Tag: Pakistan International AirLines

  • ಗಡಿಯಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ – ಸೇನೆಯಿಂದ ಶೋಧ ಕಾರ್ಯ

    ಗಡಿಯಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ – ಸೇನೆಯಿಂದ ಶೋಧ ಕಾರ್ಯ

    ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ (Pakistan International Airlines) ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.

    ಕಪ್ಪು ಬಿಳುಪು ಬಣ್ಣದ ನಿಗೂಢ ಬಲೂನ್ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಭದ್ರತಾ ಪಡೆಗಳು (Border Security Forces) ಅದನ್ನು ವಶಪಡಿಸಿಕೊಂಡಿವೆ. ಬಲೂನ್ ಎಲ್ಲಿಂದ ಬಂದಿದೆ ಎಂದು ತನಿಖೆ ಮಾಡಲು ಪ್ರದೇಶದಲ್ಲಿ ಸೇನೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಇದನ್ನೂ ಓದಿ: ಗಡಿದಾಟಿ ಬಂದ ಬಾಂಗ್ಲಾ ಯೋಧರನ್ನು ಓಡಿಸಿದ ಮೇಘಾಲಯ ಗ್ರಾಮಸ್ಥರು

    ಕಳೆದ ಫೆಬ್ರವರಿಯಲ್ಲಿ ಇದೇ ರೀತಿಯ ವಿಮಾನದ ಆಕಾರದ ಹಸಿರು ಮತ್ತು ಬಿಳಿ ಬಲೂನ್ ಶಿಮ್ಲಾದಲ್ಲಿ ಪತ್ತೆಯಾಗಿತ್ತು. ಅದರ ಮೇಲೆ ಸಹ ಪಿಐಎ (PIA) ಲೋಗೋವನ್ನು ಮುದ್ರಿಸಲಾಗಿತ್ತು. ಮೇ 20 ರಂದು ಅಮೃತಸರದಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದ ಪಾಕಿಸ್ತಾನದ (Pakistan) ಡ್ರೋನ್‍ನ್ನು ಸೇನೆ ಹೊಡೆದುರುಳಿಸಿತ್ತು.

    ಅಲ್ಲದೇ ಇತ್ತೀಚೆಗೆ ಸೇನೆ ನಾಲ್ಕು ಪಾಕಿಸ್ತಾನಿ ಡ್ರೋನ್‍ಗಳನ್ನು ಗಡಯಲ್ಲಿ ತಡೆದಿತ್ತು. ಅವುಗಳಲ್ಲಿ ಮೂರನ್ನು ಪಂಜಾಬ್‍ನ (Punjab) ಅಂತರರಾಷ್ಟ್ರೀಯ ಗಡಿಯಲ್ಲಿ ಹೊಡೆದುರುಳಿಸಿತ್ತು.‌ ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಭೂಪ ಅಂಧರ್

  • ವಿಮಾನ ತುರ್ತು ಭೂಸ್ಪರ್ಶ – ನನ್ನ ಶಿಫ್ಟ್‌ ಮುಗಿಯಿತು ಮತ್ತೆ ಫ್ಲೈ ಮಾಡಲ್ಲ ಎಂದ ಪಾಕ್‌ ಪೈಲಟ್‌!

    ವಿಮಾನ ತುರ್ತು ಭೂಸ್ಪರ್ಶ – ನನ್ನ ಶಿಫ್ಟ್‌ ಮುಗಿಯಿತು ಮತ್ತೆ ಫ್ಲೈ ಮಾಡಲ್ಲ ಎಂದ ಪಾಕ್‌ ಪೈಲಟ್‌!

    ಇಸ್ಲಾಮಾಬಾದ್‌: ಹವಾಮಾನ ವೈಪರಿತ್ಯದಿಂದಾಗಿ ತುರ್ತು ಭೂಸ್ಪರ್ಶ ಮಾಡಲಾದ ವಿಮಾನವನ್ನು ದಿನದ ತನ್ನ ಶಿಫ್ಟ್‌ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಹಾರಿಸುವುದಿಲ್ಲ ಎಂದು ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಪೈಲಟ್‌ ನಿರಾಕರಿಸಿರುವ ಪ್ರಸಂಗ ನಡೆದಿದೆ.

    ಪಿಕೆ-9754 ವಿಮಾನವು ರಿಯಾದ್‌ನಿಂದ ಹೊರಟು ಇಸ್ಲಮಾಬಾದ್‌ನಲ್ಲಿ ಇಳಿಯಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಸೌದಿ ಅರೇಬಿಯಾದ ದಮಾಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಂತರ ಮತ್ತೆ ವಿಮಾನ ಕಾರ್ಯಾಚರಣೆಗೆ ಸೂಚನೆ ನೀಡಿದಾಗ, ನಿತ್ಯದ ತನ್ನ ಪಾಳಿ ಅವಧಿ ಮುಗಿದಿದೆ ಎಂದು ಪೈಲಟ್‌ ನಿರಾಕರಿಸಿದ್ದಾನೆ. ಇದನ್ನೂ ಓದಿ: ಈಕೆ ಪ್ರಪಂಚದಾದ್ಯಂತ ಏಕಾಂಗಿಯಾಗಿ ಹಾರಾಟ ನಡೆಸಿದ ಅತ್ಯಂತ ಕಿರಿಯ ಪೈಲಟ್!

    ಈ ವೇಳೆ ವಿಮಾನದೊಳಗಿನ ಪ್ರಯಾಣಿಕರು ಇಳಿಯಲು ನಿರಾಕರಿಸಿದರು. ಅಲ್ಲದೇ ತಮ್ಮ ಪ್ರಯಾಣಕ್ಕೆ ವಿಳಂಬವಾಗಿದ್ದನ್ನು ಪ್ರತಿಭಟಿಸಿದರು. ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ದಮಾಮ್‌ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ನಂತರ ಪ್ರಯಾಣಿಕರು ಇಸ್ಲಾಮಾಬಾದ್‌ವರೆಗೆ ತಮ್ಮ ಪ್ರಯಾಣ ಮುಂದುವರಿಸುವವರೆಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು.

    ವಿಮಾನದ ಸುರಕ್ಷತೆಗಾಗಿ ಪೈಲಟ್‌ ವಿಶ್ರಾಂತಿ ಪಡೆಯಬೇಕು. ಎಲ್ಲಾ ಪ್ರಯಾಣಿಕರು ಇಸ್ಲಾಮಾಬಾದ್‌ಗೆ ವಿಮಾನ ಪ್ರಯಾಣದಲ್ಲಿ ರಾತ್ರಿ 11 ಗಂಟೆಗೆ ತಲುಪುತ್ತಾರೆ. ಅಲ್ಲಿಯವರೆಗೂ ಹೋಟೆಲ್‌ಗಳಲ್ಲಿ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಪಿಐಎ ವಕ್ತಾರ ತಿಳಿಸಿದ್ದಾರೆ. ಇದನ್ನೂ ಓದಿ: ವಿಶಾಖಪಟ್ಟಣಂ-ದೆಹಲಿ, ಆಂಧ್ರಪ್ರದೇಶ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ – ಪ್ರಯಾಣಿಕರಲ್ಲಿ ಆತಂಕ

    ತುರ್ತು ಭೂಸ್ಪರ್ಶದ ನಂತರ ಪ್ರಯಾಣಿಕರು ಪರದಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಇಂಜಿನ್ ವೈಫಲ್ಯದಿಂದಾಗಿ ಯುಎಸ್‌ಗೆ ಹೋಗುವ ವಿಮಾನವು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದರಿಂದಾಗಿ ಪ್ರಯಾಣಿಕರು ಯುರೋಪ್‌ನಲ್ಲಿ ಸಿಲುಕಿಕೊಂಡಿದ್ದರು.

  • ಚೀನಾದ ಆಪ್ತ ಮಿತ್ರ ಪಾಕ್‌ಗೆ ಅಮೆರಿಕ ಶಾಕ್‌

    ಚೀನಾದ ಆಪ್ತ ಮಿತ್ರ ಪಾಕ್‌ಗೆ ಅಮೆರಿಕ ಶಾಕ್‌

    ವಾಷಿಂಗ್ಟನ್‌: ಚೀನಾ ಆಪ್ತ ಮಿತ್ರ ಪಾಕಿಸ್ತಾನಕ್ಕೆ ಅಮೆರಿಕ ಶಾಕ್‌ ನೀಡಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌(ಪಿಐಎ) ವಿಮಾನಗಳ ಹಾರಾಟವನ್ನು ಅಮೆರಿಕ ನಿಷೇಧ ಮಾಡಿದೆ.

    ಪೈಲಟ್‌ಗಳ ವಿಮಾನ ಚಲನಾ ಪ್ರಮಾಣಪತ್ರಗಳು ನಕಲಿ ಎಂಬ ಸುದ್ದಿಯ ಬೆನ್ನಲ್ಲೇ ಅಮೆರಿಕ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

    ಈ ಮೊದಲು ಯುರೋಪಿಯನ್‌ ಒಕ್ಕೂಟಗಳು ಪಿಐಎಯನ್ನು 6 ತಿಂಗಳ ಕಾಲ ನಿಷೇಧಿಸಿತ್ತು. ಪಿಐಎಯಲ್ಲಿ ಕರ್ತವ್ಯ ಮಾಡುತ್ತಿರುವ ಪೈಲಟ್‌ಗಳಿಗೆ ಅರ್ಹತೆಯೇ ಇಲ್ಲ. ನಕಲಿ ಪ್ರಮಾಣ ಪತ್ರ ಪಡೆದು ಉದ್ಯೋಗ ಸೇರಿದ್ದಾರೆ ಎಂಬ ವರದಿಯ ಬೆನ್ನಲ್ಲೇ ಅಮೆರಿಕ ತನ್ನ ದೇಶಕ್ಕೆ ಬರುತ್ತಿದ್ದ ಎಲ್ಲ ಪಿಐಎ ವಿಮಾನಗಳಿಗೆ ನಿಷೇಧ ಹೇರಿದೆ.

    ಮೇ 22 ರಂದು ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ವಸತಿ ಪ್ರದೇಶದಲ್ಲಿ ಪಿಐಎ ವಿಮಾನ ಪತನಗೊಂಡು 97 ಮಂದಿ ಮೃತಪಟ್ಟಿದ್ದರು.

    ಆರಂಭದಲ್ಲಿ ತಾಂತ್ರಿಕ ಕಾರಣದಿಂದ ವಿಮಾನ ಪತನ ಹೊಂದಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ವೇಳೆ ಪಾಕಿಸ್ತಾನ ಇಬ್ಬರು ಪೈಲಟ್‌ಗಳು ಪ್ರಯಾಣದ ಉದ್ದಕ್ಕೂ ಕೊರೊನಾ ವೈರಸ್‌ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಏರ್‌ ಟ್ರಾಫಿಕ್‌ ಕಂಟ್ರೋಲರ್‌(ಎಟಿಸಿ) ಕಡೆಯಿಂದ ಎಚ್ಚರಿಕೆ ಸಿಗ್ನಲ್‌ ಬಂದಿದ್ದರೂ ಅತಿಯಾದ ವಿಶ್ವಾಸದಿಂದ ಕಡೆಗಣಿಸಿದ್ದರು. ಪರಿಣಾಮ ವಿಮಾನ ಪತನವಾಗಿತ್ತು ಎಂದು ಸರ್ಕಾರ ತಿಳಿಸಿತ್ತು.

    ಈ ಘಟನೆಯ ಬಳಿಕ ಎಚ್ಚೆತ್ತ ಪಾಕ್‌ ಸರ್ಕಾರ ತನಿಖೆ ನಡೆಸಿದಾಗ ಶೇ. 40 ರಷ್ಟು ಪೈಲಟ್ ಗಳ ಬಳಿ ಅಸಲಿ ಲೈಸೆನ್ಸ್ ಇಲ್ಲದಿರುವ ವಿಚಾರ ಬಳಕಿಗೆ ಬಂದಿತ್ತು. ಪಾಕ್‌ ವಿಮಾನಯಾನ ಸಚಿವ ಗುಲಾಂ ಸರ್ವಾರ್ ಖಾನ್ ಇರುವ 860 ಪೈಲಟ್ ಗಳಲ್ಲಿ 262 ಜನ ಪರೀಕ್ಷೆಯನ್ನೇ ಎದುರಿಸಿಲ್ಲ. ಇದರಲ್ಲಿ 54 ಪೈಲಟ್ ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು ಈಗಾಗಲೇ 9 ಜನ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದರು.