Tag: Pakistan man

  • ಮಿದುಳು ತಿನ್ನುವ ಅಮೀಬಾ ಸೋಂಕಿಗೆ ಪಾಕಿಸ್ತಾನದ ವ್ಯಕ್ತಿ ಬಲಿ

    ಮಿದುಳು ತಿನ್ನುವ ಅಮೀಬಾ ಸೋಂಕಿಗೆ ಪಾಕಿಸ್ತಾನದ ವ್ಯಕ್ತಿ ಬಲಿ

    ಇಸ್ಲಾಮಾಬಾದ್: ಮಿದುಳು ತಿನ್ನುವ ಅಮೀಬಾ (ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್) ಸೋಂಕಿಗೆ ಪಾಕಿಸ್ತಾನದ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಆತಂಕ ಮೂಡಿಸಿದೆ. ಪಾಕಿಸ್ತಾನದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ.

    ಮೃತನನ್ನು ಔರಂಗಜೇಬ್ ಎಂದು ಗುರುತಿಸಲಾಗಿದೆ. ಜು.7 ರಂದು ಕ್ವೈದಾಬಾದ್‌ನ ಫಾರ್ಮ್‌ಹೌಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಪಿಕ್ನಿಕ್ ಹೋಗಿದ್ದರು. ಈ ವೇಳೆ ಸ್ವಿಮ್ಮಿಂಗ್‌ ಕೂಡ ಮಾಡಿದ್ದರು. ಅದಾದ ಬಳಿಕ ಸೋಂಕಿಗೆ ತುತ್ತಾಗಿದ್ದಾರೆ. ಔರಂಗಜೇಬ್‌ಗೆ ಮೊದಲು ವಾಕರಿಕೆ ಮತ್ತು ಜ್ವರ ಕಾಣಿಸಿಕೊಂಡಿತ್ತು.

    ಜು.10 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಜುಲೈ 11 ರಂದು ವೈರಸ್ ದೃಢಪಟ್ಟಿತು. ಚಿಕಿತ್ಸೆ ಫಲಿಸದೇ ಸೋಂಕಿಗೆ ಬಲಿಯಾಗಿದ್ದಾರೆ. ಇತರೆ ಎರಡು ಸಾವು ಪ್ರಕರಣಗಳು ಈ ಹಿಂದೆ ಕೋರಂಗಿ ಮತ್ತು ಮಲಿರ್‌ನಲ್ಲಿ ವರದಿಯಾಗಿದ್ದವು.

    ಮುಕ್ತ ಜೀವಂತ ಅಮೀಬಾ ಹೊಂದಿರುವ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಅದು ಜನರಿಗೆ ಸೋಂಕು ತರುತ್ತದೆ. ಈಜುಕೊಳ, ನದಿ, ಸರೋವರಗಳಲ್ಲಿ ಈಜುವಾಗ ಸೋಂಕು ಉಂಟಾಗಬಹುದು. ಅಮೀಬಾ ಮೂಗಿನ ಮೆದುಳಿಗೆ ತಲುಪುತ್ತದೆ. ಅಲ್ಲಿ ಅದು ಮೆದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ.

    ರೋಗಲಕ್ಷಣಗಳು ಪ್ರಾರಂಭವಾದ ನಂತರ ರೋಗವು ವೇಗವಾಗಿ ಉಲ್ಬಣಗೊಳ್ಳುತ್ತದೆ. ಸಾಮಾನ್ಯವಾಗಿ ಐದು ದಿನಗಳಲ್ಲಿ ಸಾವಿಗೆ ಕಾರಣವಾಗುತ್ತದೆ.

  • ನಮ್ಗೆ ಚಂದ್ರನ ಬಳಿಗೆ ಹೋಗುವ ಅಗತ್ಯವಿಲ್ಲ, ಚಂದ್ರನ ಮೇಲೆಯೇ ಬದುಕುತ್ತಿದ್ದೇವೆ: ಪಾಕ್‌ ಪ್ರಜೆ ವ್ಯಂಗ್ಯ

    ನಮ್ಗೆ ಚಂದ್ರನ ಬಳಿಗೆ ಹೋಗುವ ಅಗತ್ಯವಿಲ್ಲ, ಚಂದ್ರನ ಮೇಲೆಯೇ ಬದುಕುತ್ತಿದ್ದೇವೆ: ಪಾಕ್‌ ಪ್ರಜೆ ವ್ಯಂಗ್ಯ

    ಇಸ್ಲಾಮಾಬಾದ್‌: ನಾವು ಚಂದ್ರನ (Moon) ಮೇಲೆ ಹೋಗುವ ಅಗತ್ಯವೇ ಇಲ್ಲ. ಈಗಾಗಲೇ ನಾವು ಚಂದ್ರನ ಮೇಲೆ ಬದುಕುತ್ತಿದ್ದೇವೆ. ಚಂದ್ರನ ಮೇಲ್ಮೈ ವಾತಾವರಣವನ್ನ ಇಲ್ಲಿನ ಜನ ಅನುಭವಿಸುತ್ತಿದ್ದಾರೆ ಎಂದು ಪಾಕ್‌ ತಮ್ಮದೇ ದೇಶದ ಸರ್ಕಾರವನ್ನ ಅಣಕಿಸಿದ್ದಾರೆ.

    ಇಸ್ರೋ ವಿಜ್ಞಾನಿಗಳ (Isro Scientist) ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 (Chandrayaan-3) ವಿಕ್ರಮ್‌ ಲ್ಯಾಂಡರ್‌ (Vikram Lander) ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟು ಸಕ್ಸಸ್‌ ಕಂಡಿದೆ. ಈ ಐತಿಹಾಸಿಕ ಕ್ಷಣವನ್ನ ಇಡೀ ವಿಶ್ವವೇ ಕಣ್ತುಂಬಿಕೊಂಡಿದೆ. ಇದನ್ನೂ ಓದಿ: ಮುಂದಿನ ಪ್ರಾಜೆಕ್ಟ್‌ ಗಗನಯಾನಕ್ಕೂ ನಮ್ಮ ಕಂಪನಿಯಲ್ಲಿ ಬಿಡಿಭಾಗ ತಯಾರಿ: ಚಂದ್ರಯಾನ-3 ರಾಕೆಟ್‌ಗೆ ಬಿಡಿಭಾಗ ಪೂರೈಸಿದ್ದ ಬೆಳಗಾವಿ ದೀಪಕ್‌ ಮಾತು

    ದೇಶ ವಿದೇಶಗಳಲ್ಲೂ ಚಂದ್ರಯಾನ-3ರ ಬಗ್ಗೆ ಪ್ರಸಂಶೆಗಳು ವ್ಯಕ್ತವಾಗುತ್ತಿವೆ. ಪಾಕಿಸ್ತಾನದ (Pakistan) ಮಾಜಿ ಸಚಿವ ಫವಾದ್‌ ಚೌಧರಿ ಚಂದ್ರಯಾನ-3 ಯೋಜನೆ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದೆ. ಚಂದ್ರಯಾನ ಸಾಫ್ಟ್‌ ಲ್ಯಾಂಡಿಂಗ್‌ ಅನ್ನು ರಾಷ್ಟ್ರೀಯ ದೂರ ದರ್ಶನದಲ್ಲಿ ನೇರ ಪ್ರಸಾರ ಮಾಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದರು. ಚೌಧರಿ ಕೋರಿಕೆ ಪಾಕಿಸ್ತಾನದಲ್ಲಿ ಪರ-ವಿರೋಧ ಚರ್ಚೆಯನ್ನೂ ಹುಟ್ಟುಹಾಕಿತ್ತು.

    ಈ ನಡುವೆ ಪಾಕಿಸ್ತಾನದ ಯೂಟ್ಯೂಬರ್‌ ಒಬ್ಬರು ಚಂದ್ರಯಾನ-3ರ ಸಂಬಂಧಪಟ್ಟಂತೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುತ್ತಿದ್ದ ವೇಳೆ ಪಾಕ್‌ ಪ್ರಜೆ ತಮ್ಮ ದೇಶದ ಸರ್ಕಾರವನ್ನೇ ವ್ಯಂಗ್ಯ ಮಾಡಿದ್ದಾನೆ. ಇದನ್ನೂ ಓದಿ: ಚಂದ್ರನ ಮೇಲೆ ರೋವರ್ ಚಲಿಸೋದನ್ನು ನೋಡಿದ ನಂತ್ರವೇ ಮನೆಗೆ ತೆರಳಿದೆ: ಕೆ. ಶಿವನ್

    ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆ, ಚಂದ್ರನ ಅಂಗಳ ಮತ್ತು ಪಾಕಿಸ್ತಾನದ ಎರಡರಲ್ಲೂ ಒಂದೇ ವಾತಾವರಣ ಇದೆ. ಅಲ್ಲಿ ನೀರಿಲ್ಲ, ಇಲ್ಲಿಯೂ ಇಲ್ಲ. ಅಲ್ಲಿ ವಿದ್ಯುತ್‌ ಸೌಲಭ್ಯ ಇಲ್ಲ, ಇಲ್ಲಿಯೂ ಇಲ್ಲ. ಪಾಕಿಸ್ತಾನದ ಪ್ರಜೆಗಳಿಗೆ ಚಂದ್ರನ ಬಳಿಗೆ ಹೋಗುವ ಅಗತ್ಯವೇ ಇಲ್ಲ. ಚಂದ್ರನಲ್ಲಿರುವ ವಾತಾವರಣವನ್ನ ಇಲ್ಲಿನ ಪ್ರಜೆಗಳು ತಮ್ಮ ಸುತ್ತಮುತ್ತಲಿನಲ್ಲೇ ಅನುಭವಿಸುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 6 ಮದುವೆ, 54 ಮಕ್ಕಳಿಗೆ ತಂದೆಯಾದ ಪಾಕಿಸ್ತಾನಿ ವ್ಯಕ್ತಿ ಸಾವು

    6 ಮದುವೆ, 54 ಮಕ್ಕಳಿಗೆ ತಂದೆಯಾದ ಪಾಕಿಸ್ತಾನಿ ವ್ಯಕ್ತಿ ಸಾವು

    ಇಸ್ಲಾಮಾಬಾದ್: ಬರೋಬ್ಬರಿ 6 ಮದುವೆಯಾಗಿ, ಬರೋಬ್ಬರಿ 54 ಮಕ್ಕಳನ್ನು ಪಡೆದಿದ್ದ ಪಾಕಿಸ್ತಾನದ ವ್ಯಕ್ತಿ (Pakistan Man) ತಮ್ಮ 75ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ವ್ಯಕ್ತಿಯ ಸಾವಿಗೆ ಸುಮಾರು 150 ಕುಟುಂಬದ ಸದಸ್ಯರೇ ಕಂಬನಿ ಮಿಡಿದಿದ್ದಾರೆ.

    ಬಲೂಚಿಸ್ತಾನದ ನೋಶಿ ಜಿಲ್ಲೆಯ ಕಾಳಿ ಮಂಗಲ್ ಗ್ರಾಮದ ನಿವಾಸಿ ಅಬ್ದುಲ್ ಮಜೀದ್ ಮೆಂಗಲ್ (Abdul Majeed Mangal) ಕಳೆದ ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದರು. ಮೆಂಗಾಲ್ 42 ಮಕ್ಕಳು ಹಾಗೂ 4 ಪತ್ನಿಯರನ್ನು ಅಗಲಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ

    ವರದಿಗಳ ಪ್ರಕಾರ ಅವರ 12 ಮಕ್ಕಳು ಹಾಗೂ ಇಬ್ಬರು ಪತ್ನಿಯರು ಮೊದಲೇ ಸಾವನ್ನಪ್ಪಿದ್ದಾರೆ. ಮೆಂಗಾಲ್‌ನ ಪ್ರಸ್ತುತ 42 ಮಕ್ಕಳಲ್ಲಿ 22 ಗಂಡು ಹಾಗೂ 20 ಹೆಣ್ಣು ಮಕ್ಕಳಿದ್ದಾರೆ. ಅವರ ಮೊಮ್ಮಕ್ಕಳು ಸೇರಿದರೆ ಸುಮಾರು 150 ಸದಸ್ಯರ ತುಂಬು ಕುಟುಂಬವಾಗಿದೆ. ಇದನ್ನೂ ಓದಿ: ಕಾಬೂಲ್‌ನಲ್ಲಿ ಚೀನೀಯರ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ

    ರಾಷ್ಟ್ರೀಯ ಜನಗಣತಿ 2017 ಪ್ರಾರಂಭವಾದಾಗ ಅಬ್ದುಲ್ ಮಜೀದ್ ಹಾಗೂ ಅವರ ಕುಟುಂಬ ಮೊದಲ ಬಾರಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದರು. ಇದೀಗ 150 ಸದಸ್ಯರ ದೊಡ್ಡ ಕುಟುಂಬವನ್ನು ಯಜಮಾನ ಮೆಂಗಲ್ ಅಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದುಬೈನಲ್ಲಿ ಭಾರತೀಯ ಅಪ್ರಾಪ್ತೆಗೆ ಪಾಕ್ ಪ್ರಜೆಯಿಂದ ಕಿರುಕುಳ

    ದುಬೈನಲ್ಲಿ ಭಾರತೀಯ ಅಪ್ರಾಪ್ತೆಗೆ ಪಾಕ್ ಪ್ರಜೆಯಿಂದ ಕಿರುಕುಳ

    ದುಬೈ: ಪಾಕಿಸ್ತಾನದ ಪ್ರಜೆಯೊಬ್ಬ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದುಬೈ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

    ಪಾಕ್ ಮೂಲದ 35 ವರ್ಷದ ಡೆಲಿವರಿ ಸಿಬ್ಬಂದಿ ಮೇಲೆ ಆರೋಪ ಕೇಳಿಬರುತ್ತಿದೆ. ದುಬೈನಲ್ಲಿ ವಸತಿ ಕಟ್ಟಡದ ಲಿಫ್ಟ್‌ವೊಂದರಲ್ಲಿ ಡೆಲಿವರಿ ಸಿಬ್ಬಂದಿ 12 ವರ್ಷದ ಭಾರತೀಯ ಬಾಲಕಿಗೆ ಕಿರುಕುಳ ನೀಡಿದ್ದಾನೆ.

    ಪತ್ರಿಕೆಯೊಂದರ ವರದಿ ಪ್ರಕಾರ, ಜೂನ್ 16ರಂದು ಈ ಘಟನೆ ನಡೆದಿದೆ. ಡೆಲಿವರಿ ಸಿಬ್ಬಂದಿ ಭಾರತದ ಬಾಲಕಿ ವಾಸಿಸುತ್ತಿದ್ದ ವಸತಿ ನಿಲಯಕ್ಕೆ ಡೆಲಿವರಿ ನೀಡಲು ಬಂದಿದ್ದನು. ಅಂದು ಬಾಲಕಿ ಹಾಗೂ ಆತ ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆ ಅಪ್ರಾಪ್ತೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ದೂರು ದಾಖಲಾಗಿದೆ. ಆದರೆ ಈ ಆರೋಪವನ್ನು ಆರೋಪಿ ತಳ್ಳಿ ಹಾಕಿದ್ದಾನೆ.

    ಪೊಲೀಸ್ ತನಿಖೆಯ ವೇಳೆ ಭಾರತೀಯ ಮೂಲದ 34 ವರ್ಷದ ಶಿಕ್ಷಕಿ ಸಾಕ್ಷ್ಯ ಹೇಳಿದ್ದಾರೆ. ಗಣಿತ ಕಲಿಯಲು ಬಾಲಕಿ ನನ್ನ ಮನೆಗೆ ಟ್ಯೂಷನ್‍ಗೆ ಬರುತ್ತಾಳೆ. ಜೂನ್ 16ರಂದು ಕೂಡ ಎಂದಿನಂತೆ ಬಾಲಕಿ ಟ್ಯೂಷನ್‍ಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅವಳು ಕೆಲ ವಸ್ತುಗಳನ್ನು ಮನೆಯಲ್ಲಿಯೇ ಮರೆತು ಬಂದಿದ್ದಳು. ಆದ್ದರಿಂದ ಅವುಗಳನ್ನು ತೆಗೆದುಕೊಂಡು ಬರುತ್ತೇನೆಂದು ಬಾಲಕಿ ಮನೆ ಕಡೆಗೆ ಹೋಗಿದ್ದಳು. ಬಳಿಕ ಅವಳು ವಾಪಸ್ ಮರಳಿ ಬಂದಾಗ ಆಕೆಯ ಮುಖದಲ್ಲಿ ಭಯ ಎದ್ದು ಕಾಣುತ್ತಿತ್ತು, ನಡಗುತ್ತಾ, ಅಳುತ್ತಿದ್ದಳು. ನಂತರ ಬಾಲಕಿಯನ್ನು ವಿಚಾರಿಸಿದಾಗ, ನಾನು ಲಿಫ್ಟ್‌ನಲ್ಲಿ ಬರುವಾಗ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡನು ಎಂದು ಬಾಲಕಿ ನನ್ನ ಬಳಿ ಹೇಳಿಕೊಂಡಳು ಎಂದು ತಿಳಿಸಿದ್ದಾರೆ.

    ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಸೆಪ್ಟೆಂಬರ್ 16ರಂದು ಆರೋಪಿಗೆ ದುಬೈ ನ್ಯಾಯಾಲಯ ಶಿಕ್ಷೆ ವಿಧಿಸಲಿದೆ.