ಪಾಕಿಸ್ತಾನದ ಖ್ಯಾತ ಗಾಯಕಿ ಹನಿಯಾ ಅಸ್ಲಾಂ (Haniya Aslam) ಆ.11ರಂದು 39ನೇ ವಯಸ್ಸಿಗೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಗಾಯಕಿಯ ನಿಧನ ಬಗ್ಗೆ ಇದೀಗ ಸಹೋದರಿ ಜೆಬ್ ಬಂಗಾಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
ಗಾಯಕಿ ಹನಿಯಾ ನಿಧನದ ಸುದ್ದಿ ಕೇಳಿ ಆಪ್ತರು, ಸಿನಿಮಾರಂಗದ ಕಲಾವಿದರು, ಸಂಗೀತ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಹನಿಯಾ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಎಲ್‌ಇಡಿ ಡಿಸ್ಪ್ಲೇನಿಂದ ಮೈ ಮುಚ್ಚಿಕೊಂಡ ಉರ್ಫಿ ಜಾವೇದ್
ಇನ್ನೂ ಕೋಕ್ ಸ್ಟುಡಿಯೋದಲ್ಲಿ ಲೈಲಿಜಾನ್, ಬಿಬಿ ಸನಮ್, ಚಹುಪ್, ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಹಾಡಿದ್ದರು. ಅದಷ್ಟೇ ಅಲ್ಲ, ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ನಟನೆಯ ‘ಹೈವೇ’ ಚಿತ್ರ, ಮತ್ತು `ಮದ್ರಾಸ್ ಕೆಫೆ’ ಚಿತ್ರಗಳಲ್ಲಿ ಹಾಡಿದರು.
إِنَّا لِلَّهِ وَإِنَّا إِلَيْهِ رَاجِعونَ It is with heavy heart that I announce the passing of my beloved aunt (tayi) Nayyara Noor. May her soul R.I.P. She was given the title of ‘Bulbul-e-Pakistan’ because of her melodious voice. #NayyaraNoorpic.twitter.com/69ATgDq7yZ
ನನ್ನ ಪ್ರೀತಿಯ ಚಿಕ್ಕಮ್ಮ (ತಾಯಿ) ನಯ್ಯಾರ ನೂರ್ ಅವರ ನಿಧನವನ್ನು ನಾನು ಭಾರವಾದ ಹೃದಯದಿಂದ ಘೋಷಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸುಮಧುರ ಕಂಠಕ್ಕಾಗಿ ‘ಬುಲ್‌ಬುಲ್-ಎ-ಪಾಕಿಸ್ತಾನ’ ಎಂಬ ಬಿರುದು ನೀಡಲಾಗಿತ್ತು ಎಂದು ಜೈದಿ ವಿಷಾದದಿಂದ ನುಡಿದಿದ್ದಾರೆ.
ನೂರ್ ಅವರು ಭಾರತದ ಅಸ್ಸಾಂ ರಾಜ್ಯದಲ್ಲಿ 1950 ರಲ್ಲಿ ಜನಿಸಿದರು. ನಂತರ ಅವರು 1950 ರ ದಶಕದ ಅಂತ್ಯದಲ್ಲಿ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋದರು. ಮಾಧುರ್ಯದ ತೀವ್ರ ಉತ್ಸಾಹಿಯಾಗಿದ್ದರು. ಅವರು ಚಿಕ್ಕ ವಯಸ್ಸಿನಲ್ಲೇ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. 1968 ರಲ್ಲಿ ರೇಡಿಯೋ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಹಾಡಿದ್ದರು.
‘ರಂಗ್ ಬರ್ಸಾತ್ ನಯ್ ಭಾರಯ್ ಕುಛ್ ತೌ’, ‘ಫಿರ್ ಸಾವನ್ ರೂತ್ ಕಿ ಪವನ್ ಚಲಿ ತುಮ್ ಯಾದ್ ಆಯೆ’, ‘ಏ ಇಷ್ಕ್ ಹಮೇ ಬರ್ಬಾದ್‌ನ ಕರ್’, ‘ಬರ್ಖಾ ಬರ್ಸಾಯ್ ಛತ್ ಪರ್’ ಮತ್ತು ‘ಮೇ ತೇರಾಯ್ ಸಪ್ನಾಯ್ ದೇಖುನ್’ ನೂರ್ ಅವರ ಕೆಲವು ಭಾವಪೂರ್ಣ ಗಜಲ್‌ಗಳು. ಇದನ್ನೂ ಓದಿ: ಭಾರತದೊಂದಿಗಿನ ಶಾಶ್ವತ ಶಾಂತಿಗೆ ಯುದ್ಧವೊಂದೇ ಆಯ್ಕೆಯಾಗಿಲ್ಲ: ಪಾಕ್ ಪ್ರಧಾನಿ
Live Tv
[brid partner=56869869 player=32851 video=960834 autoplay=true]