Tag: Pakistan vs India

  • ಭಾರತಕ್ಕೆ ಶರಣಾದ ಪಾಕ್‌; ಟೀಂ ಇಂಡಿಯಾಗೆ 7 ವಿಕೆಟ್‌ಗಳ ಭರ್ಜರಿ ಜಯ

    ಭಾರತಕ್ಕೆ ಶರಣಾದ ಪಾಕ್‌; ಟೀಂ ಇಂಡಿಯಾಗೆ 7 ವಿಕೆಟ್‌ಗಳ ಭರ್ಜರಿ ಜಯ

    – ಸಿಕ್ಸ್‌ ಹೊಡೆದು ಮ್ಯಾಚ್‌ ಗೆಲ್ಲಿಸಿದ ಕ್ಯಾಪ್ಟನ್‌ ಸೂರ್ಯ

    ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ 2025ರ ಟೂರ್ನಿಯ ಪಾಕ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾದ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಅಬ್ಬರಕ್ಕೆ ಪಾಕ್‌ ಮಣಿದಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 9 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿತು. ಭಾರತ ತಂಡ 15.5 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿದೆ.

    128 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಫೋರ್‌ ಮತ್ತು ಸಿಕ್ಸರ್‌ನೊಂದಿಗೆ ಉತ್ತಮ ಆರಂಭ ಪಡೆಯಿತು. ಅಭಿಷೇಕ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಆರಂಭದಲ್ಲೇ ಪಾಕ್‌ ಬೌಲರ್‌ಗಳನ್ನು ಬೆಂಡೆತ್ತಿದರು. ಈ ವೇಳೆ ಸ್ಕ್ರೀಜ್‌ ಬಿಟ್ಟು ಹೊಡೆಯಲು ಮುಂದಾದ ಗಿಲ್‌ ಸ್ಟಂಪ್‌ ಔಟ್‌ ಆದರು. ಕೇವಲ 10 ರನ್‌ ಗಳಿಸಿ ನಿರ್ಗಮಿಸಿದರು. ಶರ್ಮಾಗೆ ಸೂರ್ಯಕುಮಾರ್‌ ಯಾದವ್‌ ಜೊತೆಯಾದರು.

    13 ಬಾಲ್‌ಗೆ 4 ಫೋರ್‌, 2 ಸಿಕ್ಸರ್‌ನೊಂದಿಗೆ 31 ರನ್‌ ಬಾರಿಸಿದ ಶರ್ಮಾ ಕ್ಯಾಚ್‌ ನೀಡಿ ಔಟಾದರು. ಸೂರ್ಯಕುಮಾರ್‌ಗೆ ತಿಲಕ್‌ ವರ್ಮಾ ಜೊತೆಯಾಗಿ ಜವಾಬ್ದಾರಿಯುತ ಆಟವಾಡಿದರು. ಈ ಜೋಡಿ 56 ರನ್‌ಗಳ ಜೊತೆಯಾಟವಾಗಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ದಿತು. ವರ್ಮಾ 31 ರನ್‌ ಗಳಿಸಿ ಔಟಾದರು. ಸೂರ್ಯಗೆ ಶಿವಂ ದುಬೆ ಜೊತೆಯಾಗಿ ಉತ್ತಮ ಆಟವಾಡಿದರು.

    ಸೂರ್ಯಕುಮಾರ್‌ ಯಾದವ್‌ ಔಟಾಗದೇ 5 ಫೋರ್‌, 1 ಸಿಕ್ಸರ್‌ನೊಂದಿಗೆ 47 ರನ್‌ ಗಳಿಸಿದರು. ಸಿಕ್ಸರ್‌ ಸಿಡಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು. ಪಾಕ್‌ ಪರ ಸೈಮ್ ಅಯೂಬ್ ಒಬ್ಬರೇ 3 ವಿಕೆಟ್‌ ಪಡೆದರು.

    ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಹಾರ್ದಿಕ್‌ ಪಾಂಡ್ಯ ಎಸೆದ ಮೊದಲ ಎಸೆತದಲ್ಲೇ ಸೈಮ್‌ ಅಯೂಬ್‌ ವಿಕೆಟ್‌ ಒಪ್ಪಿಸಿ ಹೊರ ನಡೆದರು. ತಂಡದ ಮೊತ್ತ 6 ರನ್‌ ಇರುವಾಗಲೇ ಮತ್ತೊಂದು ವಿಕೆಟ್‌ ಬಿತ್ತು. ಮೊದಲೆರಡು ಓವರ್‌ನಲ್ಲೇ 2 ವಿಕೆಟ್‌ ಕಳೆದುಕೊಂಡ ಪಾಕ್‌ ಸಂಕಷ್ಟ ಅನುಭವಿಸಿತು.

    ಸಾಹಿಬ್‌ಜಾದಾ ಫರ್ಹಾನ್ ಏಕಾಂಗಿ ಹೋರಾಟ ನಡೆಸಿ 40 ರನ್‌ ಗಳಿಸಿದರು. ಉಳಿದಂತೆ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದರು. ಕೆಳ ಕ್ರಮಾಂಕದಲ್ಲಿ ಶಾಹಿನ್‌ ಶಾ ಅಫ್ರಿದಿ 16 ಬಾಲ್‌ಗೆ 33 ರನ್‌ ಗಳಿಸಿ ತಂಡದ ಮೊತ್ತ 100 ರನ್‌ ದಾಟುವಲ್ಲಿ ನೆರವಾದರು.

    ಭಾರತ ತಂಡದ ಬೌಲರ್‌ಗಳ ದಾಳಿಗೆ ಪಾಕ್‌ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಹೋದರು. ಸ್ಪಿನ್‌ ಜಾದು ಮಾಡಿದ ಕುಲ್ದೀಪ್‌ ಯಾದವ್‌ 3 ವಿಕೆಟ್‌ ಕಿತ್ತು ಮಿಂಚಿದರು. ಅಕ್ಷರ್‌ ಪಟೇಲ್‌ ಮತ್ತು ಬುಮ್ರಾ ತಲಾ 2, ಹಾರ್ದಿಕ್‌ ಪಾಂಡ್ಯ ಮತ್ತು ವರುಣ್‌ ಚಕ್ರವರ್ತಿ ತಲಾ 1 ವಿಕೆಟ್‌ ಪಡೆದರು.

  • ಪಾಕಿಸ್ತಾನ ಆಲೌಟ್‌ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

    ಪಾಕಿಸ್ತಾನ ಆಲೌಟ್‌ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

    – ಬೌಲಿಂಗ್‌ನಲ್ಲಿ ಮಿಂಚಿದ ಕುಲ್ದೀಪ್‌ ಯಾದವ್‌
    – ಅರ್ಧಶತಕ ಗಳಿಸಿದ ಸೌದ್ ಶಕೀಲ್

    ದುಬೈ: ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ 241ಕ್ಕೆ ಆಲೌಟ್‌ ಆಗಿ ಭಾರತಕ್ಕೆ 242 ರನ್‌ಗಳ ಗುರಿ ನೀಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 10 ರನ್‌ಗಳಿಗೆ ಇಮಾಮ್-ಉಲ್-ಹಕ್ ಮತ್ತು 23 ರನ್‌ ಗಳಿಸಿ ಬಾಬರ್ ಅಜಮ್ ವಿಕೆಟ್‌ ಒಪ್ಪಿಸಿದ್ದು, ಪಾಕ್‌ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

    52 ರನ್‌ ಇರುವಾಗಲೇ ಪಾಕಿಸ್ತಾನ ಎರಡು ವಿಕೆಟ್‌ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಸೌದ್ ಶಕೀಲ್ ಮತ್ತು ಕ್ಯಾಪ್ಟನ್‌ ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 144 ಬಾಲ್‌ಗಳಿಗೆ 104 ರನ್‌ ಗಳಿಸಿ ಭರವಸೆ ಮೂಡಿಸಿತು. ಸೌದ್‌ ಶಕೀಲ್‌ ಅರ್ಧಶತಕ (62 ರನ್‌, 76 ಬಾಲ್‌, 5 ಫೋರ್) ಸಿಡಿಸಿದರು.‌ ರಿಜ್ವಾನ್‌ 46 ರನ್‌ ಗಳಿಸಿದರು.

    ರಿಜ್ವಾನ್‌ ವಿಕೆಟ್‌ ಒಪ್ಪಿಸಿ ಹೊರನಡೆಯುತ್ತಿದ್ದಂತೆ ಮ್ಯಾಚ್‌ ಪಥವೇ ಬದಲಾಯಿತು. ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲದೇ ವಿಕೆಟ್‌ಗಳನ್ನು ಒಪ್ಪಿಸಿ ಹೊರ ನಡೆದರು. ಸಲ್ಮಾನ್ ಆಘಾ 19, ತಯ್ಯಬ್ ತಹಿರ್ 4 ರನ್‌ ಗಳಿಸಿ ಔಟಾದರು.

    ಖುಷ್ದಿಲ್ ಷಾ 38 ರನ್‌ ಗಳಿಸಿದರು. ಶಾಹೀನ್ ಶಾ ಅಫ್ರಿದಿ ಶೂನ್ಯ ಸುತ್ತಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು. ನಸೀಮ್ ಷಾ 14 ರನ್‌ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 49.4 ಬಾಲ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತು.

    ಟೀಂ ಇಂಡಿಯಾ ಪರ ಕುಲ್ದೀಪ್‌ ಯಾದವ್‌ 3 ವಿಕೆಟ್‌ ಕಿತ್ತು ಸ್ಪಿನ್‌ ಮೋಡಿ ಮಾಡಿದರು. ಹಾರ್ದಿಕ್ ಪಾಂಡ್ಯ 2, ಹರ್ಷಿತ್ ರಾಣಾ, ಅಕ್ಷರ್ ಪಟೇಲ್‌, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್‌ ಕಿತ್ತರು.

  • Champions Trophy: ಟಿವಿಯಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ವೀಕ್ಷಿಸಿದ ಹೆಚ್‌ಡಿಕೆ

    Champions Trophy: ಟಿವಿಯಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ವೀಕ್ಷಿಸಿದ ಹೆಚ್‌ಡಿಕೆ

    ಬೆಂಗಳೂರು: ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯವನ್ನು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವೀಕ್ಷಿಸಿದರು.

    ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿಕೆ ಪಂದ್ಯ ವೀಕ್ಷಣೆ ಮಾಡಿದರು.

    ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ನಡೆಯುತ್ತಿದೆ. ಟಾಸ್‌ ಗೆದ್ದಿರುವ ಪಾಕಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

    ಸದ್ಯ 32 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ ಪಾಕಿಸ್ತಾನ 142 ರನ್‌ ಗಳಿಸಿದೆ. ಇಮಾಮ್-ಉಲ್-ಹಕ್ 10, ಬಾಬರ್ ಅಜಮ್ 23 ರನ್‌ ಗಳಿಸಿ ಔಟಾಗಿದ್ದಾರೆ. ಸೌದ್ ಶಕೀಲ್ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇವರಿಗೆ ಮೊಹಮ್ಮದ್‌ ರಿಜ್ವಾನ್‌ (42) ಸಾಥ್‌ ನೀಡಿದ್ದಾರೆ.