Tag: Pakistan women

  • ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಕೊಲಂಬೊ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪುರುಷರ ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಲ್ಲಿ ಸಾಕಷ್ಟು ವಿವಾದಗಳು ಕಂಡುಬಂದಿತ್ತು. ಆದ್ರೆ ಟೀಂ ಇಂಡಿಯಾ (Team India) ಲೀಗ್‌, ಸೂಪರ್‌-4 ಹಾಗೂ ಫೈನಲ್‌ನಲ್ಲಿ ಪಾಕ್‌ಗೆ ಸೋಲುಣಿಸುವ ಮೂಲಕ ತಿರುಗೇಟು ಕೊಟ್ಟಿತು. ಇದೀಗ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಗೂ ವಿವಾದ ಕಾಲಿಟ್ಟಿದೆ.

    ಈ ಬಾರಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ಭಾರತದ ಆತಿಥ್ಯದಲ್ಲೇ ಇದ್ದರೂ, ಪಾಕ್‌ ಜೊತೆಗಿನ ಸಂಘರ್ಷದಿಂದಾಗಿ ಶ್ರೀಲಂಕಾದಲ್ಲಿ ನಡೆಸಲಾಗುತ್ತಿದೆ. ಇಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮತ್ತು ಪಾಕ್‌ ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಪಾಕ್‌ ನಾಯಕಿ ಫಾತಿಮಾ ಸನಾ (Fatima Sana) ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟಿದ್ದಾರೆ. ಆದ್ರೆ ಟಾಸ್‌ ವೇಳೆ ಟೀಂ ಇಂಡಿಯಾ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಪಾಕ್‌ ನಾಯಕಿಯ ಕೈಕುಲುಕದೇ ಹಿಂದೆ ಸರಿದಿದ್ದಾರೆ. ಇದು ಪಾಕ್‌ ತಂಡಕ್ಕೆ ಮತ್ತೆ ಮುಜುಗರ ತರಿಸಿದೆ.

    ಟೀಂ ಇಂಡಿಯಾ ಪ್ಲೇಯಿಂಗ್‌-11
    ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲಿನ್‌ ಡಿಯೋಲ್‌, ಹರ್ಮನ್‌ ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರೊಡ್ರಿಗ್ಸ್‌, ದೀಪ್ತಿ ಶರ್ಮಾ, ರಿಚಾ ಘೋಷ್‌, ಸ್ನೇಹ್‌ ರಾಣಾ, ರೇಣುಕಾ ಸಿಂಗ್‌, ಕ್ರಾಂತಿ ಗೌಡ್‌, ಶ್ರೀ ಚಾರಣಿ.

    ಪಾಕ್‌ ಪ್ಲೇಯಿಂಗ್‌-11
    ಮುನಿಬಾ ಅಲಿ, ಸದಾಫ್ ಶಮಾಸ್, ಸಿದ್ರ್ ಅಮೀನ್, ರಮೆನ್ ಶಮೀಮ್, ಆಲಿಯಾ ರಿಯಾಜ್, ಸಿದ್ಧ ನವಾಜ್, ಫಾತಿಮಾ ಸನಾ (ನಾಯಕಿ), ನಟಾಲಿಯಾ ಪರ್ವೈಜ್, ಡಯಾನಾ ಬೇಗ್, ನಶ್ರ್ ಸಂಧು, ಸಾಲಿಯಾ ಇಕ್ಬಾಲ್.

  • ಪ್ರೇಮಿಗಾಗಿ ಪಾಕ್‌ ತೊರೆದು ಭಾರತಕ್ಕೆ ಬಂದ ಚೆಲುವೆ

    ಪ್ರೇಮಿಗಾಗಿ ಪಾಕ್‌ ತೊರೆದು ಭಾರತಕ್ಕೆ ಬಂದ ಚೆಲುವೆ

    ಚಂಡೀಗಢ: ಪ್ರೀತಿಗೆ ಗಡಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ತಾಯ್ನಾಡು ತೊರೆದು ಪ್ರೇಮಿಯನ್ನು ಸೇರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈಚೆಗೆ ಪಾಕಿಸ್ತಾನದಿಂದ ಭಾರತಕ್ಕೆ ಪ್ರೇಮಿಯನ್ನು ಅರಸಿ ಬಂದು ಸೀಮಾ ಹೈದರ್‌ ಸುದ್ದಿಯಾಗಿದ್ದರು. ಭಾರತದಿಂದ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ಹೋಗಿ ಪ್ರಿಯಕರನ ಸೇರಿದಳು. ಅದೇ ಮಾದರಿಯಲ್ಲಿ ಮತ್ತೊಂದು ಸುದ್ದಿ ಈಗ ಸದ್ದು ಮಾಡುತ್ತಿದೆ.

    ಪಾಕಿಸ್ತಾನದ ಮಹಿಳೆಯೊಬ್ಬರು (Pakistan Women) ಭಾರತಕ್ಕೆ ಬಂದು ಪ್ರಿಯಕರನ ಸೇರಿದ್ದಾರೆ. ಕರಾಚಿ ನಿವಾಸಿ ಜವೇರಿಯಾ ಖಾನುಮ್ ಅಮೃತಸರ ಜಿಲ್ಲೆಯ ಅಟ್ಟಾರಿಯಿಂದ ಭಾರತಕ್ಕೆ ಬಂದಿದ್ದಾರೆ. ಆಕೆ ನಿಶ್ಚಿತ ವರ ಸಮೀರ್ ಖಾನ್‌ನನ್ನು ಸೇರಿದ್ದಾಳೆ. ವಾಘಾ-ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಬಂದಿದ್ದು, ಕೋಲ್ಕತ್ತಾ ನಿವಾಸಿ ಸಮೀರ್‌ನನ್ನು ಮುಂದಿನ ವರ್ಷದ ಜನವರಿಯಲ್ಲಿ ಮದುವೆಯಾಗಲಿದ್ದಾರೆ. ಇದನ್ನೂ ಓದಿ: ಹಿಂಡೆನ್‌ಬರ್ಗ್‌ ಆರೋಪ ಅಪ್ರಸ್ತುತ – ಅಮೆರಿಕ ಹೇಳಿಕೆ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ

    ಖಾನುಮ್‌ಗೆ 45 ದಿನಗಳ ವೀಸಾವನ್ನು ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕವು ಭಾರತಕ್ಕೆ ಬರುವ ಆಕೆಯ ಯೋಜನೆಗೆ ಐದು ವರ್ಷಗಳ ಕಾಲ ಅಡ್ಡಗಾಲಾಗಿತ್ತು. ಮುಂದಿನ ವರ್ಷ ಜನವರಿಯಲ್ಲಿ ನಾವು ಮದುವೆಯಾಗುತ್ತೇವೆ ಎಂದು ಮಾಧ್ಯಮಗಳಿಗೆ ಜೋಡಿ ಪ್ರತಿಕ್ರಿಯಿಸಿದೆ.

    ನನಗೆ 45 ದಿನಗಳ ವೀಸಾ ನೀಡಲಾಗಿದೆ. ನಾನು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಆಗಮನದ ನಂತರ ನಾನು ಇಲ್ಲಿ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಐದು ವರ್ಷದ ನಂತರ ನನಗೆ ವೀಸಾ ಸಿಕ್ಕಿದೆ. ಇದನ್ನು ನಂಬಲಾಗುತ್ತಿಲ್ಲ ಎಂದು ಖಾನುಮ್‌ ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು? – ‘ಮಹಾರಾಜ’ನ ಪಟ್ಟದಾಸೆ

    2018 ರ ಸಂದರ್ಭದಲ್ಲಿ ಆಕೆ ಮೇಲೆ ನನಗೆ ಪ್ರೀತಿಯಾಯಿತು. ಜರ್ಮನಿಯಲ್ಲಿ ಓದುತ್ತಿದ್ದ ನಾನು ಭಾರತಕ್ಕೆ ವಾಪಸ್‌ ಬಂದೆ. ನನ್ನ ತಾಯಿಯ ಫೋನ್‌ನಲ್ಲಿ ಅವಳ ಫೋಟೋವನ್ನು ನೋಡಿದೆ. ನಾನು ಜವೇರಿಯಾಳನ್ನು ಮದುವೆಯಾಗುತ್ತೇನೆಂದು ನನ್ನ ತಾಯಿಗೆ ಹೇಳಿದೆ ಎಂದು ಸಮೀರ್‌ ಖಾನ್‌ ತಿಳಿಸಿದ್ದಾರೆ.

  • ಮೋದಿಗೆ ರಾಖಿ ಕಟ್ಟಲು ಭಾರತಕ್ಕೆ ಬರೋಕೆ ರೆಡಿಯಾಗಿದ್ದಾರೆ ಪಾಕಿಸ್ತಾನಿ ಸಹೋದರಿ

    ಮೋದಿಗೆ ರಾಖಿ ಕಟ್ಟಲು ಭಾರತಕ್ಕೆ ಬರೋಕೆ ರೆಡಿಯಾಗಿದ್ದಾರೆ ಪಾಕಿಸ್ತಾನಿ ಸಹೋದರಿ

    ಇಸ್ಲಾಮಾಬಾದ್‌/ನವದೆಹಲಿ: ರಕ್ಷಾ ಬಂಧನದ (Raksha Bandhan 2023) ಶುಭ ಸಂದರ್ಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ರಾಕಿ ಕಟ್ಟಲು ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ಅವರು ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ. ಕಳೆದ 30 ವರ್ಷಗಳಿಂದ ಪ್ರಧಾನಿ ಮೋದಿ ಅವರಿಗೆ ರಾಖಿ ಕಟ್ಟುತ್ತಿರುವ ಮೊಹ್ಸಿನ್‌ ಶೇಖ್‌ (Qamar Mohsin Sheikh) ಈ ಬಾರಿ ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡೂ ವರ್ಷಗಳು ಪ್ರಧಾನಿ ಮೋದಿಯವರನ್ನ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಕಳೆದ ಎರಡೂ ವರ್ಷಗಳು ಮನೆಯಲ್ಲೇ ತಯಾರಿಸಿದ ರಾಖಿಗಳನ್ನ ಅಂಚೆ ಮೂಲಕ ಕಳುಹಿಸಿದ್ದರು. ಜೊತೆಗೆ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಿಗಲೆಂದು ಶುಭ ಹಾರೈಸಿದ್ದರು. ಆದ್ರೆ ಈ ಬಾರಿ ಅವರು ಭಾರತಕ್ಕೆ ಬರೋದಕ್ಕೆ ಸಿದ್ಧವಾಗಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ಮಸೀದಿಯಲ್ಲಿ ನಮಾಜ್‌ ಮಾಡಿ ಮುಸ್ಲಿಮರ ಪ್ರಾರ್ಥನೆ

    ಇದೇ ಆಗಸ್ಟ್‌ 30 ರಂದು ರಕ್ಷಾಬಂಧನ ದಿನಕ್ಕೆ ದೆಹಲಿಗೆ ಬಂದಿಳಿಯುವುದಾಗಿ ತಿಳಿಸಿದ್ದಾರೆ. ಅಲ್ಲದೇ ನನ್ನ ಸಹೋದರ ಮೋದಿಗೆ ಓದುವ ಹವ್ಯಾಸವಿದೆ, ಓದುವುದು ಅಂದರೆ ಅವರಿಗೆ ತುಂಬಾ ಇಷ್ಟ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಲು ತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Chandrayaan-3; ರಾಜ್ಯದ ಎಲ್ಲಾ ಶಾಲೆಗಳಲ್ಲೂ ಲ್ಯಾಂಡಿಂಗ್‌ ನೇರ ಪ್ರಸಾರ: ಯೋಗಿ ಆದಿತ್ಯನಾಥ್‌

    ಮೋದಿ ಅವರಿಗೆ ಆ ದೇವರು ದೀರ್ಘಾಯುಷ್ಯ ಕೊಡಲಿ ಎಂದು ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ನನ್ನೆಲ್ಲಾ ಆಸೆಗಳನ್ನು ಈಡೇರಿಸುತ್ತವೆ ಎಂದು ನಾನು ನಂಬುತ್ತೇನೆ. ಈ ಹಿಂದೆ ನಾನು ಮೋದಿ ಗುಜರಾತಿನ ಮುಖ್ಯಮಂತ್ರಿ ಆಗಬೇಕು ಅಂತ ಪ್ರಾರ್ಥಿಸಿದ್ದಾಗ, ಮೋದಿ ಸಿಎಂ ಆಗಿದ್ದರು. ಹಾಗೆಯೇ 2024ರ ಚುನಾವಣೆಯಲ್ಲೂ ಅವರು ಮತ್ತೆ ಗೆಲ್ಲಬೇಕು ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ಅವರು ಈ ಹಿಂದೆ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದಾಗ ಶೇಖ್‌ ಅವರು ಮೊದಲ ವಾರ್ಷಿಕೋತ್ಸವ ಆಚರಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಚ್ಛೇದನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

    ವಿಚ್ಛೇದನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

    ವಾಷಿಂಗ್ಟನ್‌: ವಿಚ್ಛೇದನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಪಾಕಿಸ್ತಾನ ಮೂಲದ ಮಹಿಳೆ ತನ್ನ ಪತಿಯಿಂದ ಹತ್ಯೆಗೀಡಾಗಿರುವ ಘಟನೆ ಚಿಕಾಗೊದಲ್ಲಿ ನಡೆದಿದೆ.

    ಸಾನಿಯಾ ಖಾನ್‌ (29) ಹತ್ಯೆಯಾದ ಮಹಿಳೆ. ಪಾಕಿಸ್ತಾನಿ ಅಮೆರಿಕನ್ ಸಾನಿಯಾ ಖಾನ್ ಅವರು ಈಚೆಗೆ ಚಿಕಾಗೊಗೆ ಬಂದಿದ್ದರು. ಮನೆಯಿಂದ ಹೊರಗಡೆ ಹೋಗುತ್ತಿದ್ದಾಗ ಆಕೆ ಮಾಜಿ ಪತಿ ರಹೀಲ್ ಅಹ್ಮದ್ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಟ್ರಿಪ್‍ಗೆ ಕೈಕೊಟ್ಟ ಪತ್ನಿ- ಪಿಲ್ಲೊ ಜೊತೆ ಹೊರಟ ಪತಿ

    ಚಿಕಾಗೋ ಪೊಲೀಸರು ಗಸ್ತಿನಲ್ಲಿದ್ದಾಗ ಮಹಿಳೆ ಹಾಗೂ ವ್ಯಕ್ತಿಯೊಬ್ಬರು ಗುಂಡೇಟಿನಿಂದ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ. ವ್ಯಕ್ತಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಸ್ಥಳದಲ್ಲಿ ಬಿದ್ದಿದ್ದ ಗನ್‌ ವಶಕ್ಕೆ ಪಡೆದುಕೊಂಡಿದ್ದಾರೆ.

    ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿದ (2022ರ ವಾರ್ಷಿಕ ವರದಿ) ಜಾಗತಿಕ ಮಹಿಳೆಯರು, ಶಾಂತಿ ಮತ್ತು ಭದ್ರತಾ ಸೂಚ್ಯಂಕದಲ್ಲಿ 170 ದೇಶಗಳಲ್ಲಿ 167 ನೇ ಸ್ಥಾನದಲ್ಲಿರುವ ಪಾಕಿಸ್ತಾನದಲ್ಲಿ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳ ದುರುಪಯೋಗವಾಗುತ್ತಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ (ಹೆಚ್‌ಆರ್‌ಡಬ್ಲ್ಯೂ) ಉಲ್ಲೇಖಿಸಿದೆ. ಇದನ್ನೂ ಓದಿ: 75 ದೇಶಗಳಲ್ಲಿ ಮಂಕಿಪಾಕ್ಸ್ – ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ WHO

    ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿ, ಕೌಟುಂಬಿಕ ಹಿಂಸಾಚಾರ ಮತ್ತು ಬಲವಂತದ ಮದುವೆ ಸೇರಿದಂತೆ ಹೆಣ್ಣಿನ ಮೇಲಿನ ದೌರ್ಜನ್ಯ ಪಾಕಿಸ್ತಾನದಾದ್ಯಂತ ಸಾಮಾನ್ಯವಾಗಿದೆ ಎಂದು ಹೆಚ್‌ಆರ್‌ಡಬ್ಲ್ಯೂ ತಿಳಿಸಿದೆ.

    2017-18ರ ಪಾಕಿಸ್ತಾನದ ಜನಸಂಖ್ಯಾಶಾಸ್ತ್ರ ಮತ್ತು ಆರೋಗ್ಯ ಸಮೀಕ್ಷೆಯ ಮಾಹಿತಿಯ ಪ್ರಕಾರ, 15 ರಿಂದ 49 ವರ್ಷ ವಯಸ್ಸಿನ ಶೇ.28 ಹೆಣ್ಣುಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಹಿಂಸೆಯನ್ನು ಅನುಭವಿಸಿದ್ದಾರೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಕಪಟಿಯಲ್ಲ ದೇಶಭಕ್ತೆ- ಪಾಕ್ ಮಹಿಳೆಗೆ ಪ್ರಿಯಾಂಕಾ ತಿರುಗೇಟು

    ನಾನು ಕಪಟಿಯಲ್ಲ ದೇಶಭಕ್ತೆ- ಪಾಕ್ ಮಹಿಳೆಗೆ ಪ್ರಿಯಾಂಕಾ ತಿರುಗೇಟು

    ಲಾಸ್ ಎಂಜಲೀಸ್: ಪಾಕಿಸ್ತಾನದ ಮಹಿಳೆಯೊಬ್ಬರು ನಟಿ ಪ್ರಿಯಾಂಕಾ ಚೋಪ್ರಾರ ಜೈ ಹಿಂದ್ ಟ್ವೀಟ್ ಬಗ್ಗೆ ಪ್ರಶ್ನಿಸಿ, ಕಪಟಿ ಎಂದು ಕಿಡಿಕಾರಿದ್ದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ನಾನು ಕಪಟಿಯಲ್ಲಿ ದೇಶಭಕ್ತೆ ಎಂದು ತಿರುಗೇಟು ನೀಡಿದ್ದಾರೆ.

    ಶನಿವಾರದಂದು ಲಾಸ್ ಎಂಜಲೀಸ್‍ನಲ್ಲಿ ನಡೆದ ಬ್ಯೂಟಿಕಾನ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕೂತು ಪ್ರಿಯಾಂಕಾ ಜನರೊಂದಿಗೆ ಸಂವಾದ ಮಾಡುತ್ತಿದ್ದ ವೇಳೆ ಪಾಕಿಸ್ತಾನಿ ಮಹಿಳೆಯೊಬ್ಬರು ಅವರ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ನೀವು ಭಾರತ ಪಾಕ್ ಮೇಲೆ ದಾಳಿ ನಡೆಸಿದಾಗ ‘ಜೈ ಹಿಂದ್ ಇಂಡಿಯನ್ ಆಮ್ರ್ಡ್ ಫೋರ್ಸ್’ ಎಂದು ಟ್ವೀಟ್ ಮಾಡಿದ್ದೀರಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಗಳ ನಡುವೆ ಶಾಂತಿಯನ್ನು ಕಾಪಾಡುವ ಬದಲು ಪಾಕಿಸ್ತಾನದ ಮೇಲೆ ನಡೆದ ಪರಮಾಣು ಯುದ್ಧಕ್ಕೆ ಪೋತ್ಸಾಹ ನೀಡಿದ್ದೀರಿ. ನಮ್ಮಂತ ಲಕ್ಷಾಂತರ ಮಂದಿ ಪಾಕಿಸ್ತಾನಿಯರು ನಿಮ್ಮ ಕೆಲಸಕ್ಕೆ ಪ್ರೋತ್ಸಾಹಿಸಿದ್ದರು. ಆದರೆ ನೀವು ಹೀಗೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿ ಹರಿಹಾಯ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ನನಗೆ ಸಾಕಷ್ಟು ಮಂದಿ ಪಾಕಿಸ್ತಾನಿ ಸ್ನೇಹಿತರು ಇದ್ದಾರೆ. ಆದರೆ ನಾನು ಭಾರತದವಳು. ಯುದ್ಧ ನಿಜಕ್ಕೂ ನನಗೆ ಇಷ್ಟವಾದ ವಿಷಯವಲ್ಲ ಆದರೆ ನಾನು ದೇಶಭಕ್ತೆ. ನನ್ನನ್ನು ಪ್ರೀತಿಸುವ ಜನರ ಭಾವನೆಗಳಿಗೆ ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದರು. ಹಾಗೆಯೇ ನನ್ನ ಪ್ರಕಾರ ನಾವೆಲ್ಲರು ಒಂದು ರೀತಿಯ ಮಧ್ಯಮ ನೆಲವನ್ನು ಹೊಂದಿದ್ದೇವೆ. ನೀವು ಬಹುಶಃ ಹಾಗೆ ತಿಳಿದಿರಬಹುದು. ನೀವು ನನ್ನ ಬಳಿ ಬಂದು ದಯವಿಟ್ಟು ಕೂಗಬೇಡಿ. ನಾವೆಲ್ಲರು ಇಲ್ಲಿ ಪ್ರೀತಿ ಸಂದೇಶ ಸಾರಲು ಸೇರಿದ್ದೇವೆ ಎಂದು ಪಾಕ್ ಮಹಿಳೆಗೆ ತಿರುಗೇಟು ನೀಡಿದರು.

    ಜೈಷ್ ಉಗ್ರರು ಫೆ. 14ರಂದು ಪುಲ್ವಾಮದಲ್ಲಿ ಭಾರತೀಯ ಸಿಆರ್‌ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಫೆ. 26ರಂದು ಪಾಕಿಸ್ತಾನದ ಜೈಷ್ ಉಗ್ರ ಸಂಘಟನೆಯ ತರಬೇತಿ ನೆಲಗಳ ಮೇಲೆ ಭಾರತ ಏರ್‌ಸ್ಟ್ರೈಕ್  ನಡೆಸಿತ್ತು. ಹೀಗಾಗಿ ಅಂದು ಪ್ರಿಯಾಂಕಾ ‘ಜೈ ಹಿಂದ್ ಇಂಡಿಯನ್ ಆಮ್ರ್ಡ್ ಫೋರ್ಸ್’ ಎಂದು ಬರೆದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಭಾರತೀಯರು ಮೆಚ್ಚುಗೆ ಸೂಚಿಸಿದ್ದರು.