Tag: Pakistan Soldiers

  • ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    – ನಿಷೇಧಿತ ಟಿಟಿಪಿ & ಪಾಕ್ ಭದ್ರತಾ ಪಡೆಗಳ ನಡುವೆ ಸಂಘರ್ಷ

    ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಉಗ್ರರು ಮತ್ತು ಪಾಕಿಸ್ತಾನ ಭದ್ರತಾ ಪಡೆಗಳ ನಡುಗೆ ಘರ್ಷಣೆ ಏರ್ಪಟ್ಟಿದೆ. ಘಟನೆಯಲ್ಲಿ 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಮೃತಪಟ್ಟಿದ್ದಾರೆ.

    ಅ.7-8 ರ ರಾತ್ರಿ ಫಿಟ್ನಾ ಅಲ್-ಖವಾರಿಜ್ ಎಂದು ಕರೆಯಲ್ಪಡುವ ಗುಂಪಿನ ಭಯೋತ್ಪಾದಕರಿರುವ ಮಾಹಿತಿ ಮೇರೆಗೆ ಅಫ್ಘಾನಿಸ್ತಾನದ ಗಡಿಯಲ್ಲಿರುವ ಒರಾಕ್ಜೈ ಜಿಲ್ಲೆಯಲ್ಲಿ ಪಾಕ್ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ ಬಳಿಕ ಈ ಘಟನೆ ನಡೆದಿದೆ. ಇದನ್ನೂ ಓದಿ: ಅಮೆರಿಕಕ್ಕೆ ಅಪರೂಪದ ಖನಿಜಗಳ ಮೊದಲ ರಫ್ತು ಕಳುಹಿಸಿದ್ದೇವೆ : ಪಾಕ್

    ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಭೀಕರ ಗುಂಡಿನ ಚಕಮಕಿಯಲ್ಲಿ, 19 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಸೇರಿದಂತೆ 11 ಪಾಕಿಸ್ತಾನಿ ಸೈನಿಕರು ಸಹ ಪ್ರಾಣ ಕಳೆದುಕೊಂಡಿದ್ದಾರೆ.

    ನಿಷೇಧಿತ ಟಿಟಿಪಿ 2022 ರ ನವೆಂಬರ್‌ನಲ್ಲಿ ಸರ್ಕಾರದೊಂದಿಗೆ ಕದನ ವಿರಾಮ ಕೊನೆಗೊಳಿಸಿದ ನಂತರ, ಪಾಕಿಸ್ತಾನವು ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನದಲ್ಲಿ ಉಗ್ರಗಾಮಿ ದಾಳಿಗಳಲ್ಲಿ ಹೆಚ್ಚಳವಾಗಿತ್ತು. ಈ ಗುಂಪು ಭದ್ರತಾ ಪಡೆಗಳು, ಪೊಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಇದನ್ನೂ ಓದಿ: S-400ಗೆ ಟಕ್ಕರ್‌ ಕೊಡಲು ತನ್ನದೇ ಮಿಸೈಲ್‌ ಅಭಿವೃದ್ಧಿಪಡಿಸಿದ ಪಾಕ್‌ – ಇದು ಬ್ರಹ್ಮೋಸ್‌ಗಿಂತ ಶಕ್ತಿಶಾಲಿಯೇ?

  • ಬಂಡುಕೋರರ ಜೊತೆ ಗುಂಡಿನ ದಾಳಿ; 18 ಪಾಕ್‌ ಸೈನಿಕರು ಸಾವು – 23 ಉಗ್ರರ ಹತ್ಯೆ

    ಬಂಡುಕೋರರ ಜೊತೆ ಗುಂಡಿನ ದಾಳಿ; 18 ಪಾಕ್‌ ಸೈನಿಕರು ಸಾವು – 23 ಉಗ್ರರ ಹತ್ಯೆ

    ಇಸ್ಲಾಮಾಬಾದ್‌: ಬಲೂಚಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಪ್ರತ್ಯೇಕತಾವಾದಿ ದಂಗೆಕೋರರೊಂದಿಗಿನ ಘರ್ಷಣೆಯಲ್ಲಿ ಪಾಕಿಸ್ತಾನದ 18 ಸೈನಿಕರು ಸಾವಿಗೀಡಾಗಿದ್ದಾರೆ. ಇದೇ ವೇಳೆ, 23 ಬಂಡುಕೋರರು ಹತರಾಗಿದ್ದಾರೆ.

    ಅಫ್ಘಾನಿಸ್ತಾನದ ಗಡಿಯಲ್ಲಿರುವ ಕಲಾತ್‌ನಲ್ಲಿ ಪ್ರಮುಖ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ ದಂಗೆಕೋರರ ವಿರುದ್ಧದ ಗುಂಡಿನ ದಾಳಿಯಲ್ಲಿ ಸೈನಿಕರು ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ.

    ಶನಿವಾರ ಬೆಳಿಗ್ಗೆ ರಾತ್ರಿಯಿಡೀ ನಡೆದ ಹೋರಾಟದ ನಂತರ ಭದ್ರತಾ ಪಡೆಗಳು ರಸ್ತೆ ತಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ.

    2024ರ ಡಿಸೆಂಬರ್‌ನಲ್ಲಿ ಭದ್ರತಾ ಪಡೆಗಳು 925 ದಂಗೆಕೋರರನ್ನು ಕೊಂದಿವೆ. ಇದು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ದಾಖಲೆಯ ಗರಿಷ್ಠ ಮಟ್ಟದ್ದಾಗಿದೆ. ಆದರೆ ಕಳೆದ ವರ್ಷ ಇಂತಹ ಕಾರ್ಯಾಚರಣೆಗಳಲ್ಲಿ 383 ಸೈನಿಕರು ಸಾವನ್ನಪ್ಪಿದ್ದರು.

    ಬಂಡುಕೋರರ ದಾಳಿಗಳನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಬಲೂಚಿಸ್ತಾನದ ಪ್ರಾಂತೀಯ ನಾಯಕರು ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ್ದಕ್ಕೆ ಸೇನೆಯನ್ನು ಶ್ಲಾಘಿಸಿದ್ದಾರೆ.

  • ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

    ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಬಾರಾಮುಲ್ಲಾ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (LOC) ದಾಟಲು ಯತ್ನಿಸಿದ ಮೂವರು ಭಯೋತ್ಪಾದಕರನ್ನು ಶನಿವಾರ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಭಯೋತ್ಪಾದಕರು ತಪ್ಪಿಸಿಕೊಳ್ಳಲು ಪಾಕಿಸ್ತಾನಿ ಸೈನಿಕರು (Pakistan Soldiers) ನೆರವಿಗೆ ಯತ್ನಿಸಿದ್ದರು ಎಂದು ಭಾರತೀಯ ಸೇನೆ (Indian Army) ಹೇಳಿದೆ.

    ಉಗ್ರರ (Terrorists) ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲು ಇಂಟೆಲ್ ಆಧಾರದ ಮೇಲೆ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೀರ್ ಪಂಜಾಲ್ ಬ್ರಿಗೇಡ್‌ನ ಕಮಾಂಡರ್ ಬ್ರಿಗೇಡಿಯರ್ ಪಿಎಂಎಸ್ ಧಿಲ್ಲೋನ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಹುಟ್ಟಡಗಿಸಲು ವಿಳಂಬವಾಗ್ತಿರುವುದ್ಯಾಕೆ?

    ಮೂವರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಿದರು. ಮೊದಲು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ನಂತರ ಮೂರನೇ ಭಯೋತ್ಪಾದಕನನ್ನು ಹತ್ಯೆ ಮಾಡಲಾಯಿತು. ಆರಂಭದಲ್ಲಿ ಭಯೋತ್ಪಾದಕರು ತಪ್ಪಿಸಿಕೊಳ್ಳುವುದಕ್ಕೆ ನೆರವಾಗಲು ಪಾಕ್‌ ಸೈನಿಕರು ಮುಂದಾದರು. ಆದರೆ ಅವರ ಪ್ರಯತ್ನಿ ವಿಫಲವಾಯಿತು. ಅಷ್ಟರೊಳಗೆ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿತು. ಭಯೋತ್ಪಾದಕರ ಮೃತದೇಹವನ್ನು ಪಡೆಯಲು ಎಲ್ಒಸಿ ಸಮೀಪದಲ್ಲಿ ಪಾಕ್‌ ಸೈನಿಕರು ಗುಂಡಿನ ದಾಳಿ ನಡೆಸಿದ್ದರು ಎಂದು ಸೇನೆ ತಿಳಿಸಿದೆ.

    ಭಯೋತ್ಪಾದಕರ ಬಳಿಯಿದ್ದ ಎರಡು ಎಕೆ ರೈಫಲ್‌, ಒಂದು ಪಿಸ್ತೂಲ್, ಏಳು ಹ್ಯಾಂಡ್ ಗ್ರೆನೇಡ್‌, ಒಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ), ಪಾಕಿಸ್ತಾನದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಮೊಮ್ಮಗಳನ್ನು ಸೇನೆಗೆ ಸೇರಿಸ್ತೀನಿ- ಆಶೀಶ್ ಢೋನ್‍ಚಕ್ ತಾಯಿ

    2021ರ ಫೆಬ್ರವರಿಯಲ್ಲಿ, ಗಡಿಗಳಲ್ಲಿ ಪರಸ್ಪರ ಶಾಂತಿ ಸಾಧಿಸುವ ಹಿತಾಸಕ್ತಿಯಿಂದ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಗಡಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಗುಂಡಿನ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡಿದ್ದವು. ಆದರೆ ಈಗ ಮತ್ತೆ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]