Tag: pakistan pilot

  • ವಿಮಾನ ತುರ್ತು ಭೂಸ್ಪರ್ಶ – ನನ್ನ ಶಿಫ್ಟ್‌ ಮುಗಿಯಿತು ಮತ್ತೆ ಫ್ಲೈ ಮಾಡಲ್ಲ ಎಂದ ಪಾಕ್‌ ಪೈಲಟ್‌!

    ವಿಮಾನ ತುರ್ತು ಭೂಸ್ಪರ್ಶ – ನನ್ನ ಶಿಫ್ಟ್‌ ಮುಗಿಯಿತು ಮತ್ತೆ ಫ್ಲೈ ಮಾಡಲ್ಲ ಎಂದ ಪಾಕ್‌ ಪೈಲಟ್‌!

    ಇಸ್ಲಾಮಾಬಾದ್‌: ಹವಾಮಾನ ವೈಪರಿತ್ಯದಿಂದಾಗಿ ತುರ್ತು ಭೂಸ್ಪರ್ಶ ಮಾಡಲಾದ ವಿಮಾನವನ್ನು ದಿನದ ತನ್ನ ಶಿಫ್ಟ್‌ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಹಾರಿಸುವುದಿಲ್ಲ ಎಂದು ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಪೈಲಟ್‌ ನಿರಾಕರಿಸಿರುವ ಪ್ರಸಂಗ ನಡೆದಿದೆ.

    ಪಿಕೆ-9754 ವಿಮಾನವು ರಿಯಾದ್‌ನಿಂದ ಹೊರಟು ಇಸ್ಲಮಾಬಾದ್‌ನಲ್ಲಿ ಇಳಿಯಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಸೌದಿ ಅರೇಬಿಯಾದ ದಮಾಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಂತರ ಮತ್ತೆ ವಿಮಾನ ಕಾರ್ಯಾಚರಣೆಗೆ ಸೂಚನೆ ನೀಡಿದಾಗ, ನಿತ್ಯದ ತನ್ನ ಪಾಳಿ ಅವಧಿ ಮುಗಿದಿದೆ ಎಂದು ಪೈಲಟ್‌ ನಿರಾಕರಿಸಿದ್ದಾನೆ. ಇದನ್ನೂ ಓದಿ: ಈಕೆ ಪ್ರಪಂಚದಾದ್ಯಂತ ಏಕಾಂಗಿಯಾಗಿ ಹಾರಾಟ ನಡೆಸಿದ ಅತ್ಯಂತ ಕಿರಿಯ ಪೈಲಟ್!

    ಈ ವೇಳೆ ವಿಮಾನದೊಳಗಿನ ಪ್ರಯಾಣಿಕರು ಇಳಿಯಲು ನಿರಾಕರಿಸಿದರು. ಅಲ್ಲದೇ ತಮ್ಮ ಪ್ರಯಾಣಕ್ಕೆ ವಿಳಂಬವಾಗಿದ್ದನ್ನು ಪ್ರತಿಭಟಿಸಿದರು. ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ದಮಾಮ್‌ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ನಂತರ ಪ್ರಯಾಣಿಕರು ಇಸ್ಲಾಮಾಬಾದ್‌ವರೆಗೆ ತಮ್ಮ ಪ್ರಯಾಣ ಮುಂದುವರಿಸುವವರೆಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು.

    ವಿಮಾನದ ಸುರಕ್ಷತೆಗಾಗಿ ಪೈಲಟ್‌ ವಿಶ್ರಾಂತಿ ಪಡೆಯಬೇಕು. ಎಲ್ಲಾ ಪ್ರಯಾಣಿಕರು ಇಸ್ಲಾಮಾಬಾದ್‌ಗೆ ವಿಮಾನ ಪ್ರಯಾಣದಲ್ಲಿ ರಾತ್ರಿ 11 ಗಂಟೆಗೆ ತಲುಪುತ್ತಾರೆ. ಅಲ್ಲಿಯವರೆಗೂ ಹೋಟೆಲ್‌ಗಳಲ್ಲಿ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಪಿಐಎ ವಕ್ತಾರ ತಿಳಿಸಿದ್ದಾರೆ. ಇದನ್ನೂ ಓದಿ: ವಿಶಾಖಪಟ್ಟಣಂ-ದೆಹಲಿ, ಆಂಧ್ರಪ್ರದೇಶ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ – ಪ್ರಯಾಣಿಕರಲ್ಲಿ ಆತಂಕ

    ತುರ್ತು ಭೂಸ್ಪರ್ಶದ ನಂತರ ಪ್ರಯಾಣಿಕರು ಪರದಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಇಂಜಿನ್ ವೈಫಲ್ಯದಿಂದಾಗಿ ಯುಎಸ್‌ಗೆ ಹೋಗುವ ವಿಮಾನವು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದರಿಂದಾಗಿ ಪ್ರಯಾಣಿಕರು ಯುರೋಪ್‌ನಲ್ಲಿ ಸಿಲುಕಿಕೊಂಡಿದ್ದರು.