Tag: Pakistani actress

  • ಶೋಯೆಬ್‌ ಮಲಿಕ್‌ರಿಂದ ವಿಚ್ಛೇದನ ಪಡೆದಿದ್ದಾರೆ – ಡಿವೋರ್ಸ್ ವದಂತಿಗೆ ತೆರೆಎಳೆದ ಸಾನಿಯಾ ಕುಟುಂಬ

    ಶೋಯೆಬ್‌ ಮಲಿಕ್‌ರಿಂದ ವಿಚ್ಛೇದನ ಪಡೆದಿದ್ದಾರೆ – ಡಿವೋರ್ಸ್ ವದಂತಿಗೆ ತೆರೆಎಳೆದ ಸಾನಿಯಾ ಕುಟುಂಬ

    -ಶೋಯೆಬ್‌ ಮಲಿಕ್‌ ವಿರುದ್ಧವೇ ತಿರುಗಿಬಿದ್ದ ಪಾಕ್‌ ಫ್ಯಾನ್ಸ್‌!

    ನವದೆಹಲಿ: ಭಾರತೀಯ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕ್‌ ಕ್ರಿಕೆಟಿಗ ಶೋಯೆಬ್‌ ಮಲಿಕ್‌ (Shoaib Malik) ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ಹೇಳಿದ್ದು, ಕೆಲ ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

     

    View this post on Instagram

     

    A post shared by Anam Mirza (@anammirzaaa)

    ಶೋಯೆಬ್‌ ಮಲಿಕ್‌ ಅವರು ಪಾಕ್‌ ನಟಿ ಸನಾ ಜಾವೇದ್‌ (Sana Javed) ಅವರೊಂದಿಗೆ ವಿವಾಹವಾದ ಬಳಿಕ ಸುದ್ದಿ ಹೊರಬೀಳುತ್ತಿದ್ದಂತೆ ಸಾನಿಯಾ ಕುಟುಂಬ ಸ್ಫಷ್ಟನೆ ನೀಡಿದೆ. ಇದನ್ನೂ ಓದಿ: ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

    ಸಾನಿಯಾ ಯಾವಾಗಲೋ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ದೂರವಿಟ್ಟಿದ್ದಾಳೆ. ಆದರೆ ಶೋಯೆಬ್‌ ರಿಂದ ವಿಚ್ಛೇದನ ಪಡೆದು ಕೆಲವು ತಿಂಗಳಾಗಿವೆ. ಈಗ ಅದರ ಬಗ್ಗೆ ಮಾತನಾಡುವ ಸಂದರ್ಭ ಬಂದಿದೆ ಎಂದು ಹೇಳಿದೆ. ಅಲ್ಲದೇ ಸಾನಿಯಾ ಸಹ ಶೋಯೆಬ್‌ ಮುಂದಿನ ಜೀವನಕ್ಕೆ ಶುಭಹಾರೈಸಿದ್ದಾಳೆ ಎಂಬುದಾಗಿ ಕುಟುಂಬ ತಿಳಿಸಿದೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ಪಾಕ್‌ ಅಭಿಮಾನಿಗಳಿಂದಲೂ ಸಾನಿಯಾಗೆ ಬೆಂಬಲ:
    ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕ್‌ನ ನಟಿ ಸನಾ ಜಾವೇರದ್ ಅವರನ್ನು ಮದುವೆಯಾದ ಸುದ್ದಿ ಹೊರ ಬೀಳುತ್ತಿದ್ದಂತೆ, ಪಾಕಿಸ್ತಾನದಲ್ಲಿರುವ ಸಾನಿಯಾ ಮಿರ್ಜಾ ಅಭಿಮಾನಿಗಳು ಸಾನಿಯಾ ಬೆಂಬಲಿಸಿ ಎಕ್ಸ್‌ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.‌ ಪ್ರೇಮ ವಿವಾಹದಲ್ಲಿ ದೀರ್ಘಕಾಲದ ನಂಬಿಕೆ ಇರುವುದಿಲ್ಲ. ಅಲ್ಲಾಹು ನಿಮಗೆ ಒಳ್ಳೆಯದು ಮಾಡಲಿ, ಇವರಿಗಿಂತಲೂ ಹೆಚ್ಚಿನದ್ದನ್ನು ಕೊಡಲಿ ಎಂದಷ್ಟೇ ಈಗ ನಾವು ಕೇಳಿಕೊಳ್ಳಬಹುದು ಎಂದರೆ, ಇನ್ನೂ ಕೆಲವರು ಶೋಯೆಬ್‌-ಸನಾ ವಿವಾಹಕ್ಕೆ ಅಭಿನಂದನೆಗಳು ಆದ್ರೆ ಸಾನಿಯಾ ಅವರ ಹೃದಯವನ್ನು ನುಚ್ಚುನೂರು ಮಾಡಿದ್ದು ನೋವಿನ ಸಂಗತಿ ಎಂದು ಬರೆದುಕೊಂಡಿದ್ದಾರೆ.

    ಪಾಕ್‌ ನಟಿ ವರಿಸಿದ ಶೋಯೆಬ್‌ ಮಲಿಕ್‌:
    ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕ್‌ನ ನಟಿ ಸನಾ ಜಾವೇರದ್ ಅವರನ್ನು ವಿವಾಹವಾಗಿದ್ದು, ನಟಿ ಸನಾ ಜಾವೇದ್ ಅವರೊಂದಿಗೆ ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಶೋಯೆಬ್‌, ಸಾನಿಯಾರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಾನಿಯಾ ಭಾರತೀಯಳಾಗಿದ್ದು, ಶೋಯೇಬ್ ಪಾಕಿಸ್ತಾನಿ ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. ಇದನ್ನೂ ಓದಿ: ಸತತ ಹೀನಾಯ ಸೋಲಿನಿಂದ ಬೇಸರ – PCB ಅಧ್ಯಕ್ಷ ಸ್ಥಾನಕ್ಕೆ ಝಾಕಾ ಅಶ್ರಫ್ ಗುಡ್‌ಬೈ

    ಶೋಯೆಬ್‌ಗೆ 3ನೇ, ಸನಾಗೆ 2ನೇ ಮದುವೆ:
    ಇದೀಗ ಶೋಯೆಬ್ ಮದುವೆಯಾದ ನಟಿ ಸನಾ ಜಾವೇದ್ ಸಹ ವಿಚ್ಛೇದನ ಪಡೆದವರಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರು 2020 ರಲ್ಲಿ ಖ್ಯಾತ ಗೀತರಚನಾಕಾರ ಉಮೈರ್ ಜಸ್ವಾಲ್ ಎಂಬವರನ್ನ ವಿವಾಹವಾಗಿದ್ದರು. ಆದರೆ 2023ರಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಬಳಿಕ ಶೋಯೆಬ್‌ರನ್ನ ಮದುವೆಯಾಗಿದ್ದಾರೆ. ಶೋಯೆಬ್ ಸಾನಿಯಾ ಮಿರ್ಜಾ ಬಿಟ್ಟು ಮೂರನೇ ಮದುವೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

  • ಶೋಯೆಬ್‌ ಮಲಿಕ್‌ ವರಿಸಿದ ಪಾಕ್‌ ನಟಿ – ಸನಾ ಜಾವೇದ್‌ ಬಗ್ಗೆ ನಿಮ್ಗೆ ಗೊತ್ತಾ?

    ಶೋಯೆಬ್‌ ಮಲಿಕ್‌ ವರಿಸಿದ ಪಾಕ್‌ ನಟಿ – ಸನಾ ಜಾವೇದ್‌ ಬಗ್ಗೆ ನಿಮ್ಗೆ ಗೊತ್ತಾ?

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌ (Shoaib Malik), ಪಾಕ್‌ ನಟಿ ಸನಾ ಜಾವೇದ್‌ ಅವರನ್ನ ವಿವಾಹವಾಗಿದ್ದಾರೆ. ಈ ಕುರಿತ ಫೋಟೋಗಳನ್ನು ಸ್ವತಃ ಶೋಯೆಬ್‌ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈವರಿಬ್ಬರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಪಾಕ್‌ ನಟಿ ಸನಾ ಜಾವೇದ್‌ (Sana Javed) ಯಾರು ಎಂಬ ಚರ್ಚೆ ಹುಟ್ಟಿಕೊಂಡಿದೆ. ಈ ಕುರಿತು ತಿಳಿಯಬೇಕಾದ್ರೆ ಮುಂದೆ ಓದಿ…

    ಸನಾ ಜಾವೇದ್‌ ಬಗ್ಗೆ ನಿಮಗೆ ಗೊತ್ತಾ?
    ಸನಾ ಜಾವೇದ್‌ 1993ರ ಮಾರ್ಚ್‌ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಜನಿಸಿದರು. 2012ರಲ್ಲಿ ತೆರೆಕಂಡಿದ್ದ ʻಶೆಹರ್-ಎ-ಝಾತ್ʼ ಹಾಸ್ಯ ಟಿವಿ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರದಲ್ಲಿ ʻಖಾನಿʼ ರೊಮ್ಯಾಂಟಿಕ್‌ ವೆಬ್‌ಸಿರೀಸ್‌ನಲ್ಲಿ ಕಾಣಿಸಿಕೊಂಡರು. ಈ ಬೆನ್ನಲ್ಲೇ ರುಸ್ವಾಯಿ, ಡಂಕ್‌ನಂತಹ ಸೀರಿಯಲ್‌ಗಳಲ್ಲೂ ಗುರುತಿಸಿಕೊಂಡು ಫೇಮಸ್‌ ಆದ್ರು. ʻಖಾನಿʼ (Khaani) ಸೀರಿಯಲ್‌ನಲ್ಲಿ ತೋರಿದ ಉತ್ತಮ ಅಭಿನಯಕ್ಕಾಗಿ ʻಲಕ್ಸ್ ಸ್ಟೈಲ್ ಅವಾರ್ಡ್ಸ್ʼಪ್ರಶಸ್ತಿ ಪಡೆಯುವಲ್ಲಿಯೂ ಸನಾ ಜಾವೇದ್‌ ಯಶಸ್ವಿಯಾದರು. ಇದನ್ನೂ ಓದಿ: ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

    ನಟಿಯಾಗಿದ್ದ ಜಾವೇದ್‌ 2020ರಲ್ಲಿ ಗೀತರಚನಕಾರ ಹಾಗೂ ಸಂಗೀತ ನಿರ್ಮಾಪಕರೂ ಆಗಿದ್ದ ಉಮರ್ ಜಸ್ವಾಲ್ ಅವರೊಂದಿಗೆ 2020ರಲ್ಲಿ ವಿವಾಹವಾಗಿದ್ದರು. ಆದ್ರೆ 2023ರಲ್ಲಿ ಅವರಿಂದ ವಿಚ್ಛೇದನ ಪಡೆದರು. ವಿಚ್ಛೇದನ ಪಡೆದ ಬಳಿಕ ಸನಾ ಹಾಗೂ ಉಮರ್‌ ಇಬ್ಬರು ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದ ಇಬ್ಬರಿಗೂ ಸಂಬಂಧಿಸಿದ ಎಲ್ಲ ಚಿತ್ರಗಳನ್ನ ಡಿಲೀಟ್‌ ಮಾಡಿದರು. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ಸನಾ ವಿಚ್ಛೇದನ ಪಡೆದ ಬಳಿಕ 2023ರಲ್ಲಿ ಶೋಯೆಬ್‌ ಮಲಿಕ್‌ ಜೊತೆಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಹುಟ್ಟಿಕೊಂಡಿತ್ತು. ಇದೀಗ ವದಂತಿಗಳಿಗೆಲ್ಲಾ ತೆರೆ ಎಳೆದಿದ್ದಾರೆ. ಶೋಯೆಬ್‌ ಮಲಿಕ್‌ ಅವರನ್ನು ಮದುವೆಯಾದ ನಂತರ ಸನಾ ಜೇವದ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನ ಸನಾ ಶೋಯೆಬ್‌ ಮಲಿಕ್‌ ಎಂದೂ ಬದಲಾಯಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಮಮಂದಿರ ಪ್ರಸಾದ ಅಂತಾ ಸ್ವೀಟ್‌ ಮಾರಾಟ – ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಗೆ ನೋಟಿಸ್‌ 

  • ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

    ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

    ಇಸ್ಲಾಮಾಬಾದ್‌: ಭಾರತೀಯ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌, ಪಾಕ್‌ನ ನಟಿ ಸನಾ ಜಾವೇರದ್‌ ಅವರನ್ನು ಮದುವೆಯಾಗಿದ್ದಾರೆ.

    ನಟಿ ಸನಾ ಜಾವೇದ್‌ ಅವರೊಂದಿಗೆ ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಮಲಿಕ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿವೆ. ಇದನ್ನೂ ಓದಿ: ‘ಭೀಮ’ನ ಟೀಸರ್ ರಿಲೀಸ್: ವಿಜಯ್ ದುನಿಯಾದ ಮತ್ತೊಂದು ಖದರ್

     

    View this post on Instagram

     

    A post shared by Shoaib Malik (@realshoaibmalik)

    ಕಳೆದ ಕೆಲ ದಿನಗಳಿಂದ ಶೋಯಬ್‌ ಮಲ್ಲಿಕ್‌ ಹಾಗೂ ಭಾರತದ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗಳು ಹರಿದಾಡುತ್ತಿತ್ತು. ಇದನ್ನೂ ಓದಿ: ರಶ್ಮಿಕಾ ಜೊತೆಗಿನ ನಿಶ್ಚಿತಾರ್ಥದ ಬಗ್ಗೆ ಮೌನಮುರಿದ ದೇವರಕೊಂಡ

    ಹೌದು. ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಾನಿಯಾ ಭಾರತೀಯಳಾಗಿದ್ದು (Indian), ಶೋಯೇಬ್ ಪಾಕಿಸ್ತಾನಿ (Pakistani) ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. ಇದೀಗ ಅವರಿಬ್ಬರ ನಡುವೆ ಬಿರುಕು ಮೂಡಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾನಿಯಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಗಟಿನ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಪುಷ್ಟಿ ನೀಡಿದೆ.

    ಶೋಯೆಬ್ ಮದುವೆಯಾದ ಸನಾ ಜಾವೇದ್ ಸಹ ವಿಚ್ಛೇದನ ಪಡೆದವರಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರು 2020 ರಲ್ಲಿ ಉಮೈರ್ ಜಸ್ವಾಲ್ ಎಂಬವರನ್ನ ವಿವಾಹವಾಗಿದ್ದರು. ಆದರೆ ಶೀಘ್ರದಲ್ಲೇ ದಂಪತಿ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಬಂದಿತು. ಇದೀಗ ಶೋಯೆಬ್‌ ಸಾನಿಯಾ ಮಿರ್ಜಾ ಬಿಟ್ಟು ಇವರನ್ನು ಮೂರನೇ ಮದುವೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ್ರೇಮ್ ಮತ್ತು ಮಾನ್ವಿತಾ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಫಿಕ್ಸ್ 

  • ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ಬಾಲಿವುಡ್ (Bollywood) ಬಾದಶಾ ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್, ಡ್ರಗ್ಸ್ ಕೇಸ್ ನಂತರ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಟಿ ನೋರಾ ಫತೇಹಿ ಜೊತೆಗಿನ ಡೇಟಿಂಗ್ ವಿಷ್ಯವಾಗಿ ಆರ್ಯನ್ ಸುದ್ದಿಯಲ್ಲಿದ್ದರು. ಈಗ ಪಾಕಿಸ್ತಾನ ನಟಿ ಜೊತೆಗಿನ ಫೋಟೋ ವಿಚಾರವಾಗಿ ಆರ್ಯನ್ ಖಾನ್ (Aryan Khan) ಸುದ್ದಿಯಲ್ಲಿದ್ದಾರೆ.

    2023 ಈ ಹೊಸ ವರ್ಷವನ್ನ ಅದ್ದೂರಿಯಾಗಿ ಸ್ವಾಗತಿಸಲು ಆರ್ಯನ್ ಖಾನ್ ಹಾಗೂ ಅವರ ಸಹೋದರಿ ಸುಹಾನಾ ಖಾನ್ (Suhana Khan) ದುಬೈಗೆ ತೆರಳಿದ್ದರು. ಈ ಪಾರ್ಟಿಯಲ್ಲಿ ನೋರಾ ಕೂಡ ಇದ್ದರು. ಹಾಗಾಗಿ ನೋರಾ ಜೊತೆಗಿನ ಡೇಟಿಂಗ್ ವಿಷ್ಯವಾಗಿ ಆರ್ಯನ್ ಸುದ್ದಿಯಲ್ಲಿದ್ದರು. ಇದೇ ಪಾರ್ಟಿಯಲ್ಲಿ ಪಾಕಿಸ್ತಾನದ ನಟಿ ಸಾದಿಯಾ ಖಾನ್ (Sadia Khan) ಕೂಡ ಭಾಗಿ ಆಗಿದ್ದರು. ಪಾರ್ಟಿಯಲ್ಲಿ ತೆಗೆದ ಆರ್ಯನ್ ಜೊತೆಗಿನ ಫೋಟೋವನ್ನ ಸಾದಿಯಾ ಹಂಚಿಕೊಂಡಿದ್ದಾರೆ.

    ಸಾದಿಯಾ ಅವರು ಇತ್ತೀಚೆಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಆರ್ಯನ್ ಖಾನ್ ಜತೆಗಿನ ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗೆ ಹೊಸವರ್ಷದ ಸಂದರ್ಭದಲ್ಲಿ ತೆಗೆದ ಫೋಟೋ ಎಂದು ಅಡಿಬರಹ ನೀಡಿದ್ದಾರೆ. ಈ ಪಾರ್ಟಿಯಲ್ಲಿ ಬಾಲಿವುಡ್‌ನ ಹಲವರು ಭಾಗಿ ಆಗಿದ್ದರು. ಕರಣ್ ಜೋಹರ್, ನೋರಾ ಮೊದಲಾದವರು ಇದ್ದರು. ನಟಿ ಸಾದಿಯಾ ಅವರು ಹಲವು ಟಿವಿ ಶೋಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಈಗ 35 ವರ್ಷ ವಯಸ್ಸು. ಅವರು 2019ರ ಸೀರಿಯಲ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಯಾವುದೇ ಧಾರಾವಾಹಿಗಳಲ್ಲಿ ನಟಿಸಿಲ್ಲ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಆರ್ಯನ್ ಖಾನ್ ಅವರು ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಶಾರುಖ್ ಖಾನ್ ಒಡೆತನದ `ರೆಡ್ ಚಿಲ್ಲೀಸ್’ ನಿರ್ಮಾಣ ಸಂಸ್ಥೆಯ ಅಡಿ ವೆಬ್ ಸಿರೀಸ್‌ಗೆ ನಿರ್ದೇಶನ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಲಗ್ಗೆ ಇಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾರುಖ್ ಖಾನ್ ಪುತ್ರನ ಜೊತೆ ಪಾಕ್ ನಟಿಯ ಲವ್ವಿ-ಡವ್ವಿ

    ಶಾರುಖ್ ಖಾನ್ ಪುತ್ರನ ಜೊತೆ ಪಾಕ್ ನಟಿಯ ಲವ್ವಿ-ಡವ್ವಿ

    ಶ್ರೀದೇವಿ ಮಗಳಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಪಾಕಿಸ್ತಾನದ ನಟಿ ಸಜಲ್ ಅಲಿ(Sajal Ali) ಇದೀಗ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರನ ಮೇಲೆ ಈ ನಟಿಗೆ ಲವ್ ಆಗಿದ್ಯಂತೆ. ಹಾಗಂತ ಸೋಷಿಯಲ್ ಮೀಡಿಯಾ ಮೂಲಕ ಸಜಲ್ ಹೇಳಿಕೊಂಡಿದ್ದಾರೆ.

    ಪಾಕ್ ನಟಿ ಸಜಲ್ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. `ಮೋಮ್’ (Mom) ಚಿತ್ರದಲ್ಲಿ ಎವರ್‌ಗ್ರೀನ್ ನಟಿ ಶ್ರೀದೇವಿ(Sridevi Kapoor) ಪುತ್ರಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಶಾರುಖ್ (Sharukh Khan) ಪುತ್ರ ಆರ್ಯನ್ ಮೇಲೆ ಸಜಲ್ ಅಲಿಗೆ ಪ್ಯಾರ್ ಆಗಿದೆ. ಆರ್ಯನ್ ಖಾನ್ ಅಂದ್ರೆ ತನಗಿಷ್ಟ ಎಂಬರ್ಥದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ `ಬಾ ಬಾರೋ ರಸಿಕಾ’ ಖ್ಯಾತಿಯ ನಟಿ ಆಶಿತಾ

    ಇತ್ತೀಚೆಗೆ ನಟಿ ಸಜಲ್, ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಆರ್ಯನ್ ಖಾನ್ ಫೋಟೋ ಶೇರ್ ಮಾಡಿ, ಶಾರುಖ್ ಖಾನ್ ನಟನೆಯ ರೊಮ್ಯಾಂಟಿಕ್ ಸಾಂಗ್ ಆ್ಯಡ್ ಮಾಡಿ ಶೇರ್ ಮಾಡಿದ್ದರು. ಈ ಫೋಸ್ಟ್ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ. ಇದನ್ನೂ ಓದಿ:ವೆಬ್ ಸಿರೀಸ್‌ನತ್ತ ಮುಖ ಮಾಡಿದ ಹರ್ಷಿಕಾ ಪೂಣಚ್ಚ

    ಇವರಿಬ್ಬರು ಮದುವೆ ಆದರೆ ಹೇಗಿರುತ್ತದೆ. ಇವರಿಬ್ಬರ ಜೋಡಿ ಹೇಗಿದೆ ಎಂದು ಈಗಾಗಲೇ ನೆಟ್ಟಿಗರು ಮುಂದಾಲೋಚನೆ ಮಾಡಿದ್ದಾರೆ. ಸಜಲ್ ಅಲಿ ಪ್ರೀತಿಗೆ ಆರ್ಯನ್ ಖಾನ್ ಇನ್ನೂ ರಿಯಾಕ್ಷನ್ ಕೊಟ್ಟಿಲ್ಲ. ಮುಂದೆ ಎನೆಲ್ಲಾ ಬೆಳವಣಿಗೆ ಆಗಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಪೋಸ್ಟ್ ಮಾಡಿದ ಪಾಕಿಸ್ತಾನಿ ನಟಿ

    ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಪೋಸ್ಟ್ ಮಾಡಿದ ಪಾಕಿಸ್ತಾನಿ ನಟಿ

    ಮುಂಬೈ: ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಅಂತಾ ಪಾಕಿಸ್ತಾನದ ನಟಿ ಸಜಲ್ ಅಲಿ ಇನ್ ಸ್ಟಾಗ್ರಾಂನಲ್ಲಿ ನಟಿ ಶ್ರೀದೇವಿ ಜೊತೆಯಿರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

    ಸಜಲ್ ಅಲಿ ಈ ಹಿಂದೆ ತೆರೆಕಂಡಿದ್ದ ಶ್ರೀದೇವಿಯವರ ‘ಮಾಮ್’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಮಲ ಮಗಳಾಗಿ ಸಜಲ್ ಅಭಿನಯ ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸಜಲ್ ಮೊದಲ ಚಿತ್ರದಲ್ಲೇ ಶ್ರೀದೇವಿಯಂತಹ ದೊಡ್ಡ ನಟಿಯ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂತಾ ಹೇಳಿಕೊಂಡಿದ್ರು.

    2017ರಲ್ಲಿ ಮಾಮ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಜಲ್ ಅವರ ಸ್ವಂತ ತಾಯಿ ವಿಧಿವಶರಾಗಿದ್ದರು. ಅನಂತರ ಶ್ರೀದೇವಿ ಸಜಲ್ ಗೆ ಧೈರ್ಯ ತುಂಬಿ ಸ್ವಂತ ಮಗಳಂತೆ ಕಾಣುತ್ತಿದ್ದರು. ಶ್ರೀದೇವಿ ಸೆಟ್‍ನಲ್ಲಿ ತುಂಬಾ ಪ್ರೊಫೆಷನಲ್ ಆಗಿರುತ್ತಿದ್ದರು. ಆದ್ರೆ ಸಜಲ್ ಜೊತೆ ಅವರಿಗಿದ್ದ ಬಾಂಧವ್ಯವೇ ಬೇರೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಸಜಲ್ ತಾಯಿ ಮರಣ ಹೊಂದಿದಾಗ ಶ್ರೀದೇವಿಗೆ ಕರೆ ಮಾಡಿ ಸಜಲ್ ಅತ್ತಿದ್ದರು.

    ಆದ್ರೆ ಚಿತ್ರದಲ್ಲಿ ತಾಯಿಯಾಗಿದ್ದ ಶ್ರೀದೇವಿ ಶನಿವಾರದಂದು ದುಬೈನಲ್ಲಿ ಸಾವನ್ನಪ್ಪಿದ್ದಕ್ಕೆ, ನಾನು ಮಗದೊಮ್ಮ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಸಜಲ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ರವಿ ಉದಯವಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಾಮ್, 2017 ಜುಲೈ ನಲ್ಲಿ ತೆರೆಕಂಡಿತ್ತು. ಚಿತ್ರದಲ್ಲಿ ಶ್ರೀದೇವಿ, ಸಜಲ್ ಅಲಿ, ನವಾಜುದ್ದೀನ್ ಸಿದ್ದೀಕಿ, ಅಕ್ಷಯ್ ಖನ್ನಾ ಮತ್ತು ಅದ್ನಾನ್ ಸಿದ್ದೀಕಿ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿತ್ತು.