ಸೇರಿದಂತೆ 40 ನಾಗರಿಕರು ಬಲಿಯಾಗಿದ್ದಾರೆ.

    ಏ.22 ರಿಂದ ಮೇ 10ರ ವರೆಗೆ ಪಾಕಿಸ್ತಾನ ಮಾರ್ಕಾ-ಎ-ಹಕ್‌ (ಸತ್ಯ ಕದನ) ನಡೆಸಿದೆ ಎಂದು ಪಾಕ್‌ ಸೇನೆಯು ಹೇಳಿಕೊಂಡಿದೆ. ಪಾಕಿಸ್ತಾನದ ಇಂಟರ್‌-ಸರ್ವೀಸಸ್‌ ಪಬ್ಲಿಕ್‌ ರಿಲೇಶನ್ಸ್‌ (ಐಎಸ್ಪಿಆರ್‌) 11 ಮಂದಿ ಪೈಕಿ, 6 ಸಿಬ್ಬಂದಿ ಸೇನೆ ಮತ್ತು 5 ಸಿಬ್ಬಂದಿ ವಾಯುಪಡೆಗೆ ಸೇರಿದವರು ಎಂದು ಪಾಕ್‌ ತಿಳಿಸಿದೆ. ಇದನ್ನೂ ಓದಿ: Photo Gallery: ‘ಆಪರೇಷನ್‌ ಸಿಂಧೂರ’ ವೀರರನ್ನು ಭೇಟಿಯಾದ ಪಿಎಂ ಮೋದಿ

    ಪಾಕಿಸ್ತಾನವು 36 ಸ್ಥಳಗಳಲ್ಲಿ ಭಾರತೀಯ ವಾಯುಪ್ರದೇಶವನ್ನು ಒಳನುಸುಳಲು ಪ್ರಯತ್ನಿಸಿದಾಗ ಭಾರತವು ಒಂದು ಎಫ್ -16 ಮತ್ತು ಎರಡು ಜೆಎಫ್ -17 ಫೈಟರ್ ಜೆಟ್‌ಗಳನ್ನು ಮೇ 8-9ರ ಮಧ್ಯಂತರದಲ್ಲಿ ಹೊಡೆದುರುಳಿಸಿದೆ ಎಂದು ಮೂಲಗಳು ಹೇಳಿಕೊಂಡಿವೆ.

    ಮೇ 7 ರಿಂದ 10 ರ ನಡುವೆ ಪಾಕಿಸ್ತಾನದ ಸೇನೆಯ ಕನಿಷ್ಠ 35 ರಿಂದ 40 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆಯು ಹೇಳಿದೆ. ಉಭಯ ದೇಶಗಳ ಸಂಘರ್ಷದಲ್ಲಿ ಭಾರತದ ಐವರು ಯೋಧರು ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಮೂವರು ಉಗ್ರರು ಮಟಾಶ್‌

    ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರರ ನೆಲೆಗಳನ್ನು ಭಾರತ ಉಡೀಸ್‌ ಮಾಡಿತು. ಭಾರತದ ದಾಳಿಗೆ 100 ಉಗ್ರರು ಹತರಾಗಿದ್ದಾರೆ.

  • ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

    ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

    – ಫೋಟೊ, ವೀಡಿಯೋ ಸಾಕ್ಷಿ ಮುಂದಿಟ್ಟು ಸುಳ್ಳುಗಾರ ಪಾಕ್‌ಗೆ ತಿರುಗೇಟು

    ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಉಗ್ರರಿಗೆ ಕೊಟ್ಟ ಏಟಿನ ಬಗ್ಗೆ ಫೋಟೊ ಸಾಕ್ಷಿಗಳ ಮೂಲಕ ಭಾರತೀಯ ಸೇನೆ (Indian Army) ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದೆ.

    ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ನಲ್ಲಿ ಪಾಕಿಸ್ತಾನ ಸೇನೆಯು ಸುಮಾರು 35ರಿಂದ 40 ಸಿಬ್ಬಂದಿಯನ್ನು ಕಳೆದುಕೊಂಡಿದೆ. ಮೇ 7ರಿಂದ 10ರ ವರೆಗೆ ಈ ಕಾರ್ಯಾಚರಣೆ ನಡೆಯಿತು ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

    ಪಾಕಿಸ್ತಾನಿ ನಾಗರಿಕರು ಅಥವಾ ಮಿಲಿಟರಿ ಸ್ಥಾಪನೆಗಳ ಮೇಲೆ ನಮ್ಮ ಸೇನೆ ದಾಳಿ ಮಾಡಿಲ್ಲ. ಭಯೋತ್ಪಾದಕರು ಮತ್ತು ಅವರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ನಮ್ಮ ಗುರಿಯಾಗಿತ್ತು ಎಂದು ಸೇನೆ ಸ್ಪಷ್ಟಪಡಿಸಿದೆ.

    ಉಗ್ರರ ನೆಲೆಗಳನ್ನು ಟಾರ್ಗೆಟ್‌ ಮಾಡಿ ಹೊಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ಬೆನ್ನಲ್ಲೇ, ಮೇ 7 ರಂದು ಸಂಜೆ ಭಾರತದ ನಮ್ಮ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಾನವರಹಿತ ವೈಮಾನಿಕ ವಾಹನಗಳು (UAV), ಸಣ್ಣ ಡ್ರೋನ್‌ಗಳ ದಾಳಿ ನಡೆಸಿತು. ಅವುಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಮೂರು ಡ್ರೋನ್‌ಗಳು ದಾಳಿ ಮಾಡುವಲ್ಲಿ ಯಶಸ್ವಿಯಾದರೂ ಕಡಿಮೆ ಹಾನಿಯನ್ನುಂಟು ಮಾಡಿವೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರ ಹತ್ಯೆ: ಭಾರತೀಯ ಸೇನೆ

    ನಾವು ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿದ್ದೆವು. ಆದರೆ, ಭಾರತದ ನಾಗರಿಕರು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಪಾಕಿಸ್ತಾನ ಗುರಿಯಾಗಿಸಿ ದಾಳಿ ನಡೆಸಿತ್ತು. ಅದಕ್ಕೆ ತಕ್ಕ ಪ್ರತ್ಯುತ್ತರ ನಮ್ಮ ಸೇನೆ ನೀಡಿದೆ. ಪ್ರತೀಕಾರವಾಗಿ ನಾವು ಲಾಹೋರ್‌ ಬಳಿ ಮತ್ತು ಗುಜ್ರಾನ್‌ವಾಲಾ ಬಳಿ ರೆಡಾರ್‌ ಸ್ಥಾಪನೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದೆ.

    ಭಾರತದ ಕಾರ್ಯಾಚರಣೆ ಏನಿದ್ದರೂ ಭಯೋತ್ಪಾದಕರ ವಿರುದ್ಧವಷ್ಟೇ. ಪಾಕ್‌ ಜನರು ಮತ್ತು ಮಿಲಿಟರಿ ನೆಲೆ ನಮ್ಮ ದಾಳಿ ಉದ್ದೇಶ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪಾಕ್ ದಾಳಿ ಮಾಡಿದರೆ ನಾವು ಭೀಕರ ದಾಳಿ ಮಾಡುತ್ತೇವೆ: ಮೋದಿ ಎಚ್ಚರಿಕೆ

  • ಮಿಲಿಟರಿ ಹೊರಠಾಣೆ ಮೇಲೆ ಟಿಟಿಪಿ ದಾಳಿ – 20 ಪಾಕ್‌ ಸೈನಿಕರು ಸಾವು

    ಮಿಲಿಟರಿ ಹೊರಠಾಣೆ ಮೇಲೆ ಟಿಟಿಪಿ ದಾಳಿ – 20 ಪಾಕ್‌ ಸೈನಿಕರು ಸಾವು

    ಇಸ್ಲಾಮಾಬಾದ್: ತೆಹ್ರಿಕ್‌-ಎ-ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ), ದಕ್ಷಿಣ ವಜೀರಿಸ್ತಾನದ ಮಿಲಿಟರಿ ಹೊರಠಾಣೆ ಮೇಲೆ ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ.

    ಗುರುವಾರ ತಡರಾತ್ರಿ ಶಕೈ ಉಪವಿಭಾಗದಲ್ಲಿರುವ ಡಂಗೇಟ್ ಹೊರಠಾಣೆಯನ್ನು ಗುರಿಯಾಗಿಸಿಕೊಂಡು ಲೇಸರ್ ರೈಫಲ್‌ಗಳು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ಈ ದಾಳಿ ನಡೆಸಲಾಗಿತ್ತು.

    ಪಾಕಿಸ್ತಾನಿ ಸೇನೆಯು ಹೆಚ್ಚುವರಿ ಪಡೆಗಳನ್ನು ರವಾನಿಸಿತು. ಆದರೆ ಮಾರ್ಗಮಧ್ಯೆ ಬೆಂಬಲ ನೀಡುವ ಬೆಂಗಾವಲು ಪಡೆಯ ಮೇಲೆ ಹೊಂಚುದಾಳಿ ನಡೆಸಲಾಯಿತು. ಇದು ವಿನಾಶವನ್ನು ಹೆಚ್ಚಿಸಿತು. ಶಾವಲ್‌ನಲ್ಲಿ ಪಾಕಿಸ್ತಾನಿ ಮಿಲಿಟರಿ ಕಾರ್ಯಾಚರಣೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಟಿಟಿಪಿ ಹೊಣೆಗಾರಿಕೆಯನ್ನು ಹೊತ್ತುಕೊಂಡಿತು. ಉಗ್ರಗಾಮಿಗಳು ನೈಟ್‌ ವಿಷನ್ ಗೇರ್ ಮತ್ತು ರಾಕೆಟ್ ಲಾಂಚರ್ ಸೇರಿದಂತೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿರುವಂತೆಯೇ ಈ ಬೆಳವಣಿಗೆ ಸಂಭವಿಸಿದೆ. ಗಡಿ ರಾಜ್ಯಗಳಲ್ಲಿ ಹೆಚ್ಚಿನ ಮಿಲಿಟರಿ ಸನ್ನದ್ಧತೆಯೊಂದಿಗೆ ಭಾರತೀಯ ಪಡೆಗಳು ಹೆಚ್ಚಿನ ಜಾಗರೂಕತೆಯಿಂದ ಕೂಡಿವೆ.

  • ಕುತಂತ್ರಿ ಪಾಕಿಗೆ ಭಾರತ ಸೇನೆಯ ಉತ್ತರ – 15 ಪಾಕ್ ಸೈನಿಕರು, 8 ಭಯೋತ್ಪಾದಕರು ಮಟಾಶ್

    ಕುತಂತ್ರಿ ಪಾಕಿಗೆ ಭಾರತ ಸೇನೆಯ ಉತ್ತರ – 15 ಪಾಕ್ ಸೈನಿಕರು, 8 ಭಯೋತ್ಪಾದಕರು ಮಟಾಶ್

    ಶ್ರೀನಗರ: ಪಾಕಿಸ್ತಾನ ಕೆಲವು ದಿನಗಳಿಂದ ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿತ್ತು. ಇದಕ್ಕೆ ಭಾರತೀಯ ಸೇನಾ ಪಡೆ ಪ್ರತ್ಯುತ್ತರ ನೀಡಿದೆ. ಜಮ್ಮು-ಕಾಶ್ಮೀರದ ಕೇರನ್ ವಲಯದ ದುಧ್ನಿಯಲ್ ಪ್ರದೇಶದಲ್ಲಿ ಭಯೋತ್ಪಾದಕರ ಉಡಾವಣಾ ಪ್ಯಾಡ್‍ಗಳ ಮೇಲೆ ಭಾರತೀಯ ಸೇನೆ ಫಿರಂಗಿದಳದ ಮೂಲಕ ಏಪ್ರಿಲ್ 10 ರಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಎಂಟು ಭಯೋತ್ಪಾದಕರು ಮತ್ತು 15 ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

    ದೇಶದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಅನೇಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಕಿಶನ್‍ಗಂಗಾ ನದಿಯ ದಡದಲ್ಲಿ ದುಧ್ನಿಯಲ್ ಪ್ರದೇಶವನ್ನು ಭಾರತೀಯ ಸೇನೆ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

    ಕೇರನ್ ವಲಯದಲ್ಲಿ ಏಪ್ರಿಲ್ 5 ರಂದು ಭಯೋತ್ಪಾದಕರು ಒಳನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಸೇನೆಯ ವಿಶೇಷ ಪಡೆಗಳು ಐದು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು. ಇವರಲ್ಲಿ ಮೂವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು ಮತ್ತು ಉಳಿದ ಇಬ್ಬರು ಜೈಶ್ ಎ ಮೊಹಮ್ಮದ್ (ಜೆಎಂ) ಅವರೊಂದಿಗೆ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

    ಶಾರ್ದಾ, ದುಧ್ನಿಯಲ್ ಮತ್ತು ಶಾಹಕೋಟ್ ಪ್ರದೇಶಗಳಲ್ಲಿ ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆ ಖಚಿತಪಡಿಸಿದೆ. ಆದರೆ ದಾಳಿಯಲ್ಲಿ 15 ವರ್ಷದ ಬಾಲಕಿ ಸೇರಿದಂತೆ ನಾಲ್ಕು ನಾಗರಿಕರಿಗೆ ಮಾತ್ರ ಗಂಭೀರ ಗಾಯಗಳಾಗಿವೆ ಎಂದು ಹೇಳಿಕೊಂಡಿತ್ತು.

    ಏಪ್ರಿಲ್ 10 ರಂದು ಸೈನ್ಯವು ಕೇರನ್ ವಲಯದಲ್ಲಿ ದಾಳಿ ಮಾಡಿ 8 ಭಯೋತ್ಪಾದಕರೊಂದಿಗೆ 15 ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೇ ದುಧ್ನಿಯಲ್ ಪ್ರದೇಶದಲ್ಲಿ ಕೆಲ ಆಹಾರ ಮತ್ತು ಸರಕುಗಳನ್ನು ಸಂಗ್ರಹಿಸಿದ್ದ ಅಂಗಡಿಗಳಿಗೂ ಸಹ ಹಾನಿಯಾಗಿದೆ ಎಂದು ಗುಪ್ತಚರ ವರದಿ ತಿಳಿದಿದೆ.

    ಈ ವಲಯದಲ್ಲಿ ಪಾಕಿಸ್ತಾನದ ಲಾಚ್‍ಪ್ಯಾಡ್‍ಗಳಲ್ಲಿ ಲಷ್ಕರ್ ಎ ತೊಯ್ಬಾ, ಜೈಶ್ ಇ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‍ನ ಸುಮಾರು 160 ಭಯೋತ್ಪಾದಕರು ಭಾರತ ಪ್ರದೇಶ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಭಾರತೀಯ ಸೈನ್ಯಕ್ಕೆ ಉಡಾವಣಾ ಪ್ಯಾಡ್‍ಗಳನ್ನು ಗುರಿಯಾಗಿ ದಾಳಿ ಮಾಡುವುದು ಅನಿವಾರ್ಯವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 242 ಭಯೋತ್ಪಾದಕರು ಇದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಅಂದಾಜಿಸಿವೆ.