Tag: Pakistan visa

  • ಏ.27ರೊಳಗೆ ಭಾರತ ಬಿಟ್ಟು ತೊಲಗಿ – ಪಾಕ್ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್

    ಏ.27ರೊಳಗೆ ಭಾರತ ಬಿಟ್ಟು ತೊಲಗಿ – ಪಾಕ್ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್

    -ಮೆಡಿಕಲ್ ವೀಸಾಗಳಿಗೆ ಏ.29ರವರೆಗೆ ಅವಕಾಶ

    ನವದೆಹಲಿ: ಜಮ್ಮು ಕಾಶ್ಮೀರದ (Jammu Kashmir) ಪಹಗ್ಲಾಮ್ (Pahalgam) ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್ ನೀಡಿದೆ. ಈ ಮೂಲಕ ಪಾಕ್ ಪ್ರಜೆಗಳ ಎಲ್ಲಾ ರೀತಿಯ ವೀಸಾಗಳನ್ನು ಸರ್ಕಾರ ಗುರುವಾರ ಸ್ಥಗಿತಗೊಳಿಸಿದ್ದು, ಮೆಡಿಕಲ್ ವೀಸಾಗಳಿಗೆ (Medical Visa) ಏ.29ರವೆಗೆ ಅವಕಾಶ ನೀಡಿದೆ.

    ಎಲ್ಲಾ ರೀತಿಯ ವೀಸಾಗಳನ್ನು ಗುರುವಾರ ಸ್ಥಗಿತಗೊಳಿಸಿದ್ದು, ಏ.27ರೊಳಗೆ ಭಾರತ ತೊರೆಯುವಂತೆ ಸೂಚಿಸಿದೆ. ವೈದ್ಯಕೀಯ ವೀಸಾಗಳು ಏ.29ರವರೆಗೆ ಮಾನ್ಯವಾಗಿರಲಿದ್ದು, ಬಳಿಕ ರದ್ದಾಗಲಿವೆ ಎಂದು ತಿಳಿಸಿದೆ.ಇದನ್ನೂ ಓದಿ: ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್‌

    ವಿದೇಶಾಂಗ ಸಚಿವಾಲಯದ (Ministry of External Affairs) ಮಾಹಿತಿ ಪ್ರಕಾರ, ಏ.22 ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯ ಬಳಿಕ ಸಚಿವ ಸಂಪುಟ ಹಲವು ಭದ್ರತೆಯ ಕುರಿತಾದ ನಿರ್ಧಾರಗಳನ್ನು ಕೈಗೊಂಡಿದೆ. ಈ ನಿರ್ಧಾರದ ಮುಂದುವರಿದ ಭಾಗವಾಗಿ ಭಾರತ ಸರ್ಕಾರ (Indian Government) ತಕ್ಷಣವೇ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.

    ಜೊತೆಗೆ ಪಾಕಿಸ್ತಾನದಲ್ಲಿರುವ ಎಲ್ಲ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ಸಚಿವಾಲಯ ಸೂಚಿಸಿದೆ ಹಾಗೂ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ವೀಸಾ ಅವಧಿ ಮುಗಿಯುವ ಮೊದಲು ಭಾರತವನ್ನು ತೊರೆಯಬೇಕು ಎಂದು ಸೂಚಿಸಿದೆ.

    ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ (Vikram Misri) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಿಸಿಎಸ್ ಸಭೆಯ ನಂತರ, ಸರ್ಕಾರ ಪಾಕಿಸ್ತಾನಿ ಪ್ರಜೆಗಳ ಸಾರ್ಕ್ ವೀಸಾಗಳನ್ನು ಸ್ಥಗಿತಗೊಳಿಸಿತ್ತು. ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ಪಾಕ್ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸಲು ಅವಕಾಶವಿರುವುದಿಲ್ಲ ಮತ್ತು ಈ ಹಿಂದೆ ನೀಡಿದ್ದ ಎಲ್ಲಾ ಎಸ್‌ಪಿಇಎಸ್ ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿತ್ತು. ಪ್ರಸ್ತುತ ಎಸ್‌ಪಿಇಎಸ್ ವೀಸಾದಡಿಯಲ್ಲಿ ಭಾರತದಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯೊಳಗೆ ಭಾರತವನ್ನು ತೊರೆಯಲು ಕಾಲಾವಕಾಶವಿದೆ ಎಂದು ತಿಳಿಸಿದರು.ಇದನ್ನೂ ಓದಿ: ಪಹಲ್ಗಾಮ್ ದಾಳಿ | ಕೂಡಲೇ ಪಾಕ್‌ ತೊರೆಯಿರಿ ಭಾರತೀಯರಿಗೆ ಕೇಂದ್ರ ಸೂಚನೆ

  • 74 ವರ್ಷಗಳ ನಂತ್ರ ಸೋದರನ ಭೇಟಿಗೆ ಬಂದ ಭಾರತೀಯನಿಗೆ ಪಾಕಿಸ್ತಾನ ವೀಸಾ!

    74 ವರ್ಷಗಳ ನಂತ್ರ ಸೋದರನ ಭೇಟಿಗೆ ಬಂದ ಭಾರತೀಯನಿಗೆ ಪಾಕಿಸ್ತಾನ ವೀಸಾ!

    ಇಸ್ಲಾಮಾಬಾದ್: 74 ವರ್ಷಗಳ ನಂತರ ಕರ್ತಾರ್‌ಪುರದಲ್ಲಿ ಪಾಕಿಸ್ತಾನಿ ಸಹೋದರನನ್ನು ಭೇಟಿಯಾದ ಭಾರತೀಯನಿಗೆ ಪಾಕಿಸ್ತಾನ ವೀಸಾ ಸಿಕ್ಕಿದೆ.

    1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದಿದ್ದರು. ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‍ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್ ನಲ್ಲಿ ಮತ್ತೆ ಒಂದಾಗಿದ್ದರು. ಇದನ್ನೂ ಓದಿ: 74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು – ಭಾವನಾತ್ಮಕ ವೀಡಿಯೋ ವೈರಲ್

    74 ವರ್ಷಗಳ ಬಳಿ ಒಬ್ಬರನ್ನೊಬ್ಬರು ನೋಡಿದ ಸಹೋದರರು ಬಿಗಿದಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸಿರುವುದನ್ನು ವೀಡಿಯೋ ಈ ಹಿಂದೆ ವೈರಲ್ ಆಗಿತ್ತು. ಇದೀಗ ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಖಾನ್‍ಗೆ ಗಡಿಯಾಚೆಗಿನ ಅವರ ಸಹೋದರ ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ವೀಸಾವನ್ನು ನೀಡಿದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಸೌಂದರ್ಯ – ಬಿಎಸ್‌ವೈ ಸೇರಿ ಕುಟುಂಬಸ್ಥರಿಂದ ಅಂತ್ಯಕ್ರಿಯೆ

    ಟ್ವೀಟ್‍ನಲ್ಲಿ ಏನಿದೆ?: ಪಾಕಿಸ್ತಾನದ ಹೈಕಮಿಷನ್ ಸಿಕಾ ಖಾನ್‍ಗೆ ಪಾಕಿಸ್ತಾನದಲ್ಲಿರುವ ತನ್ನ ಸಹೋದರ, ಮುಹಮ್ಮದ್ ಸಿದ್ದಿಕ್ ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ವೀಸಾವನ್ನು ನೀಡುತ್ತದೆ. 1947ರಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು 74 ವರ್ಷಗಳ ನಂತರ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನಲ್ಲಿ ಇತ್ತೀಚೆಗೆ ಮತ್ತೆ ಒಂದಾದರು ಎಂದಿ ಟ್ವೀಟ್ ಮಾಡಿ ತಿಳಿಸಿದೆ.

    2019ರ ನವೆಂಬರ್ನಲ್ಲಿ ಪಾಕಿಸ್ತಾನವು ವೀಸಾ ಮುಕ್ತ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಐತಿಹಾಸಿಕ ಉದ್ಘಾಟನೆಯು, ಜನರನ್ನು ಪರಸ್ಪರ ಹೇಗೆ ಹತ್ತಿರ ತರುತ್ತಿದೆ ಎಂಬುದಕ್ಕೆ ಇಬ್ಬರು ಸಹೋದರರ ಕಥೆಯು ಪ್ರಬಲ ನಿದರ್ಶನವಾಗಿದೆ ಎಂದು ಹೈಕಮಿಷನ್ ಟ್ವೀಟ್‍ನಲ್ಲಿ ತಿಳಿಸಿದೆ.