Tag: pakistan supreme court

  • ಹಾರ್ಟ್‌ ಅಟ್ಯಾಕ್ ಆಗ್ಲಿ ಅಂತ ನನಗೆ ಇಂಜೆಕ್ಷನ್ ಕೊಟ್ಟಿದ್ರು: ಇಮ್ರಾನ್ ಖಾನ್

    ಹಾರ್ಟ್‌ ಅಟ್ಯಾಕ್ ಆಗ್ಲಿ ಅಂತ ನನಗೆ ಇಂಜೆಕ್ಷನ್ ಕೊಟ್ಟಿದ್ರು: ಇಮ್ರಾನ್ ಖಾನ್

    ಇಸ್ಲಾಮಾಬಾದ್: ನಿಧಾನವಾಗಿ ಹೃದಯಾಘಾತವನ್ನು ಉಂಟುಮಾಡಲು ತನಗೆ ಚುಚ್ಚು ಮದ್ದನ್ನು ನೀಡಲಾಯಿತು ಜೊತೆಗೆ ವಾಶ್ ರೂಂ ಅನ್ನು ಬಳಸಲು ಅನುಮತಿ ನೀಡಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದರು.

    ಈ ಬಗ್ಗೆ ಇಮ್ರಾನ್ ಖಾನ್ ಅವರ ವಕೀಲರು ಮಾತನಾಡಿ, ಬಿಡುಗಡೆ ನಂತರ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದೇವೆ. ಈ ವೇಳೆ ಇಮ್ರಾನ್ ಖಾನ್ ಎದೆ ನೋವಿನ ಬಗ್ಗೆ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಇಮ್ರಾನ್ ಖಾನ್‍ಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಅಷ್ಟೇ ಅಲ್ಲದೇ ನಿಧಾನವಾಗಿ ಹೃದಯಾಘಾತವಾಗಲು ಊಟದಲ್ಲಿ ಇನ್ಸುಲಿನ್ ಅನ್ನು ನೀಡಲಾಗಿದೆ. ಇಮ್ರಾನ್ ಖಾನ್‍ನನ್ನು ಕೊಲ್ಲುವ ಯತ್ನ ನಡೆಯುತ್ತಿದೆ. ಅವರಿಗೆ ಮಲುಗಲು ಬಿಡುತ್ತಿಲ್ಲ. ಶೌಚಾಲಯ ಹಾಗೂ ಹಾಸಿಗೆ ಇಲ್ಲದ ಕೊಳಕು ಕೊಣೆಯಲ್ಲಿ ಇರಿಸಲಾಗಿತ್ತು. ಅವರಿಗೆ ತಿನ್ನಲು ಏನನ್ನು ನೀಡಿರಲಿಲ್ಲ ಎಂದು ಕಿಡಿಕಾರಿದರು.

    ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ದ ವೇಳೆ ಜೈಲಿನಲ್ಲಿ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೇ ಇಮ್ರಾನ್ ಖಾನ್ ಬಂಧನದ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಹಿಂಸಾಚಾರಕ್ಕೆ ಆರ್‌ಎಸ್‌ಎಸ್, ಬಿಜೆಪಿಯೇ ಹೊಣೆ – ಶೆಹಬಾಜ್ ಷರೀಫ್ ಆಪ್ತ

     ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ (Former Prime Minister) ಇಮ್ರಾನ್ ಖಾನ್ (Imran Khan) (70) ಅವರ ಬಂಧನ ಕಾನೂನು ಬಾಹಿರವಾಗಿದೆ. ಅವರನ್ನೂ ತಕ್ಷಣ ಬಿಡುಗಡೆ ಮಾಡಬೇಕು ಎಂದು ಪಾಕ್‍ನ ಸುಪ್ರೀಂ ಕೋರ್ಟ್ (Pakistan Supreme Court) ಗುರುವಾರ ಆದೇಶಿಸಿತ್ತು. ಅಲ್ಲದೆ ಹೈಕೋರ್ಟ್‍ಗೆ (High Court) ಹಾಜರಾಗಲು ಬಂದಿದ್ದ ವೇಳೆ, ಕೋರ್ಟ್ ಆವರಣದಲ್ಲಿಯೇ ಅವರನ್ನು ಬಂಧಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಛೀಮಾರಿ ಹಾಕಿತ್ತು. ಇದನ್ನೂ ಓದಿ: ಇಮ್ರಾನ್‍ಖಾನ್‍ರನ್ನು ತಕ್ಷಣ ಬಿಡುಗಡೆಗೊಳಿಸಿ – ಪಾಕ್ ಸುಪ್ರೀಂ ಕೋರ್ಟ್

  • ಇಮ್ರಾನ್‍ಖಾನ್‍ರನ್ನು ತಕ್ಷಣ ಬಿಡುಗಡೆಗೊಳಿಸಿ – ಪಾಕ್ ಸುಪ್ರೀಂ ಕೋರ್ಟ್

    ಇಮ್ರಾನ್‍ಖಾನ್‍ರನ್ನು ತಕ್ಷಣ ಬಿಡುಗಡೆಗೊಳಿಸಿ – ಪಾಕ್ ಸುಪ್ರೀಂ ಕೋರ್ಟ್

    ಇಸ್ಲಾಮಾಬಾದ್: ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ (Former Prime Minister) ಇಮ್ರಾನ್ ಖಾನ್ (Imran Khan) (70) ಅವರ ಬಂಧನ ಕಾನೂನು ಬಾಹಿರವಾಗಿದೆ. ಅವರನ್ನೂ ತಕ್ಷಣ ಬಿಡುಗಡೆ ಮಾಡಬೇಕು ಎಂದು ಪಾಕ್‍ನ ಸುಪ್ರೀಂ ಕೋರ್ಟ್ (Pakistan Supreme Court) ಗುರುವಾರ ಆದೇಶಿಸಿದೆ.

    ಬಂಧನವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ (Chief Justice) ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಜರ್ ಮತ್ತು ಅಥರ್ ಮಿನಲ್ಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಅಲ್ಲದೆ ಹೈಕೋರ್ಟ್‍ಗೆ (High Court) ಹಾಜರಾಗಲು ಬಂದಿದ್ದ ವೇಳೆ, ಕೋರ್ಟ್ ಆವರಣದಲ್ಲಿಯೇ ಅವರನ್ನು ಬಂಧಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್- ಪ್ರತಿಭಟನೆಯಲ್ಲಿ 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

    ಇಮ್ರಾನ್ ಖಾನ್ ಅವರನ್ನು ಅಲ್ಲಿನ ಭ್ರಷ್ಟಚಾರ ನಿಗ್ರಹ ಸಂಸ್ಥೆ ಮೇ 9 ರಂದು ಬಂಧಿಸಿತ್ತು. ಅವರ ಬಂಧನವನ್ನು ವಿರೋಧಿಸಿ ಖಾನ್ ಬೆಂಬಲಿಗರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಿಯಂತ್ರಿಸಲು ಪಾಕ್ ಪಂಜಾಬ್ ಸೇರಿದಂತೆ ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಿತ್ತು. ಅಲ್ಲದೆ ದೇಶದಲ್ಲಿ ಇಂಟರ್‍ನೆಟ್ ಸೇವೆ ಬಂದ್ ಮಾಡಿತ್ತು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ – ಸಾವಿರ ಮಂದಿ ಬಂಧನ

  • ಪಾಕ್‌ ಸುಪ್ರೀಂ ಕೋರ್ಟ್‌ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೆಷಾ ಮಲಿಕ್‌ ಪ್ರಮಾಣ ವಚನ

    ಪಾಕ್‌ ಸುಪ್ರೀಂ ಕೋರ್ಟ್‌ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೆಷಾ ಮಲಿಕ್‌ ಪ್ರಮಾಣ ವಚನ

    ಇಸ್ಲಾಮಾಬಾದ್: ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶರಾಗಿ ಆಯೆಷಾ ಮಲಿಕ್‌ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಕಾನೂನನ್ನು ಮಹಿಳಾ ವಿರೋದ್ಧ ಪ್ರಯೋಜಿಸಲಾಗುತ್ತದೆ ಎಂಬ ಆರೋಪ ಹೊತ್ತಿರುವ ರಾಷ್ಟ್ರದಲ್ಲಿ ಈ ಬೆಳವಣಿಗೆ ನಿಜಕ್ಕೂ ಹೆಗ್ಗುರುತಾಗಿದೆ ಎಂದು ವಿಶ್ಲೇಷಿಸಲಾಗಿದೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಲಿಕ್‌ ಪಾಲ್ಗೊಂಡು ಪ್ರಮಾಣ ವಚನ ಸ್ವೀಕರಿಸಿದರು. ಪಾಕಿಸ್ತಾನದ ಅತ್ಯುನ್ನತ ನ್ಯಾಯಾಲಯದಲ್ಲಿ 16 ಪುರುಷ ನ್ಯಾಯಾಧೀಶರ ನಡುವೆ ಒಬ್ಬರೇ ಮಹಿಳಾ ನ್ಯಾಯಾಧೀಶೆಯಾಗಿ ಮಲಿಕ್‌ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯಿಷಾ ಮಲಿಕ್ ನೇಮಕ

    ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದು ಐತಿಹಾಸಿಕ ಕ್ಷಣವಾಗಿದೆ. ಪ್ರಗತಿಯ ಪ್ರಮುಖ ಹೆಜ್ಜೆ ಇದಾಗಿದೆ ಎಂದು ವಕೀಲೆ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಿಗತ್‌ ದಾದ್‌ ಅಭಿಪ್ರಾಯಪಟ್ಟಿದ್ದಾರೆ.

    ಹಾರ್ವರ್ಡ್‌ ಯೂನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಮಲಿಕ್‌ ಅವರು, ಕಳೆದೆರಡು ದಶಕಗಳಿಂದ ಲಾಹೋರ್‌ನ ಹೈಕೋರ್ಟ್‌ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ: WHO ಮುಖ್ಯಸ್ಥ

    ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯವನ್ನು ಪಡೆಯಲು ಪಾಕಿಸ್ತಾನದಲ್ಲಿ ಮಹಿಳೆಯರು ಹೆಚ್ಚು ಹೆಣಗಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬರು ಆ ದೇಶದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶೆಯಾಗಿರುವುದು ಮಹಿಳೆಯರಲ್ಲಿ ಆಶಾಭಾವನೆ ಮೂಡಿಸಿದೆ.

    PAK

    ಮಲಿಕ್‌ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿನ ಎಲ್ಲಾ ಅಡೆತಡೆಗಳನ್ನು ಮುರಿದಿದ್ದಾರೆ. ವ್ಯವಸ್ಥೆಯಲ್ಲಿ ಇತರ ಮಹಿಳೆಯರು ಮುಂದುವರಿಯಲು ಇದು ಅನುವು ಮಾಡಿಕೊಟ್ಟಂತಾಗಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಖದಿಜಾ ಸಿದ್ದಿಕಿ ತಿಳಿಸಿದ್ದಾರೆ.

    ಮಲಿಕ್‌ ಅವರು ಸುಪ್ರೀಂ ಕೋರ್ಟ್‌ಗೆ ನಾಮನಿರ್ದೇಶನಗೊಂಡಾಗ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಬಾರ್‌ ಕೌನ್ಸಿಲ್‌, ಮಲಿಕ್‌ ಅವರ ನಾಮನಿರ್ದೇಶನವನ್ನು ವಿರೋಧಿಸಿ ಮುಷ್ಕರ ನಡೆಸಿತ್ತು. ಇದನ್ನೂ ಓದಿ: ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ