Tag: Pakistan Prime minister

  • ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ರೆ ನೀವು ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡ್ತಿದ್ದೀರಾ – ಪಾಕ್‌ ಪ್ರಧಾನಿಗೆ ಜನ ಕ್ಲಾಸ್‌

    ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ರೆ ನೀವು ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡ್ತಿದ್ದೀರಾ – ಪಾಕ್‌ ಪ್ರಧಾನಿಗೆ ಜನ ಕ್ಲಾಸ್‌

    ಇಸ್ಲಾಮಾಬಾದ್: ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ತಲೆದೂರಿರುವ ಸಂದರ್ಭದಲ್ಲಿ ಪಾಕಿಸ್ತಾನ (Pakistan) ಪ್ರಧಾನಿ ಶೆಹಬಾಜ್‌ ಶರೀಫ್‌ (Shehbaz Sharif) ಅವರ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಆಹಾರ ಪದಾರ್ಥಗಳಿಗೆ ಹಾಹಾಕಾರ ಶುರುವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಲ್ಲದೇ ರಾಜಕೀಯ ಬಿಕ್ಕಟ್ಟು ಕೂಡ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಪಾಕ್‌ ಪ್ರಧಾನಿ ಕ್ರಿಕೆಟ್‌ ವೀಕ್ಷಿಸಿ ಎಂಜಾಯ್‌ ಮಾಡುತ್ತಿದ್ದಾರೆಂದು ದೇಶದ ಜನತೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

    ʼಪವರ್‌ ಹಿಟ್ಟಿಂಗ್‌ ಮಾಡಿದ ಮತ್ತೊಬ್ಬ ಅಫ್ರಿದಿʼ ಎಂದು ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸಂಬಂಧಿಸಿದಂತೆ ಶಾಹೀನ್ ಅಫ್ರಿದಿಯನ್ನು ಹಾಡಿಹೊಗಳಿ ಪಾಕ್‌ ಪ್ರಧಾನಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ಮತ್ತೊಂದು ಟ್ವೀಟ್‌ನಲ್ಲಿ, ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಸ್ಥಳೀಯ ಸರ್ಕಾರ ಮತ್ತು ನಿರ್ವಾಹಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಪಾಕ್‌ ಪ್ರಧಾನಿ ಟ್ವೀಟ್‌ಗೆ ದೇಶದ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸುವ ಕಡೆ ಗಮನಕೊಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಪ್ರಧಾನಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಮಿಸ್ಟರ್ ಪ್ರಧಾನ ಮಂತ್ರಿಗಳು ಕ್ರಿಕೆಟ್ ನೋಡುವುದರಲ್ಲಿ ನಿರತರಾಗಿದ್ದಾರೆ. ಏಕೆಂದರೆ ಪಾಕಿಸ್ತಾನವು ಅತ್ಯಧಿಕ ಹಣದುಬ್ಬರ ದರವನ್ನು ದಾಖಲಿಸಿದೆ. ಇದುವರೆಗೆ IMFನೊಂದಿಗೆ ಯಾವುದೇ ಒಪ್ಪಂದ ಸಾಧ್ಯವಾಗಿಲ್ಲ. ತಾಯ್ನಾಡಿಗಾಗಿ ಕಳೆದ 11 ತಿಂಗಳಲ್ಲಿ ನಿಮ್ಮ ಉತ್ತಮ ಸೇವೆಗಳಿಗೆ ತುಂಬಾ ಧನ್ಯವಾದಗಳು ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

  • ವಿಶ್ವಕಪ್ ಗೆದ್ದರೆ ಬಾಬರ್ 2048ಕ್ಕೆ ಪಾಕ್ ಪ್ರಧಾನಿ ಆಗ್ತಾರೆ – ಗಾವಸ್ಕರ್ ಭವಿಷ್ಯ

    ವಿಶ್ವಕಪ್ ಗೆದ್ದರೆ ಬಾಬರ್ 2048ಕ್ಕೆ ಪಾಕ್ ಪ್ರಧಾನಿ ಆಗ್ತಾರೆ – ಗಾವಸ್ಕರ್ ಭವಿಷ್ಯ

    ಮೆಲ್ಬರ್ನ್: ರಣರೋಚಕ ಟಿ20 ವಿಶ್ವಕಪ್ (T20 WorldCup) ಅಂತಿಮಘಟ್ಟ ತಲುಪಿದೆ. ಭಾನುವಾರ (ನ.13) ಇಂಗ್ಲೆಂಡ್ (England) ಹಾಗೂ ಪಾಕಿಸ್ತಾನ (Pakistan) ತಂಡಗಳು ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಸೆಣಸಲಿವೆ. ಆದರೆ ಫೈನಲ್ ಪಂದ್ಯವನ್ನು 1992ರ ವಿಶ್ವಕಪ್ ಪಂದ್ಯಕ್ಕೆ ಹೋಲಿಕೆ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ (Sunil Gavaskar), `ಪಾಕಿಸ್ತಾನ 2022ರ ಟಿ20 ವಿಶ್ವಕಪ್ ಗೆದ್ದರೇ 2048ಕ್ಕೆ ತಂಡದ ನಾಯಕ ಬಾಬರ್ ಆಜಂ (Babar Azam) ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಪ್ರಸ್ತುತ ವಿಶ್ವಕಪ್ ಪಂದ್ಯವನ್ನು 1992 ವಿಶ್ವಕಪ್‌ಗೆ ಹೋಲಿಸಿರುವ ಗಾವಸ್ಕರ್, `ನಿಮಗೆ ಗೊತ್ತಾ ಈ ಬಾರಿ ವಿಶ್ವಕಪ್ ಗೆದ್ದರೆ, ಬಾಬರ್ ಆಜಂ (Babar Azam) ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ (Pakistan PrimeMinister) ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಸ್ಟೇಡಿಯಂನ ಹೆಸರು ಬದಲಾಯಿಸುತ್ತೇವೆ – ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

    1992ರಲ್ಲಿ ಏಕದಿನ ವಿಶ್ವಕಪ್‌ನಲ್ಲೂ ಪಾಕಿಸ್ತಾನ-ಇಂಗ್ಲೆಂಡ್ (PAKvsENG) ಫೈನಲ್ ಪ್ರವೇಶಿಸಿತ್ತು. ಮಹತ್ವದ ತಿರುವುಗಳ ನಡುವೆಯೂ ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದಿನ ಪಂದ್ಯದಲ್ಲಿ ವಾಸೀಮ್ ಅಕ್ರಮ್ ಭರ್ಜರಿ ಪ್ರದರ್ಶನ ನೀಡಿದ್ದರು.

    2022ರ T20 ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯದಲ್ಲೇ ಮುಗ್ಗರಿಸಿದ ಪಾಕ್ ಈಗ ಫೈನಲ್ ತಲುಪಿದೆ. ಮೊದಲ ಪಂದ್ಯದಲ್ಲಿ 20 ಓವರ್‌ಗಳಲ್ಲಿ 159 ರನ್‌ಗಳಿಸಿ ಭಾರತದ (Team India) ಎದುರು ಸೋಲನ್ನು ಅನುಭಿಸಿತು. 2ನೇ ಪಂದ್ಯದಲ್ಲಿ ಕೇವಲ 129 ರನ್‌ಗಳಿಸಿ ಜಿಂಬಾಬ್ವೆ ಎದುರು ಮಂಡಿಯೂರಿತ್ತು. ನಂತರ ಅಬ್ಬರಿಸಲು ಆರಂಭಿಸಿದ ಪಾಕ್ ಸತತ ಮೂರು ಪಂದ್ಯಗಳಲ್ಲಿ ಗೆದ್ದು ಅಧಿಕ ರನ್‌ರೇಟ್‌ನೊಂದಿಗೆ ಸೆಮಿ ಫೈನಲ್ ಪ್ರವೇಶಿಸಿತು. ಸೆಮಿ ಕದನದಲ್ಲಿ ಕಿವೀಸ್ ಪಡೆಗೆ ಮಣ್ಣುಮುಕ್ಕಿಸಿ, ಈಗ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಗಾವಸ್ಕರ್ ಇದನ್ನು 1992ರ ವಿಶ್ವಕಪ್ ಕದನಕ್ಕೆ ಹೋಲಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪಾಕ್ ತಂಡದ ನಾಯಕ ಬಾಬರ್ ಆಜಂ, ನಾವು ಖಂಡಿತವಾಗಿಯೂ ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತೇವೆ. ಈ ದೊಡ್ಡ ಮೈದಾನದಲ್ಲಿ ತಂಡವನ್ನು ಮುನ್ನಡೆಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    1992 ಹಾಗೂ 2022ರ ವಿಶ್ವಕಪ್‌ಗಳಲ್ಲಿ ಮೆಲ್ಬರ್ನ್‌ನಲ್ಲಿ ಭಾರತದ ಎದುರೇ ಆರಂಭಿಕ ಪಂದ್ಯಗಳನ್ನಾಡಿದ ಪಾಕ್ ಎರಡೂ ಪಂದ್ಯಗಳಲ್ಲೂ ಸೋತಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಬಾಂಧವ್ಯ ಬಯಸುತ್ತೆ: ಪಾಕ್‌ ಪ್ರಧಾನಿ

    ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಬಾಂಧವ್ಯ ಬಯಸುತ್ತೆ: ಪಾಕ್‌ ಪ್ರಧಾನಿ

    ಇಸ್ಲಮಾಬಾದ್: ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಬಾಂಧವ್ಯವನ್ನು ಬಯಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ.

    ಯುಎನ್‌ಎಸ್‌ಸಿ (ವಿಶ್ವಸಂಸ್ಥೆಯ ಭದ್ರತಾ ಮಂಡಳಿ) ನಿರ್ಣಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆಯ ಮುತ್ತು ತಂದ ಆಪತ್ತು – ಜೈಲಿನಲ್ಲೇ ಪ್ರಿಯಕರ ಸಾವು

    ಪಾಕಿಸ್ತಾನಕ್ಕೆ ಹೊಸದಾಗಿ ನೇಮಕಗೊಂಡ ಆಸ್ಟ್ರೇಲಿಯಾದ ಹೈ ಕಮಿಷನರ್ ನೀಲ್ ಹಾಕಿನ್ಸ್ ಅವರು ಇಸ್ಲಾಮಾಬಾದ್‌ನಲ್ಲಿ ತಮ್ಮನ್ನು ಭೇಟಿಯಾಗಿ ಸಭೆ ನಡೆಸಿದ ಸಂದರ್ಭದಲ್ಲಿ ಶೆಹಬಾಜ್‌ ಈ ಹೇಳಿಕೆ ನೀಡಿದ್ದಾರೆ.

    ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ಅಂತರರಾಷ್ಟ್ರೀಯ ಸಮುದಾಯವು ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪಾತ್ರವನ್ನು ವಹಿಸಬೇಕು ಎಂದು ಎಂದು ಪಾಕ್‌ ಪ್ರಧಾನಿ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಟ್ವೀಟ್ ಮಾಡಿದ್ದಕ್ಕೆ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ನಂತರ ಷರೀಫ್ ಈ ಹೇಳಿಕೆ ನೀಡಿದ್ದಾರೆ. ರಷ್ಯಾದ ತೈಲವನ್ನು ಖರೀದಿಸಿದ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಇಮ್ರಾನ್ ಹರಿಹಾಯ್ದಿದ್ದರು.

    ಏಪ್ರಿಲ್‌ನಲ್ಲಿ ಅಧಿಕಾರದಿಂದ ಕೆಳಗಿಳಿದ ನಂತರ, ಇಮ್ರಾನ್ ಖಾನ್ ತನ್ನ ವಿರುದ್ಧ ಯುಎಸ್ ನೇತೃತ್ವದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಜೋ ಬೈಡನ್ ಆಡಳಿತವನ್ನು ಟೀಕಿಸುವಾಗ ಇಮ್ರಾನ್ ಖಾನ್ ಅನೇಕ ಸಂದರ್ಭಗಳಲ್ಲಿ ಭಾರತವು ಪಶ್ಚಿಮದ ಬೇಡಿಕೆಗೆ ಮಣಿಯದೆ ಮತ್ತು ಯುಎಸ್‌ನ ಕಾರ್ಯತಂತ್ರದ ಮಿತ್ರ ಆಗಿದ್ದರೂ ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಿದ್ದಕ್ಕಾಗಿ ಶ್ಲಾಘಿಸಿದ್ದರು.

    Live Tv

    [brid partner=56869869 player=32851 video=960834 autoplay=true]

  • 24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ

    24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ

    ದುಬೈ: ಇತ್ತೀಚೆಗಷ್ಟೇ ಪೀಠ ಅಲಂಕರಿಸಿದ ಪಾಕಿಸ್ತಾನದ ನೂತನ ಪ್ರಧಾನಿ ಶಹಾಬಾಜ್ ಷರೀಫ್‌ಗೆ ಸೌದಿ ಅರೇಬಿಯಾದಲ್ಲಿ ಅಪಮಾನವಾಗಿದ್ದು, ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಈ ಘಟನೆ ನಡೆದಿದೆ. ಘಟನೆ ವೇಳೆ ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಹಿನ್ನೆಲೆಯಲ್ಲಿ 17 ರಕ್ಷಣಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

    Shehbaz Sharif

    ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಇತ್ತೀಚೆಗೆ ತಮ್ಮ ತಂಡದೊಂದಿಗೆ ಸೌದಿ ಅರೇಬಿಯಾದ ಮೆದಿಯಾನಾದಲ್ಲಿರುವ ಮಸ್ಜಿದ್-ಇ-ನಬಾವಿಗೆ ತೆರಳಿದಾಗ ಅಲ್ಲಿನ ಪಾಕ್ ಮೂಲದ ಜನರು ಅವರಿಗೆ ಅವಮಾನ ಮಾಡಿದ್ದು, ಈ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಪಾಕ್ ಪ್ರಧಾನಿಗೆ ಅಪಮಾನ ಆಗಿದೆ. ಇದನ್ನೂ ಓದಿ; ಚೀನಾದ 6 ಅಂತಸ್ತಿನ ಕಟ್ಟಡ ಕುಸಿತ – 39 ಜನ ನಾಪತ್ತೆ

    ಶಹಾಬಾಜ್ ನಡೆದು ಬರುತ್ತಿದ್ದ ವೇಳೆ, ಜನರು ಅವರಿಗೆ `ಕಳ್ಳ- ಕಳ್ಳ’, ಪಾಕಿಸ್ತಾನಿ ವಿರೋಧಿ, ಶೆಹಾಬಾಜ್ ವಿದೇಶಿಗರ ಮಾತಿನಂತೆ ಸರ್ಕಾರ ನಡೆಸುತ್ತಿರುವ ದೇಶ ದ್ರೋಹಿ ಎಂದು ಅಲ್ಲಗಳೆದಿದ್ದಾರೆ. ಈ ವಿಚಾರವಾಗಿ ಪಾಕ್‌ನ ಈಗಿನ ಮಾಹಿತಿ ಸಚಿವಾಲಯದ ಸಚಿವರಾಗಿರುವ ಮರಿಯುಮ್ ಔರಂಗಜೇಬ್ ಮಾತನಾಡಿದ್ದು, ಹಳೆದ ಸರ್ಕಾರ ಪೂರ್ತಿ ಪಾಕಿಸ್ತಾನವನ್ನು ಹಾಳು ಮಾಡಿದೆ. ಆದರೆ ನಾವು ನಮ್ಮ ದೇಶವನ್ನು ಸರಿ ದಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ – ಬ್ರಿಟನ್ ಶಾಸಕ ರಾಜೀನಾಮೆ

    2ನೇ ಬಾರಿಗೆ ಶಹಾಬಾಜ್ ಷರೀಫ್ ಭಾರೀ ಭದ್ರತೆಯಲ್ಲಿ ಪ್ರವೇಶಿದ್ದು, ಈ ವೇಳೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿತ್ತು. ಆದರೂ ಜನರು ತಾವಿದ್ದಲ್ಲಿಂದಲೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ನನ್ನು ಕೆಳಗಿಳಿಸಿ ಶಹಾಬಾಜ್ ಹೇಗೆ ಪ್ರಧಾನಿಯಾದರು ಎಂಬುದರ ಬಗ್ಗೆ ಬ್ಲಾಗ್‌ವೊಂದರಲ್ಲಿ ಬರೆದು ಅಪಮಾನ ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    IMRANKHAN

    ಇದಕ್ಕೂ ಮುನ್ನ, ಷರೀಫ್ ನೇತೃತ್ವದ ನಿಯೋಗವು ಮದೀನಾದ ಮಸೀದಿ-ಎ-ನಬವಿಯನ್ನು ಪ್ರವೇಶಿಸಿದಾಗಲೂ `ಚೋರ್ ಚೋರ್’ ಎಂಬ ಘೋಷಣೆ ಕೇಳಿಬಂದಿತ್ತು. ಅದೇ ರೀತಿ ಸೌದಿ ಅರೇಬಿಯಾದಲ್ಲಿ ಅಧಿಕಾರಿಗಳು ನಿಯೋಗದ ವಿರುದ್ಧ ಘೋಷಣೆ ಕೂಗುತ್ತಿದ್ದ ಕೆಲವು ಪಾಕಿಸ್ತಾನಿ ಯಾತ್ರಿಕರನ್ನು ಮಸೀದಿಯ ಪಾವಿತ್ರ‍್ಯಕ್ಕೆ ಅಗೌರವ ತೋರಿದ ಕಾರಣ ನೀಡಿ ಬಂಧಿಸಲಾಗಿದೆ ಎಂದು ಸೌದಿ ರಾಯಭಾರಿ ಕಚೇರಿಯ ಮಾಧ್ಯಮ ನಿರ್ದೇಶಕರು ತಿಳಿಸಿದ್ದಾರೆ.

  • ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ

    ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ

    ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಶೆಹಬಾಜ್ ಷರೀಫ್ ಅವರಿಗೆ ನರೇಂದ್ರ ಮೋದಿ ಹಾರೈಕೆಯ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಷರೀಫ್ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಇದರೊಂದಿಗೆ ಷರೀಫ್ ಪಾಕಿಸ್ತಾನ ಭಾರತದೊಂದಿಗೆ ಶಾಂತಿಯುತ ಹಾಗೂ ಸಹಕಾರಿ ಬಾಂಧವ್ಯ ಬಯಸುತ್ತದೆ ಎಂದು ರೀಟ್ವೀಟ್ ಮಾಡಿದ್ದಾರೆ.

    ಷರೀಫ್ ಪಾಕಿಸ್ತಾನದ ಪ್ರಧಾನಿಯಾಗುತ್ತಿದ್ದಂತೆ ಅಭಿನಂದಿಸಿದ ಮೋದಿ, ಭಾರತ ಭಯೋತ್ಪಾದನೆ ಮುಕ್ತ ಪ್ರದೇಶ, ಶಾಂತಿ ಹಾಗೂ ಸ್ಥಿರತೆಯನ್ನು ಬಯಸುತ್ತದೆ. ಇದರಿಂದ ನಾವು ನಮ್ಮ ಅಭಿವದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು. ಜೊತೆಗೆ ನಮ್ಮ ಜನರ ಯೋಗಕ್ಷೇಮ ಹಾಗೂ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದರು. ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

    ಇದಕ್ಕೆ ಪ್ರತಿಕ್ರಿಯಿಸಿದ ಪಾಕ್ ಪ್ರಧಾನಿ, ಮೋದಿಗೆ ಧನ್ಯವಾದ ತಿಳಿಸಿ, ಪಾಕಿಸ್ತಾನ ಭಾರತದೊಂದಿಗೆ ಶಾಂತಿಯುತ ಮತ್ತು ಸಹಕಾರದ ಸಂಬಂಧವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಬಾಕಿ ಉಳಿದಿರುವ ವಿವಾದಗಳ ಶಾಂತಿಯುತ ಇತ್ಯರ್ಥ ಅನಿವಾರ್ಯವಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ತ್ಯಾಗಗಳು ಎಲ್ಲರಿಗೂ ತಿಳಿದಿವೆ. ಶಾಂತಿಯನ್ನು ಕಾಪಾಡೋಣ ಹಾಗೂ ನಮ್ಮ ಜನರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಗಮನ ಕೊಡೋಣ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಪತ್ರಕರ್ತನಿಗೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸ ಮತ ಗಳಿಸಲು ವಿಫಲವಾದ ಬಳಿಕ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಬಳಿಕ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಸೋಮವಾರ ರಾಷ್ಟ್ರೀಯ ಅಸೆಂಬ್ಲಿಯಿಂದ 174 ಮತಗಳನ್ನು ಗಳಿಸಿ, ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಆಯ್ಕೆಯಾದರು.

  • ಪಾಕ್‌ ಪ್ರಧಾನಿಯಾಗ್ತಾರೆ ಅಂತ ಭವಿಷ್ಯ ನುಡಿದಿದ್ದ ಬುಶ್ರಾ ಬೀಬಿಗೆ ಇಮ್ರಾನ್‌ ಈಗ ಡಿವೋರ್ಸ್‌ ನೀಡಬಹುದು: ತಸ್ಲೀಮಾ

    ಪಾಕ್‌ ಪ್ರಧಾನಿಯಾಗ್ತಾರೆ ಅಂತ ಭವಿಷ್ಯ ನುಡಿದಿದ್ದ ಬುಶ್ರಾ ಬೀಬಿಗೆ ಇಮ್ರಾನ್‌ ಈಗ ಡಿವೋರ್ಸ್‌ ನೀಡಬಹುದು: ತಸ್ಲೀಮಾ

    ಢಾಕಾ: ಇಮ್ರಾನ್‌ ಪಾಕ್‌ ಪ್ರಧಾನಿಯಾಗುತ್ತಾರೆ ಎಂದು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಭವಿಷ್ಯ ನುಡಿದಿದ್ದ ಬುಶ್ರಾ ಬೀಬಿಗೆ ಇಮ್ರಾನ್‌ ಖಾನ್‌ ಈಗ ವಿಚ್ಛೇದನ ನೀಡಬಹುದು ಎಂದು ಬಾಂಗ್ಲಾದೇಶ ಬರಹಗಾರ್ತಿ ತಸ್ಲೀಮಾ ನಸ್ರಿನ್‌ ಕುಟುಕಿದ್ದಾರೆ.

    ಪಾಕಿಸ್ತಾನದ ಪ್ರಧಾನಿ ಸ್ಥಾನ ಬಿಕ್ಕಟ್ಟು ಕುರಿತು ಟ್ವೀಟ್‌ ಮಾಡಿರುವ ಅವರು, ʻಇಮ್ರಾನ್ ಖಾನ್, ಬುಶ್ರಾ ಅವರನ್ನು ವಿವಾಹವಾದರು. ಏಕೆಂದರೆ ಬುಶ್ರಾ ತನ್ನ ವಿಶೇಷ ಆಧ್ಯಾತ್ಮಿಕ ಶಕ್ತಿಯಿಂದ ಇಮ್ರಾನ್ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರು. ಆದರೆ ಇಮ್ರಾನ್‌ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಭವಿಷ್ಯ ನುಡಿದಿರಲಿಲ್ಲ. ಅದಕ್ಕಾಗಿ ಆಕೆಗೆ ಇಮ್ರಾನ್‌ ವಿಚ್ಛೇದನ ನೀಡಬಹುದು. ಇಮ್ರಾನ್ ಎಂದಿಗೂ ಸಾಯುವುದಿಲ್ಲ ಎಂದು ಭವಿಷ್ಯವಾಣಿ ನುಡಿಯುವ ಹೆಣ್ಣು ಗಿಣಿಯನ್ನು ಖಾನ್‌ ಮದುವೆಯಾಗಬಹುದುʼ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ

    ಇಮ್ರಾನ್ ಖಾನ್ ಚುನಾವಣೆಯಲ್ಲಿ ಗೆದ್ದ ನಂತರ 2018 ರಲ್ಲಿ ಬುಶ್ರಾ ಬೀಬಿ ಅವರನ್ನು ವಿವಾಹವಾದರು. ಬುಶ್ರಾ ಬೀಬಿ ಅವರು ಪಾಕಿಸ್ತಾನದ ಪ್ರಥಮ ಮಹಿಳೆಯಾದಾಗಿನಿಂದ ವಾಮಾಚಾರ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಇಮ್ರಾನ್ ಖಾನ್ 2015 ರಿಂದ ಬುಶ್ರಾ ಬೀಬಿಯನ್ನು ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಭೇಟಿಯಾಗುತ್ತಿದ್ದರು.

    ಬೀಬಿ ಅವರ ರಾಜಕೀಯ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಇಮ್ರಾನ್ ಖಾನ್ ಅವರನ್ನು ಮದುವೆಯಾಗುವ ಮೊದಲು, ಬುಶ್ರಾ ಬೀಬಿ ಅವರು ಸರ್ಕಾರಿ ಅಧಿಕಾರಿಯಾಗಿದ್ದ ಖವಾರ್ ಫರೀದ್ ಮೇನಕಾ ಅವರನ್ನು ವಿವಾಹವಾಗಿದ್ದರು. ಇದನ್ನೂ ಓದಿ: ಪಾಕ್ ಅನ್ನು ಟಿಶ್ಯೂ ಪೇಪರ್ ಆಗಿ ಬಳಸಿ ಎಸೆಯಲಾಗಿದೆ: ಇಮ್ರಾನ್ ಕಿಡಿ

  • ಪಾಕಿಸ್ತಾನದಲ್ಲಿ ಹೈಡ್ರಾಮಾ – ಸದ್ಯಕ್ಕೆ ಇಮ್ರಾನ್ ಪಾರು, 90 ದಿನದಲ್ಲಿ ಚುನಾವಣೆ

    ಪಾಕಿಸ್ತಾನದಲ್ಲಿ ಹೈಡ್ರಾಮಾ – ಸದ್ಯಕ್ಕೆ ಇಮ್ರಾನ್ ಪಾರು, 90 ದಿನದಲ್ಲಿ ಚುನಾವಣೆ

    ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್ತಿನಲ್ಲಿ ಇಂದು ಭಾರೀ ಹೈಡ್ರಾಮಾ ನಡೆದಿದೆ. ಈ ಹೈಡ್ರಾಮಾದಿಂದ ಸದ್ಯಕ್ಕೆ ಇಮ್ರಾನ್ ಖಾನ್ ಪಾರಾಗಿದ್ದಾರೆ.

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ. ತಿರಸ್ಕೃತಗೊಂಡ ಬೆನ್ನಲ್ಲೇ ರಾಷ್ಟ್ರಪತಿ ಆರಿಫ್ ಆಲ್ವಿ ಅವರು ಸರ್ಕಾರವನ್ನು ವಿಸರ್ಜಿಸಿದ್ದಾರೆ.

    ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಪಾಕ್ ನ್ಯಾಷನಲ್ ಅಸೆಂಬ್ಲಿ ಉಪ ಸ್ಪೀಕರ್ ತಿರಸ್ಕರಿಸಿದ್ದಾರೆ. ಈ ನಿರ್ಣಯ ಸಂವಿಧಾನದ ವಿಧಿ 5ಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ನಿರ್ಣಯ ತಿರಸ್ಕರಿಸಿ ಕಲಾಪವನ್ನು ಮುಂದೂಡಿದ್ದಾರೆ. ಈ ಮೂಲಕ ಇಮ್ರಾನ್ ಖಾನ್ ಪ್ರಧಾನಿಯಾಗಿಯೇ ಮುಂದುವರಿಯಲಿದ್ದಾರೆ. ಇದನ್ನೂ ಓದಿ: ನಿಷೇಧಾಜ್ಞೆ ಜಾರಿ, ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ- ಶ್ರೀಲಂಕಾದಲ್ಲಿ ಪರಿಸ್ಥಿತಿ ಹೇಗಿದೆ?

    ಕೂಡಲೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್, ಅಸೆಂಬ್ಲಿ ವಿಸರ್ಜನೆಗೆ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದಿದ್ದಾನೆ. ಪ್ರಜಾಸತಾತ್ಮಕ ಹಾದಿಯಲ್ಲಿ ಚುನಾವಣೆ ನಡೆಯಬೇಕು. ಚುನಾವಣೆಗೆ ಸಜ್ಜಾಗುವಂತೆ ಪಾಕಿಸ್ತಾನದ ಜನರಿಗೆ ಕರೆ ನೀಡುವುದಾಗಿ ಹೇಳಿದರು.

    ಖಾನ್ ದೇಶವನ್ನುದ್ದೇಶಿಸಿ ಮಾತನಾಡಿದ ಬೆನ್ನಲ್ಲೇ ಪಾಕ್ ರಾಷ್ಟ್ರಪತಿ ಆರಿಫ್ ಅಲ್ವಿ ಸಂಸತ್ ವಿಸರ್ಜಿಸಿದ್ದು, 90 ದಿನಗಳ ಒಳಗೆ ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: 12 ಭಾರತೀಯ ಮೀನುಗಾರರನ್ನು ಬಂಧಿಸಿದ ಲಂಕಾ ನೌಕಪಡೆ

    ಪಾಕ್ ಸಂಸತ್‌ನಲ್ಲಿ ಅವಿಶ್ವಾಸ ಮಂಡನೆ ಬಳಿಕ ಇಮ್ರಾನ್ ಖಾನ್ ರಾಜಿನಾಮೆ ಕೊಡಬೇಕೆಂಬ ಕೂಗು ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇಮ್ರಾನ್ ಖಾನ್ ರಾಜಿನಾಮೆ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಹೊಸ ಚುನಾವಣೆಗೆ ಕರೆ ನೀಡಿದ್ದಾರೆ.

    ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಕೊನೆ ಬಾಲ್‌ವರೆಗೂ ಹೋರಾಡುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿದ್ದರು. ಈ ಮಾತನ್ನು ಇಮ್ರಾನ್ ಖಾನ್ ಉಳಿಸಿಕೊಂಡಿದ್ದಾರೆ.

  • ಭಾರತವನ್ನು ಬೆಂಬಲಿಸುತ್ತಿರುವ ಪ್ರಬಲ ರಾಷ್ಟ್ರವೊಂದು ಪಾಕಿಸ್ತಾನದ ಮೇಲೆ ಕೋಪಗೊಂಡಿದೆ: ಇಮ್ರಾನ್‌ ಖಾನ್‌

    ಭಾರತವನ್ನು ಬೆಂಬಲಿಸುತ್ತಿರುವ ಪ್ರಬಲ ರಾಷ್ಟ್ರವೊಂದು ಪಾಕಿಸ್ತಾನದ ಮೇಲೆ ಕೋಪಗೊಂಡಿದೆ: ಇಮ್ರಾನ್‌ ಖಾನ್‌

    ಇಸ್ಲಾಮಾಬಾದ್: ಭಾರತವನ್ನು ಬೆಂಬಲಿಸುತ್ತಿರುವ ಬಲಿಷ್ಠ ರಾಷ್ಟ್ರವೊಂದು ಪಾಕಿಸ್ತಾನದ ವಿರುದ್ಧ ಕೋಪಗೊಂಡಿದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

    ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ಬಳಿಕ ಇಮ್ರಾನ್‌ ಖಾನ್‌ ಈ ಹೇಳಿಕೆ ನೀಡಿದ್ದಾರೆ. ಇಸ್ಲಾಮಾಬಾದ್ ಭದ್ರತಾ ವ್ಯವಸ್ಥೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವತಂತ್ರ ವಿದೇಶಾಂಗ ನೀತಿಯು ದೇಶಕ್ಕೆ ನಿರ್ಣಾಯಕವಾಗಿದೆ. ಪಾಕಿಸ್ತಾನವು ತನ್ನ ಗರಿಷ್ಠ ಸಾಮರ್ಥ್ಯವನ್ನು ಮುಟ್ಟಲು ಸಾಧ್ಯವಾಗದಿರಲು ಕಾರಣ ಇತರ ಶಕ್ತಿಶಾಲಿ ರಾಷ್ಟ್ರಗಳ ಮೇಲಿನ ಅವಲಂಬನೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರದ ದೇಶವು ತನ್ನ ಜನತೆಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಇಮ್ರಾನ್‌ ಖಾನ್‌ ಒತ್ತಿ ಹೇಳಿದ್ದಾರೆ.

    ವಿದೇಶಿ ನೆರವಿನ ಮೂಲಕ ಇತರ ದೇಶಗಳ ಇಚ್ಛೆಗೆ ಮಣಿಯುವುದಕ್ಕಿಂತ ರಾಷ್ಟ್ರದ ಹಿತಾಸಕ್ತಿಗಳನ್ನು ಧ್ಯೇಯವಾಗಿಟ್ಟುಕೊಂಡು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯ ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫಲಿತಾಂಶ ಏನೇ ಬರಲಿ, ಇನ್ನೂ ಬಲಿಷ್ಠವಾಗಿ ಮರಳುತ್ತೇನೆ: ಇಮ್ರಾನ್ ಖಾನ್

    ಅಮೆರಿಕವನ್ನು ಉಲ್ಲೇಖಿಸಿ ಮಾತನಾಡಿದ ಅವರು, ನಾನು ಇತ್ತೀಚಿನ ರಷ್ಯಾಗೆ ಭೇಟಿ ಕೊಟ್ಟಿದ್ದಕ್ಕೆ ಪ್ರಬಲ ದೇಶ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಮತ್ತೊಂದೆಡೆ ಮಿತ್ರರಾಷ್ಟ್ರವಾದ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಸಹಕರಿಸುತ್ತಿದೆ ಎಂದಿದ್ದಾರೆ.

    ಉಕ್ರೇನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ನಂತರ ಫೆ.24ರಂದು ಇಮ್ರಾನ್‌ ಖಾನ್‌ ಕ್ರೆಮ್ಲಿನ್‌ಗೆ ತೆರಳಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ಯಾರೀ ಶೆಹಬಾಜ್‌ ಷರೀಫ್‌- ಇವರೇ ಪಾಕಿಸ್ತಾನದ ಮುಂದಿನ ಪ್ರಧಾನಿ?

  • ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    ಇಸ್ಲಾಮಾಬಾದ್: ನೀವು ಪ್ರಧಾನಿಯಾಗದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು ಎಂದು ರೆಹಮ್ ಖಾನ್ ಅವರು ತನ್ನ ಮಾಜಿ ಪತಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.‌

    ಇಮ್ರಾನ್ ಖಾನ್ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸರಿಪಡಿಸಲು ದೇಶದ ಜನರು ಒಟ್ಟಾಗಿ ನಿಲ್ಲುವತ್ತ ಗಮನ ಹರಿಸಬೇಕು ಎಂದು ಇಮ್ರಾನ್‌ ಖಾನ್‌ ಮಾಜಿ ಪತ್ನಿ ರೆಹಮ್‌ ಖಾನ್‌ ಕರೆ ನೀಡಿದ್ದಾರೆ.

    ಇಮ್ರಾನ್‌ ಇತಿಹಾಸ. ನಯಾ ಪಾಕಿಸ್ತಾನ (ಹೊಸ ಪಾಕಿಸ್ತಾನ) ಬಿಟ್ಟು ಹೋಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ನಾವು ಒಟ್ಟಾಗಿ ನಿಲ್ಲುವತ್ತ ಗಮನಹರಿಸಬೇಕೆಂದು ನಾನು ಭಾವಿಸುತ್ತೇನೆ ಎಂದು ರೆಹಮ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

    ಇಮ್ರಾನ್‌ ಖಾನ್‌ ದೇಶವನ್ನುದ್ದೇಶಿಸಿ ಮಾತನಾಡುವಾಗ, ದೇವರ ದಯೆಯಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಖ್ಯಾತಿ, ಸಂಪತ್ತು ಏನೂ ಅಗತ್ಯವಿಲ್ಲ ಎಂದಿದ್ದಾರೆ. ಅವರಿಗೆ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ರೆಹಮ್‌ ಖಾನ್‌ ಕುಟುಕಿದ್ದಾರೆ.

    ನನ್ನ ಬಾಲ್ಯದಲ್ಲಿ ಪಾಕಿಸ್ತಾನ ಅಗ್ರಸ್ಥಾನಕ್ಕೆ ಹೋಗಿರುವುದನ್ನು ನೋಡಿದ್ದೇನೆ ಎಂಬ ಇಮ್ರಾನ್‌ ಖಾನ್‌ ಅವರ ಹೇಳಿಕೆಯನ್ನು ರೆಹಮ್‌ ಖಾನ್‌ ಸ್ವಾಗತಿಸಿದ್ದಾರೆ. ʼಹೌದು, ನೀವು ಪ್ರಧಾನಿಯಾಗದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು ಎಂದು ಖಾನ್‌ ವಿರುದ್ಧ ಟ್ವೀಟ್‌ ಮೂಲಕ ಚಾಟಿ ಬೀಸಿದ್ದಾರೆ.

    ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಹುದ್ದೆಗೆ ಸಂಕಷ್ಟ ಎದುರಾಗಿದೆ. ಇಮ್ರಾನ್‌ ಖಾನ್‌ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯದ ಅಸ್ತ್ರ ಪ್ರಯೋಗಿಸಿವೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಖಾನ್‌ ಅವರನ್ನು ಒತ್ತಾಯಿಸಲಾಗುತ್ತಿದೆ.

    ರಾಜೀನಾಮೆ ನೀಡಲು ಇಮ್ರಾನ್‌ ಖಾನ್‌ ನಿರಾಕರಿಸಿದ್ದಾರೆ. ನಾನು 20 ವರ್ಷಗಳಿಂದ ಕ್ರಿಕೆಟ್ ಆಡಿದ್ದೇನೆ. ಹೀಗಾಗಿ ರಾಜಕೀಯದಲ್ಲೂ ಸಹ ಕೊನೆಯ ಎಸೆತದವರೆಗೂ ಆಡುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

  • ಫಲಿತಾಂಶ ಏನೇ ಬರಲಿ, ಇನ್ನೂ ಬಲಿಷ್ಠವಾಗಿ ಮರಳುತ್ತೇನೆ: ಇಮ್ರಾನ್ ಖಾನ್

    ಫಲಿತಾಂಶ ಏನೇ ಬರಲಿ, ಇನ್ನೂ ಬಲಿಷ್ಠವಾಗಿ ಮರಳುತ್ತೇನೆ: ಇಮ್ರಾನ್ ಖಾನ್

    ಇಸ್ಲಾಮಾಬಾದ್: ಅವಿಶ್ವಾಸ ನಿಲುವಳಿ ಫಲಿತಾಂಶ ಏನೇ ಇರಲಿ, ಮುಂದೆಯೂ ನಾನು ಇನ್ನೂ ಬಲಿಷ್ಠನಾಗಿ ಮರಳುತ್ತೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

    ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಲ್ಲಾಹು ನನಗೆ ಕೀರ್ತಿ, ಸಂಪತ್ತು ಸೇರಿದಂತೆ ಎಲ್ಲವನ್ನೂ ಅನುಗ್ರಹಿಸಿದ್ದಾನೆ. ನಾನು ಈ ಸ್ವತಂತ್ರ್ಯ ದೇಶದಲ್ಲಿ ಜನಿಸಿದ ಮೊದಲ ತಲೆಮಾರಿನವನು. ನನಗಿಂತ 5 ವರ್ಷ ಮೊದಲೇ ಪಾಕಿಸ್ತಾನ ಹುಟ್ಟಿಕೊಂಡಿತ್ತು. ನನ್ನ ಹೆತ್ತವರು ಗುಲಾಮಗಿರಿ ಸಮಯದಲ್ಲಿ ಜನಿಸಿದವರು. ನಾನು ಈ ಸ್ವತಂತ್ರ್ಯ ದೇಶದಲ್ಲಿ ಹುಟ್ಟಿದ ಅದೃಷ್ಟಶಾಲಿ. ಗುಲಾಮಗಿರಿಯಿಂದ ಮೇಲೆ ಏಳುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ ಕೋಮು ಸಂಘರ್ಷ ದೇಶದ ಐಟಿ ಹಬ್‍ಗೆ ಮಾರಕ ಬೊಮ್ಮಾಯಿ ಬಗೆಹರಿಸುವ ಭರವಸೆ ನೀಡಿದ್ದಾರೆ: ಕಿರಣ್ ಮಜುಂದಾರ್

    IMRANKHAN

    ನಾನು ರಾಜಕೀಯ ಸೇರಿದಾಗ ಯಾರ ಮುಂದೆಯೂ ತಲೆ ಬಾಗುವುದಿಲ್ಲ ಹಾಗೂ ನನ್ನ ದೇಶವನ್ನು ಯಾರ ಮುಂದೆಯೂ ತಲೆ ಬಾಗಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದೇನೆ. ಇದರ ಅರ್ಥ ನನ್ನ ದೇಶವನ್ನು ಎಂದಿಗೂ ಇನ್ನೊಬ್ಬರ ಗುಲಾಮನಾಗಲು ಬಿಡುವುದಿಲ್ಲ. ಈ ನಿಲುವಿನಿಂದ ನಾನು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರತನ್‌ ಟಾಟಾಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

    ಭಾಷಣದ ವೇಳೆ ಭಾರತವನ್ನು ಹೊಗಳಿದ ಅವರು, ಭಾರತದಲ್ಲಿ ನನ್ನ ಅನೇಕ ಸ್ನೇಹಿತರಿದ್ದಾರೆ. ನಾನು ಎಂದಿಗೂ ಭಾರತವನ್ನು ವಿರೋಧಿಸುವುದಿಲ್ಲ ಎಂದು ಹೇಳಿದರು.