Tag: Pakistan Super League

  • ಆಪರೇಷನ್ ಸಿಂಧೂರ ಬಳಿಕ ಪಾಕ್ ಸೂಪರ್ ಲೀಗ್ ತೊರೆಯಲು ಮುಂದಾದ್ರಾ ವಿದೇಶಿ ಪ್ಲೇಯರ್ಸ್‌?

    ಆಪರೇಷನ್ ಸಿಂಧೂರ ಬಳಿಕ ಪಾಕ್ ಸೂಪರ್ ಲೀಗ್ ತೊರೆಯಲು ಮುಂದಾದ್ರಾ ವಿದೇಶಿ ಪ್ಲೇಯರ್ಸ್‌?

    ಇಸ್ಲಾಮಾಬಾದ್: ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ (Indian Army) ನಡೆಸಿದ `ಆಪರೇಷನ್ ಸಿಂಧೂರ’ (Operation Operation) ಬಳಿಕ ವಿದೇಶಿ ಕ್ರಿಕೆಟಿಗರು ಪಾಕಿಸ್ತಾನ ಸೂಪರ್ ಲೀಗ್ (Pakistan Supre League) ತೊರೆಯಲು ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಏ.22ರಂದು ಪಹಲ್ಗಾಮ್‌ನ (Pahalgam Terrorist Attack) ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ಉಗ್ರರ ದಾಳಿಯಲ್ಲಿ 26 ಜನರು ಪ್ರಾಣತೆತ್ತರು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಮಂಗಳವಾರ ತಡರಾತ್ರಿ 1:44ರ ಸುಮಾರಿಗೆ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸೇಡು ತೀರಿಸಿಕೊಂಡಿದೆ.ಇದನ್ನೂ ಓದಿ:ಮಾದಕ ಲುಕ್‌ನಲ್ಲಿ ಮಿಂಚಿದ ವೈಷ್ಣವಿ – ಕೊಲ್ತಾಳಲ್ಲಪ್ಪೋ… ಅಂದ್ರು ನೆಟ್ಟಿಗರು

    ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆಯೂ ಪಾಕಿಸ್ತಾನ ಸೂಪರ್ ಲೀಗ್ ಪ್ರಕಟಗೊಂಡ ವೇಳಾಪಟ್ಟಿಯಂತೆ ಮುಂದುವರಿಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಿಳಿಸಿದೆ. ಈ ಕುರಿತು ಲೀಗ್‌ನಲ್ಲಿರುವ ಆರು ಫ್ರಾಂಚೈಸಿಗಳ ಮೂವರು ಮಾಧ್ಯಮ ವ್ಯವಸ್ಥಾಪಕರು ಮಾತನಾಡಿ, ಪ್ರತಿಯೊಂದು ಫ್ರಾಂಚೈಸಿಯೂ ಕನಿಷ್ಠ 5-6 ವಿದೇಶಿ ಆಟಗಾರರನ್ನು ಹೊಂದಿದ್ದು, `ಆಪರೇಷನ್ ಸಿಂಧೂರ’ ಬಳಿಕ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

    ಇಂದು ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವೆ ಪಂದ್ಯ ನಡೆಯುತ್ತಿದ್ದು, ಇನ್ನೂ 8, 9 ಮತ್ತು 10 ರಂದು ಇದೇ ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ. ಅರ್ಹತಾ ಪಂದ್ಯವು ಮೇ 13 ರಂದು ರಾವಲ್ಪಿಂಡಿಯಲ್ಲಿ ನಡೆಯಲಿದ್ದು, ಎಲಿಮಿನೇಟರ್ ಪಂದ್ಯ 1 ಮತ್ತು 2, ಮಾರ್ಕ್ಯೂ ಈವೆಂಟ್‌ನ ಫೈನಲ್ ಎರಡೂ ಕ್ರಮವಾಗಿ ಮೇ 14, 16 ಮತ್ತು 18 ರಂದು ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ.

    ಆದರೆ ಇಲ್ಲಿಯವರೆಗೆ ಯಾವುದೇ ವಿದೇಶಿ ಆಟಗಾರರು ಲೀಗ್ ತೊರೆಯುವ ಕುರಿತು ಮಾತನಾಡಿಲ್ಲ ಹಾಗೂ ಯಾವುದೇ ಮನವಿಯನ್ನು ಸಲ್ಲಿಸಿಲ್ಲ ಎಂದು ಪಿಸಿಬಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.ಇದನ್ನೂ ಓದಿ: ಶಿವನ ದೇಗುಲದಲ್ಲಿ ಮಂಡಿಯೂರಿ 108 ಮೆಟ್ಟಿಲು ಹತ್ತಿದ ಉರ್ಫಿ

  • ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ

    ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ

    ನವದೆಹಲಿ/ಇಸ್ಲಾಮಾಬಾದ್‌: ಮಹಿಳಾ ಪ್ರೀಮಿಯರ್‌ ಲೀಗ್‌ನ 2ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಆರ್‌ಸಿಬಿ ಮಹಿಳಾ ತಂಡ ʻಈ ಸಲ ಕಪ್‌ ನಮ್ದೆʼ ಎನ್ನುತ್ತಿದ್ದ ಅಭಿಮಾನಿಗಳ 16 ವರ್ಷಗಳ ಕನಸನ್ನು ನನಸು ಮಾಡಿದೆ. ಮಹಿಳಾ ಕ್ರಿಕೆಟಿಗರ ಗೆಲುವನ್ನು ದೇಶದ ಅಭಿಮಾನಿಗಳು ಇನ್ನೂ ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಪಾಕಿಸ್ತಾನ ಸೂಪರ್‌ ಲೀಗ್‌ (Pakistan Super League) ಟೂರ್ನಿಗಿಂತಲೂ ನಮ್ಮ ದೇಶದ ಡಬ್ಲ್ಯೂಪಿಎಲ್‌ ಹಾಗೂ ಐಪಿಎಲ್‌ (WPL And IPL) ಹೆಚ್ಚು ಶ್ರೀಮಂತ ಅನ್ನೋದು ಮತ್ತೊಂದು ಹೆಗ್ಗಳಿಕೆಯಾಗಿದೆ. ಇದನ್ನೂ ಓದಿ: RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

    ಕಳೆದ ಎರಡು ದಿನಗಳ ಹಿಂದೆಯಷ್ಟೇ 2024ನೇ ಆವೃತ್ತಿಯ ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯು ಮುಕ್ತಾಯಗೊಂಡಿತು. ಇಸ್ಲಾಮಾಬಾದ್ ಯುನೈಟೆಡ್ ಲೀಗ್‌ನ ಇತಿಹಾಸದಲ್ಲಿ 3ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಕ್ಕೆ ಒಂದು ದಿನ ಮುಂಚಿತವಾಗಿ ಭಾರತದಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2024) ಮುಕ್ತಾಯಗೊಂಡು ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಆದ್ರೆ ಪಾಕಿಸ್ತಾನ ಸೂಪರ್‌ ಲೀಗ್‌ ವಿಜೇತ ತಂಡಕ್ಕಿಂತಲೂ ಡಬ್ಲ್ಯೂಪಿಎಲ್‌ ಮಹಿಳಾ ತಂಡ ಪಡೆದ ಬಹುಮಾನ ದೊಡ್ಡಮಟ್ಟದ್ದು, ಅನ್ನೋದು ವಿಶೇಷ. ಅಲ್ಲದೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವುದೂ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇದನ್ನೂ ಓದಿ: ಟ್ರೋಫಿ ಗೆದ್ದು ಕೋಟಿ ಕೋಟಿ ದೋಚಿದ ಹೆಣ್ಮಕ್ಕಳು – ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

    ಸೂಪರ್‌ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ಇಸ್ಲಾಮಾಬಾದ್‌ ತಂಡ 14 ಕೋಟಿ ಪಾಕಿಸ್ತಾನ ರೂಪಾಯಿ (4.13 ಕೋಟಿ ರೂ. ಭಾರತದ ರೂಪಾಯಿಗಳಲ್ಲಿ) ಬಹುಮಾನ ಗಳಿಸಿತು. ರನ್ನರ್‌ ಅಪ್‌ ತಂಡವು 5.60 ಕೋಟಿ ರೂ. ಪಾಕಿಸ್ತಾನ ರೂಪಾಯಿ (1.65 ಕೋಟಿ ರೂ. ಭಾರತದ ರೂಪಾಯಿಗಳಲ್ಲಿ) ಸ್ವೀಕರಿಸಿತು. ಆದ್ರೆ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡ (ವಿಜೇತ ತಂಡ) ಸ್ವೀಕರಿಸಿದ ಬಹುಮಾನದ ಮೊತ್ತ ಬರೋಬ್ಬರಿ 6 ಕೋಟಿ ರೂ., ರನ್ನರ್‌ ಅಪ್‌ ತಂಡ 3 ಕೋಟಿ ರೂ. ದೋಚಿಕೊಂಡಿತು. ಇನ್ನೂ ವಿಶ್ವದ ಶ್ರೀಮಂತ ಲೀಗ್‌ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಐಪಿಎಲ್‌ನಲ್ಲಿ ವಿಜೇತ ತಂಡಕ್ಕೆ ಸಿಗುವ ಬಹುಮಾನ ಬರೋಬ್ಬರಿ 20 ಕೋಟಿ ರೂ. ಆಗಿದೆ, ರನ್ನರ್‌ ಅಪ್‌ ತಂಡಕ್ಕೆ 13 ಕೋಟಿ ರೂ. ಬಹುಮಾನ ನಿಗದಿಯಾಗಿದೆ. ಇದನ್ನೂ ಓದಿ: 16 ವರ್ಷಗಳ ಸಾರ್ಥಕ ಸಂಭ್ರಮ – ಆರ್‌ಸಿಬಿ ಕಪ್‌ ಗೆದ್ದ ನಂತ್ರ ಏನಾಯ್ತು? ಇಲ್ಲಿದೆ ಸ್ಪೆಷಲ್‌ ವೀಡಿಯೋ…

    2023ರ ಐಪಿಎಲ್‌ ಪ್ರಶಸ್ತಿ ವಿಜೇತ ತಂಡಗಳು:
    ವಿಜೇತ ತಂಡ: ಚೆನ್ನೈ ಸೂಪರ್ ಕಿಂಗ್ಸ್ – 20 ಕೋಟಿ ರೂ.
    ರನ್ನರ್ ಅಪ್ ತಂಡ: ಗುಜರಾತ್ ಟೈಟಾನ್ಸ್ – 13 ಕೋಟಿ ರೂ.

    2024ರ ಡಬ್ಲ್ಯೂಪಿಎಲ್‌ ಪ್ರಶಸ್ತಿ ವಿಜೇತ ತಂಡಗಳು ಮತ್ತು ಆಟಗಾರರು:
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಚಾಂಪಿಯನ್‌): 6 ಕೋಟಿ ರೂ.
    ಡೆಲ್ಲಿ ಕ್ಯಾಪಿಟಲ್ಸ್‌ (ರನ್ನರ್‌ ಅಪ್‌): 3 ಕೋಟಿ ರೂ.
    ಶಫಾಲಿ ವರ್ಮಾ (ಎಲೆಕ್ಟ್ರಿಕ್‌ ಸ್ಟ್ರೈಕರ್‌ ಆಫ್ ದಿ ಮ್ಯಾಚ್‌): 1 ಲಕ್ಷ ರೂ.
    ಶಫಾಲಿ ವರ್ಮಾ (ಸಿಕ್ಸರ್‌ ಆಫ್‌ ದಿ ಮ್ಯಾಚ್‌): 1 ಲಕ್ಷ ರೂ.
    ಶಫಾಲಿ ವರ್ಮಾ ( ಸಿಕ್ಸರ್‌ ಆಫ್‌ ದಿ ಸೀಸನ್‌): 5 ಲಕ್ಷ ರೂ.
    ಶ್ರೇಯಾಂಕಾ ಪಾಟೀಲ್‌ (ಉದಯೋನ್ಮುಖ ಆಟಗಾರ್ತಿ): 5 ಲಕ್ಷ ರೂ.
    ಎಲಿಸ್‌ ಪೆರ್ರಿ (ಆರಂಜ್‌ ಕ್ಯಾಪ್): 5 ಲಕ್ಷ ರೂ.
    ಶ್ರೇಯಾಂಕಾ ಪಾಟೀಲ್ (ಪರ್ಪಲ್‌ ಕ್ಯಾಪ್‌): 5 ಲಕ್ಷ ರೂ.
    ದೀಪ್ತಿ ಶರ್ಮಾ (ಅತ್ಯಂತ ಮೌಲ್ಯಯುತ ಆಟಗಾರ್ತಿ): 5 ಲಕ್ಷ ರೂ.

    2024ರ ಪಿಎಸ್ಎಲ್ ಪ್ರಶಸ್ತಿ ವಿಜೇತ ತಂಡಗಳು:
    ವಿಜೇತ ತಂಡ: ಇಸ್ಲಾಮಾಬಾದ್ ಯುನೈಟೆಡ್ – 4.13 ಕೋಟಿ ರೂ.
    ರನ್ನರ್ ಅಪ್ ತಂಡ: ಮುಲ್ತಾನ್‌ ಸುಲ್ತಾನ್ಸ್‌ – 1.65 ಕೋಟಿ ರೂ.

  • ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

    ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

    ಇಸ್ಲಾಮಾಬಾದ್‌: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ವಿದೇಶಗಳಲ್ಲೂ ಭಾರೀ ಸದ್ದು ಮಾಡುತ್ತಿದೆ. ಐಪಿಎಲ್‌ನಿಂದಾಗಿ ಪ್ರೇರಿತಗೊಂಡ ವಿದೇಶಿ ಕ್ರಿಕೆಟ್‌ ಮಂಡಳಿಗಳು ತಮ್ಮ ದೇಶಗಳಲ್ಲೂ ಟಿ20 ಲೀಗ್‌ಗಳನ್ನ ಆಯೋಜಿಸಲು ಪ್ರಾರಂಭಿಸಿವೆ. ಆದ್ರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್‌ (Wasim Akram) ತನ್ನ ದೇಶದ ಸೂಪರ್‌ ಲೀಗ್‌ಗಿಂತಲೂ ಭಾರತದ ಐಪಿಎಲ್‌ ದೊಡ್ಡದು ಎಂದು ಬಣ್ಣಿಸಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಾಸಿಂ ಅಕ್ರಮ್‌, ಪಾಕಿಸ್ತಾನದ ಸೂಪರ್‌ ಲೀಗ್‌ (Pakistan Super League) ಗಿಂತ ಐಪಿಎಲ್‌ ದೊಡ್ಡದು. ನಾನು ಐಪಿಎಲ್‌ ಹಾಗೂ ಪಿಎಸ್‌ಎಲ್‌ನಲ್ಲಿ ಕೆಲಸ ಮಾಡಿದ್ದೇನೆ. ಎರಡನ್ನ ಹೋಲಿಸೋದಕ್ಕೇ ಸಾಧ್ಯವಿಲ್ಲ, ಏಕೆಂದರೆ ಐಪಿಎಲ್‌ ತುಂಬಾ ದೊಡ್ಡ ಕ್ರೀಡೆ. ಆದ್ರೆ ಪಾಕಿಸ್ತಾನದ ಸೂಪರ್‌ ಲೀಗ್‌ ಅನ್ನು ಮಿನಿ ಐಪಿಎಲ್‌ ಎಂದು ಕರೆಯಬಹುದು, ಪಾಕ್‌ಗೆ ಅದೇ ದೊಡ್ಡದು ಎಂದಿದ್ದಾರೆ.

    ವಿಶ್ವದ ದುಬಾರಿ ಕ್ರೀಡೆ:
    2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ವಿಶ್ವದ ದುಬಾರಿ ಕ್ರೀಡೆ ಎಂದೇ ಖ್ಯಾತಿ ಪಡೆದುಕೊಂಡಿದೆ. ದೇಶ-ವಿದೇಶದ ಆಟಗಾರರು ಐಪಿಎಲ್‌ನಲ್ಲಿ ಆಡಬೇಕೆಂದು ಬಯಸುತ್ತಾರೆ. ಈ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಮಟ್ಟದಲ್ಲಿ ದಾಖಲೆಗಳನ್ನೂ ಮಾಡುತ್ತಿದ್ದಾರೆ. ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡಗಳಿಗೆ ಸೇರಲು ಇದು ಉತ್ತಮ ವೇದಿಕೆಯೂ ಆಗಿದೆ.

    IPL

    ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್‌:
    ಪ್ರತಿಷ್ಠಿತ ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಅರೇಬಿಯಾ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ, ಐಪಿಎಲ್‌ಗಿಂತಲೂ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಸಿದ್ಧತೆ ನಡೆಯುತ್ತಿದೆ. ಈಗಾಗಲೇ 2024ರ ಐಪಿಎಲ್‌ ಟೂರ್ನಿಗೂ ಸಾಕಷ್ಟು ಹಣ ಹೂಡಿಕೆ ಮಾಡಿರುವುದಾಗಿ ಪ್ರಮುಖ ಮೂಲಗಳು ತಿಳಿಸಿವೆ.

    2024ರ ಐಪಿಎಲ್‌ಗೆ ಭಾರೀ ಸಿದ್ಧತೆ:
    2024ರ ಐಪಿಎಲ್‌ ಟೂರ್ನಿಯೂ ಮಾರ್ಚ್‌ ತಿಂಗಳಿನಿಂದ, ಮೇ ಅಂತ್ಯದ ವರೆಗೆ ನಡೆಯುವ ಸಾಧ್ಯತೆಗಳಿವೆ. 2024ರ ಲೋಕಸಭಾ ಚುನಾವಣೆಯ ದಿನಾಂಕವನ್ನು ನೋಡಿಕೊಂಡು ಐಪಿಎಲ್‌ ಟೂರ್ನಿಯ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ. ಇನ್ನೂ 2024ರ ಐಪಿಎಲ್‌ಗೆ ಆಸೀಸ್‌ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 24.75 ಕೋಟಿ ರೂ.ಗಳಿಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಪಾಲಾಗಿದ್ದಾರೆ. ಮತ್ತೊಬ್ಬ ಆಸೀಸ್‌ ಆಲ್‌ರೌಂಡರ್‌ ಪ್ಯಾಟ್‌ ಕಮ್ಮಿನ್ಸ್‌ 20.50 ಕೋಟಿ ರೂ.ಗೆ ಸನ್‌ರೈಸರ್ಸ್‌ ಹೈದರಾಬಾದ್‌ ಪಾಲಾಗಿದ್ದು, ಐಪಿಎಲ್‌ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

  • ಪಾಕ್ ಆಲ್‍ರೌಂಡರ್ ಆಟಗಾರ ಹಫೀಸ್ ಮನೆಯಲ್ಲಿ ಕಳ್ಳತನ

    ಪಾಕ್ ಆಲ್‍ರೌಂಡರ್ ಆಟಗಾರ ಹಫೀಸ್ ಮನೆಯಲ್ಲಿ ಕಳ್ಳತನ

    ನವದೆಹಲಿ: ಪಾಕ್ ಆಲ್‌ರೌಂಡರ್ (All-rounder) ಕ್ರಿಕೆಟ್ (Cricket) ಆಟಗಾರ ಮೊಹಮ್ಮದ್ ಹಫೀಸ್ (Mohammed Hafeez) ಅವರ ಮನೆಗೆ ಕಳ್ಳರು ನುಗ್ಗಿ 20,000 ಯುಎಸ್ ಡಾಲರ್ ಹಣವನ್ನು ದೋಚಿದ ಪ್ರಕರಣ ನಡೆದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಹಫೀಸ್ ಸಂಬಂಧಿಯೊಬ್ಬರು, ಘಟನೆ ವೇಳೆ ಹಫೀಸ್ ಹಾಗೂ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.

    ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಹಫೀಸ್ ಪತ್ನಿಯ ಚಿಕ್ಕಪ್ಪ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಹಫೀಸ್ 2023ನೇ ಸಾಲಿನ ಪಾಕಿಸ್ತಾನ್ ಸೂಪರ್ ಲೀಗ್‍ನ (PSL) 8ನೇ ಆವೃತ್ತಿಯಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ

    ಲಾಹೋರ್ ಖಲಂದರ್ಸ್‍ (Lahore Qalandar) ಪಿಎಸ್‍ಎಲ್ (PSL) 2022ರ ಟ್ರೋಫಿ ಜಯಿಸುವಲ್ಲಿ ಹಫೀಸ್ ಪ್ರಮುಖ ಪಾತ್ರವಹಿಸಿದ್ದರು. ಮುಲ್ತಾನ್ ಸುಲ್ತಾನ್ಸ್ (Multan Sultans) ವಿರುದ್ಧದ ಫೈನಲ್ ಪಂದ್ಯದಲ್ಲಿ 46 ಎಸೆತಗಳಲ್ಲಿ 69 ರನ್ ಗಳಿಸಿದ್ದರು. ನಂತರದ ನಾಲ್ಕು ಓವರ್‍ಗಳಲ್ಲಿ 23 ರನ್‍ಗಳಿಗೆ 2 ವಿಕೆಟ್ ಪಡೆದು ಕಪ್ ಗೆಲ್ಲಿಸಿದ್ದರು. ಇದನ್ನೂ ಓದಿ: ಬಹುಕಾಲದ ಗೆಳತಿಯನ್ನ ವರಿಸಿದ ಲಂಕಾ ಕ್ರಿಕೆಟಿಗ ಹಸರಂಗ

  • ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    – ಕೊನೆಗೂ ಪಿಎಸ್‍ಎಲ್ ಮುಂದೂಡಿದ ಪಿಸಿಬಿ

    ಇಸ್ಲಾಮಾಬಾದ್: ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊಂಡುತನ ತೋರಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ನಡೆಸುತ್ತಿತ್ತು. ಕೊನೆಗೆ ಇಕ್ಕಟ್ಟಿಗೆ ಸಿಲುಕಿ ಈಗ ಟೂರ್ನಿಯನ್ನೇ ಮುಂದೂಡಿದೆ.

    ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಪಿಎಸ್‍ಎಲ್ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ.

    ಪಿಎಸ್‍ಎಲ್ ಟೂರ್ನಿಯ ಎರಡು ಸೆಮಿಫೈನಲ್ ಪಂದ್ಯಗಳು ಇಂದು ನಡೆಯಬೇಕಿತ್ತು. ಜೊತೆಗೆ ಫೈನಲ್ ಪಂದ್ಯ ಬುಧವಾರ ನಿಗದಿಯಾಗಿತ್ತು. ಕಳೆದ ವಾರವಷ್ಟೇ ಕರಾಚಿಯಲ್ಲಿ ಪಿಎಸ್‍ಎಲ್‍ಅನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಪಿಸಿಬಿ ನಿರ್ಧರಿಸಿತ್ತು. ಅದೇ ಸಮಯದಲ್ಲಿ ಟೂರ್ನಿಯನ್ನು 4 ದಿನ ಕಡಿಮೆಗೊಳಿಸಲಾಗಿತ್ತು. ಆದರೆ ವಿದೇಶಿ ಆಟಗಾರರು ದೇಶವನ್ನು ತೊರೆದ ನಂತರ ಟೂರ್ನಿಯನ್ನು ಮುಂದೂಡಲು ಪಿಸಿಬಿ ನಿರ್ಧರಿಸಿತು.

    ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡಿನ 6 ಆಟಗಾರರಿದ್ದಾರೆ. ಅವರೆಲ್ಲರೂ ಈಗ ದೇಶಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಹಿಂದುರುಗಿದ್ದಾರೆ.

    ಪಾಕಿಸ್ತಾನದಲ್ಲಿ ಒಟ್ಟು 184 ಕೊರೊನಾ ಕೇಸ್‍ಗಳು ಪತ್ತೆಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

  • ಫೀಲ್ಡರ್ ಕಡೆಗೆ ಬಾಲ್ ಎಸೆದು ಕೋಪ ಪ್ರದರ್ಶಿಸಿದ ಬೌಲರ್ : ವಿಡಿಯೋ ನೋಡಿ

    ಫೀಲ್ಡರ್ ಕಡೆಗೆ ಬಾಲ್ ಎಸೆದು ಕೋಪ ಪ್ರದರ್ಶಿಸಿದ ಬೌಲರ್ : ವಿಡಿಯೋ ನೋಡಿ

    ದುಬೈ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಿರುವ ಸೂಪರ್ ಲೀಗ್ ಸರಣಿಯ ಪಂದ್ಯದ ವೇಳೆ ಖಾಲಿ ಕ್ರೀಡಾಂಗಣದ ಫೋಟೋ ವೈರಲ್ ಆದ ಬಳಿಕ, ಈ ಬಾರಿ ಆನ್ ಫೀಲ್ಡ್ ನಲ್ಲಿ ಬೌಲರ್ ಒಬ್ಬ ತನ್ನ ಸಹ ಆಟಗಾರನ ಮೇಲೆ ಕೋಪ ಪ್ರದರ್ಶಿಸಿದ ವಿಡಿಯೋ ವೈರಲ್ ಆಗಿದೆ.

    ಲೀಗ್ ನಲ್ಲಿ ಬುಧವಾರ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಲಾಹೋರ್ ತಂಡಗಳ ನಡುವಿನ ಪಂದ್ಯದ ವೇಳೆ ಈ ವಿಶೇಷ ಘಟನೆ ನಡೆದಿದೆ.

    ಗೆಲುವಿನ ಸನಿಹದಲ್ಲಿದ್ದ ಲಾಹೋರ್ ತಂಡದ ಬೌಲರ್ ಸೊಹೈಲ್ ಖಾನ್, ಬೌಂಡರಿಯ ಗೆರೆ ಬಳಿ ಇದ್ದ ಯಾಸಿರ್ ಷಾ ಗಮನ ಸೆಳೆಯಲು ಪ್ರಯತ್ನಿಸಿ ವಿಫಲರಾಗಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ಸೊಹೈಲ್, ಯಾಸಿರ್ ಕಡೆಗೆ ಬಾಲ್ ಎಸೆದಿದ್ದಾರೆ.

    ಅದೃಷ್ಟವಶಾತ್ ಸೊಹೈಲ್ ಎಸೆದ ಬಾಲ್ ಯಾಸಿರ್ ತಲೆಗೆ ಬೀಳದೇ ಪಕ್ಕದಲ್ಲಿ ಬಿದ್ದಿದೆ. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಬಳಿಕ ಯಾಸಿರ್ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಚೆಂಡನ್ನು ಬೌಲರ್ ಕಡೆ ಎಸೆದಿದ್ದಾರೆ.

    ಈ ವೇಳೆ ಕ್ರೀಡಾಂಗಣದಲ್ಲಿದ್ದ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಇಬ್ಬರು ಆಟಗಾರರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು. ಕೊನೆಗೆ ಲಾಹೋರ್ ತಂಡ 17 ರನ್ ಗೆಲುವು ಪಡೆಯಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವಿನ ಸನ್ನಿವೇಶದ ವಿಡಿಯೋ ಹೆಚ್ಚು ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿ ಮರು ಟ್ವೀಟ್ ಮಾಡುತ್ತಿದ್ದಾರೆ.

    ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಲೀಗ್ ನಲ್ಲಿ ಆಡುತ್ತಿರುವ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ ಸನ್ ಈ ಘಟನೆಯನ್ನು ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ತಮಾಷೆಯ ಸನ್ನಿವೇಶ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    https://twitter.com/KP24/status/974031507919720449