Tag: Pakistani

  • ತನ್ನ ದೇಶದಲ್ಲೇ ಪಾಕ್‌ ಏರ್‌ಸ್ಟ್ರೈಕ್‌ಗೆ 30 ಮಂದಿ ಬಲಿ – UNHRC ಸಭೆಯಲ್ಲಿ ಭಾರತ ತೀವ್ರ ಖಂಡನೆ

    ತನ್ನ ದೇಶದಲ್ಲೇ ಪಾಕ್‌ ಏರ್‌ಸ್ಟ್ರೈಕ್‌ಗೆ 30 ಮಂದಿ ಬಲಿ – UNHRC ಸಭೆಯಲ್ಲಿ ಭಾರತ ತೀವ್ರ ಖಂಡನೆ

    ಲಂಡನ್‌: ಇತ್ತೀಚೆಗೆ ಪಾಕಿಸ್ತಾನ (Pakistan) ತನ್ನ ದೇಶದ ಮೇಲೆಯೇ ನಡೆಸಿದ ವಾಯುದಾಳಿಯಲ್ಲಿ 30 ಮಂದಿ ನಾಗರಿಕರು ಬಲಿಯಾಗಿರುವ ಘಟನೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಸಭೆಯಲ್ಲಿ ಭಾರತ ತೀವ್ರವಾಗಿ ಖಂಡಿಸಿದೆ.

    ತನ್ನ ದೇಶದಲ್ಲೇ ವೈಮಾನಿಕ ದಾಳಿ ನಡೆಸಿದ ಪಾಕ್‌ ನಡೆಗೆ ಭಾರತ ಪ್ರತಿಕ್ರಿಯಿಸಿದೆ. ಜಾಗತಿಕವಾಗಿ ಅಸ್ಥಿರತೆ ಉಂಟುಮಾಡಲು ಭಯೋತ್ಪಾದನೆ ರಫ್ತು ಮಾಡುತ್ತದೆ. ಈಗ ನೋಡಿದ್ರೆ ತನ್ನ ಸ್ವಂತ ನಾಗರಿಕರ ಮೇಲೆಯೇ ಬಾಂಬ್‌ ದಾಳಿ ಮಾಡಿದೆ. ಭಯೋತ್ಪಾದನೆಯ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಗಳನ್ನ ದುರುಪಯೋಗಪಡಿಸಿಕೊಂಡಿದೆ. ಎಂದು UNHRCಯಲ್ಲಿನ ಭಾರತೀಯ ಪ್ರತಿನಿಧಿ ಕ್ಷಿತಿಜ್ ತ್ಯಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಒಳಗಡೆಯೇ ಏರ್‌ಸ್ಟ್ರೈಕ್‌ – 7 ಬಾಂಬ್‌ಗೆ 30 ಮಂದಿ ಬಲಿ

    30 killed as pakistan air force drops bombs during strikes in khyber pakhtunkhwa

    ಕಾರ್ಯಸೂಚಿ ಐಟಂ-4ರ ವೇಳೆ ಮಾತನಾಡುವಾಗ, ಸೋಮವಾರ ಬೆಳಗ್ಗಿನ ಜಾವ ಜೆಎಫ್ -17 ಪಾಕಿಸ್ತಾನಿ ಯುದ್ಧ ವಿಮಾನಗಳು ತನ್ನ ಮಾಟ್ರೆ ದಾರಾ ಗ್ರಾಮದ ಮೇಲೆ 8 SL-6 ಬಾಂಬ್‌ಗಳ ಮೂಲಕ ವಾಯುದಾಳಿ ನಡೆಸಿದೆ. ಆ ದಾಳಿಯಲ್ಲಿ ಮಹಿಳೆಯರು ಮಕ್ಕಳು ಸೇರಿ 30 ಮಂದಿ ಬಲಿಯಾಗಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದರು.

    ನಮ್ಮ ಪ್ರದೇಶವನ್ನು ಅಪೇಕ್ಷಿಸುವ ಬದಲು, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಖಾಲಿ ಮಾಡಬೇಕು ಎಂದರಲ್ಲದೇ ಭಯೋತ್ಪಾದನೆ ರಫ್ತು ಮಾಡುವುದರಿಂದ, ತಮ್ಮದೇ ಜನರ ಮೇಲೆ ಬಾಂಬ್ ದಾಳಿ ಮಾಡುವುದರಿಂದ, ವಿಶ್ವಸಂಸ್ಥೆ ಗುರುತಿಸಿದ ಉಗ್ರರಿಗೆ ಆಶ್ರಯ ನೀಡುವುದರಿಂದ ಸಮಯ ಸಿಕ್ಕರೆ ಜೀವ ಬೆಂಬಲದ ಮೇಲೆ ಆರ್ಥಿಕತೆ ಸುಧಾರಿಸುವತ್ತ ಗಮನಹರಿಸಬೇಕು. ಆದ್ರೆ ಪಾಕಿಸ್ತಾನಕ್ಕೆ ಸಮಯ ಸಿಕ್ಕರೆ ತನ್ನದೇ ದೇಶದ ನಾಗರಿಕೆ ಮೇಲೆ ದಾಳಿ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ತಾಳಿ ನಡೆಸಿದರು. ಇದನ್ನೂ ಓದಿ: ತೈವಾನ್‌ನಲ್ಲಿ ʻರಗಾಸಾʼ ಚಂಡಮಾರುತಕ್ಕೆ 14 ಬಲಿ, 124 ಮಂದಿ ಮಿಸ್ಸಿಂಗ್‌

    ಮುಂದುವರಿದು.. ಪುಲ್ವಾಮಾ, ಉರಿ, ಪಠಾಣ್‌ಕೋಟ್ ಮತ್ತು ಮುಂಬೈ ಸೇರಿದಂತೆ ಹಿಂದಿನ ದಾಳಿಗಳು ಹಾಗೂ ಪಹಲ್ಗಾಮ್‌ ದಾಳಿಯನ್ನು ಉಲ್ಲೇಖಿಸಿ ಪಾಕ್‌ ವಿರುದ್ಧ ಕಿಡಿ ಕಾರಿದರು.

  • ಜೈಲಿನಲ್ಲಿರೋ ಇಮ್ರಾನ್‌ ಖಾನ್‌ಗೆ ಮತ್ತೆ ಶಾಕ್ – ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಿಟಿಐ ನಿಷೇಧ!

    ಜೈಲಿನಲ್ಲಿರೋ ಇಮ್ರಾನ್‌ ಖಾನ್‌ಗೆ ಮತ್ತೆ ಶಾಕ್ – ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಿಟಿಐ ನಿಷೇಧ!

    ಇಸ್ಲಾಮಾಬಾದ್‌: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ನೇತೃತ್ವದ ಪಾಕಿಸ್ತಾನ ತಹ್ರಿಕ್‌ ಎ ಇನ್ಸಾಫ್‌ (PTI) ಪಕ್ಷ ನಿಷೇಧಿಸಲು ಪಾಕಿಸ್ತಾನದ ಶೆಹಬಾಜ್‌ ಷರೀಫ್‌ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

    ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕ್‌ ಸಚಿವ ಅತ್ತಾವುಲ್ಲಾ ತರಾತ್‌, ಸರ್ಕಾರ ಪಿಟಿಐ ಪಕ್ಷದ ಮೇಲೆ ನಿಷೇಧ ಹೇರಲು ನಿರ್ಧರಿಸಿದೆ. ಪಿಟಿಐ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ (Pak Supreme Court) ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Trump Assassination Attempt | ಮನೆಯಿಂದ ಮನೆಗೆ ಟೆರೇಸ್ ಮೇಲೆ ಜಿಗಿಯುತ್ತಾ ಬಂದಿದ್ದ ಯುವಕ

    ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು 1996ರಲ್ಲಿ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷವನ್ನು ಸ್ಥಾಪಿಸಿದ್ದರು. ಸಾಕಷ್ಟು ರಾಜಕೀಯ ಸಂಘರ್ಷಗಳ ಬಳಿಕ 2018ರಲ್ಲಿ ಅವರ ಪಕ್ಷ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಇಮ್ರಾನ್ ಖಾನ್ ಪ್ರಧಾನಿಯಾಗುವುದರಲ್ಲಿ ಯಶಸ್ವಿಯಾಗಿದ್ದರು. ಇದನ್ನೂ ಓದಿ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್; 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!

    ಇದೀಗ ಪಿಟಿಐ ಪಕ್ಷ ವಿದೇಶಿ ಮೂಲಗಳಿಂದ ಅಕ್ರಮವಾಗಿ ಹಣ ಸ್ವೀಕರಿಸಿರುವ ಬಗ್ಗೆ ಪುರಾವೆಗಳಿವೆ. ಅದೂ ಅಲ್ಲದೇ ಆ ಹಣವನ್ನು ಬಳಸಿಕೊಂಡು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಬಯಲಾಗಿದೆ. ವಿದೇಶಿ ನಿಧಿ ಪ್ರಕರಣ, ಮೇ 9 ರ ಗಲಭೆಗಳು, ಸೈಫರ್ ಎಪಿಸೋಡ್ ಮತ್ತು ಯುಎಸ್‌ನಲ್ಲಿ ಅಂಗೀಕರಿಸಿದ ನಿರ್ಣಯದ ದೃಷ್ಟಿಯಿಂದ, ಪಿಟಿಐ ಅನ್ನು ನಿಷೇಧಿಸಲು ಸಾಕಷ್ಟು ವಿಶ್ವಾಸಾರ್ಹ ಪುರಾವೆಗಳಿವೆ. ಹೀಗಾಗಿ ಅದನ್ನು ಬ್ಯಾನ್‌ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಗುಂಡಿನ ದಾಳಿ 

    2022ರಲ್ಲಿ ವಿಶ್ವಾಸ ಮತ ಕಳೆದುಕೊಂಡ ಬಳಿಕ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರ ಪತನಗೊಂಡಿತ್ತು. ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ನೇತತ್ವದ ಸರ್ಕಾರ ರಚನೆಯಾಗಿತ್ತು. ಅದರ ಬೆನ್ನಲ್ಲೇ ಇಮ್ರಾನ್ ಖಾನ್ ಅವರನ್ನು ಸಂಪೂರ್ಣವಾಗಿ ಹಣಿಯುವ ಪ್ರಯತ್ನಗಳು ಆರಂಭವಾಗಿದ್ದವು. ಉಡುಗೊರೆಗಳ ದುರ್ಬಳಕೆ ಸೇರಿದಂತೆ ಅನೇಕ ಹಗರಣಗಳ ಅಡಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಪ್ರಸ್ತುತ ಅವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿದ್ದಾರೆ.

  • ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿಯ ಹತ್ಯೆ: ಬಿಎಸ್‌ಎಫ್‌

    ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿಯ ಹತ್ಯೆ: ಬಿಎಸ್‌ಎಫ್‌

    ಶ್ರೀನಗರ: ಭಾರತದ ಒಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿಯನ್ನು (Pakistan) ಹತ್ಯೆ ಮಾಡಲಾಗಿದೆ ಎಂದು ಬಿಎಸ್‌ಎಫ್‌ ತಿಳಿಸಿದೆ.

    ಗಡಿ ಭದ್ರತಾ ಪಡೆ (BSF) ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಹೊಡೆದುರುಳಿಸಿದೆ. ಅಧಿಕಾರಿಗಳ ಪ್ರಕಾರ, ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯ ಬಳಿ ಆತ ಒಳನುಗ್ಗಲು ಯತ್ನಿಸಿದ್ದನು.

    ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ರಾತ್ರಿ 8.20 ರ ಸುಮಾರಿಗೆ ಗಡಿಯಾಚೆಯಿಂದ ಈ ಭಾಗಕ್ಕೆ ನುಸುಳಲು ಪ್ರಯತ್ನಿಸಿದಾಗ ಪಾಕಿಸ್ತಾನಿ ಒಳನುಸುಳುಕೋರನ ಮೇಲೆ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಬಾರ್ಡರ್ ಔಟ್‌ಪೋಸ್ಟ್ ರೀಗಲ್ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಿಹೆಚ್‌ಡಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು

  • ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದ ರಣಬೀರ್

    ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದ ರಣಬೀರ್

    ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಎರಡು ತಿಂಗಳು ಹಿಂದೆ ಹೇಳಿದ್ದಾರೆ ಎನ್ನಲಾದ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ (Controversy). ರಣಬೀರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ವಿವಾದ ಭುಗಿಲೇಳುತ್ತಿದ್ದಂತೆಯೇ ನಟ ಉಲ್ಟಾ ಹೊಡೆದಿದ್ದಾರೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳುವ ಮೂಲಕ ವಿವಾದವನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ರಣಬೀರ್ ಕಪೂರ್ ಡಿಸೆಂಬರ್ ನಲ್ಲಿ ನಡೆದ ಚಿತ್ರೋತ್ಸವವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನಿ (Pakistani) ನಿರ್ದೇಶಕರೊಬ್ಬರು ‘ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸಲು ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಒಪ್ಪುತ್ತೀರಾ?’ ಎಂದು ಪ್ರಶ್ನೆಯನ್ನು ಕೇಳಿದ್ದರು. ಒಬ್ಬ ನಟನಾಗಿ ಯಾಕೆ ಮಾಡಬಾರದು? ಎನ್ನುವ ಉತ್ತರವನ್ನು ರಣಬೀರ್ ನೀಡಿದ್ದರು. ಈ ಮಾತೇ ಸದ್ಯ ಅವರಿಗೆ ಮುಳುವಾಗಿದೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಸದ್ಯ ರಣಬೀರ್ ‘ತು ಜೂತಿ ಮೇನ್ ಮಕ್ಕರ್’ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಅವರನ್ನು ಪಾಕಿಸ್ತಾನಿ ಕುರಿತಾಗಿ ಪ್ರಶ್ನೆಯನ್ನು ಕೇಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಹೇಳಿದ ರೀತಿಯೇ ಬೇರೆ ಇದೆ. ಅದನ್ನು ತಗೆದುಕೊಂಡು ರೀತಿ ನನಗೆ ಅಚ್ಚರಿ ಮೂಡಿಸಿದೆ. ನಾನೊಬ್ಬ ಕಲಾವಿದ. ಕಲಾವಿದನ ರೀತಿಯಲ್ಲೇ ನೋಡಬೇಕಿತ್ತು. ಆದರೆ, ಅದು ಹಾಗಾಗಲಿಲ್ಲ’ ಎಂದು ಉತ್ತರಿಸಿದ್ದಾರೆ.

    ಪಾಕಿಸ್ತಾನಿ ನಟ ಫವಾದ್ ಖಾನ್ ಜೊತೆ ರಣಬೀರ್ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ನಟಿಸಿದ್ದರು. ಆಗ ಪಾಕಿಸ್ತಾನಿ, ಇಂಡಿಯಾ ಅಂತ ಇರಲಿಲ್ಲ. ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನ ಜೊತೆ ನಟಿಸಿದ್ದೇವೆ ಎನ್ನುವುದೇ ಆಗಿತ್ತು ಎನ್ನುವ ಮಾತುಗಳನ್ನು ಆಡಿದ್ದಾರೆ. ಕಲೆ ದೇಶಕ್ಕಿಂತ ದೊಡ್ಡದಲ್ಲ ಎನ್ನುವ ಅರಿವು ನನಗಿದೆ ಎಂದು ಕೂಡ ಅವರು ಹೇಳಿದ್ದಾರೆ. ಆದರೂ, ವಿವಾದದ ಕಿಡಿ ಮಾತ್ರ ತಣ್ಣಗಾಗುವಂತೆ ಕಾಣುತ್ತಿಲ್ಲ.

  • ಪಾಕ್ ವ್ಯಕ್ತಿ ಭೇಟಿಯಾಗಲು ತೆರಳುತ್ತಿದ್ದ ಯುವತಿಯನ್ನು ಗಡಿಯಲ್ಲಿ ತಡೆದ ಪೊಲೀಸರು – ಲುಕ್‍ಔಟ್ ನೋಟಿಸ್ ಜಾರಿ

    ಪಾಕ್ ವ್ಯಕ್ತಿ ಭೇಟಿಯಾಗಲು ತೆರಳುತ್ತಿದ್ದ ಯುವತಿಯನ್ನು ಗಡಿಯಲ್ಲಿ ತಡೆದ ಪೊಲೀಸರು – ಲುಕ್‍ಔಟ್ ನೋಟಿಸ್ ಜಾರಿ

    ಭೋಪಾಲ್: ಮಧ್ಯಪ್ರದೇಶದ ರೇವಾ ಮೂಲದ ಯುವತಿಯೊಬ್ಬಳು ವ್ಯಕ್ತಿಯೊಬ್ಬನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳುತ್ತಿದ್ದಾಗ ಗಡಿಯಲ್ಲಿ ತಡೆದಿರುವ ಪೊಲೀಸರು ಲುಕ್‍ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

    ಪಾಕಿಸ್ತಾನದಲ್ಲಿದ್ದ ವ್ಯಕ್ತಿಯೊಬ್ಬನನ್ನು ರೇವಾದ 24 ವರ್ಷದ ಯುವತಿ ಭೇಟಿಯಾಗಲು ಹೋಗುತ್ತಿದ್ದಳು. ಈ ಹಿನ್ನೆಲೆ ಆಕೆಯ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಗಳು, ಯುವತಿಯನ್ನು ಅಟ್ಟಾರಿ-ವಾಘಾ ಗಡಿಯಲ್ಲಿ ತಡೆದಿದ್ದಾರೆ. ಯುವತಿಗೆ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ:  ಕೋಟೆನಾಡಿನ ಜಲಾಶಯಗಳ ಬಳಿ ಯದುವೀರ್ ಒಡೆಯರ್ ಫ್ಯಾಮಿಲಿ ರೌಂಡ್ಸ್ 

    Pakistani youth crosses border to 'meet woman he met on social media', detained | Cities News,The Indian Express

    ನಡೆದಿದ್ದೇನು?
    ಜೂನ್ 14 ರಂದು ಯುವತಿ ತನ್ನ ಮನೆ ಬಿಟ್ಟು ಹೋಗಿದ್ದಳು. ಈ ವೇಳೆ ಆಕೆಯ ಕುಟುಂಬದ ಸದಸ್ಯರಿಗೆ ಪಾಕಿಸ್ತಾನದ ಅಪರಿಚಿತ ಸಂಖ್ಯೆಯಿಂದ ಕರೆಗಳು ಬರುತ್ತಿದ್ದವು. ಈ ಹಿನ್ನೆಲೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ಹೇಳಿದ್ದಾರೆ.

    ಯುವತಿ ತನ್ನ ಮನೆಯವರಿಗೆ ತಿಳಿಯದೆ ಪಾಸ್‍ಪೋರ್ಟ್ ಪಡೆದಿರುವುದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಪಾಸ್‍ಪೋರ್ಟ್ ಬಗ್ಗೆ ತಿಳಿದುಬಂದ ನಂತರ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಯುವತಿಯನ್ನು ಅಟ್ಟಾರಿ-ವಾಘಾ ಗಡಿಯಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ರವಾದಿಂದ ನಮ್ಮ ತಂಡವು ಶನಿವಾರ ಪಂಜಾಬ್‍ಗೆ ತಲುಪಿ ಯುವತಿಯನ್ನು ಮರಳಿ ಕರೆತರುತ್ತಿದೆ. ನಾವು ಯುವತಿಯೊಂದಿಗೆ ಮಾತನಾಡಿದ ನಂತರ ಹೆಚ್ಚಿನ ವಿವರಗಳನ್ನು ಪಡೆಯುತ್ತೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ:  ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು

    ಕುಟುಂಬಕ್ಕೆ ಹೇಳಿದ್ದೇನು?
    ತಾನು ಪಾಕಿಸ್ತಾನಿ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದು, ಆತನನ್ನು ಭೇಟಿಯಾಗಲಿದ್ದೇನೆ ಎಂದು ಯುವತಿ ಈ ಹಿಂದೆಯೇ ಕುಟುಂಬದ ಸದಸ್ಯರಿಗೆ ತಿಳಿಸಿದ್ದಳು. ರೇವಾ ನಗರದ ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿ ಆದಿತ್ಯ ಪ್ರತಾಪ್ ಸಿಂಗ್ ಅವರು ಈ ಕುರಿತು ಮಾತನಾಡಿದ್ದು, ಈ ಯುವತಿ ಶಾಲಾ ಶಿಕ್ಷಕಿಯಾಗಿದ್ದಳು. ಆಕೆ ಪಾಕಿಸ್ತಾನಕ್ಕೆ ವೀಸಾ ಸಹ ಹೊಂದಿದ್ದಳು. ಅಲ್ಲದೇ ಯುವತಿಗೆ ಪಾಕಿಸ್ತಾನದಿಂದ ಫೋನ್ ಕರೆಗಳು ಬರುತ್ತಿತ್ತು ಎಂದು ತಿಳಿಸಿದ್ದಾರೆ.

    Live Tv

  • ಈ ಪಾಕ್ ನಟಿಯ ಗ್ರಹಚಾರ ನೆಟ್ಟಗಿಲ್ಲ: ಪಾಕಿಸ್ತಾನದಲ್ಲಿ ತಿನ್ನೋಕೆ ಏನೂ ಇಲ್ಲವಾ ಎಂದ ನೆಟ್ಟಿಗರು

    ಈ ಪಾಕ್ ನಟಿಯ ಗ್ರಹಚಾರ ನೆಟ್ಟಗಿಲ್ಲ: ಪಾಕಿಸ್ತಾನದಲ್ಲಿ ತಿನ್ನೋಕೆ ಏನೂ ಇಲ್ಲವಾ ಎಂದ ನೆಟ್ಟಿಗರು

    ಪಾಕಿಸ್ತಾನಿ ನಟಿ ಹೀರಾ ಸಲ್ಮಾನ್ ಸಲ್ಲದ ಕಾರಣಕ್ಕಾಗಿ ಟ್ರೋಲ್ ಆಗುತ್ತಿದ್ದರು. ತನ್ನ ಪತಿಯು ತನಗೆ ದಪ್ಪ ಇದ್ದಾಳೆ ಎಂದು ಹೇಳಿದ ಕಾರಣಕ್ಕಾಗಿ ಹತ್ತು ಕೇಜಿ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ ಹೀರಾ. ತೂಕ ಕಳೆದುಕೊಂಡು ತೆಪ್ಪಗಿದ್ದರೆ, ಅಲ್ಲಿಗೆ ಕತೆಯೇ ಮುಗಿದಿರೋದು. ಆದರೆ, ತಾನು ತಳ್ಳಗೆ ಆಗುವುದಕ್ಕೂ ಬಾಲಿವುಡ್ ನಟಿ ಕರೀನಾ ಕಪೂರ್ ದಪ್ಪಗಿರುವುದಕ್ಕೂ ಹೋಲಿಕೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಪಾಕ್ ನಟಿಯ ಜನ್ಮಜಾಲಾಡಿದ್ದಾರೆ ಕರೀನಾ ಅಭಿಮಾನಿಗಳು. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ನನ್ನ ಗಂಡ ನಾನು ದಪ್ಪಗಿದ್ದೇನೆ ಎಂದು ಹೇಳಿದ್ದಕ್ಕೆ ಅದನ್ನೇ ಸವಾಲಾಗಿ ತಗೆದುಕೊಂಡು ಹತ್ತು ಕೆಜಿ ತೂಕ ಕಡಿಮೆಮಾಡಿಕೊಂಡು ಇದೀಗ ಬಳುಕುವ ಬಳ್ಳಿ ಆಗಿದ್ದೇನೆ. ಪಾಪ, ಕರೀನಾ ಕಪೂರ್ ದಪ್ಪಗಿದ್ದಾರೆ. ಅವರಿಗೆ ಯಾರೂ, ಏನೂ ಹೇಳುವುದಿಲ್ಲವೆ? ಎಂದು ಈ ಹಿಂದೆ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹೀರಾ ಹರಿಬಿಟ್ಟಿದ್ದರು. ಇದೀಗ ಆ ವಿಡಿಯೋ ಕುರಿತಾಗಿ ಕರೀನಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಕರೀನಾ ದಪ್ಪ ಎಂದು ಹೇಳಿ ಸುಮ್ಮನಿದ್ದರೂ ಇಷ್ಟೊಂದು ವಿವಾದ ಆಗುತ್ತಿರಲಿಲ್ಲ. ತನ್ನನ್ನು ಕರೀನಾ ವಿರೋಧಿ ನಟಿಯರಿಗೆ ಹೋಲಿಸಿಕೊಂಡಿದ್ದ ಕರೀನಾ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಅಲ್ಲದೇ, ಬಾಲಿವುಡ್ ಕೆಲ ನಟಿಯರಂತೆ ನಾನೂ ಕೂಡ ಫಿಗರ್ ಮೆಂಟೇನ್ ಮಾಡಿಕೊಂಡಿದ್ದೇನೆ ಎಂದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ನಟಿಯರ ಹೆಸರು ಹೇಳಿದ್ದಾರೆ. ಹೀಗಾಗಿ ಹೀರಾ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಈ ಕುರಿತು ಕರೀನಾ ಕಪೂರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗಂತ ಕರೀನಾ ಅಭಿಮಾನಿಗಳು ಸುಮ್ಮನೆ ಕುಳಿತಿಲ್ಲ. ಹೀರಾ ಅವರ ಹತ್ತಾರು ಫೋಟೋಗಳನ್ನು ಬಳಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಆ ಟ್ರೋಲ್ ಆಗುತ್ತಿರುವ ಫೋಟೋದಲ್ಲಿ ಹೀರಾ ದಪ್ಪಗಿದ್ದಾರೆ.

  • ನೀಚರು, ನಿರ್ಲಜ್ಯರಿಂದ ಪಾಕಿಸ್ತಾನ ಪರ ಘೋಷಣೆ: ಮುತಾಲಿಕ್

    ನೀಚರು, ನಿರ್ಲಜ್ಯರಿಂದ ಪಾಕಿಸ್ತಾನ ಪರ ಘೋಷಣೆ: ಮುತಾಲಿಕ್

    ಬೆಳಗಾವಿ: ಮೈಸೂರು ನಂಜನಗೂಡು ತಾಲೂಕಿನ ಕೌಲಂದೆ ಗ್ರಾಮದಲ್ಲಿ ನೀಚರು, ನಿರ್ಲಜ್ಯರಿಂದ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಲಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

    1500+ Pakistan Flag Pictures | Download Free Images on Unsplash

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಅನ್ನ ತಿನ್ನುವ ಇಂತಹವರೆಲ್ಲ ದೇಶ ದ್ರೋಹಿಗಳು. ಪಾಕಿಸ್ತಾನದ ಮೇಲೆ ಪ್ರೀತಿ ಇದ್ರೆ ಅಲ್ಲಿಗೆ ಹೋಗಬೇಕು. ನಾನು ಕೂಡ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ ಎಂದರು. ಇದನ್ನೂ ಓದಿ: MDF ಚಿಹ್ನೆ, ಮೆಸೇಜ್ ನೋಡಿದ್ರೆ ಅಲ್‍ಖೈದಾ ಮಾದರಿ ಲಕ್ಷಣಗಳು ಕಾಣುತ್ತಿವೆ: ಮುತಾಲಿಕ್

    ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಶ್ರೀರಾಮಸೇನೆಯಿಂದ ಮೈಸೂರಿನ ‘ಕೌಲಂದೆ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

  • ಹಿಂದೂ ಬಾಲಕಿಯ ಬಲವಂತದ ಮತಾಂತರ – ಮದ್ವೆಯಾದ ಪಾಕ್ ವ್ಯಕ್ತಿ

    ಹಿಂದೂ ಬಾಲಕಿಯ ಬಲವಂತದ ಮತಾಂತರ – ಮದ್ವೆಯಾದ ಪಾಕ್ ವ್ಯಕ್ತಿ

    ಇಸ್ಲಾಮಾಬಾದ್: ಹಿಂದೂ ಬಾಲಕಿಯನ್ನು ಎಳೆದೊಯ್ದು ಮತಾಂತರ ಮಾಡಿ ಮದ್ವೆಯಾಗಿರುವ ಘಟನೆ ಸಿಂಧ್ ಪ್ರಾಂತ್ಯದ ತಂಗ್ವಾನಿಯಲ್ಲಿ ನಡೆದಿದೆ.

    13 ವರ್ಷದ ಬಾಲಕಿಯನ್ನು ಬಹಲ್ಕನಿ ಬುಡಕಟ್ಟಿನ ನಿವಾಸಿಯೊಬ್ಬ ಅಪಹರಿದ್ದು, ಬರೆಲ್ವಿ ಮೌಲ್ವಿ ಮಿಯಾನ್ ಮಿಥೋ ಬಲವಂತವಾಗಿ ಬಾಲಕಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅಪಹರಣಕಾರನೊಂದಿಗೆ ವಿವಾಹ ಮಾಡಿದ್ದಾನೆ.

    ಮಾರ್ಚ್ 8 ರಂದು ಐವರು ಆಯುಧಗಳೊಂದಿಗೆ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯವರಿಗೆ ಬೆದರಿಸಿ ಬಾಲಕಿಯನ್ನು ಅಪಹರಿಸಿದ್ದಾರೆ. ಇದೀಗ ಮತಾಂತರಮಾಡಿ ಆಕೆಗೆ ಮದುವೆ ಮಾಡಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ.

    ಹೆತ್ತವರ ಆಸೆಗೆ ವಿರುದ್ಧವಾಗಿ ನಾನು ಮದುವೆಯಾಗಿದ್ದೇನೆ. ಹೀಗಾಗಿ ನನ್ನ ಹೆತ್ತವರಿಗೆ ನನ್ನ ಮೇಲೆ ಕೋಪ ಇದೆ. ನನಗೆ 18 ವರ್ಷವಾಗಿದೆ. ನನಗೆ ರಕ್ಷಣೆ ಬೇಕೆಂದು ಎಂದು ಕೋರ್ಟ್ ಮುಂದೆ ಬಾಲಕಿ ಹೇಳಿಕೊಂಡಿದ್ದಾಳೆ.

    ಪೊಲೀಸರು ಸಿಂಧ್ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

  • ಭಾರತ-ಪಾಕ್ ಮಧ್ಯೆ ಅಕ್ಟೋಬರ್ ಇಲ್ಲವೇ ನವೆಂಬರ್‌ನಲ್ಲಿ ಯುದ್ಧ: ಪಾಕ್ ಸಚಿವ

    ಭಾರತ-ಪಾಕ್ ಮಧ್ಯೆ ಅಕ್ಟೋಬರ್ ಇಲ್ಲವೇ ನವೆಂಬರ್‌ನಲ್ಲಿ ಯುದ್ಧ: ಪಾಕ್ ಸಚಿವ

    ಇಸ್ಲಾಮಾಬಾದ್: ಭಾರತ-ಪಾಕ್ ಮಧ್ಯೆ ಅಕ್ಟೋಬರ್ ಇಲ್ಲವೇ ನವೆಂಬರ್ ತಿಂಗಳಿನಲ್ಲಿ ಯುದ್ಧ ನಡೆಯಲಿದೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ್ದಾರೆ.

    ರಾವಲ್ಪಿಂಡಿಯಲ್ಲಿ ಕಾಶ್ಮೀರ ವಿಚಾರವಾಗಿ ಮಾತನಾಡಿದ ಪಾಕ್ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್, ಈ ಬಾರಿಯ ಯುದ್ಧದ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಯಲಿದೆ ಅಂತ ಹೇಳಿಕೆ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ – ಪಾಕಿಸ್ತಾನ ಅಧ್ಯಕ್ಷರಿಗೆ ಟ್ವಿಟ್ಟರ್ ನೋಟಿಸ್

    ವಿಶ್ವಸಂಸ್ಥೆ ನಿಜವಾಗಿಯೂ ಈ ಸಮಸ್ಯೆಯನ್ನು ಬಗೆಹರಿಸಲು ಬಯಸಿದ್ದರೆ ಕಾಶ್ಮೀರದಲ್ಲಿ ಜನಾಭಿಪ್ರಾಯಕ್ಕೆ ಅವಕಾಶ ನೀಡಬಹುದಿತ್ತು. ಆದರೆ ಅದು ಆಗಲಿಲ್ಲ ಎಂದು ಕಾಶ್ಮೀರ ವಿಚಾರವಾಗಿ ಮೌನವಾಗಿರುವ ಮುಸ್ಲಿಂ ದೇಶಗಳ ವಿರುದ್ಧವೂ ಸಚಿವರು ಅಸಮಾಧಾನ ಹೊರಹಾಕಿದ್ದಾರೆ.

    ಕಾಶ್ಮೀರ ವಿಚಾರವಾಗಿ ಭಾರತದೊಂದಿಗೆ ಇನ್ನೂ ಮಾತುಕತೆ ಯೋಚಿಸುವವರು ಮೂರ್ಖರು. ಕಾಶ್ಮೀರ ವಿಚಾರ ಬಂದಾಗ ಚೀನಾ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ವಿಶ್ವಸಂಸ್ಥೆಯಲ್ಲಿ ಸೆಪ್ಟಂಬರ್ 27ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಹತ್ವದ ಭಾಷಣ ಮಾಡಲಿದ್ದಾರೆ. ಚೀನಾದ ನಮ್ಮೊಂದಿಗೆ ನಿಂತಿರುವುದು ನಮ್ಮ ಅದೃಷ್ಟ ಎಂದು ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.

    ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಬಾಂಬ್ ದಾಳಿ ಆಗಬಹುದು ಎಂದು ರಶೀದ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

    ದೇಶ ವಿಭಜನೆಯಾದಾಗಿನಿಂದ ಭಾರತ-ಪಾಕ್ 1965 ಮತ್ತು 1971ರಲ್ಲಿ ಎರಡು ಬಾರಿ ಯುದ್ಧ ಮಾಡಿವೆ. ನಮ್ಮ ಭೂಪ್ರದೇಶದಿಂದ ಒಳನುಸುಳುವವರನ್ನು ಹೊರಹಾಕಲು 1999ರ ಕಾರ್ಗಿಲ್ ಯುದ್ಧವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ನಡೆದಿತ್ತು. ಈ ಮೂರು ಬಗೆಯ  ಯುದ್ಧಗಳಲ್ಲಿಯೂ  ಪಾಕಿಸ್ತಾನ ಸೇನೆಯನ್ನು ಭಾರತ  ಹಿಮ್ಮೆಟ್ಟಿತ್ತು.

  • ಅಭಿನಂದನ್‍ಗೆ ಹೊಡೆದು, ಗಾಯಗೊಳಿಸಿದ್ದ ಪಾಕ್ ಯೋಧನನ್ನು ಹತ್ಯೆಗೈದ ಭಾರತೀಯ ಸೇನೆ

    ಅಭಿನಂದನ್‍ಗೆ ಹೊಡೆದು, ಗಾಯಗೊಳಿಸಿದ್ದ ಪಾಕ್ ಯೋಧನನ್ನು ಹತ್ಯೆಗೈದ ಭಾರತೀಯ ಸೇನೆ

    ನವದೆಹಲಿ: ಪಾಕ್ ಭೂಪ್ರದೇಶದಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದು ಹಿಂಸೆ ನೀಡಿದ್ದ ಪಾಕ್ ಯೋಧನೊಬ್ಬನನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ.

    ಪಾಕಿಸ್ತಾನದ ಅಹ್ಮದ್ ಖಾನ್ ಭಾರತೀಯ ಯೋಧರ ಗುಂಡಿಗೆ ಬಲಿಯಾದ ಯೋಧ. ಅಹ್ಮದ್ ಖಾನ್ ಪಾಕ್ ಸೇನೆಯಲ್ಲಿ ಸುಬೇದಾರ್ ಆಗಿ ಕೆಲಸ ಮಾಡುತ್ತಿದ್ದ. ಅಹ್ಮದ್ ಖಾನ್ ಆಗಸ್ಟ್ 17ರಂದು ಕಾಶ್ಮೀರದ ನಕ್ಯಾಲ್ ಗಡಿ ನಿಯಂತ್ರಣಾ ರೇಖೆಯ ಮೂಲಕ ಭಾರತದ ಭೂಪ್ರದೇಶದೊಳಕ್ಕೆ ನುಸುಳಲು ಯತ್ನಿಸಿದ್ದ. ಇದನ್ನು ಗಮನಿಸಿದ ನಮ್ಮ ಸೈನಿಕರು ಗುಂಡು ಹಾರಿಸಿದ್ದಾರೆ. ಪರಿಣಾಮ ಅಹ್ಮದ್ ಖಾನ್‍ಗೆ ಗುಂಡು ತಗುಲಿ ಪ್ರಾಣ ಬಿಟ್ಟಿದ್ದಾನೆ. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

     

    ಅಹ್ಮದ್ ಖಾನ್ ನೌಶೆರಾ ಸುಂದರ್ ಬಾನಿ ಹಾಗೂ ಪಲ್ಲಾನ್ ವಾಲಾ ಸೆಕ್ಟರ್ ಪ್ರದೇಶದಲ್ಲಿ ಭಾರತದೊಳಗೆ ನುಸುಳುವ ಉಗ್ರರಿಗೆ ಸಹಕರಿಸುತ್ತಿದ್ದ. ಉತ್ತಮ ತರಬೇತಿ ಪಡೆದಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸೇನಾ ಮೂಲಗಳಿಂದ ಲಭ್ಯವಾಗಿದೆ.

    ಕೃಷ್ಣ ಘಾಟಿ ಪ್ರದೇಶದಲ್ಲಿ ಆಗಸ್ಟ್ 17ರಂದು ಪಾಕ್ ಸೇನೆ ಗುಂಡಿನ ದಾಳಿ ನಡೆಸಿತ್ತು. ಈ ಮೂಲಕ ಅತಿಕ್ರಮಣಕಾರರು ಭಾರತದೊಳಗೆ ನುಸುಳಲು ಸಹಕರಿಸುತಿತ್ತು. ಇದರಿಂದಾಗಿ ಭಾರತೀಯ ಸೇನೆಯು ಪ್ರತಿ ದಾಳಿ ನಡೆಸಿದ ಸಂದರ್ಭದಲ್ಲಿ ಅಹಮ್ಮದ್ ಖಾನ್ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

    ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ವರ್ಧಮಾನ್ ತಮ್ಮ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕಿಸ್ತಾನದಲ್ಲಿ ಪತನಗೊಂಡಿತ್ತು. ಆಗ ಪಾಕ್ ಕೆಲ ಯೋಧರು ಅಭಿನಂದನ್ ಅವರ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅವರನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಸುಮಾರು 58 ಗಂಟೆಗಳ ಕಾಲ ಅಭಿನಂದನ್ ಪಾಕಿಸ್ತಾನದ ಕಸ್ಟಡಿಯಲ್ಲೇ ಇದ್ದರು. ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.